ಯಾದಗಿರಿಯಲ್ಲಿ ಹೊಸ 82 ಸಿಸಿ ಕ್ಯಾಮರಾ ಅಳವಡಿಕೆ
ಪ್ರತೀ ನಗರದಲ್ಲೂ ಪೊಲೀಸ್ ಇಲಾಖೆ ಹದ್ದಿನ ಕಣ್ಣು

ಯಾದಗಿರಿ: ಅಪರಾಧ ಮತ್ತು ಅಪಘಾತ ಪತ್ತೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಯಾದಗಿರಿ ಜಿಲ್ಲೆಯ ಪೊಲೀಸ್ ಇಲಾಖೆಯಿಂದ ಪ್ರಮುಖ ರಸ್ತೆ ಮತ್ತು ನಗರಗಳಲ್ಲಿ ನಿಗಾವಹಿಸಲು 70 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ 82 ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಮೂಲಕ ಇಡೀ ನಗರದ ಮೇಲೆ ಪೋಲಿಸ್ ಇಲಾಖೆ ಹದ್ದಿನ ಕಣ್ಣು ಇಡಲು ಮುಂದಾಗಿದೆ.
ಇಡೀ ನಗರದಲ್ಲಿನ ನಾಗರಿಕರ ಸುರಕ್ಷತೆ ಮತ್ತು ಕಾನೂನು- ಸುವ್ಯವಸ್ಥೆ ವ್ಯವಸ್ಥೆ ಬಲಪಡಿಸಲು ಜೊತೆಗೆ ಯಾವುದೇ ಅಪರಾಧ ಚಟುವಟಿಕೆ ನಡೆಯದಂತೆ ತಡೆಹಿಡಿಯಲು ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ಇಡಲು ಪೋಲಿಸ್ ಇಲಾಖೆಯ ಮಹತ್ವದ ಹೆಜ್ಜೆಯನ್ನಿರಿಸಿದ್ದು ಯಾದಗಿರಿ ನಗರದಲ್ಲಿನ ಸಾರ್ವಜನಿಕರಿಂದ ಹರ್ಷವ್ಯಕ್ತವಾಗುತ್ತಿದೆ.
ಎಲ್ಲೆಲ್ಲಿ ಹೊಸ ಸಿಸಿ ಕ್ಯಾಮರಾ ಅಳವಡಿಕೆ: ಗಾಂಧಿ ವೃತ್ತ, ಚಕ್ರಕಟ್ಟೆ, ಸುಭಾಷ್ ಸರ್ಕಲ್ ಕಲಬುರಗಿ ರೋಡ್, ಮೈಲಾಪುರ ಅಗಸಿ, ಗಂಜ್ ಸರ್ಕಲ್, ಮುದ್ರಾಳ್ ವೃತ್ತ, ಯಾದಗಿರಿ ರೈಲು ನಿಲ್ದಾಣ, ಕನಕ ವೃತ್ತ, ಹೊಸ ಬಸ್ ನಿಲ್ದಾಣ, ಡಿಸಿ ಮನೆ ಮತ್ತು ಹೊಸ ಕೋರ್ಟ್ ಕಾಂಪ್ಲೆಕ್,ಸರ್ಕಲ್ ಮ್ಯಾನ್, ಹತ್ತಿಕುಣಿ ವೃತ್ತ ರೋಡ್, ಗಂಗಾ ನಗರ, ಯಾದಗಿರಿ ಪದವಿ ಕಾಲೇಜು, ಹಳೆಯ ಬಸ್ ಸ್ಟ್ಯಾಂಡ್, ಲಕ್ಷ್ಮೀ ದೇವಸ್ಥಾನ, ಸರ್ಕಲ್ ಮ್ಯಾನ್, ಹನುಮಾನ್ ದೇವಾಲಯ, ಹೊಸಹಳ್ಳಿ ಕ್ಲಾಸ್, ಅಝೀಝ್ ಕಾಲನಿ, ಯಾಕುಡ್ ಬಕಾಗ್ರಿ ದರ್ಗಾ ಕ್ರಾಸ್, ಗುರುಸುಂಗಿ ಕ್ರಾಸ್, ಸರ್ಕಲ್ ಆಫೀನ್, ಎಸ್‌ಬಿಐ ಬ್ಯಾಂಕ್, ಎಸ್ಪಿ ಕಚೇರಿ ಸೇರಿದಂತೆ ವಿವಿಧ ಕಡೆ ಅಳವಡಿಕೆ.
ಯಾದಗಿರಿ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಹೊಸದಾಗಿ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಒಳ್ಳೆಯ ನಿರ್ಧಾರ ಕೆಲವು ಪ್ರಮುಖ ಸರ್ಕಲ್‌ಗಳಲ್ಲಿ ಪ್ರತಿಭಟನೆ ಆಗುತ್ತವೆ ಅಲ್ಲಿ ಕಿಡಿಗೇಡಿಗಳ ಕಿಡಿಗೇಡಿತನ ನಡೆಯುವುದಿಲ್ಲ. ಭಯ ಕಾಡುತ್ತದೆ ಇದರಿಂದ ಸಾರ್ವಜನಿಕರಿಗೆ ಸುರಕ್ಷಿತವಾಗಿದೆ.
-ಉಮೇಶ್ ಕೆ ಮುದ್ನಾಳ, ಸಾಮಾಜಿಕ ಹೋರಾಟಗಾರ, ಯಾದಗಿರಿ
ಜಿಲ್ಲೆಯಲ್ಲಿ ಅಪರಾಧ ಮತ್ತು ರಸ್ತೆ ಅಪಘಾತ ಕಾನೂನು ಬಾಹಿರ ಚಟುವಟಿಕೆಗಳು ರಸ್ತೆ ಸಂಚಾರ ಉಲ್ಲಂಘನೆ ನಡೆದರೆ ಅದನ್ನು ನಮ್ಮ ಪೋಲಿಸ್ ಇಲಾಖೆಯಿಂದ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ನಾವು ನಗರದಲ್ಲಿ ಪ್ರಮುಖ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಹೊಸ 82 ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೂ ಕೂಡ ಅನುಕೂಲವಾಗುತ್ತದೆ.
-ಪೃಥ್ವಿಕ್ ಶಂಕರ್, ಯಾದಗಿರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ
ಯಾದಗಿರಿ ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಿಂದ ಕಳ್ಳತನ ಮತ್ತು ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ, ವಿಶೇಷವಾಗಿ ನಮ್ಮ ಅಂಬೇಡ್ಕರ್ ನಗರದಲ್ಲಿ ಎರಡು ಡಾ.ಅಂಬೇಡ್ಕರ್ ಮೂರ್ತಿ ಇರುವುದರಿಂದ ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಇನ್ನಿತರ ದುಷ್ಕೃತ್ಯ ಎಸಗುವ ಕಿಡಿಗೇಡಿಗಳಿಗೆ ಭಯ ಶುರುವಾಗುತ್ತದೆ.
- ಶ್ರೀಕಾಂತ್ ಸುಂಗಲಕರ್, ಬಿಜೆಪಿ ಯುವ ಮುಖಂಡ







