Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಕೃತಿ ಪ್ರಿಯರ ಮೈಮನ ತಣಿಸುವ ರಮಣೀಯ...

ಪ್ರಕೃತಿ ಪ್ರಿಯರ ಮೈಮನ ತಣಿಸುವ ರಮಣೀಯ ಪರಿಸರ ಕ್ಯಾತನಮಕ್ಕಿ

ಪಶ್ಚಿಮಘಟ್ಟದ ಆಕರ್ಷಕ ಗಿರಿಶ್ರೇಣಿಯ ಸೊಬಗಿನ ಬೀಡು

ಕೆ.ಎಲ್.ಶಿವುಕೆ.ಎಲ್.ಶಿವು8 July 2024 3:28 PM IST
share
ಪ್ರಕೃತಿ ಪ್ರಿಯರ ಮೈಮನ ತಣಿಸುವ ರಮಣೀಯ ಪರಿಸರ ಕ್ಯಾತನಮಕ್ಕಿ

ಚಿಕ್ಕಮಗಳೂರು: ಕಾಫಿನಾಡೆಂಬ ಖ್ಯಾತಿಗೆ ಪಾತ್ರವಾಗಿರುವ ಚಿಕ್ಕಮಗಳೂರು ಸುಂದರ ಗಿರಿಶ್ರೇಣಿಗಳು, ರಮಣೀಯ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಜಿಲ್ಲೆಯಾಗಿದೆ. ಟ್ರಕ್ಕಿಂಗ್ ಪಯಣಕ್ಕೆ ಹೇಳಿ ಮಾಡಿಸಿದ ಅನೇಕ ಗಿರಿಶ್ರೇಣಿಗಳು ಇಲ್ಲಿನ ಆಕರ್ಷಣೆಯಾಗಿವೆ. ಇಂತಹ ಅನೇಕ ಟ್ರಕ್ಕಿಂಗ್ ತಾಣಗಳ ಪೈಕಿ ಕ್ಯಾತನಮಕ್ಕಿ ಗಿರಿಶ್ರೇಣಿ ಚಾರಣ ಪ್ರಿಯರನ್ನು ಆಯಸ್ಕಾಂತದಂತೆ ಸೆಳೆಯುತ್ತಿರುವ ಸುಂದರ ಪ್ರಾಕೃತಿಕ ತಾಣವಾಗಿದೆ.

ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯಲ್ಲಿರುವ ಕ್ಯಾತನಮಕ್ಕಿ ಗಿರಿಶ್ರೇಣಿ ಕಳಸ ಪಟ್ಟಣದಿಂದ 20ಕಿಮೀ ದೂರದಲ್ಲಿದೆ. ಕಳಸ ಪಟ್ಟಣದಿಂದ 8ಕಿಮೀ ದೂರದಲ್ಲಿರುವ ಹೊರನಾಡು ಧಾರ್ಮಿಕ ಕ್ಷೇತ್ರ ತಲುಪಿ ಅಲ್ಲಿಂದ ಬಲಿಗೆ ಗುಡ್ಡ ತಲುಪಿದರೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಸಿಗುತ್ತದೆ. ಅಲ್ಲಿ ನಿಗದಿ ಪಡಿಸಿದ ಶುಲ್ಕ ಪಾವತಿಸಿ ಕಾಲ್ನಡಿಗೆಯಲ್ಲಿ ಸುಮಾರು 3ಕಿಮೀ ಕ್ರಮಿಸಿದರೆ ಕ್ಯಾತನಮಕ್ಕಿಯ ರಮಣೀಯ ಪ್ರಾಕೃತಿಕ ಸೌಂದರ್ಯ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಕ್ಯಾತನಮಕ್ಕಿಯನ್ನು ಜೀಪ್ ಅಥವಾ ಬೈಕ್‌ಗಳ ಮೂಲಕವೂ ತಲುಪುವ ವ್ಯವಸ್ಥೆ ಇದೆಯಾದರೂ ದುರ್ಗಮ ರಸ್ತೆಯಲ್ಲಿ ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ಕ್ಯಾತನಮಕ್ಕಿ ಪಶ್ಚಿಮಘಟ್ಟ ಸಾಲಿಗೆ ಸೇರಿರುವ ಸುಂದರ ಗಿರಿಶ್ರೇಣಿಯಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 5ಸಾವಿರ ಅಡಿ ಎತ್ತರ ಇರುವ ಮನಮೋಹಕ ಗಿರಿಧಾಮವಾಗಿದೆ. ಕ್ಯಾತನಮಕ್ಕಿ ತಲುಪಿದ ಬಳಿಕ ಸುತ್ತಲೂ ಕಣ್ಣಾಡಿಸಿದರೆ ಈ ಗಿರಿಶ್ರೇಣಿ ಹಲವು ಬೆಟ್ಟಗುಡ್ಡಗಳ ಜೋಡಿಸಿಟ್ಟಿರುವ ಮತ್ತೊಂದು ಸುಂದರ ಬೆಟ್ಟದ ಸಾಲೆಂಬ ಭಾವ ಮನದಲ್ಲಿ ಮೂಡುತ್ತದೆ.

ಮುಖ್ಯವಾಗಿ ಕ್ಯಾತನಬೀಡು ಗಿರಿಶ್ರೇಣಿಯ ತುದಿಯಲ್ಲಿ ನಿಂತು ಮುಂಜಾನೆ ಸೂರ್ಯೋದಯ, ಸಂಜೆ ವೇಳೆ ಸೂರ್ಯಸ್ತವಾಗುವ ವಿದ್ಯಮಾನ ನೋಡುವುದು ಮೈಮನಸ್ಸಿಗೆ ಹೊಸಬಗೆಯ ಆಹ್ಲಾದಕ್ಕೆ ಕಾರಣವಾಗುತ್ತದೆ. ಬಹುತೇಕ ಟ್ರಕ್ಕಿಂಗ್ ಪ್ರಿಯರು, ಪ್ರವಾಸಿಗರು ಸೂರ್ಯ ಉದಯಿಸುವ, ಮುಳುಗುವ ದೃಶ್ಯಾವಳಿ ಕಾಣಲು ಇಲ್ಲಿಗೆ ಬರುವುದು ವಿಶೇಷವಾಗಿದೆ.

ಕ್ಯಾತನಮಕ್ಕಿ ತಲುಪುವುದು ಹೇಗೆ?

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 96ಕಿಮೀ ದೂರದ ಕಳಸ ತಲುಪಿದರೆ, ಅಲ್ಲಿಂದ 8ಕಿಮೀ ದೂರದಲ್ಲಿರುವ ಹೊರನಾಡು ಗ್ರಾಮಕ್ಕೆ ಹೋಗಬೇಕು. ಹೊರನಾಡಿನಿಂದ 4ಕಿಮೀ ಬೆಟ್ಟಗುಡ್ಡಗಳ ಸಾಲಿನ ಡಾಂಬಾರು ರಸ್ತೆಯಲ್ಲಿ ಬಲಿಗೆ ಎಂಬ ಸಣ್ಣ ಗ್ರಾಮ ಸಿಗುತ್ತದೆ. ಈ ಗ್ರಾಮದಿಂದ ಸ್ವಲ್ಪದೂರದಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಇದೆ. ಈ ಚೆಕ್‌ಪೋಸ್ಟ್ ತಲುಪಿದರೆ ಅಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿದೆ. ಅಲ್ಲಿಂದ 3ಕಿಮೀ ದುರ್ಗಮ ರಸ್ತೆಯಲ್ಲಿ ನಡೆದರೆ ಕ್ಯಾತನಮಕ್ಕಿಯ ರಮಣೀಯ ಪರಿಸರ ಸಿಗುತ್ತದೆ. ಕ್ಯಾತನಮಕ್ಕಿ ತಲುಪಲು ಖಾಸಗಿ ಜೀಪ್‌ಗಳು ಬಾಡಿಗೆಗೆ ಸಿಗುತ್ತವೆ. ಬೈಕ್ ಮೂಲಕವೂ ತಲುಪಬಹುದು. ಆದರೆ ಕ್ಯಾತನಮಕ್ಕಿ ಪೀಕ್‌ಗೆ ಬೈಕ್, ಜೀಪ್‌ಗಳ ಪ್ರವೇಶ ನಿಷೇಧಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ನೋಂದಾಯಿಸಿದ ಜೀಪ್, ವಾಹನಗಳಿಗೆ ಮಾತ್ರ ಪ್ರವೇಶ ಸಿಗಲಿದೆ. ಕ್ಯಾತನಮಕ್ಕಿ ಸೊಬಗು ಕಾಣಲು ನಿಗದಿತ ಪ್ರವೇಶ ಶುಲ್ಕ ಪಾವತಿ ಮಾಡಬೇಕು.

share
ಕೆ.ಎಲ್.ಶಿವು
ಕೆ.ಎಲ್.ಶಿವು
Next Story
X