Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಂಗಭೂಮಿಯ ಮೂಲಕ ಸಮಾಜ ಜಾಗೃತಿ: ಪ್ರವೀಣ...

ರಂಗಭೂಮಿಯ ಮೂಲಕ ಸಮಾಜ ಜಾಗೃತಿ: ಪ್ರವೀಣ ರೆಡ್ಡಿ ಗುಂಜಳ್ಳಿ

ಬಾವಸಲಿ, ರಾಯಚೂರುಬಾವಸಲಿ, ರಾಯಚೂರು21 Feb 2026 8:30 AM IST
share
ರಂಗಭೂಮಿಯ ಮೂಲಕ ಸಮಾಜ ಜಾಗೃತಿ: ಪ್ರವೀಣ ರೆಡ್ಡಿ ಗುಂಜಳ್ಳಿ
► 50ರ ಸಂಭ್ರಮದಲ್ಲಿ ಸಮುದಾಯ’ ►‌ ‘ಸಮುದಾಯ’ದ ಅಧ್ಯಕ್ಷ ಪ್ರವೀಣ ರೆಡ್ಡಿ ಗುಂಜಳ್ಳಿ ಅವರ ಕಿರು ಸಂದರ್ಶನ

ನಾಟಕಗಳು ಕೇವಲ ಮನರಂಜನೆ ಮಾತ್ರವಲ್ಲ; ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಮಾಡುತ್ತವೆ. ನಾಟಕವು ಸಮಾಜದ ಮನಸ್ಸನ್ನು ಸ್ಪರ್ಶಿಸಿ ಚಿಂತನೆಗೆ ದಾರಿ ತೋರುವ ಶಕ್ತಿಯುತ ಕಲಾರೂಪವೂ ಹೌದು. ಇದಕ್ಕೆ ಅತ್ಯುತ್ತಮ ಉದಾಹರಣೆ ರಾಯಚೂರಿನ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆ.

ರಂಗಭೂಮಿ ಕಲೆಯನ್ನೇ ಉಸಿರಾಗಿಸಿಕೊಂಡು ಅನೇಕ ನಾಟಕಗಳನ್ನು ಪ್ರದರ್ಶಿಸಿ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಾ ಬಂದಿರುವ ‘ಸಮುದಾಯ’ 50 ವರ್ಷ ಪೂರೈಸಿದೆ. ಈ ದಿಸೆಯಲ್ಲಿ ‘ಸಮುದಾಯದ’ ಏಳುಬೀಳು, ಸಾಧನೆ, ಸವಾಲುಗಳು ಹಾಗೂ 50 ವರ್ಷದ ಸಮುದಾಯದ ಪಯಣ ಹೇಗಿತ್ತು ಎಂಬುವುದರ ಬಗ್ಗೆ ಸಮುದಾಯ ಸಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾಗಿರುವ ಪ್ರವೀಣ ರೆಡ್ಡಿ ಗುಂಜಳ್ಳಿ ಅವರ ಕಿರು ಸಂದರ್ಶನ ಇಲ್ಲಿದೆ.

ವಾ.ಭಾ: ಸಮುದಾಯ ಸಾಂಸ್ಕೃತಿಕ ಸಂಘಟನೆ ಹೇಗೆ, ಯಾಕೆ ಆರಂಭವಾಗಿದೆ, ಸಂಘಟನೆ ಕಟ್ಟಿದವರು ಯಾರು?

ಪ್ರವೀಣ ರೆಡ್ಡಿ: ರಾಯಚೂರಿನಲ್ಲಿ ಚಂದ್ರಶೇಖರ ಬಾಳೆ, ಪ್ರಗತಿಪರರಾದ ಶರಣು ಮಾಲಿ ಪಾಟೀಲ, ಪುರುಷೋತ್ತಮ ಕಲಾಲಬಂಡಿ ಹಾಗೂ ಇನ್ನಿತರರು ಸೇರಿ 50 ವರ್ಷಗಳ ಹಿಂದೆ ಸಮುದಾಯವನ್ನು ರಚನೆ ಮಾಡಿದ್ದಾರೆ. 1975 ಇಂದಿರಾ ಗಾಂಧಿ ಅವರು ದೇಶಕ್ಕೆ ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಇದನ್ನು ಆರಂಭಿಸಲಾಗಿದೆ. ಆಗ ದಲಿತರ, ರೈತರ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಾಟಕಗಳ ಮೂಲಕ ಬೆಳಕು ಚೆಲ್ಲಿ ರಾಜ್ಯದಲ್ಲಿ ಚಳವಳಿಯ ರೂಪ ನೀಡಲಾಗಿತ್ತು.

ನಂತರ 90ರ ದಶಕದಲ್ಲಿ ಅಂದಿನ ಕೇಂದ್ರ ಸರಕಾರ ಸಾಕ್ಷರತಾ ಯೋಜನೆ ಜಾರಿಗೆ ತಂದಾಗ ಸಮುದಾಯದಲ್ಲಿ ಇದ್ದ ಅನೇಕರು ಸಂಘಟನೆಯಿಂದ ದೂರವಾದರು. ಬಳಿಕ ಉಳಿದವರೇ ಸಂಘಟನೆಯ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ನಾನು 25 ವರ್ಷದಿಂದ ಸಮುದಾಯದಲ್ಲಿ ನನ್ನ ಖಾಸಗಿವೃತ್ತಿಯ ಜೊತೆಗೆ ಪ್ರವೃತ್ತಿಯಾಗಿಸಿಕೊಂಡು ಗುರುತಿಸಿಕೊಂಡಿದ್ದೇನೆ. ಪ್ರಸಕ್ತ ‘ಸಮುದಾಯ’ದಲ್ಲಿ 50 ಜನ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಮುನ್ನೂರು ಜನ ಕೆಲಸ ಮಾಡಿದ್ದಾರೆ.

ವಾ.ಭಾ: ರಂಗಭೂಮಿ ಕಲಾವಿದರು, ‘ಸಮುದಾಯ’ದ ಮುಂದೆ ಇರುವ ಸವಾಲುಗಳೇನು:

ಪ್ರವೀಣ ರೆಡ್ಡಿ: ದಲಿತ ಚಳುವಳಿ, ಕಮ್ಯುನಿಸ್ಟ್, ಕನ್ನಡಪರ ಸಂಘಟನೆಗಳು ವಿಘಟಿತಗೊಂಡು, ಚೂರು ಚೂರಾಗಿ ಒಡೆದು ಹೋಗಿ ಘಟಕಗಳಾಗಿ ಹೋರಾಟ ಮಾಡುತ್ತಿದ್ದಾರೆ. ಸಮುದಾಯ ಸಾಂಸ್ಕೃತಿಕ ಸಂಘಟನೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದೆ. ಇದಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈಗ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಕಲಾವಿದರಿಗೆ ತಮ್ಮ ಅಭಿನಯದ ಮೂಲಕ ಆಳುವ ಸರಕಾರದ ವೈಫಲ್ಯ, ಆಡಳಿತ, ಅನ್ಯಾಯವನ್ನು ಪ್ರಚಾರಪಡಿಸಲು ಅನೇಕ ಅಡ್ಡಿ, ಆತಂಕ ಎದುರಾಗಿದೆ. 1975ರ ತುರ್ತು ಪರಿಸ್ಥಿತಿಗಿಂತ ಭಯಾನಕವಾಗಿದೆ. ಇದೆಲ್ಲವನ್ನು ಮೆಟ್ಟಿ ನಿಲ್ಲಬೇಕಿದೆ. ಚಳುವಳಿ ಕಟ್ಟುವ ಅವಶ್ಯವಿದೆ.

ವಾ.ಭಾ: ಸಿನಿಮಾ ಕ್ಷೇತ್ರಕ್ಕಿಂತ ರಂಗಭೂಮಿಯಿಂದ ಯುವಕರು

ಹಿಂದೆ ಸರಿದಿದ್ದಾರೆ, ಅವರನ್ನು ಆಕರ್ಷಿಸಲು ಏನು ಮಾಡಬೇಕು?

ಪ್ರವೀಣ ರೆಡ್ಡಿ: ಇಂದಿನ ಟಿ.ವಿ ಹಾಗೂ ಸಮೂಹ ಮಾಧ್ಯಮಗಳ ಭರಾಟೆಯ ನಡುವೆ ಸಹಜವಾಗಿ ಯುವಕರು ರಂಗಭೂಮಿ ಕಲೆಯಿಂದ ದೂರ ಉಳಿದಿದ್ದಾರೆ. ನಾವು ಯುವಕರಿಗೆ ರಂಗ ಭೂಮಿ ಕಲೆಯ ರುಚಿಯನ್ನು ತಲುಪಿಸಲು ಸೋತಿದ್ದೇವೆ. ರಂಗಭೂಮಿಯ ವಿಷಯ, ವ್ಯಾಪ್ತಿ ಯುವಕರಿಗೆ ಪರಿಚಯಿಸಬೇಕಿದೆ. ರಂಗಭೂಮಿಯ ನಿಜವಾದ ಪರಿಚಯ

ಮಾಡಿಕೊಟ್ಟಲ್ಲಿ ಯುವಕರು ಆಕರ್ಷಿತರಾಗುತ್ತಾರೆ. ನಮ್ಮ ಸಮುದಾಯ ತಂಡದಲ್ಲಿ ಶೇ 70 ರಷ್ಟು ಯುವಕರು, ಕಾಲೇಜುಗಳ ವಿದ್ಯಾರ್ಥಿಗಳು ಇದ್ದಾರೆ. ರಂಗಭೂಮಿಯ ಶಕ್ತಿ ಇರುವುದು ಇಂದಿನ ಯುವಕರ ಕೈಯಲ್ಲಿ.

ವಾ.ಭಾ: ‘ಸಮುದಾಯ’ ಸಾಂಸ್ಕೃತಿಕ ಸಂಘಟನೆಯ 50ನೇ ವರ್ಷದ ಸಂಭ್ರಮ ಹೇಗಿದೆ?

ಪ್ರವೀಣ ರೆಡ್ಡಿ: ಸಮುದಾಯದ 50ರ ಸಂಭ್ರಮದ ಅಂಗವಾಗಿ ಫೆ.21 ರಂದು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿಚಾರ ಸಂಕಿರಣ, ರಂಗಗೀತೆ,

ರಂಗಗೌರವ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಯಚೂರು ಸಮುದಾಯ ನಡೆದು ಬಂದ ದಾರಿ ಕುರಿತು ಹಿರಿಯ ಚಿಂತಕ ಪ್ರೊ.ಆರ್.ಕೆ. ಹುಡಗಿ ಮಾತನಾಡಲಿದ್ದಾರೆ. ಶರಣು ಮಾಲಿಪಾಟೀಲ್, ಎಸ್.ದೇವೆಂದ್ರ ಗೌಡ, ಶ್ಯಾಮಲಾ ಪೂಜಾರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಫ್ಯಾಸಿಸಂ ಮತ್ತು ಸಾಂಸ್ಕೃತಿಕ ರಾಜಕಾರಣ ಕುರಿತು ಚಿಂತಕ ಡಾ. ರಹಮತ್ ತರೀಕೆರೆ ವಿಷಯ ಮಂಡಿಸಲಿದ್ದಾರೆ. ಸಂಜೆ 6:30ಕ್ಕೆ ಡಾ.ವಿಕ್ರ ವಿಸಾಜಿ ರಚಿಸಿ ರಕ್ತ ವಿಲಾಪ ನಾಟಕ ಪ್ರದರ್ಶನಗೊಳ್ಳುತ್ತದೆ. ವಿವಿಧ ಸಮುದಾಯದ ಮುಖಂಡರು, ಸಾಹಿತಿಗಳು, ಪ್ರಗತಿಪರ ಚಿಂತಕರು, ಕಸಾಪದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ವಾ.ಭಾ: ಸಮುದಾಯದ ಮುಂದಿನ ಯೋಜನೆ, ಗುರಿ ಏನು?

ಪ್ರವೀಣ ರೆಡ್ಡಿ: ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ಪರ್ಯಾಯ ರಾಜಕಾರಣಕ್ಕೆ ಬೇಕಾಗಿರುವ ಅಂಶಗಳನ್ನು ಸಾಂಸ್ಕೃತಿಕವಾಗಿ ರೂಪಿಸುವ ಮೂಲಕ ಜನರಿಗೆ ಹತ್ತಿರವಾಗುವ ಕೆಲಸದಲ್ಲಿ ತೊಡಗಿದ್ದೇವೆ. ಪರ್ಯಾಯ ರಾಜಕಾರಣಕ್ಕೆ ವಾತಾವರಣದಲ್ಲಿ ಜನರ ಸಹಭಾಗಿತ್ವ ನಿರೀಕ್ಷಿಸುತ್ತಿದ್ದೇವೆ.

ರಾಯಚೂರಿನಲ್ಲಿ ಸಾಮಾಜಿಕ ವಿಷಯಗಳನ್ನು ಜನರ ಮಧ್ಯೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ‘ಸಮುದಾಯ’ ಸಾಂಸ್ಕೃತಿಕ ಸಂಘಟನೆ ಗಮನಾರ್ಹ ಸಾಂಸ್ಕೃತಿಕ ಚಳವಳಿಯಾಗಿ ರೂಪುಗೊಂಡಿದೆ. 1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಶರಣು ಮಾಲಿ ಪಾಟೀಲ್, ಪುರುಷೋತ್ತಮ ಕಲಾಬಂಡಿ ಅವರ ಸಾರಥ್ಯದಿಂದ ಆರಂಭಗೊಂಡ ಸಮುದಾಯ ಸಾಂಸ್ಕೃತಿಕ ಸಂಘಟನೆ ಏಳು ಬೀಳುಗಳ ನಡುವೆ ಅನೇಕ ಕಲಾವಿದರನ್ನು ಕೈ ಹಿಡಿದು ನಡೆಸುತ್ತಿದೆ. ಶ್ರೀಕಾಂತ ರಾವ್, ನೀಲಕಂಠ ರಾವ್, ಮಲ್ಲನಗೌಡ ಇಂದುಪುರ, ಕರಿಯಪ್ಪ ಮಾಸ್ತರ, ವಿ.ಎನ್ ಅಕ್ಕಿ, ತಾಯಣ್ಣ ಯರಗೇರಾ ಹಾಗೂ ಪ್ರಸಕ್ತ ಅಧ್ಯಕ್ಷ ಪ್ರವೀಣರೆಡ್ಡಿ ಗುಂಜಳ್ಳಿ ಅವರ ನೇತೃತ್ವದಲ್ಲಿ ಅನೇಕ ರಂಗಚಟುವಟಿಕೆಗಳನ್ನು ಸಮುದಾಯ ನಿರ್ವಹಿಸಿದೆ.

ಬೀದಿ ನಾಟಕಗಳು, ಜಾಗೃತಿ ಜಾಥಾ, ನಾಟಕಗಳು, ರಂಗಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭ್ರಷ್ಟಾಚಾರ, ಅಸಮಾನತೆ, ಕಾರ್ಮಿಕ ಹಕ್ಕುಗಳು, ಶಿಕ್ಷಣ ಮತ್ತು ಮಹಿಳಾ ಸಬಲೀಕರಣ ಮುಂತಾದ ವಿಷಯಗಳನ್ನು ಬೀದಿ-ಬಯಲುಗಳಲ್ಲಿ ಪ್ರಸ್ತುತ ಪಡಿಸುತ್ತಾ ಬಂದಿದೆ. ಗ್ರಾಮೀಣ ಭಾಗಗಳಲ್ಲಿ ಜನರ ಮುಂದೆ ನೇರವಾಗಿ ನಡೆಯುವ ಬೀದಿ ನಾಟಕಗಳು ಹೆಚ್ಚಿನ ಪರಿಣಾಮ ಬೀರುತ್ತಿವೆ.

ಸಮುದಾಯ ಸಂಘಟನೆ ಯುವ ಕಲಾವಿದರಿಗೆ ತರಬೇತಿ ನೀಡಿ, ಅವರಲ್ಲಿ ಅಭಿನಯ ಕೌಶಲ್ಯ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಳೆಸುತ್ತಿದೆ. ಕಾಲೇಜು ವಿದ್ಯಾರ್ಥಿಗಳೂ ಸಹ ತಂಡದ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹ. ಇದುವರೆಗೆ 220 ರಂಗಭೂಮಿ ಕಲಾವಿದರೂ ಸಮುದಾಯದಲ್ಲಿ ಕೆಲಸ ಮಾಡಿರುವುದು ಇದರ ಮತ್ತೊಂದು ವಿಶೇಷತೆ.

ಹಾಲಿ ಅಧ್ಯಕ್ಷರಾಗಿರುವ ರಾಯಚೂರು ತಾಲೂಕಿನ ಪ್ರವೀಣ ರೆಡ್ಡಿ ಗುಂಜಳ್ಳಿ ಅವರು 1999-2000ರಲ್ಲಿ ನೀನಾಸಂನಲ್ಲಿ ರಂಗ ಶಿಕ್ಷಣ ಕೇಂದ್ರ ಪದವಿ ಪಡೆದಿದ್ದು 50 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಖಾಸಗಿ ವೃತ್ತಿಯ ಜೊತೆಗೆ ರಂಗಭೂಮಿಯಲ್ಲಿ ತೊಡಗಿ 10 ನಾಟಕಗಳನ್ನು ನಿರ್ದೇಶಿಸಿ ಸಮುದಾಯದ ತಂಡಗಳ ಜೊತೆ ಕೆಲಸ ಮಾಡಿದ್ದಾರೆ. ಪ್ರಗತಿಪರ ಚಿಂತಕರಾಗಿದ್ದ ಎಂ.ಎಂ. ಕಲ್ಬುರ್ಗಿ ಅವರ ಕೊಲೆಯ ಕುರಿತಾದ ‘ರಕ್ತ ವಿಲಾಪ’, ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಸಾವಿನ ಕುರಿತಾದ ‘ನಕ್ಷತ್ರದ ಧೂಳು’, ದಲಿತ ಸಾಹಿತಿ ಎನ್.ಕೆ. ಹನುಮಂತಯ್ಯನವರ ದಲಿತ ಸಂವೇದನೆಯ ಕುರಿತಾದ ‘ಕರಿಯ ಬೆನಲ್ಲಿ’ ಸೇರಿ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.

Tags

Praveena Reddy Gunjalli
share
ಬಾವಸಲಿ, ರಾಯಚೂರು
ಬಾವಸಲಿ, ರಾಯಚೂರು
Next Story
X