Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆಗೆ...

ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆಗೆ ಒಂಭತ್ತು ವರ್ಷಗಳು: ಜಾತಿ ತಾರತಮ್ಯದ ವಿರುದ್ಧ ಕಾನೂನಿಗೆ ಇದು ಸಕಾಲ, ಏಕೆ?

ಮೃದುಲಾ ವಿ.ಮೃದುಲಾ ವಿ.23 Jan 2025 10:17 AM IST
share
ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆಗೆ ಒಂಭತ್ತು ವರ್ಷಗಳು: ಜಾತಿ ತಾರತಮ್ಯದ ವಿರುದ್ಧ ಕಾನೂನಿಗೆ ಇದು ಸಕಾಲ, ಏಕೆ?

ಐಐಎಂ-ಬಿನಲ್ಲಿ ದಾಸ್ ಅವರು ಅನುಭವಿಸಿರುವ ಬವಣೆಯು ವ್ಯವಸ್ಥಿತ ಅಥವಾ ಸಾಂಸ್ಕೃತಿಕ ತಾರತಮ್ಯ ಮತ್ತು ಕಿರುಕುಳವಾಗಿದೆ. ಕೆಲವು ರೀತಿಯ ಅಸ್ಪಶ್ಯತೆ ಮತ್ತು ಜಾತಿ ದೌರ್ಜನ್ಯಗಳನ್ನು ಅಪರಾಧವೆಂದು ಪರಿಗಣಿಸಿರುವುದರಿಂದ ದಮನಕಾರಿ ಜಾತಿಗಳು ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಮತ್ತು ದಲಿತರು/ಆದಿವಾಸಿಗಳನ್ನು ಹೊರಗಿಡಲು ಹೆಚ್ಚು ಆಧುನಿಕ ಸಾಂಸ್ಥಿಕ ನಿಯಮಗಳು,ಪ್ರಕ್ರಿಯೆಗಳು ಮತ್ತು ನೀತಿಗಳನ್ನು ಬಳಸಿಕೊಳ್ಳುತ್ತಿವೆ. ತಿಳಿಯದೆಯೋ ಅಥವಾ ಉದ್ದೇಶಪೂರ್ವಕವಾಗಿಯೋ ದಲಿತರು ಮತ್ತು ಆದಿವಾಸಿಗಳು ಅನುಭವಿಸುತ್ತಿರುವ ತೊಂದರೆಗಳು ಮತ್ತು ಅಡೆತಡೆಗಳು ಮುಂದುವರಿದಿವೆ.

ಜ.17ಕ್ಕೆ ರೋಹಿತ ವೇಮುಲರ ಸಾಂಸ್ಥಿಕ ಹತ್ಯೆಯಾಗಿ ಒಂಭತ್ತು ವರ್ಷಗಳು ಕಳೆದಿವೆ. ದೇಶಾದ್ಯಂತ ದಲಿತರು ಮತ್ತು ಆದಿವಾಸಿಗಳು ವೇಮುಲರ ಹೋರಾಟವನ್ನು ಮುಂದುವರಿಸುತ್ತಿದ್ದಾರೆ. ಇವುಗಳಲ್ಲಿ ತೀರ ಇತ್ತೀಚಿನದು ಗೋಪಾಲ ದಾಸ್ ಅವರು ಐಐಎಂ-ಬೆಂಗಳೂರು ವಿರುದ್ಧ ಆರಂಭಿಸಿರುವ ಹೋರಾಟ. ಸಹಾಯಕ ಮಾರ್ಕೆಟಿಂಗ್ ಪ್ರಾಧ್ಯಾಪಕ ದಾಸ್ ಮತ್ತು ಐಐಎಂ-ಬಿ ನಡುವಿನ ಹೋರಾಟದಲ್ಲಿ ಬಳಕೆಯಾಗುತ್ತಿರುವ ಕಾನೂನು ಪ್ರಕ್ರಿಯೆಯ ವರದಿಗಾರಿಕೆಯು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನಲ್ಲಿ ಸಾವಿರಾರು ದಲಿತರು ಮತ್ತು ಆದಿವಾಸಿಗಳನ್ನು ಅಸಹಾಯಕರನ್ನಾಗಿ ಮಾಡಿರುವ ನ್ಯಾಯದ ತೊಡಕುಗಳನ್ನು ಬಹಿರಂಗಗೊಳಿಸಿದೆ.

ಐಐಎಂ-ಬಿ ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್ ಅವರು ಸಾಮೂಹಿಕ ಇಮೇಲ್‌ನಲ್ಲಿ ದಾಸ್ ಅವರ ಜಾತಿಯನ್ನು ಬಹಿರಂಗಗೊಳಿಸುವುದರೊಂದಿಗೆ ಇದೆಲ್ಲ ಆರಂಭಗೊಂಡಿತ್ತು. ದಾಸ್ ಪ್ರಕಾರ ವಿವೇಚನೆಯಿಲ್ಲದ ಈ ಕೃತ್ಯವು ಅವರಿಗೆ ಕೆಲಸದ ವಾತಾವರಣವನ್ನು ಪ್ರತಿಕೂಲ ಮತ್ತು ಅವಹೇಳನಕಾರಿಯಾಗಿಸಿದೆ. ತನಗೆ ಅವಕಾಶಗಳನ್ನು ನಿರಾಕರಿಸಲಾಗಿದೆ, ಸಾಂಸ್ಥಿಕ ಚಟುವಟಿಕೆಗಳಿಂದ ಹೊರಗಿಡಲಾಗಿದೆ, ಆಯ್ಕೆಯ ಕೋರ್ಸ್‌ಗಳು ಮತ್ತು ಪಿಎಚ್‌ಡಿ ಕಾರ್ಯಕ್ರಮಗಳನ್ನು ಹಿಂದೆಗೆದುಕೊಳ್ಳುವಂತೆ ಒತ್ತಡ ಹೇರಿದ್ದು, ಸಾಂಸ್ಥಿಕ ಸಂಪನ್ಮೂಲಗಳ ಲಭ್ಯತೆಯನ್ನು ನಿರ್ಬಂಧಿಸಲಾಗಿದೆ ಎಂದು ದಾಸ್ ದೂರಿದ್ದಾರೆ. ಅಲ್ಲದೆ ಕಿರುಕುಳದ ದೂರುಗಳ ವಿಚಾರಣೆ ಬಾಕಿ ಇರುವ ಕಾರಣದಿಂದ ಭಡ್ತಿಗಾಗಿ ಅವರ ಅರ್ಜಿಗಳನ್ನೂ ತಡೆಹಿಡಿಯಲಾಗಿದೆ.

(ಗೋಪಾಲ್ ದಾಸ್)

ಸೂಕ್ತ ಕಾನೂನುಗಳ ಅನುಪಸ್ಥಿತಿಯಲ್ಲಿ ಜಟಿಲ ಕಾನೂನು ತಂತ್ರಗಳು

ಯಾವುದೇ ನೇರವಾದ ಕಾನೂನು ಪರಿಹಾರಗಳ ಅನುಪಸ್ಥಿತಿಯಲ್ಲಿ ದಾಸ್ ಅವರು 2023ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಬಾಕಿಯುಳಿದಿರುವ ಪ್ರಕರಣದಲ್ಲಿ ತನ್ನ ಭಡ್ತಿಗಳನ್ನು ತಡೆಹಿಡಿದಿರುವುದನ್ನು ಪ್ರಶ್ನಿಸಿದ್ದರು.

ಕಿರುಕುಳ ಮತ್ತು ತಾರತಮ್ಯವನ್ನು ಪ್ರಶ್ನಿಸಲು ಹಲವಾರು ಮಾರ್ಗಗಳಲ್ಲಿ ಯತ್ನಿಸಿದ ಬಳಿಕ ದಾಸ್ ತನ್ನ ಅನುಭವಗಳನ್ನು ವಿವರಿಸಿ ರಾಷ್ಟ್ರಪತಿಗಳ ಕಚೇರಿಗೆ ಔಪಚಾರಿಕ ಪತ್ರವೊಂದನ್ನು ಕಳುಹಿಸಿದ್ದರು. ರಾಷ್ಟ್ರಪತಿಗಳ ಕಚೇರಿ ವಿಧ್ಯುಕ್ತ ತನಿಖೆಯನ್ನು ಆರಂಭಿಸುವಂತೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತ್ತು. ಬಳಿಕ ಮಾರ್ಚ್ 2024ರಲ್ಲಿ ತನ್ನ ತನಿಖೆಯನ್ನು ಆರಂಭಿಸುವಂತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ(ಡಿಸಿಆರ್‌ಇ)ಕ್ಕೆ ಸೂಚಿಸಲಾಗಿತ್ತು.

ಐಐಎಂ-ಬಿಯ ರಕ್ಷಣಾತ್ಮಕ ಕಾನೂನು ತಂತ್ರಗಳು

ಡಾಕ್ಟರೇಟ್ ವಿದ್ಯಾರ್ಥಿಗಳಿಂದ ಸ್ವೀಕರಿಸಲಾಗಿರುವ ಕಿರುಕುಳದ ದೂರುಗಳಿಂದಾಗಿ ದಾಸ್ ಅವರ ಭಡ್ತಿಯನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸುವ ಮೂಲಕ ಐಐಎಂ-ಬಿ ತನ್ನನ್ನು ಸಮರ್ಥಿಸಿಕೊಂಡಿದೆ. ಡಿಸಿಆರ್‌ಇ ತನಿಖೆಯನ್ನು ಆರಂಭಿಸಿದ ಬಳಿಕ ಐಐಎಂ-ಬಿ ಕೂಡ ದಾಸ್ ಮರುಪಾವತಿಗೆ ಸಲ್ಲಿಸಿದ್ದ ಪ್ರಯಾಣದ ಬಿಲ್‌ಗಳಲ್ಲಿ ಹಣಕಾಸಿನ ಅವ್ಯವಹಾರಗಳ ಕುರಿತು ತನಿಖೆಯನ್ನು ಪ್ರಾರಂಭಿಸಿದೆ. ದಾಸ್ ಉಚ್ಚ ನ್ಯಾಯಾಲಯದ ಮೂಲಕ ಈ ವಿಚಾರಣೆಗೆ ತಡೆಯಾಜ್ಞೆಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಐಐಎಂ-ಬಿಯ ನಿರ್ದೇಶಕ ಮತ್ತು ಬೋಧಕ ವೃಂದದ ಡೀನ್ ಅವರು ದಾಸ್ ಮಾಧ್ಯಮಗಳ ಮೂಲಕ ಹೇಳಿಕೆಯನ್ನು ನೀಡುವುದನ್ನು ನಿರ್ಬಂಧಿಸಲು ತಡೆಯಾಜ್ಞೆಗಾಗಿ ಸಿವಿಲ್ ದಾವೆಯನ್ನು ಹೂಡಿದ್ದಾರೆ.

ನವೆಂಬರ್‌ನಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಿದ ಡಿಸಿಆರ್‌ಇ ಸಾಮಾಜಿಕ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವಿವರವಾದ ವರದಿಯನ್ನು ಸಲ್ಲಿಸಿತ್ತು. ದಾಸ್ ಅವರ ಜಾತಿಯನ್ನು ಬಹಿರಂಗಗೊಳಿಸಿದ್ದನ್ನು ಹಾಗೂ ಐಐಎಂ-ಬಿ ನಿರ್ದೇಶಕರು, ಡೀನ್ ಮತ್ತು ಇತರ ಅಧ್ಯಾಪಕರು ಅವರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಮೂಲಕ ಕೆಲಸದ ಸ್ಥಳದಲ್ಲಿ ತಾರತಮ್ಯಕ್ಕೆ ತಮ್ಮ ಕೊಡುಗೆಗಳನ್ನು ಸಲ್ಲಿಸಿದ್ದನ್ನು ವರದಿಯು ದೃಢಪಡಿಸಿತ್ತು. ಎಸ್‌ಸಿ/ಎಸ್‌ಟಿ ಉದ್ಯೋಗಿಗಳ ಕುಂದುಕೊರತೆಗಳನ್ನು ಪರಿಹರಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸದೆ ಶಾಸನಬದ್ಧ ನಿಬಂಧನೆಗಳನ್ನು ಪಾಲಿಸುವಲ್ಲಿ ಐಐಎಂ-ಬಿ ವಿಫಲಗೊಂಡಿದೆ ಎಂದೂ ವರದಿಯು ಬೆಟ್ಟು ಮಾಡಿತ್ತು.

ವರದಿ ಸ್ವೀಕಾರದ ಬಳಿಕ ಸಮಾಜ ಕಲ್ಯಾಣ ಆಯುಕ್ತರು ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಅವಮಾನಗಳು ಮತ್ತು ನಿಂದನೆಗಳಿಗಾಗಿ ಐಐಎಂ-ಬಿಯ ನಿರ್ದೇಶಕ, ಡೀನ್(ಬೋಧಕ ವೃಂದ) ಮತ್ತು ಆರು ಅಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನವನ್ನು ಹೊರಡಿಸಿದ್ದರು. ತಾರತಮ್ಯ ಮತ್ತು ಕಿರುಕುಳದ ಆರೋಪಿ ಪ್ರಾಧ್ಯಾಪಕರ ವಿರುದ್ಧ ಪ್ರಕ್ರಿಯೆಗಳಿಗೆ ತಡೆ ವಿಧಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯವು, ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ಕಿರುಕುಳದ ಆರೋಪಗಳ ವಿಚಾರಣೆ ನಡೆಸಲು ಡಿಸಿಆರ್‌ಇಗೆ ಅಧಿಕಾರವಿಲ್ಲ ಎಂದು ಎತ್ತಿ ಹಿಡಿದಿತ್ತು.

ಸರಕಾರವು ಆರಂಭದಲ್ಲಿ ಡಿಸಿಆರ್‌ಇ ಅನ್ನು ಅಸ್ಪಶ್ಯತೆ (ನಿರ್ಮೂಲನ) ಕಾಯ್ದೆ, 1955(ನಂತರ ಇದು ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ,1955 ಎಂದು ಮರುನಾಮಕರಣಗೊಂಡಿದೆ)ರ ಅನುಷ್ಠಾನದ ಮೇಲೆ ನಿಗಾಯಿರಿಸಲು ಮತ್ತು ಮೇಲ್ವಿಚಾರಣೆಗಾಗಿ ನಾಗರಿಕ ಹಕ್ಕುಗಳ ಅನುಷ್ಠಾನ ಘಟಕವನ್ನಾಗಿ ಸ್ಥಾಪಿಸಿತ್ತು ಎನ್ನುವ ಅಂಶವನ್ನು ನ್ಯಾಯಾಲಯವು ಪರಿಗಣಿಸಿರಲಿಲ್ಲ.

ದಾಸ್ ಅವರ ಪ್ರಕರಣದಲ್ಲಿ ವ್ಯವಸ್ಥಿತ ಜಾತಿ ತಾರತಮ್ಯ/ಕಿರುಕುಳವನ್ನು ಪರಿಹರಿಸಲು ಶಾಸನಬದ್ಧ ಚೌಕಟ್ಟಿನ ಕೊರತೆಯಿಂದಾಗಿ ನ್ಯಾಯವನ್ನು ಅನಗತ್ಯವಾಗಿ ದುಬಾರಿ, ಶ್ರಮದ ಮತ್ತು ಸಂಕೀರ್ಣ ಪ್ರಕ್ರಿಯೆಯನ್ನಾಗಿಸಲಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ.

ವ್ಯವಸ್ಥಿತ ಜಾತೀಯತೆ

ಐಐಎಂ-ಬಿನಲ್ಲಿ ದಾಸ್ ಅವರು ಅನುಭವಿಸಿರುವ ಬವಣೆಯು ವ್ಯವಸ್ಥಿತ ಅಥವಾ ಸಾಂಸ್ಕೃತಿಕ ತಾರತಮ್ಯ ಮತ್ತು ಕಿರುಕುಳವಾಗಿದೆ. ಕೆಲವು ರೀತಿಯ ಅಸ್ಪಶ್ಯತೆ ಮತ್ತು ಜಾತಿ ದೌರ್ಜನ್ಯಗಳನ್ನು ಅಪರಾಧವೆಂದು ಪರಿಗಣಿಸಿರುವುದರಿಂದ ದಮನಕಾರಿ ಜಾತಿಗಳು ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಮತ್ತು ದಲಿತರು/ಆದಿವಾಸಿಗಳನ್ನು ಹೊರಗಿಡಲು ಹೆಚ್ಚು ಆಧುನಿಕ ಸಾಂಸ್ಥಿಕ ನಿಯಮಗಳು,ಪ್ರಕ್ರಿಯೆಗಳು ಮತ್ತು ನೀತಿಗಳನ್ನು ಬಳಸಿಕೊಳ್ಳುತ್ತಿವೆ.

ತಿಳಿಯದೆಯೋ ಅಥವಾ ಉದ್ದೇಶಪೂರ್ವಕವಾಗಿಯೋ ದಲಿತರು ಮತ್ತು ಆದಿವಾಸಿಗಳು ಅನುಭವಿಸುತ್ತಿರುವ ತೊಂದರೆಗಳು ಮತ್ತು ಅಡೆತಡೆಗಳು ಮುಂದುವರಿದಿವೆ.

ವ್ಯವಸ್ಥಿತ ಜಾತಿವಾದವನ್ನು ಪರಿಹರಿಸುವಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯ ಮಿತಿಗಳು

ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ,1955(ನಾಗರಿಕ ಹಕ್ಕುಗಳ ಕಾನೂನು) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ,1989 ಇವು ವ್ಯಕ್ತಿಗಳ ಮೇಲೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊರಿಸುವ ಮೂಲಕ ಭಾರತದಲ್ಲಿ ಜಾತಿ ತಾರತಮ್ಯ ಮತ್ತು ಕಿರುಕುಳದ ಕೆಲವು ಬಹಿರಂಗ ರೂಪಗಳನ್ನು ನಿಯಂತ್ರಿಸುವ ಪ್ರಾಥಮಿಕ ಕಾನೂನುಗಳಾಗಿವೆ.

ವ್ಯಕ್ತಿಗಳನ್ನು ದಂಡಿಸುವ ಮೂಲಕ ಬಹಿರಂಗವಾಗಿ ಅಮಾನವೀಯ ಮತ್ತು ಘೋರ ಜಾತಿವಾದವನ್ನು ತಡೆಗಟ್ಟುವುದು ನಾಗರಿಕ ಹಕ್ಕುಗಳ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಬೇರು ಸಹಿತ ಜಾತಿ ನಿರ್ಮೂಲನದ ಶಕ್ತಿ ಅದಕ್ಕಿಲ್ಲ. ನಗರ ಆರ್ಥಿಕತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ-ಆರ್ಥಿಕ ಚಲನಶೀಲ ದಲಿತರು ಮತ್ತು ಆದಿವಾಸಿಗಳಿಗೆ ಇಂತಹ ಕಾನೂನುಗಳ ಪ್ರಸ್ತುತತೆಯನ್ನು ಪ್ರಶ್ನಿಸಲು ಇದು ಸಕಾಲವಾಗಿದೆ, ಏಕೆಂದರೆ ಈ ವರ್ಗಗಳು ತಮ್ಮ ಜಾತಿಯಿಂದಾಗಿ ಸಾಂಸ್ಥಿಕ ಅಡೆತಡೆಗಳು ಮತ್ತು ಅವಹೇಳನವನ್ನು ಎದುರಿಸುತ್ತಿವೆ.

ಅಲ್ಲದೆ ಸೆಂಟರ್ ಫಾರ್ ಲಾ ಆ್ಯಂಡ್ ಪಾಲಿಸಿ ರಿಸರ್ಚ್ ತನ್ನ ವರದಿಯಲ್ಲಿ ಗಮನಿಸಿರುವಂತೆ ಕೆಲವು ಜಾತಿ ಅಭಿವ್ಯಕ್ತಿಗಳನ್ನು ಕ್ರಿಮಿನಲ್ ವಿಚಾರಣೆಯಲ್ಲಿ ಸಾಬೀತುಗೊಳಿಸುವುದು ತುಂಬ ಕಷ್ಟ. ಉದಾಹರಣೆಗೆ ದಲಿತ ವ್ಯಕ್ತಿಯು ಪ್ರವೇಶಿಸಿದ್ದ ಎಂಬ ಕಾರಣಕ್ಕೆ ಸ್ಥಳ ಶುದ್ಧೀಕರಣ ನಡೆಸುವ ಸವರ್ಣೀಯರನ್ನು ಹೇಗೆ ಅಪರಾಧಿಗಳನ್ನಾಗಿಸುತ್ತೀರಿ? ದಲಿತರು/ಆದಿವಾಸಿಗಳು ಸೋಮಾರಿಗಳು, ಅದಕ್ಷರು ಮತ್ತು ಅವರಲ್ಲಿ ಪ್ರತಿಭೆಯ ಕೊರತೆಯಿದೆ ಎಂದು ಹೇಳುವ ಮೂಲಕ ಜನರು ಮೀಸಲಾತಿಯ ವಿರುದ್ಧ ಜಾತಿ ನಿರಾಕರಣೆಯ ಮಾತುಗಳನ್ನು ಆಡುವುದನ್ನು ನೀವು ಹೇಗೆ ನಿಲ್ಲಿಸುತ್ತೀರಿ? ಹೆಚ್ಚಿನ ಸಂದರ್ಭಗಳಲ್ಲಿ ಸಾಂಸ್ಥಿಕ ನಿಯಮಗಳು ಮತ್ತು ಪ್ರಕ್ರಿಯೆಗಳು ದಲಿತರು/ಆದಿವಾಸಿಗಳು ಬೆಳೆಯುವ, ಏಳಿಗೆ ಹೊಂದುವ ಮತ್ತು ಬಂಡವಾಳವನ್ನು ಸಂಗ್ರಹಿಸುವ ಅವಕಾಶಗಳನ್ನು ನಿರಾಕರಿಸುವ ಸೋಗು ಎನ್ನುವುದನ್ನು ನೀವು ಹೇಗೆ ಸಾಬೀತುಗೊಳಿಸುತ್ತೀರಿ? ಇವೇ ನಿಯಮಗಳನ್ನು ಸವರ್ಣೀಯರಿಗಾಗಿ ಎಷ್ಟೊಂದು ಸುಲಭವಾಗಿ ಬಗ್ಗಿಸಲಾಗಿದೆ ಎನ್ನುವುದನ್ನು ದಾಖಲಿಸಲು ಮಾರ್ಗವಿದೆಯೇ?

ಹಕ್ಕುಗಳು ಮತ್ತು ಪರಿಹಾರಗಳನ್ನು ಮರುರೂಪಿಸುವ ಅಗತ್ಯ

ಅಸ್ತಿತ್ವದಲ್ಲಿರುವ ಜಾತಿ-ವಿರೋಧಿ ವ್ಯವಸ್ಥೆಯು ದಲಿತರು/ಆದಿವಾಸಿಗಳನ್ನು ಕೇವಲ ಪ್ರಯೋಜನಕಾರಿ/ರಕ್ಷಣಾತ್ಮಕ ಶಾಸನಗಳ ವಸ್ತುಗಳಂತೆ ಪರಿಗಣಿಸುತ್ತದೆ. ಕೆಲವು ವಿಷಯಗಳಲ್ಲಿ ಇದು ಉಪಯುಕ್ತವಾಗಿದ್ದರೂ ಖಾಸಗಿ/ನಾಗರಿಕ ಕಾನೂನುಗಳಲ್ಲಿಯ ತೋರಿಕೆಯ ತಟಸ್ಥ ಮತ್ತು ಜಾತಿರಹಿತ ಕ್ಷೇತ್ರದಲ್ಲಿ ಜಾತಿಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಯೋಚಿಸುವುದು ಸಹ ಮುಖ್ಯವಾಗಿದೆ.

ಕುಗ್ಗುತ್ತಿರುವ ಸಾರ್ವಜನಿಕ ವಲಯ ಮತ್ತು ಜಾತಿಯನ್ನು ನಿರ್ಮೂಲಿಸದೆ ಭಾರತದ ಆರ್ಥಿಕತೆಯ ನವಉದಾರೀಕರಣದ ಬೆಳಕಿನಲ್ಲಿ ಇದು ಹೆಚ್ಚು ಮುಖ್ಯವಾಗಿದೆ. ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪಶ್ಯರಿಗಾಗಿ ಏನು ಮಾಡಿದ್ದಾರೆ’ ಎಂಬ ತನ್ನ ಲೇಖನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮುನ್ನೆಚ್ಚರಿಕೆಯನ್ನು ನೀಡಿದ್ದರು; ಕುಸಿತದ ಸಂದರ್ಭಗಳಲ್ಲಿ ಅಸ್ಪಶ್ಯರನ್ನು ಶಾಕ್-ಅಬ್ಸಾರ್ಬರ್‌ಗಳನ್ನಾಗಿ ಬಳಸಬಹುದು ಮತ್ತು ಉತ್ಕರ್ಷದ ಸಂದರ್ಭಗಳಲ್ಲಿ ಅವರನ್ನು ಲೆಕ್ಕಕ್ಕಿಡದಿರಬಹುದು. ಕುಸಿತಗಳಲ್ಲಿ ಅಸ್ಪಶ್ಯರನ್ನು ಮೊದಲು ಮತ್ತು ಹಿಂದೂಗಳನ್ನು ಕೊನೆಯಲ್ಲಿ ವಜಾ ಮಾಡಲಾಗುತ್ತದೆ, ಉತ್ಕರ್ಷದಲ್ಲಿ ಹಿಂದೂಗಳನ್ನು ಮೊದಲು ನೇಮಕ ಮಾಡಿಕೊಳ್ಳಲಾಗುತ್ತದೆ ಮತ್ತು ಅಸ್ಪಶ್ಯರನ್ನು ಕೊನೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುವುದನ್ನು ತಡೆಯಲು ಯಾವುದೇ ಮಾರ್ಗವಿಲ್ಲ, ಆದರೆ ಮಾನವೀಯತೆಯು ಇದಕ್ಕಿಂತಲೂ ಹೆಚ್ಚಿನದಕ್ಕೆ ಉತ್ತರಿಸಬೇಕಿದೆ. ಆಡಳಿತ ಜಾತಿಗಳು ಮತ್ತು ತುಳಿತಕ್ಕೊಳಗಾದ ಜಾತಿಗಳ ನಡುವೆ ಅಸಮಾನತೆಯನ್ನು ತಡೆಯಲು ನಾಗರಿಕ ಸರಕಾರಗಳು ಯಾವ ಕಾರ್ಯವಿಧಾನಗಳನ್ನು ಅಸ್ತಿತ್ವಕ್ಕೆ ತರಬಹುದು?

ಪರಿಸ್ಥಿತಿಗಳು ಮತ್ತು ಕಾನೂನು ಅತ್ಯಗತ್ಯವಾಗಿಸಿದಾಗ ಮಾತ್ರ ಎಸ್‌ಸಿ/ಎಸ್‌ಟಿಗಳ ಆರ್ಥಿಕ ಪಾಲ್ಗೊಳ್ಳುವಿಕೆ ಸಾಧ್ಯ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಉದಾಹರಣೆಗೆ ಉದ್ಯೋಗಕ್ಕೆ ಬ್ರಾಹ್ಮಣರನ್ನು ನೇಮಿಸಿಕೊಂಡರೆ 100 ರೂ.ಕೊಡಬೇಕಾಗುವುದರಿಂದ ಇದೇ ಉದ್ಯೋಗಕ್ಕೆ ದಲಿತರು/ಆದಿವಾಸಿಗಳನ್ನು ಕೇವಲ 20 ರೂ.ಗಳಿಗೆ ನೇಮಿಸಿಕೊಳ್ಳಬಹುದು. ನೇಮಕಗೊಂಡರೆ ಬ್ರಾಹ್ಮಣರಿಗೆ ನೀಡುವ ಸೌಲಭ್ಯಗಳನ್ನು ದಲಿತರು/ಆದಿವಾಸಿಗಳಿಗೆ ನೀಡುವುದು ತುಂಬ ಅಪರೂಪ. ಹೆಚ್ಚುವರಿಯಾಗಿ ‘ಬ್ರಾಹ್ಮಣರಿಗೆ ಮಾತ್ರ’ ಉದ್ಯೋಗ/ಮನೆಯನ್ನು ನೀಡುವ ಖಾಸಗಿ ಸಂಸ್ಥೆಗಳ ಜಾಹೀರಾತುಗಳು ಭಾರತದಲ್ಲಿ ಮಾತ್ರ ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ.

ಇಂತಹ ಆರ್ಥಿಕತೆಯಲ್ಲಿ ದಲಿತರು/ಆದಿವಾಸಿಗಳು ಮುಕ್ತ ಮತ್ತು ಸಮಾನ ಬಿಸಿನೆಸ್ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸಲು ಮತ್ತು ಬೆಳೆಯಲು ಹೇಗೆ ಸಾಧ್ಯ?

ಜಾತಿ ತಾರತಮ್ಯ ಮತ್ತು ಕಿರುಕುಳದ ವಿರುದ್ಧ ಕಾನೂನಿಗೆ ಕರೆ

ಸಾಂಸ್ಥಿಕ ತಾರತಮ್ಯ ಮತ್ತು ಕಿರುಕುಳವನ್ನು ಗುರುತಿಸುವ ಕಾನೂನಿನ ಅನುಪಸ್ಥಿತಿಯು ಭಾರತದಲ್ಲಿ ನ್ಯಾಯಶಾಸ್ತ್ರದ ಬೆಳವಣಿಗೆಯನ್ನು ವಿಫಲಗೊಳಿಸಿದೆ. ಇದೇ ಕಾರಣಕ್ಕಾಗಿ ಈ ಕುರಿತು ಗುಣಾತ್ಮಕ ಡೇಟಾದ ಕೊರತೆಯಿದೆ. ಉದಾಹರಣೆಗೆ ದಲಿತ ವ್ಯಕ್ತಿಯು ಪ್ರವೇಶಿಸಿದ್ದ ಸ್ಥಳವನ್ನು ಶುದ್ಧೀಕರಿಸುವ ವ್ಯಕ್ತಿಯು ತನ್ನ ಧರ್ಮವನ್ನು ಅನುಸರಿಸುತ್ತಿದ್ದಾನೆಯೇ ಅಥವಾ ತಾರತಮ್ಯವನ್ನು ಆಚರಿಸುತ್ತಿದ್ದಾನೆಯೇ? ಇಂತಹ ಕೃತ್ಯವು ಅವಮಾನದ ರೂಪವೆಂದು ಅಧಿಕಾರಿಗಳು ಹೇಗೆ ನಿರ್ಧರಿಸುತ್ತಾರೆ?

ರೋಹಿತ್ ವೇಮುಲರ ಸಾಂಸ್ಥಿಕ ಹತ್ಯೆಯ ಬಳಿಕ ರೋಹಿತ್ ಕಾಯ್ದೆ ಎಂದೇ ಜನಪ್ರಿಯವಾಗಿರುವ ಇಂತಹ ಕಾನೂನಿಗಾಗಿ ದೀರ್ಘಕಾಲದಿಂದಲೂ ಆಗ್ರಹಿಸಲಾಗುತ್ತಿದೆ. ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನ (ಎನ್‌ಸಿಡಿಎಚ್‌ಆರ್) ಮತ್ತು ಎಐಸಿಸಿಯ ಎಸ್‌ಸಿ ವಿಭಾಗ ಇಂತಹ ಕಾನೂನೊಂದರ ಕರಡು ರೂಪಿಸಲು ಹಲವಾರು ಪ್ರಯತ್ನಗಳನ್ನು ಮಾಡುವೆ. ಇಂತಹ ಕಾನೂನನ್ನು ತರುವುದಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭರವಸೆಯನ್ನೂ ನೀಡಿದೆ. ಆದರೆ ಇಂತಹ ಕಾನೂನಿನ ಗುರಿಗಳು, ಉದ್ದೇಶಗಳು ಮತ್ತು ಚೌಕಟ್ಟಿನ ಬಗ್ಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿಲ್ಲ.

ಇಂತಹ ಕಾನೂನು ಬರದಿದ್ದರೆ ಸವರ್ಣೀಯರ ನಿರಂಕುಶ ಆಶಯಗಳೇ ಅವರ್ಣೀಯರ ಪಾಲಿಗೆ ಕಾನೂನಾಗಿ ಉಳಿದುಕೊಳ್ಳಲಿವೆ.

ಕೃಪೆ: thenewsminute.com

share
ಮೃದುಲಾ ವಿ.
ಮೃದುಲಾ ವಿ.
Next Story
X