Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೇವಸ್ಥಾನಕ್ಕೆ ರಥ ಉಡುಗೊರೆ ನೀಡಿ...

ದೇವಸ್ಥಾನಕ್ಕೆ ರಥ ಉಡುಗೊರೆ ನೀಡಿ ಭಾವೈಕ್ಯತೆ ಮೆರೆದ ಮುಸ್ಲಿಂ ಸೇವಾ ಟ್ರಸ್ಟ್

ಇಬ್ರಾಹಿಂ ಖಲೀಲ್ ಬನ್ನೂರುಇಬ್ರಾಹಿಂ ಖಲೀಲ್ ಬನ್ನೂರು9 May 2024 3:49 PM IST
share
ದೇವಸ್ಥಾನಕ್ಕೆ ರಥ ಉಡುಗೊರೆ ನೀಡಿ ಭಾವೈಕ್ಯತೆ ಮೆರೆದ ಮುಸ್ಲಿಂ ಸೇವಾ ಟ್ರಸ್ಟ್

ಬೆಂಗಳೂರು: ರಾಜಕೀಯದ ಲಾಭಕ್ಕೋಸ್ಕರ ಹಿಂದೂ- ಮುಸ್ಲಿಮರ ಮಧ್ಯೆ ಕಂದಕಗಳನ್ನು ಸೃಷ್ಟಿಸುವವವರು ಒಂದು ಕಡೆಯಾದರೆ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ಪ್ರೀತಿಯನ್ನು ಪೋಷಿಸುವವರು ಮತ್ತೊಂದೆಡೆ. ಧರ್ಮ, ಜಾತಿಗಳೆನ್ನದೆ ಈ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಅನೇಕ ಮಂದಿ ದಾರ್ಶನಿಕರು ಹೋರಾಡಿದ್ದಾರೆ. ಸ್ವಹಿತಾಸಕ್ತಿಗಾಗಿ ಧರ್ಮ-ಜಾತಿಗಳೆಂಬ ಚರ್ಚೆಗಳು ಇನ್ನು ಕೆಲವರ ತಲೆಯಲ್ಲಿ ಹೊಕ್ಕಿರುವುದರ ಮಧ್ಯೆ ಗದಗ ಜಿಲ್ಲೆಯ ನರಗುಂದ ಎಂಬಲ್ಲಿ ಭಾವಕ್ಯತೆಯ ಸಂದೇಶವೊಂದು ರಾಜ್ಯಕ್ಕೆ ಮಾದರಿಯಾಗಿದೆ. ನರಗುಂದದ ಐತಿಹಾಸಿಕ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದೇಶ್ವರ ಜಾತ್ರೆಗೆ ಮುಸ್ಲಿಮ್ ಸಮುದಾಯದವರು 30 ಲಕ್ಷ ರೂ. ಬೆಲೆ ಬಾಳುವ ರಥವನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿ ಸಾಮರಸ್ಯವನ್ನು ಮೆರೆದಿದ್ದಾರೆ.

ಗದಗ ನಗರದಲ್ಲಿರುವ ಹಝ್ರತ್ ಮೆಹಬೂಬ ಸುಭಾನಿ ದರ್ಗಾದಿಂದ ಭಾವೈಕ್ಯದ ಸಂಕೇತವಾಗಿ ದರ್ಗಾದ ಇಮಾಮ್ ಸಾಬ ಮುಹಮ್ಮದ್ ಸಾಬ ಶರಣರ ಸೇವಾ ಟ್ರಸ್ಟ್‌ನಿಂದ ರಥ ಸಮರ್ಪಣೆಯ ಮಾಡುವ ಮೂಲಕ ಹಿಂದೂ-ಮುಸ್ಲಿಮ್ ಸಹೋದ ರತ್ವದ ಪಾಠವನ್ನು ಸಾರಿದ್ದಾರೆ. ಈ ಕಾರ್ಯಕ್ಕೆ ದೇವಸ್ಥಾ ನದ ಭಕ್ತಾದಿಗಳು, ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

25 ಅಡಿ ಎತ್ತರದ ಸಾಗುವಾನಿ ಮರದ ತೇರು: ಇಡಗುಂಜಿಯ ರಥಶಿಲ್ಪಿ ಗಂಗಾಧರ ಆಚಾರ್ಯ ಅವರ ಕೈಚಳಕದಿಂದ ನಿರ್ಮಾಣಗೊಂಡ ರಥವು ಅತ್ಯಂತ ಮನೋಹರ ಶೈಲಿಯಲ್ಲಿದ್ದು, ಹಿಂದೂ- ಮುಸ್ಲಿಮ್ ಮಾನವೀಯತೆ ಆಶಯವನ್ನು ಎತ್ತಿ ತೋರಿಸುವ ಈ ರಥದ ಎತ್ತರ ಸುಮಾರು 25 ಅಡಿ. ಸಂಪೂರ್ಣವಾಗಿ ಸಾಗುವಾನಿ ಮರದಿಂದ ವಿಶಿಷ್ಟವಾಗಿ ನಿರ್ಮಾಣ ಕಾರ್ಯ ಮಾಡಲಾಗಿದೆ ಎಂದು ದರ್ಗಾದ ಮೂಲಗಳು ತಿಳಿಸಿದೆ.

ಇನ್ನೂ 15 ಅಡಿ ಎತ್ತರದ ಗಡ್ಡಿ ತೇರಿನ ಮೇಲೆ 5 ಅಡಿ ಎತ್ತರದ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಅದರ ಮೇಲ್ಬಾಗದ 5 ಅಡಿ ಎತ್ತರದವರೆಗೆ ಕೇಸರಿ ಬಿಳಿ ಮತ್ತು ಹಸಿರು ಬಣ್ಣದ ಧ್ವಜಗಳಿಂದ ಸಿಂಗಾರ ಮಾಡಲಾಗಿದೆ. ರಥದ ಮುಂಭಾಗದಲ್ಲಿ ವಿಘ್ನನಿವಾರಕನ ಮೂರ್ತಿ, ಸುತ್ತಲೂ ಪಂಚಗ್ರಹ ಗುಡ್ಡದ ಹಿರೇಮಠದ ಹಿಂದಿನ ನಾಲ್ವರು ಪೀಠಾಧಿಪತಿಗಳ ಭಾವಚಿತ್ರ ಇದೆ. ಸಿಂಹಾಸನ, ಈಶ್ವರ ಲಿಂಗಗಳು, ಗಜವಂದನೆ ಹಾಗೂ ಎಂಟು ಮಂಟಪಗಳ ಸುಂದರ ಕಲಾಕುಸರಿ ಮೂಡಿ ಬಂದಿದೆ.

ದರ್ಗಾದಿಂದಲೇ ರಥದ ಹಗ್ಗ ಮತ್ತು ಕಳಶ: ಜಾತ್ರೆ ಸಮಯದಲ್ಲಿ ರಥವನ್ನು ಎಳೆಯುವ ಹಗ್ಗ ಮತ್ತು ಕಳಶವನ್ನು ದರ್ಗಾದಿಂದಲೇ ರವಾನೆ ಮಾಡಲಾಗುತ್ತದೆ. ಜಾತ್ರೆ ಮುಗಿದ ಬಳಿಕ ಹಗ್ಗ, ಕಳಸ ದರ್ಗಾಕ್ಕೆ ತೆಗೆದುಕೊಂಡು ಬರುವುದು ಉದ್ದೇಶಿತ ಹೊಸ ಸಂಪ್ರದಾಯವಾಗಿದೆ.

4 ವರ್ಷಗಳ ಹಿಂದೆಯೇ ದರ್ಗಾದ ಬಾಬು ಅಜ್ಜನವರು ಪಂಚಪೀಠಾಧೀಶ್ವರರಲ್ಲಿ ಒಬ್ಬರಾದ ಉಜ್ಜಯನಿ ಜಗದ್ಗುರು ಸಮ್ಮುಖದಲ್ಲಿ ಹಿರೇಮಠಕ್ಕೆ ನೂತನ ತೇರು ನಿರ್ಮಿಸಿಕೊಡುವ ಪ್ರಸ್ತಾಪ ಮಾಡಿದ್ದರು. ಆದರೆ, ಕೋವಿಡ್ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಬಳಿಕ 2023ರಲ್ಲಿ ಮತ್ತೆ ಉಜ್ಜಯನಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ನೂತನ ತೇರಿನ ನಿರ್ಮಾಣದ ಪ್ರಸ್ತಾಪವಾದಾಗ ಬಾಬುಸಾಬು ಶರಣರು, ’ಒಂದು ವರ್ಷದೊಳಗೆ ನೂತನ ರಥವನ್ನು ಸೇವಾ ಟ್ರಸ್ಟ್ ಮೂಲಕ ನಿರ್ಮಿಸಿ ಕೊಡಲಾಗುವುದು’ ಎಂದು ಹೇಳಿದ್ದರು. ಅದರಂತೆ ಈಗ ರಥ ನಿರ್ಮಿಸಿಕೊಟ್ಟಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಆ ಧರ್ಮ ಈ ಧರ್ಮ ಎನ್ನದೇ ಇದು ಸರ್ವಧರ್ಮದವರಿಂದ ನಿರ್ಮಾಣಗೊಂಡಿರುವ ರಥವಾಗಿದೆ. ಭಾವೈಕ್ಯತೆಯತ್ತ ಸಾಗಲು ನಾಂದಿ ಹಾಡಿದೆ. ಮುಸ್ಲಿಮ್ ಟ್ರಸ್ಟ್ ನಿಂದ ಕೊಟ್ಟ ಮಾತಿನಂತೆ ದೇವಾಲಯಕ್ಕೆ ರಥ ನೀಡಿದ್ದೇವೆ. 30 ಲಕ್ಷ ರೂ. ವೆಚ್ಚದಲ್ಲಿ ದೇವರ ರಥ ಅದ್ಬುತವಾಗಿ ಮೂಡಿಬಂದಿದೆ.

- ಬಾಬುಸಾಬ ಶರಣ, ಮೆಹಬೂಬ ಸುಭಾನಿ ದರ್ಗಾ, ನರಗುಂದ

ನಮ್ಮ ಮಠದ ಐತಿಹಾಸಿಕ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಮಠ ಧಾರ್ಮಿಕ ಭಾವೈಕ್ಯತೆಯನ್ನು ಜಗತ್ತಿಗೆ ಸಾರಿದೆ. ಮುಸ್ಲಿಮ್ ಸಮುದಾಯದ ಇಮಾಮ್ ಸಾಹೇಬ ಮುಹ್ಮಮದ್‌ಸಾಬ ಶರಣರ ಸೇವಾ ಟ್ರಸ್ಟ್ ಮೂಲಕ ಬಾಬುಸಾಬ ಅಜ್ಜ ನವರು ರಥ ನಿರ್ಮಿಸಿಕೊಟ್ಟು ಭಾವೈಕ್ಯತೆ ಸಾಕ್ಷಿಯಾಗಿದ್ದಾರೆ.

- ಸಿದ್ಧಲಿಂಗ ಶಿವಾಚಾರ್ಯ, ಪಂಚಗ್ರಹ ಗುಡ್ಡದ ಹಿರೇಮಠ, ನರಗುಂದ

share
ಇಬ್ರಾಹಿಂ ಖಲೀಲ್ ಬನ್ನೂರು
ಇಬ್ರಾಹಿಂ ಖಲೀಲ್ ಬನ್ನೂರು
Next Story
X