Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರೊ. ಮಹೇಶ್ ಚಂದ್ರ ಗುರು ನೆನಪು

ಪ್ರೊ. ಮಹೇಶ್ ಚಂದ್ರ ಗುರು ನೆನಪು

ಡಾ. ದಿಲೀಪ್ ನರಸಯ್ಯ ಎಂ.ಡಾ. ದಿಲೀಪ್ ನರಸಯ್ಯ ಎಂ.25 Aug 2025 11:51 AM IST
share
ಪ್ರೊ. ಮಹೇಶ್ ಚಂದ್ರ ಗುರು ನೆನಪು

‘ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕೆಂದು’ ಡಾ.ಅಂಬೇಡ್ಕರ್ ಹೇಳಿದ್ದಾರೆ. ಇದನ್ನು ಅರಿತುಕೊಂಡಿದ್ದ ಪ್ರೊ. ಮಹೇಶ್ ಚಂದ್ರ ಗುರು ಅವರು ತಮ್ಮ ಜೀವನದುದ್ದಕ್ಕೂ ಅಸಮಾನತೆ, ತಾರತಮ್ಯ, ಜಾತೀಯತೆ, ಕೋಮುವಾದ ಇನ್ನಿತರ ಅನ್ಯಾಯಗಳ ವಿರುದ್ಧ ಘರ್ಜಿಸುತ್ತಲೇ ಇದ್ದವರು. ಶಿಕ್ಷಕ ವೃತ್ತಿ ಕೇವಲ ವೃತ್ತಿಯಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿಯಂತೆ ಕಾಯಕ ಮಾಡಿ ಅಪಾರ ಶಿಷ್ಯ ಕೋಟಿ ಸೃಷ್ಟಿಸಿದ ಸಾರ್ಥಕ ಬದುಕು ಅವರದ್ದು. ಪ್ರೊ.ಗುರು ಅವರು ತರಗತಿಯನ್ನು ಸಾಮಾಜಿಕ ಪ್ರಯೋಗಾಲಯವನ್ನಾಗಿ ಪರಿವರ್ತಿಸುತ್ತಿದ್ದರು. ನಾಲ್ಕು ಗೋಡೆಗಳ ಮಧ್ಯೆ ಕೂರುತ್ತಿದ್ದ ವಿದ್ಯಾರ್ಥಿಗಳಿಗೆ ಪಾಠದ ಮೂಲಕವೇ ಜಗತ್ತಿನ ಜ್ವಲಂತ ವಿಚಾರಗಳನ್ನು ಪರಿಚಯಿಸುತ್ತಿದ್ದರು.

ಶೋಷಿತ ವರ್ಗಗಳಿಗೆ ಶಿಕ್ಷಣವು ಗಗನಕುಸುಮವಾಗಿದ್ದ ಕಾಲದಲ್ಲಿ ಮಾಧ್ಯಮ ಶಿಕ್ಷಣ ಪಡೆದ ಭಾರತದ ಮೊದಲ ದಲಿತ-ಬೌದ್ಧ ಪ್ರಾಧ್ಯಾಪಕರಾಗಿ ಮಾಧ್ಯಮ ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಪ್ರೊ. ಗುರು ಅವರು ‘ಜನಿವಾರಲಿಸಂ’ವಾಗಿದ್ದ ವಿಭಾಗವನ್ನು ‘ಜರ್ನಲಿಸಂ’ ಮಾಡಿದರು ಎಂದು ಅವರ ಸಮಕಾಲೀನ ಸ್ನೇಹಿತರು ಈಗಲೂ ನೆನೆಯುತ್ತಾರೆ. ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಣ ವಂಚಿತ ದಮಿನಿತ ಸಮುದಾಯಗಳ ಸಾಕ್ಷಿಪ್ರಜ್ಞೆಯಾಗಿ ನಾಡಿನ ಅಸೀಮ ಬಂಡಾಯದ ಪ್ರತಿರೂಪಕವಾಗಿ ಕಾಣಿಸಿಕೊಂಡಿದ್ದರು. ಬುದ್ಧ, ಬಸವಣ್ಣ, ಪೆರಿಯಾರ್, ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಕುವೆಂಪು ಅವರುಗಳ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಪ್ರೊ.ಗುರು ಎಂದು ಕೂಡ ಮೌನಕ್ಕೆ ಶರಣಾಗದೆ, ಯಾವ ಪರಿಣಾಮವನ್ನೂ ಲೆಕ್ಕಿಸದೆ ತಮ್ಮ ಅಭಿಪ್ರಾಯಗಳನ್ನು ಸಮಾಜದ ಮುಂದೆ ಮಂಡಿಸುತ್ತಿದ್ದರು ಎಂಬುದು ಒಂದು ಇತಿಹಾಸ.

ಪ್ರೊ. ಮಹೇಶ್ ಚಂದ್ರ ಗುರು ಅವರು ಜನವರಿ 31,1957 ರಂದು ಪಿ.ಎಸ್.ಬಸವರಾಜು ಮತ್ತು ಜಿ.ಬಿ.ಬನಶಂಕರಮ್ಮ ದಂಪತಿಗೆ ಜ್ಯೇಷ್ಠ ಪುತ್ರರಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಜನಿಸಿದರು. ತನ್ನ 15ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಅವರು ಅಜ್ಜಿ-ತಾತನ ಮಮತೆಯಲ್ಲಿ ಬೆಳೆಯುತ್ತಾರೆ. ಪ್ರೊ.ಗುರು ಅವರ ಸೋದರ ಮಾವ ದೊಡ್ಡ ಮಾದಯ್ಯರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ದೇಶಪ್ರೇಮ, ಸಾಮಾಜಿಕ ಅನಿಷ್ಟ ಪದ್ಧತಿ ಮತ್ತು ಆಡಳಿತ ವ್ಯವಸ್ಥೆಯ ಕುರಿತು ಕಥೆ ರೂಪದಲ್ಲಿ ಹೇಳಿ ಪ್ರೊ.ಗುರು ಅವರಿಗೆ ಅರಿವು ಮೂಡಿಸುತ್ತಿದ್ದರು. ಬಾಲ್ಯದಿಂದಲೂ ತಮ್ಮ ಸುತ್ತಮುತ್ತ ನಡೆಯುತ್ತಿದ್ದ ಅನ್ಯಾಯಗಳನ್ನು ವಿರೋಧಿಸುತ್ತಲೇ ಬೆಳೆದರು. ಗುಂಡ್ಲುಪೇಟೆಯಲ್ಲಿ ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣ ಪಡೆದ ಅವರ ಪ್ರತಿಭೆಯನ್ನು ಗುರುತಿಸಿದ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಅಬ್ದುಲ್ ನಝೀರ್ ಸಾಬ್ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆಯಲು ಪ್ರವೇಶಾತಿ ಕೊಡಿಸಿ, ಶೈಕ್ಷಣಿಕವಾಗಿ ಸಲಹುತ್ತಾರೆ.

ವಿದ್ಯಾರ್ಥಿ ನಾಯಕರಾಗಿ ಪ್ರೊ.ಗುರು

ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳು ಜೋರಾಗಿಯೇ ನಡೆಯುತ್ತಿದ್ದ ಕಾಲವದು. ಮೇಲ್ವರ್ಗದವರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು, ಯಾವುದೇ ಕಾರಣಕ್ಕೂ ದಲಿತ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಯಾವುದೇ ಸಂಘಟನೆ ರಚಿಸಬಾರದು ಮತ್ತು ಚುನಾವಣೆಗಳಿಗೆ ಸ್ಪರ್ಧಿಸಬಾರದೆಂಬ ಅಸಾಂವಿಧಾನಿಕ ನಿಯಮಗಳು ಚಾಲ್ತಿಯಲ್ಲಿದ್ದವು. ಆ ಸಂದರ್ಭದಲ್ಲಿ ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರೊ.ಗುರು ಅವರು ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಎಲ್ಲಾ ತಳ ಸಮುದಾಯದ ವಿದ್ಯಾರ್ಥಿಗಳನ್ನು ಸಂಘಟಿಸುತ್ತಾರೆ. ಚುನಾವಣೆಗೆ ಸ್ಪರ್ಧಿಸುವುದರ ಜೊತೆಗೆ ತನ್ನ ಸಹ ಮಿತ್ರರನ್ನು ಗೆಲ್ಲಿಸಿ ವಿಜಯಪತಾಕೆ ಹಾರಿಸುತ್ತಾರೆ. ಮುಂದುವರಿದು, ದಲಿತ ವಿದ್ಯಾರ್ಥಿನಿಯಾಗಿದ್ದ (ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ) ಮಲ್ಲಾಜಮ್ಮ ಅವರಿಗೂ ಕೂಡ ಬೆಂಬಲ ನೀಡಿ ಮಹಾರಾಣಿ ಕಾಲೇಜಿನ ಚುನಾವಣೆಯಲ್ಲಿ ಗೆಲ್ಲಿಸಿ ಜಾತಿವಾದಿಗಳಿಗೆ ಜಾತ್ಯತೀತ ಪಾಠ ಕಲಿಸಿದವರು ಪ್ರೊ.ಗುರು. ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ‘ಮಾಧ್ಯಮ ಸಂವಾದ’ ಆಯೋಜಿಸಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಅವರನ್ನು ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗಕ್ಕೆ ಆಹ್ವಾನಿಸಿದ್ದು ಅವರ ವಿದ್ಯಾರ್ಥಿ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೇಂದ್ರ ಸರಕಾರದಲ್ಲಿ ಸೇವೆ

ಆಳವಾದ ಅಧ್ಯಯನದಲ್ಲಿ ಶಿಸ್ತು, ಬದ್ಧತೆಯನ್ನು ಮೈಗೂಡಿಸಿಕೊಂಡಿದ್ದ ಪ್ರೊ.ಗುರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. 1980ರಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿ ಪಡೆದ ನಂತರ ‘ಪಂಚಮ’ ಪತ್ರಿಕೆಯಲ್ಲಿ ಉಪ-ಸಂಪಾದಕರಾಗಿ ಸೇವೆ ಸಲ್ಲಿಸುತ್ತಾರೆ. 1982 ರಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಸಂಶೋಧನಾಧಿಕಾರಿಯಾಗಿ ಸರಕಾರಿ ಉದ್ಯೋಗಕ್ಕೆ ಸೇರುತ್ತಾರೆ. 1984ರಲ್ಲಿ ಚಂಡಿಗಡ್‌ನ ಭಾರತೀಯ ಮಾಪನ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಬಹುಶಃ ಅವರು ಕೇಂದ್ರ ಸೇವೆಯಲ್ಲಿ ಮುಂದುವರಿದಿದ್ದರೆ ಅತ್ಯುನ್ನತ ಮಟ್ಟದ ಅಧಿಕಾರಿಯಾಗಿ ನಿವೃತ್ತಿ ಹೊಂದಬಹುದಿತ್ತು. ಆದರೆ, ಪ್ರೊ.ಗುರು ಶಿಕ್ಷಕನಾಗಬೇಕೆಂಬ ಮಹತ್ವಾಕಾಂಕ್ಷೆಯಿಂದಾಗಿ 1986ರಲ್ಲಿ ಬೆಂಗಳೂರು ವಿವಿಯಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡುತ್ತಾರೆ.

ಮಾಧ್ಯಮ ಶಿಕ್ಷಣ ಚಕ್ರವರ್ತಿ

ಪ್ರೊ.ಗುರು ಅವರು 1986 ರಿಂದ 2019ರವರಿಗೂ ಬೆಂಗಳೂರು ವಿವಿ, ಮಂಗಳೂರು ವಿವಿ ಮತ್ತು ಮೈಸೂರು ವಿವಿಗಳಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯ, ಕೇಂದ್ರ ವಿವಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ನೇಮಕ ಸಮಿತಿ ಸದಸ್ಯ, ಕರ್ನಾಟಕ ಮತ್ತು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಕ ಹಾಗೂ ವಿವಿಧ ಆಡಳಿತ ಹುದ್ದೆಗಳಲ್ಲಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಎಂದಿಗೂ ವೈಯಕ್ತಿಕ ಜೀವನಕ್ಕಿಂತ ವೃತ್ತಿ ಬಾಳಿಗೆ ಹೆಚ್ಚು ಸಮಯ ಮತ್ತು ಮಹತ್ವ ಕೊಟ್ಟವರು. ತಮ್ಮ ನಿಗದಿತ ಬೋಧನಾ ಸಮಯದ ಜೊತೆಗೆ ಓದು, ಬರಹ ಮತ್ತು ಸಂಶೋಧನ ಕಾರ್ಯಕ್ಕಾಗಿ ದಿನಕ್ಕೆ ಸುಮಾರು 16ಗಂಟೆ ಮೀಸಲಿಡುತ್ತಿದ್ದ ಅಹರ್ನಿಶಿ ವ್ಯಕ್ತಿತ್ವ ಅವರದ್ದು. ಸಮೂಹ ಸಂವಹನ, ಸಾಂಸ್ಥಿಕ ಸಂವಹನ, ಪತ್ರಿಕೋದ್ಯಮ, ಬೌದ್ಧ ಸಾಹಿತ್ಯ, ಮಹಿಳಾ ಸಾಹಿತ್ಯ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 36 (ಕನ್ನಡ ಮತ್ತು ಇಂಗ್ಲಿಷ್) ಕೃತಿಗಳನ್ನು ರಚಿಸಿ ಸಮಾಜಕ್ಕೆ ಅತ್ಯಂತ ಮೌಲಿಕ ಕೊಡುಗೆ ನೀಡಿದ್ದಾರೆ.

ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 203 ಸಂಶೋಧನ ಲೇಖನಗಳನ್ನು ನೀಡಿ ಭಾರತೀಯ ಮಾಧ್ಯಮ ಶಿಕ್ಷಣವನ್ನು ಶ್ರೀಮಂತಗೊಳಿಸಿದ ಧೀಮಂತ ಕಾಯಕ ಯೋಗಿ. ಅವರ ಮಾರ್ಗದರ್ಶನದಲ್ಲಿ 33 ಸಂಶೋಧಕರು ಪಿ.ಎಚ್.ಡಿ ಪಡೆಯುವುದು ಮಾತ್ರವಲ್ಲದೆ ದೇಶ-ವಿದೇಶಗಳ ಸಮಾಜ ವಿಜ್ಞಾನ, ಆಡಳಿತ ಮತ್ತು ಮಾನವೀಕ ಶಾಸ್ತ್ರ ವಿಭಾಗಗಳ 300ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ ಅನೌಪಚಾರಿಕ ಮಾರ್ಗದರ್ಶಕರಾಗಿ ಶೈಕ್ಷಣಿಕ ತಂದೆ ಎನಿಸಿಕೊಂಡರು. ಇವರ ಸಾಧನೆಗಳನ್ನು ಅರಿತಿದ್ದ ವಿವಿಧ ವಿವಿಗಳ ಕುಲಪತಿಗಳು, ಶಿಷ್ಯರು ಮತ್ತು ಶೈಕ್ಷಣಿಕ ವಲಯದ ವಿದ್ವಾಂಸರು ಪ್ರೊ.ಗುರು ಅವರನ್ನು ಮಾಧ್ಯಮ ಶಿಕ್ಷಣ ಚಕ್ರವರ್ತಿ ಎಂದು ಅಭಿಮಾನದಿಂದ ಸಂಬೋಧಿಸುತ್ತಿದ್ದರು.

ಭಾಷಣಗಳ ಮೂಲಕ ಜಾಗೃತಿ

ಪ್ರೊ.ಗುರು ಅವರ ಬಹುಮುಖಿ ವಿಚಾರಧಾರೆಗಳು ಮತ್ತು ಹೋರಾಟಗಳು, ಶೋಷಿತರ ಶಿಕ್ಷಣ, ಸಂಘಟನೆ, ವಿಮೋಚನೆ ಮತ್ತು ಸರ್ವತೋಮುಖ ಸಬಲೀಕರಣಗಳಿಗೆ ದಾರಿ ದೀಪವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಪ್ರೊ.ಗುರು ಅವರು ಜಾತಿ ವ್ಯವಸ್ಥೆ, ಅನಿಷ್ಟಪದ್ಧತಿ, ಮೂಢನಂಬಿಕೆ ಮತ್ತು ಬಂಡವಾಳ ಶಾಹಿ ವ್ಯವಸ್ಥೆ ಹಾಗೂ ಹಿಂದೂ ಮೂಲಭೂತವಾದಿಗಳ ವಿರುದ್ಧ ಮಾಡುತ್ತಿದ್ದ ಹೋರಾಟ ಮತ್ತು ಪ್ರಖರ ಭಾಷಣಗಳ ನುಡಿಗಳು ಮಾಧ್ಯಮಗಳ ದೃಷ್ಟಿಕೋನದಲ್ಲಿ ವಿವಾದದ ಹೇಳಿಕೆಗಳಾಗುತ್ತಿದ್ದವು. ಆದರೂ ಪ್ರೊ.ಗುರು ಯಾವುದಕ್ಕೂ ಅಂಜದೆ-ಅಳುಕದೆ ಧೈರ್ಯವಾಗಿಯೇ ಸತ್ಯವನ್ನು ಸಮಾಜದ ಮುಂದೆ ಮಂಡಿಸುತ್ತಿದ್ದರು.

ಮೈಸೂರಿನಲ್ಲಿ ಪ್ರಗತಿಪರರು ಪ್ರಾರಂಭಿಸಿದ ‘ಮಹಿಷ ದಸರಾ’ ಆಚರಣೆ ಕುರಿತು ಹಿಂದೂ ಮೂಲಭೂತವಾದಿಗಳು ಮಹಿಷನೊಬ್ಬ ಕ್ರೂರ ರಾಕ್ಷಸನೆಂದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದ ಸಂದರ್ಭದಲ್ಲಿ ಮಹಿಷನ ನೈಜ ಇತಿಹಾಸವನ್ನು ಹೆಕ್ಕಿ ತೆಗೆದು ದೇಶದ ಗಮನ ಸೆಳೆದ್ದದ್ದು ಪ್ರೊ.ಗುರು. ಸ್ಮಶಾನದಲ್ಲಿ ಸಹಪಂಕ್ತಿ ಭೋಜನ, ಮೈಸೂರಿನ ಕಲಾಮಂದಿರದಲ್ಲಿ ‘ಬೀಫ್ ಸೇವನೆ ನಮ್ಮ ಹಕ್ಕು ಚಳವಳಿ’, ಹೀಗೆ ಹಲವು ವೈಚಾರಿಕ ಚಿಂತನೆಗಳಿಗೆ ಗಟ್ಟಿಧ್ವನಿಯಾಗಿದ್ದರು.

ಅವರು ತರಗತಿಯಲ್ಲಿ ಮಾಡಿದ ವಿಮರ್ಶೆಯೊಂದನ್ನು ರಾಜಕೀಕರಣಗೊಳಿಸಿದ ಬಲಪಂಥೀಯರ ಷಡ್ಯಂತ್ರದಿಂದ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲು ವಾಸ ಅನುಭವಿಸಬೇಕಾಯಿತು. ಎಂಟು ದಿನಗಳ ನಂತರ ನ್ಯಾಯಾಂಗ ಬಂಧನದಿಂದ ಹೊರಬರುತ್ತಿದ್ದಂತೆ ಮಾಧ್ಯಮದವರನ್ನು ಉದ್ದೇಶಿ ಅವರು ನೀಡಿದ ಹೇಳಿಕೆ ‘ನೊ ರಾಮ್, ಜೈ ಭೀಮ್’. ಅವರ 'No Ram, Jai Bhim' ಹೇಳಿಕೆ ವಿಶ್ವ ತಲುಪಿತ್ತು. ಶ್ರೀಲಂಕಾ, ಚೀನಾ, ರಶ್ಯದ ಅವರ ವಿದ್ಯಾರ್ಥಿ ಮಿತ್ರರು ಅವರ ಸಂದರ್ಶನ ಮಾಡಿ ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟಿಸಿದ್ದು ಅವರ ವೈಚಾರಿಕ ಚಿಂತನೆಗಳನ್ನು ಭಾರತ ಗಡಿ ದಾಟಿತ್ತು. ಪ್ರೊ.ಗುರು ತರಗತಿಯ ಒಳಗೂ ಮತ್ತು ಹೊರಗೂ ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದವರು.

share
ಡಾ. ದಿಲೀಪ್ ನರಸಯ್ಯ ಎಂ.
ಡಾ. ದಿಲೀಪ್ ನರಸಯ್ಯ ಎಂ.
Next Story
X