Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಒಬ್ಬ ಅಧಿಕಾರಿ-ಒಂದು ಸರಕಾರಿ ಶಾಲೆ’...

‘ಒಬ್ಬ ಅಧಿಕಾರಿ-ಒಂದು ಸರಕಾರಿ ಶಾಲೆ’ ಯೋಜನೆ ಜಾರಿಗೆ ಬರಲಿ

ಡಾ.ಡಿ.ಸಿ. ನಂಜುಂಡಡಾ.ಡಿ.ಸಿ. ನಂಜುಂಡ27 Aug 2026 12:05 PM IST
share
‘ಒಬ್ಬ ಅಧಿಕಾರಿ-ಒಂದು ಸರಕಾರಿ ಶಾಲೆ’ ಯೋಜನೆ ಜಾರಿಗೆ ಬರಲಿ

ಸರಕಾರಿ ಶಾಲೆಗಳು ಕೇವಲ ಶಿಕ್ಷಣ ನೀಡುವ ಸಂಸ್ಥೆಗಳಲ್ಲ; ಅವು ಬಡ ಕುಟುಂಬಗಳ ಮಕ್ಕಳ ಭವಿಷ್ಯ ರೂಪಿಸುವ ಪ್ರಮುಖ ಕೇಂದ್ರಗಳಾಗಿವೆ. ಆದರೆ ಅನೇಕ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿದ್ದರೂ, ವೃತ್ತಿ ಮಾರ್ಗದರ್ಶನ, ತಂತ್ರಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಮತ್ತು ಆತ್ಮವಿಶ್ವಾಸ ಬೆಳೆಸುವ ಅವಕಾಶಗಳು ಸೀಮಿತವಾಗಿವೆ. ಈ ಹಿನ್ನೆಲೆಯಲ್ಲಿ‘ ಒಬ್ಬ ಅಧಿಕಾರಿ-ಒಂದು ಸರಕಾರಿ ಶಾಲೆ’ ಎಂಬ ಮೆಂಟರ್‌ಶಿಪ್ ಯೋಜನೆಯನ್ನು ರೂಪಿಸುವುದು ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಬಹುದು. ಕರ್ನಾಟಕದಲ್ಲಿ ಸಾವಿರಾರು ಸರಕಾರಿ ಶಾಲೆಗಳು ಮತ್ತು ಲಕ್ಷಾಂತರ ವಿದ್ಯಾರ್ಥಿಗಳಿದ್ದಾರೆ. 2024-25ರ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 74,859 ಶಾಲೆಗಳು ಮತ್ತು 1.18 ಕೋಟಿ ವಿದ್ಯಾರ್ಥಿಗಳು ಇದ್ದಾರೆ. ಇಷ್ಟೊಂದು ದೊಡ್ಡ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಸರಕಾರದ ಅನುದಾನ ಮತ್ತು ಮೂಲಸೌಕರ್ಯದಿಂದ ಮಾತ್ರ ಬಲಪಡಿಸಲು ಸಾಧ್ಯವಿಲ್ಲ. ಅನುಭವ, ನಾಯಕತ್ವ ಮತ್ತು ಪ್ರೇರಣೆಯೂ ಅಗತ್ಯ. ಇಲ್ಲಿ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳ ಪಾತ್ರ ಮಹತ್ವ ಪಡೆಯುತ್ತದೆ.

ಪ್ರತಿಯೊಬ್ಬ ಐಎಎಸ್, ಐಪಿಎಸ್ ಅಥವಾ ಕೆಎಎಸ್ ಅಧಿಕಾರಿಯೂ ತಮ್ಮ ವ್ಯಾಪ್ತಿಯಲ್ಲಿರುವ ಒಂದು ಸರಕಾರಿ ಶಾಲೆಯನ್ನು ‘ಮೆಂಟರ್ ಶಾಲೆ’ಯಾಗಿ ಆಯ್ಕೆ ಮಾಡಬಹುದು. ಇದರ ಉದ್ದೇಶ ಶಾಲೆಯ ಆಡಳಿತವನ್ನು ಅಧಿಕಾರಿಗಳು ವಹಿಸಿಕೊಳ್ಳುವುದಲ್ಲ. ಬದಲಾಗಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್‌ಡಿಎಂಸಿ ಮತ್ತು ಪೋಷಕರೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಮಾರ್ಗದರ್ಶನ ನೀಡುವುದು.

ಉದಾಹರಣೆಗೆ, ಒಂದು ಗ್ರಾಮೀಣ ಸರಕಾರಿ ಪ್ರೌಢಶಾಲೆಯಲ್ಲಿ 150 ವಿದ್ಯಾರ್ಥಿಗಳಿದ್ದಾರೆ ಎಂದು ಕಲ್ಪಿಸೋಣ. ಆ ಶಾಲೆಗೆ ಒಬ್ಬ ಕೆಎಎಸ್‌ಅಧಿಕಾರಿ ಮೆಂಟರ್ ಆಗುತ್ತಾರೆ. ಅವರು ತಿಂಗಳಿಗೆ ಕನಿಷ್ಠ ಒಂದು ಬಾರಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬಹುದು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಿಯುಸಿ ನಂತರದ ಶಿಕ್ಷಣ, ವಿದ್ಯಾರ್ಥಿವೇತನಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವಿವಿಧ ವೃತ್ತಿಗಳ ಬಗ್ಗೆ ಮಾಹಿತಿ ನೀಡಬಹುದು. ಐಎಎಸ್ ಅಧಿಕಾರಿಯೊಬ್ಬರು ಆಡಳಿತ ಸೇವೆಗಳ ಬಗ್ಗೆ ಮಾತನಾಡಬಹುದು. ಐಪಿಎಸ್ ಅಧಿಕಾರಿಯೊಬ್ಬರು ಕಾನೂನು, ಸೈಬರ್ ಸುರಕ್ಷತೆ, ಮಾದಕ ವಸ್ತುಗಳ ದುಷ್ಪರಿಣಾಮ ಮತ್ತು ಪೊಲೀಸ್ ಸೇವೆಯ ಬಗ್ಗೆ ಅರಿವು ಮೂಡಿಸಬಹುದು. ಇಂತಹ ಭೇಟಿಗಳು ಕೇವಲ ಭಾಷಣಗಳಿಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳೇ ಉತ್ತರ ಕಂಡುಕೊಳ್ಳುವಂತೆ ಮೆಂಟರ್‌ಶಿಪ್ ರೂಪಿಸಬೇಕು.

ಕರ್ನಾಟಕದಲ್ಲಿ ‘ಒಬ್ಬ ಅಧಿಕಾರಿ-ಒಂದು ಸರಕಾರಿ ಶಾಲೆ’ ಎಂಬ ಪರಿಕಲ್ಪನೆಯನ್ನು ಜಾರಿಗೆ ತರುವ ಮೊದಲು, ದೇಶದ ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ಕೆಲವು ಪ್ರಯತ್ನಗಳನ್ನು ಗಮನಿಸುವುದು ಅಗತ್ಯ. ಪಂಜಾಬ್ ಅತ್ಯಂತ ಸ್ಪಷ್ಟವಾದ ಉದಾಹರಣೆ. 2025ರಲ್ಲಿ ಪಂಜಾಬ್ ಸರಕಾರವು ‘School Mentorship Programme’ ಆರಂಭಿಸಿ, ಐಎಎಸ್, ಐಪಿಎಸ್ ಪಿಸಿಎಸ್ ಮತ್ತು ಪಿಪಿಎಸ್ ಸೇರಿದಂತೆ 80 ಅಧಿಕಾರಿಗಳಿಗೆ 80 ಸರಕಾರಿ ಶಾಲೆಗಳನ್ನು ಮೆಂಟರ್‌ಶಿಪ್‌ಗೆ ನೀಡಿತು. ಈ ಯೋಜನೆಯ ವಿಶೇಷತೆ ಎಂದರೆ ಅಧಿಕಾರಿಗಳು ಕೇವಲ ಶಾಲೆಗೆ ಭೇಟಿ ನೀಡಿ ಭಾಷಣ ಮಾಡುವುದಲ್ಲ; ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ, ವೃತ್ತಿ ಮಾರ್ಗದರ್ಶನ ಮತ್ತು ಶಿಕ್ಷಕರಿಗೆ ಬೆಂಬಲ ನೀಡುವ ಉದ್ದೇಶ ಹೊಂದಿದ್ದಾರೆ. ಅಧಿಕಾರಿಗಳು ತಮ್ಮ ಹುದ್ದೆ ಅಥವಾ ವರ್ಗಾವಣೆಯ ಕಾರಣದಿಂದ ಶಾಲೆಯನ್ನು ಬದಲಿಸದೆ, ಕನಿಷ್ಠ ಐದು ವರ್ಷಗಳ ಕಾಲ ಅದೇ ಶಾಲೆಯೊಂದಿಗೆ ಸಂಪರ್ಕದಲ್ಲಿರಲು ಪ್ರೋತ್ಸಾಹಿಸಲಾಗಿದೆ. ತಿಂಗಳಿಗೆ ಕನಿಷ್ಠ ಒಂದು ಬಾರಿ ನೇರ ಭೇಟಿ ಮತ್ತು ಅಗತ್ಯವಿದ್ದರೆ ಆನ್‌ಲೈನ್ ಸಂಪರ್ಕ ಇರಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈ ಮಾದರಿಯ ಮತ್ತೊಂದು ಮುಖ್ಯ ಅಂಶವೆಂದರೆ ಅಧಿಕಾರಿ ಬಾಸ್ ಅಲ್ಲ, ಮೆಂಟರ್ ಎಂಬ ಪರಿಕಲ್ಪನೆ. ಅಧಿಕಾರಿಗಳು ಶಾಲೆಯ ದಿನನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ವೃತ್ತಿ ಅವಕಾಶಗಳ ಬಗ್ಗೆ ತಿಳಿಸುವುದು, ಶಿಕ್ಷಕರಿಗೆ ಹೊಸ ಬೋಧನಾ ವಿಧಾನಗಳ ಬಗ್ಗೆ ಸಹಾಯ ಮಾಡುವುದು ಮತ್ತು ಅಗತ್ಯವಿದ್ದಾಗ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಸಂಪರ್ಕಿಸುವುದು ಅವರ ಪಾತ್ರವಾಗಿದೆ. ಪಂಜಾಬ್‌ನಲ್ಲೇ ಇದರ ಕೆಲವು ನಿರ್ದಿಷ್ಟ ಉದಾಹರಣೆಗಳೂ ಇವೆ. ಲುಧಿಯಾನಾದ ಡೆಪ್ಯುಟಿ ಕಮಿಷನರ್ ಹಿಮಾಂಶು ಜೈನ್ ಅವರು School of Eminence, Dholewal ಅನ್ನು ಮೆಂಟರ್‌ಶಿಪ್‌ಗೆ ತೆಗೆದುಕೊಂಡಿದ್ದರು. ಅಮೃತಸರದ ಡೆಪ್ಯುಟಿ ಕಮಿಷನರ್ ಸಾಕ್ಷಿ ಸಾವ್ಹ್ನಿ ಅವರು Khannaಯಲ್ಲಿನ School of Eminenceಗೆ ಮೆಂಟರ್ ಆಗಿದ್ದರು. ನಂತರದ ವರದಿಗಳ ಪ್ರಕಾರ ಲುಧಿಯಾನಾ ಪ್ರದೇಶದಲ್ಲಿ ಐಎಎಸ್ ಅಧಿಕಾರಿಗಳಿಂದ ಸರಕಾರಿ ಶಾಲೆಗಳ ನಿರಂತರ ಮಾರ್ಗದರ್ಶನವೂ ಮುಂದುವರಿದಿದೆ. ಬಿಹಾರದಲ್ಲೂ ವೈಯಕ್ತಿಕ ಮೆಂಟರ್‌ಶಿಪ್‌ನ ಉತ್ತಮ ಉದಾಹರಣೆ ಕಾಣುತ್ತದೆ. ವೈಶಾಲಿ ಜಿಲ್ಲೆಯ ಐಎಎಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ವರ್ಷಾ ಸಿಂಗ್ ಅವರು ‘Hamari Collector Didi’ ಎಂಬ ಪ್ರಯತ್ನದ ಮೂಲಕ ವಿದ್ಯಾರ್ಥಿಗಳೊಂದಿಗೆ ನೇರ ಹಾಗೂ ಆನ್‌ಲೈನ್ ಸಂವಾದ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ಅವರು ವಾರಕ್ಕೆ ಎರಡು ಬಾರಿ ಸುಮಾರು ಒಂದೂವರೆಯಿಂದ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾರೆ.

ಉತ್ತರ ಪ್ರದೇಶವೂ ಇದೇ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. 2026ರ ಆಗಸ್ಟ್‌ನಲ್ಲಿ ಉತ್ತರ ಪ್ರದೇಶ ಸರಕಾರವು ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳನ್ನು ಸರಕಾರಿ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂಪರ್ಕಿಸುವ ಕಾರ್ಯಕ್ರಮಕ್ಕೆ ಸೂಚನೆ ನೀಡಿದೆ. ಅಧಿಕಾರಿಗಳು ಪ್ರತಿ ತಿಂಗಳು ಕನಿಷ್ಠ ಒಂದು ಶಾಲೆಗೆ ಭೇಟಿ ನೀಡಿ, ವಿಶೇಷವಾಗಿ ಇಂಟರ್‌ಮೀಡಿಯೇಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವೃತ್ತಿ ಆಯ್ಕೆ, ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶ ಹೊಂದಿದ್ದಾರೆ.

ಇಂತಹ ಯೋಜನೆಯ ನಿಜವಾದ ಉದ್ದೇಶ ಅಧಿಕಾರಿಯ ಅನುಭವ, ಸಮಯ ಮತ್ತು ಸಂಪರ್ಕಗಳನ್ನು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಳಸುವುದು. ಒಬ್ಬ ಅಧಿಕಾರಿ ವರ್ಷಕ್ಕೆ ಕೇವಲ 10-12 ಬಾರಿ ಶಾಲೆಗೆ ಭೇಟಿ ನೀಡಿದರೂ, ಆ ಭೇಟಿಗಳು ನೂರಾರು ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳನ್ನು ಹುಟ್ಟಿಸಬಹುದು. ಒಂದು ಸರಕಾರಿ ಶಾಲೆಯ ವಿದ್ಯಾರ್ಥಿ ಮೊದಲ ಬಾರಿಗೆ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಪಡೆದಾಗ, ‘‘ನಾನೂ ಒಂದು ದಿನ ಈ ಸ್ಥಾನಕ್ಕೆ ಬರಬಹುದು ಎಂಬ ಆತ್ಮವಿಶ್ವಾಸ’’ ವಿದ್ಯಾರ್ಥಿಗಳಲ್ಲಿ ಮೂಡಬಹುದು. ಇದೇ ಮೆಂಟರ್‌ಶಿಪ್‌ನ ನಿಜವಾದ ಶಕ್ತಿ.

ಕರ್ನಾಟಕದ ಪ್ರತಿಯೊಬ್ಬ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಯೂ ತಮ್ಮ ಸೇವಾ ಅವಧಿಯಲ್ಲಿ ಕನಿಷ್ಠ ಒಂದು ಸರಕಾರಿ ಶಾಲೆಯೊಂದಿಗೆ ನಿರಂತರವಾಗಿ ಕೈಜೋಡಿಸಿದರೆ, ಅದು ಒಂದು ಆಡಳಿತಾತ್ಮಕ ಯೋಜನೆಯಷ್ಟೇ ಅಲ್ಲ, ದೊಡ್ಡ ಸಾಮಾಜಿಕ ಚಳವಳಿಯಾಗಬಹುದು. ಸರಕಾರ ಮೂಲಸೌಕರ್ಯ ನೀಡಬಹುದು; ಶಿಕ್ಷಕರು ಜ್ಞಾನ ನೀಡಬಹುದು; ಆದರೆ ಒಬ್ಬ ಮೆಂಟರ್ ವಿದ್ಯಾರ್ಥಿಯ ಕನಸಿಗೆ ದಿಕ್ಕು ನೀಡಬಹುದು.

ಈ ಮೂರು ರಾಜ್ಯಗಳ ಅನುಭವ ಕರ್ನಾಟಕಕ್ಕೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ: ಸರಕಾರಿ ಶಾಲೆಗಳಿಗೆ ಕೇವಲ ಹಣವಲ್ಲ, ಮೆಂಟರ್‌ಗಳೂ ಬೇಕು. ಒಬ್ಬ ಅಧಿಕಾರಿ ಒಂದು ಶಾಲೆಯೊಂದಿಗೆ ಐದು ವರ್ಷಗಳ ಕಾಲ ನಿರಂತರವಾಗಿ ಸಂಪರ್ಕದಲ್ಲಿದ್ದರೆ, ವಿದ್ಯಾರ್ಥಿಗಳಲ್ಲಿ ವೃತ್ತಿ ಅರಿವು, ಆತ್ಮವಿಶ್ವಾಸ ಮತ್ತು ಉನ್ನತ ಗುರಿಗಳ ಬಗ್ಗೆ ದೊಡ್ಡ ಬದಲಾವಣೆ ತರಬಹುದು. ಪ್ರತಿಯೊಬ್ಬ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗೆ ಒಂದು ಸರಕಾರಿ ಶಾಲೆ ಅಥವಾ ಕೆಲವು ಅಧಿಕಾರಿಗಳ ತಂಡಕ್ಕೆ ಒಂದು ಶಾಲೆಗಳ ಗುಂಪನ್ನು ನೀಡಬಹುದು. ತಿಂಗಳಿಗೆ ಒಂದು ಭೇಟಿ, ತ್ರೈಮಾಸಿಕವಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ, ವರ್ಷಕ್ಕೊಮ್ಮೆ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ ಮತ್ತು ಡಿಜಿಟಲ್ ಮೆಂಟರ್‌ಶಿಪ್ ಮೂಲಕ ಈ ಕಾರ್ಯಕ್ರಮವನ್ನು ನಿರಂತರಗೊಳಿಸಬಹುದು. ಆದ್ದರಿಂದ ‘ಒಬ್ಬ ಅಧಿಕಾರಿ-ಒಂದು ಸರಕಾರಿ ಶಾಲೆ’ ಎಂಬ ಪರಿಕಲ್ಪನೆಯನ್ನು ರಾಜ್ಯಾದ್ಯಂತ ಪ್ರಾಯೋಗಿಕವಾಗಿ ಜಾರಿಗೆ ತರುವ ಬಗ್ಗೆ ಸರಕಾರ ಪರಿಗಣಿಸಬೇಕು.

ಈ ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ ಡಿಜಿಟಲ್ ಮೆಂಟರ್‌ಶಿಪ್. ಅಧಿಕಾರಿಗಳಿಗೆ ಪ್ರತಿಯೊಂದು ಶಾಲೆಗೆ ಪ್ರತೀ ತಿಂಗಳು ಭೇಟಿ ನೀಡಲು ಸಾಧ್ಯವಾಗದಿದ್ದರೆ, ಆನ್‌ಲೈನ್ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬಹುದು. ತಿಂಗಳಿಗೆ ಒಂದು ಗಂಟೆಯ ವೀಡಿಯೊ ಸಂವಾದವೂ ವಿದ್ಯಾರ್ಥಿಗಳಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು. ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ, ವಿವಿಧ ಕ್ಷೇತ್ರಗಳ ತಜ್ಞರನ್ನು ಶಾಲೆಯೊಂದಿಗೆ ಸಂಪರ್ಕಿಸಬಹುದು.

ಒಬ್ಬ ಅಧಿಕಾರಿಯ ಒಂದು ಗಂಟೆಯ ಸಂವಾದವು ಒಂದು ವಿದ್ಯಾರ್ಥಿಯ ಜೀವನದ ದಿಕ್ಕನ್ನೇ ಬದಲಿಸಬಹುದು. ಸರಕಾರಿ ಶಾಲೆಯ ಮಗುವಿಗೆ ನಾನೂ ಐಎಎಸ್ ಆಗಬಹುದು, ನಾನೂ ವೈದ್ಯನಾಗಬಹುದು, ನಾನೂ ದೇಶಕ್ಕೆ ಸೇವೆ ಮಾಡಬಹುದು ಎಂಬ ಕನಸು ಮೂಡಿಸುವುದು ಈ ಯೋಜನೆಯ ಅತ್ಯಂತ ದೊಡ್ಡ ಫಲಿತಾಂಶ.

Tags

Government School
share
ಡಾ.ಡಿ.ಸಿ. ನಂಜುಂಡ
ಡಾ.ಡಿ.ಸಿ. ನಂಜುಂಡ
Next Story
X