Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗಂಭೀರ ಸ್ಥಿತಿಯಲ್ಲಿ ದೇಶದ ಪತ್ರಿಕಾ...

ಗಂಭೀರ ಸ್ಥಿತಿಯಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯ

ಪತ್ರಿಕಾ ಸ್ವಾತಂತ್ರ್ಯ ಬಗ್ಗೆ ಮತ್ತು ಮಾಹಿತಿ ಹಕ್ಕಿನ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾವಿಸುವಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಒತ್ತಾಯ

ವಿನಯ್ ಕೆ.ವಿನಯ್ ಕೆ.24 July 2024 10:16 AM IST
share
ಗಂಭೀರ ಸ್ಥಿತಿಯಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯ
ದೇಶದ ರಾಜಕಾರಣಿಗಳ ಪೈಕಿ ಮಡಿಲ ಮೀಡಿಯಾಗಳನ್ನು, ಅವುಗಳ ಆ್ಯಂಕರ್‌ಗಳನ್ನು ನಿಷ್ಠುರವಾಗಿ ರಾಹುಲ್ ಗಾಂಧಿ ವಿರೋಧಿಸಿದ ಹಾಗೆ ಬೇರೆ ಯಾವ ನಾಯಕರೂ ವಿರೋಧಿಸಿಲ್ಲ. ಮಡಿಲ ಮೀಡಿಯಾಗಳ ಜೊತೆ ಒಂದಿಷ್ಟೂ ರಾಜಿಯಾಗದೆ ಅವುಗಳನ್ನು ತರಾಟೆಗೆ ತೆಗೆದುಕೊಂಡ ಏಕೈಕ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ. ಇದೆಲ್ಲದರ ಹಿನ್ನೆಲೆಯಲ್ಲಿ ಸಂಪಾದಕರುಗಳ ಒಕ್ಕೂಟ ರಾಹುಲ್ ಗಾಂಧಿ ಅವರಲ್ಲೇ ಈ ಬಗ್ಗೆ ಸಂಸತ್ತಿನಲ್ಲಿ ಮಾತಾಡಿ, ಚರ್ಚೆ ಮಾಡಿ ಎಂದು ಆಗ್ರಹಿಸಿದೆ. ಇದು ಇಡೀ ‘ಇಂಡಿಯಾ’ ಒಕ್ಕೂಟದ ಮಹತ್ವದ ಜವಾಬ್ದಾರಿಯೂ ಆಗಿದೆ.

ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ಪತ್ರ ಬರೆದಿದ್ದು, ಪತ್ರಿಕಾ ಸ್ವಾತಂತ್ರ್ಯ ಬಗ್ಗೆ ಮತ್ತು ಮಾಹಿತಿ ಹಕ್ಕಿನ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾವಿಸುವಂತೆ ಅದು ಒತ್ತಾಯಿಸಿದೆ.

ಕಳೆದ ಕೆಲ ವರ್ಷಗಳಿಂದ ಮಾಧ್ಯಮವನ್ನು ನಿಯಂತ್ರಿಸಲು ಸರಕಾರ ತೆಗೆದುಕೊಂಡಿರುವ ಶಾಸನಾತ್ಮಕ ಕ್ರಮಗಳ ಬಗ್ಗೆ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ. ಈ ವಿಚಾರವನ್ನು ಸಂಸತ್ತಿನಲ್ಲಿ ಎತ್ತಲು ರಾಹುಲ್ ಗಾಂಧಿಯವರನ್ನು ಗಿಲ್ಡ್ ಕೇಳಿಕೊಂಡಿದೆ.

ಮುದ್ರಣ, ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮದ ಬಗ್ಗೆ ಹೊಸ ಚರ್ಚೆ ಮತ್ತು ಸಮಾಲೋಚನೆಗಳು ನಡೆಯಬೇಕು ಎಂಬುದು ಗಿಲ್ಡ್ ಆಗ್ರಹವಾಗಿದೆ.

ಡಿಜಿಟಲ್ ಖಾಸಗಿ ದತ್ತಾಂಶ ರಕ್ಷಣೆ ಕಾಯ್ದೆ, ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆ, ಪತ್ರಿಕೆ ಹಾಗೂ ನಿಯತಕಾಲಿಕಗಳ ನೋಂದಣಿ ಕಾಯ್ದೆ, ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತರಲಾಗಿರುವ ತಿದ್ದುಪಡಿಗಳನ್ನು ಗಿಲ್ಡ್ ಪಟ್ಟಿ ಮಾಡಿದ್ದು, ತನ್ನ ವಿರೋಧ ಏಕೆಂಬುದನ್ನು ಹೇಳಿದೆ.

ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮುಕ್ತ ಮತ್ತು ಸ್ವತಂತ್ರ ಮಾಧ್ಯಮ ಅತ್ಯಗತ್ಯವಾಗಿದ್ದು, ಈ ಮೂಲಭೂತ ತತ್ವಗಳನ್ನು ರಕ್ಷಿಸುವುದಕ್ಕಾಗಿ, ಈಗಿನ ಶಾಸನಾತ್ಮಕ ಕ್ರಮಗಳನ್ನು ಮರುಪರಿಶೀಲಿಸುವುದು ಅತ್ಯಗತ್ಯ ಎಂದು ಗಿಲ್ಡ್ ಪ್ರತಿಪಾದಿಸಿದೆ.

ಕಾಯ್ದೆಗಳಿಗೆ ಸಂಬಂಧಿಸಿ ಗಿಲ್ಡ್ ಮಾಡಿರುವ ಆಕ್ಷೇಪಗಳು ಏನು ಎಂಬುದನ್ನು ಗಮನಿಸಿದರೆ, ಪತ್ರಿಕಾ ಸ್ವಾತಂತ್ರ್ಯದ ವಿಚಾರದಲ್ಲಿ ದೇಶದಲ್ಲಿ ಎಂತಹ ಗಂಭೀರ ಸ್ಥಿತಿಯಿದೆ ಎಂಬುದು ಮನವರಿಕೆಯಾಗುತ್ತದೆ.

ಮೊದಲಿಗೆ, ಡಿಜಿಟಲ್ ಖಾಸಗಿ ದತ್ತಾಂಶ ರಕ್ಷಣೆ ಕಾಯ್ದೆಯಲ್ಲಿ

೧.ಸಂಶೋಧನೆ, ತನಿಖೆ ಮತ್ತು ಪ್ರಕಟಣೆಯಂತಹ ಮೂಲಭೂತ ಪತ್ರಿಕೋದ್ಯಮ ಕಾರ್ಯಗಳಿಗೆ ತೀವ್ರ ಅಡಚಣೆ ಮಾಡುವ ನಿಬಂಧನೆಗಳಿವೆ.

೨. ಡೇಟಾ ಪ್ರಕ್ರಿಯೆಗೆ ಒಪ್ಪಿಗೆಯ ಅವಶ್ಯಕತೆಯನ್ನು ಕಡ್ಡಾಯಗೊಳಿಸಿರುವುದು ವಿಶೇಷವಾಗಿ ತನಿಖಾ ಪತ್ರಿಕೋದ್ಯಮದಲ್ಲಿ ಸಾಮಾನ್ಯವಾಗಿ ಅಪ್ರಾಯೋಗಿಕ.

೩. ಆರ್‌ಟಿಐ ಅರ್ಜಿ ತಿರಸ್ಕರಿಸುವ ಅವಕಾಶವಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ ದುರ್ಬಲಗೊಳ್ಳಬಹುದು.

೪. ಪತ್ರಕರ್ತರೂ ಸೇರಿದಂತೆ ನಾಗರಿಕರ ಮೇಲಿನ ಕಣ್ಗಾವಲು ಸಕ್ರಿಯಗೊಳಿಸುವುದಕ್ಕೆ ಈ ಕಾಯ್ದೆ ಕಾರಣವಾಗುತ್ತದೆ.

೫. ಸಾರ್ವಜನಿಕರ ಹಿತಾಸಕ್ತಿ ಎಂಬ ಅಸ್ಪಷ್ಟ ನೆಪ ಮುಂದೆ ಮಾಡಿ, ವಿಷಯವನ್ನು ಸೆನ್ಸಾರ್ ಮಾಡಲು ಸರಕಾರಕ್ಕೆ ಇದು ಅವಕಾಶ ನೀಡುತ್ತದೆ. ಸತ್ಯಗಳೇ ಕತ್ತಲ ಪಾಲಾಗುವ ಅಪಾಯಗಳು ಇಲ್ಲಿವೆ.

ಎರಡನೆಯದಾಗಿ, ಪತ್ರಿಕೆ ಹಾಗೂ ನಿಯತಕಾಲಿಕಗಳ ನೋಂದಣಿ ಕಾಯ್ದೆಯಲ್ಲಿ

೧. ಪತ್ರಿಕಾ ರಿಜಿಸ್ಟ್ರಾರ್ ಅಧಿಕಾರವನ್ನು ಇತರ ಏಜೆನ್ಸಿಗಳಿಗೆ ವಹಿಸಲು ಅವಕಾಶವಿದೆ.

೨.ಸರಕಾರ ತನ್ನ ಟೀಕಾಕಾರರ ವಿರುದ್ಧ ಈ ಕಾಯ್ದೆಯನ್ನು ಬಳಸಿಕೊಳ್ಳಬಹುದಾಗಿದೆ.

೩.ಪತ್ರಿಕಾ ಕಚೇರಿ ಪ್ರವೇಶಕ್ಕೆ, ದಾಖಲೆಗಳ ಪರಿಶೀಲನೆಗೆ ಮತ್ತು ಸಿಬ್ಬಂದಿಯನ್ನು ಪ್ರಶ್ನಿಸಲು ಪತ್ರಿಕಾ ರಿಜಿಸ್ಟ್ರಾರ್‌ಗೆ ಈ ಕಾಯ್ದೆ ಅಧಿಕಾರ ನೀಡುತ್ತದೆ.

೪. ಸುದ್ದಿ ಪ್ರಕಟಣೆಗೆ ನಿಯಮಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ವ್ಯಾಪಕ ಅಧಿಕಾರವಿದ್ದು, ಅನಿಯಂತ್ರಿತ ನಿಯಮಗಳು ಕಳವಳಕಾರಿ.

ಮೂರನೆಯದಾಗಿ, ಪ್ರಸಾರ ಸೇವೆಗಳ ನಿಯಂತ್ರಣ ಮಸೂದೆಯಲ್ಲಿ

೧. ವಿಷಯ ಮೌಲ್ಯಮಾಪನ ಸಮಿತಿಗಳ ರಚನೆಯಿಂದಾಗಿ ಸರಕಾರವೇ ನಿಯಂತ್ರಣ ಸಾಧಿಸಲು ಅವಕಾಶವಾಗಲಿದೆ. ಸರಕಾರಿ ಅಧಿಕಾರಿಗಳಿರುವ ಪ್ರಸಾರ ಸಲಹಾ ಮಂಡಳಿಗೆ ಮೇಲ್ವಿಚಾರಣೆಯ ಮತ್ತು ನಿರ್ಬಂಧಿಸುವ ಅಧಿಕಾರವಿದ್ದು, ಸೆನ್ಸಾರ್‌ಶಿಪ್‌ಗೂ ಕಾರಣವಾಗಬಹುದು.

೨. ಅಸ್ಪಷ್ಟ ಆಧಾರಗಳ ಮೇಲೆ ಪ್ರಸರಣ ನಿಯಂತ್ರಿಸಲು ಅಥವಾ ನಿಷೇಧಿಸಲು ಸರಕಾರಕ್ಕೆ ಅವಕಾಶವಿದೆ.

೩.ನಿಯಮ ರೂಪಿಸಲು ಮಿತಿಮೀರಿದ ಅಧಿಕಾರವಿದ್ದು, ಇದು ಅನಿಶ್ಚಿತತೆಗೆ ಕಾರಣವಾಗಲಿದೆ.

೪. ಪ್ರಸಾರ ಉಪಕರಣಗಳ ತಪಾಸಣೆ, ಪ್ರತಿಬಂಧ, ಮೇಲ್ವಿಚಾರಣೆ ಮತ್ತು ವಶಪಡಿಸಿಕೊಳ್ಳಲು ಅಧಿಕಾರ ನೀಡುತ್ತದೆ.

೫.ಕಂಟೆಂಟ್ ಅಳಿಸುವುದು ಅಥವಾ ಬದಲಿಸಲು ಮಾರ್ಪಾಡು ಮಾಡಲು ಮತ್ತು ಚಾನೆಲ್‌ನ ಪ್ರಸಾರ ನಿರ್ಬಂಧಿಸಲು ಅಧಿಕಾರ ನೀಡುತ್ತದೆ.

ಒಟ್ಟಾರೆಯಾಗಿ, ಪತ್ರಿಕೋದ್ಯಮವನ್ನು ದಮನಿಸುವ ಅಧಿಕಾರ ಈ ಕಾಯ್ದೆಗಳ ಮೂಲಕ ಸರಕಾರಕ್ಕೆ ಸಿಗಲಿರುವುದರ ಬಗ್ಗೆ ರಾಹುಲ್ ಅವರಿಗೆ ಬರೆದ ಪತ್ರದಲ್ಲಿ ಗಿಲ್ಡ್ ತೀವ್ರ ಆತಂಕ ವ್ಯಕ್ತಪಡಿಸಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ೨೦೨೪ರಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ೧೫೯ನೇ ಸ್ಥಾನಕ್ಕೆ ಕುಸಿದಿತ್ತೆಂಬುದನ್ನು ನೋಡಿದ್ದೇವೆ.

ಈ ಹಿನ್ನೆಲೆಯಲ್ಲಿ ಸಂಪಾದಕರ ಗಿಲ್ಡ್ ಇಂತಹ ಕಳವಳ ವ್ಯಕ್ತಪಡಿಸಿರುವುದು ಮತ್ತು ಸಂಸತ್ತಿನಲ್ಲಿ ಇದರ ಪ್ರಸ್ತಾಪಕ್ಕೆ ವಿಪಕ್ಷ ನಾಯಕನನ್ನು ಒತ್ತಾಯಿಸಿರುವುದು ಮಹತ್ವ ಪಡೆದಿದೆ.

ಜುಲೈ ೧೮ರಂದು ಬರೆದಿರುವ ಪತ್ರದಲ್ಲಿ, ಮೂಲಭೂತ ಸ್ವಾತಂತ್ರ್ಯಕ್ಕೆ ಅಪಾಯ ಹೆಚ್ಚುತ್ತಿರುವ ಬಗ್ಗೆ ಗಿಲ್ಡ್ ಉಲ್ಲೇಖಿಸಿದೆ. ಮಾಧ್ಯಮವನ್ನು ನಿಯಂತ್ರಿಸಲು ತೆಗೆದುಕೊಳ್ಳಲಾಗಿರುವ ಹಲವಾರು ಶಾಸನಾತ್ಮಕ ಕ್ರಮಗಳು ತೀವ್ರ ಕಳವಳಕಾರಿ ಎಂದು ಗಿಲ್ಡ್ ಹೇಳಿದೆ.

ಈ ಕಾನೂನುಗಳ ಕರಡು ಮತ್ತು ಅಂಗೀಕಾರದ ವೇಳೆ ಸಾಕಷ್ಟು ಸಮಾಲೋಚನೆ ಮತ್ತು ಸಂಸದೀಯ ಪರಿಶೀಲನೆಗೆ ಅವಕಾಶ ಕೊಡದೆ ಜಾರಿಗೊಳಿಸಲಾಗಿರುವುದು ಈ ಕಳವಳಕ್ಕೆ ಕಾರಣ ಎಂದು ಗಿಲ್ಡ್ ಹೇಳಿದೆ.

ಈ ಕಾಯ್ದೆಗಳೆಲ್ಲವೂ ಅಸ್ಪಷ್ಟ ಮತ್ತು ಮಿತಿಮೀರಿದ ನಿಬಂಧನೆಗಳನ್ನು ಹೊಂದಿವೆ. ಕಾನೂನುಬದ್ಧ ಪತ್ರಿಕೋದ್ಯಮದ ನಿರ್ಬಂಧಕ್ಕೆ ಇವೆಲ್ಲ ದುರ್ಬಳಕೆ ಆಗುವ ಅವಕಾಶ ಜಾಸ್ತಿಯಿದೆ.

ಈ ನಿಬಂಧನೆಗಳು ಸರಕಾರಿ ಅಧಿಕಾರಿಗಳು ಮತ್ತು ಏಜೆನ್ಸಿಗಳಿಗೆ ವ್ಯಾಪಕ ಅಧಿಕಾರ ನೀಡುತ್ತವೆ ಮತ್ತು ಈ ಮೂಲಕ ಪತ್ರಿಕೋದ್ಯಮದ ಮೇಲೆ ಸರಕಾರದ ನಿಯಂತ್ರಣ ಮತ್ತು ದಂಡನಾತ್ಮಕ ಕ್ರಮಗಳು ಅತಿಯಾಗಲಿವೆ.

ಪತ್ರಿಕೋದ್ಯಮ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಇವುಗಳ ಪರಿಣಾಮ ತೀವ್ರವಾಗಿರಬಹುದು ಎಂಬುದು ಸಂಪಾದಕರ ಒಕ್ಕೂಟದ ಆತಂಕವಾಗಿದೆ.

ಕಳೆದ ೧೦ ವರ್ಷಗಳಿಂದಲೂ ಸರಕಾರ ಹೇಗೆ ಪತ್ರಿಕೋದ್ಯಮವನ್ನು, ಪ್ರಶ್ನಿಸುವವರನ್ನು ದಮನಿಸುವ ಕೆಲಸ ಮಾಡಿಕೊಂಡು ಬಂದಿದೆ ಎಂಬುದನ್ನು ನೋಡಿದ್ದೇವೆ. ಈಗ ಅವೆಲ್ಲಕ್ಕೂ ಕಾನೂನಿನ ಬಲ ಪಡೆಯಲಿರುವ ಸರಕಾರ, ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ.

ಈಗಾಗಲೇ ಮಾಧ್ಯಮದ ಬಹುಪಾಲು ಭಾಗ ಸರಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ ಮತ್ತು ಆಡಳಿತಾರೂಢರ ಆಪ್ತರ ಕೈಯಲ್ಲಿಯೇ ಮಾಧ್ಯಮದ ಬಹುಪಾಲು ಒಡೆತನವಿದೆ.

ಆದರೆ ಈ ಬಲಾಢ್ಯ ಮಾಧ್ಯಮ ಸಂಸ್ಥೆಗಳು ಸರಕಾರದ ಭಟ್ಟಂಗಿತನದಲ್ಲಿ ಕಾಲ ಕಳೆಯುತ್ತಿರುವಾಗ ಸ್ವತಂತ್ರ ಪತ್ರಕರ್ತರು ಸೋಷಿಯಲ್ ಮೀಡಿಯಾಗಳ ಮೂಲಕ ನಿಜವಾದ ಪತ್ರಿಕೋದ್ಯಮ ಮಾಡುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಈ ಸ್ವತಂತ್ರ ಪತ್ರಕರ್ತರೇ ದೇಶದಲ್ಲಿ ನಿಜವಾದ ವರದಿಗಾರಿಕೆ ಹಾಗೂ ವಿಶ್ಲೇಷಣೆಯನ್ನು ಜೀವಂತ ಇಟ್ಟಿದ್ದಾರೆ.

ಜನರಿಗೆ ಹೇಳಲೇಬೇಕಾದ ಸತ್ಯವನ್ನು ತಲುಪಿಸಿದ್ದಾರೆ, ಸರಕಾರಕ್ಕೆ ಕೇಳಲೇಬೇಕಾದ ಪ್ರಶ್ನೆಗಳನ್ನು ಕೇಳಿದ್ದಾರೆ ಈ ಸ್ವತಂತ್ರ ಪತ್ರಕರ್ತರು.

ಈ ಸ್ವತಂತ್ರ ಪತ್ರಕರ್ತರು, ವರದಿಗಾರರ ವರದಿಗಳನ್ನು, ವಿಶ್ಲೇಷಣೆಗಳನ್ನು ಲಕ್ಷಗಟ್ಟಲೆ ಜನ ಓದಿದ್ದಾರೆ, ವೀಕ್ಷಿಸಿದ್ದಾರೆ.

ಇದು ಸರಕಾರವನ್ನು ಕೆರಳಿಸಿದೆ.

ಬಹುತೇಕ ಎಲ್ಲ ಪ್ರಮುಖ ಪತ್ರಿಕೆಗಳು, ಚಾನೆಲ್‌ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರೂ ಈ ಸ್ವತಂತ್ರ ಪತ್ರಕರ್ತರು ತನ್ನ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂಬುದು ಸರಕಾರಕ್ಕೆ ತಲೆನೋವಾಗಿದೆ.

ಹಾಗಾಗಿಯೇ ಹೊಸ ಹೊಸ ಕಾನೂನುಗಳು, ನಿಯಮಗಳ ಮೂಲಕ ಸ್ವತಂತ್ರ ಪತ್ರಕರ್ತರ ಧ್ವನಿ ಅಡಗಿಸಲು ಮೋದಿ ಸರಕಾರ ಹೊರಟಿದೆ.

ಹೀಗಿರುವಾಗ ಸಂಪಾದಕರ ಮಂಡಳಿಗೆ ರಾಹುಲ್ ಗಾಂಧಿಯೇ ಈ ಬಗ್ಗೆ ಸಂಸತ್ತಿನಲ್ಲಿ ಮಾತಾಡಲು ಸೂಕ್ತ ಎಂದು ಕಂಡಿರುವುದರಲ್ಲಿ ಆಶ್ಚರ್ಯವಿಲ್ಲ.

ಏಕೆಂದರೆ ದೇಶದ ರಾಜಕಾರಣಿಗಳ ಪೈಕಿ ಮಡಿಲ ಮೀಡಿಯಾಗಳನ್ನು, ಅವುಗಳ ಆ್ಯಂಕರ್‌ಗಳನ್ನು ನಿಷ್ಠುರವಾಗಿ ರಾಹುಲ್ ಗಾಂಧಿ ವಿರೋಧಿಸಿದ ಹಾಗೆ ಬೇರೆ ಯಾವ ನಾಯಕರೂ ವಿರೋಧಿಸಿಲ್ಲ.

ಮಡಿಲ ಮೀಡಿಯಾಗಳ ಜೊತೆ ಒಂದಿಷ್ಟೂ ರಾಜಿಯಾಗದೆ ಅವುಗಳನ್ನು ತರಾಟೆಗೆ ತೆಗೆದುಕೊಂಡ ಏಕೈಕ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ.

ಇದೆಲ್ಲದರ ಹಿನ್ನೆಲೆಯಲ್ಲಿ ಸಂಪಾದಕರುಗಳ ಒಕ್ಕೂಟ ರಾಹುಲ್ ಗಾಂಧಿ ಅವರಲ್ಲೇ ಈ ಬಗ್ಗೆ ಸಂಸತ್ತಿನಲ್ಲಿ ಮಾತಾಡಿ, ಚರ್ಚೆ ಮಾಡಿ ಎಂದು ಆಗ್ರಹಿಸಿದೆ.

ಇದು ಇಡೀ ‘ಇಂಡಿಯಾ’ ಒಕ್ಕೂಟದ ಮಹತ್ವದ ಜವಾಬ್ದಾರಿಯೂ ಆಗಿದೆ.

share
ವಿನಯ್ ಕೆ.
ವಿನಯ್ ಕೆ.
Next Story
X