Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆರ್ಕಿಡ್ಸ್ ಹೂವುಗಳ ಸಂರಕ್ಷಣೆ,...

ಆರ್ಕಿಡ್ಸ್ ಹೂವುಗಳ ಸಂರಕ್ಷಣೆ, ಸಂಶೋಧನೆಗೆ ಸಿಕ್ಕಿಂನಲ್ಲಿ ಹೊಸ ಆಯಾಮ

ಹೂವು ಬೆಳೆಗಾರರಿಗೆ ವೈಜ್ಞಾನಿಕ ಮಾರ್ಗದರ್ಶನ; ವಾಣಿಜ್ಯ ಕೃಷಿಗೆ ಉತ್ತೇಜನ

ಅಮ್ಜದ್ ಖಾನ್ ಎಂಅಮ್ಜದ್ ಖಾನ್ ಎಂ9 Nov 2026 3:18 PM IST
share
ಆರ್ಕಿಡ್ಸ್ ಹೂವುಗಳ ಸಂರಕ್ಷಣೆ, ಸಂಶೋಧನೆಗೆ ಸಿಕ್ಕಿಂನಲ್ಲಿ ಹೊಸ ಆಯಾಮ

ಪಾಕ್ಯೋಂಗ್ (ಸಿಕ್ಕಿಂ): ಹಿಮಾಲಯದ ತಪ್ಪಲಿನ ಸುಂದರ ರಾಜ್ಯ ಸಿಕ್ಕಿಂ ಪ್ರಕೃತಿಯ ಅಪೂರ್ವ ಕೊಡುಗೆಗಳಿಗೆ ಹೆಸರುವಾಸಿ. ಅದರಲ್ಲೂ ಬಣ್ಣಬಣ್ಣದ ಆಕರ್ಷಕ ಆರ್ಕಿಡ್ಸ್ ಹೂವುಗಳು ರಾಜ್ಯದ ನೈಸರ್ಗಿಕ ಸೌಂದರ್ಯಕ್ಕೆ ವಿಶೇಷ ಮೆರುಗು ನೀಡಿವೆ. ಅಪಾರ ಔಷಧೀಯ, ಆಲಂಕಾರಿಕ ಹಾಗೂ ವಾಣಿಜ್ಯ ಮಹತ್ವ ಹೊಂದಿರುವ ಆರ್ಕಿಡ್ಸ್ ಹೂವುಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ವೈಜ್ಞಾನಿಕ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಿಕ್ಕಿಂನ ಪಾಕ್ಯೋಂಗ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಧೀನದಲ್ಲಿ ರಾಷ್ಟ್ರೀಯ ಆರ್ಕಿಡ್ಸ್ ಸಂಶೋಧನಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

1996ರ ಅಕ್ಟೋಬರ್ 5ರಂದು ಸ್ಥಾಪನೆಯಾದ ಈ ಕೇಂದ್ರವು ಕಳೆದ ಮೂರು ದಶಕಗಳಿಂದ ಆರ್ಕಿಡ್ಸ್ ಹೂವುಗಳ ಸಂಶೋಧನೆ, ತಳಿ ಅಭಿವೃದ್ಧಿ, ಸಂರಕ್ಷಣೆ ಮತ್ತು ಬೆಳೆಗಾರರಿಗೆ ತಾಂತ್ರಿಕ ನೆರವು ನೀಡುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಆರ್ಕಿಡ್ಸ್‌ಗಳ ಅಪರೂಪದ ತಳಿಗಳನ್ನು ಗುರುತಿಸುವುದು, ಅವುಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡುವುದು, ಉತ್ತಮ ಗುಣಮಟ್ಟದ ಹೂವುಗಳನ್ನು ಉತ್ಪಾದಿಸುವುದು ಹಾಗೂ ವಾಣಿಜ್ಯ ಕೃಷಿಗೆ ಸೂಕ್ತವಾದ ತಳಿಗಳನ್ನು ಅಭಿವೃದ್ಧಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಆಧುನಿಕ ತಂತ್ರಜ್ಞಾನದಲ್ಲಿ ಸಂಶೋಧನೆ: ಆರ್ಕಿಡ್ ಸಸ್ಯಗಳ ಸಂಖ್ಯೆಯನ್ನು ಕಡಿಮೆ ಅವಧಿಯಲ್ಲಿ ಹೆಚ್ಚಿಸಲು ಅಂಗಾಂಶ ಕೃಷಿ (Tissue Culture) ಹಾಗೂ ಪ್ರಯೋಗಾಲಯ ಆಧಾರಿತ ಸಸ್ಯಾಭಿವೃದ್ಧಿ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸುವುದಕ್ಕೂ ಈ ತಂತ್ರಜ್ಞಾನ ನೆರವಾಗುತ್ತಿದೆ.

ಹವಾಮಾನ ಬದಲಾವಣೆ, ತೇವಾಂಶದ ಕೊರತೆ, ಕೀಟಬಾಧೆ ಮತ್ತು ರೋಗಗಳಿಂದ ಸಸ್ಯಗಳಿಗೆ ಉಂಟಾಗುವ ಹಾನಿಯನ್ನು ತಡೆಯುವ ವಿಧಾನಗಳ ಮೇಲೂ ಸಂಶೋಧನೆ ನಡೆಯುತ್ತಿದೆ. ಹೂವು ಕತ್ತರಿಸಿದ ಬಳಿಕ ಹೆಚ್ಚು ದಿನಗಳ ಕಾಲ ತಾಜಾತನ ಉಳಿಸಿಕೊಳ್ಳುವಂತೆ ಮಾಡುವ ಸಂಗ್ರಹಣೆ, ಪ್ಯಾಕಿಂಗ್ ಮತ್ತು ಸಾಗಣೆ ತಂತ್ರಜ್ಞಾನಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳ ಮೂಲಕ ಎಲೆಗಳ ವಿಸ್ತೀರ್ಣ ಮತ್ತು ಸಸ್ಯಗಳ ತೇವಾಂಶದ ಒತ್ತಡವನ್ನು ವಿಶ್ಲೇಷಿಸುವ ಪ್ರಯತ್ನಗಳೂ ನಡೆದಿವೆ.

ಬೆಳೆಗಾರರಿಗೆ ತರಬೇತಿ, ಆರ್ಥಿಕ ಅವಕಾಶ:

ಸಂಶೋಧನೆಯ ಫಲಿತಾಂಶಗಳು ಪ್ರಯೋಗಾಲಯಕ್ಕೆ ಸೀಮಿತವಾಗದೆ ರೈತರಿಗೆ ತಲುಪುವಂತೆ ಕೇಂದ್ರವು ತರಬೇತಿ ಶಿಬಿರ, ಪ್ರಾತ್ಯಕ್ಷಿಕೆ ಮತ್ತು ಸಸಿಗಳ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 2026ರ ಮಾರ್ಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕ್ಯೋಂಗ್ ಜಿಲ್ಲೆಯ ವಿವಿಧ ಗ್ರಾಮಗಳ 20 ರೈತರಿಗೆ ಆರ್ಕಿಡ್ ಸಸಿಗಳನ್ನು ವಿತರಿಸಿ ವೈಜ್ಞಾನಿಕ ಕೃಷಿಯ ಕುರಿತು ತರಬೇತಿ ನೀಡಲಾಗಿತ್ತು.

ಹೂವುಗಳ ಮಾರಾಟದ ಜತೆಗೆ ನರ್ಸರಿ, ಸಸಿ ಉತ್ಪಾದನೆ ಮತ್ತು ಪ್ರವಾಸೋದ್ಯಮ ಆಧಾರಿತ ಉದ್ಯಮಗಳಿಗೂ ಅವಕಾಶವಿದೆ.

ಆರ್ಕಿಡ್ ಕೃಷಿಯನ್ನು ಸುಸ್ಥಿರ ಆರ್ಥಿಕ ಚಟುವಟಿಕೆಯಾಗಿ ರೂಪಿಸುವುದು ಕೇಂದ್ರದ ಮುಂದಿನ ಗುರಿಯಾಗಿದೆ. ಸಂಶೋಧನೆ, ಸಂರಕ್ಷಣೆ ಮತ್ತು ವಾಣಿಜ್ಯ ಕೃಷಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಮೂಲಕ ಪಾಕ್ಯೋಂಗ್‌ನ ಈ ಸಂಸ್ಥೆ ಸಿಕ್ಕಿಂನ ಹೂವು ಬೆಳೆಗಾರರ ಬದುಕಿಗೆ ಹೊಸ ಭರವಸೆಯಾಗಿ ಮೂಡಿದೆ.

3,200ಕ್ಕೂ ಅಧಿಕ ಆರ್ಕಿಡ್ಸ್ ಸಂಗ್ರಹ

ಕೇಂದ್ರದ ಪ್ರಮುಖ ಸಾಧನೆಗಳಲ್ಲಿ ಆರ್ಕಿಡ್ ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ವಿಶೇಷವಾಗಿದೆ. ಇಲ್ಲಿ ಸುಮಾರು 3,208 ಆರ್ಕಿಡ್ಸ್ ಸಂಗ್ರಹ ಮಾದರಿಗಳನ್ನು (Accessions) 360 ಪ್ರಭೇದಗಳಿಗೆ ಸೇರಿದ ಸಸ್ಯಗಳೊಂದಿಗೆ ಸಂರಕ್ಷಿಸಲಾಗಿದೆ. ಆರ್ಕಿಡ್ಸ್‌ಗಳ ವೈವಿಧ್ಯತೆಯನ್ನು ಉಳಿಸುವುದರ ಜತೆಗೆ ಅವುಗಳ ವಂಶವಾಹಿ ಗುಣಲಕ್ಷಣಗಳ ಅಧ್ಯಯನಕ್ಕೂ ಆದ್ಯತೆ ನೀಡಲಾಗಿದೆ. ಕತ್ತರಿಸಿದ ಹೂವುಗಳ ಉತ್ಪಾದನೆ ಮತ್ತು ಕುಂಡಗಳಲ್ಲಿ ಬೆಳೆಸಲು ಸೂಕ್ತವಾದ ಒಂಬತ್ತು ಸುಧಾರಿತ ತಳಿಗಳನ್ನು ಅಭಿವೃದ್ಧಿಪಡಿಸಿರುವುದು ಕೇಂದ್ರದ ಪ್ರಮುಖ ಸಾಧನೆಯಾಗಿದೆ.

ಆರ್ಕಿಡ್ಸ್ ಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಇದನ್ನು ಬೆಳೆಯಲು ರೈತರಿಗೆ ತರಬೇತಿ ನೀಡಿ, ಪ್ರೋತ್ಸಾಹಿಸಲಾಗುತ್ತಿದೆ. ಹಾಗೆಯೇ ದೇಶದ ಹಿಮಾಲಯ ಪ್ರದೇಶಗಳಲ್ಲಿ ಬೆಳೆಯುವ ಆರ್ಕಿಡ್ಸ್ ಗಳ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಆರ್ಕಿಡ್ಸ್ ಹೂವುಗಳು ಬಹುಕಾಲ ಬಾಳಿಕೆ ಬರುವ ಹೂವುಗಳನ್ನು ಬಿಡುವುದರಿಂದ ಇದಕ್ಕೆ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಇವುಗಳಿಗೆ ಸೂಕ್ತ ಹವಾಮಾನ ಅಗತ್ಯ. ಹಾಗಾಗಿ ಇವುಗಳ ಕುರಿತು ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ. ರೈತರಿಗೆ ಇವುಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

- ಡಾ. ಎಲ್.ಸಿ. ದೇ, ಮುಖ್ಯಸ್ಥರು,

ರಾಷ್ಟ್ರೀಯ ಆರ್ಕಿಡ್ ಸಂಶೋಧನಾ ಕೇಂದ್ರ, ಸಿಕ್ಕಿಂ

share
ಅಮ್ಜದ್ ಖಾನ್ ಎಂ
ಅಮ್ಜದ್ ಖಾನ್ ಎಂ
Next Story
X