Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಟ್ರೈಕೋ ಪೇಜಿಯಾ

ಟ್ರೈಕೋ ಪೇಜಿಯಾ

ಡಾ. ಮುರಳಿ ಮೋಹನ್ಡಾ. ಮುರಳಿ ಮೋಹನ್14 Oct 2024 3:19 PM IST
share
ಟ್ರೈಕೋ ಪೇಜಿಯಾ

ಇದೊಂದು ಮಾನಸಿಕ ಕಾಯಿಲೆಯಾಗಿದ್ದು ಹೆಚ್ಚಾಗಿ 12 ವರ್ಷಗಳ ಮೇಲಿನ ಹುಡುಗಿಯರಲ್ಲಿ ಕಂಡು ಬರುತ್ತದೆ. ಈ ಮಾನಸಿಕ ರೋಗದಲ್ಲಿ ವ್ಯಕ್ತಿಗಳು ತಮ್ಮದೇ ತಲೆಯ ಕೂದಲನ್ನು ಕಾರಣವಿಲ್ಲದೆ ಕಿತ್ತು ತಿನ್ನುವ ರೂಢಿ ಮಾಡಿಕೊಳ್ಳುತ್ತಾರೆ. ರಪುಂಜಿಲ್ ಸಿಂಡ್ರೋಮ್ ಎಂದೂ ಈ ರೋಗವನ್ನು ಕರೆಯಲಾಗುತ್ತದೆ. ನಿರಂತರವಾಗಿ ಕೂದಲು ಕಿತ್ತು ತಿನ್ನುವುದರಿಂದ ಹೊಟ್ಟೆಯೊಳಗಿನ ಕರುಳಿನಲ್ಲಿ ಜೀರ್ಣವಾಗದೆ ಕೂದಲು ಚೆಂಡಿನ ರೂಪದಲ್ಲಿ ಶೇಖರಣೆಯಾಗುತ್ತದೆ. ಕ್ರಮೇಣ ಅಲ್ಲಿ ಸೋಂಕು ತಗಲಿ, ಕರುಳು ಹುಣ್ಣಾಗಿ, ತೂತಾಗಿ ಮಾರಣಾಂತಿಕವಾಗುವ ಸಾಧ್ಯತೆಯೂ ಇರುತ್ತದೆ. ಕಾರಣವಿಲ್ಲದೆ ತಲೆಯಲ್ಲಿನ ಕೂದಲನ್ನು ಕೀಳುವ ಮನೋ ರೋಗಕ್ಕೆ ಟೈಕೋಟಿಲೋ ಮೇನಿಯಾ ಎಂದೂ ಕರೆಯುಲಾಗುತ್ತದೆ. ಹೆಚ್ಚಿನ

ಸಂದರ್ಭಗಳಲ್ಲಿ ತಲೆಕೂದಲು ಹೊಟ್ಟೆಯೊಳಗೆ ಜೀರ್ಣವಾಗದೆ ಚೆಂಡಿನ ಆಕಾರದಲ್ಲಿ ಶೇಖರಣೆಯಾಗಿ ಆಹಾರದ ಸರಾಗ ಚಲನೆಗೆ ಅಡ್ಡಿ ಮಾಡುತ್ತದೆ. ಕಾಲಕ್ರಮೇಣ ಈ ಅಡಚಣೆ ಹೆಚ್ಚಾಗುತ್ತಾ ಹೋಗಿ ರೋಗಿಯ ಆರೋಗ್ಯವನ್ನು ಬಿಗಡಾಯಿಸುತ್ತದೆ.

ಈ ರೋಗಕ್ಕೆ ನಿರ್ದಿಷ್ಟವಾದ ಕಾರಣಗಳು ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳಿಗೆ ತಾವು ಕೂದಲು ತಿನ್ನುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ. ಇಂತಹ ರೋಗಿಗಳು ಏಕಾಂತದಲ್ಲಿ ಇರುವಾಗ ತಮಗರಿವಿಲ್ಲದೆ ಕೂದಲು ಕಿತ್ತು ತಿನ್ನುವ ಕೆಟ್ಟ ಚಟ ಬೆಳೆಸಿಕೊಳ್ಳುತ್ತಾರೆ. ಓಸಿಡಿ ಅಥವಾ ಗೀಳು ರೋಗ ಅಥವಾ ಒಬ್ಸೆಸಿವ್ ಕಂಪಲ್‌ಸಿವ್ ಡಿಸ್ ಆರ್ಡರ್ ಎಂಬ ಮನೋರೋಗದ ಭಾಗವಾಗಿರುವ ಈ ಮನೋರೋಗ ಬೇಗನೆ ಗುರುತಿಸಲು ಸಾಧ್ಯವಾಗುವುದಿಲ್ಲ. ಸಾಕಷ್ಟು ಕೂದಲು ತಿಂದ ವರ್ಷಗಳ ಬಳಿಕ ಕರುಳ ಬೇನೆ, ಹೊಟ್ಟೆ ನೋವು ಸಮಸ್ಯೆ ಬಂದಾಗಲೇ ಹೆತ್ತವರಿಗೆ ಅರಿವಾಗುತ್ತದೆ. ಸೂಕ್ಷ್ಮವಾಗಿ ಮಕ್ಕಳನ್ನು ಗಮನಿಸಿದಲ್ಲಿ ಮಕ್ಕಳ ತಲೆಯಲ್ಲಿನ ಕೂದಲು ವಿರಳವಾಗುವುದನ್ನು ಗಮನಿಸಲು ಸಾಧ್ಯವಿದೆ. ಈ ಕಾರಣದಿಂದ ಹೆತ್ತವರು ತಮ್ಮ ಮಕ್ಕಳ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯದ ಬಗ್ಗೆಯೂ ಒಂದಷ್ಟು ಗಮನ ಹರಿಸುವುದು ಅತೀ ಅಗತ್ಯವಾಗಿರುತ್ತದೆ. ಯಾಕಾಗಿ ಇವರು ತಮ್ಮದೇ ಕೂದಲನ್ನು ಕಿತ್ತು ತಿನ್ನುತ್ತಾರೆ ಎನ್ನುವುದು ಇನ್ನೂ ಒಡೆಯದ ರಹಸ್ಯವಾಗಿಯೇ ಉಳಿದಿದೆ. ಈ ರೀತಿ ಕೂದಲು ತಿಂದು ಸಮಸ್ಯೆಗೆ ಸಿಲುಕಿದ ಬಾಲಕಿಯೊಬ್ಬಳಲ್ಲಿ ಕೇಳಿದಾಗ ಆಕೆ ‘‘ನನಗೆ ಈ ರೀತಿ ಕೂದಲು ಕಿತ್ತು ತಿನ್ನುವುದರಿಂದ ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿ ಸಿಗುತ್ತದೆ’’ ಎಂದು ತಿಳಿಸಿರುತ್ತಾಳೆ ಅವರು ಈ ವಿಚಾರವನ್ನು ಯಾರೊಂದಿಗೂ ಹೇಳಲು ಇಚ್ಛಿಸುವುದಿಲ್ಲ ಮತ್ತು ಯಾರೂ ಇಲ್ಲದ ವೇಳೆಯಲ್ಲಿ ಅವರು ಈ ಕೃತ್ಯವನ್ನು ಮಾಡುತ್ತಾರೆ. ಜಗತ್ತಿನಲ್ಲಿ ಯಾರೂ ಮಾಡದಿದ್ದ ಕೆಲಸ ತಾವು ಮಾಡುತ್ತಿದ್ದೇವೆ ಎಂಬ ಭಾವನೆ ಅವರ ಮನಸ್ಸಿನಲ್ಲಿ ಇರುತ್ತದೆ ಎಂದು ಮಾನಸಿಕ ತಜ್ಞರು ಅಂದಾಜಿಸಿದ್ದಾರೆ.

ರೋಗದ ಚಿಹ್ನೆಗಳು

1. ಮಾನಸಿಕವಾಗಿ ಏಕಾಂತವಾಗಿ ಇರಲು ಈ ರೋಗಿಗಳು ಇಷ್ಟಪಡುತ್ತಾರೆ.

2. ನಿರಂತರವಾಗಿ ಕೂದಲು ತಿಂದಾಗ ಹೊಟ್ಟೆ ಸೋಂಕು ಸಮಸ್ಯೆ ಉಲ್ಬಣವಾಗುತ್ತದೆ.

3. ಕೆಲವೊಂದು ರೋಗಿಗಳಲ್ಲಿ ವಾಂತಿ, ವಾಕರಿಕೆ ಮತ್ತು ನಿಶ್ಯಕ್ತಿ ಕಂಡು ಬರುತ್ತದೆ.

4. ಇದರ ಜೊತೆಗೆೆ ನಿರಾಸಕ್ತಿ, ನಿದ್ರಾಹೀನತೆ, ಊಟ ತಿಂಡಿಗಳ ಮೇಲೆ ಗಮನವಿಲ್ಲದಿರುವುದು ಮತ್ತು ದೇಹ ತೂಕ ಕಡಮೆಯಾಗುವ ಸಾಧ್ಯತೆ ಇರುತ್ತದೆ.

5. ಮುಂದುವರಿದ ಹಂತದಲ್ಲಿ ಕರುಳಿನ ಸೋಂಕು ತಗುಲಿದ ಹೊಟ್ಟೆ ನೋವು, ಜ್ವರ, ನಡುಕ ಮತ್ತು ರಕ್ತ ಹೀನತೆ ಕಂಡು ಬರುತ್ತದೆ.

ಚಿಕಿತ್ಸೆ

ಟ್ರೈಕೋ ಪೇಜಿಯಾ ಎನ್ನುವುದು ಮಾನಸಿಕ ಕಾಯಿಲೆಯಾದ ಕಾರಣ ಅಂತಹ ರೋಗಿಗಳಿಗೆ ಮಾನಸಿಸಕ ತಜ್ಞರ ಬಳಿ ಆಪ್ತ ಸಮಾಲೋಚನೆ ಅತೀ ಅಗತ್ಯ. ಯಾವ ಕಾರಣದಿಂದ ಈ ರೀತಿ ಸಮಸ್ಯೆ ಉಲ್ಬಣವಾಗಿದೆ ಎಂಬುದನ್ನು ಅರಿತು ಚಿಕಿತ್ಸೆ ನೀಡಬೇಕಾಗುತ್ತದೆ. ಮುಂದುವರಿದ ಹಂತದಲ್ಲಿ ಸರ್ಜರಿ ಮುಖಾಂತರ ಹೊಟ್ಟೆಯೊಳಗಿನ ಕೂದಲನ್ನು ತೆಗೆಯ ಬೇಕಾದ ಅನಿವಾರ್ಯತೆ ಇರುತ್ತದೆ.

ತಡೆಗಟ್ಟುವುದು ಹೇಗೆ?

ಬೆಳೆಯುತ್ತಿರುವ ಮಕ್ಕಳ ಬಗ್ಗೆ ಹೆತ್ತವರು ಯಾವತ್ತೂ ಒಂದು ಕಣ್ಣು ಇಡಲೇ ಬೇಕು. ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ತೀವ್ರ ನಿಗಾ ಇಡಬೇಕಾಗುತ್ತದೆ. ಇಬ್ಬರು ಮಕ್ಕಳು ಇದ್ದಲ್ಲಿ ಅವರ ನಡುವೆ ಪದೇ ಪದೇ ಜಗಳ ಮತ್ತು ಮತ್ಸರ ಭಾವನೆ ಇದ್ದಾಗ ಇಬ್ಬರ ಬಗ್ಗೆಯೂ ಸಮಾನ ಕಾಳಜಿ ನೀಡಬೇಕು. ಇಬ್ಬರಿಗೂ ಸಮವಾದ ಪ್ರೀತಿ, ಮಮತೆ ಮತ್ತು ವಾತ್ಸಲ್ಯ ನೀಡಬೇಕು.

ಗಂಡು-ಹೆಣ್ಣು ಎಂಬ ಭೇದ ಭಾವ ಮಾಡಲೇಬಾರದು. ಹೆತ್ತವರ ನಡೆ ಮಕ್ಕಳಿಗೆ ಮಾದರಿಯಾಗಿ ಇರಬೇಕು. ಮಕ್ಕಳ ಸಣ್ಣ ಪುಟ್ಟ ಬೇಕು ಬೇಡಗಳನ್ನು ನಿರ್ಲಕ್ಷಿಸಬಾರದು ಮಕ್ಕಳಲ್ಲಿ ಯಾವತ್ತೂ ಅಪರಾಧಿ ಭಾವ ಮತ್ತು ಅನಾಥ ಪ್ರಜ್ಞೆ ಬರದಂತೆ ಎಚ್ಚರ ವಹಿಸಬೇಕು. ಮಕ್ಕಳನ್ನು ಹೆದರಿಸಿ, ಬೆದರಿಸಿ, ಗದರಿಸಿ ಸರಿ ದಾರಿಗೆ ತರುವುದರ ಬದಲು ಅವರ ಮನಸ್ಸನ್ನು ಅರಿತು ಅವರ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿ ಆತ್ಮ ವಿಶ್ವಾಸಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು.

ಕೊನೆಮಾತು

ಕೂದಲು ತಿನ್ನುವ ಕಾಯಿಲೆ ಉಗುರು ಕಚ್ಚುವ, ತುಟಿ ಕಚ್ಚಿಕೊಳ್ಳುವ ಗೀಳುಗಿಂತಲೂ ಹೆಚ್ಚಿನ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇರುವ ಗೀಳು ರೋಗದ ಒಂದು ಭಾಗವಾಗಿರುತ್ತದೆ. ತಕ್ಷಣವೇ ಗುರುತಿಸಿ ಆಪ್ತ ಸಮಾಲೋಚನೆ ನಡೆಸಿ ನೈತಿಕ ಬೆಂಬಲ, ಪ್ರೀತಿ ಮತ್ತು ಮಮತೆ ನೀಡಿ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ರೋಗವನ್ನು ಶಮನ ಮಾಡಲು ಖಂಡಿತಾ ಸಾಧ್ಯವಿದೆ.

share
ಡಾ. ಮುರಳಿ ಮೋಹನ್
ಡಾ. ಮುರಳಿ ಮೋಹನ್
Next Story
X