Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಡತನವನ್ನೇ ಹಾಡಿ ಕುಣಿಯುವ ‘ನಲ್ಕೆ’...

ಬಡತನವನ್ನೇ ಹಾಡಿ ಕುಣಿಯುವ ‘ನಲ್ಕೆ’ ಸಮುದಾಯ

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್5 Aug 2026 10:13 AM IST
share
ಬಡತನವನ್ನೇ ಹಾಡಿ ಕುಣಿಯುವ ‘ನಲ್ಕೆ’ ಸಮುದಾಯ

ಮೂಲತಃ ದ್ರಾವಿಡ ಜನಾಂಗದವರಾದ ನಲ್ಕೆಯವರು ಇಡೀ ದಕ್ಷಿಣ ಭಾರತದಲ್ಲಿ ಹರಡಿಕೊಂಡಿರುವುದೇ ದೈವಾರಾಧನೆ ಮತ್ತು ಕಲೆಯನ್ನು ನೆಚ್ಚಿಕೊಂಡು. ತಾವು ಇರುವ ನೆಲೆಯಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ನಲ್ಕೆ, ನಲಿಕೆ, ಪಾಣಾರ, ಪಾಣ, ಪಾಂಡ್ರು, ದೈವ, ಮಾಣಿ, ಭೂತಕಟ್ಟುವವ, ಕೋಪಾಳ, ದೆಸೆ, ಮಕ್ಕಳರ್, ಕಟ್ಟಿ, ಮಕ್ಕಳೆರ್ ಮುಂತಾದ ಹೆಸರುಗಳಲ್ಲಿ ಗುರುತಿಸಿಕೊಳ್ಳುತ್ತಾರೆ.

ಈಮನೆಯ ಗೋಡೆಗಳು ಹಳೆಯವು, ಅಲ್ಲಲ್ಲಿ ಗೆದ್ದಲು ಹಿಡಿದಿದೆ, ಗುಡಿಸಿಲಿನ ಛಾವಣಿಯ ಗಳಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಅಡುಗೆಯ ಕೋಣೆಯಲ್ಲಿ ಹುಡಿಮಣ್ಣು ಹರಡಿದೆ. ಅದರ ಮೇಲೆ ಅಣಬೆ ಅರಳಿದೆ. ದಾರಿದ್ರ್ಯ ಅವರನ್ನು ಮಾತ್ರವಲ್ಲ, ಅವರು ಸಾಕಿದ ನಾಯಿಯನ್ನೂ ಬಿಡಲಿಲ್ಲ. ಆ ನಾಯಿ ಅಡುಗೆ ಮನೆಯಲ್ಲೇ ಮರಿಹಾಕಿದೆ. ಕಣ್ಣು ತೆರೆಯದ ಆ ಮರಿಗಳಿಗೆ ತಾಯಿ ಹಾಲು ಸಾಕಷ್ಟಿಲ್ಲ. ಮರಿಗಳು ತಾಯಿ ಮೊಲೆಗಳಿಗೆ ಬಾಯಿ ಹಾಕಲು ಪ್ರಯತ್ನಿಸುವಾಗ ನಾಯಿ ಗುರುಗುಟ್ಟುತ್ತದೆ. ತಾಯ್ತನದ ಭಾವನೆಯನ್ನೂ ಕೆಡಿಸುವಷ್ಟು ಮಟ್ಟಿಗೆ ಅಲ್ಲಿ ದಾರಿದ್ರ್ಯ ವ್ಯಾಪಿಸಿದೆ. ಆ ಕುಟುಂಬದ ಯಜಮಾನ ಬಹಳ ಸಹನಾಶಕ್ತಿ ಉಳ್ಳವನು. ಆಹಾರ ಹುಡುಕಾಡಿ ಆತನಿಗೆ ಏನೂ ಸಿಗಲಿಲ್ಲ. ಆತನ ಹೆಂಡತಿ ಸಿಕ್ಕಿದ ಕೀರೆ ಸೊಪ್ಪನ್ನೇ (ಒಂದು ಜಾತಿಯ ಕಾಡುಸೊಪ್ಪು) ಕಿತ್ತುತರುತ್ತಾಳೆ. ಅದನ್ನು ಬೇಯಲು ಇಡುತ್ತಾಳೆ. ರುಚಿಗೆ ತಕ್ಕಷ್ಟು ಉಪ್ಪು ಹಾಕಲೂ ಮನೆಯಲ್ಲಿ ಉಪ್ಪು ಇಲ್ಲ. ಬೇಯಿಸಿದ ಸೊಪ್ಪನ್ನೇ ತಿನ್ನಲು ಮನೆ ಮಂದಿ ತುಂಬಾ ಕಾದಿದ್ದಾರೆ. ಈ ದೃಶ್ಯ ಬೇರೆಯವರಿಗೆ ಕಾಣಬಾರದೆಂದು ಬೀದಿಯ ಕಡೆಗಿರುವ ಕದ ಮುಚ್ಚುತ್ತಾಳೆ.. ಇದು ನಲ್ಕೆ ಸಮುದಾಯದ ಕುಲಕಥನದ ಒಂದು ಭಾಗ..!

ನಲ್ಕೆ, ನಲ್ಕೆಯವರು, ನಲಿಕೆಯವರು ಎಂದು ಕರೆಯಲಾಗುವ ಈ ಸಮುದಾಯವನ್ನು ಹಿಂದೆ ಪಾಣರು ಎಂದು ಕರೆಯುತ್ತಿದ್ದರಂತೆ. ಈ ಸಮುದಾಯವು ಮರದ ಟೊಟೆಂ ಮೂಲಕ ತನ್ನ ಕುಲದ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಪಾಣೆ ಮರ ಇವರ ಕುಲದ ಟೊಟೆಂ. ಇವರು ಈ ಮರಕ್ಕೆ ಈಗಲೂ ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ. ಇವರ ಕುಲಸಂಬಂಧಿ ಆಚರಣೆಗಳನ್ನು ಮರದ ಅಡಿಯಲ್ಲೇ ನೆರವೇರಿಸುತ್ತಾರೆ. ಯಾವುದೇ ಸಂದರ್ಭದಲ್ಲೂ ಪಾಣೆಮರವನ್ನು ಕಡಿಯುವುದಿಲ್ಲ.

ನಲ್ಕೆ ಸಮುದಾಯದ ಕುರಿತು ಮಾಹಿತಿಯ ಕೊರತೆ ಇದ್ದಾಗ ಈ ಸಮುದಾಯದ ಬಗ್ಗೆ ಗೆಳೆಯ ಆರಡಿಮಲ್ಲಯ್ಯ ಕಟ್ಟೇರ ಅವರು ಸಂಶೋಧನೆ ನಡೆಸಿದರು, ಈ ಸಂಶೋಧನೆಯ ಮಾರ್ಗದರ್ಶಿ ನಾನೇ ಆಗಿದ್ದೆ. ಇದನ್ನು ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯವರು ಪ್ರಕಟಿಸಿದ್ದಾರೆ.

ತುಳುನಾಡಿನ ಅತ್ಯಂತ ಪ್ರಾಚೀನ ಕಾಲದಲ್ಲೇ ದೈವನೆಲೆಯನ್ನು ನೆಲೆಗೊಳಿಸಿ ದೈವಿಕಶಕ್ತಿಗಳನ್ನು ಸಾಕಾರಗೊಳಿಸಲು ಮೊತ್ತಮೊದಲು ಮುಖವರ್ಣಿಕೆ, ವೇಷಭೂಷಣ, ಸಂಧಿ, ಕುಣಿತ, ಸಂಗೀತ, ಆವೇಶ, ನೃತ್ಯ, ನುಡಿಕಟ್ಟುಗಳ ಮೂಲಕ ಕೋಲ ಅಥವ ನೇಮವೆಂಬ ಆರಾಧನಾತ್ಮಕ ಆಚರಣೆಯನ್ನು ವಿಶಿಷ್ಠ ಕಲಾತ್ಮಕ ಶೈಲಿಯಲ್ಲಿ ಹುಟ್ಟುಹಾಕಿದವರೇ ತುಳುನಾಡಿನ ನಲ್ಕೆ ಸಮುದಾಯದವರು. ಮೂಲತಃ ದ್ರಾವಿಡ ಜನಾಂಗದವರಾದ ಇವರು ಇಡೀ ದಕ್ಷಿಣ ಭಾರತದಲ್ಲಿ ಹರಡಿಕೊಂಡಿರುವುದೇ ದೈವಾರಾಧನೆ ಮತ್ತು ಕಲೆಯನ್ನು ನೆಚ್ಚಿಕೊಂಡು. ತಾವು ಇರುವ ನೆಲೆಯಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ನಲ್ಕೆ, ನಲಿಕೆ, ಪಾಣಾರ, ಪಾಣ, ಪಾಂಡ್ರು, ದೈವ, ಮಾಣಿ, ಭೂತಕಟ್ಟುವವ, ಕೋಪಾಳ, ದೆಸೆ, ಮಕ್ಕಳರ್, ಕಟ್ಟಿ, ಮಕ್ಕಳೆರ್ ಮುಂತಾದ ಹೆಸರುಗಳಲ್ಲಿ ಗುರುತಿಸಿಕೊಳ್ಳುತ್ತಾರೆ.

ನಲ್ಕೆ ಸಮುದಾಯದ ಚರಿತ್ರೆ ಆರಂಭವಾಗುವುದು ಅವರ ವೃತ್ತಿಯ ಮೂಲಕ. ವಿಶೇಷವಾಗಿ ನಲ್ಕೆಯವರ ಅಸ್ಮಿತೆಗಳನ್ನು ಗುರುತಿಸುವುದು ಆ ಸಮುದಾಯದ ಸಂಗೀತವಾದ್ಯದ ಮೂಲಕ. ಆ ವಾದ್ಯದ ಹೆಸರು ‘ತೆಂಬರೆ’. ತೆಂಬರೆ ಎಂಬ ಚರ್ಮವಾದ್ಯ ಇದು ನಲ್ಕೆ ಸಮುದಾಯದ ಕುಲಲಾಂಛನ. ಈ ಸಮುದಾಯ ನಡೆಸುವ ನೇಮಕೋಲಗಳಿಗೆ ತೆಂಬರೆ ಇರಲೇಬೇಕು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಕಾದಂಬರಿಯ ಹೆಸರೇ ‘ತೆಂಬರೆ’!

ಈ ತೆಂಬರೆಯ ಇತಿಹಾಸ ಬಹಳ ದೊಡ್ಡದು. ಅದು ಶ್ರೀಲಂಕಾದಿಂದ ಆರಂಭವಾಗಿ ತಮಿಳುನಾಡಿಗೆ ಬಂದು ಅದು ತುಳುನಾಡನ್ನು ತಲಪುತ್ತದೆ.

ನಲ್ಕೆ ಸಮುದಾಯದ ಸಾಂಸ್ಕೃತಿಕ ಮಹತ್ವದ ಮತ್ತೊಂದು ಗುರುತು ಕಾಲಿಗೆ ಧರಿಸುವ ‘ಗಗ್ಗರ’. ಜಗತ್ತಿನ ಯಾವುದೇ ಭಾಗದ ಯಾವುದೇ ಪ್ರಾಕಾರದ ನಾಟ್ಯ, ಕುಣಿತಗಳಿಗೆ ಬಳಸದ ಗಗ್ಗರವನ್ನು ದೈವಾರಾಧನೆಯ ಕುಣಿತದಲ್ಲಿ ಬಳಸುತ್ತಾರೆ. ಹಿತ್ತಾಳೆ ಮತ್ತು ಕಂಚಿನಿಂದ ತಯಾರಿಸಲಾಗುವ ಗಗ್ಗರ ಇದರ ಆಕಾರ ಮತ್ತು ಕಮಾನುಗಳಿಂದಾಗಿ ವಿಶಿಷ್ಟವಾಗಿ ಕಾಣುತ್ತದೆ. ಗಗ್ಗರವೂ ಕೂಡ ಶ್ರೀಲಂಕಾದಿಂದಲೇ ಬಂದ ಇತಿಹಾಸವಿದೆ.

ಅನೇಕ ಮಂದಿ ಸಂಶೋಧಕರು ಹೇಳುವಂತೆ ನಲ್ಕೆ ಸಮುದಾಯ ಶ್ರೀಲಂಕಾದಿಂದ ತಮಿಳುನಾಡಿನ ಮೂಲಕ ತುಳುನಾಡಿಗೆ ವಲಸೆ ಬಂದದ್ದು ಎಂಬುದು.

ಜೆ. ಸ್ಪರಿಕ್ ಎಂಬ ಮಾನವಶಾಸ್ತ್ರಜ್ಜ ತನ್ನ ಮದ್ರಾಸ್ ಡಿಸ್ಟ್ರಿಕ್ಟ್ ಮ್ಯಾನುವಲ್ ಆಫ್ ಸೌತ್ ಕೆನರಾ ಎಂಬ ಗ್ರಂಥದಲ್ಲಿ ಪಾಣಾರರನ್ನು ನಲ್ಕೆಯವರು ಎಂದು ಕರೆದು ಅವರು ಚಾಪೆ, ಬುಟ್ಟಿ, ಛತ್ರಿ ತಯಾರಕರು ಮತ್ತು ತುಳುವರ ಅತ್ಯಂತ ಪ್ರಸಿದ್ಧ ಆರಾಧನಾ ಕಲೆ ಭೂತನೃತ್ಯದಲ್ಲಿಯೂ ಪ್ರಮುಖ ಪಾತ್ರ ವಹಿಸುವವರು ಎಂದು ಹೇಳುತ್ತಾ ಅವರಾಡುವ ಭಾಷೆ ತುಳು, ಆದರೆ ಕುಂದಾಪುರದ ಕಡೆ ವಾಸಿಸುವವರು ಕುಂದಾಪುರ ಕನ್ನಡ ಮಾತನಾಡುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ. ಇವರು ತುಳುನಾಡಿಗೆ ಬಂದಾಗ ನಿರಾಶ್ರಿತರಾಗಿದ್ದರು, ಕ್ರಮೇಣ ಮನೆಮನೆಗೂ ಹೋಗಿ ತಾವು ತಿಳಿದಿದ್ದ ಕುಣಿತ ಕಲಿಸುತ್ತಾ ಆಹಾರಧಾನ್ಯ ಬೇಡುತ್ತಿದ್ದರು. ಇವರು ಮೂಲತಃ ನಾಟ್ಯ ಕಲಾವಿದರಾಗಿದ್ದರು. ಇದೇ ಅವರಿಗೆ ಜೀವನಾಧಾರವಾದ ಕುಲವೃತ್ತಿಯೂ ಆಗಿತ್ತು. ಇವರು ಕೃಷಿ ಮತ್ತು ಪಶುಪಾಲನೆ ಮಾಡಿದ ಆಧಾರಗಳು ಕಾಣಬರುವುದಿಲ್ಲ ಎಂದು ಆರಡಿ ಮಲ್ಲಯ್ಯ ಕಟ್ಟೇರ ಅಭಿಪ್ರಾಯಪಡುತ್ತಾರೆ. ದೊಂಬರು, ಪರವರು, ಮನ್ಸರು, ಪಾಣರು, ಪಂಬದರೊಂದಿಗೆ ನಲ್ಕೆಯವರೂ ಸೇರಿ ಒಂದೇ ಕುಲಮೂಲದಿಂದ ಬಂದವರಂತೆ ಕಾಣುತ್ತಾರೆ. ಇವರು ಮೂಲತಃ ದ್ರಾವಿಡ ಮೂಲದವರಾಗಿದ್ದು ದ್ರಾವಿಡ ಪದ್ಧತಿಯ ಪೂಜೆ ಪುರಸ್ಕಾರಗಳನ್ನು ಮಾಡುತ್ತಾ ಗಾಯನ, ನರ್ತನ, ವಾದನ ಚತುರರಾಗಿ ವೈದಿಕ ಪಂಥವನ್ನು ಸ್ವೀಕರಿಸದೆ ಇದ್ದದ್ದರಿಂದ ವೈದಿಕರು ಇವರನ್ನು ದೂರ ಇಟ್ಟರು, ಇವರು ಅಸ್ಪಶ್ಯರಾದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಕಾಣಸಿಗುವ ನಲ್ಕೆ ಸಮುದಾಯದವರಿಗೆ ಅಸ್ಪಶ್ಯತೆಯ ಕಳಂಕ ಇನ್ನೂ ನಿವಾರಣೆಯಾಗಿಲ್ಲ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಈ ಅಸ್ಪಶ್ಯತೆಯ ತಾರತಮ್ಯ ಇದ್ದೇ ಇದೆ. ಒಡೆಯರ ಮುಂದೆ ಕಟ್ಟಿದ ಕೈ, ಬಾಗಿದ ನಡು ಇನ್ನೂ ನೇರವಾಗಿಲ್ಲ. ಈಗ ಬದುಕಲು ಭೂತಾರಾಧನೆ, ಹಾಡು, ನೃತ್ಯಗಳೊಂದಿಗೆ ಹೋಟೆಲ್ ಕೆಲಸಕ್ಕೆ, ಕೂಲಿ ಕೆಲಸಕ್ಕೆ, ಆಟೊ ಓಡಿಸಲು ಹೋಗುತ್ತಿದ್ದಾರೆ. ಇವರ ಬದುಕು ಕೂಡ ನಮ್ಮ ಸರಕಾರಕ್ಕೆ ಕಾಣಿಸಿಲ್ಲ. ಇವರಲ್ಲಿ ಕೆಲವರಿಗೆ ಕೇಸರಿ ವಸ್ತ್ರ ತೊಡಿಸಿ, ಕೈಗೆ ಭಗವಧ್ವಜ ಕೊಟ್ಟು ಜೈಶ್ರೀರಾಮ್ ಎಂದು ಘೋಷಿಸುವವರಿಗೂ ಇವರ ಬಡತನ, ದಾರಿದ್ರ್ಯಗಳು ಮಾತ್ರ ಕಂಡಿಲ್ಲ!

Tags

Nalkecommunity
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X