Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತೀಯ ಪ್ರಜಾಪ್ರಭುತ್ವ ಮತ್ತು...

ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯವೊಡ್ಡುತ್ತಿರುವ ಆಳ್ವಿಕೆ

ಡಾ. ರಾಮ್ ಪುನಿಯಾನಿಡಾ. ರಾಮ್ ಪುನಿಯಾನಿ22 March 2024 9:36 AM IST
share
ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಾಯವೊಡ್ಡುತ್ತಿರುವ ಆಳ್ವಿಕೆ
ಒಂದೆಡೆ ತಾನು ಹೊಂದಿರುವ ಅಧಿಕಾರ ಮತ್ತು ಇನ್ನೊಂದೆಡೆ ಹಿಂದೂ ರಾಷ್ಟ್ರೀಯವಾದದ ಮೂಲಕ ಬಿಜೆಪಿ ವ್ಯವಸ್ಥಿತವಾಗಿ ಸ್ವಾತಂತ್ರ್ಯದ ದಮನಲ್ಲಿ ತೊಡಗಿಯೇ ಇದೆ. ಅದು ಬಿಜೆಪಿ ಪಾಲಿಗೆ ಸಂಭ್ರಮದ ಸಂಗತಿಯಾಗಿಬಿಟ್ಟಿದೆ. ಅಲ್ಪಸಂಖ್ಯಾತರ ಮತ್ತು ಸಮಾಜದ ದುರ್ಬಲ ವರ್ಗಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಉಲ್ಲಂಘನೆಗೆ ನಿರ್ಭೀತ ವಾತಾವರಣವನ್ನು ಬಿಜೆಪಿ ಆಳ್ವಿಕೆ ಸೃಷ್ಟಿಸಿದೆ ಎಂಬುದರ ಸ್ಪಷ್ಟ ಸಂಕೇತ ಇದಾಗಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹೇಳುತ್ತಿರುವುದರ ಹಿಂದೆ ಯಾವುದೇ ಪ್ರಮಾಣೀಕೃತ ವಿಶ್ಲೇಷಣೆಯೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಮಾತ್ರವೇ ಹೀಗೊಂದು ಪ್ರಚಾರ ಮಾಡಲಾಗುತ್ತಿದೆ.

ಇದನ್ನು ಸಮರ್ಥಿಸುತ್ತಾ ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ, ಏಕೆ ಅದರ ಅಗತ್ಯ ಇದೆಯೆಂದು ವಿವರಿಸಿದ್ದನ್ನು ಗಮನಿಸಿದ್ದೇವೆ. ಅವರ ಪ್ರಕಾರ ಸಂವಿಧಾನವನ್ನು ಬದಲಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವುದು ಬಿಜೆಪಿಯ ಉದ್ದೇಶ. ಅಂದರೆ, ಪಕ್ಷಕ್ಕೆ 400 ಸ್ಥಾನಗಳು ಬೇಕಿರುವುದು ಸಂವಿಧಾನವನ್ನು ಬದಲಾಯಿಸುವುದಕ್ಕಾಗಿ. ಹಾಗೆಂದು ಸಾರ್ವಜನಿಕ ಸಭೆಯಲ್ಲಿ ಅವರು ಹೇಳಿದರು.

ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಅಂತಹ ಹೇಳಿಕೆಯನ್ನು ತಾನು ಖಂಡಿತ ಒಪ್ಪುವುದಿಲ್ಲ ಎಂಬಂತೆ ಬಿಂಬಿಸಿದೆ. ಆ ಸಂಸದನಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಈ ಕಾರಣಕ್ಕಾಗಿ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆಯೋ ಇಲ್ಲವೋ ಎಂಬುದು ಬೇರೆ. ಇಂತಹ ಹೇಳಿಕೆಗಳಿಂದ ಬಿಜೆಪಿಗೆ ಕೊಂಚವೂ ಇರಿಸು ಮುರಿಸಾಗುತ್ತಿಲ್ಲ ಎಂಬುದಂತೂ ಸ್ಪಷ್ಟ. ಆ ಸಂಸದ 2017ರಲ್ಲಿ ಬಿಜೆಪಿ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿದ್ದಾಗಲೂ ಸಂವಿಧಾನ ಬದಲಿಸುವ ಮಾತನಾಡಿದ್ದು, ಆನಂತರ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅದೇ ಸಂಸದನಿಗೆ ಟಿಕೆಟ್ ನೀಡಿತ್ತು ಎಂಬುದು ನಮ್ಮ ಕಣ್ಣೆದುರೇ ಇರುವ ಸತ್ಯ.

400 ಸ್ಥಾನಗಳ ವಿಚಾರವನ್ನು ಬಿಜೆಪಿ ಏಕೆ ಮುಂದೆ ಮಾಡಿದೆ ಎಂಬುದು ಹೆಗಡೆ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನವನ್ನು ಬದಲಾಯಿಸಲು 400 ಸ್ಥಾನಗಳು ಬೇಕು ಎಂದು ಬಿಜೆಪಿ ಸಂಸದ ಹೇಳುವ ಮೂಲಕ ಮೋದಿಯ ಗುಪ್ತ ಅಜೆಂಡಾ ಬಹಿರಂಗವಾಗಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ನಾಶ ಮಾಡುವುದೇ ಮೋದಿ, ಬಿಜೆಪಿ ಮತ್ತು ಅವರ ಸಂಘ ಪರಿವಾರದ ಅಂತಿಮ ಗುರಿಯಾಗಿದೆ. ಅವರು ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಹೇಳಿದ್ದಾರೆ.

ಸಮಾಜವನ್ನು ವಿಭಜಿಸುವ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ, ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ ಅವರು ಪ್ರತಿರೋಧವನ್ನೇ ಇಲ್ಲವಾಗಿಸಲು ಪಿತೂರಿ ನಡೆಸಿದ್ದು, ಭಾರತದ ಮಹಾನ್ ಪ್ರಜಾಪ್ರಭುತ್ವವನ್ನು ಸಂಕುಚಿತ ಸರ್ವಾಧಿಕಾರವಾಗಿ ಪರಿವರ್ತಿಸಲು ಬಯಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.

ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು, ಸಮಾನತೆಯ ಮೌಲ್ಯಗಳನ್ನು ಹಾಳುಮಾಡಲು ಬಿಜೆಪಿ ಅವಳಿ ತಂತ್ರವನ್ನು ಹೊಂದಿದೆ. ಅದರ ಮಾತೃಸಂಸ್ಥೆ ಆರೆಸ್ಸೆಸ್ ಮೊದಲಿನಿಂದಲೂ ಸಂವಿಧಾನವನ್ನು ವಿರೋಧಿಸಿತ್ತು. ಭಾರತೀಯ ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ನಲ್ಲಿ ಅದನ್ನು ಟೀಕಿಸಿ ಬರೆಯಲಾಗಿತ್ತು. ಮನುಸ್ಮತಿಯ ಬಗ್ಗೆ ಹಾಡಿ ಹೊಗಳಲಾಗಿತ್ತು. ಅದರ ಯಾವ ಅಂಶಗಳೂ ಇಲ್ಲಿಲ್ಲ ಎಂದು ಆಕ್ಷೇಪ ಎತ್ತಲಾಗಿತ್ತು.

1998ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಅದು ಮಾಡಿದ ಮೊದಲ ಕೆಲಸವೆಂದರೆ ಸಂವಿಧಾನವನ್ನು ಪರಿಶೀಲಿಸಲು ಆಯೋಗವನ್ನು ನೇಮಿಸಿದ್ದು. ಆ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ. ಏಕೆಂದರೆ ನಮ್ಮ ಸಂವಿಧಾನವನ್ನು ಯಾವುದೇ ರೀತಿಯಲ್ಲಿ ಬದಲಿಸುವುದಕ್ಕೆ ತೀವ್ರ ವಿರೋಧವಿತ್ತು. 2014ರಿಂದಲೂ ಬಿಜೆಪಿ ಅಧಿಕಾರದಲ್ಲಿದ್ದು, ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಇರದ ಸಂವಿಧಾನ ಪೀಠಿಕೆಯನ್ನು ಮತ್ತೆ ಮತ್ತೆ ಬಳಸಿರುವುದು ಅದರ ಧೋರಣೆ ಏನೆಂಬುದಕ್ಕೆ ಸಾಕ್ಷಿ.

ಇದಕ್ಕೂ ಮೊದಲು ಕೆ. ಸುದರ್ಶನ್ 2000ದಲ್ಲಿ ಆರೆಸ್ಸೆಸ್ ಮುಖ್ಯಸ್ಥರಾದಾಗ, ‘‘ಭಾರತೀಯ ಸಂವಿಧಾನ ಪಾಶ್ಚಿಮಾತ್ಯ ಮೌಲ್ಯಗಳನ್ನು ಆಧರಿಸಿರುವುದರಿಂದ ಭಾರತೀಯ ಪವಿತ್ರ ಗ್ರಂಥಗಳ ಆಧಾರದ ಮೇಲೆ ಅದನ್ನು ಬದಲಾಯಿಸಬೇಕು’’ ಎಂದು ಹೇಳಿದ್ದರು. ‘‘ಸಂವಿಧಾನ ಬದಲಿಸಲು ನಾಚಿಕೆಪಟ್ಟುಕೊಳ್ಳಬೇಕಾಗಿಲ್ಲ’’ ಎಂಬ ಮಾತನ್ನು ಆವರು ಆಡಿದ್ದರು.

ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಮುಖ್ಯಸ್ಥ ಡಾ. ವಿವೇಕ್ ದೇಬ್ರಾಯ್ 2023ರ ಆಗಸ್ಟ್ 15ರಂದು ತಮ್ಮ ಲೇಖನದಲ್ಲಿ ಸಂವಿಧಾನದ ಬದಲಾವಣೆಗೆ ಕರೆ ನೀಡಿದ್ದರು.

ಹೀಗೆ, ಬಿಜೆಪಿಯೊಳಗೆ ಮತ್ತು ಅದರ ಸರಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರು ಸಂವಿಧಾನ ಬದಲಾಯಿಸುವ ಮಾತಾಡುತ್ತಲೇ ಇರುವುದು, ಬಿಜೆಪಿ ಅದರಿಂದ ಅಂತರ ಕಾಯ್ದುಕೊಳ್ಳುವಂತೆ ತೋರಿಸಿಕೊಳ್ಳುವುದು ನಡೆಯುತ್ತಲೇ ಇದೆ. ತಾನು ಮುಂದೆ ತೋರಿಸಿಕೊಳ್ಳದೆಯೂ ಅದು ತನ್ನ ಗುಪ್ತ ಅಜೆಂಡಾವನ್ನು ಜಾರಿಯಲ್ಲಿಟ್ಟಿದೆ.

ಇನ್ನೊಂದು ರೀತಿಯಿಂದ ನೋಡುವುದಾದರೆ, ಕಳೆದ ಒಂದು ದಶಕದಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಅದು ಭಾರತೀಯ ಸಂವಿಧಾನದ ಮೂಲ ಮೌಲ್ಯವಾದ ಪ್ರಜಾಪ್ರಭುತ್ವ ಮತ್ತು ಸಮಾನತೆಗೆ ಏನು ಕೊಡುಗೆ ಕೊಟ್ಟಿದೆ? ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ, ಪ್ರಜಾಪ್ರಭುತ್ವದ ರಾಜ್ಯದ ಎಲ್ಲಾ ಆಧಾರ ಸ್ತಂಭಗಳು, ಸಾಂವಿಧಾನಿಕ ಸಂಸ್ಥೆಗಳಾದ ಈ.ಡಿ., ಸಿಬಿಐ, ಐಟಿ, ಚುನಾವಣಾ ಆಯೋಗ ಎಲ್ಲವನ್ನೂ ಬಿಜೆಪಿ ಸರಕಾರ ನಿಯಂತ್ರಿಸುತ್ತಿದೆ ಮತ್ತು ಅವೆಲ್ಲವನ್ನೂ ಒಬ್ಬ ವ್ಯಕ್ತಿಯೇ ನಿಯಂತ್ರಿಸುತ್ತಿರುವುದು ಸ್ಪಷ್ಟವಿದೆ. ವಿವಿಧ ಹಂತಗಳಲ್ಲಿ ನ್ಯಾಯಾಂಗ ಕೂಡ ದುರ್ಬಲವಾಗಿದೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಉಮರ್ ಖಾಲಿದ್ ಅವರ ಬಂಧನ ಮತ್ತು ಕಳೆದ ಮೂರು ವರ್ಷಗಳಿಂದ ಅವರ ಜಾಮೀನು ಅರ್ಜಿಯನ್ನು ಆಲಿಸಲು ನಿರಾಕರಿಸಿರುವುದು ಅಂಥ ಒಂದು ಉದಾಹರಣೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಬಿದ್ದಿದೆ. ಮುಖ್ಯವಾಹಿನಿಯ ಮಾಧ್ಯಮಗಳೆಲ್ಲ ಸರಕಾದ ಪರ ತುತ್ತೂರಿಯಾಗಿವೆ. ಪ್ರಮುಖ ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳ ಮೂಲಕ ಸರಕಾರದ ಪರವಾದ ವಿಷಯಗಳೇ ಪ್ರಸಾರವಾಗುತ್ತಿವೆ. ಸ್ವತಂತ್ರ ಧ್ವನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವೇ ಇಲ್ಲವಾಗುತ್ತಿದೆ. ಹೀಗೆ ಪ್ರಜಾಸತ್ತಾತ್ಮಕ ಸಮಾಜದ ಪ್ರಮುಖ ಸ್ತಂಭವಾದ ಅಭಿವ್ಯಕ್ತಿ ಸ್ವಾತಂತ್ರ್ಯ ದಮನಗೊಂಡಿದೆ.

ಅನೇಕ ಅಂತರ್‌ರಾಷ್ಟ್ರೀಯ ಸೂಚ್ಯಂಕಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುಸಿತ ಕಂಡಿದೆ. ಭಾರತದಲ್ಲಿನ ಸ್ಥಿತಿ ಬಗ್ಗೆ ಕಳವಳ ವ್ಯಕ್ತವಾಗಿದೆ. ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 104ನೇ ಸ್ಥಾನಕ್ಕೆ ಕುಸಿತವಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ಹೇಗೆ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ಕಸಿಯುತ್ತ ಬರಲಾಗಿದೆ ಎಂಬುದನ್ನೇ ಸೂಚಿಸುತ್ತಿದೆ.

ಒಂದೆಡೆ ತಾನು ಹೊಂದಿರುವ ಅಧಿಕಾರ ಮತ್ತು ಇನ್ನೊಂದೆಡೆ ಹಿಂದೂ ರಾಷ್ಟ್ರೀಯವಾದದ ಮೂಲಕ ಬಿಜೆಪಿ ವ್ಯವಸ್ಥಿತವಾಗಿ ಸ್ವಾತಂತ್ರ್ಯದ ದಮನದಲ್ಲಿ ತೊಡಗಿಯೇ ಇದೆ. ಅದು ಬಿಜೆಪಿ ಪಾಲಿಗೆ ಸಂಭ್ರಮದ ಸಂಗತಿಯಾಗಿಬಿಟ್ಟಿದೆ. ಅಲ್ಪಸಂಖ್ಯಾತರ ಮತ್ತು ಸಮಾಜದ ದುರ್ಬಲ ವರ್ಗಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಉಲ್ಲಂಘನೆಗೆ ನಿರ್ಭೀತ ವಾತಾವರಣವನ್ನು ಬಿಜೆಪಿ ಆಳ್ವಿಕೆ ಸೃಷ್ಟಿಸಿದೆ ಎಂಬುದರ ಸ್ಪಷ್ಟ ಸಂಕೇತ ಇದಾಗಿದೆ.

ಹಾಗೆ ನೋಡಿದರೆ ಪ್ರತಿಯೊಂದು ಧಾರ್ಮಿಕ ರಾಷ್ಟ್ರೀಯವಾದಿ ಸಂಘಟನೆಗಳೂ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಕ್ಕೆ ವಿಮುಖವಾಗಿಯೇ ಇರುತ್ತವೆ. ಅವು ಸಂವಿಧಾನಗಳನ್ನು ತಮಗೆ ಬೇಕಾದ ದಿಕ್ಕಿನಲ್ಲಿ ಹೊಂದಿಸಿಕೊಳ್ಳಲು ಯತ್ನಿಸುತ್ತವೆ. ವಿಭಜನೆ ಮತ್ತು ದಬ್ಬಾಳಿಕೆಯ ರಾಜಕೀಯವನ್ನು ಉತ್ತೇಜಿಸುವ ನಡೆಗಳನ್ನು ಅನುಸರಿಸುತ್ತವೆ. ಪ್ರಜಾಪ್ರಭುತ್ವ ದಮನಕಾರರ ಸಾಲಿಗೆ ಭಾರತವೂ ಸೇರುತ್ತಿದೆ. ಒಂದೆಡೆ ಸಂವಿಧಾನವನ್ನು ಬದಲಿಸುವ ಮತ್ತು ಪ್ರಾಯೋಗಿಕವಾಗಿ ಅದನ್ನು ದುರ್ಬಲಗೊಳಿಸುವ ಉದ್ದೇಶವಿಟ್ಟುಕೊಂಡ ಬಿಜೆಪಿ ಅವಳಿ ಪಥದ ರಾಜಕೀಯವನ್ನು ನಡೆಸಿದೆ.

(countercurrents.org)

share
ಡಾ. ರಾಮ್ ಪುನಿಯಾನಿ
ಡಾ. ರಾಮ್ ಪುನಿಯಾನಿ
Next Story
X