Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಯವಿಟ್ಟು ಸರಕಾರಿ ಶಾಲೆಗಳ ಒಳಗೆ ಒಮ್ಮೆ...

ದಯವಿಟ್ಟು ಸರಕಾರಿ ಶಾಲೆಗಳ ಒಳಗೆ ಒಮ್ಮೆ ಹೋಗಿ ಬರೋಣ ಬನ್ನಿ

ಮಾಳವಿಕಮಾಳವಿಕ10 Nov 2026 12:49 PM IST
share
ದಯವಿಟ್ಟು ಸರಕಾರಿ ಶಾಲೆಗಳ ಒಳಗೆ ಒಮ್ಮೆ ಹೋಗಿ ಬರೋಣ ಬನ್ನಿ

ಹುಲ್ಲು- ಹಿಂಡಿ ಹಾಕದೇ ಎತ್ತು ದುಡಿಯಬೇಕು, ಹಸು ಹಾಲು ನೀಡಬೇಕು ಎಂದು ಬಯಸುವ ರಾಜಕಾರಣ ಜನಪರವಾಗಿರಲು ಸಾಧ್ಯವಿಲ್ಲ. ಸರಕಾರದ ಉಪೇಕ್ಷೆಯಿಂದಲೇ ಆರೋಗ್ಯ, ಶಿಕ್ಷಣದಂಥಾ ಕ್ಷೇತ್ರಗಳಿಗೆ ಬೇಕಾದಷ್ಟು ಅನುದಾನ ನೀಡದೇ ಅವು ರೋಗಗ್ರಸ್ತವಾಗಲು ಬಿಟ್ಟು ಅದೇ ಕಾರಣಕ್ಕೆ ಖಾಸಗಿ ವ್ಯವಸ್ಥೆ ಆ ಜಾಗ ತುಂಬಬೇಕೆಂದರೆ ಅಂತಹ ರಾಜಕಾರಣ ಜನಪರವಾಗಿರಲು ಸಾಧ್ಯವಿಲ್ಲ.

ಇದು ಸರಕಾರಿ ಶಾಲೆ, ಇಲ್ಲಿ ವಿಷಯಕ್ಕೆ ಒಬ್ಬರಂತೆ ಶಿಕ್ಷಕರಿಲ್ಲ. ಆದರೆ ಎಲ್ಲಾ ವಿಷಯವನ್ನೂ ಒಬ್ಬರೇ ಶಿಕ್ಷಕರು ಬೋಧಿಸುತ್ತಾರೆ. ಗಣಿತ ವಿಜ್ಞಾನ, ಭಾಷೆ ಅಷ್ಟೇ ಅಲ್ಲ ಹಾಡುಪಾಡು, ಆಟಪಾಟ, ದೈಹಿಕ ಶಿಕ್ಷಣ ಎಲ್ಲವನ್ನೂ ಒಬ್ಬರೇ ಬೋಧಿಸುತ್ತಾರೆ.

ಅಷ್ಟೇ ಅಲ್ಲ, ಅವರು ಸರಕಾರ ಕೇಳುವ ಎಲ್ಲಾ ಮಾಹಿತಿಯನ್ನು ಕಾಲದಿಂದ ಕಾಲಕ್ಕೆ ಒದಗಿಸುವ ಕಾರಕೂನರೂ ಆಗಿದ್ದಾರೆ. ಅದನ್ನೋ.. ಈ ಕ್ಷಣವೇ ಕಳಿಸುವ ಒತ್ತಡವಿರುತ್ತದೆ. ಒಬ್ಬರೋ ಇಬ್ಬರೋ ಇರುವ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಪಾತ್ರ ವಹಿಸುವವರಿಗೆ ಕಾರಕೂನಿಕೆಯಲ್ಲೇ ಇಡೀ ದಿನ ಕಳೆಯುತ್ತದೆ.

ಮೊಟ್ಟೆ, ಹಾಲು, ಬಿಸಿಯೂಟ, ಸಮವಸ್ತ್ರ, ಪುಸ್ತಕ, ಶೂ -ಸಾಕ್ಸ್ ಇದೇ ಪ್ರಪಂಚ ಅವರದು. ಸಹ ಶಿಕ್ಷಕರಿಗೆ ಬೇರೆ ನೂರಾ ಎಂಟು ಕೆಲಸಗಳಿವೆ. ಆನ್‌ಲೈನ್ ಎಂಟ್ರಿ, ಕರ್ತವ್ಯ, ನಿರಂತರ, ಟbಚಿ ಅಂತೆಲ್ಲಾ.. ಖರ್ಚಾಗುವ ಡೇಟಾಗೆ ಕಾಸು ಸರಕಾರವೇನೂ ಕೊಡ್ತಾ ಇಲ್ಲ. ಹೀಗೇನಾದರೂ ತರ್ಕಬದ್ಧವಾಗಿ ಮಾತಾಡಿದರೆ ಅವರನ್ನು ಸ್ವಾಮಿದ್ರೋಹಿಗಳಂತೆ ನೋಡಲಾಗುತ್ತದೆ. ಇಷ್ಟೆಲ್ಲಾ ಮಾಹಿತಿ ಕೊಟ್ಟರೇನಂತೆ? ಬರುವ ಅಧಿಕಾರಿಗಳು ತರಗತಿಗೆ ಮುಖ ಮಾಡಿ ನೋಡುವುದು ಎಂದೋ ಒಮ್ಮೆ! ಅಭಿವೃದ್ಧಿ ಗಮನಿಸುವುದೂ ಶಾಲೆಗೆ ದುಡ್ಡು ಹೊರಗಿಂದ ತಂದು ಖರ್ಚು ಮಾಡಿದಾಗಲೇ. ಬಹಳಷ್ಟು ಭೇಟಿಗಳು ಕಾಪಿ -ಟೀ ಬಾಳೆಹಣ್ಣಿನ ನಡುವೆ ಆಫೀಸು ರೂಮಿನಲ್ಲೇ ಕೊನೆಗೊಳ್ಳುತ್ತವೆ. ಮತ್ತೆ ಎಲ್ಲಾದರೂ ಶಿಕ್ಷಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶವಿದೆಯೇ, ಇದ್ದರೂ ಈ ಸಮಸ್ಯೆಗಳನ್ನು ಹೇಳಿಕೊಂಡಾಗ ಪರಿಹಾರ ದೊರಕಿದೆಯೇ?

ಹಾಗೆಂದೇ ಅವರ ತಲೆಗೆಜನಗಣತಿ-ಜಾತಿಗಣತಿ-ಮತದಾರರ ಪಟ್ಟಿ ನಿರ್ವಹಣೆ-ಬಿ ಎಲ್ ಒ ಕೆಲಸ-ನಾಯಿ ಗಣತಿ-ಹಾವು ಹಿಡಿಯುವ ತರಬೇತಿ-ಹೆಗ್ಗಣ ಕೊಲ್ಲುವ ತರಬೇತಿ ಹೀಗೆ ಎಲ್ಲವನ್ನೂ ತಂದು ಕಟ್ಟುತ್ತಾರೆ. ಯಾವುದೇ ಇಲಾಖೆಯವರೂ ಶಿಕ್ಷಕರಿಗೆ ಮೆಮೋ ಹಾಕಬಹುದು. ಯಾರು ಬೇಕಾದರೂ ಇವರಿಗೆ ಕಾರಣ ಕೇಳಿ ನೋಟಿಸ್ ಕೊಡಬಹುದು.

ಮುಂದುವರಿದು, ಶಾಲೆಯಲ್ಲಿ ಸಹೋದ್ಯೋಗಿಗಳ ಕೊರತೆ, ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗದ ಅನುದಾನ, ಕಡಿಮೆ ದುಡ್ಡು ಕೊಡುತ್ತಾರೆಂದು ಯಾರೂ ಸುಳಿಯದಿದ್ದರೆ ಟಾಯ್ಲೆಟ್ ತೊಳೆಯೋದು, ಕಸ ಗುಡಿಸೋದು, ನೆಲ ಒರೆಸೋದರಿಂದ ಎಲ್ಲವನ್ನೂ ನಿರ್ವಹಿಸಬೇಕು! ಅವರಲ್ಲಿ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತರು.

ಅವರಿಗೆ ಸರಕಾರೀ ಶಾಲೆಗಳ ಜೀವನಾಡಿಯ ಪರಿಚಯವಿದೆ. ಸಮಾಜದ ಅಂಚಿಗೆ ಸರಿದ, ಬಡವರ ಮಕ್ಕಳ ಭವಿಷ್ಯದ ಕಾಳಜಿಯಿದೆ.

ಇನ್ನು ಕೆಪಿಎಸ್ -ಮ್ಯಾಗನೇಟ್ ಶಾಲೆಗಳ ಕಥೆಯೇ ಬೇರೆ ಇದೆ ಬಿಡಿ. ಏಳನೇ ತರಗತಿಯವರೆಗೂ ಇಂಗ್ಲಿಷ್ ಓದಿದ ಮಕ್ಕಳು ಈಗ ದಿಕ್ಕಿಲ್ಲದೇ ಕನ್ನಡ ಶಾಲೆಗೆ ಮರಳಿ ಬಂದಿದ್ದಾರೆ. ಆದರೆ ಭವಿಷ್ಯದಲ್ಲಿ ಕನ್ನಡ ಶಾಲೆಗಳೇ ಮುಚ್ಚಿ ಹೋಗುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿವೆ. ಏಳೆಂಟು ವರ್ಷಗಳ ಹಿಂದೆ ಇದೇ ಕೆಪಿಎಸ್ ಶಾಲೆಗಳಿಗೆೆ ಸರಕಾರ ಮಾತು ಕೊಟ್ಟ ಸೌಲಭ್ಯಗಳು ಇಂದಿಗೂ ದೊರೆತಿಲ್ಲ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಾಗ ತೆರುವ ಶುಲ್ಕದ ಒಂದೆರಡು ಶೇಕಡಾ ದುಡ್ಡಿನಲ್ಲೇ ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿಗಳು ಸರಿಯಾಗಬಹುದು. ಸಿರಿವಂತರ ಕಾರಿನ ನಿರ್ವಹಣೆಯ ಸ್ವಲ್ಪ ಭಾಗ ಕೊಟ್ಟರೂ ಶಾಲೆಗೊಬ್ಬ ಕ್ಲರ್ಕ್ ನೇಮಿಸಬಹುದು. ಅಂದಹಾಗೆ, ಶಾಲೆಗೊಬ್ಬ ಕ್ಲರ್ಕ್ ಕೊಟ್ಟರೂ ಶಿಕ್ಷಕರಿಗೆ ಉಸಿರು ಮರಳಿ ಬರುತ್ತದೆ. ಸಚೇತನ-ಮರುಸಿಂಚನ-ಓದು ಕರ್ನಾಟಕ-ಐಃಂ-ಈಐಓ ಹೀಗೆ ಸಾಲು ಸಾಲು ಕಾರ್ಯಕ್ರಮಗಳನ್ನು ಈ ಶಿಕ್ಷಕರು ನಿತ್ಯದ ತರಗತಿಯೊಂದಿಗೆ ಸರಿದೂಗಿಸಿಕೊಂಡು ಹೋಗಬೇಕಿದೆ. ಪಟ್ಟಿ ಮಾಡಿದರೆ ನೂರೈವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳ ನಿಭಾವಣೆಯ ಭಾರ ಶಿಕ್ಷಕರ ಹೆಗಲಿಗಿದೆ. ಆದರ್ಶ ಶಿಕ್ಷಕನೊಬ್ಬ ಕಾರ್ಯಕ್ರಮದ ಪಟ್ಟಿಯೊಳಗೆ ಕಳೆದೇ ಹೋಗಿರುತ್ತಾನೆ.

ಇಂದು ಸರಕಾರಿ ಶಾಲೆಯ ಸುತ್ತ ಅಣಬೆಗಳಂತೆ ತಲೆ ಎತ್ತುತ್ತಿರೋ ಖಾಸಗಿ ಶಾಲೆಗಳನ್ನು ಬಂದ್ ಮಾಡಿ. ಮಕ್ಕಳು ತಾವಾಗೇ ಸರಕಾರಿ ಶಾಲೆಗೆ ಬರುತ್ತಾರೆ. ಶಾಲೆಗೊಬ್ಬ ಸೆಕ್ಯೂರಿಟಿ ಗಾರ್ಡ್ ಕೊಟ್ಟರೆ ರಾತ್ರಿ ಹೊತ್ತು ಶಾಲೆಗಳು ಕುಡುಕರ, ಕಾಮುಕರ ಅಡ್ಡ್ಡ ಆಗದಂತೆ ನೋಡಿಕೊಳ್ಳಬಹುದು. ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿ, ಮೂಲಭೂತ ಸೌಕರ್ಯ ಕೊಟ್ಟರೆ ಸಾಕು.

ಸ್ವಲ್ಪಶಾಲೆಯೊಳಗಿನ ಮಕ್ಕಳ ಕಥೆ ಕೇಳಿ. ಇಲ್ಲಿ ಒಂದು ತರಗತಿಯಲ್ಲಿ ರಾತ್ರಿಯೆಲ್ಲಾ ಮಾನ-ಪ್ರಾಣ ಪಣವಿಟ್ಟು ಸೋತು ಬೆಳಗ್ಗೆ ತರಗತಿಗೆ ಬಂದು ಕೂರುವ ಕುಡಿತಕ್ಕೆ ಬಲಿಯಾದ ತಂದೆಯ ಹದಿನಾರರ ಮಗಳಿದ್ದಾಳೆ. ಬೆಳಗ್ಗೆ-ಸಂಜೆ ಪೇಪರ್ ಹಾಕಿ, ಗ್ಯಾರೇಜಿನಲ್ಲಿ ದುಡಿದು ಹೊಟ್ಟೆಗೂ ತಿನ್ನದೆ ಶಾಲೆಗೆ ಬರುವ ಹುಡುಗನಿದ್ದಾನೆ.

ಅಂದು ನಾನು ಸಿಗ್‌ನಲ್‌ನಲ್ಲಿ ನಿಂತಾಗ ಪೆನ್ನು ಮಾರುತ್ತಾ ನಸುನಗುತ್ತಾ ನನ್ನ ಬಳಿಗೆ ಬಂದು ಮಾತಾಡಿಸಿದ್ದ ಆ ಹುಡುಗಿ, ಮತ್ತೆ ಒಂದೇ ವಾರದಲ್ಲಿ ರಾತ್ರಿ ಬಂದು ಗುದ್ದಿದ ಲಾರಿಯ ಎದುರು ಹೆಣವಾಗಿ ಹೋಗಿದ್ದಾಳೆ. ತನಗೆ ಕೊಟ್ಟ ಯೂನಿಫಾರ್ಮ್ ಬಟ್ಟೆಯಲ್ಲಿ ಹಟ ಮಾಡಿದಳೆಂದು ತನ್ನ ತಂಗಿಗೂ ಲಂಗ ಹೊಲಿಸಿಕೊಟ್ಟು ತಾನು ಒಂದೇ ಜೊತೆಯಲ್ಲಿ ಇಡೀ ವರ್ಷ ಕಾಲ ಹಾಕಿದ ಅಮ್ಮನಂತಾ ಹುಡುಗಿಯಿದ್ದಾಳೆ. ಅಡುಗೆ ಮನೆಯೊಳಗೆ ಕುಡುಕ ಗಂಡನ ಹೊಡೆತ ತಾಳಲಾರದೇ ಊದಿದ ಮುಖವನ್ನೇ ಹೊತ್ತು ಬಂದು ಮಕ್ಕಳಿಗೆ ತುತ್ತು ನೀಡುವ ಅಡುಗೆ ಅಮ್ಮನೂ ಇದ್ದಾಳೆ.

ಯುವಶಕ್ತಿ ಶಿಕ್ಷಣದ ಬಗ್ಗೆ ಮಾತಾಡುವುದು, ಅವರು ರಾಜಕೀಯಕ್ಕೆ ಬರಲೆಂದು ನಾವು ಆಶಿಸುವುದು ಈ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ, ಅದಕ್ಕೆ ಬೇಕಾದ ಸೌಲಭ್ಯವನ್ನು ನೀಡುವ ಒತ್ತಡ ಹಾಕಬಲ್ಲರೆಂಬ ಆಸೆಯಿಂದ. ನಮ್ಮಲ್ಲಿ ಶಿಕ್ಷಣಕ್ಕೆ ಕೊಡಬೇಕಾಗಿರುವ ಪ್ರಮಾಣದ ಅನುದಾನ ಎಂದೂ ನೀಡಿಲ್ಲ. ಇಲ್ಲಿ ಎಷ್ಟು ಏಕೋಪಾಧ್ಯಾಯ ಶಾಲೆಗಳಿವೆ ಎಂಬ ಲೆಕ್ಕ ತೆಗೆದರೆ ತಲೆ ತಿರುಗುತ್ತದೆ. ಚೀನಾದಲ್ಲಿ ಖಾಸಗಿ ಶಾಲೆಗಳನ್ನೇ ನಿಷೇಧಿಸಿದ್ದಾರಂತೆ. ನಮ್ಮಲ್ಲಿ ನಿಷೇಧಿಸುವುದು ಬೇಡ, ಸರಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ನೀಡುವಷ್ಟು ಅನುದಾನ ನೀಡಿದರೆ ಸಾಕು. ಶಿಕ್ಷಕರ ನೇಮಕಾತಿ ಮಾಡಿದರೆ ಸಾಕು. ಗ್ರಂಥಾಲಯ, ಪ್ರಯೋಗಾಲಯ ವ್ಯವಸ್ಥೆ ಮಾಡಿ ಕೊಟ್ಟರೂ ಸಾಕು.

ಹುಲ್ಲು- ಹಿಂಡಿ ಹಾಕದೇ ಎತ್ತು ದುಡಿಯಬೇಕು, ಹಸು ಹಾಲು ನೀಡಬೇಕು ಎಂದು ಬಯಸುವ ರಾಜಕಾರಣ ಜನಪರವಾಗಿರಲು ಸಾಧ್ಯವಿಲ್ಲ. ಸರಕಾರದ ಉಪೇಕ್ಷೆಯಿಂದಲೇ ಆರೋಗ್ಯ, ಶಿಕ್ಷಣದಂಥಾ ಕ್ಷೇತ್ರಗಳಿಗೆ ಬೇಕಾದಷ್ಟು ಅನುದಾನ ನೀಡದೇ ಅವು ರೋಗಗ್ರಸ್ತವಾಗಲು ಬಿಟ್ಟು ಅದೇ ಕಾರಣಕ್ಕೆ ಖಾಸಗಿ ವ್ಯವಸ್ಥೆ ಆ ಜಾಗ ತುಂಬಬೇಕೆಂದರೆ ಅಂತಹ ರಾಜಕಾರಣ ಜನಪರವಾಗಿರಲು ಸಾಧ್ಯವಿಲ್ಲ.

Tags

Governmentschoolsgovernment schools
share
ಮಾಳವಿಕ
ಮಾಳವಿಕ
Next Story
X