Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಾಲಿವುಡ್ ಚಿತ್ರಗಳ ಸಿನಿಮೀಯ ಶೈಲಿಯಲ್ಲಿ...

ಬಾಲಿವುಡ್ ಚಿತ್ರಗಳ ಸಿನಿಮೀಯ ಶೈಲಿಯಲ್ಲಿ ಬದಲಾದ ಮುಸ್ಲಿಮ್ ಲೋಕ

ಝಿಯಾವುಸ್ಸಲಾಮ್ಝಿಯಾವುಸ್ಸಲಾಮ್ಕನ್ನಡಕ್ಕೆ: ತುಫೈಲ್ ಮುಹಮ್ಮದ್ಕನ್ನಡಕ್ಕೆ: ತುಫೈಲ್ ಮುಹಮ್ಮದ್3 July 2025 11:47 AM IST
share
ಬಾಲಿವುಡ್ ಚಿತ್ರಗಳ ಸಿನಿಮೀಯ ಶೈಲಿಯಲ್ಲಿ ಬದಲಾದ ಮುಸ್ಲಿಮ್ ಲೋಕ
ಸ್ವಾತಂತ್ರ್ಯಾನಂತರದ ಮೂರು ದಶಕಕ್ಕೂ ಹೆಚ್ಚಿನ ಸುದೀರ್ಘ ಅವಧಿಯ ಹಿಂದಿ ಸಿನೆಮಾದ ಹೆಚ್ಚಿನ ಪಾತ್ರಗಳಲ್ಲಿ ಮುಸ್ಲಿಮರು ಸದಾ ಒಳ್ಳೆಯದನ್ನೇ ಮಾಡುವ, ಯಾರಿಗೂ ಕೇಡು ಬಗೆಯದ ಜನರಾಗಿಯೇ ಚಿತ್ರಿತರಾಗಿದ್ದಾರೆ. ಈ ಅವಧಿಯ ಎಲ್ಲ ಚಿತ್ರಗಳಲ್ಲೂ ‘ರಹೀಮ್ ಚಾಚಾ’ ಒಬ್ಬ ಸಾರ್ವತ್ರಿಕ ಪಾತ್ರವಾಗಿದ್ದ. ಎ.ಕೆ. ಹನಗಲ್ ಒಬ್ಬರೇ ಹೆಚ್ಚು ಕಡಿಮೆ 60 ಚಿತ್ರಗಳಲ್ಲಿ ಈ ಪಾತ್ರವನ್ನು ನಿರ್ವಹಿಸಿದ್ದರು. ಹೊಸ ಸಹಸ್ರಮಾನದ ಆಗಮನದೊಂದಿಗೆ ಚಿತ್ರಣ ಬದಲಾಯಿತು. ಬೆಳ್ಳಿಪರದೆಯ ಮೇಲೆ ‘ಒಳ್ಳೆಯ’ ಮುಸ್ಲಿಮರು ಅದೃಶ್ಯವಾಗತೊಡಗಿದರು. ಬಂದೂಕು ಮತ್ತು ತಲವಾರು ಹಿಡಿದ ಭಯಾನಕ ಮುಸ್ಲಿಮ್ ಪಾತ್ರಧಾರಿಗಳು ಸಾಮಾನ್ಯವಾಗಿಬಿಟ್ಟರು. ಸುರುಮಾ ತೊಟ್ಟ ಖಳನಾಯಕರ ಪಾತ್ರಗಳಿಗೆಲ್ಲ ಕಡ್ಡಾಯವಾಗಿ ಸಾಬರ ಹೆಸರು ಇರಲೇಬೇಕಿತ್ತು. ದೇಶದ ವಿರುದ್ಧ ಬಾಂಬ್ ಸ್ಫೋಟಿಸಲು ಹಾತೊರೆಯುವ, ಸಂಚು ಹೂಡುವ ದುರುಳರ ಪಾತ್ರಗಳಾವುವೂ ನೀಳ ಗಡ್ಡ, ಬಿಳಿ ಟೊಪ್ಪಿಯಿಲ್ಲದೆ ಪೂರ್ಣಗೊಳ್ಳುತ್ತಿರಲಿಲ್ಲ.

ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಮೊಗಲರು ಭಾರತದ ಬಹುತೇಕ ಭಾಗದ ಮೇಲೆ ಆಳ್ವಿಕೆ ನಡೆಸಿದರು. ಹೆಚ್ಚು ಕಡಿಮೆ ಮೂರು ದಶಕಗಳ ಕಾಲ ಅವರು ಕಿರುತೆರೆಯ ಮೇಲೆ ಆಧಿಪತ್ಯವನ್ನೂ ಹೊಂದಿದ್ದರು. ಹುಮಾಯೂನ್, ಅಕ್ಬರ್, ಜಹಾಂಗೀರ್, ಶಾಜಹಾನ್‌ರಿಂದ ತೊಡಗಿ ಬಹದೂರ್‌ಷಾ ಝಫರ್‌ವರೆಗೆ ಪುಂಖಾನುಪುಂಖವಾಗಿ (ಮೊಗಲ್ ಸಾಮ್ರಾಟರ ಕತೆಗಳು)- ವಾಸ್ತವಿಕ ಆಥವಾ ಕಾಲ್ಪನಿಕ-ಬೆಳ್ಳಿತೆರೆಯ ಮೇಲೆ ಮೂಡಿಬಂದವು. ಕೆ. ಆಸಿಫ್ ಮತ್ತು ಎಂ. ಸಾದಿಕ್‌ರಂತಹ (ಭಾರತೀಯ ಚಿತ್ರರಂಗದ) ದೊಡ್ಡ ದೊಡ್ಡ ಹೆಸರುಗಳು ಈ ಪ್ರಯತ್ನಗಳ ಹಿಂದಿದ್ದವು.

ಎಲ್ಲಿಯವರೆಗೆಂದರೆ ‘ಮುಸ್ಲಿಮ್ ಹಿಸ್ಟಾರಿಕಲ್’ ಎಂಬುದು ಹಿಂದಿ ಸಿನೆಮಾದ ಒಂದು ಧಾರೆಯಾಗಿಯೇ ಬೆಳೆದು ಬಂತು. ಈ ಚಿತ್ರಗಳು ಮುಸ್ಲಿಮ್ ಅರಸರನ್ನು ನ್ಯಾಯ ಮತ್ತು ಏಕತೆಯ ಮೌಲ್ಯಗಳಿಗೆ ಬದ್ಧರಾಗಿದ್ದ ‘ಲಾರ್ಜರ್ ದ್ಯಾನ್ ಲೈಫ್’ ವ್ಯಕ್ತಿತ್ವಗಳಾಗಿ ನಿರೂಪಿಸಿದವು. ‘‘ಆ ಕಾಲದ ಮುಸ್ಲಿಮ್ ಹಿಸ್ಟಾರಿಕಲ್ ಚಿತ್ರಗಳು ಮೊಗಲ್ ಚಕ್ರವರ್ತಿಗಳನ್ನು ಹಿಂದೂ ಧಾರ್ಮಿಕತೆ ಮತ್ತು ಸಂಸ್ಕೃತಿಯ ವಿವಿಧ ಆಯಾಮಗಳನ್ನು ಅಳಿಸಿಹಾಕುವ ವ್ಯಕ್ತಿಗಳಂತಲ್ಲದೆ ಅವುಗಳನ್ನು ಬಲವಾಗಿ ಅಪ್ಪಿಕೊಳ್ಳುವ ಏಕತೆಯ ಶಕ್ತಿಯಾಗಿ ಪ್ರತಿಬಿಂಬಿಸಿದವು’’ ಎಂಬ ‘‘ಇಸ್ಲಾಮಿಕೇಟ್ ಕಲ್ಚರ್ಸ್ ಆಫ್ ಬಾಂಬೆ ಸಿನೆಮಾ’’ದ ಲೇಖಕರಾದ ಇರಾ ಭಾಸ್ಕರ್ ಮತ್ತು ರಿಚರ್ಡ್ ಆಲೆನ್ ಅವರ ಮಾತು ಇಲ್ಲಿ ಗಮನಾರ್ಹ.

ಇದಕ್ಕೆ ಉದಾಹರಣೆಯಾಗಿ ‘ಮೊಗಲೆ ಆಝಮ್’ ಚಿತ್ರದಲ್ಲಿ ನಿರೂಪಿತವಾಗಿರುವ ಅಕ್ಬರ್‌ನ ಅಂತಃಪುರದಲ್ಲಿ ಮೊಳಗುವ ಕೃಷ್ಣ ಭಕ್ತಿಯ ಹಾಡನ್ನೇ ತೆಗೆದುಕೊಳ್ಳಬಹುದು. ಆದರೆ ಸಿನೆಮಾದಲ್ಲಿ ‘ಮುಸ್ಲಿಮ್ ಐಡೆಂಟಿಟಿ’ಯನ್ನು ಕೇವಲ ರಾಜರು ಮತ್ತು ರಾಣಿಯರಿಗಷ್ಟೇ ಸೀಮಿತವಾಗಿಟ್ಟು ನೋಡಲಾಗುವುದಿಲ್ಲ. ಹೀಗಾಗಿ ಅರಸೊತ್ತಿಗೆಯ ಕತೆಗಳ ಉಪ ಉತ್ಪನ್ನವಾಗಿ ‘ಮುಸ್ಲಿಮ್ ಸೋಷಿಯಲ್’ಎಂಬ ಧಾರೆಯೂ ಹುಟ್ಟುಕೊಂಡಿತು. ಇಲ್ಲಿ ನವಾಬರು, ಉರ್ದು ಷಾಯಿರಿ, ಶೇರ್ವಾನಿಗಳು ಮತ್ತು ಸಲಾಮ್‌ಗಳು ಪ್ರಾಮುಖ್ಯ ಪಡೆದವು. ‘ಮೆರೇ ಮೆಹಬೂಬ್’, ‘ನಿಕಾಹ್’ ಎಂಬಿತ್ಯಾದಿ ಚಿತ್ರಗಳನ್ನು ಈ ನಿಟ್ಟಿನಲ್ಲಿ ಉದಾಹರಿಸಬಹುದು.

ಆನಂತರ ಅರಂಭಗೊಂಡದ್ದು ‘ಮುಸ್ಲಿಮ್ ನರ್ತಕಿಯರ’ ಪರ್ವ. ಕಮಲ್ ಅಮ್ರೋಹಿಯ ಪ್ರಸಿದ್ಧ ಚಲನಚಿತ್ರ ‘ಪಾಕೀಝಾ’, ಮುಝಫರ್ ಅಲಿಯವರ ‘ಉಮ್ರಾವೊ ಜಾನ್’ ಮತ್ತು ಸ್ವಲ್ಪ ಮಟ್ಟಿಗೆ ಬಿ.ಆರ್.ಛೋಪ್ರಾ ಅವರ ‘ತವಾಯಿಫ್’ ಈ ಬಗೆಯ ಸಿನೆಮಾವನ್ನು ಪ್ರತಿನಿಧಿಸಿದವು. ಕಾಲಕ್ರಮೇಣ ಸಿನೆಮಾ ಕ್ಷೇತ್ರ ಬದಲಾಗುತ್ತಾ ಬಂದಂತೆ ಸಂಪೂರ್ಣ ಮೈಮುಚ್ಚುವ ಆಸ್ಥಾನ ಕಲಾವಿದೆಯರನ್ನು ತೋರಿಸುವ ಔಚಿತ್ಯವೇ ಇಲ್ಲದಂತಾಯಿತು. ‘ಮುಸ್ಲಿಮ್ ಸೋಷಿಯಲ್’ ಸಿನೆಮಾ ಧಾರೆಯು ತೆರೆಮರೆಗೆ ಸರಿಯಿತು. ‘ಮುಸ್ಲಿಮ್ ಹಿಸ್ಟಾರಿಕಲ್’ನ ಸ್ಥಾನದಲ್ಲಿ ಪರಾಕ್ರಮಿ ಮರಾಠರ ಸಾಹಸಗಾಥೆಗಳು ವಿಜೃಂಭಿಸತೊಡಗಿದವು. ಇಸ್ಲಾಮೋಫೋಬಿಯಾದ ಭರಾಟೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಅಕ್ಬರ್‌ನಿಗಾಗಲೀ, ಪ್ರೇಮೋನ್ಮತ್ತನಾದ ಶಹಜಹಾನ್‌ಗಾಗಲೀ ನೆಲೆ ಇಲ್ಲದಂತಾಗಿದ್ದು ಸಹಜ ತಾನೆ?

ಇತ್ತೀಚೆಗೆ ಬಂದ ಹಿಂದಿ ಸಿನೆಮಾಗಳು ಮತ್ತು ಅವು ನಿರೂಪಿಸುವ ಕಥನಗಳನ್ನೇ ಗಮನಿಸಿ. ಸಂಜಯ್‌ಲೀಲಾ ಬನ್ಸಾಲಿಯ ‘ಪದ್ಮಾವತ್’ ಅಲ್ಲಾವುದ್ದೀನ್ ಖಿಲ್ಜಿಯನ್ನು ಒಬ್ಬ ರಕ್ತಪಿಪಾಸು ನಿರಂಕುಶಮತಿಯನ್ನಾಗಿ ಚಿತ್ರಿಸಿದರೆ ಲಕ್ಷ್ಮಣ್ ಉಟೇಕರ್ ಅವರ ‘ಛಾವಾ’ ಔರಂಗಜೇಬನನ್ನು ಆತ್ಮರತಿಯಲ್ಲಿ ಮೈಮರೆತ ಕ್ರೂರಿಯನ್ನಾಗಿ ಬಿಂಬಿಸಿದೆ. ಹಾಗೆ ನೋಡಿದರೆ ‘ಮೊಗಲೆ ಆಝಮ್’ನಿಂದ ‘ಛಾವಾ’ವರೆಗಿನ ಪಯಣದ ಮೂಲಕ ಹಿಂದಿ ಸಿನೆಮಾ ಇಂದು ಒಂದು ವರ್ತುಲವನ್ನು ಪೂರ್ಣಗೊಳಿಸಿದಂತಾಗಿದೆ.

ಲೇಖಕಿ ನಾದಿರಾ ಖಾತೂನ್ ತನ್ನ ‘ಪೋಸ್ಟ್ ಕೊಲೋನಿಯಲ್ ಬಾಲಿವುಡ್ ಆಂಡ್ ಮುಸ್ಲಿಮ್ ಐಡೆಂಟಿಟಿ’ ಕೃತಿಯಲ್ಲಿ ಹೇಳಿರುವಂತೆ ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’, ‘ಕೇಸರಿ’ ಮತ್ತು ‘ಥಾನಾಜಿ’ ಚಿತ್ರಗಳು ‘‘ಚಾರಿತ್ರಿಕ ಕಥನದ ಕೇಸರೀಕೃತ ಆವೃತ್ತಿಯೊಂದಿಗೆ ಸಮರ್ಪಕವಾಗಿ ಸಮ್ಮಿಳಿತಗೊಂಡಿವೆ’’. ಖಾತೂನ್‌ರ ಕೃತಿಯು ಬಾಲಿವುಡ್ ಯಾವ ರೀತಿಯ ಮುಸ್ಲಿಮ್ ಐಡೆಂಟಿಟಿಯನ್ನು ಕಟ್ಟಿಕೊಟ್ಟಿದೆ ಎಂಬುದನ್ನು ಬಹಳ ಆಳವಾಗಿ ನಿರ್ವಚಿಸುವ ಒಂದು ಪ್ರಯತ್ನ. ಹಾಗೆ ನೋಡಿದರೆ ಹಿಂದಿ ಸಿನೆಮಾದಲ್ಲಿ ‘ಮುಸ್ಲಿಮ್ ಅನನ್ಯತೆ’ ಎನ್ನುವುದು ಆಯಾ ಕಾಲದ ರಾಜಕೀಯ ವಾತಾವರಣಕ್ಕೆ ತಕ್ಕಂತೆ ಪ್ರತಿಬಿಂಬಿತಗೊಂಡಿವೆ ಎನ್ನುವುದನ್ನು ಎಲ್ಲ ವಿಮರ್ಶಕರೂ ಒಪ್ಪಿಕೊಳ್ಳುತ್ತಾರೆ.

ಸ್ವಾತಂತ್ರ್ಯಾನಂತರದ ಮೂರು ದಶಕಕ್ಕೂ ಹೆಚ್ಚಿನ ಸುದೀರ್ಘ ಅವಧಿಯ ಹಿಂದಿ ಸಿನೆಮಾದ ಹೆಚ್ಚಿನ ಪಾತ್ರಗಳಲ್ಲಿ ಮುಸ್ಲಿಮರು ಸದಾ ಒಳ್ಳೆಯದನ್ನೇ ಮಾಡುವ, ಯಾರಿಗೂ ಕೇಡು ಬಗೆಯದ ಜನರಾಗಿಯೇ ಚಿತ್ರಿತರಾಗಿದ್ದಾರೆ. ಈ ಅವಧಿಯ ಎಲ್ಲ ಚಿತ್ರಗಳಲ್ಲೂ ‘ರಹೀಮ್ ಚಾಚಾ’ ಒಬ್ಬ ಸಾರ್ವತ್ರಿಕ ಪಾತ್ರವಾಗಿದ್ದ. ಎ.ಕೆ. ಹನಗಲ್ ಒಬ್ಬರೇ ಹೆಚ್ಚು ಕಡಿಮೆ 60 ಚಿತ್ರಗಳಲ್ಲಿ ಈ ಪಾತ್ರವನ್ನು ನಿರ್ವಹಿಸಿದ್ದರು. ಹೊಸ ಸಹಸ್ರಮಾನದ ಆಗಮನದೊಂದಿಗೆ ಚಿತ್ರಣ ಬದಲಾಯಿತು. ಬೆಳ್ಳಿಪರದೆಯ ಮೇಲೆ ‘ಒಳ್ಳೆಯ’ ಮುಸ್ಲಿಮರು ಅದೃಶ್ಯವಾಗತೊಡಗಿದರು. ಬಂದೂಕು ಮತ್ತು ತಲವಾರು ಹಿಡಿದ ಭಯಾನಕ ಮುಸ್ಲಿಮ್ ಪಾತ್ರಧಾರಿಗಳು ಸಾಮಾನ್ಯವಾಗಿಬಿಟ್ಟರು. ಸುರುಮಾ ತೊಟ್ಟ ಖಳನಾಯಕರ ಪಾತ್ರಗಳಿಗೆಲ್ಲ ಕಡ್ಡಾಯವಾಗಿ ಸಾಬರ ಹೆಸರು ಇರಲೇಬೇಕಿತ್ತು. ದೇಶದ ವಿರುದ್ಧ ಬಾಂಬ್ ಸ್ಫೋಟಿಸಲು ಹಾತೊರೆಯುವ, ಸಂಚು ಹೂಡುವ ದುರುಳರ ಪಾತ್ರಗಳಾವುವೂ ನೀಳ ಗಡ್ಡ, ಬಿಳಿ ಟೊಪ್ಪಿಯಿಲ್ಲದೆ ಪೂರ್ಣಗೊಳ್ಳುತ್ತಿರಲಿಲ್ಲ.

‘ಇಕ್ಬಾಲ್’, ‘ಚಕ್‌ದೇ ಇಂಡಿಯಾ’ ಮತ್ತು ‘ಮುಲ್ಕ್’ ನಂತಹ ಸಕಾರಾತ್ಮಕ ಮುಸ್ಲಿಮ್ ಪಾತ್ರಗಳನ್ನು ಹೊಂದಿದ ಚಿತ್ರಗಳಲ್ಲಿ ಕೂಡಾ ಅಲ್ಪಸಂಖ್ಯಾತರು ‘ರಾಷ್ಟ್ರಕ್ಕೆ ತಮ್ಮ ನಿಷ್ಠೆಯನ್ನು ಸಾಬೀತು ಪಡಿಸಲೇಬೇಕಾದ ಅನಿವಾರ್ಯತೆಯ’ ಧ್ವನಿಯಿದೆ ಎನ್ನುತ್ತಾರೆ ಲೇಖಕಿ ಖಾತೂನ್. ವಾಸ್ತವ ಪ್ರಪಂಚಕ್ಕೆ ತೀರಾ ಅತೀತವಾಗಿದ್ದರೂ, ಸ್ಪಷ್ಟವಾಗಿ ಆಯಾ ಕಾಲದ ರಾಜಕೀಯದಿಂದ ಪ್ರೇರಿತವಾಗಿದ್ದರೂ ಈ ರೀತಿಯ ಚಿತ್ರೀಕರಣ ಅಭೂತಪೂರ್ವ ವಿದ್ಯಮಾನವೇನೂ ಅಲ್ಲ. 1950 ಮತ್ತು 1960ರ ದಶಕಗಳಲ್ಲಿ ಸಿನೆಮಾಗಳು ಮುಸ್ಲಿಮ್ ರಾಜರನ್ನು ಸಕಾರಾತ್ಮಕವಾಗಿ ಚಿತ್ರಿಸಿದ್ದರೆ ಅದಕ್ಕೆ ನೆಹರೂ ಪ್ರಣೀತ ಜಾತ್ಯತೀತ ಮತ್ತು ಸಮಾಜವಾದಿ ರಾಜಕೀಯ ಸಿದ್ಧಾಂತವೇ ಕಾರಣ. ಅಂದು ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವುದು ಮತ್ತು ವಿಭಜನೆಯನ್ನು ತಡೆಯುವುದೇ ಮಾರ್ಗದರ್ಶಕ ಮಂತ್ರವಾಗಿತ್ತು.

ಹಾಗೆ ನೋಡಿದರೆ ಸಮಕಾಲೀನ ಹಿಂದಿ ಚಲನಚಿತ್ರಗಳು ಬದಲಾದ ರಾಜಕೀಯ ವಾತಾವರಣಕ್ಕೆ ಕನ್ನಡಿ ಹಿಡಿಯುತ್ತಿವೆ. ಆಧುನಿಕ ಹಿಂದಿ ಚಲನಚಿತ್ರಗಳು ಇಂದಿನ ರಾಜಕೀಯ ಕಥನಗಳೊಂದಿಗೆ ಬೆರೆತಿವೆ ಎನ್ನುವುದನ್ನು ‘ತಾನಾಜಿ’ (2020)ಯ ಮೂಲಕ ಅರ್ಥಮಾಡಿಕೊಳ್ಳಬಹುದು. ಈ ಚಿತ್ರದ ಮುಖ್ಯ ಪಾತ್ರದಲ್ಲಿರುವ ಅಜಯ್ ದೇವಗನ್ ಟ್ವಿಟರ್‌ನಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತಾ ಕೊಟ್ಟ ಶೀರ್ಷಿಕೆಯನ್ನು ಗಮನಿಸಿ: ‘‘ಫೆಬ್ರವರಿ 4, 1670: ಮೊಗಲ್ ಚಕ್ರಾಧಿಪತ್ಯವನ್ನು ನಡುಗಿಸಿದ ಸರ್ಜಿಕಲ್ ಸ್ಟ್ರೈಕ್’’! ಹಾಗೆಯೇ, ಅಶುತೋಷ್ 2019ರಲ್ಲಿ ತನ್ನ ‘ಪಾಣಿಪತ್’ ಬಿಡುಗಡೆಗೆ ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವವಾದ ಡಿಸೆಂಬರ್ 6ನ್ನು ಆಯ್ಕೆ ಮಾಡಿಕೊಂಡಿದ್ದರು. ಮುಸ್ಲಿಮರನ್ನು ಸಾರಾಸಗಟಾಗಿ ದುಷ್ಟರನ್ನಾಗಿ ಚಿತ್ರಿಸುವ ಈ ಪ್ರವೃತ್ತಿಯು 2014ರ ಬಳಿಕ ಗಂಭೀರ ಸಿನಿ ವಿಮರ್ಶಕರ ಗಮನಕ್ಕೆ ಮಾತ್ರವಲ್ಲ ಜನಸಾಮಾನ್ಯರ ಕಣ್ಣಿಗೂ ರಾಚುವಂತೆ ಕಾಣಿಸತೊಡಗಿದೆ.

ಲೇಖಕ ಆಸಿಮ್ ಸಿದ್ದೀಖಿ ತಮ್ಮ ‘ಮುಸ್ಲಿಮ್ ಐಡೆಂಟಿಟಿ ಇನ್ ಹಿಂದಿ ಸಿನೆಮಾ’ ಕೃತಿಯಲ್ಲಿ ಹೇಳಿದಂತೆ ‘1990ರ ನಂತರದ ಹಲವು ಸಿನೆಮಾಗಳಲ್ಲಿ ಹಿಂದೂ ಹೀರೋ ಒಬ್ಬ ಸಮಾಜ ಮತ್ತು ದೇಶದ ಸುರಕ್ಷತೆಗೆ ಅಪಾಯವೊಡ್ಡುತ್ತಿರುವ ಮುಸ್ಲಿಮ್ ಖಳನಾಯಕರ ವಿರುದ್ಧ ಹೋರಾಡುವುದನ್ನು ಚಿತ್ರಿಸಲಾಗಿದೆ’. 1970ರ ನಂತರದ ಹಿಂದಿ ಸಿನೆಮಾಗಳಲ್ಲಿ ಸಾಮಾನ್ಯವಾಗಿ ಒಬ್ಬ ‘ಕರ್ಮಠ ಮುಸ್ಲಿಮ್’ ಯಾವುದೋ ಭಯೋತ್ಪಾದಕ ಅಥವಾ ಡಾನ್‌ನ ಪಾತ್ರದಲ್ಲಿ ತಪ್ಪದೇ ಬರುತ್ತಾನೆ. ಸಿದ್ದೀಖಿ ತಮ್ಮ ವಾದಕ್ಕೆ ಪೂರಕವಾಗಿ ‘ಝಂಜೀರ್’, ‘ತೇಝಾಬ್’ ಮತ್ತು ‘ಅಂಗಾರ್’ಗಳನ್ನು ಉದಾಹರಿಸುತ್ತಾರೆ. ಸುಲೇಮಾನ್ ಭಾಯಿ ಎಂಬ ಖಳನ ಪಾತ್ರದಲ್ಲಿ ಪರೇಶ್ ರಾವಲ್ ಟೊಪ್ಪಿಧಾರಿಯಾಗಿರುವುದನ್ನೂ ನಾಸೀರುದ್ದೀನ್ ಶಾ ತಮ್ಮ ಗಾಯಕ ಗುಲಾಮ್ ಹಸನ್ ಪಾತ್ರದಲ್ಲಿ ಭಾರತಕ್ಕೆ ನುಸುಳಿ ವಿಚ್ಛಿದ್ರತೆ ಹರಡುವುದನ್ನೂ ಲೇಖಕರು ಬೆಟ್ಟು ಮಾಡುತ್ತಾರೆ. ಈ ಪಾತ್ರಗಳು ಪ್ರೇಕ್ಷಕರಿಗೆ ದಾಟಿಸುವ ಸುಪ್ತ ಸಂದೇಶವೆಂದರೆ ‘ಅವರನ್ನು’ ನಂಬುವಂತಿಲ್ಲ ಎಂಬುದು. ಪ್ರಾಯಶಃ ಮುಸ್ಲಿಮರನ್ನು ಅನ್ಯಗೊಳಿಸುವ ಪ್ರಕ್ರಿಯೆಯು ಹಿಂದಿ ಸಿನೆಮಾದಲ್ಲಿ ಆರಂಭಗೊಂಡದ್ದು ಇಲ್ಲಿಂದಲೇ ಎನ್ನಬಹುದು.

ಸಿದ್ದೀಖಿ ತಮ್ಮ ಕೃತಿಯಲ್ಲಿ ಇನ್ನೊಂದು ಮಹತ್ವದ ಅಂಶವನ್ನೂ ಸ್ಥೂಲವಾಗಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ‘ಪರಿಂದಾ’, ‘ಮಕ್ಬೂಲ್’ ಮತ್ತು ‘ಮೊಹ್ರಾ’ದಲ್ಲಿ ವಿಲಕ್ಷಣ ಬದುಕು ಸಾಗಿಸುವ ಖಳನಾಯಕರು ಕೂಡಾ ಮುಸ್ಲಿಮ್ ಹೆಸರಿನವಾಗಿರುವುದು ಬರೇ ಕಾಕತಾಳೀಯವಲ್ಲ. ಹಾಗೆ ನೋಡಿದರೆ, ಅಸಂಖ್ಯಾತ ಹಿಂದಿ ಸಿನೆಮಾಗಳಲ್ಲಿ ತಪ್ಪದೇ ಕಾಣಿಸುತ್ತಿದ್ದ ನಿತ್ಯ ಪ್ರಾರ್ಥನೆ ಸಲ್ಲಿಸುವ ಧರ್ಮನಿಷ್ಠ ‘ರಹೀಮ್ ಚಾಚಾ’ನಿಂದ ‘ಪರಿಂದಾ’ದ ಮಾದಕವ್ಯಸನಿ ‘ಅಬ್ದುಲ್‌ಖಾನ್’ನ ವರೆಗೆ ಹಿಂದಿ ಸಿನೆಮಾದ ಮುಸ್ಲಿಮ್‌ಪಾತ್ರಗಳು ಕಳೆದ ಏಳೆಂಟು ದಶಕಗಳಲ್ಲಿ ಕ್ರಮಿಸಿರುವ ಹಾದಿ ಸುದೀರ್ಘವಾದುದು.

ಆದರೆ, ಮುಸ್ಲಿಮ್ ಬದುಕಿನ ವಾಸ್ತವಕ್ಕೂ ‘ಮೊಹ್ರಾ’ ಅಥವಾ ‘ತೇಝಾಬ್’ನ ಪಾತ್ರಗಳಿಗೂ ಏನೇನೂ ಸಂಬಂಧವಿಲ್ಲ ಎನ್ನುವುದು ಸ್ಪಷ್ಟ. ಚಕ್ರಾಧಿಪತಿಯಾಗಲೀ, ಆಸ್ಥಾನ ನರ್ತಕಿಯಾಗಲೀ ಅಥವಾ ಗ್ಯಾಂಗ್‌ಸ್ಟರ್‌ಗಳಾಗಲೀ ಇಲ್ಲದ ಮುಸ್ಲಿಮ್ ಬದುಕು ಮತ್ತು ಜಗತ್ತೊಂದಿದೆ ಎಂಬುದನ್ನು ತೋರಿಸಿಕೊಡಲು ಪ್ರಯತ್ನಿಸಿದವರೂ ಹಿಂದಿ ಸಿನೆಮಾದಲ್ಲಿದ್ದಾರೆ. ಎಂ.ಎಸ್.ಸತ್ಯು ಅವರ ‘ಘರಂ ಹವಾ’ ಸಯೀದ್ ಮಿರ್ಝಾ ಅವರ ‘ಸಲೀಮ್ ಲಂಗ್ಡೇ ಪೇ ಮತ್‌ಮಾರೋ’ ಮತ್ತು ಶ್ಯಾಮ್ ಬೆನಗಲ್ ಅವರ ‘ಮಮ್ಮೂ’ ಅಂತಹ ಕೆಲವು ಸೂಕ್ಷ್ಮ ಮತ್ತು ಸಂವೇದನಾಶೀಲ ಚಿತ್ರಗಳು. ಅವು ಕಟ್ಟಿಕೊಟ್ಟ ಮುಸ್ಲಿಮ್ ಸಮಾಜದಲ್ಲಿ ಎಲ್ಲರಂತೆ ರಕ್ತಮೂಳೆ ಹೊಂದಿದ, ಅಪಾರ ನಿರೀಕ್ಷೆಗಳನ್ನು ಹೊತ್ತ ಮನುಷ್ಯರಿದ್ದರು. ಅಲ್ಲಿನ ಬದುಕಿನಲ್ಲಿ ಕನಸುಗಳೂ ಇದ್ದವು ಭೀತಿಯೂ ಇತ್ತು - ಎಲ್ಲ ಸಮಾಜಗಳಲ್ಲಿಯೂ ಇರುವ ಹಾಗೆ.

(ಕೃಪೆ: TheHindu)

share
ಝಿಯಾವುಸ್ಸಲಾಮ್
ಝಿಯಾವುಸ್ಸಲಾಮ್
ಕನ್ನಡಕ್ಕೆ: ತುಫೈಲ್ ಮುಹಮ್ಮದ್
ಕನ್ನಡಕ್ಕೆ: ತುಫೈಲ್ ಮುಹಮ್ಮದ್
Next Story
X