Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಾರಾಯಣಗುರುಗಳ ಅಸ್ಪೃಶ್ಯತಾ ನಿವಾರಣಾ...

ನಾರಾಯಣಗುರುಗಳ ಅಸ್ಪೃಶ್ಯತಾ ನಿವಾರಣಾ ಚಳವಳಿ

ಡಾ. ಕೆ.ಪಿ. ಮಹಾಲಿಂಗು ಕಲ್ಕುಂದಡಾ. ಕೆ.ಪಿ. ಮಹಾಲಿಂಗು ಕಲ್ಕುಂದ7 Sept 2025 10:40 AM IST
share
ನಾರಾಯಣಗುರುಗಳ ಅಸ್ಪೃಶ್ಯತಾ ನಿವಾರಣಾ ಚಳವಳಿ
ಇಂದು ನಾರಾಯಣ ಗುರು ಜಯಂತಿ

ಎಲ್ಲರಿಗೂ ಒಂದೇ ತತ್ವ ಎಂದ ನಾರಾಯಣ ಗುರು ಬುದ್ಧನಂತೆ ಅಹಿಂಸೆಯನ್ನು ಪ್ರತಿಪಾದಿಸುತ್ತಿದ್ದರು. ಪ್ರಾಣಿ ಬಲಿ ನಿಷೇಧ ಮಾಡುತ್ತಿದ್ದರು. ಅಸ್ಪಶ್ಯರಿಗೆ ಮುಟ್ಟಿಸಿಕೊಳ್ಳುವ ಕೆಲಸವನ್ನು ದೇವಸ್ಥಾನಗಳಿಂದ ನೀಡಿ ಮುಳ್ಳನ್ನು ಮುಳ್ಳಿನಿಂದಲೇ ಕೀಳುವ ಪ್ರಯತ್ನ ಮಾಡುತ್ತಿದ್ದರು. ಎಲ್ಲಾ ಜನಾಂಗಗಳಲ್ಲಿ ಪ್ರೀತಿ, ಮಮತೆ, ಸಹಬಾಳ್ವೆ, ಸ್ನೇಹ ಮುಂದುವರಿಸುವಂತೆ ತಿಳಿಸಿದರು. ಜಾತಿ, ಕುಲ, ಧರ್ಮದ ಬಗ್ಗೆ ವ್ಯತ್ಯಾಸ ಬಿಟ್ಟು ಸೋದರತ್ವದ ಕಡೆಗೆ ಜನರನ್ನು ಜಾಗೃತಗೊಳಿಸುತ್ತಿದ್ದರು.

ಭಾರತದ ದಲಿತ ಚಳವಳಿಯಲ್ಲಿ ಕೇರಳ ರಾಜ್ಯದ ಕೊಡುಗೆಯು ದೊಡ್ಡದು. ಈ ನಿಟ್ಟಿನಲ್ಲಿ ನಾರಾಯಣ ಗುರುಗಳು ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ನಾರಾಯಣ ಗುರುಗಳು ತೀಯರು ಅಥವಾ ಈಳವ ಜಾತಿಯಲ್ಲಿ ಜನಿಸಿದವರು. ಇಲ್ಲಿ ಈ ಜಾತಿಯನ್ನು ಅಸ್ಪಶ್ಯರೆಂದು ಕರೆಯಲಾಗಿತ್ತು.

ಇವರು ಹುಟ್ಟಿದ ಸಮಯದ ಕೇರಳಕ್ಕೂ ಈಗಿನ ಕೇರಳಕ್ಕೂ ಬಹಳ ವ್ಯತ್ಯಾಸವಿದೆ. ಆಗ ಕೇರಳ ರಾಜ್ಯದ ಸಾಂಸ್ಕೃತಿಕ ಹಿನ್ನೆಲೆ ಅಭದ್ರ ವಾಗಿತ್ತು. ಮುಂಚೆ ಸ್ವಾತಂತ್ರ್ಯ ಪೂರ್ವದಲ್ಲಿ ಕೇರಳ ನಾಡೆಂದರೆ ತಿರುವನಂತಪುರ ಮತ್ತು ತಿರುವಾಂಕೂರು ರಾಜ್ಯಗಳು ಮಾತ್ರ. ಇಲ್ಲಿ ಬಹಳ ಜನಸಂಖ್ಯೆ ಇತ್ತು. ಅದರಲ್ಲಿ ಬಹುಸಂಖ್ಯಾತರಾಗಿದ್ದವರು ನಾಯಕ ಮತ್ತು ಈಳವ ಜಾತಿಯವರು.

ಕೇರಳದ ನಾರಾಯಣ ಗುರು ನಡೆಸಿದ ಕ್ರಾಂತಿಯು ಅಸ್ಪಶ್ಯತೆಯ ನಿವಾರಣೆಗಾಗಿ ಮಾಡಿದ ಬಹುದೊಡ್ಡ ಚಳವಳಿಯಾಗಿದೆ. ಎಲ್ಲಾ ಕ್ರಾಂತಿಗೆ ಕಾರಣ ಅನ್ಯಮತಗಳ ಬಗೆಗಿನ ಅಜ್ಞಾನದ ಕೇಡನ್ನು ಜ್ಞಾನದ ಸ್ಪರ್ಶದಿಂದ ಪರಿಹರಿಸಬೇಕು ಎಂಬುದು ನಾರಾಯಣ ಗುರುಗಳ ನಿಲುವಾಗಿತ್ತು. ನಾರಾಯಣ ಗುರುಗಳು ಆಧ್ಯಾತ್ಮಿಕ ಮಾರ್ಗದಲ್ಲೇ ದಲಿತ ಚಳವಳಿಯನ್ನು ಕೇರಳದಲ್ಲಿ ಪ್ರಾರಂಭಿಸಿದರು. ಇವರಿಗಿಂತ ಮುಂಚೆ ಬ್ಯಾರಿಸ್ಟರ್ ಪರಮೇಶ್ವರ ಪಿಳ್ಳೆಯವರು ೧೮೯೧ರಲ್ಲಿ ತಿರುವಾಂಕೂರಿನವರಿಗೆ, ಕೇರಳ-ತಿರುವಾಂಕೂರು ಎಂಬ ಮಲೆಯಾಳಿ ಚಳವಳಿಯನ್ನು ಪ್ರಾರಂಭಿಸಿದರು. ಜಾತಿ ಮತ ಭೇದವಿಲ್ಲದೆ ನಾಯರ್, ಕ್ರಿಶ್ಚಿಯನ್, ತೀಯರ್, ಮುಸ್ಲಿಮ್ ಜನರೆಲ್ಲರೂ ಒಟ್ಟಾಗಿ ಆ ಚಳವಳಿಗೆ ಬೆಂಬಲ ನೀಡಿದ್ದರಿಂದ ನಾರಾಯಣ ಗುರುಗಳ ದಲಿತ ಚಳವಳಿ ಯಶಸ್ಸನ್ನು ಪಡೆದುಕೊಳ್ಳುತ್ತದೆ. ಅಲ್ಲದೆ, ೧೯೨೦ರ ನಂತರ ಕೇರಳದಲ್ಲಿ ಕಮ್ಯುನಿಸ್ಟ್ ತತ್ವ ಪ್ರಚಾರವು ಸಹ ದಲಿತ ಚಳವಳಿಗೆ ಅನುಕೂಲವಾಗುತ್ತದೆ.

ಕೇರಳದಲ್ಲಿ ನಂಬೂದರಿ ಬ್ರಾಹ್ಮಣರು ಸಮಾಜದ ಮೇಲಿನ ಸ್ಥಾನದಲ್ಲಿದ್ದರು. ಇವರು ಅನ್ಯರಲ್ಲಿ ಭೇದ ಭಾವವನ್ನು ಮಾಡು ತ್ತಿದ್ದರು. ಈಳವರು ಈ ವ್ಯವಸ್ಥೆಗಳಿಂದ ಹೊರಗುಳಿದುದರಿಂದ ಅಸ್ಪಶ್ಯರಾಗಿಯೇ ಅವರ್ಣೀಯರೆನಿಸಿದ್ದರು. ಪುಲೆಯ, ಪರೆಯರೆಂಬ ಜಾತಿಯವರು ಇಡೀ ಸಮಾಜದಲ್ಲಿ ಕೆಳಮಟ್ಟ ದಲ್ಲಿದ್ದರು. ಅವರವರಲ್ಲಿಯೇ ಭಿನ್ನಾಭಿಪ್ರಾಯಗಳು ತಲೆದೋರಲಾ ರಂಭಿಸಿದ್ದವು. ಇದು ಅಂದು ಕೇರಳದಲ್ಲಿ ಕಾಣುತ್ತಿತ್ತು. ಅಲ್ಲಿನ ಸಮಾಜದ ಕಟ್ಟುಪಾಡುಗಳೆಲ್ಲವೂ ತೀರ ಸೂಕ್ಷ್ಮವಾಗಿದ್ದವು. ಅವರು ಅವರ್ಣೀಯರನ್ನು ಮತ್ತು ಪಂಚಮರನ್ನು ಮಾನವರೆಂದು ತಿಳಿಯುತ್ತಲೇ ಇರಲಿಲ್ಲ. ನಂಬೂದರಿಗಳು ಬರುವ ದಾರಿಯಲ್ಲಿ ಅವರ್ಣೀಯರು ನಡೆದುಕೊಂಡು ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು! ಮೇಲ್ಜಾತಿಯವರು ಬರುವ ಮುಂದೆ ನಾಯಕರು ‘ಓಹೋ’ ಎಂದು ಸೂಚಿಸಿ ಅವರ ಬರುವಿಕೆಯನ್ನು ತಿಳಿಸುತ್ತಿದ್ದರು. ಅವರಿಗಿಂತ ಈಳವರು ಮೂವತ್ತೆರಡು ಅಡಿಗಳ ದೂರ ಇರಬೇಕಾಗಿತ್ತು. ಪಂಚಮರು ೬೪ ಅಡಿ ದೂರದಲ್ಲಿರಬೇಕಿತ್ತು. ಇದು ಕೇರಳದಲ್ಲಿನ ಆ ಹೊತ್ತಿನ ಸಮಾಜದ ನಿಯಮವಾಗಿತ್ತು.

ಅವರ್ಣೀಯರು ಕೆಲಸ ಮಾಡುವ ಪ್ರದೇಶಗಳಲ್ಲಿ ಹಸಿರು ಸೊಪ್ಪು, ಮಣ್ಣಿನ ರಾಶಿ ಸುರಿದು ಸವರ್ಣೀಯರು ಬೇರೆ ರಸ್ತೆಯಲ್ಲಿ ಬರಲು ಸೂಚಿಸಲಾಗಿತ್ತು. ರಸ್ತೆ ಓಡಾಟ ನಿಷೇಧವಾಗಿತ್ತು. ನಿಯಮ ಉಲ್ಲಂಘಿಸಿದವರಿಗೆ ಉಗ್ರ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಅವರ್ಣೀಯರು ಬೆಲೆ ಬಾಳುವ ಆಭರಣ ಧರಿಸುವಂತಿರಲಿಲ್ಲ. ಕೊಡೆ, ಚಪ್ಪಲಿ ಉಪಯೋಗಿಸುವ ಹಕ್ಕಿರಲಿಲ್ಲ. ಆದರೆ ಎಲ್ಲಾ ರೀತಿಯ ಸೌಕರ್ಯಗಳು ನಂಬೂದರಿಗಳಿಗೆ ಸಿಗುತ್ತಿತ್ತು. ಉಳಿದ ಜನರು ದರಿದ್ರರು ಎಂದು ನಂಬೂದರಿಗಳು ತಿಳಿದುಕೊಂಡಿದ್ದರು. ಮೇಲಿನ ಜನರಿಗೆ ಗೌರವ ತೋರಿಸಲಿಕ್ಕಾಗಿಯೇ ಕೆಳ ಜಾತಿ ಹೆಂಗಸರು ತಮ್ಮ ಎದೆಯ ಮೇಲಿನ ಸೀರೆ ಸೆರಗನ್ನು ತೆಗೆಯಬೇಕಿತ್ತು. ಈ ಅಮಾನವೀಯ ಬದುಕು ಕಂಡು ಹಲವಾರು ಹೋರಾಟಗಳ ಪರಿಣಾಮವಾಗಿ ೧೮೫೯ರಲ್ಲಿ ಅವರ್ಣೀಯ ಹೆಂಗಸರಿಗೆ ರವಿಕೆ ತೊಡುವ ಅವಕಾಶ ನೀಡಲಾಗಿತ್ತು. ಇನ್ನೂ ಮುಂದುವರಿದು ದೇವರನ್ನು ನೋಡಲು ಅವರ್ಣೀಯರು ಕಾಣಿಕೆ(ಹಣ) ಎಸೆದರೆ, ಆ ಕಡೆಯಿಂದ ಮನುವಾದಿಗಳು ಪ್ರಸಾದ ಎಸೆಯುತ್ತಿದ್ದರು. ಸರಕಾರಿ ಶಾಲೆಯಲ್ಲಿ ಅಸ್ಪಶ್ಯರ ಮಕ್ಕಳಿಗೆ ಪ್ರವೇಶ ಇರಲಿಲ್ಲ. ಈ ಕಾರಣಕ್ಕಾಗಿ ಹುಚ್ಚರ ಸಂತೆ ಎಂದು ಸ್ವಾಮಿ ವಿವೇಕಾನಂದರಿಂದ ಕರೆಯಿಸಿಕೊಂಡ ಸಮಾಜಕ್ಕೆ, ನಾರಾಯಣ ಗುರು ಔಷಧಿಯಂತೆ, ಗುರುವಾದರು. ಈಳವರಿಂದ ಬಂದ ಈ ಹೊಸ ಅಲೆ ಸುಧಾರಣೆಗೊಂಡಿತ್ತು. ಜನರು ಹಿಂದಿನಿಂದ ಅನುಸರಿಸಿದ ಮೂಢನಂಬಿಕೆಯ ಪದ್ಧತಿಗೆ ತಿಲಾಂಜಲಿ ನೀಡಿದ್ದರು. ಜನ ಜಾಗೃತರಾದರು. ಪೂಜೆಯ ಹಕ್ಕು ಎಲ್ಲರಿಗೂ ಇದೆ, ದೇವಾಲಯದ ಒಳಗೆ ಎಲ್ಲರಿಗೂ ಪ್ರವೇಶ ಇರಬೇಕು ಎಂದು ನಾರಾಯಣ ಗುರು ದೇವಾಲಯ ಕಟ್ಟಿದರು.

ಪೂಜಿಸುವ ಹಕ್ಕು ಎಲ್ಲರಿಗೂ ಬಂದಿದೆ. ದೇವರು ಸರ್ವಾಂತರ್ಯಾಮಿ ಎಂದು ಅವರು ಹೇಳಿದರು. ನಂಬೂದರಿಗಳಿಂದ ‘‘ಶಿವ ನಮ್ಮವ’’ ಎಂಬ ಒಂದು ವಾದಕ್ಕೆ ನಾರಾಯಣ ಗುರು, ‘‘ನಿಮ್ಮ ಶಿವ ನಮಗೆ ಬೇಕಿಲ್ಲ, ನಮಗೆ ಈಳವ ಶಿವ ಬೇಕು. ನಾವು ಅವನನ್ನು ಪೂಜಿಸುತ್ತೇವೆ.’’ ಎಂದು ಸಮಾನತೆಗಾಗಿ ಜಾತಿ ಸಂಕೋಲೆ ಬಿಚ್ಚಿ ದಿಟ್ಟವಾಗಿ ಉತ್ತರಿಸಿದರು. ಅವರು ಕೈ ಕಟ್ಟಿ ಕೂರಲಿಲ್ಲ. ಸಾಮಾನ್ಯ ಪ್ರಜೆಗಳಿಗೂ ಆಧ್ಯಾತ್ಮಿಕತೆ ಕಡೆ ಹೋಗಲು ಇದನ್ನು ಮೆಟ್ಟಲು ಎಂದರು. ಮೇಲ್ವರ್ಗಗಳಷ್ಟೇ ಅಲ್ಲ, ಸಾಮಾನ್ಯರೂ ಪೂಜೆ ಮೂಲಕ ಸಮಾನತೆಗಾಗಿ ನಡೆಯಬಹುದಾದ ಆಧ್ಯಾತ್ಮಿಕತೆಯನ್ನು ಜಗತ್ತಿಗೆ ಸಾರಿದರು.

ಅಲ್ಲದೆ ಈಳವರು ಮದ್ಯಪಾನ ಮಾಡಿ ದೇವರಿಗೆ ಬಲಿ ನೀಡುತ್ತಿರುವ ಪೂಜೆಯನ್ನು ಖಂಡಿಸಿದರು. ನಾರಾಯಣ ಗುರುಗಳು ಕೇರಳದಲ್ಲಿ ಕೆಳವರ್ಗದವರಿಗೆ ಇದ್ದ ಅನಿಷ್ಟ, ಅನಾಚಾರ ಪದ್ಧತಿಗಳನ್ನು ಖಂಡಿಸಿ, ಶುಚ್ಚಿತ್ವ, ಆರೋಗ್ಯದ ಬಗ್ಗೆ ಸುಧಾರಣೆಗಳನ್ನು ತಂದರು. ವೈಜ್ಞಾನಿಕವಾಗಿ ಚಿಂತಿಸಿರಿ ಎಂದು ತಿಳಿ ಹೇಳಿದರು. ಜನರೊಂದಿಗೆ ಪ್ರೀತಿ-ಪ್ರೇಮ ತುಂಬಿಕೊಂಡು ಆಧ್ಯಾತ್ಮಿಕತೆಗೆ ಒತ್ತು ನೀಡಲು ಅವರು ಅರುವಿಪುರಂನ ಶಿವದೇಗುಲದ ನಂತರ ಚಿರಾಯಿಂಳುವಿನ ದೇವೇಶ್ವರ ದೇಗುಲ, ನಂತರ ವಕ್ಕಂನ ಸುಬ್ರಹ್ಮಣ್ಯ ದೇಗುಲ ಕಟ್ಟಿಸಿದರು. ಇವರು ನಿರ್ಮಿಸಿದ ದೇವಾಲಯಗಳೆಲ್ಲವೂ ಪ್ರಕೃತಿ ತಾಣಗಳಲ್ಲಿ ರಮಣೀಯವಾದವುಗಳು.

ದೇವಾಲಯಗಳಿಂದ ಬಂದ ಹಣವನ್ನು ಪೋಲು ಮಾಡದೆ ಸಮಾಜದ ಹಿತಕ್ಕಾಗಿ ರಾತ್ರಿ ಶಾಲೆಗಳನ್ನು ತೆರೆದರು. ಸುಮಾರು ೧೯೨೧ರಲ್ಲಿ ಶಾರದಾ ಮಠದೊಂದಿಗೆ ವೈದಿಕ ವಿದ್ಯಾಲಯ ಸ್ಥಾಪಿಸಿದರು. ಇಲ್ಲಿ ಕೆಳಜಾತಿ ಜನರಿಗಾಗಿ ರಾತ್ರಿ ಶಾಲೆ ತೆರೆದರು. ಶಾರದಾ ಮಠದಲ್ಲಿ ಪೂಜೆ ಇರಲಿಲ್ಲ. ಇದು ಕೇವಲ ಜ್ಞಾನ ಕೇಂದ್ರ ಮಾತ್ರ. ಇಲ್ಲಿ ರಾತ್ರಿ ಪಾಠ ಕಲಿಯಬಹುದು. ಒಟ್ಟಾರೆ ಜ್ಞಾನಕ್ಕೆ ಒತ್ತು ನೀಡಿ ಕೆಳವರ್ಗದವರಿಗೆ ಶಿಕ್ಷಣವನ್ನು ತಲುಪಿಸುವುದೇ ನಾರಾಯಣ ಗುರುಗಳ ಉದ್ದೇಶವಾಗಿತ್ತು.

ಎಲ್ಲರಿಗೂ ಒಂದೇ ತತ್ವ ಎಂದ ನಾರಾಯಣ ಗುರು ಬುದ್ಧನಂತೆ ಅಹಿಂಸೆಯನ್ನು ಪ್ರತಿಪಾದಿಸುತ್ತಿದ್ದರು. ಪ್ರಾಣಿ ಬಲಿ ನಿಷೇಧ ಮಾಡುತ್ತಿದ್ದರು. ಅಸ್ಪಶ್ಯರಿಗೆ ಮುಟ್ಟಿಸಿಕೊಳ್ಳುವ ಕೆಲಸವನ್ನು ದೇವಸ್ಥಾನಗಳಿಂದ ನೀಡಿ ಮುಳ್ಳನ್ನು ಮುಳ್ಳಿನಿಂದಲೇ ಕೀಳುವ ಪ್ರಯತ್ನ ಮಾಡುತ್ತಿದ್ದರು. ಎಲ್ಲಾ ಜನಾಂಗಗಳಲ್ಲಿ ಪ್ರೀತಿ, ಮಮತೆ, ಸಹಬಾಳ್ವೆ, ಸ್ನೇಹ ಮುಂದುವರಿಸುವಂತೆ ತಿಳಿಸಿದರು. ಜಾತಿ, ಕುಲ, ಧರ್ಮದ ಬಗ್ಗೆ ವ್ಯತ್ಯಾಸ ಬಿಟ್ಟು ಸೋದರತ್ವದ ಕಡೆಗೆ ಜನರನ್ನು ಜಾಗೃತಗೊಳಿಸುತ್ತಿದ್ದರು.

ನಾರಾಯಣ ಗುರುಗಳಿಂದಾಗಿ ಕೇರಳದ ಪುಲಯ, ಪರಯ, ಮತ್ತಿತರ ತುಳಿತಕ್ಕೆ ಒಳಗಾದ ಪಂಗಡಗಳು ತಮ್ಮ ಹಕ್ಕನ್ನು ತಿಳಿದುಕೊಂಡವು. ಅನ್ಯರು ಅವರ ಹಕ್ಕುಗಳಿಗಾಗಿ ಹೋರಾಡಲು ಕಲಿತರು. ನಾರಾಯಣ ಗುರುಗಳ ಪರಿಶ್ರಮದಿಂದ ವಿಶಾಲ ದೃಷ್ಟಿಯಿಂದ, ಸಿದ್ಧಾಂತ ಪೂರಕವಾಗಿ ೧೯೨೪ರಲ್ಲಿ ಶಿವರಾತ್ರಿಯ ದಿನ, ಆಳ್ವಾಯಿಯ ಅದ್ವೈತಾಶ್ರಮದಲ್ಲಿ ಎಲ್ಲಾ ಧರ್ಮಗಳನ್ನು ಒಂದೇ ವೇದಿಕೆಗೆ ಕರೆದು ಸಮ್ಮೇಳನ ನಡೆಸಿದರು.

ಇದಲ್ಲದೆ, ನಾರಾಯಣ ಗುರುಗಳು, ಜೀತಪದ್ಧತಿ ತೊಲಗಿಸಲು ಪ್ರಯತ್ನಿಸಿದರು. ೧೯೦೩ರಲ್ಲಿ ‘ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗ ಸಂಸ್ಥೆ’ ತೆರೆದರು. ಶಾಲೆಗಳಲ್ಲಿ ಪ್ರವೇಶದ ಹಕ್ಕು, ದೇವಾಲಯ ಪ್ರವೇಶದ ಹಕ್ಕು, ನೌಕರಿಯಲ್ಲಿ ಕೆಳಜಾತಿಯ ಮೀಸಲಾತಿಗಾಗಿ ಹೋರಾಟ ಮಾಡಿದರು. ೧೯೨೨ರಲ್ಲಿ ಕವಿ ರವೀಂದ್ರನಾಥ ಟಾಗೋರ್ ಪ್ರವಾಸ ಕೈಗೊಂಡಿದ್ದಾಗ ಅವರನ್ನು ಭೇಟಿ ಮಾಡಿದರು. ಆಗ ಟಾಗೋರರೇ ಗುರುಗಳ ಸಾಧನೆ ನೋಡಿ ಅಚ್ಚರಿಗೊಂಡರು. ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ೧೯೨೫ರ ಮಾರ್ಚ್ ೧೨ರಂದು ನಾರಾಯಣ ಗುರುಗಳನ್ನು ಭೇಟಿಯಾದರು. ನಾರಾಯಣ ಗುರುಗಳು ಅಪಾರ ಶಿಷ್ಯರೊಟ್ಟಿಗೆ ಬಿ.ಕೆ. ಮಾಧವನ್‌ರವರೊಟ್ಟಿಗೆ ವೈಕುಂ ಸತ್ಯಾಗ್ರಹವನ್ನು ಆಯೋಜಿಸಿದರು. ತಿರುವನಂತಪುರದಲ್ಲಿ ಗಾಂಧಿ ಹಾಗೂ ನಾರಾಯಣ ಗುರುಗಳು ಮತ್ತೆ ಭೇಟಿಯಾದರು. ಅಲ್ಲಿ ಒಂದೇ ಹೋರಾಟದ ಎರಡು ಮುಖಗಳು ಸಂಧಿಸಿದಂತಾಗಿತ್ತು.

ನಾರಾಯಣ ಗುರುಗಳ ಶೂದ್ರ ಚಳವಳಿ

ಮೇಲ್ಜಾತಿಗಳು ಸೃಷ್ಟಿಸಿದ ಧಾರುಣ ಸ್ಥಿತಿಗತಿಗಳಿಂದ ಕೇರಳದ ಅಸ್ಪಶ್ಯರಿಗೆ ಜಾತಿ ಮತ್ತು ಅಸ್ಪಶ್ಯತೆ ಒಂದು ಕಂಟಕವಾಗಿತ್ತು. ಇಂತಹ ಸಮಯದಲ್ಲಿ ನಾರಾಯಣ ಗುರುಗಳು ಈ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಮುಂದಾದರು. ಕಾತುರದ ಜೊತೆಗೆ ಹೆಜ್ಜೆ ಹೆಜ್ಜೆಗೂ ಅಂತರಾಳದಲ್ಲಿ ಬರುತ್ತಿದ್ದ ಪ್ರಶ್ನೆಗಳನ್ನು ತೆರೆದಿಟ್ಟರು. ಮಲೆಯಾಳಿ, ಸಂಸ್ಕೃತ, ತಮಿಳು ಗ್ರಂಥಗಳನ್ನು ಅಭ್ಯಾಸ ಮಾಡಿದರು. ಒಂದು ದಿನವೂ ಸಮಯ ವ್ಯರ್ಥ ಮಾಡದೇ ಏನಾದರೂ ತಿಳಿದುಕೊಳ್ಳುವ, ಕೆಲಸ ಮಾಡುವ ಅಭ್ಯಾಸ ಅವರಿಗೆ ಒಗ್ಗಿ ಹೋಗಿತ್ತು. ನಾರಾಯಣಗುರುಗಳು ಈಳವರ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಕಠಿಣ ಸಾಧನೆಯಿಂದ ಅವರು ಮನುಕುಲದ ಆಚಾರ‌್ಯರಾಗಿ, ಕೇರಳದಲ್ಲಿ ಬ್ರಾಹ್ಮಣ-ಶೂದ್ರ ಪ್ರಜ್ಞೆಯ ಅರಿವು ಮೂಡಿಸಿದವರು.

ನಾರಾಯಣ ಗುರುಗಳ ಪ್ರೇರಣೆಯಿಂದ ಕೇರಳದಲ್ಲಿ ನಡೆದ ಈಳವರ ಜಾತಿ ವಿರೋಧಿ ಚಳವಳಿಯಿಂದ ಸವರ್ಣೀಯರಾದ ನಂಬೂದರಿಗಳಿಗೆ ವಿವೇಕೋದಯವಾಗುತ್ತದೆ. ಇದರ ಪ್ರಭಾವ ಕರ್ನಾಟಕದ ಮೇಲೂ ಆಗುತ್ತದೆ. ಇದು ಭಾರತದ ಎಲ್ಲೆಡೆ ಪಸರಿಸಿಕೊಂಡು ಅನೇಕ ಕಡೆ ದಲಿತರು ಶೂದ್ರ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಇದು ಕೇರಳದಲ್ಲಂತೂ ಬ್ರಾಹ್ಮಣರ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಕೆಳವರ್ಗದ ಈಳವ, ಪರೆಯಗಳಿಗೆ ಒಂದು ಸಾಮಾಜಿಕ ಐಡೆಂಟಿಟಿಯನ್ನು ಒದಗಿಸುತ್ತದೆ. ಹೀಗೆ ನಾರಾಯಣ ಗುರುಗಳ ಈ ಚಳವಳಿ ಭಾರತದ ಸಾಮಾಜಿಕ ಚಳವಳಿಯಾಗಿದೆ.

ಹೀಗೆ ದಲಿತ ಚಳವಳಿ ಭಾರತದ ಅನೇಕ ಕಡೆಗಳಲ್ಲಿಯೂ ಪಸರಿಸಿಕೊಂಡಿದ್ದೂ ಉಂಟು. ನಾರಾಯಣ ಗುರುಗಳ ಚಳವಳಿ ಭಾರತದ ಸಾಮಾಜಿಕ ಕ್ರಾಂತಿಕಾರಿ ಚಳವಳಿಯಾಗಿದೆ. ತಮ್ಮ ಜೀವಿತ ಕಾಲದಲ್ಲಿ ಕಟ್ಟಿಸಿದಸುಮಾರು ೬೦ ದೇವಸ್ಥಾನಗಳಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಪ್ರವೇಶ ನೀಡಿ ಪ್ರಾರ್ಥನೆಗೆ ಅವಕಾಶ ನೀಡಿದರು. ‘ಒಂದು ಜಾತಿ, ಒಂದು ಮತ ಮತ್ತು ಒಂದೇ ದೇವರು’ ಎಂಬುದೇ ಅವರ ಧ್ಯೇಯವಾಣಿ ಆಗಿತ್ತು.

ನಾರಾಯಣ ಗುರುಗಳು ಎಸ್.ಎನ್.ಡಿ.ಪಿ.(ಶ್ರೀ ನಾರಾಯಣ ಧರ್ಮ ಪರಿಪಾಲನೆ) ಸಂಘಟನೆಯನ್ನು ೧೯೦೩ರಲ್ಲಿ ಹುಟ್ಟು ಹಾಕಿದರು. ಇದರ ಮುಖಾಂತರ ಆರ್ಥಿಕ ಸ್ವಾತಂತ್ರ್ಯ ತಂದು ಕೊಟ್ಟರು. ೨೦ನೇ ಶತಮಾನದ ಮೊದಲ ದಶಕದಲ್ಲಿ ಕೇರಳದಲ್ಲಿ ಈಳವ, ನಾಯರ್ ಮತ್ತು ನಾಡರ್ ಜನಾಂಗದವರು ಜಾತಿ ಸಂಘಟನೆಗಳನ್ನೂ ಹುಟ್ಟು ಹಾಕಿ ಸಾಮಾಜಿಕ ಬದಲಾವಣೆಗೆ ಚಾಲನೆ ನೀಡಿದರು. ಸಾಮಾಜಿಕ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭಿಸಿದರು. ಅದೇ ರೀತಿ ‘ಸಾಧು ಜನ ಪಾರಿಪಾಲನೆ ಸಂಘ’ವನ್ನು ೧೯೧೩ರಲ್ಲಿ ಅಯ್ಯನ್ ಕಾಳಿ ತೆರೆದಿದ್ದರು.

ನಾರಾಯಣ ಗುರು ಈಳವ, ದಲಿತರ ಪ್ರಗತಿಗಾಗಿ ದುಡಿದರೆ, ಅಯ್ಯನ್ ಕಾಳಿ, ದಲಿತ ಪುಲೆಯರಿಗಾಗಿ ಚಳವಳಿಯನ್ನು ಮಾಡಿದರು. ಕೇರಳದಲ್ಲಿ ಆದ ಈ ಹೊಸ ಕ್ರಾಂತಿ ಭಾರತದ ಇತಿಹಾಸದಲ್ಲಿ ದಾಖಲಾಯಿತು. ಅದೇ ರೀತಿ ಚಾರಿತ್ರ್ಯವಿಲ್ಲದ ವಿದ್ಯಾಭ್ಯಾಸ, ಮಾನವೀಯತೆ ಇಲ್ಲದ ವಿಜ್ಞಾನ, ತತ್ವರಹಿತ ರಾಜಕೀಯ, ನೈತಿಕತೆ ಇಲ್ಲದಿರುವ ವಾಣಿಜ್ಯ ಇವೆಲ್ಲ ನಿರರ್ಥಕ ಮತ್ತು ಅಪಾಯಕಾರಿಯಾಗಿವೆ. ಮಾನವೀಯ ಗುಣಗಳಿಗೆ ಪ್ರೀತಿ ಜ್ಞಾನವೇ ಆಧಾರ. ತಂದೆ-ತಾಯಿ ಮೊದಲ ಚಿಂತಕರು. ಅವರೇ ಮೊದಲ ಪ್ರತ್ಯಕ್ಷ ದೇವರು ಎಂದೆಲ್ಲ ಸಾರಿದರು.

ಅವರು ಇಂತಹ ಮಾನವೀಯ ಗುಣಗಳಿಗೆ ಸ್ಪಂದಿಸಿದ್ದರಿಂದ ದಲಿತರಿಗೆ, ಅಸ್ಪಶ್ಯರಿಗೆ ದೇವಾಲಯ, ಶಾಲೆಗಳಿಗೆ ಪ್ರವೇಶ ಅವಕಾಶಗಳು ಅವರು ಬದುಕಿದ್ದಾಗಲೇ ಸಿಕ್ಕಿತು. ಆ ಮೂಲಕ ಅವರು ಈ ಹೊತ್ತಿನ ಎಲ್ಲಾ ಸಾಮಾಜಿಕ ಕ್ರಾಂತಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾದರು. ಅವರು ದಲಿತ ಚಳವಳಿಗೆ ಇಡೀ ದೇಶದಲ್ಲಿ ತಮ್ಮದೇ ಆದ ಮಾದರಿಯನ್ನು ತೆರೆದಿಟ್ಟಿರುವುದು ಸುಳ್ಳಲ್ಲ. ಕೇರಳ ಇಂದು ಹೆಚ್ಚಾಗಿ ಪ್ರಾಕೃತಿಕ ಸೌಂದರ್ಯದೊಟ್ಟಿಗೆ ಸರ್ವ ಸಮಾಜವೂ ಅಕ್ಷರಬಲ್ಲವರಾಗಿರುವುದು ನಾರಾಯಣ ಗುರುಗಳ ಹೋರಾಟದ ದೊಡ್ಡ ಫಲವಾಗಿದೆ.

share
ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ
ಡಾ. ಕೆ.ಪಿ. ಮಹಾಲಿಂಗು ಕಲ್ಕುಂದ
Next Story
X