Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೋದಿ ಸರಕಾರ ಮಾಧವಿ ಬುಚ್‌ರನ್ನು ಏಕೆ...

ಮೋದಿ ಸರಕಾರ ಮಾಧವಿ ಬುಚ್‌ರನ್ನು ಏಕೆ ರಕ್ಷಿಸುತ್ತಿದೆ?

ಎಸ್. ಸುದರ್ಶನ್ಎಸ್. ಸುದರ್ಶನ್7 Sept 2024 12:12 PM IST
share
ಮೋದಿ ಸರಕಾರ ಮಾಧವಿ ಬುಚ್‌ರನ್ನು ಏಕೆ ರಕ್ಷಿಸುತ್ತಿದೆ?

ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ವಿರುದ್ಧ ಹೊಸ ಆರೋಪಗಳು ಕೇಳಿಬಂದಿವೆ. ಐಸಿಐಸಿಐನಲ್ಲಿ ಕೆಲಸ ಮಾಡುವಾಗ ಮಾಧಬಿ ಬುಚ್ ಸಿಂಗಾಪುರದ ಸಂಸ್ಥೆಯೊಂದಿಗೆ ಸಹ ಸಂಬಂಧ ಹೊಂದಿದ್ದರು ಎಂದು ‘ಮಿಂಟ್’ ಪತ್ರಿಕೆ ವರದಿ ಮಾಡಿದೆ. ಒಬ್ಬರು ಎರಡು ಕಂಪೆನಿಗಳಲ್ಲಿ ಏಕಕಾಲದಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ?

ಇದಿಷ್ಟೇ ಅಲ್ಲ, ಮುಂಬೈನ ಸೆಬಿ ಕೇಂದ್ರ ಕಚೇರಿಯಲ್ಲಿ ಉದ್ಯೋಗಿಗಳು ಗುರುವಾರ ಮೌನ ಪ್ರತಿಭಟನೆ ನಡೆಸಿದ್ದಾರೆ.

ಸೆಬಿ ಮುಖ್ಯಸ್ಥೆ ಬಗ್ಗೆ ಅಧಿಕಾರಿಗಳ ಆಕ್ರೋಶ ಹೀಗೆ ಬಹಿರಂಗವಾಗಿಯೇ ವ್ಯಕ್ತವಾಗುತ್ತಿರುವುದರ ನಡುವೆಯೂ ಸರಕಾರ ಆಕೆಯ ರಕ್ಷಣೆಗೆ ನಿಂತಂತಿದೆ. ನಿಜವಾಗಿಯೂ ಕಾಡುವ ಪ್ರಶ್ನೆಯೆಂದರೆ, ಏಕೆ ಮೋದಿ ಸರಕಾರ ಸೆಬಿ ಮುಖ್ಯಸ್ಥೆಯನ್ನು ರಕ್ಷಿಸುತ್ತಿದೆ ಎಂಬುದು.

ಒಂದು ತಮಾಷೆಯೆಂದರೆ, ಆರೋಪಗಳಿರುವುದು ಸೆಬಿ ಮುಖ್ಯಸ್ಥೆಯ ವಿರುದ್ಧ. ಆದರೆ ಸ್ಪಷ್ಟನೆ ಬರುತ್ತಿರುವುದು ಇನ್ಯಾರದೋ ಕಡೆಯಿಂದ. ಮಾಧವಿ ಬುಚ್ ಕಡೆಯಿಂದ ಉತ್ತರವೇ ಬರುತ್ತಿಲ್ಲ.

ಈ ವಿಚಾರವನ್ನೆತ್ತಿ ಕಾಂಗ್ರೆಸ್ ಸೆಪ್ಟಂಬರ್ 3ರಂದು ಸುದ್ದಿಗೋಷ್ಠಿ ನಡೆಸಿತ್ತು. ಮಾಧವಿ ಬುಚ್ ಪ್ರಕರಣದಲ್ಲಿ ಈವರೆಗೆ ಕಾಂಗ್ರೆಸ್ ಮೂರು ಸುದ್ದಿಗೋಷ್ಠಿಗಳನ್ನು ನಡೆಸಿದೆ.

ಇಷ್ಟೆಲ್ಲ ಆರೋಪಗಳು ತಮ್ಮ ವಿರುದ್ಧವಿದ್ದರೂ ಮಾಧವಿ ಬುಚ್ ಮಾತ್ರ ಯಾರೇ ಕೂಗಾಡಲಿ ಎಂಬ ಧೋರಣೆಯೊಂದಿಗೆ ಎಲ್ಲವನ್ನೂ ಕಡೆಗಣಿಸುತ್ತಿದ್ದಾರೆ. ಇದೆಲ್ಲದಕ್ಕೂ ಕಾರಣ, ಮೋದಿ ಸರಕಾರದ ಮೇಲೆ ಆಕೆಗಿರುವ ಪ್ರಭಾವ.

2011ರಿಂದ 2013ರ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿಯೇ ಮಾಧವಿ ಬುಚ್ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಹೆಸರಿನ ಸಿಂಗಾಪುರ ಮೂಲದ ಒಂದು ಖಾಸಗಿ ಇಕ್ವಿಟಿ ಸಂಸ್ಥೆಯಲ್ಲಿ ಕೂಡ ಕೆಲಸದಲ್ಲಿದ್ದರು. ಈ ವಿಚಾರವನ್ನು ‘ಮಿಂಟ್’ ತನ್ನ ವರದಿಯಲ್ಲಿ ಬಯಲಿಗೆಳೆದಿದೆ. ಈ ನಡುವೆಯೇ ಸೆಬಿ ಮುಖ್ಯಸ್ಥೆಯ ವಿರುದ್ಧ ಅವರ ಕಿರಿಯ ಅಧಿಕಾರಿಗಳೇ ಪ್ರತಿಭಟನೆಗೆ ಇಳಿದಿರುವುದೇಕೆ?

ಪ್ರತಿಭಟನೆಯನ್ನು ಮೋದಿ ಸರಕಾರ ಹೇಗೆಲ್ಲ ಹತ್ತಿಕ್ಕುತ್ತದೆ ಎಂಬುದು ಗೊತ್ತಿದ್ದೂ ಸೆಬಿ ಅಧಿಕಾರಿಗಳು ಮುಖ್ಯಸ್ಥೆಯ ವಿರುದ್ಧ ಮೌನ ಪ್ರತಿಭಟನೆಗೆ ಇಳಿದಿರುವುದು ಸಣ್ಣ ಸಂಗತಿಯಲ್ಲ. ಸೆಬಿಯಲ್ಲಿ ವೃತ್ತಿಪರವಲ್ಲದ ಕೆಲಸದ ಸಂಸ್ಕೃತಿ ಇದೆ ಎಂದು ಆರೋಪಿಸಿ ಹಣಕಾಸು ಸಚಿವಾಲಯಕ್ಕೆ ಉದ್ಯೋಗಿಗಳು ಪತ್ರ ಬರೆದಿದ್ದರು. ಇದರ ಬಗ್ಗೆ ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದ ಸೆಬಿ, ಬಾಹ್ಯ ಶಕ್ತಿಗಳು ಉದ್ಯೋಗಿಗಳ ದಾರಿತಪ್ಪಿಸಿವೆ ಎಂದು ಕಿಡಿಕಾರಿತ್ತು. ಈ ಪತ್ರಿಕಾ ಪ್ರಕಟಣೆ ವಿರುದ್ಧ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದಾರೆ. ಗುರುವಾರ ಉದ್ಯೋಗಿಗಳು ಕೆಲ ಗಂಟೆಗಳವರೆಗೆ ಪ್ರತಿಭಟನೆ ನಡೆಸಿ ನಂತರ ತಮ್ಮ ಕೆಲಸಕ್ಕೆ ಮರಳಿದ್ದಾರೆ.

ಕಚೇರಿಯಲ್ಲಿ ವೃತ್ತಿಪರವಲ್ಲದ ಕೆಲಸದ ಸಂಸ್ಕೃತಿ ಇದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಸೆಬಿ ಬುಧವಾರ ಹೇಳಿತ್ತು. ಈ ಪತ್ರಿಕಾ ಪ್ರಕಟಣೆಗೆ ವಿರೋಧ ವ್ಯಕ್ತಪಡಿಸಲು ಮತ್ತು ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಗುರುವಾರ ಸೆಬಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು.

ಪತ್ರಿಕಾ ಪ್ರಕಟಣೆ ಹಿಂದೆೆಗೆದುಕೊಳ್ಳಬೇಕು ಹಾಗೂ ಸೆಬಿ ಉದ್ಯೋಗಿಗಳ ವಿರುದ್ಧ ಸುಳ್ಳನ್ನು ಹರಿಬಿಟ್ಟಿರುವ ಸೆಬಿ ಅಧ್ಯಕ್ಷೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಸಂದೇಶದಲ್ಲಿ ಆಗ್ರಹಿಸಲಾಗಿತ್ತು.

ಹಣಕಾಸು ಸಚಿವಾಲಯಕ್ಕೆ ಕಳೆದ ತಿಂಗಳು ಪತ್ರ ಬರೆದಿದ್ದ ಸೆಬಿ ಉದ್ಯೋಗಿಗಳು, ನಿಯಂತ್ರಣ ಸಂಸ್ಥೆಯಲ್ಲಿ ಅಗಾಧ ಒತ್ತಡವಿದ್ದು, ಇದರ ಪರಿಣಾಮ ಕೆಲಸದ ವಾತಾವರಣ ಪೂರ್ತಿ ಹದಗೆಟ್ಟಿರುವುದಾಗಿ ದೂರಿದ್ದರು. ಪ್ರತಿಭಟನಾ ನಿರತ ನೌಕರರು ಹಿಡಿದುಕೊಂಡಿದ್ದ ಕರಪತ್ರಗಳಲ್ಲಿ ಮಾಧವಿ ಬುಚ್ ರಾಜೀನಾಮೆಗೆ ಒತ್ತಾಯಿಸಲಾಗಿತ್ತು.

ಮಿಂಟ್ ವರದಿ ಗಮನಿಸಿದರೆ ಮಾಧವಿ ಬುಚ್ ಮೇಲೆ ಅನುಮಾನ ಬರದೇ ಇರುವುದಿಲ್ಲ. ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಹೊತ್ತಿನಲ್ಲಿಯೇ ಅವರು ಸಿಂಗಾಪುರದ ಇಕ್ವಿಟಿ ಕಂಪೆನಿಯೊಂದಕ್ಕೆ ಕೆಲಸ ಮಾಡುತ್ತಿದ್ದರೆಂಬುದನ್ನು ಪುರಾವೆ ಸಹಿತ ಮಿಂಟ್ ವರದಿ ಮಾಡಿದೆ. ಹೇಗೆ ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಕಂಪೆನಿಗಳಲ್ಲಿ ಕೆಲಸ ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಆ ವರದಿ ಎತ್ತಿದೆ.

ಕಾಂಗ್ರೆಸ್‌ನ ಪ್ರವೀಣ್ ಚಕ್ರವರ್ತಿ ಕೂಡ ಇದೇ ಪ್ರಶ್ನೆ ಎತ್ತಿದ್ದಾರೆ. ಮಾಧವಿ ಬುಚ್ ಏಕಕಾಲದಲ್ಲಿ ಎರಡು ಸಂಸ್ಥೆಗಳಿಗೆ ಕೆಲಸ ಮಾಡಿದ್ದಾರೆ. ಐಸಿಐಸಿಐನಲ್ಲಿದ್ಧಾಗಲೇ ಅವರು ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಎಂಬ ಖಾಸಗಿ ಇಕ್ವಿಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಅಜಿತ್ ದೋವಲ್ ಪುತ್ರ ಶೌರ್ಯ ದೋವಲ್ ಅವರು ನಾಯಕತ್ವ ತಂಡದ ಸದಸ್ಯರಾಗಿರುವ ಕಂಪೆನಿ ಅದಾಗಿದೆ ಎಂಬುದರ ಕಡೆ ಪ್ರವೀಣ್ ಚಕ್ರವರ್ತಿ ಗಮನ ಸೆಳೆದಿದ್ದಾರೆ.

ಸೆಬಿ ಮುಖ್ಯಸ್ಥೆ ವಿರುದ್ಧದ ಆರೋಪಗಳ ವಿಚಾರವಾಗಿ ನಿಷ್ಪಕ್ಷ ಮತ್ತು ವಸ್ತುನಿಷ್ಠ ತನಿಖೆ ನಡೆಸಲು ಯಾಕೆ ಸರಕಾರಕ್ಕೆ ಹಿಂಜರಿಕೆ ಎಂಬುದು ಪ್ರವೀಣ್ ಚಕ್ರವರ್ತಿ ಪ್ರಶ್ನೆ.ಮಂತ್ರಿಗಳೂ ಸೇರಿದಂತೆ ಬಿಜೆಪಿ ಮಾಧವಿ ಬುಚ್ ರಕ್ಷಣೆಗೆ ನಿಂತಿದೆ ಎಂಬುದು ಅವರ ಆರೋಪ.

ಇಂಡಿಯನ್ ವೆಂಚರ್ ಅಲ್ಟರ್ನೇಟ್ ಕ್ಯಾಪಿಟಲ್ ಅಸೋಸಿಯೇಷನ್ ಕೂಡ ಮಾಧವಿ ಬುಚ್ ರಕ್ಷಣೆಗೆ ನಿಲ್ಲುವ ಯತ್ನ ಮಾಡಿದೆ. ಹೀಗೆ ಇಡೀ ಸರಕಾರ ಹಾಗೂ ವ್ಯವಸ್ಥೆ ಆರೋಪ ಎದುರಿಸುತ್ತಿರುವ ಮಾಧವಿ ಬುಚ್ ರಕ್ಷಣೆಗೆ ನಿಲ್ಲುವುದು ಏನನ್ನು ಸೂಚಿಸುತ್ತದೆ?

ಕಾಂಗ್ರೆಸ್ ಆರೋಪದ ಬಳಿಕ ಐಸಿಐಸಿಐ ಬ್ಯಾಂಕ್ ಸ್ಪಷ್ಟನೆ ನೀಡಿ, ಆರೋಪ ನಿರಾಕರಿಸಿತು. ಆದರೆ ಮಾಧವಿ ಬುಚ್ ಕಡೆಯಿಂದ ಮಾತ್ರ ಸ್ಪಷ್ಟನೆಯೇ ಬರಲಿಲ್ಲ.

ಚಂದಾ ಕೊಚ್ಚರ್ ವಿರುದ್ಧ ಆರೋಪ ಕೇಳಿಬಂದಾಗ ತಕ್ಷಣವೇ ಸಮಿತಿ ರಚಿಸಿ ಕ್ರಮ ಕೈಗೊಂಡಿದ್ದ ಅದೇ ಐಸಿಐಸಿಐ ಬ್ಯಾಂಕ್, ಮಾಧವಿ ಬುಚ್ ವಿಚಾರದಲ್ಲಿ ಏಕೆ ಅಂಥದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪ್ರವೀಣ್ ಚಕ್ರವರ್ತಿ ಕೇಳಿದ್ದಾರೆ.

ಪ್ರವೀಣ್ ಚಕ್ರವರ್ತಿಗೂ ಮೊದಲು ಕಾಂಗ್ರೆಸ್‌ನ ಪವನ್ ಖೇರಾ ಎರಡೆರಡು ಸುದ್ದಿಗೋಷ್ಠಿಗಳನ್ನು ನಡೆಸಿದ್ದರು. ಅವರ ಪ್ರಶ್ನೆಗಳಿಗೆ ಈವರೆಗೂ ಮಾಧವಿ ಬುಚ್ ಅವರಿಂದ ಉತ್ತರ ಬಂದಿಲ್ಲ.

ಇಷ್ಟೆಲ್ಲ ಆರೋಪಗಳು ಕೇಳಿಬರುತ್ತಿರುವಾಗ ತನಿಖೆ ನಡೆಯಬೇಕು ಎಂಬುದು ಸಾಮಾನ್ಯವಾಗಿ ಎಲ್ಲರೂ ಅಪೇಕ್ಷಿಸುವ ಸಂಗತಿ. ಆದರೆ ಮಾಧವಿ ಬುಚ್ ವಿರುದ್ಧ ತನಿಖೆಯಾಗುತ್ತಿಲ್ಲ. ಕನಿಷ್ಠ ಮಾಧವಿ ಬುಚ್ ಅವರ ರಾಜೀನಾಮೆಯನ್ನೂ ಪಡೆಯುತ್ತಿಲ್ಲ ಯಾಕೆ ?

‘ನಾ ಖಾವೂಂಗ ನಾ ಖಾನೆ ದೂಂಗ’ ಎಂದು ಹೇಳಿ ಜನರನ್ನು ಮರುಳು ಮಾಡುವವರು ಈ ಪರಿ ಗಂಭೀರ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರನ್ನು ರಕ್ಷಿಸುತ್ತಿರುವುದು ಯಾತಕ್ಕಾಗಿ ? ಮಾಧವಿ ಬುಚ್ ವಿರುದ್ಧ ಗಂಭೀರ ಆರೋಪಗಳು ಬಂದಾಗ ಆಕೆಯ ರಾಜೀನಾಮೆ ಪಡೆದು ಅಥವಾ ವಜಾ ಮಾಡಿ ತನಿಖೆಗೆ ಆದೇಶಿಸಿದರೆ ಮೋದಿ ಸರಕಾರಕ್ಕೆ ಏನು ನಷ್ಟವಿದೆ ?

ಒಂದಲ್ಲ ಎರಡಲ್ಲ, ಸರಣಿ ಗಂಭೀರ ಆರೋಪಗಳು ಬಂದಿವೆ. ದೇಶದ ಅತ್ಯುನ್ನತ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯ ಮುಖ್ಯಸ್ಥೆ ಆಕೆ.

ಆಕೆಯಿಂದಾಗಿ ಪ್ರತಿಷ್ಠಿತ ಸಂಸ್ಥೆಯ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆ ಎದ್ದಿದೆ. ಕೋಟ್ಯಂತರ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೂಡಿರುವ ಷೇರು ಮಾರುಕಟ್ಟೆ ಅದು. ಅದನ್ನು ಒಂದಿಷ್ಟೂ ಕಪ್ಪು ಚುಕ್ಕೆ ಬಾರದ ಹಾಗೆ ಜತನದಿಂದ ಕಾಪಾಡುವುದು ಸರಕಾರದ ಜವಾಬ್ದಾರಿ. ಆದರೂ ಇಡೀ ವ್ಯವಸ್ಥೆ, ಒಂದು ದೊಡ್ಡ ಸಂಸ್ಥೆ, ಇಡೀ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳನ್ನು ನಿರ್ಲಕ್ಷಿಸಿ ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಯಾಕಾಗುತ್ತಿದೆ?

ಮೋದಿ ಸರಕಾರದ ಈ ನಿಗೂಢ ಮೌನದ ಹಿಂದಿನ ಮರ್ಮವೇನು? ಇದರ ಹಿಂದಿರುವ ಮೋದಿ ಸರಕಾರದ ರಾಜಕೀಯ ಅನಿವಾರ್ಯತೆ ಏನು?

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X