Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೂಲ ಉದ್ದೇಶದಿಂದ ವಿಮುಖಗೊಂಡ...

ಮೂಲ ಉದ್ದೇಶದಿಂದ ವಿಮುಖಗೊಂಡ ಎನ್‌ಸಿಇಆರ್‌ಟಿ

ನಿರಂಜನಾರಾಧ್ಯ ವಿ.ಪಿ.ನಿರಂಜನಾರಾಧ್ಯ ವಿ.ಪಿ.6 May 2026 12:32 PM IST
share
ಮೂಲ ಉದ್ದೇಶದಿಂದ ವಿಮುಖಗೊಂಡ ಎನ್‌ಸಿಇಆರ್‌ಟಿ

ಕಳೆದ ಒಂದೂವರೆ ದಶಕದಿಂದ ಪಠ್ರಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕ ರಚನೆಯಲ್ಲಿ ಎನ್‌ಸಿಇಆರ್‌ಟಿಯ ನಡೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬಗೆಯ ಆತಂಕಗಳನ್ನು ಸಷ್ಟಿಸಿದೆ. ಈ ವಿಷಯದಲ್ಲಿ ದೇಶದ ಹಲವು ತಜ್ಞರು ಎನ್‌ಸಿಇಆರ್‌ಟಿಯು ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸವನ್ನು ತಿರುಚುವ ಮತ್ತು ತನಗೆ ಸರಿಯೆನಿಸುವ ಇತಿಹಾಸದ ಕಾಲವನ್ನು ಮಾತ್ರ ಪಠ್ಯದ ಭಾಗವಾಗಿಸುವ ಮತ್ತು ಮಧ್ಯಕಾಲೀನ ಭಾರತದ ಇತಿಹಾಸವನ್ನು ಪೂರ್ಣವಾಗಿ ಅಳಿಸಿ ಹಾಕುವ ಉದಾಹರಣೆಗಳು ಸ್ಪಷ್ಟವಾಗಿ ಕಾಣುತ್ತಿವೆ. ಇದು ಕೇವಲ ಇತಿಹಾಸದ ಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ, ಭಾಷೆ ಮತ್ತು ವಿಜ್ಞಾನ ಪುಸ್ತಕಗಳಿಗೂ ಅನ್ವಯವಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ನ್ಯಾಯಾಂಗ ವ್ಯವಸ್ಥೆ ಅಧ್ಯಾಯದಲ್ಲಿ, ನ್ಯಾಯಾಂಗದ ಕಾರ್ಯಪದ್ಧತಿ ಜೊತೆಗೆ ಅದರಲ್ಲಿರುವ ಕೆಲವು ಸವಾಲುಗಳನ್ನೂ ವಿವರಿಸುತ್ತಾ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ನ್ಯಾಯದಾನದ ವಿಳಂಬ ಎಂಬ ವಿಷಯಗಳನ್ನು ಸೇರಿಸಿ ನ್ಯಾಯಾಂಗ ವ್ಯವಸ್ಥೆಯನ್ನು ನಕಾರಾತ್ಮಕವಾಗಿ ಬಿಂಬಿಸಿದ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯದ ತೀವ್ರ ಆಕ್ರೋಶ ಹಾಗೂ ನ್ಯಾಯಾಂಗ ನಿಂದನೆಗೆ ಒಳಗಾಗುವ ಮೂಲಕ ಮತ್ತೊಮ್ಮೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಆಶ್ಚರ್ಯಕರ ರೀತಿಯಲ್ಲಿ ಪರೋಕ್ಷವಾಗಿ ಈ ಎಲ್ಲಾ ಬೆಳೆವಣಿಗೆಗಳಿಗೆ ಕಾರಣವಾಗಿರುವ ಕೇಂದ್ರದ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಹಾಗೂ ಮುಂದಿನ ಆದೇಶದವರೆಗೆ ಈ ಪುಸ್ತಕದ ವಿತರಣೆಯನ್ನು ಕಟ್ಟುನಿಟ್ಟಾಗಿ ತಡೆಹಿಡಿಯಬಹುದು ಎಂದು ನಿರ್ದೇಶಿಸಿದೆ.

ಈ ಘಟನೆಯ ನಂತರ ಎನ್‌ಸಿಇಆರ್‌ಟಿಯು ಪತ್ರಿಕಾ ಹೇಳಿಕೆಯ ಮೂಲಕ ತಾನು ನ್ಯಾಯಾಂಗದ ಬಗ್ಗೆ ಅತ್ಯಂತ ಗೌರವ ಹೊಂದಿದ್ದು ಅದನ್ನು ಸಂವಿಧಾನದ ಮತ್ತು ಮೂಲಭೂತ ಹಕ್ಕುಗಳ ರಕ್ಷಕ ಎಂದು ಪರಿಗಣಿಸುವುದಾಗಿ ಹೇಳಿದೆ. ಪಠ್ಯಪುಸ್ತಕದಲ್ಲಿನ ನ್ಯಾಯಾಂಗ ಕುರಿತಾದ ದೋಷಪೂರಿತ ವಿಷಯವು ಉದ್ದೇಶಪೂರ್ವಕವಲ್ಲ, ತಪ್ಪಿಗಾಗಿ ವಿಷಾದಿಸುವುದಲ್ಲದೆ ತನ್ನ ಸಾಂಸ್ಥಿಕ ಪಾವಿತ್ರ್ಯ ಮತ್ತು ಗೌರವಕ್ಕಾಗಿ ನಿರಂತರವಾಗಿ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಪುನರುಚ್ಚರಿಸುವುದಾಗಿ ಹೇಳಿ ಕ್ಷಮೆಯಾಚಿಸಿದೆ. ಅಂತಿಮವಾಗಿ, ಕೋರ್ಟ್ ನಿರ್ದೇಶನದಂತೆ ಪಠ್ಯಪುಸ್ತಕ ಮತ್ತು ಬೋಧನಾ ತರಬೇತಿ ವಿಷಯಗಳ ಸಮಿತಿಯನ್ನು ಎನ್‌ಸಿಇಆರ್‌ಟಿ ಪುನರ‌್ರಚಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹಿಂದಿನ ಸಮಿತಿಯಲ್ಲಿ ಕೋರ್ಟಿನ ಕೆಂಗಣ್ಣಿಗೆ ಗುರಿಯಾಗಿದ್ದ ಮೂರು ಜನರನ್ನು ಸಮಿತಿಯಿಂದ ಕೈಬಿಡಲಾಗಿದೆ.

ಭ್ರಷ್ಟಾಚಾರ ಸೇರಿದಂತೆ ಶಾಸಕಾಂಗ ಮತ್ತು ಕಾರ್ಯಾಂಗ ಎದುರಿಸುತ್ತಿರುವ ಸವಾಲುಗಳನ್ನು ಈಗಾಗಲೇ ಎನ್‌ಸಿಇಆರ್‌ಟಿಯ ವಿವಿಧ ತರಗತಿಗಳ ಪಠ್ಯಪುಸ್ತಕಗಳಲ್ಲಿ ಯಾವುದೇ ವಿವಾದಗಳಿಲ್ಲದೆ ಚರ್ಚಿಸಲಾಗಿದ್ದು, ನ್ಯಾಯಾಂಗವನ್ನು ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವಿರಲಿಲ್ಲ. ಹೀಗಾಗಿ, ನ್ಯಾಯಾಲಯದ ಈ ಅತಿಯಾದ ಕ್ರಮವನ್ನು ಕೂಡ ಅನೇಕರು ಕಟುವಾಗಿ ವಿಮರ್ಶಿಸಿದ್ದಾರೆ. ಶಾಸಕಾಂಗ ಮತ್ತು ಕಾರ್ಯಾಂಗದ ಮಾದರಿಯಲ್ಲಿಯೇ ನ್ಯಾಯಾಂಗವೂ ಕೂಡ ಪರಿಪೂರ್ಣವಲ್ಲದ ಕಾರಣಕ್ಕೆ ಸರಿಪಡಿಸುವ ಕ್ರಮಗಳ ಅಗತ್ಯವಿರುವ ಸಂಸ್ಥೆ ಎಂದು ಸಮಂಜಸವಾಗಿ ಟೀಕಿಸಲಾಗಿದೆ ಎಂದು ಅಭಿಪ್ರಾಯಪಡಲಾಗಿದೆ. ಪಠ್ಯಪುಸ್ತಕ ಮತ್ತು ಅದರ ಲೇಖಕರ ಮೇಲಿನ ನಿಷೇಧವನ್ನು ರದ್ದುಗೊಳಿಸುವಂತೆ ಮತ್ತು ನ್ಯಾಯಾಂಗದ ಸಾಧನೆಗಳ ಆರೋಗ್ಯಕರ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡುವಂತೆ ಹಲವರು ಒತ್ತಾಯಿಸಿದ್ದಾರೆ.

ಈ ಪ್ರಕರಣದ ವಾದ ವಿವಾದಗಳನ್ನು ಹೆಚ್ಚು ಬೆಳೆಸದೆ, ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತ ಸ್ವತಂತ್ರ ಶೈಕ್ಷಣಿಕ ಪ್ರಾಧಿಕಾರಕ್ಕೆ ಈ ಪರಿಸ್ಥಿತಿ ಬಂದೊದಗಿದ್ದು ಅತ್ಯಂತ ವಿಷಾದಕರ ಎಂಬುದು ದಾಖಲಿಸಬೇಕಾದ ಅಂಶವಾಗಿದೆ. ಎನ್‌ಸಿಇಆರ್‌ಟಿಯಂತಹ ಒಂದು ಸ್ವಾಯತ್ತ ಶೈಕ್ಷಣಿಕ ಪ್ರಾಧಿಕಾರಕ್ಕೆ ಇಂತಹ ಶೋಚನೀಯ ಸ್ಥಿತಿ ಬಂದೊದಗಲು ಕಾರಣವಾದ ಎನ್‌ಸಿಇಆರ್‌ಟಿಯ ನಡೆಯನ್ನು ಅವಲೋಕಿಸುವ ಆಶಯ ಈ ಲೇಖನದ್ದಾಗಿದೆ.

ಕಳೆದ ಒಂದೂವರೆ ದಶಕದಿಂದ ಪಠ್ರಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕ ರಚನೆಯಲ್ಲಿ ಎನ್‌ಸಿಇಆರ್‌ಟಿಯ ನಡೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬಗೆಯ ಆತಂಕಗಳನ್ನು ಸಷ್ಟಿಸಿದೆ. ಈ ವಿಷಯದಲ್ಲಿ ದೇಶದ ಹಲವು ತಜ್ಞರು ಎನ್‌ಸಿಇಆರ್‌ಟಿಯು ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸವನ್ನು ತಿರುಚುವ ಮತ್ತು ತನಗೆ ಸರಿಯೆನಿಸುವ ಇತಿಹಾಸದ ಕಾಲವನ್ನು ಮಾತ್ರ ಪಠ್ಯದ ಭಾಗವಾಗಿಸುವ ಮತ್ತು ಮಧ್ಯಕಾಲೀನ ಭಾರತದ ಇತಿಹಾಸವನ್ನು ಪೂರ್ಣವಾಗಿ ಅಳಿಸಿ ಹಾಕುವ ಉದಾಹರಣೆಗಳು ಸ್ಪಷ್ಟವಾಗಿ ಕಾಣುತ್ತಿವೆ. ಇದು ಕೇವಲ ಇತಿಹಾಸದ ಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ, ಭಾಷೆ ಮತ್ತು ವಿಜ್ಞಾನ ಪುಸ್ತಕಗಳಿಗೂ ಅನ್ವಯವಾಗಿದೆ.

ಈ ಬಗೆಯ ಪ್ರಯತ್ನಗಳು ಮೊದಲೇನಲ್ಲ. ಮೊದಲ ಬಾರಿಗೆ 1977 ರಲ್ಲಿ, ಜನಸಂಘವು ಜನತಾ ಪಕ್ಷದೊಂದಿಗೆ ವಿಲೀನಗೊಂಡು ಅಧಿಕಾರಕ್ಕೆ ಬಂದಾಗ, ಶ್ರೇಷ್ಠ ಇತಿಹಾಸಕಾರರ ನೇತೃತ್ವದಲ್ಲಿ ಎನ್‌ಸಿಇಆರ್‌ಟಿ ರಚಿಸಿದ್ದ ಅತ್ಯುತ್ತಮ ಶಾಲಾ ಪಠ್ಯಪುಸ್ತಕಗಳನ್ನು ನಿಷೇಧಿಸುವ ಪ್ರಯತ್ನ ನಡೆಯಿತು. ಆದರೆ ಆ ಪ್ರಯತ್ನ ಸಂಪೂರ್ಣ ವಿಫಲವಾಯಿತು. ಕಾರಣ, ತನ್ನ ಉದ್ದೇಶಕ್ಕೆ ವಿರುದ್ಧವಾದ ರಾಜಕೀಯ ಪ್ರೇರಿತ ನಿರ್ಧಾರವನ್ನು ಸ್ವತಃ ಎನ್‌ಸಿಇಆರ್‌ಟಿಯೇ ವಿರೋಧಿಸಿತ್ತು. ನಂತರ, 1996 ಮತ್ತು 1998 ರಲ್ಲಿ ಇತರ ಪಕ್ಷಗಳ ಜೊತೆ ಹೊಂದಾಣಿಕೆ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಲಪಂಥೀಯ ಸರಕಾರವು ಮೇಲಿಂದ ಮೇಲೆ ಪಠ್ಯ ಪುಸ್ತಕವನ್ನು ಬದಲಾಯಿಸುವ ಮೂಲಕ ಪಠ್ಯ ತಿರುಚುವ ಸಣ್ಣ ಪ್ರಮಾಣದ ಪ್ರಯತ್ನಗಳನ್ನು ನಡೆಸಿತು. ಆದರೆ, ಅವು ಹೆಚ್ಚು ಹಾನಿ ಮಾಡಲು ಸಾಧ್ಯವಾಗಲಿಲ್ಲ. ಕಾರಣ, ಅಂದಿನ ಎನ್‌ಸಿಇಆರ್‌ಟಿಯ ವಸ್ತುನಿಷ್ಠತೆ, ಬದ್ಧತೆ ಮತ್ತು ಅಳುಕಿಲ್ಲದ ಸ್ವತಂತ್ರ ಕಾರ್ಯನಿರ್ವಹಣೆಯ ನಾಯಕತ್ವ ಅದಕ್ಕೆ ಅವಕಾಶ ಕೊಡಲಿಲ್ಲ.

ನಂತರ 1999 ಮತ್ತು 2014, 2019 ಮತ್ತು 2024ರಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಲಪಂಥೀಯ ಸರಕಾರ, ಎನ್‌ಸಿಇಆರ್‌ಟಿಯಂತಹ ಸ್ವಾಯತ್ತ ಶೈಕ್ಷಣಿಕ ಪ್ರಾಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ, ತನ್ನ ವಿಚಾರಗಳನ್ನು ಒಪ್ಪಿ ಕಾರ್ಯಗತಗೊಳಿಸುವವರನ್ನೇ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸುವ ಪರಿಪಾಟ ಪ್ರಾರಂಭಿಸಿತು. ಅಂದಿನಿಂದ ಸಂಸ್ಥೆ ತನಗಿದ್ದ ಸ್ವಾಯತ್ತತೆ ಮತ್ತು ವಸ್ತುನಿಷ್ಠತೆಯನ್ನು ಕಳೆದುಕೊಂಡಿತು. ಅಧಿಕಾರರೂಢ ಸರಕಾರ ಈ ಮೂಲಕ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯ ಪುಸ್ತಕವನ್ನು ಪುನರ್ರೂಪಿಸುವ ಮೂಲಕ ಶಿಕ್ಷಣದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವಲ್ಲಿ ಯಶಸ್ವಿಯಾಗಿದೆ. ದೇಶದ ಶೈಕ್ಷಣಿಕ ಇತಿಹಾಸದಲ್ಲಿ ದುರಂತವೆಂದರೆ, ಸ್ವಾಯತ್ತ ಶೈಕ್ಷಣಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಿದ್ದ ಎನ್‌ಸಿಇಆರ್‌ಟಿ ಕೂಡ ಇಂದು ಒಂದು ಪಕ್ಷದ ಅಂಗಸಂಸ್ಥೆಯ ರೀತಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.

ಎನ್‌ಸಿಇಆರ್‌ಟಿಯು ತನ್ನ ಸಂಸ್ಥಾ ನಿವೇದನಾ ಪತ್ರದಲ್ಲಿ (ಮೆಮೊರಾಂಡಮ್ ಆಫ್ ಅಸೋಸಿಯೇಷನ್) ಹೇಳಿಕೊಂಡಿರುವಂತೆ ಒಂದು ಸ್ವಾಯತ್ತ ಶೈಕ್ಷಣಿಕ ಪ್ರಾಧಿಕಾರವಾಗಿದೆ. ಇದನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿ, ಜೂನ್ 6, 1961ರಂದು ದಿಲ್ಲಿಯಲ್ಲಿ ನೋಂದಾಯಿಸಲಾಗಿದೆ. ಸಂಸ್ಥಾ ನಿವೇದನಾ ಪತ್ರದಲ್ಲಿ ಹೇಳಿರುವಂತೆ, ಎನ್‌ಸಿಇಆರ್‌ಟಿಯ ಮುಖ್ಯ ಉದ್ದೇಶ ಶಾಲಾ ಶಿಕ್ಷಣದ ನೀತಿ ಹಾಗೂ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಹಾಯ ಮತ್ತು ಉತ್ತಮ ಶೈಕ್ಷಣಿಕ ಸಲಹೆ ನೀಡುವುದಾಗಿದೆ. ಜೊತೆಗೆ, ತನ್ನ ಶೈಕ್ಷಣಿಕ ಉದ್ದೇಶಗಳ ಈಡೇರಿಕೆಗಾಗಿ, ಅಗತ್ಯವಿರುವ ಪುಸ್ತಕಗಳು, ಸಾಮಗ್ರಿಗಳು, ನಿಯತಕಾಲಿಕೆಗಳು ಮತ್ತು ಇತರ ಸಾಹಿತ್ಯಗಳ ತಯಾರಿಕೆ ಮತ್ತು ಪ್ರಕಟಣೆಯನ್ನು ಕೈಗೊಳ್ಳುವುದಾಗಿದೆ.

ಈ ಸ್ವಾಯತ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು 2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 29(1)ರ ಅನ್ವಯ, ಎಪ್ರಿಲ್ 5, 2010ರಲ್ಲಿ ಎನ್‌ಸಿಇಆರ್‌ಟಿಯನ್ನು ಶೈಕ್ಷಣಿಕ ಪ್ರಾಧಿಕಾರವೆಂದು ಅಧಿಸೂಚಿಸಲಾಗಿದೆ. ಇದರಂತೆ, ಎನ್‌ಸಿಇಆರ್‌ಟಿಯ ಮುಖ್ಯ ಕೆಲಸ ಪಠ್ಯಕ್ರಮ ಹಾಗೂ ಮೌಲ್ಯಮಾಪನ ನಿಯಮಗಳನ್ನು ನಿಗದಿಗೊಳಿಸುವುದಾಗಿದೆ?. ಜೊತೆಗೆ ಶಿಕ್ಷಣ ಹಕ್ಕು ಕಾಯ್ದೆ ಪ್ರಕರಣ 7(6) ಅನ್ವಯ ರಾಷ್ಟ್ರೀಯ ಪಠ್ಯಕ್ರಮದ ಮಾದರಿ ಚೌಕಟ್ಟನ್ನು ಕಾಲ ಕಾಲಕ್ಕೆ ಎನ್‌ಸಿಇಆರ್‌ಟಿ ರೂಪಿಸಬೇಕಾಗಿದೆ. ಇದೇ ಸಂದರ್ಭದಲ್ಲಿ, ಸಂವಿಧಾನದಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ, ಅತ್ಯುನ್ನತ ಶೈಕ್ಷಣಿಕ ಪ್ರಾಧಿಕಾರವಾದ ಎನ್‌ಸಿಇಆರ್‌ಟಿ ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ರಾಜ್ಯಗಳ ಜೊತೆ ಸಮಾಲೋಚಿಸಿ ಸಮನ್ವಯತೆಯಿಂದ ಪ್ರಜಾಸತ್ತಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಿದೆ.

ಪ್ರಾರಂಭಿಕ ವರ್ಷಗಳಲ್ಲಿ ಎನ್‌ಸಿಇಆರ್‌ಟಿ ತನ್ನ ಘನತೆ ಮತ್ತು ಶೈಕ್ಷಣಿಕ ಸಮಗ್ರತೆಯನ್ನು ಎತ್ತರದ ಸ್ಥಿತಿಯಲ್ಲಿ ಕಾಪಾಡಿಕೊಂಡಿತ್ತು. ಪಠ್ಯ ಪುಸ್ತಕಗಳ ತಯಾರಿಕೆ ಮತ್ತು ಪರಿಷ್ಕರಣೆಗೆ ಬುನಾದಿಯೆನಿಸುವ ಪಠ್ಯಕ್ರಮ ಚೌಕಟ್ಟನ್ನು ಮೊದಲ ಬಾರಿಗೆ 1975ರಲ್ಲಿ ರೂಪಿಸಿದಾಗ, ಅದರ ಪೀಠಿಕೆಯಲ್ಲಿ ‘‘ಒಂದು ದೇಶದ ಶಾಲಾ ಪಠ್ಯಕ್ರಮವೆಂದರೆ ಆ ದೇಶದ ಸಂವಿಧಾನವಿದ್ದಂತೆ. ಅದು ಆ ದೇಶದ ವೈಶಿಷ್ಟ ಮತ್ತು ಮುಖ್ಯ ಕಾಳಜಿಗಳನ್ನು ಪ್ರತಿಬಿಂಬಿಸುತ್ತದೆ. ನಮ್ಮ ರಾಷ್ಟ್ರೀಯ ನಾಯಕರು ಪದೇ ಪದೇ ಪ್ರಸ್ತಾಪಿಸಿದಂತೆ, ವಸಾಹತುಶಾಹಿ-ಊಳಿಗಮಾನ್ಯ ವ್ಯವಸ್ಥೆಯಲ್ಲಿ ಶಿಕ್ಷಣ ಐತಿಹಾಸಿಕವಾಗಿ ಗುಮಾಸ್ತರ ಉತ್ಪಾದನೆಗೆ ಸೀಮಿತವಾಗಿತ್ತು. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿನ ಈ ಅವಶೇಷಗಳನ್ನು ಹೊರಹಾಕಬೇಕು ಮತ್ತು ಆಧುನೀಕರಣಗೊಳ್ಳುತ್ತಿರುವ ಸಮಾನತೆಯ ಸಮಾಜದ ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಬೇಡಿಕೆಗಳಿಗೆ ಸ್ಪಂದಿಸಲು ಶಿಕ್ಷಣ ವ್ಯವಸ್ಥೆಯನ್ನು ಪೂರ್ಣವಾಗಿ ಪರಿಷ್ಕರಿಸಬೇಕು (ಪ್ಯಾರಾ 1.1: 1975)’’ ಎಂದು ಹೇಳಿತ್ತು.

ಈಗ ಅದೇ ಎನ್‌ಸಿಇಆರ್‌ಟಿ ತನ್ನ ಪ್ರಾರಂಭಿಕ ಮುಂಗಾಣ್ಕೆಯ ಹೇಳಿಕೆ ಮತ್ತು ಆಶಯಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದೆ. ಶಾಲೆಗಳಲ್ಲಿ ಮಕ್ಕಳು ವಸ್ತುನಿಷ್ಠವಾಗಿ ಕಲಿಯಬೇಕಾದ ಮತ್ತು ಆ ಮೂಲಕ ಆಯಾ ಕಾಲಘಟ್ಟದ ಸಾಮಾಜಿಕ ಸಂರಚನೆ ಮತ್ತು ಸಾಮಾಜಿಕ ಜೀವನದ ಬಗ್ಗೆ ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಪೂರಕವಾದ ಇತಿಹಾಸ ಪಠ್ಯಪುಸ್ತಕಗಳ ಸ್ವರೂಪ ಮತ್ತು ವಿಷಯದ ಬಗ್ಗೆ ಸಲ್ಲದ ಗೊಂದಲ ಹಾಗೂ ವಿವಾದ ಉಂಟಾಗುತ್ತಿರುವುದು ಕಳವಳಕಾರಿ ವಿಷಯ.

ಪ್ರಸ್ತುತ ಪಠ್ಯ ಪರಿಷ್ಕರಣೆಯ ವಿವಾದವು ಎರಡು ವಿಭಿನ್ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತದೆ. ಮೊದಲನೆಯದು, ನಮ್ಮ ಶಿಕ್ಷಣ ವ್ಯವಸ್ಥೆ ಆಧುನಿಕ, ಪ್ರಗತಿಪರ, ವೈಜ್ಞಾನಿಕ ಮತ್ತು ಸಾಂವಿಧಾನಿಕ ನೆಲೆಯಲ್ಲಿ ಒಂದು ಮುಕ್ತ, ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಸಮರ್ಥಿಸುವ ಮತ್ತು ಆಧುನಿಕ ವೈಜ್ಞಾನಿಕ ದೃಷ್ಟಿಕೋನವನ್ನು ಉತ್ತೇಜಿಸಲು ಪೂರಕವಾಗುವ ದೇಶವೊಂದನ್ನು ಕಟ್ಟಿಕೊಳ್ಳಲು ಭದ್ರ ಬುನಾದಿಯಾಗಬೇಕೆಂಬ ದೃಷ್ಟಿಕೋನ. ಇಲ್ಲಿ ಸಂವಿಧಾನದ ಆಶಯಗಳಾದ ಬಹುತ್ವ, ವೈವಿಧ್ಯತೆ, ಸಮಗ್ರತೆ, ಏಕತೆ, ಬಹುಭಾಷೆ, ಬಹುಸಂಸ್ಕೃತಿ, ಬಂಧುತ್ವ, ಸಾಮರಸ್ಯ ಹಾಗೂ ಎಲ್ಲಕ್ಕಿಂತ ಶಾಂತಿಯುತ ಸಹಬಾಳ್ವೆ ಈ ದೃಷ್ಟಿಕೋನ ಪ್ರತಿಪಾದಿಸುವ ರಾಷ್ಟ್ರೀಯತೆಯ ಭದ್ರ ಬುನಾದಿಯಾಗಿರುತ್ತದೆ. ಜೊತೆಗೆ ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಸಾಂವಿಧಾನಿಕ ನೆಲೆಯಲ್ಲಿ ಅರಿತು ಅರ್ಥೈಸುವ ಸಾಮರ್ಥ್ಯವನ್ನು ಕಟ್ಟಿಕೊಡಬೇಕಿದೆ.

ಎರಡನೆಯದು, ಇದಕ್ಕೆ ತದ್ವಿರುದ್ಧವಾದ ಜಾತಿ, ಧರ್ಮ ಹಾಗೂ ಜನಾಂಗೀಯ ನೆಲೆಯಲ್ಲಿ ರಾಷ್ಟ್ರೀಯತೆಯನ್ನು ಸಂಕುಚಿತವಾಗಿ ವ್ಯಾಖ್ಯಾನಿಸುವ ಮೂಲಕ ವಿಭಜನೆ ಹಾಗೂ ದ್ವೇಷದ ಆಧಾರದಲ್ಲಿ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ದೃಷ್ಟಿಕೋನದ ಮೂಲಕ ಬಹು ಜನಾಂಗೀಯ ಮತ್ತು ಬಹುಧರ್ಮದ ಭಾರತವನ್ನು ಒಂದು ಜನಾಂಗ ಮತ್ತು ಒಂದು ಧರ್ಮದ ಆಧಾರದಲ್ಲಿ ರೂಪಿಸ ಬೇಕೆನ್ನುವ ಪ್ರತಿಗಾಮಿ ದೃಷ್ಟಿಕೋನ. ಸ್ವಾತಂತ್ರ್ಯ ಚಳವಳಿಯ ಬಹು ದೊಡ್ಡ ಉತ್ಪನ್ನವಾದ ಸಂವಿಧಾನದ ಬದಲು, ಪ್ರಾಚೀನ ಭಾರತದ ನಿರಂತರ ಸನಾತನ ಮೌಲ್ಯಗಳು ದೇಶವನ್ನು ಒಂದುಗೂಡಿಸುವ ಶಕ್ತಿಯಾಗಬೇಕೆಂಬುದು ಈ ಮನೋಧರ್ಮದ ಮೂಲ ಆಶಯ.ಕಾಲಾತೀತ ಮತ್ತು ಚರಿತ್ರಾರ್ಹವಲ್ಲದ ವಿಷಯವನ್ನು ಒಪ್ಪುವವರು ಮಾತ್ರ ದೇಶ ಪ್ರೇಮಿಗಳು ಹಾಗೂ ನಿಜವಾದ ರಾಷ್ಟ್ರೀಯ ವಾದಿಗಳು.ಸನಾತನ ಸಂಪ್ರದಾಯ ಹಾಗೂ ಮೌಲ್ಯದ ಹೆಸರಿನಲ್ಲಿ ಆಧಾರರಹಿತ ಸುಳ್ಳು ಇತಿಹಾಸದ ಮೂಲಕ ಸಂವಿಧಾನ ಪ್ರತಿಪಾದಿಸುವ ಬಹುತ್ವದ ನೆಲೆಯ ರಾಷ್ಟ್ರೀಯತೆಯನ್ನು ಗೌಣಗೊಳಿಸಿ, ಧರ್ಮಾಧಾರಿತ ಹಾಗೂ ಜನಾಂಗೀಯ ಆಧಾರಿತ ರಾಷ್ಟ್ರೀಯತೆಯನ್ನು ಈ ದೃಷ್ಟಿಕೋನ ಬಲವಾಗಿ ಪ್ರತಿಪಾದಿಸುತ್ತದೆ. ಶಿಕ್ಷಣವನ್ನು ಈ ಸಂಕುಚಿತ ರಾಜಕೀಯ ಉದ್ದೇಶವನ್ನು ಈಡೇರಿಸಿಕೊಳ್ಳುವ ಬಲವಾದ ಸಾಧನವನ್ನಾಗಿಸಿಕೊಳ್ಳುತ್ತದೆ

ಎನ್‌ಸಿಇಆರ್‌ಟಿಯಂಥ ಶೈಕ್ಷಣಿಕ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳುವ ಮೂಲಕ ನಡೆಯುತ್ತಿರುವ ಪಠ್ಯ ಪರಿಷ್ಕರಣೆ ಎರಡನೇ ದೃಷ್ಟಿಕೋನದ ಸಾರಥ್ಯದಲ್ಲಿ ನಡೆಯುತ್ತಿದ್ದು ಅದರ ಹಿಂದಿರುವ ಗೌಪ್ಯ ಅಜೆಂಡಾವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ ಮೇಲಿಂದ ಮೇಲೆ ನಡೆಯುತ್ತಿರುವ ಪಠ್ಯ ಪರಿಷ್ಕರಣೆಯ ಹಿಂದಿರುವ ರಾಜಕೀಯ ಉದ್ದೇಶವನ್ನು ಗ್ರಹಿಸಲಾಗುವುದಿಲ್ಲ. ಈ ಸಂಕುಚಿತ, ಧರ್ಮಾಧಾರಿತ ಪಂಥೀಯ ಮತ್ತು ಹಿಂದೂ ರಾಷ್ಟ್ರವನ್ನು ಪುನರುತ್ಥಾನಗೊಳಿಸಬೇಕೆನ್ನುವ ದೃಷ್ಟಿಕೋನ, ದೇಶದ ಶಿಕ್ಷಣದ ವ್ಯವಸ್ಥೆಯನ್ನು ಪಲ್ಲಟಗೊಳಿಸುತ್ತಿದೆ. ಈ ಸಂಕುಚಿತ ಹಾಗೂ ಗೌಪ್ಯ(ಈಗ ಅದು ಗೌಪ್ಯವಾಗಿ ಉಳಿದಿಲ್ಲ) ಅಜೆಂಡಾವನ್ನು ಜಾರಿಗೊಳಿಸಲು, ಮುಗ್ಧ ಮಕ್ಕಳ ಕೋಮಲ ರಚನಾತ್ಮಕ ಮನಸ್ಸುಗಳಿಗಿಂತ ಉತ್ತಮ ಸಾಧನ ಬೇರೊಂದಿಲ್ಲ ಎಂಬುದು ಈ ದೃಷ್ಟಿಕೋನದ ಬಲವಾದ ನಂಬಿಕೆ. ಪಠ್ಯ ಪರಿಷ್ಕರಣೆಯ ಮೂಲಕ ಇತಿಹಾಸವನ್ನು ತಿರುಚಿ ಮಕ್ಕಳ ಮನಸ್ಸಿನಲ್ಲಿ ಇತರ ಸಮುದಾಯಗಳ ಬಗ್ಗೆ ದ್ವೇಷ ಮತ್ತು ಅಪನಂಬಿಕೆಯ ವಿಷಪೂರಿತ ಅಡುಗೆಯನ್ನು ಉಣಬಡಿಸಲು ಹೊರಟಿರುವುದು, ಎನ್‌ಸಿಇಆರ್‌ಟಿಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಿ ಅದನ್ನು ವಿಮುಖಗೊಳಿಸಿದೆ.

Tags

NCERT
share
ನಿರಂಜನಾರಾಧ್ಯ ವಿ.ಪಿ.
ನಿರಂಜನಾರಾಧ್ಯ ವಿ.ಪಿ.
Next Story
X