Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸತ್ಯದ ನಾಲಿಗೆಗೆ ಆನೆ ಬಲ

ಸತ್ಯದ ನಾಲಿಗೆಗೆ ಆನೆ ಬಲ

ಇಂದು ಅಂಬೇಡ್ಕರ್ ಜಯಂತಿ

ದೇವಿಕಾ ನಾಗೇಶ್, ಮಂಗಳೂರುದೇವಿಕಾ ನಾಗೇಶ್, ಮಂಗಳೂರು14 April 2024 12:47 PM IST
share
ಸತ್ಯದ ನಾಲಿಗೆಗೆ ಆನೆ ಬಲ
ಸುಶೀಲಾ ನಾಡ ಅವರಿಗೆ ಸಂದ ‘ಭೋದಿವರ್ಧನ 2024’ ಪ್ರಶಸ್ತಿಯು ಸಹಬಾಳ್ವೆ, ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇರುವ ಈ ನೆಲದ ಎಲ್ಲ ಮಹಿಳೆಯರಿಗೂ ಸಂದ ಗೌರವ.

ಸಂವಿಧಾನ ಶಿಲ್ಪಿ, ಸಾಮಾಜಿಕ ನ್ಯಾಯದ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟಿದ ದಿನ ಎಪ್ರಿಲ್ 14. ಅಂದು ಕರಾವಳಿಯ ತುಳುವರಿಗೆ ‘ಬಿಸು’ ಅಂದರೆ ಹೊಸ ವರುಷದ ಮೊದಲ ದಿನ. ಸಮಾನತೆಯ ಜಾತ್ಯತೀತ ಸಮಾಜದ ಆಶಯವನ್ನು ಪ್ರತಿಪಾದಿಸುವ ನಾವೆಲ್ಲರೂ ಜೊತೆಗೂಡಿ ಸಂಭ್ರಮಿಸಬೇಕಾದ ದಿನವೂ ಇದು. ಈಗ ಈ ಸಂಭ್ರಮಕ್ಕೆ ಕೋಡು ಮೂಡುವಂತೆ ನಮ್ಮನೆ ಹುಡುಗಿ ಸುಶೀಲಾ ನಾಡ ಇವರಿಗೆ ಬೆಂಗಳೂರಿನ ಸ್ಪೂರ್ತಿಧಾಮ ಬಳಗವು ‘ಭೋದಿ ವರ್ಧನ ಪ್ರಶಸ್ತಿ-2024’ ನೀಡಿ ಗೌರವಿಸುತ್ತಿದೆ. ಕರ್ನಾಟಕದ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದಲ್ಲಿ ಸಕ್ರಿಯವಾಗಿರುವ ಸುಶೀಲಾ ನಾಡ ಈ ಸಮುದಾಯದ ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುವಲ್ಲಿ ಕೊರಗ ಸಮುದಾಯದ ಶಕ್ತಿ ಕೇಂದ್ರವಾಗಿ ಶ್ರಮಿಸುತ್ತಿದ್ದಾರೆ.

ಅದ್ಭುತ ಜೀವನ ಪ್ರೀತಿಯ ಸುಶೀಲಾ ನಾಡ ಬೆಂಕಿಯು ಬೆಳಕಾಗಬಲ್ಲದು ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಬದುಕುತ್ತಿರುವವರು. ಪ್ರಸಕ್ತ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ )ಕರ್ನಾಟಕ, ಕೇರಳ ಇದರ ಅಧ್ಯಕ್ಷರಾಗಿರುವ ಇವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡದವರು. ತಂದೆ ಸುಕ್ರ, ತಾಯಿ ಸಿದ್ದು ಇವರ ಕೊನೆಯ ಮಗಳಾಗಿ 1979 ಜೂನ್ ಒಂದರಂದು ಜನಿಸಿದರು. ಆಗಿನ್ನು ಶಿಕ್ಷಣಕ್ಕೆ ತೆರೆದುಕೊಳ್ಳದ ಸಮುದಾಯದಲ್ಲಿ ಹುಟ್ಟಿದ ಇವರು ಕುಟುಂಬದ ಬಡತನದ ಕಾರಣದಿಂದಾಗಿ ಎಸೆಸೆಲ್ಸಿಗೆ ಓದು ನಿಲ್ಲಿಸಬೇಕಾಯಿತು. ತನ್ನ 19ರ ಹರೆಯದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಆಗಲೇ ಅನ್ಯಾಯವನ್ನು ಕಂಡರೆ ಸಿಡಿದೇಳುವ ವ್ಯಕ್ತಿತ್ವದವರಾಗಿದ್ದರು. ಆಗಿನಿಂದಲೇ ಅಂಗನವಾಡಿ ಕಾರ್ಯಕರ್ತೆಯರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ನಿರಂತರ ಭಾಗವಹಿಸ ತೊಡಗಿದರು. ನಂತರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕುಂದಾಪುರ ತಾಲೂಕು ಸಮಿತಿ ಕಾರ್ಯದರ್ಶಿಯಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಯಾಗಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದರು. ಕಾರ್ಮಿಕ ಸಂಘಟನೆಯಾದ ಸಿ.ಐ.ಟಿ.ಯು.ಗೆ 2006ರಲ್ಲಿ ಸೇರಿಕೊಂಡ ಸುಶೀಲಾ ನಾಡ ನಂತರ ಕಮ್ಯುನಿಸ್ಟ್ ಚಳವಳಿಯ ಭಾಗವೂ ಆದರು. ಈ ಒಟ್ಟು ನಡೆಯು ಅವರ ಲೋಕ ಜ್ಞಾನವನ್ನು ವಿಸ್ತರಿಸಿಕೊಳ್ಳುವಲ್ಲಿ ಸಹಕರಿಸಿದ್ದು ಮಾತ್ರವಲ್ಲದೆ ಅವರಿಗೆ ತನ್ನೊಳಗೆ ಒಂದು ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿತ್ತು.

‘‘ಗಾಯವು ಬೆಳಕು ನಿಮ್ಮನ್ನು ಪ್ರವೇಶಿಸುವ ಸ್ಥಳ’’ ಎನ್ನುವ ರೂಮಿ ಸಾಲುಗಳು ನಗು ಮಿಂಚುವ ಸುಶೀಲಾ ಅವರ ಕಣ್ಣುಗಳನ್ನು ಗಮನಿಸುವಾಗ ಮತ್ತೆ ಮತ್ತೆ ನೆನಪಾಗುತ್ತದೆ. ಸಮುದಾಯದೊಳಗಿನ ಅಸ್ಪಶ್ಯತೆ, ಸಾಮಾಜಿಕ ಅಸಮಾನತೆ, ಮಹಿಳೆಯರ ಮೇಲೆ ನಡೆಯುತ್ತಿದ್ದ ನಿರಂತರ ದೌರ್ಜನ್ಯಗಳನ್ನು ಕಣ್ಣಾರೆ ಕಂಡು ಬೆಳೆಯುತ್ತಿದ್ದ ಸುಶೀಲಾ ಅವರಿಗೆ ಅಂಗನವಾಡಿ ಕಾರ್ಯಕರ್ತೆಯಾಗಿ ಅಂಚಿಗೆ ತಳ್ಳಲ್ಪಟ್ಟವರ ಪರ ಕೆಲಸ ಮಾಡಲು ಪ್ರೇರಕವಾಯಿತು. ಇವರು ಕಳೆದ ಒಂದೆರಡು ದಶಕಗಳಿಂದ ತಮ್ಮ ಸಮುದಾಯದೊಳಗೆ ಜನಸಂಖ್ಯೆ, ತೀವ್ರವಾಗಿ ಕುಸಿಯುತ್ತಿರುವುದನ್ನು ಕಣ್ಣಾರೆ ಕಂಡಿದ್ದರು. ಕೊರಗಾಭಿವೃದ್ದಿ ಸಂಘಗಳ ಒಕ್ಕೂಟ(ರಿ.) ಕರ್ನಾಟಕ, ಕೇರಳ ತನ್ನ ಸಮುದಾಯದ ಉಳಿವಿಗಾಗಿ ಪರಿಶಿಷ್ಟ ಪಂಗಡದವರಿಗೆ ಪೌಷ್ಟಿಕ ಆಹಾರ ನೀಡುವಂತೆ ಸರಕಾರದ ಮನವೊಲಿಸಿ ಯಶಸ್ವಿಯಾದದ್ದನ್ನು ಕಣ್ಣಾರೆ ಕಂಡ ಈಕೆ ಒಕ್ಕೂಟದ ಸಕ್ರಿಯ ಸದಸ್ಯರಾಗಿ ಸಾಮಾಜಿಕ ನ್ಯಾಯಕ್ಕಾಗಿ ಹಕ್ಕೊತ್ತಾಯವನ್ನು ಮಂಡಿಸುವಲ್ಲಿ ತಾವೂ ಧ್ವನಿಗೂಡಿಸಿದರು. ಕೊರಗರ ಅಜಲು ವಿರೋಧಿ ಹೋರಾಟ, ಭೂಮಿ ಹಕ್ಕಿನ ಹೋರಾಟದಲ್ಲಿ ಜೊತೆಗೂಡಿದರು.

ಅಂಗನವಾಡಿಯನ್ನು ತನ್ನ ಕರ್ಮಭೂಮಿಯಾಗಿಸಿಕೊಂಡಿರುವ ಸುಶೀಲಾ ಈ ಮಕ್ಕಳ ಒಡನಾಟ ತನಗೆ ಚಿರ ಯೌವ್ವನ ನೀಡುವುದರ ಜೊತೆಗೆ ತನ್ನ ಎಲ್ಲ ಹೋರಾಟಕ್ಕೆ ಸ್ಫೂರ್ತಿ ನೀಡುತ್ತದೆ ಎನ್ನುತ್ತಾರೆ. ಅಂಗನವಾಡಿಯ ಮೂಲಕ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ ವೃದ್ಧ ರಿಗೆ, ವಿಧವೆಯರಿಗೆ, ಹೆಣ್ಣು ಮಕ್ಕಳಿಗೆ ಸರಕಾರದ ವಿವಿಧ ಯೋಜನೆಗಳನ್ನು ಜೋಡಿಸುವುದರಲ್ಲಿ ಸಹಕರಿಸುತ್ತಾರೆ. ಘನತೆಯ ಬದುಕು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮಹಿಳೆಯರು, ಮಕ್ಕಳನ್ನು ಒಳಗೊಂಡಂತೆ ಎಲ್ಲರಿಗೂ ದಕ್ಕಬೇಕು ಎನ್ನುವ ಕಾಳಜಿ ಇವರದು. ಇವರ ಈ ಕಾಳಜಿಯನ್ನು ಗಮನಿಸಿ ಆ್ಯಕ್ಷನ್ ಏಡ್ ಇಂಡಿಯಾ ಸಂಸ್ಥೆಯ 2021ರ ಸಾಲಿನ ‘ಹ್ಯೂಮನ್ ರೈಟ್ಸ್ ಡಿಫೆಂಡರ್’ ಪ್ರಶಸ್ತಿ ಇವರಿಗೆ ನೀಡಿದೆ. ಉಡುಪಿ ಜಿಲ್ಲೆಯ ಮುಸ್ಲಿಮ್ ಒಕ್ಕೂಟ ಇವರ ಸಮಾಜ ಸೇವೆಯನ್ನು ಪರಿಗಣಿಸಿ 2022ರಲ್ಲಿ ಸುಶೀಲಾ ನಾಡ ಅವರನ್ನು ಗೌರವಿಸಿದೆ. 2023ರಲ್ಲಿ ಪೂರ್ವ ಆಫ್ರಿಕಾದ ತಾಂಝನಿಯಾದಲ್ಲಿ ಆ್ಯಕ್ಷನ್ ಏಡ್ ಡೆನ್ಮಾರ್ಕ್ ‘ಗ್ಲೋಬಲ್ ಪೀಪಲ್ ಪವರ್ ಫಾರ್’ ಗೌರವವೂ ಇವರಿಗೆ ಸಂದಿದೆ. ಉಡುಪಿ ಜಿಲ್ಲೆಯ ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ -2024’ ಪ್ರಶಸ್ತಿ ಇವರಿಗೆ ಸಂದಿದೆ. ತನ್ನ ಒಟ್ಟು ಸಂವೇದನೆಗೆ ಸ್ಫೂರ್ತಿಯ ಸೆಲೆಯಾಗಿರುವ ಸಮಗ್ರ ಗ್ರಾಮೀಣ ಆಶ್ರಮದ ಬಳಗದ ಮೇಲೆ ಇವರಿಗೆ ಅಪಾರ ಪ್ರೀತಿ. ಸುಶೀಲಾ ಹೇಳುವಂತೆ ಇದು ಅವರಿಗೆ ಸಹಿಷ್ಣುತೆಯ ಕಿವಿಗಳಿಂದ ಆಲಿಸುವ, ಸಹಾನುಭೂತಿಯ ಕಣ್ಣುಗಳ ಮೂಲಕ ನೋಡುವ, ಪ್ರೀತಿಯ ಭಾಷೆಯಲ್ಲಿ ಮಾತನಾಡುವ ಕಲೆ ಕಲಿಸಿದೆ. ಈ ಪ್ರೇಮವೇ ಸುಶೀಲಾ ಅವರ ಪ್ರತಿರೋಧದ ಅಸ್ತ್ರ. ವೃತ್ತಿ, ಸಂಘಟನೆಯ ಕಾರ್ಯ ಚಟುವಟಿಕೆಗಳ ಜೊತೆ ಜೊತೆಗೆ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಪಡೆದಿರುವ ಸುಶೀಲಾ ನಾಡ ಕೊರಗ ಸಮುದಾಯದವರನ್ನು ಮ್ಯಾನ್‌ವಲ್ ಸ್ಕಾವೆಂಜ್‌ಗೆ, ಅಜಲು ಚಾಕರಿಗೆ ಊರ ಜನ ಬಳಸಿಕೊಳ್ಳುವುದು ಕಂಡ ತಕ್ಷಣ ಜಾಗೃತರಾಗುತ್ತಾರೆ. ಸಂಘಟನೆಯ ಜೊತೆ ಗೂಡಿ ಇದರ ವಿರುದ್ಧ ಹೋರಾಡುವುದಕ್ಕೆ ಮುನ್ನುಗ್ಗುತ್ತಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ, ಬಾಲ್ಯ ವಿವಾಹ ತಡೆ ಹೀಗೆ ಹಲವಾರು ಸಮಾಜ ಘಾತುಕ ಚಟುವಟಿಕೆಗಳ ವಿರುದ್ದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ತನ್ನ ಸಮುದಾಯದ ದುರ್ಗತಿಗೆ ಕಾರಣವಾಗಿರುವ ಮದ್ಯವ್ಯಸನ ನಿಲ್ಲಿಸಲು ಮದ್ಯವರ್ಜನ ಶಿಬಿರಗಳನ್ನು ನಡೆಸಲು ಉತ್ತೇಜಿಸುತ್ತಾರೆ. ಸುಶೀಲಾ ನಾಡ ಅವರಿಗೆ ಸಂದ ‘ಭೋದಿವರ್ಧನ 2024’ ಪ್ರಶಸ್ತಿಯು ಸಹಬಾಳ್ವೆ, ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇರುವ ಈ ನೆಲದ ಎಲ್ಲ ಮಹಿಳೆಯರಿಗೂ ಸಂದ ಗೌರವ. ಹೋರಾಟಗಳು ನಿರಂತರವಾಗಿರಬೇಕು, ಹೆಜ್ಜೆಗಳು ಇನ್ನೂ ಗಟ್ಟಿಯಾಗಬೇಕು, ಸಂವಿಧಾನದ ಸಮಾನತೆಯ ಆಶಯಗಳು ಮನೆ ಮನೆ ತಲುಪಬೇಕು ಎಂಬ ಆಶಯದೊಂದಿಗೆ ಸುಶೀಲಾ ನಾಡ ಅವರ ಎದೆಯೊಳಗೆ ಸದಾ ಮಿಡಿಯುತಿರುವ ಜೀವಪರ ಜ್ಯೋತಿಯ ಹೋರಾಟದ ಸೆಲೆ ಬತ್ತದಿರಲಿ ಎಂಬ ಆಶಯವೇ ಅವರಿಗೆ ಸಲ್ಲುವ ಅಭಿನಂದನೆ.

share
ದೇವಿಕಾ ನಾಗೇಶ್, ಮಂಗಳೂರು
ದೇವಿಕಾ ನಾಗೇಶ್, ಮಂಗಳೂರು
Next Story
X