Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮುಸ್ಲಿಮ್ ರಾಜಕೀಯ ನಾಯಕತ್ವ ಬಿಕ್ಕಟ್ಟು...

ಮುಸ್ಲಿಮ್ ರಾಜಕೀಯ ನಾಯಕತ್ವ ಬಿಕ್ಕಟ್ಟು ಮತ್ತು ಚಮಚಾ ಯುಗ

ಮುಹಮ್ಮದ್ ಇಸ್ಮಾಯೀಲ್ಮುಹಮ್ಮದ್ ಇಸ್ಮಾಯೀಲ್19 April 2026 10:09 AM IST
share
ಮುಸ್ಲಿಮ್ ರಾಜಕೀಯ ನಾಯಕತ್ವ ಬಿಕ್ಕಟ್ಟು ಮತ್ತು ಚಮಚಾ ಯುಗ

ದಾವಣಗೆರೆ ಉಪಚುನಾವಣೆಯ ಟಿಕೆಟ್ ಹಂಚಿಕೆ, ಅದಕ್ಕೆ ಮುಸ್ಲಿಮ್ ಸಮುದಾಯ ಯಾವುದೇ strategy ಇಲ್ಲದೆ ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ರೀತಿ, ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಪಾಠ ಕಲಿಸುತ್ತೇವೆ ಎಂದು ಚುನಾವಣೆಯಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಮುಸ್ಲಿಮ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ನಂತರ ಕೆಲವರು ವಾಪಸ್ ತಗೆದುಕೊಂಡಿದ್ದು, ಚುನಾವಣೆಯ ನಂತರ ಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಮುಖಂಡರ ಮೇಲೆ ಕ್ರಮ ಕೈಗೊಂಡಿದ್ದು, ಅದನ್ನು ಸಮರ್ಥಿಸಲು ಇತರ ಮುಸ್ಲಿಮ್ ಮುಖಂಡರಿಂದಲೇ ಸುದ್ದಿಗೋಷ್ಠಿ ಮಾಡಿಸಿದ್ದು, ಇವೆಲ್ಲ ಬೆಳವಣಿಗೆಗಳು ನೋಡಿದಾಗ ಮಾನ್ಯ ಕಾನ್ಷೀರಾಮ್ ಅವರು ನೆನಪಾದರು. ಭಾರತದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸವು ಮೇಲ್ನೋಟಕ್ಕೆ ಪ್ರಜಾಪ್ರಭುತ್ವದ ವಿಕಾಸದಂತೆ ಕಂಡರೂ, ಅದರ ಒಳಪದರಗಳಲ್ಲಿ ದಮನಿತರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚು ಅಡಗಿದೆ. ಈ ಸಂಚಿನ ಕೇಂದ್ರಬಿಂದುವೇ ‘ಚಮಚಾ ಯುಗ’. ಇದು ಕೇವಲ ಪ್ರಾತಿನಿಧ್ಯದ ಕೊರತೆಯಲ್ಲ, ಬದಲಿಗೆ ಅಸ್ಪಶ್ಯರನ್ನು, ಅಲ್ಪಸಂಖ್ಯಾತರನ್ನು ಮತ್ತು ಹಿಂದುಳಿದವರನ್ನು

ರಾಜಕೀಯವಾಗಿ ಬಂಜೆತನಕ್ಕೆ ತಳ್ಳುವ ಒಂದು ಯೋಜಿತ ತಂತ್ರ. ಕಾನ್ಷೀರಾಮ್ ಅವರು ಮಂಡಿಸಿದ ಈ ಸಿದ್ಧಾಂತವು ಇಂದಿನ ರಾಜಕಾರಣದ ಬಿಕ್ಕಟ್ಟುಗಳನ್ನು ಅರ್ಥಮಾಡಿಕೊಳ್ಳಲು ನಮಗಿರುವ ಅತ್ಯಂತ ತೀಕ್ಷ್ಣವಾದ ವಿಶ್ಲೇಷಣಾತ್ಮಕ ಅಸ್ತ್ರವಾಗಿದೆ.

ಪುಣೆ ಒಪ್ಪಂದ ಮತ್ತು ರಾಜಕೀಯ ಗುಲಾಮಗಿರಿಯ ಉದಯ

ಆಧುನಿಕ ಭಾರತದ ಇತಿಹಾಸದಲ್ಲಿ ಆಗಸ್ಟ್ 16, 1932 ರಂದು ಬ್ರಿಟಿಷರು ಘೋಷಿಸಿದ ‘ಕೋಮುವಾರು ಪ್ರಶಸ್ತಿ’ (Communal Award) ದಲಿತರ ಪಾಲಿಗೆ ಸ್ವಾತಂತ್ರ್ಯದ ಮೊದಲ ಕಿರಣವಾಗಿತ್ತು. ಇದು ಅಸ್ಪೃಶ್ಯರನ್ನು ಹಿಂದೂಗಳಿಗಿಂತ ಭಿನ್ನವಾದ ಸ್ವತಂತ್ರ ರಾಜಕೀಯ ಸಮೂಹವೆಂದು ಗುರುತಿಸಿ, ಅವರಿಗೆ ‘ಪ್ರತ್ಯೇಕ ಮತದಾರರ ಕ್ಷೇತ್ರ’ದ (Separate Electorates) ಹಕ್ಕನ್ನು ನೀಡಿತು. ಅಂದು ದಲಿತರಿಗೆ ತಮ್ಮ ನೈಜ ಪ್ರತಿನಿಧಿಗಳನ್ನು ತಾವೇ ಆರಿಸಿಕೊಳ್ಳುವ ಪರಮಾಧಿಕಾರವಿತ್ತು.

ಆದರೆ, ಈ ಐತಿಹಾಸಿಕ ವಿಜಯವನ್ನು ಸಹಿಸದ ಗಾಂಧಿಯವರು ಯೆರವಾಡ ಜೈಲಿನಲ್ಲಿ ಆಮರಣಾಂತ ಉಪವಾಸ ಕೂರುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೇಲೆ ನೈತಿಕ ಮತ್ತು ಭಾವನಾತ್ಮಕ ಒತ್ತಡ ಹೇರಿದರು. ಇದರ ಪರಿಣಾಮವೇ ಸೆಪ್ಟಂಬರ್ 24, 1932 ರ ಪುಣೆ ಒಪ್ಪಂದ (Poona Pact). ಈ ಒಪ್ಪಂದವು ದಲಿತರ ಸ್ವತಂತ್ರ ರಾಜಕೀಯ ಅಸ್ತಿತ್ವದ ಕುತ್ತಿಗೆ ಹಿಸುಕಿತು. ಪ್ರತ್ಯೇಕ ಮತಕ್ಷೇತ್ರಗಳನ್ನು ಕಿತ್ತುಕೊಂಡು ‘ಜಂಟಿ ಮತದಾರರ ಕ್ಷೇತ್ರ’ಗಳನ್ನು (Joint Electorates) ಹೇರುವ ಮೂಲಕ ದಲಿತ ನಾಯಕರನ್ನು ಪ್ರಬಲ ಜಾತಿಗಳ ಹಿತಾಸಕ್ತಿ ಕಾಯುವ ‘ಸೇವಕ’ರನ್ನಾಗಿ ಅಥವಾ ‘ಕೈಗೊಂಬೆ’ಗಳನ್ನಾಗಿ ಪರಿವರ್ತಿಸಲಾಯಿತು. ಕಾನ್ಷೀರಾಮ್ ಅವರ ವಿಶ್ಲೇಷಣೆಯ ಪ್ರಕಾರ, ಈ ದಿನವೇ ದಲಿತರು ನೈಜ ಪ್ರತಿನಿಧಿತ್ವವನ್ನು ಕಳೆದುಕೊಂಡು ‘ಚಮಚಾ ಯುಗ’ದ ಗುಲಾಮಗಿರಿಗೆ ತಳ್ಳಲ್ಪಟ್ಟರು. ಇಲ್ಲಿ ನಾಯಕರು ಆಯ್ಕೆಯಾಗುವುದು ದಲಿತರ ಇಚ್ಛೆಯ ಮೇಲಲ್ಲ, ಬದಲಿಗೆ ಮೇಲ್ವರ್ಗದ ‘ಬಾಸ್’ಗಳ ಹಿತಾಸಕ್ತಿಯ ಆಧಾರದ ಮೇಲೆ.

1982 ರಲ್ಲಿ ಕಾನ್ಷೀರಾಮ್ ಅವರು ಹೊರತಂದ ‘ದ ಚಮಚಾ ಏಜ್’ (The Chamcha Age) ಕೃತಿಯಲ್ಲಿ ಪ್ರಧಾನ ರಾಜಕೀಯ ಪಕ್ಷಗಳು ದಲಿತರ ನೈಜ ನಾಯಕತ್ವವನ್ನು ಹತ್ತಿಕ್ಕಲು ಮತ್ತು ಸಮುದಾಯವನ್ನು ಹಾದಿ ತಪ್ಪಿಸಲು ಹೇಗೆ ವಿವಿಧ ಹಂತದ

‘ಕೈ ಗೊಂಬೆ’ಗಳನ್ನು (Stooges) ಬಳಸಿಕೊಳ್ಳುತ್ತವೆ ಎಂಬುದನ್ನು ಅವರು ಇಲ್ಲಿ ಬಯಲು ಮಾಡಿದ್ದಾರೆ.

‘ಚಮಚಾ’ ಎನ್ನುವುದು ಕೇವಲ ಒಂದು ಪದವಲ್ಲ, ಅದು ಆಳುವ ವರ್ಗದ ಹಿತಾಸಕ್ತಿಗಾಗಿ ಸ್ವಂತ ಸಮುದಾಯದ ನೈಜ ಹಿತಾಸಕ್ತಿಗಳನ್ನು ಬಲಿಗೊಡುವ ‘ಏಜೆಂಟ್’ ಸಂಸ್ಕೃತಿಯ ಪ್ರತೀಕ.

ಕಾನ್ಷೀರಾಮ್ ಅವರು ಚಮಚಾಗಳನ್ನು ನಾಲ್ಕು ಕಟು ವರ್ಗಗಳಾಗಿ ವಿಂಗಡಿಸಿದ್ದಾರೆ:

1.ಅನಪೇಕ್ಷಿತ ಚಮಚಾಗಳು (Reluctant Chamchas): ವ್ಯವಸ್ಥೆಯ ಅನಿವಾರ್ಯತೆ ಮತ್ತು ಒತ್ತಡಕ್ಕೆ ಸಿಲುಕಿ ಚಮಚಾಗಳಾಗಿ ಬದಲಾದ ಪರಿಶಿಷ್ಟ ಜಾತಿಯ ನಾಯಕರು.

2.ಪ್ರಾರಂಭಿಕ ಚಮಚಾಗಳು (Initiated Chamchas): ರಾಜಕೀಯ ಪ್ರಕ್ರಿಯೆಗೆ ಹೊಸದಾಗಿ ಸೇರ್ಪಡೆಗೊಂಡು, ಮೇಲ್ವರ್ಗದ ಶಕ್ತಿಗಳಿಂದ ತರಬೇತಿ ಪಡೆದ ಪರಿಶಿಷ್ಟ ಪಂಗಡದ ನಾಯಕರು.

3.ಅಭಿಲಾಷಿ ಚಮಚಾಗಳು (Aspiring Chamchas): ಕೇವಲ ಅಧಿಕಾರ ಮತ್ತು ಆಮಿಷಗಳಿಗಾಗಿ ತಮ್ಮ ಸಮುದಾಯದ ಹಿತಾಸಕ್ತಿಯನ್ನು ಬಲಿಗೊಡುವ ಇತರ ಹಿಂದುಳಿದ ವರ್ಗಗಳ (OBC) ನಾಯಕರು.

4.ಅಸಹಾಯಕ ಚಮಚಾಗಳು (Helpless Chamchas): ರಕ್ಷಣೆ ಮತ್ತು ಅಸ್ತಿತ್ವಕ್ಕಾಗಿ ಪ್ರಧಾನ ಪಕ್ಷಗಳನ್ನು ಅವಲಂಬಿಸಿರುವ ಅಲ್ಪಸಂಖ್ಯಾತರು.

ಈ ವರ್ಗೀಕರಣದ ಹಿಂದಿರುವ ಗಹನವಾದ ಅರ್ಥವೆಂದರೆ, ಜಂಟಿ ಮತಕ್ಷೇತ್ರಗಳಲ್ಲಿ ದಲಿತ ಅಭ್ಯರ್ಥಿಯು ಗೆಲ್ಲಲು ಮೇಲ್ವರ್ಗದ ಮತಗಳ ಮೇಲೆ ಅವಲಂಬಿತನಾಗಬೇಕಾಗುತ್ತದೆ. ಇದರಿಂದಾಗಿ ಅವನು ಅಂಬೇಡ್ಕರ್ ಹೇಳಿದಂತೆ ಕಿವುಡ ಮತ್ತು ಮೂಗ ಪ್ರತಿನಿಧಿಯಾಗಿ ಉಳಿಯುತ್ತಾನೆ. ಪ್ರಬಲ ಪಕ್ಷಗಳು ಜಾಣ್ಮೆಯಿಂದ ದಲಿತರ ನೈಜ ನಾಯಕರನ್ನು ಸೋಲಿಸಲು ಈ ‘ದಲ್ಲಾಳಿ’ಗಳನ್ನು ಬಳಸಿಕೊಳ್ಳುತ್ತವೆ. ಇದು ಶೋಷಕರು ಮತ್ತು ಶೋಷಿತರ ನಡುವಿನ ‘ದ್ವಿ-ರಾಷ್ಟ್ರ ಸಿದ್ಧಾಂತ’ವನ್ನು (Two-Nation Theory) ಹತ್ತಿಕ್ಕುವ ತಂತ್ರವಾಗಿದೆ.

ಕಾನ್ಷೀರಾಮ್ ಅವರ ಈ ಸಿದ್ಧಾಂತವು ಇಂದು ಭಾರತೀಯ ಮತ್ತು ನಮ್ಮ ರಾಜ್ಯದ ಮುಸ್ಲಿಮ್ ನಾಯಕತ್ವಕ್ಕೆ ಅಕ್ಷರಶಃ ಅನ್ವಯವಾಗುತ್ತದೆ.

ಯಾವುದೇ ಚುನಾವಣೆ ಗೆಲ್ಲುವ ಸಾಮರ್ಥ್ಯ ಇಲ್ಲದ ಒಬ್ಬ ಮುಸ್ಲಿಮ್ ಒಐಅ ಪಕ್ಷ ಮುಸ್ಲಿಮರಿಗೆ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರೆ, ಮುಸ್ಲಿಮ್ ಸಮುದಾಯದ ಮತಗಳಿಂದಲೇ ಗೆದ್ದು ಬರುವ ಇನ್ನೊಬ್ಬ ಶಾಸಕ, ಬಿಜೆಪಿಯ ಭಯದಿಂದ ಕಾಂಗ್ರೆಸ್ ಪಕ್ಷ ಹೆಸರು ಹೇಳಲು ಬಯಸದೇ ಟಿಪ್ಪು ಮತ್ತು ಫೆಲೆಸ್ತಿನ್‌ನ ಅಮಾಯಕ ಮಕ್ಕಳ ಹೆಸರಲ್ಲಿ ವೋಟ್ ಕೇಳ್ತಾನೆ ಮತ್ತು ತನ್ನ ಹಿಂದೆ ಇರುವ 4-5 ಚಮಚಾಗಳನ್ನು ತೋರಿಸಿ ಸಮುದಾಯಕ್ಕೆ ಇನ್ನೆಷ್ಟು ಚಮಚಾಗಳು ಬೇಕೆಂದು ಪ್ರಶ್ನಿಸುತ್ತಾನೆ.

ಇವರು ಸಮುದಾಯದ ನೈಜ ಬಿಕ್ಕಟ್ಟುಗಳಿಗಿಂತ ಹೆಚ್ಚಾಗಿ ಆಳುವ ವರ್ಗವು ನೀಡುವ ಸಣ್ಣಪುಟ್ಟ ಸವಲತ್ತುಗಳಿಗೆ ತೃಪ್ತರಾಗಿದ್ದಾರೆ. ಇಂತಹ ನಾಯಕರು ಸಮುದಾಯವನ್ನು ಭಯದ ನೆರಳಿನಲ್ಲಿಟ್ಟು, ವೋಟ್ ಬ್ಯಾಂಕ್ ರಾಜಕಾರಣದ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ಸಮುದಾಯದೊಳಗೆ ನಾಯಕತ್ವದ ತೀವ್ರ ಶೂನ್ಯತೆಯನ್ನು ಸೃಷ್ಟಿಸಿದೆ. ಒಂದೆಡೆ ದೇಶದೆಲ್ಲೆಡೆ ಭಯದ ವಾತಾವರಣ ಇನ್ನೊಂದೆಡೆ ಆರ್ಥಿಕ ಮತ್ತು ಸಾಮಾಜಿಕ ಅಧೋಗತಿಯಿಂದಾಗಿ ಮುಸ್ಲಿಮ್ ನಾಯಕರು ಹೋರಾಟದ ಬದಲು ಶರಣಾಗತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಗುಲಾಮಗಿರಿಯ ಅರಿವೇ ಕಾನ್ಷೀರಾಮ್ ಅವರನ್ನು ಬಿಡುಗಡೆಯ ಹಾದಿಯತ್ತ ನಡೆಸಿತು. ಈ ರಾಜಕೀಯ ಜಿಗುಪ್ಸೆಯಿಂದ ಹೊರಬರಲು ಕಾನ್ಷೀರಾಮ್ ಅವರು ‘ಬಹುಜನ ಏಕತೆ’ಯ ಮಂತ್ರವನ್ನು ನೀಡಿದ್ದರು. ದಲಿತರು, ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರು ಒಂದೇ ದೋಣಿಯ ಪ್ರಯಾಣಿಕರು. ಜಿಸ್ಕಿ ಜಿತ್ನಿ ಸಂಖ್ಯ ಭಾರಿ, ಉತ್ನಿ ಉಸ್ಕಿ ಹಿಸ್ಸೆದಾರಿ (ಯಾರ ಸಂಖ್ಯೆ ಎಷ್ಟಿದೆಯೋ, ಅವರಿಗೆ ಅಷ್ಟೇ ಪಾಲುದಾರಿಕೆ) ಎಂಬ ತತ್ವವು ಅಧಿಕಾರ ಹಂಚಿಕೆಯ ನೈಜ ಸೂತ್ರವಾಗಿದೆ.

ಶೋಷಿತ ವರ್ಗಗಳು ಕೇವಲ ಬೇಡಿಕೆಗಳನ್ನು ಸಲ್ಲಿಸುವ ‘ಬೇಡುವ ವರ್ಗ’ದಿಂದ ಅಧಿಕಾರವನ್ನು ಹಂಚುವ ‘ನೀಡುವ ವರ್ಗ’ವಾಗಿ (Beggars to Givers) ಬದಲಾಗಬೇಕು. ಈ ಹಾದಿಯಲ್ಲಿ ದಲಿತ-ಹಿಂದುಳಿದವರ ಮತ್ತು ಮುಸ್ಲಿಮರ ಏಕತೆಯು ಅತ್ಯಂತ ಅನಿವಾರ್ಯ. ಈ ಒಕ್ಕೂಟವೊಂದೇ ಹಿಂದುತ್ವದ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ತಡೆದು, ಅದನ್ನು ಮಟ್ಟಹಾಕಬಲ್ಲದು (Forge the Hindutva wolf out). ಪ್ರಸ್ತುತವಿರುವ ಜಾತಿ ವ್ಯವಸ್ಥೆಯ ‘ಉದ್ದ ಪಿರಮಿಡ್’ (Vertical Pyramid) ಮಾದರಿಯನ್ನು ಕೆಡವಿ, ಸಮಾನತೆಯ ‘ಅಡ್ಡ ಸಾಲು’ (Horizontal Line)ನಿರ್ಮಿಸುವುದು ಕಾನ್ಷೀರಾಮ್ ಅವರ ಅಂತಿಮ ಗುರಿಯಾಗಿತ್ತು.

ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಧಿಕಾರವು ಕೇವಲ ಆಡಳಿತದ ಸಾಧನವಲ್ಲ, ಅದು ಸಾಮಾಜಿಕ ವಿಮೋಚನೆಯ ದಿಕ್ಸೂಚಿಯೂ ಹೌದು. ಕಾನ್ಷೀರಾಮ್ ಅವರ ರಾಜಕೀಯ ದರ್ಶನದ ಕೇಂದ್ರಬಿಂದು ‘ಅಧಿಕಾರ’. ಅವರ ಪ್ರಕಾರ, ರಾಜಕೀಯ ಅಧಿಕಾರವು ಸಮಾಜದ ಎಲ್ಲಾ ಮುಚ್ಚಿದ ಬಾಗಿಲುಗಳನ್ನು ತೆರೆಯಬಲ್ಲ ಒಂದು ‘ಮಾಸ್ಟರ್ ಕೀ’ (Master Key). ಈ ಅಧಿಕಾರವನ್ನು ಪಡೆಯಲು ಅವರು ರೂಪಿಸಿದ ಕಾರ್ಯತಂತ್ರವು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತಗಳ ನೈಜ ಪ್ರಯೋಗವಾಗಿತ್ತು. ಅಂಬೇಡ್ಕರ್ ಅವರು ಪುಸ್ತಕಗಳನ್ನು ಸಂಗ್ರಹಿಸಿದರು, ಆದರೆ ನಾನು ಜನರನ್ನು ಸಂಘಟಿಸಿದೆ (Ambedkar collected books, I gathered people) ಎಂಬ ಕಾನ್ಷೀರಾಮ್ ಅವರ ಮಾತುಗಳು ಅವರ ಸಂಘಟನಾ ಚಾತುರ್ಯಕ್ಕೆ ಸಾಕ್ಷಿ.

ಭಾರತೀಯ ಮುಸ್ಲಿಮ್ ಸಮುದಾಯವು ಇಂದು ಎದುರಿಸುತ್ತಿರುವ ರಾಜಕೀಯ ನಾಯಕತ್ವದ ಬಿಕ್ಕಟ್ಟು ಮತ್ತು ಚಮಚಾ ರಾಜಕಾರಣವು ಸಮುದಾಯದ ಆತ್ಮಗೌರವವನ್ನು ಹರಾಜು ಹಾಕುತ್ತಿದೆ. ಸಮುದಾಯವು ಈ ‘ಸಾಂಸ್ಥಿಕ ಗುಲಾಮಗಿರಿ’ಯಿಂದ ಹೊರಬರಬೇಕಾದರೆ, ಕೃತಕ ನಾಯಕರನ್ನು ತಿರಸ್ಕರಿಸಿ ಸ್ವತಂತ್ರ ಮತ್ತು ಸಶಕ್ತ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು.ಬಹುಜನ ಪ್ರಜ್ಞೆಯನ್ನು ಮೈಗೂಡಿಸಿಕೊಂಡು, ಇತರ ಶೋಷಿತ ವರ್ಗಗಳೊಂದಿಗೆ ಅಧಿಕಾರದ ಸಮಾನ ಪಾಲುದಾರರಾದಾಗ ಮಾತ್ರ ಭಾರತೀಯ ಪ್ರಜಾಪ್ರಭುತ್ವವು ಅರ್ಥಪೂರ್ಣವಾಗುತ್ತದೆ. ಚಮಚಾ ಯುಗವನ್ನು ಅಂತ್ಯಗೊಳಿಸಿ, ನೈಜ ಬಹುಜನ ಅಧಿಕಾರದ ಯುಗವನ್ನು ಪ್ರಾರಂಭಿಸುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ.

Tags

MuslimpoliticalleadershipcrisisChamcha era
share
ಮುಹಮ್ಮದ್ ಇಸ್ಮಾಯೀಲ್
ಮುಹಮ್ಮದ್ ಇಸ್ಮಾಯೀಲ್
Next Story
X