Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೀನಿನ ಚರ್ಮದಿಂದ ಮೌಲ್ಯವರ್ಧಿತ ಉತ್ಪನ್ನ

ಮೀನಿನ ಚರ್ಮದಿಂದ ಮೌಲ್ಯವರ್ಧಿತ ಉತ್ಪನ್ನ

ಇಬ್ರಾಹಿಂ ಅಡ್ಕಸ್ಥಳಇಬ್ರಾಹಿಂ ಅಡ್ಕಸ್ಥಳ2 Jan 2026 11:30 AM IST
share
ಮೀನಿನ ಚರ್ಮದಿಂದ ಮೌಲ್ಯವರ್ಧಿತ ಉತ್ಪನ್ನ
►ವಿಜ್ಞಾನಿಗಳ ತಂಡದಿಂದ ಸಂಶೋಧನೆ ►ಪ್ರಾಣಿಗಳ ಚರ್ಮದ ಬಳಕೆ ಶೇ.30ರಷ್ಟು ಕಡಿಮೆ ಮಾಡಲು ಸಾಧ್ಯ

ಮಂಗಳೂರು, ಜ.1: ಸುಲಿದು ಬಿಸಾಡುವ ಮೀನುಗಳ ಚರ್ಮವನ್ನು ಬಳಸಿ ಕೀ ಚೈನ್, ಪರ್ಸ್, ಬೆಲ್ಟ್ ಮತ್ತಿತರ ವಿವಿಧ ಮೌಲ್ಯವರ್ಧಿತ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವ ಮೂಲಕ ಚರ್ಮಕ್ಕಾಗಿ ಪ್ರಾಣಿಗಳ ಅವಲಂಬನೆ ಕಡಿಮೆ ಮಾಡಬಹುದು ಮತ್ತು ಚರ್ಮದ ಉತ್ಪಾದನೆಗಾಗಿ ಪರಿಸರದ ಮೇಲಾಗುವ ಹೆಚ್ಚಿನ

ಹಾನಿಯನ್ನು ತಡೆಯಲು ಸಾಧ್ಯವಿದೆ ಎನ್ನುವುದನ್ನು ವಿಜ್ಞಾನಿಗಳ ತಂಡ ದೃಢಪಡಿಸಿದೆ.

ಮಂಗಳೂರು ಮೀನುಗಾರಿಕೆ ಕಾಲೇಜಿನ ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮಂಜನಾಯ್ಕ್ ನೇತೃತ್ವದಲ್ಲಿ ಸಂಶೋಧನೆ ನಿರತ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ 8 ಮಂದಿ ವಿಜ್ಞಾನಿ ಗಳ ತಂಡ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದೆ. ಈ ಸಂಶೋಧನೆಯೂ ಸ್ಪ್ರಿಂಗರ್ ನೇಚರ್ ಜರ್ನಲ್ಸ್‌ನಲ್ಲಿ ಪ್ರಕಟಗೊಂಡಿದ್ದು, ಇದರೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ.

ಈ ತಂಡವು ಮೀನು ಸಂಸ್ಕರಣಾ ಉದ್ಯಮದಿಂದ ತಿರಸ್ಕರಿಸಲ್ಪಟ್ಟ ಉಪ ಉತ್ಪನ್ನವಾದ ಮೀನಿನ ಚರ್ಮವನ್ನು ಬಳಸಿಕೊಂಡು ನವೀನ ಮತ್ತು ಪರಿಸರ ಸ್ನೇಹಿ ತಯಾರಿಕಾ ವಿಧಾನವನ್ನು ಅಭಿವೃದ್ಧಿಪಡಿಸಿದೆ.

ಭಾರತದ ಸಮುದ್ರದಲ್ಲಿ ಕಂಡು ಬರುವ ಮಲಬಾರ್ ಗ್ರೂಪರ್, ಮೆಲುಗು, ಕೋಬಿಯಾ, ಕ್ಯಾಟ್‌ಫಿಶ್(ತೇಡೆ) ಮತ್ತು ಸ್ಪೈನಿಚೀಕ್ ಗ್ರೂಪರ್ ಮೀನು ಚರ್ಮದ ಉತ್ಪಾದನೆಗೆ ಹೆಚ್ಚು ಉಪಯುಕ್ತವಾಗಿದೆ.

ಮೀನು ಸಾಮಾನ್ಯವಾಗಿ 47ರಿಂದ 59 ಸೆ.ಮೀ. ಉದ್ದವಿರುತ್ತವೆ. ಗಾತ್ರದಲ್ಲಿ 700 ಗ್ರಾಂನಿಂದ 1.3 ಕೆ.ಜಿ. ತನಕ ತೂಕ ಇರುತ್ತದೆ. ಇದರ ಚರ್ಮವು ಗಟ್ಟಿಯಾಗಿದೆ. ಸ್ಥಿತಿಸ್ಥಾಪಕ, ಕಾಲೇಜಿನ್ (ಪ್ರೊಟೀನ್) ಸಮೃದ್ಧವಾಗಿದೆ. ಗ್ರೂಪರ್ ಮೀನುಗಳಲ್ಲಿ ಬೇರೆ ಪ್ರಭೇದ ಇರುತ್ತವೆ. ಇದು 10ರಿಂದ 15 ಕೆ.ಜಿ. ತೂಕದ್ದಾಗಿರುತ್ತದೆ.

ಪ್ರಾಣಿಗಳ ಚರ್ಮಗಳ ಉತ್ಪನ್ನಗಳ ತಯಾರಿಕೆಯ ಪ್ರಕ್ರಿಯೆಯು ಪರಿಸರದ ಮೇಲೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಪ್ರಾಣಿಗಳ ಚರ್ಮಗಳ ಹದಗೊಳಿಸುವ ಪ್ರಕ್ರಿಯೆಯಲ್ಲಿ ಹೆಚ್ಚು ಕ್ರೋಮಿಯಂ ಉಪ್ಪು ಬಳಕೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಗೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಈ ಪ್ರಕ್ರಿಯೆಯು ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ.

ಸಂಶೋಧನಾ ತಂಡವು ಕ್ರೋಮಿಯಂ ಮುಕ್ತ ಚರ್ಮ ಹದಗೊಳಿಸುವ ವಿಧಾನವನ್ನು ಕಂಡು ಹಿಡಿದಿದೆ. ಇದರಿಂದಾಗಿ ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಯಾವುದೇ ಹಾನಿಯಾಗದು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಆಹಾರದಲ್ಲಿ ಮೀನು ಬಳಕೆ ಏರಿಕೆಯಾದಂತೆ, ಮೀನು ತ್ಯಾಜ್ಯ ದೊಡ್ಡ ಪ್ರಮಾಣದಲ್ಲಿ ಪರಿಸರಕ್ಕೆ ಸೇರುತ್ತದೆ. ಇದರಿಂದ ಪರಿಸರ ಮಾಲಿನ್ಯದಿಂದ ಗಮನಾರ್ಹ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವು ಮೀನುಗಳ ಮಾಂಸವನ್ನು ತೆಗೆದು ಅವುಗಳ ಚರ್ಮವನ್ನು ಎಸೆಯಲಾಗುತ್ತಿದೆ. ಹೀಗೆ ಚರ್ಮವನ್ನು ಎಸೆಯುವ ಬದಲು ಅವುಗಳಿಂದ ನಿತ್ಯ ಬಳಕೆಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಪರಿಸರದ ಮೇಲೆ ಮೀನಿನ ತ್ಯಾಜ್ಯ ಸೇರುವುದನ್ನು ಕಡಿಮೆ ಮಾಡಬಹುದು ಎನ್ನು ತ್ತಾರೆ ವಿಜ್ಞಾನಿ ಡಾ.ಮಂಜ ನಾಯ್ಕ್.

ಐದು ವರ್ಷಗಳಿಂದ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿರುವ ತಜ್ಞರ ನೆರವಿನೊಂದಿಗೆ ಸಂಶೋಧನೆ ನಿರತರಾಗಿರುವ ಅವರು, ಈಗಾಗಲೇ 10-15 ಜಾತಿ ಮೀನುಗಳ ಬಗ್ಗೆ ಅಧ್ಯಯನ ನಡೆಸಿದ್ದು, ಮೀನಿನ ಚರ್ಮದಿಂದ ಉತ್ತಮ ಗುಣಮಟ್ಟದ ಉತ್ಪನ್ನವನ್ನು ತಯಾರಿಸುವುದು ಸಾಧ್ಯವಿದೆ ಎನ್ನುವುದನ್ನು ದೃಢಪಡಿಸಿ ದ್ದಾರೆ.

ಪರಿಸರ ಸ್ನೇಹಿ: ಮೀನು ಸಂಸ್ಕರಣಾ ಉದ್ಯಮದಿಂದ ತಿರಸ್ಕರಿಸಲ್ಪಟ್ಟ ಉಪ ಉತ್ಪನ್ನವಾದ ಮೀನಿನ ಚರ್ಮವನ್ನು ಬಳಸಿಕೊಂಡು ನವೀನ ಮತ್ತು ಪರಿಸರ ಸ್ನೇಹಿ ಚರ್ಮ ತಯಾರಿಕಾ ವಿಧಾನವನ್ನು ವಿಜ್ಞಾನಿಗಳ ತಂಡ ಅಭಿವೃದ್ಧಿ ಪಡಿಸಿದೆ. ಚರ್ಮದ ಉದ್ಯಮವು ಈ ವರೆಗೂ ಸಾಂಪ್ರದಾ ಯಿಕವಾಗಿ ಮೊಲ, ಮೊಸಳೆ, ಜಾನುವಾರು, ಒಂಟೆ, ಕುರಿ ಮತ್ತು ಆಡು ಮತ್ತಿತರ ಪ್ರಾಣಿಗಳ ಚರ್ಮವನ್ನು ಅವಲಂಭಿಸಿದೆ.

ಸುಸ್ಥಿರ ತಂತ್ರಜ್ಞಾನದ ಮೂಲಕ ಮೀನಿನಿಂದ ಗುಣ ಮಟ್ಟದ ಚರ್ಮ ಪಡೆಯಬಹುದು ಮತ್ತು ಆ ಮೂಲಕ ಚರ್ಮದ ಹದಗೊಳಿಸುವ ಪ್ರಕ್ರಿಯಯಲ್ಲಿ ಪರಿಸರ ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯವಿದೆ ಎನ್ನುವುದು ವಿಜ್ಞಾನಿಗಳ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಸಂಶೋಧನೆಗೆ ಕೋಟ್ಯಂತರ ರೂ. ಬೇಕಾಗುತ್ತದೆ. ಆದರೆ ಡಾ.ಮಂಜನಾಯ್ಕ್ ತಮ್ಮ ಸಂಸ್ಥೆಯಿಂದ ದೊರೆತ ನೆರವು ಮತ್ತು ಇತರ ಸಂಸ್ಥೆಗಳ ತಜ್ಞರ ಸಹಕಾರದೊಂದಿಗೆ ಸಂಶೋಧನೆ ಕೈಗೊಂಡಿದ್ದಾರೆ. ಸಂಶೋಧನೆಗೆ ಸರಕಾರದ ನೆರವು ಪಡೆಯಲು ಪ್ರಯತ್ನಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೀನಿನ ಚರ್ಮವನ್ನು ಉದ್ಯಮದಲ್ಲಿ ಬಳಕೆ ಮಾಡುವುದರಿಂದ ಪ್ರಾಣಿಗಳ ಚರ್ಮ ಬಳಕೆಯನ್ನು ಶೇ.30ರಷ್ಟು ಕಡಿಮೆ ಮಾಡಬ ಹುದು. ಇದು ಪರಿಸರ ಸ್ನೇಹಿಯಾಗಿದೆ. ಇದರಿಂದ ಗುಡಿ ಕೈಗಾರಿಕೆ ಕೈಗೊಳ್ಳುವವರಿಗೆ ಅವಕಾಶ ಇದೆ.

- ಡಾ.ಮಂಜನಾಯ್ಕ್, ಪ್ರಾಧ್ಯಾಪಕ ಮತ್ತು ಮುಖ್ಯಸ್ಥ, ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗ, ಮೀನುಗಾರಿಕೆ ಕಾಲೇಜು ಮಂಗಳೂರು

share
ಇಬ್ರಾಹಿಂ ಅಡ್ಕಸ್ಥಳ
ಇಬ್ರಾಹಿಂ ಅಡ್ಕಸ್ಥಳ
Next Story
X