Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಲೆಮಾರಿ ಸಮುದಾಯದ ಮಕ್ಕಳ ‘ಕಲಿಯುವ’...

ಅಲೆಮಾರಿ ಸಮುದಾಯದ ಮಕ್ಕಳ ‘ಕಲಿಯುವ’ ಕನಸುಗಳು

ಅರುಣ್ ಜೋಳದಕೂಡ್ಲಿಗಿಅರುಣ್ ಜೋಳದಕೂಡ್ಲಿಗಿ20 Aug 2024 10:27 AM IST
share
ಅಲೆಮಾರಿ ಸಮುದಾಯದ ಮಕ್ಕಳ ‘ಕಲಿಯುವ’ ಕನಸುಗಳು
ಅಲೆಮಾರಿಗಳು ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತಾರೆ. ಕೆಲವೊಮ್ಮೆ ಮಕ್ಕಳ ಜತೆಯೇ ಅಲೆಮಾರಿತನ ಮಾಡುತ್ತಾರೆ. ಅಂತಹವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಕೆಲವು ಅರೆ ಅಲೆಮಾರಿಗಳು ಒಂದೆಡೆ ನೆಲೆಸಿದರೂ, ಮಕ್ಕಳನ್ನು ಬಿಟ್ಟು ತಂದೆ ತಾಯಿಗಳು ದುಡಿಮೆಗಾಗಿ ಹೊರ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಆಯಾ ಶಾಲೆಯ ಶಿಕ್ಷಕ ಶಿಕ್ಷಕಿಯರು ಈ ಅಲೆಮಾರಿ ಬುಡಕಟ್ಟಿನ ಮಕ್ಕಳ ಬಗೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಕಳೆದ ವರ್ಷ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಘಟನೆ ನಡೆಯಿತು. ತನ್ನ ಹೊಲಕ್ಕೆ ಹಂದಿಗಳು ನುಗ್ಗಿ ದಾಂಧಲೆ ಮಾಡಿದವು ಎಂದು ಪ್ರಹ್ಲಾದ್ ಶೆಟ್ಟರ್ ಎನ್ನುವ ವ್ಯಕ್ತಿ ಶಾಲೆಗೆ ನುಗ್ಗಿ ಹಂದಿ ಸಾಕುವವರ ಮಗಳು ಯಾರೆಂದು ಕೇಳಿ, ಎದ್ದು ನಿಂತ ಗೌರಿಯನ್ನು ಹೊಡೆದು, ಹೊರಗೆ ಎಳೆದು ತರುತ್ತಾನೆ. ಮಗು ತಕ್ಷಣದ ಆಕ್ರಮಣಕ್ಕೆ ಬೆಚ್ಚಿಬಿದ್ದು ಕಿಟಾರನೆ ಕಿರುಚುತ್ತದೆ. ‘‘ಸಾಲಿ ಓದಾಕ ಬಂದರ ಹಂದಿ ಕಾಯೋರು ಯಾರು?’’ ಎಂದು ಕೆಂಗಣ್ಣಿನಿಂದ ಶೆಟ್ಟರ್ ಗದರುತ್ತಾನೆ. ತರಗತಿಯಲ್ಲಿದ್ದ ಅತಿಥಿ ಶಿಕ್ಷಕಿ ಚಂದ್ರಿಕಾ ಬಾದಡಗಿ ಆಕಸ್ಮಿಕ ಘಟನೆಗೆ ವಿಚಲಿತರಾಗುತ್ತಾರೆ. ಇಡೀ ಶಾಲೆಯ ಮಕ್ಕಳ ಎದುರು ‘ಹಂದಿ ಸಾಕೋರ ಮಗಳು’ ಎನ್ನುವ ಅವಮಾನ ಆ ಮಗುವನ್ನು ಘಾಸಿಗೊಳಿಸುತ್ತದೆ. ಈ ಘಟನೆಯ ಸದ್ದು ಕೇಳಿ ಮುಖ್ಯ ಗುರುಗಳಾದ ಅನುರಾಧ ಓಡಿ ಬರುತ್ತಾರೆ. ವಿಚಾರಿಸಿ ಎಸ್‌ಡಿಎಂಸಿ ಸದಸ್ಯರನ್ನೊಳಗೊಂಡಂತೆ ಪೊಲೀಸರಿಗೆ ಲಿಖಿತ ದೂರು ನೀಡುತ್ತಾರೆ.

ಕೊರವ ಅಲೆಮಾರಿ ಸಮುದಾಯದ ಸಂಜೀವಪ್ಪ ಮತ್ತು ದುರುಗಮ್ಮ ಮಕ್ಕಳಾದ ಗೌರಿ, ದೀಪಾ, ಪೇತ್ರು, ಚಿನ್ನುವಿನ ಪುಟ್ಟ ಕುಟುಂಬ. ಇದರಲ್ಲಿ ಮೊದಲ ಮೂರು ಮಕ್ಕಳು ಕ್ರಮವಾಗಿ ಮೂರು, ಎರಡು, ಒಂದನೇ ತರಗತಿಯಲ್ಲಿ ಓದುತ್ತಾರೆ. ಸಂಜೀವಪ್ಪ ಮತ್ತು ಗೌರಮ್ಮ ಜಾತ್ರೆಗಳಲ್ಲಿ ಬಲೂನು ಪೀಪಿ ಮಕ್ಕಳ ಆಟದ ಸಾಮಾನುಗಳನ್ನು ಮಾರುತ್ತಾರೆ. ಹೀಗಾಗಿ ಹೊಟ್ಟೆಪಾಡಿಗಾಗಿ ಊರೂರ ಜಾತ್ರೆಗಳಿಗೆ ಚಿಕ್ಕ ಮಗು ಚಿನ್ನುವಿನೊಂದಿಗೆ ಹೋಗುತ್ತಾರೆ. ಆಗ ತಮಗಿರುವ ಆಶ್ರಯ ಮನೆಯಲ್ಲಿ ಮೂರು ಮಕ್ಕಳು ಮಾತ್ರ ಉಳಿಯುತ್ತಾರೆ. ಒಂಭತ್ತು ವರ್ಷದ ಗೌರಿ ತಾನೇ ಅಡುಗೆ ಮಾಡಿ ತನ್ನ ತಂಗಿ, ತಮ್ಮನಿಗೆ ಊಟ ಮಾಡಿಸಿಕೊಂಡು, ಅವರನ್ನು ತಯಾರಿ ಮಾಡಿ, ತಾನೂ ರೆಡಿಯಾಗಿ ದಿನಾಲು ಮೂವರೂ ಶಾಲೆಗೆ ಹೋಗುತ್ತಾರೆ. ಬಿಸಿಯೂಟ ಇರುವ ಕಾರಣ ಮಧ್ಯಾಹ್ನದ ಊಟದ ಸಮಸ್ಯೆ ಈ ಮಕ್ಕಳಿಗಿಲ್ಲ.

ಸಂಜೀವಪ್ಪನ ಚಿಕ್ಕಪ್ಪನಲ್ಲಿ ಎರಡು ದೊಡ್ಡ ಹಂದಿ ಮತ್ತು ಆರು ಚಿಕ್ಕ ಮರಿಗಳಿವೆ. ಚಿಕ್ಕಪ್ಪ ಹೊಟ್ಟೆಪಾಡಿಗೆ ಸಣ್ಣಪುಟ್ಟ ವ್ಯಾಪಾರಕ್ಕೆ ಹೋಗುತ್ತಾರೆ. ಹೀಗಾಗಿ ಚಿಕ್ಕಪ್ಪನ ಹಂದಿಗಳ ಜವಾಬ್ದಾರಿ ಸಂಜೀವಪ್ಪನ ಮನೆಯವರ ಮೇಲೆ ಬಿದ್ದಿದೆ. ಸಂಜೀವಪ್ಪ ತನ್ನ ಚಿಕ್ಕಪ್ಪನಿಗೆ ಇದೇ ಶೆಟ್ಟರ್ ಅವರಿಂದ ತಾನು ಸಾಕ್ಷಿಯಾಗಿ ಬಡ್ಡಿ ಸಾಲ ಕೊಡಿಸಿದ್ದಾರೆೆ. ಆ ಸಾಲ ಮರುಪಾವತಿಸುವ ಗಡುವು ಇನ್ನು ಎರಡು ತಿಂಗಳಿದೆ. ಹೀಗಾಗಿ ಪ್ರಹ್ಲಾದ್ ಶೆಟ್ಟರಿಗೆ ತಾನು ಸಾಲ ಕೊಟ್ಟವನ ಹಂದಿಗಳೇ ನನ್ನ ಹೊಲದಲ್ಲೂ ದಾಂಧಲೆ ಮಾಡುವ ಬಗ್ಗೆ ಸಿಟ್ಟಿರಬೇಕು. ಹೊಲದಲ್ಲಿ ಹಂದಿಗಳು ದಾಂಧಲೆ ಮಾಡಿದ ಬಗ್ಗೆ ಶೆಟ್ಟರ್ ಸಂಜೀವಪ್ಪಗೆ ಫೋನ್ ಮಾಡಿದಾಗ ‘‘ನಾವು ದುಡಕಂಡು ತಿನ್ನೋಕೆ ಜಾತ್ರೆಗೆ ಬಂದೀವಿ ಧನಿ, ಮಕ್ಕಳಿಗೆ ಹಂದಿ ನೋಡಕಳ್ಳಾಕ ಹೇಳಿದ್ದೆ..ಅವರು ಶಾಲೆಗೆ ಹೋಗಿರಬೇಕು’’ ಎಂದಿದ್ದಾರೆ. ‘‘ಹಂದಿ ಕಾಯೋದು ಬಿಟ್ಟು ನನ್ನ ಮಕ್ಕಳು ಶಾಲೆಗೆ ಹೋದ ಸಿಟ್ಟಿಗೆ ಶೆಟ್ಟರ್ ನನ್ನ ಮಗಳನ್ನು ಹೊಡೆದಿರಬೇಕು’’ ಎಂದು ಸಂಜೀವಪ್ಪ ಮುಗ್ಧವಾಗಿ ಹೇಳುತ್ತಾರೆ.

ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕರ್ನಾಟಕದ ಅಲೆಮಾರಿ ಸಮುದಾಯಗಳ ಮಕ್ಕಳ ಶಿಕ್ಷಣದ ಸ್ಥಿತಿಗತಿಗಳ ಬಗ್ಗೆ ಅರ್ಥ ಮಾಡಿಕೊಳ್ಳಬಹುದು. ಅಲೆಮಾರಿಗಳು ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತಾರೆ. ಕೆಲವೊಮ್ಮೆ ಮಕ್ಕಳ ಜತೆಯೇ ಅಲೆಮಾರಿತನ ಮಾಡುತ್ತಾರೆ. ಅಂತಹವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಕೆಲವು ಅರೆ ಅಲೆಮಾರಿಗಳು ಒಂದೆಡೆ ನೆಲೆಸಿದರೂ, ಮಕ್ಕಳನ್ನು ಬಿಟ್ಟು ತಂದೆ ತಾಯಿಗಳು ದುಡಿಮೆಗಾಗಿ ಹೊರ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಆಯಾ ಶಾಲೆಯ ಶಿಕ್ಷಕ ಶಿಕ್ಷಕಿಯರು ಈ ಅಲೆಮಾರಿ ಬುಡಕಟ್ಟಿನ ಮಕ್ಕಳ ಬಗೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಕೊರವ ಸಮುದಾಯ 2011ರ ಜನಗಣತಿಯ ಪ್ರಕಾರ 56 ಸಾವಿರ ಜನಸಂಖ್ಯೆ ಇದೆ. ಬಹುತೇಕ ಅಲೆಮಾರಿತನದ ಕಾರಣಕ್ಕೆ ಈ ಸಮುದಾಯದ ಮಕ್ಕಳು ಅಕ್ಷರದಿಂದ ವಂಚಿತರಾಗುತ್ತಾರೆ. ಅಂತೆಯೇ ಶಿಕ್ಷಣ ಇಲಾಖೆಯು ಹೀಗೆ ಶಾಲೆಗಳಲ್ಲಿ ದಾಖಲಾದ ಅಲೆಮಾರಿ ಬುಡಕಟ್ಟು ಮಕ್ಕಳ ಬಗ್ಗೆ ಶಿಕ್ಷಕ-ಶಿಕ್ಷಕಿಯರು ವಿಶೇಷ ಗಮನವನ್ನು ನೀಡುವ ಕುರಿತು ಬುಡಕಟ್ಟು ಅಲೆಮಾರಿ ಸಂಘಟನೆಗಳ ಮುಖ್ಯಸ್ಥರ ಬಳಿ ಚರ್ಚಿಸಿ ಕೆಲವು ನಿರ್ದೇಶನಗಳನ್ನು ರೂಪಿಸಬೇಕಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಕೆ.ಎಂ. ಮೇತ್ರಿ ಅವರ ಸಂಪಾದಕತ್ವದಲ್ಲಿ 2007-08ರಲ್ಲಿ ಕರ್ನಾಟಕದ 22 ಅಲೆಮಾರಿ ಸಮುದಾಯಗಳ ಅಧ್ಯಯನ ಕೃತಿಗಳು ಪ್ರಕಟವಾಗಿವೆ. ಈ ಕೃತಿಗಳನ್ನು ಗಮನಿಸಿದರೆ ಅಲೆಮಾರಿ ಸಮುದಾಯದ ಮಕ್ಕಳು ಹೇಗೆ ಶಿಕ್ಷಣ ವಂಚಿತರಾಗುತ್ತಿದ್ದಾರೆ, ಇದಕ್ಕೆ ಕಾರಣಗಳೇನು ಎನ್ನುವುದು ಅರಿವಿಗೆ ಬರುತ್ತದೆ. ಅಲೆಮಾರಿತನಕ್ಕೂ, ಶಿಕ್ಷಣಕ್ಕೂ ವಿರುದ್ಧ ಸಂಬಂಧವಿದೆ. ಅಂದರೆ ನಿರಂತರವಾಗಿ ಅಲೆದಾಡಿಕೊಂಡಿರುವ ಕಾರಣ ಒಂದೆಡೆ ನಿಂತು ಶಿಕ್ಷಣ ಪಡೆಯುವುದು ಈ ಸಮುದಾಯಗಳಿಗೆ ಸಾಧ್ಯವಾಗದು. ಸಹಜವಾಗಿ ಅಲೆಮಾರಿ ಸಮುದಾಯಗಳಿಗೆ ಶಿಕ್ಷಣ ಈಗಲೂ ನಿಲುಕದ ನಕ್ಷತ್ರವೆ. ಅಲೆಮಾರಿ ಸಮುದಾಯಗಳು ಈಗ ಕೆಲವೆಡೆ ನೆಲೆ ನಿಲ್ಲುತ್ತಿದ್ದಾರೆ. ಉಳಿದಂತೆ ಅರೆ ಅಲೆಮಾರಿತನವಿದೆ.

ಕೆಲವು ಅಂಕಿಅಂಶಗಳನ್ನು ನೋಡುವುದಾದರೆ, ಅಲೆಮಾರಿ ಕುರುಬರಲ್ಲಿ 2001ರ ಜನಗಣತಿಯ ಪ್ರಕಾರ ಸಾಕ್ಷರತೆ ಶೇ. 25.03ರಷ್ಟಿದೆ. ಪುರುಷರಲ್ಲಿ ಶೇ. 18.44ರಷ್ಟಿದ್ದರೆ, ಮಹಿಳೆಯರು ಶೇ. 6.59ರಷ್ಟಿದೆ. 2007ರ ಸಮೀಕ್ಷೆ ಪ್ರಕಾರ ಅಲೆಮಾರಿ ಕುರುಬರ ಮಹಿಳೆಯರ ಶಿಕ್ಷಣ ಶೇ. 6.59ರಷ್ಟಿದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಸರಾಸರಿ ಶೈಕ್ಷಣಿಕ ಪ್ರಮಾಣ ಪುರುಷರು ಶೇ. 19.23ರಷ್ಟಿದ್ದರೆ, ಮಹಿಳೆಯರು 10.31ರಷ್ಟಿದ್ದಾರೆ. ಗೋಸಂಗಿ ಸಮುದಾಯದಲ್ಲಿ ಶೇ. 39.59ರಷ್ಟು ಗಂಡಸರ ಶಿಕ್ಷಣವಿದ್ದರೆ, 36.08ರಷ್ಟು ಮಹಿಳೆಯರ ಶಿಕ್ಷಣವಿದೆ. ಬಹುಪಾಲು ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಅಂಕೆಸಂಖ್ಯೆಗಳು ಮೇಲಿನಂತೆಯೇ ಇರುತ್ತದೆ. ಇಲ್ಲಿ ಒಟ್ಟಾರೆ ಅಲೆಮಾರಿ ಸಮುದಾಯದ ಶೈಕ್ಷಣಿಕ ಮಟ್ಟ ತುಂಬಾ ಕೆಳಮಟ್ಟದ್ದಾಗಿದೆ. ಮಹಿಳೆಯರ ಶೈಕ್ಷಣಿಕ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದು ಕಾಣುತ್ತದೆ.

ಇಂದು ಬಹುಪಾಲು ಅಲೆಮಾರಿ ಬುಡಕಟ್ಟುಗಳ ವಾಸದ ನೆಲೆ ನಗರದ ಅಂಚಿಗೆ ಸುತ್ತುವರಿದಿದೆ ಅಥವಾ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಕೈಬಿಡುತ್ತಿದ್ದಾರೆ. ಗೋಸಂಗಿ ಸಮುದಾಯದಲ್ಲಿ ನಗರ ಪ್ರದೇಶದ ವಾಸದ ನೆಲೆ ಶೇ. 70ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ವಾಸದ ನೆಲೆ ಶೇ. 30ರಷ್ಟಿದೆ. ಘಿಸಾಡಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ. 22ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ. 78ರಷ್ಟಿದೆ. ಗೋಂಧಳಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ. 19.47ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಸರಾಸರಿ ಶೇ. 80.53ರಷ್ಟಿದೆ. ಬೈಲ ಪತ್ತಾರ ಸಮುದಾಯ ನಗರ ಭಾಗದಲ್ಲಿ ಶೇ. 51.36 ಇದ್ದರೆ ಗ್ರಾಮೀಣ ಭಾಗದಲ್ಲಿ ಶೇ. 49.31ರಷ್ಟಿದೆ. ದೊಂಬಿದಾಸ ಸಮುದಾಯ ನಗರ ಭಾಗದಲ್ಲಿ ಶೇ. 51.36 ಇದ್ದರೆ ಗ್ರಾಮೀಣ ಭಾಗದಲ್ಲಿ ಶೇ. 49.31ರಷ್ಟಿದೆ. ಕಂಜರ ಭಾಟ ಸಮುದಾಯ ಗ್ರಾಮೀಣ ಭಾಗದಲ್ಲಿ 163 ಜನರು ನೆಲೆಸಿದ್ದರೆ, ನಗರ ಭಾಗದಲ್ಲಿ ಒಟ್ಟು 1,834ರಷ್ಟಿದ್ದಾರೆ.

ಹೀಗೆ ಅಲೆಮಾರಿ ಸಮುದಾಯಗಳು ನಗರದ ಅಂಚಿಗೆ ಸರಿದಂತೆ ಇದು ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರಿದೆಯೇ ಎಂದರೆ ಅದೂ ಇಲ್ಲ. ಬಹುಪಾಲು ಮಕ್ಕಳು ನಗರದ ಕಸ ಆಯುತ್ತಿದ್ದಾರೆ ಇಲ್ಲವೇ ಹೋಟೆಲು ಅಂಗಡಿ ಮುಂಗಟ್ಟುಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕರ್ನಾಟಕ ಸರಕಾರ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಅಲೆಮಾರಿ ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯ ನೀಡಿ, ಈ ನಿಟ್ಟಿನಲ್ಲಿ ಅಲೆಮಾರಿ ಸಮುದಾಯದ ಮಕ್ಕಳನ್ನು ಈ ವಸತಿ ಶಾಲೆಗಳಿಗೆ ಸೇರಿಸುವಂತಹ ಜಾಗೃತಿ ಮೂಡಿಸಿದರೆ ಸ್ವಲ್ಪಮಟ್ಟಿಗಾದರೂ ಬದಲಾವಣೆ ಕಾಣಬಹುದು.

share
ಅರುಣ್ ಜೋಳದಕೂಡ್ಲಿಗಿ
ಅರುಣ್ ಜೋಳದಕೂಡ್ಲಿಗಿ
Next Story
X