Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬೂತ್‌ವೊಂದರಲ್ಲಿ ನೋಟಿಸ್ ನೀಡಿದ 141...

ಬೂತ್‌ವೊಂದರಲ್ಲಿ ನೋಟಿಸ್ ನೀಡಿದ 141 ಮಂದಿಯಲ್ಲಿ 110 ಮಂದಿ ಮುಸ್ಲಿಮರು : ಬಿಎಲ್‌ಒಗಳ ವಿರುದ್ಧ ನಾಗರಿಕರ ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ7 Sept 2026 2:55 PM IST
share
ಬೂತ್‌ವೊಂದರಲ್ಲಿ ನೋಟಿಸ್ ನೀಡಿದ 141 ಮಂದಿಯಲ್ಲಿ 110 ಮಂದಿ ಮುಸ್ಲಿಮರು : ಬಿಎಲ್‌ಒಗಳ ವಿರುದ್ಧ ನಾಗರಿಕರ ಆಕ್ರೋಶ

ಬೆಂಗಳೂರು : ತುಮಕೂರು ಜಿಲ್ಲೆಯ ಬೂತ್‌ವೊಂದರಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನೋಟಿಸ್ ಪ್ರಕ್ರಿಯೆಯು ತೀವ್ರ ತಾರತಮ್ಯದ ಆರೋಪ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ತಾರ್ಕಿಕ ವ್ಯತ್ಯಾಸ ಮತ್ತು ಅನ್‌ಮ್ಯಾಪಡ್’ ಎಂಬ ಕಠಿಣ ತಾಂತ್ರಿಕ ನಿಯಮಗಳಡಿಯಲ್ಲಿ ನಾಗರಿಕರಿಗೆ ನೋಟಿಸ್ ಜಾರಿ ಮಾಡುತ್ತಿರುವುದು ತಳಮಟ್ಟದಲ್ಲಿ ಬೂತ್‌ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತ್ತು ಸಾರ್ವಜನಿಕರ ನಡುವೆ ನೇರ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಮತ್ತು ನಿಖರಗೊಳಿಸುವ ಉದ್ದೇಶ ಹೊಂದಿದ್ದರೂ, ತಳಮಟ್ಟದ ಅನುಷ್ಠಾನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಮತದಾರರು ಮತ್ತು ಬಿಎಲ್‌ಒಗಳ ನಡುವೆ ಸಂಘರ್ಷ ಉಂಟುಮಾಡುತ್ತಿವೆ. ತುಮಕೂರಿನ ಬೂತ್‌ವೊಂದರಲ್ಲಿ ಒಟ್ಟು 1,143 ಮತದಾರರು ಇದ್ದಾರೆ. ಈ ಪೈಕಿ 141 ಜನರಿಗೆ ಇಆರ್‌ಒ/ಎಇಆರ್‌ಒ ಗಳು ತಾರ್ಕಿಕ ವ್ಯತ್ಯಾಸ ಮತ್ತು ಅನ್‌ಮ್ಯಾಪ್‌ಡ್ ವರ್ಗದಲ್ಲಿ ನೋಟಿಸ್ ನೀಡಲಾಗಿದೆ. ಬೂತ್‌ನಲ್ಲಿ ನೋಟಿಸ್ ಪಡೆದ 141 ಜನರಲ್ಲಿ 110 ಮಂದಿ ಮತದಾರರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಂದರೆ, ಶೇ.78ರಷ್ಟು ಮಂದಿ ಮುಸ್ಲಿಮರು. ಒಟ್ಟು ನೋಟಿಸ್ ಶೇಕಡವಾರು ಪ್ರಮಾಣದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನೇ ಗುರಿಯಾಗಿಸಿಕೊಂಡಂತೆ ಈ ಪ್ರಕ್ರಿಯೆ ಕಾಣಿಸುತ್ತಿರುವುದು ತೀವ್ರ ಆತಂಕ, ಸಂಶಯ ಮತ್ತು ಅಸಮಾಧಾನವನ್ನು ಹುಟ್ಟುಹಾಕಿದೆ ಎಂದು ನೋಟಿಸ್ ಪಡೆದುಕೊಂಡ ಮತದಾರ ಮುಹಮ್ಮದ್ ಬೇಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯವಾಗಿ ನೋಟಿಸ್ ಪಡೆದ ಮತದಾರರೊಂದಿಗೆ ಮಾತನಾಡಿದಾಗ, ‘2002ರ ಮತದಾರರ ಪಟ್ಟಿಯಲ್ಲಿರುವ ಹೆಸರು ಮತ್ತು ಈಗಿನ ಮತದಾರರ ಪಟ್ಟಿಯಲ್ಲಿರುವ ಹೆಸರಿನ ನಡುವಿನ ಹೊಂದಾಣಿಕೆಯ ಕೊರತೆ, ಸೆಲ್ಫ್ ಮ್ಯಾಪಿಂಗ್ ಮತ್ತು ಪ್ರೊಜಿನಿ ಮ್ಯಾಪಿಂಗ್ ಭರ್ತಿ ಮಾಡದೇ ಸಹಿ ಹಾಕಿಕೊಟ್ಟಿರುವುದು, ಹೆಸರುಗಳಲ್ಲಿ ಅಕ್ಷರ ಬದಲಾವಣೆ, ಕುಟುಂಬದ ಹೆಸರು ಅಥವಾ ತಂದೆ-ತಾಯಿಯ ನಡುವಿನ ವಯಸ್ಸಿನ ಅಂತರ ಹಾಗೂ ಇತರ ಕಾರಣಗಳಿಂದಾಗಿ ಮತದಾರರು ನೋಟಿಸ್ ಪಡೆದುಕೊಂಡಿದ್ದಾರೆ’ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಯೋಜಕಿ ಇಂದಿರಮ್ಮ ತಿಳಿಸಿದ್ದಾರೆ.

ನೋಟಿಸ್ ಬರಲು ಮುಖ್ಯ ಕಾರಣವೆಂದರೆ, 2002ರ ಮತದಾರರ ಪಟ್ಟಿಯಲ್ಲಿದ್ದ ಹೆಸರಿಗೂ ಮತ್ತು ಈಗಿನ ಪಟ್ಟಿಯಲ್ಲಿರುವ ಹೆಸರಿಗೂ ತಾಳೆಯಾಗದಿರುವುದು. ಎರಡು ದಶಕಗಳ ಹಿಂದೆ ಕಂಪ್ಯೂಟರೀಕರಣ ಅಥವಾ ಹಸ್ತಪ್ರತಿ ಬರೆಯುವಾಗ ಅಧಿಕಾರಿಗಳು ಮಾಡಿದ ಕಾಗುಣಿತ ದೋಷಗಳು, ಹೆಸರುಗಳ ಅದಲು-ಬದಲುಗಳು ಈಗ ನಾಗರಿಕರ ಪೌರತ್ವದ ಹಕ್ಕನ್ನೇ ಪ್ರಶ್ನಿಸುವ ಮಟ್ಟಿಗೆ ಬಂದು ನಿಂತಿವೆ. ಕೂಲಿ-ನಾಲಿ ಮಾಡಿ ಬದುಕುವ ಜನಸಾಮಾನ್ಯರು ಈಗ ದಾಖಲೆಗಳನ್ನು ಹುಡುಕಿ ತರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕಚೇರಿಗಳಿಂದ ಕಚೇರಿಗಳಿಗೆ ಅಲೆಯಲಾಗದೆ, ಸೂಕ್ತ ದಾಖಲೆಗಳು ಸಿಗದೆ ಬಡ ನಾಗರಿಕರು ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಬಿಎಲ್‌ಒ ಮನೆ ಮುಂದೆ ಆಕ್ರೋಶ: ‘ತಪ್ಪು ನಿಮ್ಮದೇ’

ಮತದಾನದ ಹಕ್ಕು ಕೈತಪ್ಪುವ ಭೀತಿಯಲ್ಲಿರುವ ನಾಗರಿಕರು ಈಗ ಬಿಎಲ್‌ಒಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತದಾರರು ನೇರವಾಗಿ ಬಿಎಲ್‌ಒಗಳ ಮನೆ ಮುಂದೆ ಜಮಾಯಿಸಿ ಗಲಾಟೆ ಮಾಡುತ್ತಿರುವ ಪ್ರಕರಣಗಳು ಕೇಳಿಬರುತ್ತಿವೆ. ‘ಅಂದು ತಪ್ಪು ತಪ್ಪಾಗಿ ಬರೆದು, ಪಟ್ಟಿಗೆ ಸೇರಿಸಿದ್ದು ನೀವೇ, ಅಕ್ಷರ ದೋಷಗಳನ್ನು ಮಾಡಿದ್ದು ಚುನಾವಣಾ ಆಯೋಗ. ಇದೀಗ ನಿಮ್ಮದೆ ತಪ್ಪುಇಟ್ಟುಕೊಂಡು, ನಮ್ಮನ್ನು ಅಪರಾಧಿಗಳಂತೆ ನೋಡಿ ನೋಟಿಸ್ ನೀಡಿ ಕಾಡುತ್ತಿರುವುದು ಎಷ್ಟು ಸರಿ? ಎಂದು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ದಾಖಲೆಗಳಿಗೆ ಪರದಾಟ; ಅವಧಿ ವಿಸ್ತರಿಸಲು ಒತ್ತಾಯ

ನೋಟಿಸ್ ಪಡೆದುಕೊಳ್ಳುತ್ತಿರುವ ಮತದಾರರು ಈಗ ಎಸ್‌ಐಆರ್‌ಗೆ ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಸರಕಾರ ಶಾಶ್ವತ ನಿವಾಸಿ ಪತ್ರ, ಜಾತಿ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದ್ದರೂ, ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಮನೆ-ಮನೆಗೆ ತಲುಪಿಸಿಹೋಗುತ್ತಿದ್ದಾರೆ. ಆದರೆ, ಮುಸ್ಲಿಮ್ ಸಮುದಾಯಕ್ಕೆ ಸೇರಿದವರಿಗೆ ಈ ಎರಡೂ ದಾಖಲೆಗಳು ಸಿಗುವುದು ಕಷ್ಟಸಾಧ್ಯವಾಗಿದೆ. ಆದುದರಿಂದ ಚು.ಆಯೋಗ ನೋಟಿಸ್ ಪಡೆದುಕೊಂಡ ಮತದಾರರಿಗೆ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಕಾಲಾವಕಾಶ ನೀಡಬೇಕು.

-ಇಂದಿರಮ್ಮ, ಎದ್ದೇಳು ಕರ್ನಾಟಕ

Tags

SIRTumkur
share
ವಾರ್ತಾಭಾರತಿ
ವಾರ್ತಾಭಾರತಿ
Next Story
X