Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘‘ಸಿಂಹಾಸನಗಳು ಬೇಡ, ಕಿರೀಟಗಳು ಬೇಡ,...

‘‘ಸಿಂಹಾಸನಗಳು ಬೇಡ, ಕಿರೀಟಗಳು ಬೇಡ, ದೊರೆಗಳು ಬೇಡ’’

ಏಕಲವ್ಯಏಕಲವ್ಯ26 Oct 2025 10:27 AM IST
share
‘‘ಸಿಂಹಾಸನಗಳು ಬೇಡ, ಕಿರೀಟಗಳು ಬೇಡ, ದೊರೆಗಳು ಬೇಡ’’
ಯುಎಸ್‌ನಲ್ಲಿ ‘ನೋ ಕಿಂಗ್ಸ್’ ಆಂದೋಲನ - ಸೆನೆಟರ್ ಬರ್ನಿ ಸ್ಯಾಂಡರ್ಸ್ ಭಾಷಣ

ನಿಜವಾಗಿ ಬರ್ನಿ ಸ್ಯಾಂಡರ್ಸ್, ದೊಡ್ಡ ಕ್ರಾಂತಿಕಾರಿಯೇನೂ ಅಲ್ಲ. ಅವರು ಸದ್ಯದ ಅಮೆರಿಕನ್ ವ್ಯವಸ್ಥೆಯ ಒಳಗಿನ ವ್ಯಕ್ತಿ. ಅವರು ಬಂಡವಾಳಶಾಹಿತ್ವದ ಬಗ್ಗೆ ಉದಾರ ಧೋರಣೆಯುಳ್ಳ ಡೆಮಾಕ್ರಟ್ ಪಕ್ಷದವರು. ತನ್ನನ್ನು ‘ಸೋಷಿಯಲಿಸ್ಟ್ ಡೆಮಾಕ್ರಟ್’ ಎಂದು ಪರಿಚಯಿಸುವವರು. ಬಂಡವಾಳಿಶಾಹಿತ್ವಕ್ಕೆ ಅವರ ಪ್ರತಿರೋಧ ತೀರಾ ಸೀಮಿತ. ಆದರೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದಕ್ಕೆ ಬಂಡವಾಳಶಾಹಿ ದುಷ್ಟಕೂಟವು ನಡೆಸುತ್ತಿರುವ ಸಂಚುಗಳನ್ನು ವ್ಯವಸ್ಥೆಯ ಒಳಗಿನವರೇ ಸಕಾಲದಲ್ಲಿ ಗುರುತಿಸಿದ್ದಾರೆ, ಅದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಮತ್ತು ಆ ಸಂಚುಗಳ ಫಲವಾಗಿ ನರಳುತ್ತಿರುವ ಜನಸಾಮಾನ್ಯನ ಪರವಾಗಿ ಮಾತನಾಡತೊಡಗಿದ್ದಾರೆ ಎಂಬುದು ಒಂದು ಆಶಾದಾಯಕ ಬೆಳವಣಿಗೆ.


ಸರ್ವಾಧಿಕಾರಿಗಳು ಯಾವ ವೇಷದಲ್ಲೇ ಇರಲಿ, ಅವರ ಹುಚ್ಚಾಟ ಮಿತಿಮೀರತೊಡಗಿದಾಗ ಅವರ ವಿರುದ್ಧ ಆಕ್ರೋಶ, ಪ್ರತಿರೋಧಗಳು ಕೂಡಾ ಬೆಳೆಯತೊಡಗುತ್ತವೆ.

‘‘ಸಿಂಹಾಸನಗಳು ಬೇಡ, ಕಿರೀಟಗಳು ಬೇಡ, ದೊರೆಗಳು ಬೇಡ’’- ಇವು ಯುಎಸ್‌ನಲ್ಲಿ ಕಳೆದ ಜೂನ್‌ನಲ್ಲಿ ಆರಂಭವಾಗಿದ್ದ ‘ನೋ ಕಿಂಗ್ಸ್’ ಎಂಬ ಸರ್ವಾಧಿಕಾರ ವಿರೋಧಿ ಆಂದೋಲನದ ಪ್ರಮುಖ ಘೋಷಣೆಗಳಾಗಿದ್ದವು. ಜೂನ್ 14ರಂದು ಒಂದು ಕಡೆ ಯುಎಸ್ ಸೇನೆ ತನ್ನ 250ನೇ ವಾರ್ಷಿಕೋತ್ಸವದ ಪರೇಡ್ ಗಳನ್ನು ನಡೆಸುತ್ತಿದ್ದರೆ, ಇನ್ನೊಂದೆಡೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ 79ನೇ ಜನ್ಮದಿನವನ್ನಾಚರಿಸುತ್ತಿದ್ದರು. ಅದೇವೇಳೆ ಮತ್ತೊಂದೆಡೆ ಯುಎಸ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕ್ರಮೇಣ ದುರ್ಬಲವಾಗುತ್ತಿರುವುದನ್ನು ಗುರುತಿಸಿದ ಅಲ್ಲಿಯ ಜಾಗೃತ ನಾಗರಿಕರು ತಮ್ಮ ಪ್ರಭುತ್ವದ ರಕ್ಷಣೆಗಾಗಿ ‘ನೋ ಕಿಂಗ್ಸ್’ ಆಂದೋಲನಕ್ಕಾಗಿ ಬೀದಿಗಿಳಿದಿದ್ದರು. ಅಂದು ಯುಎಸ್‌ನ ಹಲವು ಕಡೆ ಪ್ರಜಾಸತ್ತೆಯ ರಕ್ಷಣೆಗಾಗಿ ನಡೆದ ಮತಪ್ರದರ್ಶನಗಳು ವ್ಯಾಪಕ ಚರ್ಚೆಗೊಳಗಾದವು. ವ್ಯವಸ್ಥೆಯ ಪ್ರಭುಗಳು ಪ್ರಜಾಸತ್ತೆಯ ಪರ ಹೋರಾಟಗಾರರ ವಿರುದ್ಧ ಅಪಪ್ರಚಾರಗಳ ಅಭಿಯಾನವನ್ನೇ ಆರಂಭಿಸಿಬಿಟ್ಟರು. ಕಾನೂನನ್ನು ಬಳಸಿ ಹಲವು ಹೋರಾಟಗಾರರನ್ನು ಬೆದರಿಸಿ, ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆದವು. ಆದರೆ ಪರಿಣಾಮ ಬೇರೆಯೇ ಆಯಿತು.

ಕಳೆದ ವಾರ ಅಕ್ಟೋಬರ್ 18ರಂದು ಮತ್ತೊಮ್ಮೆ ಯುಎಸ್ ನಲ್ಲಿ ‘ನೋ ಕಿಂಗ್ಸ್’ ಆಂದೋಲನ ಭುಗಿಲೆದ್ದಿತು. ದೇಶದ 50 ಸಂಸ್ಥಾನಗಳ 2,700 ನಗರ-ಪಟ್ಟಣಗಳಲ್ಲಿ ಪ್ರಕಟವಾದ ‘ನೋ ಕಿಂಗ್ಸ್’ ಆಂದೋಲನದಲ್ಲಿ ಸುಮಾರು 70 ಲಕ್ಷ ನಾಗರಿಕರು ಬೀದಿಗೆ ಬಂದು ಸರ್ವಾಧಿಕಾರದ ವಿರುದ್ಧ ತಮ್ಮ ಕೋಪತಾಪಗಳನ್ನು ಪ್ರದರ್ಶಿಸಿದರು. ನಿರ್ದಿಷ್ಟವಾಗಿ ಟ್ರಂಪ್ ಮತ್ತವರ ದುಷ್ಟಕೂಟದವರ ಹೆಸರನ್ನು ಪ್ರಸ್ತಾಪಿಸಿ, ನಿಮ್ಮ ನಡವಳಿಕೆಯನ್ನು ನಾವು ಒಪ್ಪುವುದಿಲ್ಲ ಮತ್ತು ಅದನ್ನು ನಾವು ಸಹಿಸುವುದೂ ಇಲ್ಲ ಎಂದು ಸ್ಪಷ್ಟವಾಗಿ, ಜಗತ್ತಿಗೆಲ್ಲಾ ಕೇಳಿಸುವಂತೆ ಘೋಷಿಸಿದರು. ಭಾರತಕ್ಕೆ ಹೋಲಿಸಿದರೆ ಯುಎಸ್ ವಿಸ್ತೀರ್ಣ ಸುಮಾರು ನಾಲ್ಕು ಪಟ್ಟು ಅಧಿಕವಿದ್ದರೂ ಅಲ್ಲಿಯ ಜನಸಂಖ್ಯೆ ಇಲ್ಲಿಯ ಸುಮಾರು ಕಾಲು ಭಾಗದಷ್ಟು ಮಾತ್ರವಿದೆ. ಅಲ್ಲದೆ ಅಲ್ಲಿ ಜನರು ಸಾಮೂಹಿಕವಾಗಿ ಬೀದಿಗೆ ಬರುವುದೇ ಅಪರೂಪ. ಇಷ್ಟಾಗಿಯೂ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಯುಎಸ್‌ನ ಎಲ್ಲ ಭಾಗಗಳಲ್ಲಿ ಉತ್ಸಾಹದಿಂದ ಸೇರಿ ಸರ್ವಾಧಿಕಾರವನ್ನು ತಾವು ತಿರಸ್ಕರಿಸುತ್ತೇವೆಂದು ಘೋಷಿಸಿದ್ದು ನಿಜಕ್ಕೂ ಒಂದು ಐತಿಹಾಸಿಕ ಘಟನೆಯಾಗಿ ದಾಖಲಾಯಿತು.

ಈ ವರ್ಷ ಜನವರಿಯಲ್ಲಿ ಎರಡನೆಯ ಬಾರಿ ಯುಎಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿದಾಗಿನಿಂದ ಡೊನಾಲ್ಡ್ ಟ್ರಂಪ್ ತೀರಾ ಒರಟಾಗಿ ವರ್ತಿಸುತ್ತಿದ್ದಾರೆ. ಅವರ ಮಾತು, ಧಾಟಿಯೆಲ್ಲಾ ಸರ್ವಾಧಿಕಾರಿಗಳ ವರಸೆಗಳಿಗೆ ಹೋಲುತ್ತಿವೆ. ಅವರ ಆಶ್ರಯದಲ್ಲಿ ಬೆಳೆಯುತ್ತಿರುವ ದುಷ್ಟಕೂಟದ ದರ್ಪ ಕೂಡಾ ಹೆಚ್ಚುತ್ತಿದೆ. ಸಾಮಾನ್ಯವಾಗಿ ಯುಎಸ್‌ನಲ್ಲಿ ಒಬ್ಬರು ಅಧ್ಯಕ್ಷರಾದ ಕೂಡಲೇ ಅವರ ಜನಪ್ರಿಯತೆ ಕುಸಿಯುವುದಿಲ್ಲ. ಜನಪ್ರಿಯತೆ ಕುಸಿಯುವ ಪ್ರಕ್ರಿಯೆ ಕ್ರಮೇಣ ನಡೆಯುತ್ತದೆ. ಜೋ ಬೈಡನ್ ಅವರ ಅಧ್ಯಕ್ಷತೆಯ ತೀರಾ ಕೊನೆಯ ದಿನಗಳಲ್ಲಿ ಅವರ ಜನಪ್ರಿಯತೆಯು ಶೇ. 55ರಿಂದ ಶೇ. 46ಕ್ಕೆ ಕುಸಿದಿತ್ತು. ಇದೀಗ ಟ್ರಂಪ್ ಅವರ ಮೊದಲ ವರ್ಷ ಪೂರ್ಣವಾಗುವುದಕ್ಕೆ ಮುನ್ನವೇ, ಅವರು ಸರಿ ಎನ್ನುವವರ ಸಂಖ್ಯೆ ಶೇ. 40ಕ್ಕೆಇಳಿದಿದೆ ಮತ್ತು ಅವರು ತಪ್ಪು ಎನ್ನುವವರ ಸಂಖ್ಯೆ ಶೇ. 58ಕ್ಕೇರಿದೆ.

ಟ್ರಂಪ್ ಮತ್ತು ಅವರ ದುಷ್ಟಕೂಟದ ವಿರುದ್ಧ ಅಕ್ಟೋಬರ್ 18ರಂದು ಪ್ರಕಟವಾದ ಆಕ್ರೋಶ ಕೇವಲ ಯುಎಸ್ ಗಡಿಗಳಿಗೆ ಸೀಮಿತವಾಗಿರಲಿಲ್ಲ. ಅಂದು ಬರ್ಲಿನ್, ಮ್ಯಾಡ್ರಿಡ್, ರೋಮ್, ಲಂಡನ್.... ಹೀಗೆ ಯುರೋಪಿನ ವಿವಿಧ ಭಾಗಗಳಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಸೇರಿ, ಅಮೆರಿಕದ ಹೋರಾಟಗಾರರ ಜೊತೆ ತಮ್ಮ ಭಾವೈಕ್ಯ ಪ್ರದರ್ಶಿಸಿದರು. ಟೊರಾಂಟೊದಲ್ಲಿ ಅಮೆರಿಕನ್ ದೂತಾವಾಸದ ಮುಂದೆ ಕೆನೇಡಿಯನ್ ನಾಗರಿಕರು ಮತಪ್ರದರ್ಶನ ನಡೆಸಿದರು.

ಪ್ರಸ್ತುತ ಎರಡನೇ ಸುತ್ತಿನ ‘ನೋ ಕಿಂಗ್ಸ್’ ಆಂದೋಲನದ ವೇಳೆ ವಾಶಿಂಗ್ಟನ್‌ನಲ್ಲಿ ಪ್ರಖ್ಯಾತ ಸಂಸತ್ ಭವನ ‘ಕ್ಯಾಪಿಟಲ್’ ಕಟ್ಟಡದ ಮುಂದೆ ನೆರೆದಿದ್ದ ಜನಸ್ತೋಮವು, ಭಾರೀ ಉತ್ಸಾಹದೊಂದಿಗೆ ಟ್ರಂಪ್ ವಿರೋಧಿ, ಸರ್ವಾಧಿಕಾರ ವಿರೋಧಿ ಮತ್ತು ದುಷ್ಟಕೂಟ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಅವರನ್ನುದ್ದೇಶಿಸಿ ಹಿರಿಯ, ಜನಪ್ರಿಯ ಸಂಸದ ಬರ್ನಿ ಸ್ಯಾಂಡರ್ಸ್ ಅವರು ಮಾಡಿದ ಭಾಷಣ ವ್ಯಾಪಕವಾಗಿ ವೈರಲ್ ಆಯಿತು. ಅನೇಕ ಮಂದಿ ಈಗಲೂ ಅದನ್ನು ವೀಕ್ಷಿಸಿ, ಆಲಿಸಿ ಸ್ಫೂರ್ತಿ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿದ ಕೆಲವು ಮಾತುಗಳು:

‘‘1776ರಲ್ಲಿ ನಮ್ಮ ದೇಶದ ಸ್ಥಾಪಕರು ಅಸಾಮಾನ್ಯ ಧೈರ್ಯವನ್ನು ಪ್ರದರ್ಶಿಸುತ್ತಾ, ಇನ್ನು ಮುಂದೆ ಬ್ರಿಟನ್‌ನ ದೊರೆಗಳು ನಮ್ಮನ್ನು ಆಳುವುದನ್ನು ನಾವು ಸಮ್ಮತಿಸುವುದಿಲ್ಲ ಎಂದು ಘೋಷಿಸಿದ್ದರು. ಆ ದೊರೆಗಳಿಗೆ ಅಮೆರಿಕನ್ನರ ಬದುಕಿನ ಮೇಲೆ ಸಂಪೂರ್ಣ ಸರ್ವಾಧಿಕಾರವಿತ್ತು. ನಮ್ಮ ದೇಶದ ಸ್ಥಾಪಕರು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿದರು. ಅದಕ್ಕಾಗಿ ಅವರು ಆಗ ಜಗತ್ತಿನ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿದ್ದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ರಕ್ತ ಸಿಕ್ತ ಹೋರಾಟ ನಡೆಸಿದರು. 8 ವರ್ಷಗಳ ಆ ದೀರ್ಘ ಯುದ್ಧದಲ್ಲಿ ಲಕ್ಷಾಂತರ ಅಮೆರಿಕನ್ನರು ಹತರಾದರು. ಆದರೆ ನಮ್ಮ ಪೂರ್ವಜರು ಸೋಲೊಪ್ಪದೆ ಹೋರಾಡಿ ಕೊನೆಗೆ ಜಯಶೀಲರಾದರು. 1789ರಲ್ಲಿ ಯುದ್ಧವನ್ನು ಗೆದ್ದ ಬಳಿಕ ಅವರು ಅಸಾಮಾನ್ಯ ಸಾಧನೆಯೊಂದನ್ನು ಮಾಡಿದರು. ಅವರು ಆಧುನಿಕ ಇತಿಹಾಸದ ಪ್ರಥಮ ಪ್ರಜಾಸತ್ತಾತ್ಮಕ ಸರಕಾರವನ್ನು ಸ್ಥಾಪಿಸಿದರು. ಈ ಮೂಲಕ ಅವರು ನಮಗಿನ್ನು ದೊರೆಗಳು ಬೇಡ, ನಾವು ಜನತೆ, ನಾವೇ ನಮ್ಮನ್ನು ಆಳುತ್ತೇವೆ ಎಂದು ಜಗತ್ತಿನ ಮುಂದೆ ಬಹಳ ಗಟ್ಟಿ ಧ್ವನಿಯಲ್ಲಿ, ಬಹಳ ದಿಟ್ಟವಾಗಿ ಘೋಷಿಸಿದರು.’’

‘‘ಇದೀಗ 2025ರಲ್ಲಿ, ಅಮೆರಿಕನ್ ಇತಿಹಾಸದ ಅತ್ಯಂತ ಅಪಾಯಕಾರಿ ಘಟ್ಟದಲ್ಲಿರುವ ನಾವು ಮತ್ತೆ ಅದೇ ಸಂದೇಶವನ್ನು ಸಾರುತ್ತಿದ್ದೇವೆ: ಟ್ರಂಪ್ ಅವರೇ, ಬೇಡ, ನೀವಾಗಲಿ ಬೇರೆ ಯಾರೇ ಆಗಲಿ ನಮ್ಮ ದೊರೆಯಾಗಿ ನಮ್ಮನ್ನು ಆಳುವುದು ನಮಗೆ ಬೇಕಾಗಿಲ್ಲ.....ನಾವು ನಮ್ಮ ಸಮಾಜದ ಪ್ರಜಾಸತ್ತಾತ್ಮಕ ಸ್ವರೂಪವನ್ನು ಉಳಿಸಿಕೊಳ್ಳುತ್ತೇವೆ. ನಾವೆಂದೂ ಸರ್ವಾಧಿಕಾರದೆಡೆಗೆ ಚಲಿಸಲಾರೆವು. ಅಮೆರಿಕದಲ್ಲಿ ಜನತೆಯಾಗಿರುವ ನಾವೇ ಆಳುತ್ತೇವೆ..... ಜಾರ್ಜ್ ವಾಶಿಂಗ್ಟನ್ ಈ ದೇಶದ ಮೊದಲ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದಾಗ, ನಮ್ಮನ್ನು ನಾವೇ ಆಳುವ ಈವ್ಯವಸ್ಥೆಯನ್ನು ‘ಅಮೆರಿಕದ ಜನತೆಯ ಮೇಲೆ ನಂಬಿಕೆ ಇಟ್ಟು ಅವರ ಕೈಗೆ ವಹಿಸಿಕೊಡಲಾಗಿರುವ ಪ್ರಯೋಗ’ ಎಂದು ಕರೆದಿದ್ದರು. ಇಂದು ಆ ಪ್ರಯೋಗವು ತನ್ನ ಚರಿತ್ರೆಯಲ್ಲೇ ಅತ್ಯಧಿಕ ಅಪಾಯದಲ್ಲಿದೆ. ಹೆಚ್ಚು ಹೆಚ್ಚು ಅಧಿಕಾರ ತನ್ನ ಹಾಗೂ ತನ್ನ ದುಷ್ಟಕೂಟದ ಕೈಯಲ್ಲಿರಬೇಕು ಎಂದು ಬಯಸುವವರು ನಮ್ಮ ಅಧ್ಯಕ್ಷರಾಗಿರುವುದರಿಂದ ಅದು ಅಪಾಯದಲ್ಲಿದೆ. ಎಲ್ಲೇ ಆಗಲಿ ಪ್ರತಿಭಟನೆಗಳು ನಡೆದಾಗಲೆಲ್ಲಾ ಅವುಗಳನ್ನು ದೇಶವಿರೋಧಿ ಚಟುವಟಿಕೆ ಎಂದು ಹೆಸರಿಸಿ ಸೇನೆಯನ್ನು ಕರೆಯುವವರು ಮತ್ತು ಐಸಿಇ (Iಅಇ) ಸಿಬ್ಬಂದಿಯನ್ನು ಕಳಿಸಿ ಮನೆಗಳ ಬಾಗಿಲು ಒಡೆದು ಕೈಗೆ ಸಿಕ್ಕವರನ್ನು ವಾಹನಗಳ ಒಳಕ್ಕೆ ತಳ್ಳಿ ಅಜ್ಞಾತ ಸ್ಥಳಗಳಿಗೆ ಕರೆದೊಯ್ಯುವವರು ನಮ್ಮ ಅಧ್ಯಕ್ಷರಾದ್ದರಿಂದ ಅದು ಅಪಾಯದಲ್ಲಿದೆ. ಮಾಧ್ಯಮಗಳನ್ನು ಬೆದರಿಸುವ, ತನ್ನ ಅಥವಾ ತನ್ನ ಧೋರಣೆಗಳ ವಿರುದ್ಧ ಯಾವುದೇ ಟೀಕೆಯನ್ನು ಕೇಳಬಯಸದ ಮತ್ತು ನಮ್ಮ ಸಂವಿಧಾನದ ಮೂಲ ಆಶಯದ ವಿರುದ್ಧವೇ ಸಕ್ರಿಯವಾಗಿರುವವರು ನಮ್ಮ ಅಧ್ಯಕ್ಷರಾಗಿರುವುದರಿಂದ ಅದು ಅಪಾಯದಲ್ಲಿದೆ.’’

‘‘ಇಂದು ನಮ್ಮ ಮುಂದೆ ಇರುವ ಸವಾಲು ಕೇವಲ ಒಬ್ಬ ವ್ಯಕ್ತಿಯ ಅಧಿಕಾರ ಲಾಲಸೆ ಅಥವಾ ನಮ್ಮ ಸಂವಿಧಾನದ ಬಗ್ಗೆ ಆತನಿಗಿರುವ ತಾತ್ಸಾರದಲ್ಲಿ ಅಲ್ಲ. ಸವಾಲಾಗಿರುವವರು ಬೆರಳೆಣಿಕೆಯ ಕೆಲವು ಅತಿ ಶ್ರೀಮಂತರು. ಎಂದೂ ಆರದ ತಮ್ಮ ಧನದಾಹವನ್ನು ನೀಗಿಸಲಿಕ್ಕಾಗಿ ಮತ್ತು ತಮ್ಮ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿಕ್ಕಾಗಿ ಅವರು ನಮ್ಮ ಸಂಪೂರ್ಣ ದೇಶದ ಆರ್ಥಿಕತೆಯನ್ನು ಮತ್ತು ನಮ್ಮ ರಾಜಕೀಯ ವ್ಯವಸ್ಥೆಯನ್ನು ಅಪಹರಿಸಿಕೊಂಡಿದ್ದಾರೆ. ದೇಶದ ಎಲ್ಲೆಡೆ ಇರುವ, ದುಡಿಯುವ ವರ್ಗಗಳು ಮತ್ತವರ ಕುಟುಂಬಗಳು ಈ ದುಸ್ಥಿತಿಯ ಬಲಿಪಶುಗಳಾಗಿವೆ.’’

‘‘ನಾನಿಲ್ಲಿ ಎಲಾನ್ ಮಸ್ಕ್, ಜೆಫ್ ಬೆರೆಸ್, ಮಾರ್ಕ್ ಝುಕರ್ ಬರ್ಗ್ ಮುಂತಾದ ಬಿಲಿಯಾಧಿಪತಿಗಳ ಬಗ್ಗೆ ಮಾತನಾಡುತ್ತಿದ್ದೇನೆ. ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಅವರೆಲ್ಲಾ ಟ್ರಂಪ್ ಜೊತೆ, ಅವರ ಬೆನ್ನ ಹಿಂದೆಯೇ ಕುಳಿತಿದ್ದರು. ಅವರೆಲ್ಲಾ ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕಾಗಿ ಧಾರಾಳ ಧನಸಹಾಯ ಮಾಡಿದ್ದರು. ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಅವರೆಲ್ಲರ ಸಂಪತ್ತು ಮತ್ತು ಅಧಿಕಾರ - ಎರಡೂ ಬಹಳಷ್ಟು ವೃದ್ಧಿಸಿದೆ.’’

‘‘ವಿಶೇಷವಾಗಿ ನಾನು ಎಲಾನ್ ಮಸ್ಕ್ ಎಂಬ ಒಬ್ಬ ವ್ಯಕ್ತಿಯ ಹುಚ್ಚಾಟಗಳ ಬಗ್ಗೆ ಮಾತನಾಡುತ್ತಿದ್ದೇನೆ. ಇಂದು ಅಮೆರಿಕದಲ್ಲಿ ಕೆಳಸ್ತರದಲ್ಲಿರುವ ಶೇ. 52 ಕುಟುಂಬಗಳ ಬಳಿ ಇರುವ ಸಂಪತ್ತು ಆತನೊಬ್ಬನ ಬಳಿ ಇದೆ. ಅಂದರೆ ನಾನು, ತಳಮಟ್ಟದಲ್ಲಿರುವ ಶೇ. 93 ಮಂದಿಯ ಸಂಪತ್ತಿಗಿಂತ ಅಧಿಕ ಸಂಪತ್ತಿನ ಮಾಲಕರಾಗಿರುವ, ಮೇಲ್ಮಟ್ಟದ ಶೇ. 1 ಮಂದಿ ಅತಿಶ್ರೀಮಂತರು ಮಾಡುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡುತ್ತಿದ್ದೇನೆ. ಅಮೆರಿಕದ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ ಬೆಳೆಯುತ್ತಲೇ ಇರುವಾಗ ನಾನು ತೀವ್ರ ಸಂಕಷ್ಟದಲ್ಲಿರುವ ಶೇ. 60 ಬಡ ಅಮೆರಿಕನ್ನರ ಕುರಿತು ಮಾತನಾಡುತ್ತಿದ್ದೇನೆ. ಅವರು ಎಲ್ಲದಕ್ಕೂ ತಮ್ಮ ವೇತನವನ್ನು ಅವಲಂಬಿಸಿರುತ್ತಾರೆ. ಆರೋಗ್ಯಕರ ಆಹಾರಕ್ಕಾಗಿ, ಔಷಧಿಗಾಗಿ, ಬಾಡಿಗೆ ಪಾವತಿಸಲಿಕ್ಕಾಗಿ, ಕಂತುಗಳನ್ನು ಕಟ್ಟಲಿಕ್ಕಾಗಿ, ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ವೆಚ್ಚ ಭರಿಸಲಿಕ್ಕಾಗಿ, ಸ್ವತಃ ತಮ್ಮ ನಿವೃತ್ತ ಜೀವನಕ್ಕಾಗಿ ಏನಾದರೂ ಪುಡಿಕಾಸು ಉಳಿತಾಯ ಮಾಡಲಿಕ್ಕಾಗಿ ಅವರು ಪ್ರತಿದಿನ ಪಾಡು ಪಡುತ್ತಿರುತ್ತಾರೆ. ನಮ್ಮ ದೇಶ ಮಾನವ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ದೇಶ. ಆದರೆ ಜಗತ್ತಿನ ದೊಡ್ಡ ದೇಶಗಳ ಪೈಕಿ, ಅತ್ಯಧಿಕ ಸಂಖ್ಯೆಯಲ್ಲಿ ದಾರಿದ್ರ್ಯ ಪೀಡಿತ ಮಕ್ಕಳು ಮತ್ತು ವೃದ್ಧರು ನಮ್ಮ ದೇಶದಲ್ಲಿದ್ದಾರೆ. ನಾನು ಅವರ ಕುರಿತು ಮಾತನಾಡುತ್ತಿದ್ದೇನೆ. ಇಂದು ಒಂದು ಕಡೆ ಮಸ್ಕ್ ಥರದವರು ಟ್ರಿಲಿಯನೇರ್ ಆಗುತ್ತಿದ್ದಾರೆ. ಇನ್ನೊಂದು ಕಡೆ ನಮ್ಮ ದೇಶದಲ್ಲಿ, ವಿಮೆಯ ರಕ್ಷಣೆಯಿಂದ ವಂಚಿತರಾಗಿರುವ 8.5 ಕೋಟಿ ಬಡವರಿದ್ದಾರೆ ಮತ್ತು ಇಲ್ಲಿಂದ ಕೆಲವೇ ಬ್ಲಾಕ್ ದೂರದಲ್ಲಿರುವ ಹಲವರ ಸಹಿತ, ತಲೆಮೇಲೆ ಸೂರಿಲ್ಲದ 8 ಲಕ್ಷ ಜನರಿದ್ದಾರೆ. ನಾನು ಅವರ ಕುರಿತು ಮಾತನಾಡುತ್ತಿದ್ದೇನೆ. ನಮ್ಮ ಅತಿಶ್ರೀಮಂತರು ನೂರಾರು ಬಿಲಿಯನ್ ಡಾಲರ್‌ಗಳನ್ನು ಎಐ ಮತ್ತು ರೊಬೊಟಿಕ್ಸ್ ತಂತ್ರಜ್ಞಾನವನ್ನು ಬೆಳೆಸುವುದರಲ್ಲಿ ತೊಡಗಿಸಿದ್ದಾರೆ. ಅದರಿಂದಾಗಿ ಮುಂದಿನ ದಶಕದಲ್ಲಿ ಸಂಪೂರ್ಣ ನಿರ್ನಾಮವಾಗಲಿರುವ ಅಮೆರಿಕದ ದುಡಿಯುವ ವರ್ಗದ ಕೋಟ್ಯಂತರ ಉದ್ಯೋಗಗಳ ಕುರಿತು ನಾನು ಮಾತನಾಡುತ್ತಿದ್ದೇನೆ.’’

‘‘ನಾನು ನಮ್ಮಲ್ಲಿನ ಅತಿಶ್ರೀಮಂತ ವರ್ಗವೊಂದರ ಕುರಿತು ಮಾತನಾಡುತ್ತಿದ್ದೇನೆ. ಸಮಾಜವನ್ನು ಆಳುವುದು ತಮ್ಮ ದೇವದತ್ತ ಹಕ್ಕು ಎಂದು ಅವರು ನಂಬಿದ್ದಾರೆ. ಅವರು ತಮಗಾಗಿ ಎಲ್ಲ ಬಗೆಯ ತೆರಿಗೆ ವಿನಾಯಿತಿಯನ್ನು ಬಯಸುತ್ತಾರೆ. ತಮ್ಮ ಅಧಿಕಾರದ ಮೇಲೆ ಯಾವುದೇ ಬಗೆಯ ಉತ್ತರದಾಯಿತ್ವ ಅಥವಾ ನಿರ್ಬಂಧ ಹೇರುವುದನ್ನು ಅವರು ವಿರೋಧಿಸುತ್ತಾರೆ. ನನ್ನ ಅಮೆರಿಕನ್ ಜೊತೆಗಾರರೇ, ಜನರನ್ನಾಳುವುದಕ್ಕೆ ದೊರೆಗಳಿಗೆ ದೇವದತ್ತ ಹಕ್ಕು ಇದೆ ಎಂಬ ನಂಬಿಕೆಯನ್ನು ನಾವು 17ನೇ ಶತಮಾನದಲ್ಲೇ ಧಿಕ್ಕರಿಸಿದ್ದೆವು. ದುಷ್ಟಕೂಟಗಳಿಗೆ ಅಂತಹ ಹಕ್ಕಿದೆ ಎಂಬುದನ್ನು ಇಂದು ಕೂಡಾ ನಾವು ತಿರಸ್ಕರಿಸುತ್ತೇವೆ.’’

‘‘ಇತಿಹಾಸದುದ್ದಕ್ಕೂ ಅಮೆರಿಕದ ಜನತೆ ನ್ಯಾಯಕ್ಕಾಗಿ ಹೋರಾಡಿದಾಗಲೆಲ್ಲಾ ಯಶಸ್ಸು ಸಾಧಿಸಿದ್ದಾರೆ. ಇಂದಿನ ಈ ಹೋರಾಟ ಅಂತಿಮವಲ್ಲ. ಇದು ಆರಂಭ ಮಾತ್ರ. ನಾವೆಲ್ಲ ಜೊತೆಗೂಡಿ ಒಂದಾಗಿ ನಿಂತರೆ, ನಾವು ಬಯಸುವಂತಹ ರಾಷ್ಟ್ರವಾಗಲು ನಮಗೆ ಖಂಡಿತ ಸಾಧ್ಯವಿದೆ. ಸ್ವಾತಂತ್ರ್ಯ, ನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕೆ ಬದ್ಧವಾದ ದೇಶವಾಗಲು ನಮಗೆ ಸಾಧ್ಯವಿದೆ.’’

ನಿಜವಾಗಿ ಬರ್ನಿ ಸ್ಯಾಂಡರ್ಸ್, ದೊಡ್ಡ ಕ್ರಾಂತಿಕಾರಿಯೇನೂ ಅಲ್ಲ. ಅವರು ಸದ್ಯದ ಅಮೆರಿಕನ್ ವ್ಯವಸ್ಥೆಯ ಒಳಗಿನ ವ್ಯಕ್ತಿ. ಅವರು ಬಂಡವಾಳಶಾಹಿತ್ವದ ಬಗ್ಗೆ ಉದಾರ ಧೋರಣೆಯುಳ್ಳ ಡೆಮಾಕ್ರಟ್ ಪಕ್ಷದವರು. ತನ್ನನ್ನು ‘ಸೋಷಿಯಲಿಸ್ಟ್ ಡೆಮಾಕ್ರಟ್’ ಎಂದು ಪರಿಚಯಿಸುವವರು. ಬಂಡವಾಳಿಶಾಹಿತ್ವಕ್ಕೆ ಅವರ ಪ್ರತಿರೋಧ ತೀರಾ ಸೀಮಿತ. ಆದರೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದಕ್ಕೆ ಬಂಡವಾಳಶಾಹಿ ದುಷ್ಟಕೂಟವು ನಡೆಸುತ್ತಿರುವ ಸಂಚುಗಳನ್ನು ವ್ಯವಸ್ಥೆಯ ಒಳಗಿನವರೇ ಸಕಾಲದಲ್ಲಿ ಗುರುತಿಸಿದ್ದಾರೆ, ಅದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಮತ್ತು ಆ ಸಂಚುಗಳ ಫಲವಾಗಿ ನರಳುತ್ತಿರುವ ಜನಸಾಮಾನ್ಯನ ಪರವಾಗಿ ಮಾತನಾಡತೊಡಗಿದ್ದಾರೆ ಎಂಬುದು ಒಂದು ಆಶಾದಾಯಕ ಬೆಳವಣಿಗೆ. ಮುಂದಿನ ದಿನಗಳಲ್ಲಿ ಈ ಸೀಮಿತ ಪ್ರತಿರೋಧವು ನಿಜಾರ್ಥದಲ್ಲಿ ನ್ಯಾಯವನ್ನು ಆಗ್ರಹಿಸುವ ಬೃಹತ್ ಜನಾಂದೋಲನವಾಗಿ ಬೆಳೆಯುವುದೆಂದು ನಿರೀಕ್ಷಿಸೋಣ.

share
ಏಕಲವ್ಯ
ಏಕಲವ್ಯ
Next Story
X