Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಟ್ರೆಕ್ಕಿಂಗ್ ಪ್ರಿಯರನ್ನು...

ಟ್ರೆಕ್ಕಿಂಗ್ ಪ್ರಿಯರನ್ನು ಸೆಳೆಯುತ್ತಿರುವ ಗಿರಿಶಿಖರಗಳು!

ಆಗುಂಬೆ, ಕೊಡಚಾದ್ರಿ, ಕುದುರೆಮುಖದತ್ತ ದೌಡಾಯಿಸುತ್ತಿರುವ ಚಾರಣಿಗರು

ನಝೀರ್ ಪೊಲ್ಯನಝೀರ್ ಪೊಲ್ಯ7 July 2025 12:17 PM IST
share
ಟ್ರೆಕ್ಕಿಂಗ್ ಪ್ರಿಯರನ್ನು ಸೆಳೆಯುತ್ತಿರುವ ಗಿರಿಶಿಖರಗಳು!

ಉಡುಪಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಪಶ್ಚಿಮ ಘಟ್ಟದ ಉದ್ದಕ್ಕೂ ನೆಲೆ ನಿಂತ ಗಿರಿಶಿಖರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಈ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಲು ಚಾರಣಿಗರು ಆಗುಂಬೆ, ಕೊಡಚಾದ್ರಿ, ಕುದುರೆಮುಖಗಳಿಗೆ ಹೆಜ್ಜೆ ಇಡುತ್ತಿದ್ದಾರೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಸಾಹಸಿಗರು ಈ ಬೆಟ್ಟಗುಡ್ಡಗಳಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗುತ್ತಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುವ ಮಳೆಯ ಅಬ್ಬರ ನೋಡುವುದು ಮತ್ತು ಅನುಭವಿಸುವುದೇ ಒಂದು ಖುಷಿ. ಅದಕ್ಕಾಗಿ ನಗರದ ಒತ್ತಡದ ಜೀವನದಿಂದ ತತ್ತರಿಸಿರುವ ಅನೇಕ ಮಂದಿ ಮನಸ್ಸು ಸಂತೃಪ್ತಿಗೊಳಿಸಲು ಪಶ್ಚಿಮ ಘಟ್ಟಗಳತ್ತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೀಗ ನಿರಂತರವಾಗಿ ಸುರಿದ ಮಳೆಯಿಂದ ಪಶ್ಚಿಮ ಘಟ್ಟಗಳಲ್ಲಿನ ಗಿರಿಶಿಖರಗಳು ಹಚ್ಚಹಸುರಿನಿಂದ ಎಲ್ಲರ ಕಣ್ಮನ ಸೆಳೆಯುತ್ತಿವೆ. ಚಾರಣಿಗರ ಪಾಲಿಗೆ ಸ್ವರ್ಗವಾಗಿ ಮಾರ್ಪಟ್ಟಿದೆ.

ಪಶ್ಚಿಮ ಘಟ್ಟದ ವಿಶೇಷ ಸೊಬಗು, ಟ್ರೆಕ್ಕಿಂಗ್‌ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಕರಾವಳಿಗರು ಸೇರಿದಂತೆ ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯಗಳಿಂದಲೂ ಚಾರಣಿಗರು ಈ ಎಲ್ಲ ಪ್ರದೇಶಗಳಿಗೆ ಆಗಮಿಸುತ್ತಿದ್ದಾರೆ. ಕಾಡಿನ ಮಧ್ಯೆ ನಡೆದಾಡುತ್ತಾ, ಜಲಪಾತಗಳ ಸೌಂದರ್ಯ ಸವಿಯುತ್ತಾ, ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆಯಲು ಇದು ಸೂಕ್ತ ಸಮಯ.

ಆಗುಂಬೆಯ ದಟ್ಟ ಕಾನನ, ಕೊಡಚಾದ್ರಿಯ ಸಾಹಸಮಯ ಹಾದಿ ಮತ್ತು ಕುದುರೆಮುಖದ ವಿಸ್ತಾರವಾದ ಹುಲ್ಲುಗಾವಲುಗಳು ಚಾರಣಿಗರಿಗೆ ವಿಭಿನ್ನ ಅನುಭವ ನೀಡುತ್ತಿವೆ. ಅಲ್ಲಲ್ಲಿ ಕಾಣುವ ರಸ್ತೆಗಳು, ಹರಿಯುವ ಝರಿಗಳನ್ನು ದಾಟುತ್ತಾ ಸಾಗುವ ಪ್ರಯಾಣ, ಸಾಹಸದ ಕಳೆ ಕಟ್ಟಿದೆ. ಅರಣ್ಯ ಇಲಾಖೆ ಗೈಡ್ ನೆರವಿನೊಂದಿಗೆ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಚಾರಣ ನಡೆಸಲಾಗುತ್ತಿದೆ.

ಚಾರಣಕ್ಕೆ ಸುರಕ್ಷತೆ ಅಗತ್ಯ: ಕುದುರೆಮುಖ ಶೋಲ ಅರಣ್ಯ ಚಾರಣಕ್ಕೆ ಅತ್ಯಂತ ಆಕರ್ಷಣೀಯ ತಾಣವಾಗಿದೆ. ಇಲ್ಲಿನ ಕುರಿಂಜಾಲು ಶಿಬಿರ, ಗಂಗಡಿಕಲ್ಲು ನೇತ್ರಾವತಿಗೆ ಸಾಕಷ್ಟು ಮಂದಿ ಚಾರಣಿಗರು ಆಗಮಿಸುತ್ತಾರೆ.

ಕೊಡಚಾದ್ರಿ ಸರ್ವಜ್ಞಪೀಠ, ಹಿಡ್ಲುಮನೆ ಜಲಪಾತ, ಆಗುಂಬೆ ಜೋಗಿಗುಂಡಿ ಜಲಪಾತ, ಸೀತಾನದಿ ಚಾರಣಕ್ಕೆ ಅವಕಾಶಗಳಿದ್ದು, ಅರಣ್ಯ ಇಲಾಖೆ ವೆಬ್‌ಸೈಟ್‌ನ ಅರಣ್ಯ ವಿಹಾರದಲ್ಲಿ ನೋಂದಾಯಿಸಿ ಚಾರಣಕ್ಕೆ ತೆರಳಬಹುದು.

ಕುಮಾರ ಪರ್ವತ ಸಾಹಸಿ ಚಾರಣಿಗರ ಅತ್ಯಂತ ಇಷ್ಟದ ತಾಣ. ಆದರೆ ಅತಿಯಾದ ಮಳೆಯ ಕಾರಣ ಸುಬ್ರಹ್ಮಣ್ಯ ಪಾಯಿಂಟ್‌ನಿಂದ ಕುಮಾರಪರ್ವತ ಚಾರಣಕ್ಕೆ ಸದ್ಯ ನಿರ್ಬಂಧ ಹೇರಲಾಗಿದೆ. ಮಡಿಕೇರಿ ಭಾಗದಿಂದಲೂ ಎರಡು ಮಾರ್ಗವಿದ್ದು, ಇಲ್ಲಿಯೂ ನಿಷೇಧವಿದೆ. ಬೆಳ್ತಂಗಡಿ ಭಾಗದಲ್ಲಿರುವ ಕುದುರೆ ಮುಖ ವನ್ಯಜೀವಿ ವ್ಯಾಪ್ತಿಯ ಗಡಾಯಿಕಲ್ಲು ಬಂಡಾಜೆ ಪರಿಸರದಲ್ಲಿ ಚಾರಣ ಸದ್ಯಕ್ಕೆ ನಿಷೇಧವಿದೆ.

‘ಪಶ್ಚಿಮಘಟ್ಟ ಕುದುರೆಮುಖ, ಕೊಡಚಾದ್ರಿ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚಾರಣಿಗರು ಆಗಮಿಸುತ್ತಿದ್ದಾರೆ. ಸದ್ಯ ಮಳೆ ಬಿರುಸುಗೊಂಡಿರುವ ಕಾರಣ ಬಂಡಾಜೆ, ಗಡಾಯಿಕಲ್ಲು ಚಾರಣ ಸಂಖ್ಯೆ ನಿರ್ದಿಷ್ಟಗೊಳಿಸಲಾಗಿದೆ. ಖಾಸಗಿಯಾಗಿ ಯಾರೂ ಕಾಡಿನೊಳಗೆ ಚಾರಣ ಹೋಗುವಂತಿಲ್ಲ. ಇಲಾಖೆ ನೋಂದಣಿ, ಅನುಮತಿ ಅಗತ್ಯವಾಗಿದೆ. ಎಲ್ಲ ಸುರಕ್ಷತಾ ಕ್ರಮವನ್ನು ಪಾಲಿಸಿಕೊಂಡು, ಪರಿಸರಕ್ಕೆ ಹಾನಿಯಾಗದಂತೆ ಚಾರಣ ಕೈಗೊಳ್ಳಬೇಕು’ ಎಂದು ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ತಿಳಿಸಿದ್ದಾರೆ.

ಪರಿಸರಕ್ಕೆ ಹಾನಿಯಾಗದಂತೆ ಕ್ರಮ ಅಗತ್ಯ

ಪರಿಸರ ಪ್ರವಾಸೋದ್ಯಮಕ್ಕೆ ಸರಕಾರ ಉತ್ತೇಜನ ನೀಡುತ್ತಿದ್ದರೂ ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಪರಿಸರದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳು ಬೀರುತ್ತಿವೆ.

ಪರಿಸರ ಪ್ರವಾಸೋದ್ಯಮ ಎಂಬುದು ಪರಿಸರದ ಆಸಕ್ತಿ, ಕಾಳಜಿ ಇರುವವರೆಗೆ ಮಾತ್ರವೇ ಹೊರತು ಮೋಜು ಮಸ್ತಿ ಮಾಡುವವರಿಗೆ ಅಲ್ಲ ಎಂಬುದು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಆಗ ಮಾತ್ರ ಪರಿಸರವನ್ನು ಉಳಿಸಿಕೊಂಡು ಅದರ ಸೌಂದರ್ಯ ಸವಿಯಲು ಸಾಧ್ಯವಾಗುತ್ತದೆ.

ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ, ಅರಣ್ಯ ಸಂರಕ್ಷಣೆ ಮತ್ತು ಚಾರಣದ ಮಾರ್ಗದ ಸ್ವಚ್ಛತೆ ಕಾಪಾಡುವುದು ಬಗ್ಗೆ ಅರಣ್ಯ ಇಲಾಖೆ ಮತ್ತು ಪರಿಸರ ಕಾಳಜಿಯ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪರಿಸರಪ್ರೇಮಿಗಳ ಒತ್ತಾಯ.

ಅರಣ್ಯ ಇಲಾಖೆಯ ಸಲಹೆ ಸೂಚನೆ ಪಾಲಿಸಿ

ಸ್ಥಳೀಯ ಖಾಸಗಿ ಗೈಡ್‌ನೊಂದಿಗೆ ಅರಣ್ಯಕ್ಕೆ ತೆರಳಿದರೆ ದಂಡ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸ್ಥಳೀಯ ರೆಸಾರ್ಟ್, ಹೋಮ್‌ಸ್ಟೇಗಳು ಖಾಸಗಿಯಾಗಿ ಚಾರಣ ನಡೆಸುವಂತಿಲ್ಲ ಎಂಬುದು ಕುದುರೆಮುಖ ವನ್ಯಜೀವಿ ವಿಭಾಗದ ಸೂಚನೆಯಾಗಿದೆ.

ಚಾರಣ ಮಾಡಲು ದಿನಕ್ಕೆ 300 ಜನರಿಗೆ ಮಾತ್ರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಶುಲ್ಕ ಪಾವತಿಸಿದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಇಲಾಖೆ ವೆಬ್‌ಸೈಟ್ ಅರಣ್ಯ ವಿಹಾರದಲ್ಲಿ ನೋಂದಣಿ ಕಡ್ಡಾಯವಾಗಿದೆ. ಕಾಡು, ಬೆಟ್ಟದಲ್ಲಿ ಕರ್ಕಶ ಶಬ್ದ ಮಾಡುತ್ತ, ಬ್ಲೂಟೂತ್ ಸ್ಪೀಕರ್ ಬಳಕೆಯನ್ನೂ ನಿಷೇಧಿಸಲಾಗಿದೆ.

ವನ್ಯಜೀವಿಗಳಿಗೆ ಆಹಾರ ನೀಡುವುದು ಮತ್ತು ಪ್ಲಾಸ್ಟಿಕ್ ಬಾಟಲಿ, ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ದಾರಿಯುದ್ಧಕ್ಕೂ ಕಾಲಿಗೆ ಕಚ್ಚುವ ಲೀಚ್‌ಗೆ ಕಡಿವಾಣ ಹಾಕಲು ಡೆಟಾಲ್, ಫಿನಾಯಿಲ್ ಬಳಸಬಾರದು. ಅದರ ಬದಲು ಉಪ್ಪುಬಳಕೆ ಮಾಡಬಹುದು. ಆರೋಗ್ಯವಂತರು ಮಾತ್ರ ಚಾರಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಇಲಾಖೆ ಸಲಹೆ ನೀಡಿದೆ. ಗೈಡ್‌ಗಳ ಮಾರ್ಗದರ್ಶನ ದಲ್ಲಿ ಚಾರಣ ಪಥದಲ್ಲಿ ಸಾಗುವುದು ಉತ್ತಮ. ಚಾರಣ ಸಮಯದಲ್ಲಿ ಅನಗತ್ಯ ಮೋಜು ಮಸ್ತಿಗೆ ಕಡಿವಾಣ ಅಗತ್ಯ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X