Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೀಸಲಾತಿ ಕುರಿತ ಕೆಲವು ತಪ್ಪು ಕಲ್ಪನೆಗಳು

ಮೀಸಲಾತಿ ಕುರಿತ ಕೆಲವು ತಪ್ಪು ಕಲ್ಪನೆಗಳು

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ30 Jun 2024 11:45 AM IST
share
ಮೀಸಲಾತಿ ಕುರಿತ ಕೆಲವು ತಪ್ಪು ಕಲ್ಪನೆಗಳು
ಒಬ್ಬ ಉದ್ಯೋಗಾಕಾಂಕ್ಷಿಯನ್ನು ಒಂದು ನಿರ್ದಿಷ್ಟ ಸೇವೆಗೆ ನೇಮಕ ಮಾಡಿಕೊಂಡಾಗ, ಅವನು ಸ್ವತಃ ಕೇಡರ್‌ನಲ್ಲಿ ಒಂದು ಅಂತಸ್ತಿಗೆ ಹೊಂದಿಕೊಂಡು ಅಧಿಕಾರ ಪ್ರತಿಷ್ಠಿತನಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಸಮಾನವಾಗಿರುತ್ತಾನೆ. ಆದರಿದು, ಭಡ್ತಿಯ ಮೀಸಲಾತಿಯಲ್ಲಿ ನಿಷ್ಪ್ರಯೋಜಕವಾಗುವುದು. ಇದನ್ನು ಭಡ್ತಿಯಲ್ಲಿ ಮೀಸಲಾತಿಯ ಅವಕಾಶಗಳ ಹಿಂದೆ ಸಂವಿಧಾನದ ಉದಾತ್ತ ಉದ್ದೇಶದೊಂದಿಗೆ ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳಬೇಕು.

ಎ.ಭಡ್ತಿ:

ಇದು ಜನರ ಮನಸ್ಸಿನಲ್ಲಿ ಬಹಳಷ್ಟು ಅಸಮಾಧಾನ ಮತ್ತು ವಿವಾದಗಳು ಮೇಲುಗೈ ಪಡೆಯುವ ಮತ್ತೊಂದು ಕ್ಷೇತ್ರವಾಗಿದೆ ಎಂದು ಸಾರ್ವಜನಿಕರು ಹೇಳುವುದನ್ನು ಕೇಳುತ್ತೇವೆ.

1. ಒಮ್ಮೆ ಯಾವುದೇ ನಾಗರಿಕರು ಸಾರ್ವಜನಿಕ ಸೇವೆಗೆ ಸೇರಿದರೆ ಅವರದೇ ಒಂದು ವರ್ಗವಾಗಿ ಪರಿವರ್ತಿತವಾಗುತ್ತದೆ; ಕೆಲವರು ಹುಟ್ಟು ಅಥವಾ ಜಾತಿಯಿಂದಾಗಿ ಸೇವಾ ಅವಧಿಯಲ್ಲಿ ಶಾಶ್ವತ ಪ್ರಯೋಜನವನ್ನು ಒದಗಿಸಲು ಅವರನ್ನು ವಿವಿಧ ವರ್ಗಗಳಾಗಿ ವಿಭಜಿಲಾಗುವುದು(ಮೀಸಲಾತಿಗೆ ಒಳಪಡುವವರು). ಇದರ ಅರ್ಥ ಮುಖ್ಯವಾಹಿನಿಯಿಂದ ಶಾಶ್ವತವಾಗಿ ಪ್ರತ್ಯೇಕ ವರ್ಗವೆಂದು ಅವರನ್ನು ಪರಿಗಣಿಸುವುದು; ಅಂದರೆ ಆಡಳಿತಾತ್ಮಕ ವ್ಯವಸ್ಥೆಯೊಳಗೆ ರೂಪಿಸಲ್ಪಟ್ಟಿರುವ ಶ್ರೇಣಿಯ ವಿಭಜನೆ, ಅವರು ಕೆಲಸ ಮಾಡಲಿ ಅಥವಾ ಇಲ್ಲದಿರಲಿ ಅವರು ತಮ್ಮ ಭಡ್ತಿಗೆ ಬದ್ಧರಾಗಿರುತ್ತಾರೆ. ಇದು ಸ್ಪರ್ಧೆಯಲ್ಲಿರುವ ಇತರ ಸೇವಾ ನಿರತರಿಗೆ ಹತಾಶೆ ಮತ್ತು ಅಸೂಯೆ ಭಾವನೆಯನ್ನು ಉಂಟುಮಾಡುತ್ತದೆ. ಇದೆಲ್ಲವೂ ಆಡಳಿತದ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ.

2. ನೇಮಕಾತಿಯ ಆರಂಭಿಕ ಹಂತದಲ್ಲಿ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ವರ್ಗಗಳ ಪರವಾಗಿ ಸೇವಾ ನೇಮಕಾತಿಯಲ್ಲಿ ಮೀಸಲಾತಿಗೆ ಅವಕಾಶವಿದೆ. ಆದರೆ ಅವರು ಸೇವೆಗೆ ಪ್ರವೇಶಿಸಿದ ನಂತರ ಆಡಳಿತದ ದಕ್ಷತೆಯು, ಈ ವರ್ಗಗಳ ಸದಸ್ಯರು ಇತರರೊಂದಿಗೆ ಸ್ಪರ್ಧಿಸಿ ಮತ್ತು ಇತರರಂತೆ ಭಡ್ತಿ ಪಡೆಯಲು ಡಿಮ್ಯಾಂಡ್ ಮಾಡುತ್ತದೆ. ಆದರೆ, ‘ಜನ್ಮ ಸಂಕೇತ’ಗಳ (birth marks) ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು.

3. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ವರ್ಗಗಳನ್ನೂ ಒಳಗೊಂಡಂತೆ ಎಲ್ಲಾ ವರ್ಗಗಳ ಆಡಳಿತಗಾರರನ್ನು ಆಯ್ಕೆ ಮಾಡುವುದು ಮತ್ತು ಪೋಸ್ಟ್ ಮಾಡುವುದು ಅವರ ಹುಟ್ಟು ಆಧರಿಸಿ ಅಲ್ಲ, ಆದರೆ ಕಟ್ಟುನಿಟ್ಟಾಗಿ ಅರ್ಹತೆ ಮೇಲೆ ಭಡ್ತಿ ನೀಡಿದ್ದರೆ ಈ ವಿಭಾಗಗಳನ್ನು ಒಳಗೊಂಡಂತೆ ಎಲ್ಲಾ ವಿಭಾಗಗಳ ಹುದ್ದೆಗಳು ಉತ್ತಮವಾಗಿರುತ್ತವೆ. ಆಡಳಿತಾತ್ಮಕ ವ್ಯವಸ್ಥೆಯ ಉದ್ಯೋಗ ಮತ್ತು ಭಡ್ತಿಗಳು ಹಕ್ಕಿನ ವಿಷಯವಾಗಬಾರದು ಮತ್ತು ಅಧಿಕಾರ ಬಲದಿಂದಲೂ ಇರಬಾರದು. ಆದರೆ ಅದು ಹೊಣೆಗಾರಿಕೆ ಮತ್ತು ಕಾರ್ಯಕ್ಷಮತೆಯಿಂದ ಕೂಡಿದ ಸರಿ ದಾರಿಯಲ್ಲಿ ಇರಬೇಕು.

ಮತ್ತು, ಈ ರೀತಿಯಾಗಿ ಭಡ್ತಿಯಲ್ಲಿ ಮೀಸಲಾತಿಯ ವಿರುದ್ಧ ಸಾಕಷ್ಟು ವಿವಾದಗಳಿವೆ ಹಾಗೂ ಅವುಗಳನ್ನು ಸಮರ್ಥಿಸಲಾಗುತ್ತಿದೆ. ಮೇಲಿನ ವಿವಾದಗಳು ಭಡ್ತಿಯಲ್ಲಿ ಮೀಸಲಾತಿಯ ಹಿಂದಿನ ಮುಖ್ಯ ಉದ್ದೇಶವನ್ನು ನಿರಾಕರಿಸುವುದರ ಜೊತೆಗೆ ಮೀಸಲಾತಿ ವರ್ಗಗಳಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ನೇಮಕದ ಕಾರಣದಿಂದ ಸರಕಾರದಲ್ಲಿ ದಕ್ಷತೆಯ ಪ್ರಶ್ನೆ ಬಗ್ಗೆ ಆತಂಕವಿದೆ. ಇವೆಲ್ಲವೂ ಭಡ್ತಿಯಲ್ಲಿ ಮೀಸಲಾತಿ ವಿರುದ್ಧದ ಉತ್ಪ್ರೇಕ್ಷಿತ ಪ್ರತಿಕ್ರಿಯೆಗಳಾಗಿವೆ ಎಂದೆನಿಸುತ್ತದೆ.

ಹೌದು, ಒಬ್ಬ ಉದ್ಯೋಗಾಕಾಂಕ್ಷಿಯನ್ನು ಒಂದು ನಿರ್ದಿಷ್ಟ ಸೇವೆಗೆ ನೇಮಕ ಮಾಡಿಕೊಂಡಾಗ, ಅವನು ಸ್ವತಃ ಕೇಡರ್‌ನಲ್ಲಿ ಒಂದು ಅಂತಸ್ತಿಗೆ ಹೊಂದಿಕೊಂಡು ಅಧಿಕಾರ ಪ್ರತಿಷ್ಠಿತನಾಗಿ ಮತ್ತು ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಸಮಾನವಾಗಿರುತ್ತಾನೆ. ಆದರಿದು, ಭಡ್ತಿಯ ಮೀಸಲಾತಿಯಲ್ಲಿ ನಿಷ್ಪ್ರಯೋಜಕ ವಾಗುವುದು. ಇದನ್ನು ಭಡ್ತಿಯಲ್ಲಿ ಮೀಸಲಾತಿಯ ಅವಕಾಶಗಳ ಹಿಂದೆ ಸಂವಿಧಾನದ ಉದಾತ್ತ ಉದ್ದೇಶದೊಂದಿಗೆ ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ಸಂವಿಧಾನ ಸಭೆಯ ಒಂದು ಭಾಷಣದಲ್ಲಿ ಮೀಸಲಾತಿಯ ಹಿಂದಿನ ಗುರಿ ಎಂದಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಗುಮಾಸ್ತರು ಮತ್ತು ಅಟೆಂಡರುಗಳನ್ನಾಗಿ ಮಾಡುವುದಲ್ಲ ಎಂದು ಹೇಳಿದ್ದರು. ಬದಲಾಗಿ ದೇಶದ ಆಡಳಿತದಲ್ಲಿ ಅವರನ್ನು ಪಾಲ್ಗೊಳ್ಳುವಂತೆ ಮಾಡುವುದಾಗಿತ್ತು. ಭಡ್ತಿಯಲ್ಲಿ ಮೀಸಲಾತಿ ಇದ್ದಲ್ಲಿ ಇದು ಹೆಚ್ಚು ಅರ್ಥಪೂರ್ಣವಾಗಿ ಸಾಕಾರಗೊಳ್ಳಬಹುದು. ಉನ್ನತ ಶ್ರೇಣಿಯಲ್ಲಿ ಈ ವರ್ಗಗಳ ಹೆಚ್ಚಿನ ಜನರು ಎಂದರೆ ಆಡಳಿತದ ಅಧಿಕಾರದ ಪಾಲು ಸಮಾನ ಹಂಚಿಕೆಯಾದಲ್ಲಿ ಮಾತ್ರ ಅದು ಸ್ವಾಗತಾರ್ಹ ಹೆಜ್ಜೆಯಾಗುತ್ತದೆ. ಸಾಮಾಜಿಕವಾಗಿ ಅಸಮಾನತೆಗೆ ಒಳಪಟ್ಟ ನಿಜವಾಗಿ ನೊಂದವರನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತರದ ಹೊರತು ಅಸಮಾನತೆಯ ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸುವುದು ದೂರವೇ ಉಳಿಯುತ್ತದೆ.

ಸಂವಿಧಾನವು ಕೇಂದ್ರ ಸರಕಾರಿ ಸೇವೆಗಳಲ್ಲಿ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ನಿರೀಕ್ಷಿಸುತ್ತದೆ, ಅಂದರೆ ಪರಿಶಿಷ್ಟ ಜಾತಿಗಳ ಸಂದರ್ಭದಲ್ಲಿ ಪ್ರತಿಶತ 15 ಮತ್ತು ಪರಿಶಿಷ್ಟ ಪಂಗಡಗಳ ಸಂದರ್ಭದಲ್ಲಿ ಪ್ರತಿಶತ 7.5ರಷ್ಟು ಮಾತ್ರ. ಭಡ್ತಿಯಲ್ಲಿ ಮೀಸಲಾತಿಯು ಅಂತಹ ಕೊರತೆ ಇದ್ದರೆ ಅದನ್ನು ತುಂಬಲು ಶಕ್ತಗೊಳಿಸುತ್ತದೆ. ಅಂಥ ಕೊರತೆಗಳನ್ನು ತುಂಬುವಾಗ ಸಹ ಎಲ್ಲಾ ಆಡಳಿತ ನಿಯಮಗಳನ್ನು ಯಾವುದೇ ವಿನಾಯಿತಿ ಇಲ್ಲದೆ ಪಾಲಿಸಬೇಕು.

ಜಗದೀಶ್ ಲಾಲ್ ಮತ್ತು ಇತರರು v/s ಹರ್ಯಾಣ ರಾಜ್ಯ ಪ್ರಕರಣದಲ್ಲಿ ಭಡ್ತಿ ಶಾಸನಬದ್ಧ ಹಕ್ಕಾಗಿದೆ ಎಂದು ಹೇಳಲಾಗಿದೆ. ಆದರೆ ಸಂವಿಧಾನದ ವಿಧಿ 16(4) ಮತ್ತು ವಿಧಿ 16(4ಎ) ಅಡಿಯಲ್ಲಿ ಮೀಸಲಾತಿ ವರ್ಗದ ಅಭ್ಯರ್ಥಿಗಳ ಮೂಲಭೂತ ಹಕ್ಕಾಗಿದೆ ಮತ್ತು ಆದ್ದರಿಂದ ಮೀಸಲಾತಿ ವರ್ಗದ ಅಭ್ಯರ್ಥಿಗಳು ನಿರಂತರ ಅಧಿಕಾರ ನಿರ್ವಹಣೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ಸಂವಿಧಾನದ ವಿಧಿ 16(4ಎ) ಅಡಿಯಲ್ಲಿ ನಿಗದಿಪಡಿಸಲಾಗಿದೆ. ಅದು ಈ ಕೆಳಕಂಡಂತಿದೆ-

ವಿಧಿ16(4ಎ):

ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ರಾಜ್ಯದ ಅಧೀನದ ಸೇವೆಗಳಲ್ಲಿನ ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜ್ಯೇಷ್ಠತೆಯೊಂದಿಗೆ ಭಡ್ತಿ ವಿಷಯದಲ್ಲಿ ಅಂಥವರಿಗಾಗಿ ಮಿಸಲಾತಿಯ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂದಿಸತಕ್ಕದ್ದಲ್ಲ.

ಬಿ. ರೋಸ್ಟರ್‌ಗಳು:

ರೋಸ್ಟರ್ ಬಿಂದು ಇನ್ನೂ ಒಂದು ಬಿಸಿ ಚರ್ಚೆಯ ವಿಷಯವಾಗಿದೆ. ರೋಸ್ಟರ್ ಎಂದರೆ ಎಲ್ಲಾ ಮಾನದಂಡಗಳನ್ನು ಬದಿಗಿಟ್ಟು ಮೀಸಲಾತಿ ವರ್ಗಗಳಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಎಂಬ ಭಾವನೆ ಚಾಲ್ತಿಯಲ್ಲಿದೆ. ರೋಸ್ಟರ್‌ಗಳು ಉಪ-ಉಪಜಾತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಇತ್ತೀಚೆಗೆ ಮೀಸಲಾತಿಯ ಪುಸ್ತಕವೊಂದರಲ್ಲಿ ರೋಸ್ಟರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಅಭಿಪ್ರಾಯ ಪಡಲಾಗಿದೆ-

‘‘ಸರಕಾರಿ ಇಲಾಖೆಗಳಲ್ಲಿ ಭಡ್ತಿಗಳನ್ನು ‘ರೋಸ್ಟರ್ ಪದ್ಧತಿ’ ಎಂದು ನಾಮಕರಣ ಮಾಡಿ ಹೊಸ ಪದ್ಧತಿಯನ್ನು ಪ್ರಾರಂಭಿಸಲು ನಿರ್ಧರಿಸಲ್ಪಟ್ಟವು. ಈ ವ್ಯವಸ್ಥೆಯಿಂದ ಪ್ರತೀ ಹಂತದಲ್ಲಿ ನಿರ್ದಿಷ್ಟ ಪಡಿಸಿದ ಖಾಲಿ ಹುದ್ದೆಗಳನ್ನು ಜಾತಿ-ಉಪಜಾತಿಗಳ ಆಧಾರದ ಮೇಲೆ ಮೀಸಲಿಡಲಾಗುತ್ತಿದೆ.’’

ರೋಸ್ಟರ್ ವ್ಯವಸ್ಥೆಗೆ ಸಂಬಂಧಿಸಿದಂತೆ ಬಹಳಷ್ಟು ತಪ್ಪು ಗ್ರಹಿಕೆಗಳು ಮತ್ತು ತಪ್ಪು ಗ್ರಹಿಕೆಗಳಿಗೆ ಕಾರಣವಾಗುವ ಇಂಥ ತಪ್ಪು ಅವಲೋಕನಗಳು ಮೀಸಲಾತಿ/ರೋಸ್ಟರ್ ವಿಷಯಗಳಲ್ಲಿ ಕಾನೂನು/ಭಾವನಾತ್ಮಕ ಸ್ಪಷ್ಟತೆಯ ಕೊರತೆ ಅಥವಾ ಮೀಸಲಾತಿ ವಿಷಯಗಳಲ್ಲಿ ಅಂತಹ ವೀಕ್ಷಕರ ಅಥವಾ ಅಭಿಪ್ರಾಯ ರೂಪಿಸುವವರ ತೀವ್ರ ನಕಾರಾತ್ಮಕ ಪಕ್ಷಪಾತದ ಪರಿಣಾಮಗಳಾಗಿವೆ. ರೋಸ್ಟರ್ ಪಾಯಿಂಟ್‌ಗಳು ಸಾಮಾನ್ಯ ವರ್ಗ, ಒಬಿಸಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸ್ಥೂಲರೂಪ ಕೊಡುತ್ತವೆ.

ಸಿ. ಸಡಿಲಿಕೆ (ರಿಯಾಯಿತಿ):

ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅನುಮತಿಸಲಾದ ಸಡಿಲಿಕೆಗಳು ಇನ್ನೂ ವಿವಾದದ ಮತ್ತೊಂದು ವಿಷಯವಾಗಿದೆ. ಮೀಸಲಿರಿಸಿದ ವರ್ಗಗಳಿಂದ ಗರಿಷ್ಠ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳಿಗೆ ಅನಿಯಮಿತ ಸಡಿಲಿಕೆಗಳನ್ನು ಅನುಮತಿಸಲಾಗಿದೆ ಎಂದು ವಾದಿಸಲಾಗಿದೆ. ಇದು ಅಭ್ಯರ್ಥಿಗಳು ಭಡ್ತಿಯ ಮಾನದಂಡಗಳಿಗೆ ಹೊಂದುತ್ತಾರೆಯೇ ಅಥವಾ ಇಲ್ಲವೇ ಎಂಬುದು ಮತ್ತು ವಯಸ್ಸಿನ ರಿಯಾಯಿತಿ, ಗುಣಮಟ್ಟಕ್ಕೆ ಸರಿಹೊಂದುವ ನಿಯಮಗಳನ್ನು ಸಂಪೂರ್ಣ ಗಮನಿಸಲಾಗಿದೆಯೇ ಎಂಬುದೆಲ್ಲಾ ಒಳಗೊಂಡಿರುತ್ತದೆ.

ವಾದಗಳು ಈ ರೀತಿ ಇವೆ:

ಕನಿಷ್ಠ ಮಾನಕಗಳನ್ನು ಸಡಿಲಿಸಲು ಅನುಮತಿಯ ಆದ್ಯತೆ ನೀಡಲು ಆದೇಶವಾಗಿದೆ: ‘‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರು ಆಡಳಿತಾತ್ಮಕ ದಕ್ಷತೆಯ ಕನಿಷ್ಠ ಅಗತ್ಯ ಅವಶ್ಯಕತೆಗಳನ್ನು ನಿರ್ವಹಿಸಿದರೆ ಸಮಾನತೆಯನ್ನು ಜಾರಿಗೊಳಿಸಲು ಮತ್ತು ಅಸಮಾನತೆಯನ್ನು ತೊಡೆದು ಹಾಕಲು ಅವರಿಗೆ ಪ್ರಾತಿನಿಧ್ಯವನ್ನು ಮಾತ್ರವಲ್ಲದೆ ಆದ್ಯತೆಯನ್ನು ನೀಡಬಹುದು.’’

ವಾದಗಳು ವಾಸ್ತವದಿಂದ ದೂರವಾಗಿವೆ ಮತ್ತು ಸರಕಾರದ ನಿಯಮಗಳು ಪ್ರಸ್ತುತ ಜಾರಿಯಲ್ಲಿವೆ.

ಡಿ. ಕ್ಯಾರಿ ಫಾರ್ವರ್ಡ್:

ಭರ್ತಿ ಮಾಡದಿರುವ ಮೀಸಲು ವರ್ಗದ ಖಾಲಿ ಹುದ್ದೆಗಳ ಕ್ಯಾರಿ ಫಾರ್ವರ್ಡ್ ಮತ್ತೊಂದು ವಿವಾದಾತ್ಮಕ ಕ್ಷೇತ್ರವಾಗಿದೆ. ಕೆಲವೊಮ್ಮೆ ಎಲ್ಲಾ ಸರಕಾರಿ ಹುದ್ದೆಗಳನ್ನು ಮೀಸಲು ವರ್ಗದ ಜನರು ಮಾತ್ರ ಆಕ್ರಮಿಸಿಕೊಳ್ಳುತ್ತಾರೆ ಎಂಬ ವರ್ಣರಂಜಿತ ಚಿತ್ರಣವನ್ನು ಪಕ್ಷಪಾತದ ಧೋರಣೆಯಿಂದ ಮೂಡಿಸಲಾಗುತ್ತಿದೆ.

ಕ್ಯಾರಿ ಫಾರ್ವರ್ಡ್‌ನ ಉದ್ದೇಶವು ಸರಕಾರಿ ಸೇವೆಗಳಲ್ಲಿ ಪ್ರಾತಿನಿಧ್ಯದ ಸಮರ್ಪಕತೆಯನ್ನು ಖಾತ್ರಿಪಡಿಸುವುದು. ಹಿಂದುಳಿದ ವರ್ಗಗಳಿಗೆ ಭರ್ತಿಯಾಗದ ಹುದ್ದೆಗಳು ಖಾಲಿಯಾಗಿವೆ ಎಂದು ಘೋಷಿಸಿ, ಸೇವೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ಒದಗಿಸಬೇಕಾದ ಸರಕಾರದ ಬದ್ಧತೆಯ ಬಗ್ಗೆ ನಿರಾಶೆಯಾಗುತ್ತದೆ.

ದುರದೃಷ್ಟವಶಾತ್ ನಮ್ಮ ಆಯ್ಕೆ ಪ್ರಕ್ರಿಯೆಯ ಮನೋಧರ್ಮವೇ ವಿರೂಪಗೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಂತಹ ಅಭ್ಯರ್ಥಿಗಳು ತಮ್ಮ ಹುಟ್ಟಿನಿಂದಲೇ ಭಾರತದಂತಹ ದೇಶದ ಪರಿಸ್ಥಿತಿಗಳ ಬಗ್ಗೆ ಆಘಾತಕಾರಿ ವಿವೇಚನೆ ಹೊಂದಿದ್ದರು. ಒಂದರ್ಥದಲ್ಲಿ, ಅವರು ಸಿರಿವಂತ ಪರಿಸರದಲ್ಲಿ ವಾಸಿಸುವವರಿಗಿಂತ ಹೆಚ್ಚು ಸಮರ್ಥರಾಗಿ ಮತ್ತು ಸುತ್ತಮುತ್ತಲಿನ ಜನಸಾಮಾನ್ಯರೊಡನೆ ಜಡ್ಡು ಹಿಡಿದವರಿಗಿಂತ ನಂಬಿಕಸ್ಥರಾಗಿದ್ದರು.

share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X