Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಾಲಕ್ಕೆ ಜೀತಗಾರರಾದ ‘ಪಣಿಯರು’

ಸಾಲಕ್ಕೆ ಜೀತಗಾರರಾದ ‘ಪಣಿಯರು’

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್23 Sept 2026 9:40 AM IST
share
ಸಾಲಕ್ಕೆ ಜೀತಗಾರರಾದ ‘ಪಣಿಯರು’

ಕೊಡಗಿನ ಪಣಿಯರ ಹಾಡಿಗಳು ಜೀತದ ಕಾಲದ ಗುರುತುಗಳು. ಈಗ ಕಾನೂನು ಪ್ರಕಾರ ಜೀತ ಇಲ್ಲವಷ್ಟೇ. ಆದರೆ ಭೂಮಿ ಇಲ್ಲದ ಬದುಕು ಮಾತ್ರ ಮುಂದುವರಿದಿದೆ. ಈಗಲೂ ಶೇ. ಎಪ್ಪತ್ತರಷ್ಟು ಜನ ಲೈನ್‌ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಕನಿಷ್ಠ ಶಿಕ್ಷಣ ಮತ್ತು ಹಕ್ಕುಪತ್ರ ಸಿಕ್ಕರೆ ಮುಂದಿನ ತಲೆಮಾರು ಲೈನ್ ಮನೆಗಳನ್ನು ಬಿಟ್ಟು ಈ ಸಮುದಾಯ ಹೊರಬರುತ್ತದೆ.

ಪಣಿಯರು ಕೇರಳಂ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು. ‘ಪಣಿ’ ಅಂದರೆ ಮಲಯಾಳಂನಲ್ಲಿ ‘ಕೆಲಸ’ ಎಂದರ್ಥ, ಐತಿಹಾಸಿಕವಾಗಿ ಮತ್ತು ವಾಸ್ತವವಾಗಿ ಭೂಮಾಲಕರ ಹೊಲಗಳಲ್ಲಿ ಜೀತ ಮಾಡುವವರು ಈ ಪಣಿಯರು. ಇವರ ಜನಸಂಖ್ಯೆ ಕೇರಳಂನಲ್ಲಿ ಒಂದು ಲಕ್ಷ ಇದ್ದರೆ ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ 20,000 ಇರಬಹುದಷ್ಟೇ. ಕೇರಳಂನ ವಯನಾಡ್, ಕಣ್ಣೂರು, ಕೋಝಿಕ್ಕೋಡ್, ಮಲಪ್ಪುರಂಗಳಲ್ಲಿ ಈ ಸಮುದಾಯದವರು ಹೆಚ್ಚು ನೆಲೆಸಿದ್ದಾರೆ.

ಕರ್ನಾಟಕದಲ್ಲಿ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮೈಸೂರಿನಲ್ಲಿ ಇದ್ದಾರೆ, ಮುಖ್ಯವಾಗಿ ಕೊಡಗಿನ ವಿರಾಜಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿ ಇವರ ಜನಸಂಖ್ಯೆ ಸ್ವಲ್ಪ ಹೆಚ್ಚಿದೆ. ಇನ್ನು ತಮಿಳುನಾಡಿನ ನೀಲಗಿರಿ ಮತ್ತು ಗೂಡಲೂರು ಪ್ರದೇಶಗಳಲ್ಲೂ ಸ್ವಲ್ಪ ಪ್ರಮಾಣದಲ್ಲಿ ಇದ್ದಾರೆ

ಪಣಿಯರು ಕೇಂದ್ರ ಮತ್ತು ರಾಜ್ಯದ ಜಾತಿ ಪಟ್ಟಿಯ Scheduled Tribeನಲ್ಲಿದ್ದಾರೆ, ಆದರೆ ಕರ್ನಾಟಕದಲ್ಲಿ Particularly Vulnerable Tribal Group (PVTG) ಪಟ್ಟಿಗೆ ಸೇರಿಸದಿರುವುದು ಆಶ್ಚರ್ಯಕರ!

ಪಣಿಯರ ಭಾಷೆ ಮಲಯಾಳಂ, ತುಳು, ಕನ್ನಡ ಮಿಶ್ರಿತ ಒಂದು ರೀತಿಯ ದ್ರಾವಿಡ ಭಾಷೆ. ಈ ಭಾಷೆಗೆ ಲಿಪಿ ಇಲ್ಲ.

ಇವರು ಸಹಜವಾಗಿ ವಾಸಿಸುವುದು ಬಿದಿರು, ಹುಲ್ಲಿನ ಗುಡಿಸಲುಗಳಲ್ಲಿ. ಈಗ ಸರಕಾರ ಕೆಲ ಎಸ್‌ಟಿ ಕಾಲನಿಗಳಲ್ಲಿ ಹಂದಿಗೂಡಿನಂತಹ ಮನೆ ಕಟ್ಟಿಸಿಕೊಟ್ಟಿದೆ.

ಇವರ ಪೂರ್ವಜರಿಂದಾಗಿ ಇಲ್ಲಿನವರೆಗೂ ಇವರ ಆರಾಧನೆ, ಮಲೈದೈವಂ ಬೆಟ್ಟದ ದೇವರು, ಕಾಡು ದೇವತೆಗಳು. ಈಚೆಗೆ ಹಿಂದೂ ಆಚರಣೆಗಳೂ ಬೆರೆತಿವೆ. ಇವರ ಕಂಬಳ ನೃತ್ಯ ಮತ್ತು ವಟ್ಟಕ್ಕಳಿ ನೃತ್ಯ ಜನಪ್ರಿಯ. ಸುಗ್ಗಿ ಕಾಲದಲ್ಲಿ ಮಾತ್ರ ಪಣಿಯರ ಕುಣಿತ, ಡೋಲು, ಚಂಡೆ ವಾದ್ಯಗಳ ಸಂಭ್ರಮವೋ ಸಂಭ್ರಮ.

ಪಣಿಯರದು ಜೀತದಲ್ಲೇ ನಶಿಸಿಹೋದ ಬದುಕು. 1976ರವರೆಗೆ ಕೊಡಗಿನ ಕಾಫಿ, ಟೀ ಎಸ್ಟೇಟ್‌ಗಳಲ್ಲಿ ‘ಕುಂಡುಕೃಷಿ’ ಅಂದರೆ ಸಾಲದ ಜೀತ ಮಾಡುತ್ತಾ ಭೂಮಾಲಕನಿಗೆ ಜೀವಮಾನವೆಲ್ಲ ಕೂಲಿಯಾಳುಗಳಾಗಿ ಜೀವಿಸುಡ್ತಿದ್ದರು. ಇವರು ಕೃಷಿ ಕೂಲಿಗಾರರಾಗಿ ಭತ್ತ, ಶುಂಠಿ, ಕಾಫಿ ತೋಟಗಳಲ್ಲಿ ದಿನಗೂಲಿ ಮಾಡುತ್ತಾರೆ. ಮಿಕ್ಕ ಸಮಯದಲ್ಲಿ ಕಾಡಿನ ಉತ್ಪನ್ನಗಳಾದ ಜೇನು, ಕಾಡುಹಲಸು, ಔಷಧಿ ಗಿಡ, ಬೆಟ್ಟದ ನೆಲ್ಲಿ ಸೊಪ್ಪು ಮುಂತಾದವನ್ನು ಸಂಗ್ರಹ ಮಾಡಿ ಮಾರಿ ಹಸಿವು ನೀಗಿಸಿಕೊಳ್ಳುತ್ತಾರೆ.

ಈಗೀಗ NREGA, ಕಟ್ಟಡ ಕೂಲಿಗಳಾಗಿ, ಕಾಫಿ ತೋಟದಲ್ಲಿ ಕೆಲವರು ದುಡಿದರೆ ಮತ್ತೆ ಕೆಲ ಬೆರಳೆಣಿಕೆಯಷ್ಟು ಜನ ಆಶಾ ಕಾರ್ಯಕರ್ತೆಯರಾಗಿ ಅರಣ್ಯ ವೀಕ್ಷಕ ಕಸುಬುಗಳನ್ನು ಮಾಡುತ್ತಾರೆ.

ಪಣಿಯರದು ಭೂರಹಿತ ಸಮುದಾಯವಾಗಿದ್ದು ಜೀತದಿಂದ ಬಿಡುಗಡೆಯಾದರೂ ಸ್ವಂತ ಜಮೀನು ಇಲ್ಲದ ಕಾರಣಕ್ಕೆ ನೂರಕ್ಕೆ ನೂರು ಮಂದಿ ಭೂಹೀನರಾಗಿರುವುದರಿಂದ ಇವರು ಕಾಫಿ ಪ್ಲಾಂಟರುಗಳ ಲೈನ್ ಮನೆಗಳಲ್ಲಿ ಜೀತಗಾರರಾಗಿಯೇ ಜೀವಿಸುತ್ತಾರೆ. ಕೊಡಗಿನ ಲೈನ್ ಮನೆಗಳು ಅಂದರೆ ಒಂದು ರೀತಿಯ ಮೃತ್ಯು ಕೂಪಗಳು. ಕಾಫಿ ಮತ್ತು ಎಸ್ಟೇಟ್‌ಗಳಲ್ಲಿ ಕೂಲಿ ಕಾರ್ಮಿಕರಿಗೆ ಕಟ್ಟಿದ ಉದ್ದನೆಯ ಸಾಲು ಮನೆಗಳು ಇವು. ಒಂದು ಸಾಲಿನಲ್ಲಿ 10-20 ಮನೆಗಳು ಇರುತ್ತವೆ. ಪ್ರತೀ ಮನೆ 10x10 ಅಡಿಯಷ್ಟೇ ಇರುತ್ತದೆ. ಒಂದೇ ಹಾಲಿನಲ್ಲಿ ಅಡುಗೆ ಮತ್ತು ಅಲ್ಲೇ ಒಂದು ಮೂಲೆಯಲ್ಲಿ ಸ್ನಾನ. ಶೌಚಕ್ಕೆ ಸಾಮೂಹಿಕ ಶೌಚಾಲಯ ಅವಲಂಬನೆ. ಈ ಲೈನ್ ಮನೆಗಳನ್ನು ಲೇಬರ್ ಲೈನ್, ಕೂಲಿ ಲೈನ್, ಹಾಡಿ ಅಂತಲೂ ಕರೆಯುತ್ತಾರೆ.

ಬ್ರಿಟಿಷರ ಕಾಲದಿಂದ ಹಿಡಿದು 1976ರವರೆಗೆ ಕೊಡಗಿನ ಎಸ್ಟೇಟ್‌ಗಳಲ್ಲಿ ಜೀತ ಅಥವಾ ಸಾಲದ ಗುಲಾಮಗಿರಿ ಜಾರಿಯಲ್ಲಿ ಇತ್ತು. ಈ ಜೀತಕ್ಕೆ ಸಿಗುತ್ತಿದ್ದವರು ಪಣಿಯರೊಂದಿಗೆ ಜೇನುಕುರುಬ, ಬೆಟ್ಟಕುರುಬ, ಆಡಿಯ, ಆದಿವಾಸಿಗಳು ಮತ್ತು ದಲಿತರು. ಮದುವೆ, ಸಾವು, ಹಬ್ಬಕ್ಕೆ ಎಸ್ಟೇಟ್ ಮಾಲಕ ಅಥವಾ ಅವನ ಮೇಸ್ತ್ರಿ ರೂ. 50-100 ಸಾಲ ಕೊಡುತ್ತಿದ್ದ. ಅದಕ್ಕೆ ಬಡ್ಡಿಯೂ ಸಾಲದಷ್ಟು ಪ್ರಮಾಣದ್ದೇ ಆಗಿತ್ತು! ಈ ಸಾಲ ತೀರಿಸಲು ತಲೆಮಾರುಗಟ್ಟಲೆ ದುಡಿದರೂ ತೀರುತ್ತಿರಲಿಲ್ಲ, ಈ ಕಾರಣಕ್ಕೆ ಈ ಪಣಿಯರು ಒಮ್ಮೆ ಸಾಲಗಾರರಾದರೆ ಅವರು ಜೀವನ ಪರ್ಯಂತ ಸಾಲದ ಜೀತಗಾರರಾಗುತ್ತಿದ್ದರು. ಕೆಲವೊಮ್ಮೆ ಈ ಸಾಲ ತೀರಿಸಲು ಇವರ ಮಕ್ಕಳೂ ಜೀತ ಮಾಡುತ್ತಿದ್ದರು! ಕಾಫಿ ಕೊಯ್ಲು, ಕಳೆ ಕೀಳುವುದು, ಗೊಬ್ಬರ, ಕೀಟನಾಶಕ ಸಿಂಪಡಣೆ. ಬೆಳಗ್ಗೆಯಿಂದ ರಾತ್ರಿ ತನಕ ವಾರದ ಏಳೂ ದಿನಗಳು ಜೀತಗಾರರಾಗಿ ದುಡಿಯಬೇಕಿತ್ತು. 1950ರಲ್ಲಿ ದಿನಕ್ಕೆ 1 ರಿಂದ 2 ರೂ. ಕೂಲಿ, ಕೆಲವೊಮ್ಮೆ ಅದೂ ಅಕ್ಕಿ, ಉಪ್ಪಿನ ರೂಪದಲ್ಲಿ ಸಿಗುತ್ತಿತ್ತೇ ಹೊರತು ನಗದು ರೂಪದಲ್ಲಿ ಸಿಗುತ್ತಿರಲಿಲ್ಲ. ಇದನ್ನು ‘ಬಂಧ್ ಮಜೂರಿ’ ಅಥವಾ ‘ಕುಂಡುಕೃಷಿ’ ಅಂತಲೂ ಕರೆಯುತ್ತಿದ್ದರು. ಲೈನ್ ಮನೆಗಳಲ್ಲಿ ವಾಸಿಸುವವರು ಹೊರಹೋಗುವಂತಿರಲಿಲ್ಲ. ಹೋದರೆ ‘ಪರಾರಿ’ ಎಂದು ಪೊಲೀಸ್ ಕೇಸ್ ಹಾಕಿ ಶಿಕ್ಷೆ ನೀಡುತ್ತಿದ್ದರು. ತಪ್ಪಿದರೆ ಕೂಲಿ ಕಟ್, ಕೆಟ್ಟಬೈಗುಳ, ಹೊಡೆತ. ಹೆಣ್ಣುಮಕ್ಕಳ ಮೇಲೆ ಲೈಂಗಿಕ ಶೋಷಣೆಗಳನ್ನು ಮಾಡಿರುವುದು ಅನೇಕ ಕಡೆ ದಾಖಲಾಗಿದೆ. ಈ ಕ್ರೌರ್ಯ ಈಗಲೂ ಪಣಿಯ, ಯರವ, ಜೇನುಕುರುಬ ಮುಂತಾದ ಅಸಹಾಯಕ ಸಮುದಾಯಗಳ ಮೇಲೆ ನಡೆಯುತ್ತಿರುವುದು ಆಗಾಗ ಬೆಳಕಿಗೆ ಬರುತ್ತಿರುತ್ತದೆ.

Bonded Labour System Abolition Act 1976 ಜಾರಿಗೆ ಬಂದು ಇಂದಿರಾ ಗಾಂಧಿಯವರ ಸರಕಾರ ಜೀತ ಪದ್ಧತಿಯನ್ನು ದೇಶಾದ್ಯಂತ ರದ್ದು ಮಾಡಿತು. ಜೀತದ ಸಾಲವನ್ನೂ ರದ್ದು ಮಾಡಿತು. 1980ರ ನಂತರ ಕೊಡಗಿನ ಜಿಲ್ಲಾಡಳಿತ ಮತ್ತು ಎನ್‌ಜಿಒಗಳು ಪಣಿಯರ ಹಾಡಿಗಳಿಗೆ ಹೋಗಿ ‘ಜೀತ ವಿಮುಕ್ತಿ ಪತ್ರ’ ನೀಡಿ ಪಣಿಯ, ಯರವ, ಜೇನುಕುರುಬ ಮುಂತಾದ ಸುಮಾರು 12,000 ಕುಟುಂಬಗಳನ್ನು ಜೀತದಿಂದ ಬಿಡುಗಡೆ ಮಾಡಲಾಯಿತು. ಕೆಲವರಿಗೆ ಪುನರ್ವಸತಿ ಕಲ್ಪಿಸಲಾಯಿತು. 3-5 ಎಕರೆ ಜಮೀನು ನೀಡಲಾಗುವುದೆಂದು ಭರವಸೆ ನೀಡಲಾಯಿತು. ಆದರೆ ಈವರೆಗೂ ಯಾವ ಪಣಿಯರಿಗೂ ತುಂಡು ಭೂಮಿ ಸಿಕ್ಕಿದ ದಾಖಲೆಯಿಲ್ಲ!

ಕೊಡಗಿನ ಶೇ. 60 ಎಸ್ಟೇಟ್‌ಗಳಲ್ಲಿ ಲೈನ್ ಮನೆಗಳು ಈಗಲೂ ಇವೆ. ಈಗ ಕಾನೂನಿನ ಹೆಸರಿಗೆ ಜೀತ ಇಲ್ಲ, ದಿನಕೂಲಿ ಹೆಸರಿನಲ್ಲಿ ಅದು ಮುಂದುವರಿದಿದೆ! ಕಾನೂನಿನಲ್ಲಿ ಮಾತ್ರ ಜೀತ ಪದ್ಧತಿ ರದ್ದಾಗಿದೆಯಷ್ಟೆ.

ಪಣಿಯರು ಪಶ್ಚಿಮ ಘಟ್ಟದ ಮೂಲ ನಿವಾಸಿಗಳು. ಜೀತದಿಂದ ಕೂಲಿಗೆ ಬಂದಿದ್ದಾರೆ. ಈಗ ಭೂಮಿ ಮತ್ತು ಶಿಕ್ಷಣಕ್ಕಾಗಿ ಹೋರಾಟ ಮಾಡುತಿದ್ದಾರೆ. ಕೇರಳಂನಲ್ಲಿ ‘ವಯನಾಡಿನ ಪಣಿಯ’ ಎಂದರೆ ರಾಜಕೀಯವಾಗಿ ಬಹಳ ಮುಖ್ಯವಾದ ವೋಟ್‌ಬ್ಯಾಂಕ್. ಆದರೆ ಕರ್ನಾಟಕದಲ್ಲಿ ಪಣಿಯರ ಅಸ್ಮಿತೆಯೇ ಇಲ್ಲ.

ಕೊಡಗಿನ ವಿರಾಜಪೇಟೆಯಲ್ಲಿ ಮೈತಾಡಿ ಹಾಡಿ, ನಾಲ್ಕೇರಿ ಹಾಡಿ, ಅರುವತ್ತೊಕ್ಲು ಹಾಡಿ, ಕೊಳೆಕೇರಿ ಹಾಡಿ, ಬಾಳೆಲೆ ಹಾಡಿಗಳಲ್ಲಿ ಒಟ್ಟಾರೆ 800 ಕುಟುಂಬ

ಸೋಮವಾರ ಪೇಟೆಯಲ್ಲಿ ಶಾಂತಳ್ಳಿ ಹಾಡಿ, ಕುಂದಳ್ಳಿ ಹಾಡಿ, ಹೆಬ್ಬಾಲೆ ಹಾಡಿ, ಗರ್ವಾಲೆ ಹಾಡಿ ಸೇರಿ 400 ಕುಟುಂಬ.

ಮಡಿಕೇರಿಯಲ್ಲಿ ಕಾಟಕೇರಿ ಹಾಡಿ, ಮೇಕೇರಿ ಹಾಡಿ, ಚೆಟ್ಟಳ್ಳಿ ಹಾಡಿ ಸೇರಿ 300 ಕುಟುಂಬ. ಒಟ್ಟಾರೆ ಕೊಡಗಿನಲ್ಲಿ 60 ಪಣಿಯರ ಹಾಡಿಗಳು. ಸುಮಾರು 4,000 ಕುಟುಂಬಗಳು ಮತ್ತು 18,000ರಿಂದ 20,000 ಜನಸಂಖ್ಯೆ ಇದೆ. ಶೇ. 90 ಹಾಡಿಗಳು ಅರಣ್ಯ ಅಂಚು ಮತ್ತು ಎಸ್ಟೇಟ್ ಗಳಿಗೆ ಅಂಟಿಕೊಂಡಿವೆ. Forest Rights Act 2006 ಅಡಿಯಲ್ಲಿ ಕೆಲವರಿಗೆ ಒಂದೆರಡು ಎಕರೆಗೆ ಹಕ್ಕುಪತ್ರ ಸಿಕ್ಕಿದೆಯಷ್ಟೆ. ಭೂಮಿ ಸಿಕ್ಕಿದ ದಾಖಲೆಯಿಲ್ಲ.

ಪಣಿಯರಲ್ಲಿ ಶೇ. 15ರಿಂದ ಶೇ. 20 ಜನಕ್ಕೆ ಕುಡಗೋಲು ಕಣಿವೆ ರೋಗ (Sickle Cell Anaemia) ಇದೆ. ಜಿಲ್ಲಾಸ್ಪತ್ರೆಯಲ್ಲಿ ಆಗಾಗ ತಪಾಸಣೆ ಶಿಬಿರ ನಡೆಯುತ್ತದೆ. ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ ರೋಗಗಳೊಂದಿಗೆ ಪ್ರಾಣಿ ಮಾನವ ಸಂಘರ್ಷದಲ್ಲಿ ಅನೇಕ ಜನ ಸಾಯುತ್ತಾರೆ. ಅದರಲ್ಲೂ ಆನೆ ತುಳಿತದಿಂದ ಸಾಯುವವರು ಹೆಚ್ಚು. ಇವರಿಗಿರುವ ಮನರಂಜನೆ ಕಂಬಳ ನೃತ್ಯ, ಕುಂಡೆಹಬ್ಬಗಳಂತಹವಷ್ಟೇ.

ಒಟ್ಟಾರೆ ಕೊಡಗಿನ ಪಣಿಯರ ಹಾಡಿಗಳು ಜೀತದ ಕಾಲದ ಗುರುತುಗಳು. ಈಗ ಕಾನೂನು ಪ್ರಕಾರ ಜೀತ ಇಲ್ಲವಷ್ಟೆ. ಆದರೆ ಭೂಮಿ ಇಲ್ಲದ ಬದುಕು ಮಾತ್ರ ಮುಂದುವರಿದಿದೆ. ಈಗಲೂ ಶೇ. ಎಪ್ಪತ್ತರಷ್ಟು ಜನ ಲೈನ್ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಕನಿಷ್ಠ ಶಿಕ್ಷಣ ಮತ್ತು ಹಕ್ಕುಪತ್ರ ಸಿಕ್ಕರೆ ಮುಂದಿನ ತಲೆಮಾರು ಲೈನ್ ಮನೆಗಳನ್ನು ಬಿಟ್ಟು ಈ ಸಮುದಾಯ ಹೊರಬರುತ್ತದೆ.

(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)

Tags

Paniyaslaborers
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X