Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಐಸಿಯುನಲ್ಲಿರುವ ಮತದಾರನಿಗೂ ಇಆರ್‌ಒ...

ಐಸಿಯುನಲ್ಲಿರುವ ಮತದಾರನಿಗೂ ಇಆರ್‌ಒ ಮುಂದೆ ಹಾಜರಾಗಲು ನೋಟಿಸ್

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾತುಗಳನ್ನು ಗಾಳಿಗೆ ತೂರುತ್ತಿರುವ ಎಇಆರ್‌ಒಗಳು

ಮನೋಜ್ ಆಜಾದ್ಮನೋಜ್ ಆಜಾದ್8 Sept 2026 7:00 AM IST
share
ಐಸಿಯುನಲ್ಲಿರುವ ಮತದಾರನಿಗೂ ಇಆರ್‌ಒ ಮುಂದೆ ಹಾಜರಾಗಲು ನೋಟಿಸ್

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ 2002ರ ಮತಪಟ್ಟಿಯೊಂದಿಗೆ ಹೆಸರು ಅಥವಾ ಸಂಬಂಧಿಕರ ವಿವರಗಳನ್ನು ಮ್ಯಾಪ್ ಮಾಡಲು ಸಾಧ್ಯವಾಗದ ಮತದಾರರಿಗೆ ನೋಟಿಸ್ ನೀಡಲಾಗುತ್ತಿರುವ ಬೆನ್ನಲ್ಲೇ, ಬಾದಾಮಿ ವಿಧಾನಸಭಾ ಕ್ಷೇತ್ರದ ಮತದಾರರೊಬ್ಬರ ಪ್ರಕರಣ ಇದೀಗ ಎಸ್‌ಐಆರ್ ಪ್ರಕ್ರಿಯೆಯಗೆ ನಿದರ್ಶನವಾಗಿದೆ.

ಬಾದಾಮಿ ಕ್ಷೇತ್ರದ ಮತದಾರರಾದ ಮೆರಿಯಾ ಅಂಟೋನಿ ಅವರಿಗೆ ಗಣತಿ ನಮೂನೆಯಲ್ಲಿ ಸಂಬಂಧಿಕರ ಹೆಸರನ್ನು ಭರ್ತಿ ಮಾಡಿಲ್ಲ ಎಂಬ ಕಾರಣಕ್ಕೆ ಚುನಾವಣಾ ಆಯೋಗ ಎಸ್‌ಐಆರ್ ನೋಟಿಸ್ ನೀಡಿದೆ. 2002ರ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಮೆರಿಯಾ ಅಂಟೋನಿ ಅವರ ಹೆಸರಾಗಲಿ, ನಮೂನೆಯಲ್ಲಿ ಸಂಬಂಧಿಕರಾಗಿ ನಮೂದಿಸಬೇಕಿದ್ದ ವ್ಯಕ್ತಿಯ ಹೆಸರಾಗಲಿ ಪತ್ತೆಯಾಗಿರಲಿಲ್ಲ ಎಂದು ನಾಗರಿಕ ಮತಕಾವಲು ಸಮಿತಿಯ ಧಾರವಾಡ ಜಿಲ್ಲೆಯ ಸಂಯೋಜಕಿ ಡಾ.ಇಸಾಬೆಲ್ ಝೇವಿಯರ್ ಆರೋಪ ಮಾಡಿದ್ದಾರೆ.

2002ರ ಮತಪಟ್ಟಿಯಲ್ಲಿ ಇಲ್ಲದ ಸಂಬಂಧಿಕರ ಹೆಸರನ್ನು ಆಧಾರವಾಗಿಟ್ಟುಕೊಂಡು ಗಣತಿ ನಮೂನೆಯಲ್ಲಿ ವಿವರ ಭರ್ತಿ ಮಾಡುವುದು ಹೇಗೆ ಸಾಧ್ಯ? ಹಳೆಯ ಮತದಾರರ ಮತ್ತು ಅವರ ಸಂಬಂಧಿಕರ ಹೆಸರು ಮತಪಟ್ಟಿಯಲ್ಲಿ ಲಭ್ಯವಿಲ್ಲದಿದ್ದರೆ, ಆ ಹೆಸರನ್ನು ನಮೂದಿಸದಿರುವುದು ಮತದಾರರ ತಪ್ಪೇ? ಆದಾಗ್ಯೂ, ಮುಖ್ಯಚುನಾವಣಾ ಅಧಿಕಾರಿ ವಿ.ಅನ್ಬುಕುಮಾರ್ ಹಲವು ಬಾರಿ ಸೆಲ್ಪ್ ಮ್ಯಾಪಿಂಗ್ ಮತ್ತು ಪ್ರೊಜಿನಿ ಮ್ಯಾಪಿಂಗ್ ಭರ್ತಿ ಮಾಡಲು ಸಾಧ್ಯವಾಗಿದ್ದರೆ, ಮೂರನೇ ವರ್ಗದಲ್ಲಿ ತಮ್ಮ ಹೆಸರು ಆಧಾರ್ ಸಂಖ್ಯೆಯನ್ನು ನಮೂದಿಸಿ ಗಣತಿ ನಮೂನೆಗೆ ಸಹಿ ಹಾಕಿ ಕೊಡಿ ಎಂದು ಹೇಳಿದ್ದಾರೆ. ಆದರೆ ಈಗ ನೋಟಿಸ್ ಕೊಡುತ್ತಿರುವುದಾದರೂ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ನೋಟಿಸ್ ಪಡೆದುಕೊಳ್ಳಬೇಕಿರುವ ಮೆರಿಯಾ ಅಂಟೋನಿ ಅವರು, ಸದ್ಯ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ. ಆದರೂ, ಎಸ್‌ಐಆರ್ ನೋಟಿಸ್‌ಗೆ ಸಂಬಂಧಿಸಿದ ವಿಚಾರಣೆಗೆ ಅಗತ್ಯ ದಾಖಲೆಗಳೊಂದಿಗೆ ಸಹಾಯಕ ಚುನಾವಣಾ ನೋಂದಣಾಧಿಕಾರಿ ಮುಂದೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ಸೂಚಿಸುತ್ತಿರುವುದು ರಾಜ್ಯ ಮುಖ್ಯಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಮಾತುಗಳನ್ನು ಇಆರ್‌ಒಗಳು ಗಾಳಿಗೆ ತೂರುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರು ಆರೋಗ್ಯದ ಗಂಭೀರ ಸ್ಥಿತಿಯಲ್ಲಿದ್ದರೂ ಎಇಆರ್‌ಒ ಮುಂದೆ ದಾಖಲೆಗಳ ಸಮೇತ ಖುದ್ದಾಗಿ ಹಾಜರಾಗಬೇಕೆಂಬ ಒತ್ತಾಯ ಎಷ್ಟು ಸರಿ? ಅನಾರೋಗ್ಯದ ಪರಿಸ್ಥಿತಿಯನ್ನು ಪರಿಗಣಿಸಿ ವಿಚಾರಣೆಯನ್ನು ಮುಂದೂಡುವುದು, ಸಂಬಂಧಿಕರು ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡುವುದು ಅಥವಾ ಅಧಿಕಾರಿಗಳೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತಹ ಪರ್ಯಾಯ ವ್ಯವಸ್ಥೆಯನ್ನು ಯಾಕೆ ಮಾಡಿಲ್ಲ ಎಂದು ಇಸಾಬೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‌ಐಆರ್‌ನ ಉದ್ದೇಶ ಅರ್ಹ ಮತದಾರರ ಹೆಸರುಗಳನ್ನು ಖಚಿತಪಡಿಸಿಕೊಳ್ಳುವುದೇ ಹೊರತು, ದಾಖಲೆ ಅಥವಾ ಹಳೆಯ ಮ್ಯಾಪಿಂಗ್‌ನ ಕೊರತೆಯಿಂದಾಗಿ ಅರ್ಹ ಮತದಾರರಿಗೆ ಅನಗತ್ಯ ತೊಂದರೆ ಉಂಟುಮಾಡುವುದಲ್ಲ. ನೋಟಿಸ್ ಬಂದಿರುವ ಪ್ರತಿಯೊಬ್ಬ ಮತದಾರನಿಗೂ ತನ್ನ ಹಕ್ಕನ್ನು ಸಮರ್ಥಿಸಿಕೊಳ್ಳಲು ಸೂಕ್ತ ಅವಕಾಶ ನೀಡುವುದು ಈ ಪ್ರಕ್ರಿಯೆಯ ಅತ್ಯಂತ ಪ್ರಮುಖ ಅಂಶವಾಗಿದೆ.

ಇದು ಕೇವಲ ಮೆರಿಯಾ ಅಂಟೋನಿ ಅವರ ವೈಯಕ್ತಿಕ ಸಮಸ್ಯೆಯಲ್ಲ. ಹಳೆಯ ಮತಪಟ್ಟಿಯಲ್ಲಿ ಸಂಬಂಧಿಕರ ಹೆಸರು ಸಿಗದಿರುವುದು, ಗಣತಿ ನಮೂನೆಯಲ್ಲಿ ವಿವರ ತುಂಬಲು ಸಾಧ್ಯವಾಗದಿರುವುದು, ಬಳಿಕ ಅದೇ ಕಾರಣಕ್ಕೆ ನೋಟಿಸ್ ಬರುವುದು ಮತ್ತು ನೋಟಿಸ್ ಬಂದ ನಂತರ ಅನಾರೋಗ್ಯ, ವೃದ್ಧಾಪ್ಯ, ಅಂಗವೈಕಲ್ಯ ಅಥವಾ ದೂರದ ಸ್ಥಳದಂತಹ ಕಾರಣಗಳಿಂದ ಚುನಾವಣಾಧಿಕಾರಿಗಳ ಮುಂದೆ ಹಾಜರಾಗಲು ಸಾಧ್ಯವಾಗದ ಮತದಾರರ ಸಮಸ್ಯೆಯನ್ನೂ ಮುನ್ನೆಲೆಗೆ ತರುತ್ತದೆ.

ಇತರ ರಾಜ್ಯಗಳಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿಯೂ ವೈಯಕ್ತಿಕ ಹಾಜರಾತಿಗೆ ಸಂಬಂಧಿಸಿದಂತೆ, ಚುನಾವಣಾ ಆಯೋಗ ಕೆಲವು ವರ್ಗಗಳಿಗೆ ವಿನಾಯಿತಿಗಳನ್ನು ನೀಡಿರುವ ಉದಾಹರಣೆಗಳಿವೆ. ಪಶ್ಚಿಮ ಬಂಗಾಳದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸೇರಿದಂತೆ ಕೆಲವು ವರ್ಗದ ಮತದಾರರಿಗೆ ವೈಯಕ್ತಿಕವಾಗಿ ಹಾಜರಾಗುವ ಬದಲು ಕುಟುಂಬದ ಸದಸ್ಯರ ಮೂಲಕ ವಿಚಾರಣೆಯಲ್ಲಿ ಪ್ರತಿನಿಧಿಸುವ ಅವಕಾಶ ನೀಡಲಾಗಿತ್ತು. ಉತ್ತರ ಪ್ರದೇಶದಲ್ಲಿಯೂ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗದ ಮತದಾರರು ಲಿಖಿತವಾಗಿ ಅಧಿಕಾರ ನೀಡಿದ ಪ್ರತಿನಿಧಿಯ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಹೀಗಿರುವಾಗ ಕರ್ನಾಟಕದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮತದಾರರಿಗೆ ಇಂತಹ ಮಾನವೀಯ ವಿನಾಯಿತಿ ಅಥವಾ ಪರ್ಯಾಯ ವ್ಯವಸ್ಥೆ ಏಕೆ ಇರಬಾರದು?

-ಸರೋವರ ಬೆಂಕಿಕೆರೆ, ವಕ್ತಾರ, ನಾಗರಿಕ ಮತಕಾವಲು ಸಮಿತಿ

ಸುಪ್ರೀಂಕೋರ್ಟ್ ಆದೇಶದಲ್ಲೇ ಅಧಿಕೃತ ಪ್ರತಿನಿಧಿಗೆ ಅವಕಾಶ

ಎಸ್‌ಐಆರ್ ಮಾರ್ಗಸೂಚಿಗಳಲ್ಲಿ ಮತದಾರರನ್ನು ಇತರರು ಪ್ರತಿನಿಧಿಸುವ ಕುರಿತು ನಿರ್ದಿಷ್ಟ ನಿಯಮಗಳಿಲ್ಲದಿದ್ದರೂ, ಪಶ್ಚಿಮ ಬಂಗಳಾದ ಎಸ್‌ಐಆರ್‌ಗೆ ಸಂಬಂಧಿಸಿದಂತೆ 2026ರ ಜ.19 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಲ್ಲಿ, ಮತದಾರರನ್ನು ‘ಅಧಿಕೃತ ಪ್ರತಿನಿಧಿ’ ಮೂಲಕ ಪ್ರತಿನಿಧಿಸಬಹುದೆಂದು ಹೇಳಿದೆ.

ಆದೇಶದ ಪ್ಯಾರಾ 4(2)ರಲ್ಲಿ, ಎಲ್ಲ ಪರಿಣಾಮಕ್ಕೊಳಗಾದ ವ್ಯಕ್ತಿಗಳಿಗೆ ದಾಖಲೆಗಳು, ಇತರ ಸಂಬಂಧಿತ ಮಾಹಿತಿಗಳೂ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡುವುದರ ಜೊತೆಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಉದ್ದೇಶಕ್ಕಾಗಿ ಅದೇ ಸಂದರ್ಭದಲ್ಲಿ ವೈಯಕ್ತಿಕವಾಗಿ ಅಥವಾ ಅವರೊಂದಿಗೆ ಹಾಜರಾಗಿರುವ ಅಧಿಕೃತ ಪ್ರತಿನಿಧಿಯ ಮೂಲಕ ವಿಚಾರಣೆಗೆ ಒಳಗಾಗುವ ಅವಕಾಶವನ್ನೂ ನೀಡಬೇಕು ಎಂದು ಹೇಳಿದೆ.

ರಾಜ್ಯ ಮುಖ್ಯಚುನಾವಣಾಧಿಕಾರಿ ಸುದ್ದಿಗೋಷ್ಠಿಯೊಂದರಲ್ಲಿ, ನೋಟಿಸ್ ಪಡೆದುಕೊಳ್ಳಲಿರುವ ಯಾವುದೇ ಮತದಾರರು 85 ವರ್ಷ ಮೇಲ್ಪಟ್ಟವರಾಗಿದ್ದರೆ, ಅನಾರೋಗ್ಯದಿಂದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, ಜೈಲಿನಲ್ಲಿರುವ ಕೈದಿಗಳು ಮತ್ತು ಅವರು ವಿಶೇಷ ಚೇತನರು ಆಗಿದ್ದರೆ ಅವರಿಗೆ ಕಡ್ಡಾಯವಾಗಿ ಎಇಆರ್‌ಒ/ಇಆರ್‌ಒಗಳು ಮನೆಗೆ ತೆರಳಿ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಬೇಕು.

Tags

EROVoter
share
ಮನೋಜ್ ಆಜಾದ್
ಮನೋಜ್ ಆಜಾದ್
Next Story
X