Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಗತಿಪರ ಚಿಂತನೆಯ ಭಾರತೀಯ ಮುಸ್ಲಿಮರು

ಪ್ರಗತಿಪರ ಚಿಂತನೆಯ ಭಾರತೀಯ ಮುಸ್ಲಿಮರು

ಕವಿತಾ ರೆಡ್ಡಿಕವಿತಾ ರೆಡ್ಡಿ21 Nov 2024 10:54 AM IST
share
ಪ್ರಗತಿಪರ ಚಿಂತನೆಯ ಭಾರತೀಯ ಮುಸ್ಲಿಮರು

ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ಸಮಿತಿಯ ವರದಿಯು ಭಾರತೀಯ ಮುಸ್ಲಿಮರು ಎದುರಿಸುತ್ತಿರುವ ವಿವಿಧ ಅಸಮಾನತೆಗಳು ಮತ್ತು ಸವಾಲುಗಳನ್ನು ಬಹಿರಂಗಪಡಿಸಿತು. 2006ರಲ್ಲಿ ಪ್ರಕಟವಾದ ವರದಿಯಲ್ಲಿ ಕಡಿಮೆ ಶೈಕ್ಷಣಿಕ ಸಾಧನೆ, ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಸರಕಾರಿ ಉದ್ಯೋಗಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯ, ಸೀಮಿತ ರಾಜಕೀಯ ಪ್ರಾತಿನಿಧ್ಯ, ವಸತಿಗಳಲ್ಲಿ ತಾರತಮ್ಯ, ಸಾಲ ಮತ್ತು ಇತರ ಆರ್ಥಿಕ ಅವಕಾಶಗಳು ಕೊರತೆಯ ಕುರಿತು ಪ್ರಮುಖವಾಗಿ ತಿಳಿಸಲಾಗಿತ್ತು.

403 ಪುಟಗಳ ವರದಿಯಾದ ‘ಭಾರತದಲ್ಲಿ ಮುಸ್ಲಿಮ್ ಸಮುದಾಯದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ-ಒಂದು ವರದಿ’ಯನ್ನು 2006ರ ನವೆಂಬರ್‌ನಲ್ಲಿ ಲೋಕಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. ತರುವಾಯ ಹಲವಾರು ಶಿಫಾರಸುಗಳನ್ನು ಹಲವು ವರ್ಷಗಳಿಂದ ನಿರಂತರವಾಗಿ ಪರಿಗಣಿಸ ಲಾಯಿತು. ಆದರೆ ಸರಕಾರದ ಎಲ್ಲ ಸೂಚಕಗಳಲ್ಲೂ ಭಾರತದಲ್ಲಿ ಮುಸ್ಲಿಮ್ ಸಮುದಾಯದ ಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡು ಬಂದಿಲ್ಲ.

2023ರ ರಾಜ್ಯಸಭಾ ಚರ್ಚೆಗಳ ವರದಿಗಳಂತೆ ಭಾರತೀಯ ಮುಸ್ಲಿಮರ ಸಂಖ್ಯೆ ಸರಕಾರಿ ಉದ್ಯೋಗಗಳಲ್ಲಿ ಶೇ. 5ಕ್ಕಿಂತ ಕಡಿಮೆ, ಭದ್ರತಾ ಪಡೆಗಳಲ್ಲಿ ಶೇ. 3.2, ಕಾರ್ಪೊರೇಟ್ ಭಾರತದಲ್ಲಿ ಸುಮಾರು ಶೇ. 3ರಷ್ಟು ಮಾತ್ರ ಉದ್ಯೋಗದಲ್ಲಿದ್ದಾರೆ. ಮುಸ್ಲಿಮರು ಭಾರತದ ಶೇ. 8 ಸಂಪತ್ತಿನ ಮಾಲಕರಾಗಿದ್ದಾರೆ. ಮುಸ್ಲಿಮ್ ಕುಟುಂಬದ ಸರಾಸರಿ ಸಂಪತ್ತು 9.95 ಲಕ್ಷ, ಹಿಂದೂ ಮೇಲ್ಜಾತಿ ಕುಟುಂಬದ ಸಂಪತ್ತು 27.73 ಲಕ್ಷ, ಒಬಿಸಿಗಳ ಕುಟುಂಬದ ಸಂಪತ್ತು 12.96 ಲಕ್ಷ, ಎಸ್‌ಸಿ ಮತ್ತು ಎಸ್‌ಟಿಗಳ ಕುಟುಂಬದ ಸಂಪತ್ತು 6.13 ಲಕ್ಷ ರೂ. ಮುಸ್ಲಿಮರ ಉನ್ನತ ಶಿಕ್ಷಣವು ಶೇ. 17ರಷ್ಟಿದ್ದರೆ, ರಾಷ್ಟ್ರೀಯ ಉನ್ನತ ಶಿಕ್ಷಣವು ಸರಾಸರಿ ಶೇ. 26ರಷ್ಟಿದೆ. ರಾಷ್ಟ್ರೀಯ ಸರಾಸರಿ 62ಕ್ಕೆ ಹೋಲಿಸಿದರೆ ಕೇವಲ ಶೇ. 50 ಮುಸ್ಲಿಮ್ ಮಕ್ಕಳು ಮಧ್ಯಮ ಶಾಲೆಯನ್ನು ಪೂರ್ಣಗೊಳಿಸುತ್ತಾರೆ. ಶೇ. 46ಕ್ಕಿಂತ ಹೆಚ್ಚು ಮುಸ್ಲಿಮರು ನಗರಗಳಲ್ಲಿ ಸ್ವಯಂ ಉದ್ಯೋಗದಲ್ಲಿದ್ದಾರೆ. ಇದು ಇತರ ಸಮುದಾಯಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ.

ಕಳೆದ 10 ವರ್ಷಗಳಿಂದ ಹಿಂದುತ್ವ ಸಿದ್ಧಾಂತವನ್ನು ಪ್ರಚಾರ ಮಾಡಿ ಭಾರತೀಯ ಸಮಾಜದ ಅಂತರ್ಗತ ಸ್ಮರೂಪವನ್ನು ಹಾಳುಮಾಡಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷದಿಂದ ಭಾರತೀಯ ಮುಸ್ಲಿಮರು ದೂಷಿಸಲ್ಪಟ್ಟಿದ್ದಾರೆ. ಎಲ್ಲಾ ಸಾಮಾಜಿಕ-ಆರ್ಥಿಕ-ರಾಜಕೀಯ ಸವಾಲುಗಳ ಹೊರತಾಗಿಯೂ, ಭಾರತೀಯ ಮುಸ್ಲಿಮರು ತಮ್ಮದೇ ಆದ ಯಶೋಗಾಥೆಗಳನ್ನು ರಚಿಸಿಕೊಂಡು ತಮ್ಮ ಜೀವನವನ್ನು ನಿರ್ಮಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.

ಇತ್ತೀಚೆಗೆ ವಿವಿಧ ಸಮುದಾಯಗಳ ಯುವಕರೊಂದಿಗೆ ನಡೆದ ಸಂವಾದ ದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೌಶಲ್ಯ ಅಭಿವೃದ್ಧಿಯ ಬಗ್ಗೆ, ತೀವ್ರ ಚಿಂತನೆಗೆ ಹಚ್ಚುವ ವಾದವನ್ನು ಹಂಚಿಕೊಂಡರು. ಸವಾಲುಗಳ ಹೊರತಾಗಿಯೂ ಭಾರತೀಯ ಮುಸ್ಲಿಮರು ಇಂದು ನಮಗೆ ತಿಳಿದಿರುವ ಪ್ರತಿಯೊಂದು ಉದ್ಯಮ ವಲಯ ಮತ್ತು ವ್ಯಾಪಾರದಲ್ಲಿ ಹೇಗೆ ನಿರಂತರವಾಗಿ ಕೌಶಲ್ಯಗಳನ್ನು ಗಳಿಸುತ್ತಿದ್ದಾರೆ ಎಂಬುದರ ಬಗ್ಗೆ ಅವರು ನಿರರ್ಗಳವಾಗಿ ಮಾತನಾಡಿದರು. ಭಾರತೀಯ ಮುಸ್ಲಿಮರು ಪಂಕ್ಚರ್ ಅಂಗಡಿಗಳಿಂದ ಆರಂಭಿಸಿ ಐಟಿ ಕಂಪೆನಿಗಳವರೆಗೆ, ಪ್ಲಂಬಿಂಗ್‌ನಿಂದ ರಿಯಲ್ ಎಸ್ಟೇಟ್‌ವರೆಗೆ, ಚಹಾ ಅಂಗಡಿಗಳಿಂದ ಮೊಬೈಲ್ ದುರಸ್ತಿವರೆಗೆ, ಕಸಾಯಿಖಾನೆಗಳಿಂದ ಮಾಲ್‌ಗಳು, ವಿದ್ಯುತ್ ಅಂಗಡಿಯಿಂದ ನವೋದ್ಯಮದವರೆಗೆ, ಹೊಟೇಲ್‌ಗಳಿಂದ ಆಸ್ಪತ್ರೆಗಳಿಗೆ, ಚಾಲಕರಿಂದ ಡೀನ್‌ಗಳವರೆಗೆ, ಕ್ಲೀನರ್‌ಗಳಿಂದ ವೈದ್ಯರವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಿಸುತ್ತಾ, ಸವಾಲುಗಳನ್ನು ಎದುರಿಸುತ್ತಾ, ಮೌನವಾಗಿ ಆದರೆ ಪರಿಣಾಮಕಾರಿಯಾಗಿ ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವರು ಒತ್ತಿಹೇಳಿದರು.

ಎಲ್ಲಾ ಧರ್ಮಗಳು, ಪ್ರದೇಶಗಳು ಮತ್ತು ಜಾತಿಗಳ ಯುವಕರು ಅವಕಾಶಗಳನ್ನು ಅನ್ವೇಷಿಸಲು, ಮಾನದಂಡಗಳನ್ನು ಪ್ರಶ್ನಿಸಲು ಮತ್ತು ಆರ್ಥಿಕವಾಗಿ ಬೆಳೆಯಲು ಸಿದ್ಧರಾಗಿರದ ಹೊರತು ಸಾಮಾಜಿಕ ಅಸಮಾನತೆಗಳು ಅವರ ಮೇಲೆ ಶಾಶ್ವತವಾಗಿ ಭಾರವಾಗುತ್ತವೆ ಎಂಬ ಅಭಿಪ್ರಾಯವನ್ನು ಅವರು ಸಮರ್ಥವಾಗಿ ಹಂಚಿಕೊಂಡರು.

ಅಮೆರಿಕದ 9/11ರ ಭಯೋತ್ಪಾದಕ ದಾಳಿ ನಂತರ ಖಾಸಗಿ ವಲಯದಲ್ಲಿನ ನಿರಂತರವಾದ (ಮೌನದ) ತಾರತಮ್ಯ ಮತ್ತು ಸರಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯದ ಕೊರತೆಯಿಂದ ಯುವ ಭಾರತೀಯ ಮುಸ್ಲಿಮರು ಉದ್ಯೋಗಗಳನ್ನು ಪಡೆಯುವ, ವ್ಯಾಪಾರವನ್ನು ಪ್ರಾರಂಭಿಸುವ ಮತ್ತು ಸಂಪತ್ತನ್ನು ಸೃಷ್ಟಿಸುವ ಕೌಶಲ್ಯಗಳನ್ನು ಪಟ್ಟುಬಿಡದೆ ಕಲಿತರು. 2023ರಲ್ಲಿ ಭಾರತವು ಜಗತ್ತಿನಾದ್ಯಂತ 125 ಶತಕೋಟಿ ಡಾಲರ್‌ಗಳಷ್ಟು ಹಣ ರವಾನೆಯನ್ನು ಸ್ವೀಕರಿಸಿದೆ. ಈ ಹಣ ರವಾನೆಯ ಪ್ರಮುಖ ಭಾಗವು ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ಮುಸ್ಲಿಮರಿಂದ ಬರುತ್ತಿದೆ. ಹೆಚ್ಚಾಗಿ ಮಧ್ಯ-ಪೂರ್ವ ಏಶ್ಯ, ಅವರು ಸ್ಥಿರವಾಗಿ ಸಂಪತ್ತನ್ನು ಮನೆಗೆ ಕಳುಹಿಸುತ್ತಿದ್ದಾರೆ.

ಕಳೆದ ಮೂರು ದಶಕಗಳಲ್ಲಿ ಶಿಕ್ಷಣವು ಯುವ ಮುಸ್ಲಿಮ್ ಮಹಿಳೆಯರಿಗೆ ಹೆಚ್ಚು ಪ್ರಗತಿಪರರಾಗಲು, ಧ್ವನಿಯಾಗಿರಲು ಮತ್ತು ಪ್ರಜ್ಞಾಪೂರ್ವಕವಾಗಿ ಕಾರ್ಯಪಡೆಗೆ ಪ್ರವೇಶಿಸಲು ಪ್ರಬಲ ಸಾಧನವಾಗಿದೆ. ಶಿಕ್ಷಣವು ಅನೇಕ ಸಾಮಾಜಿಕ ಬದಲಾವಣೆಗಳನ್ನು ಮತ್ತು ಸುಧಾರಿತ ಜೀವನಶೈಲಿಯನ್ನು ಉತ್ತೇಜಿಸುತ್ತಿದೆ ಮತ್ತು ಜೀವನ ಪರಿಸ್ಥಿತಿಗಳನ್ನು ಉತ್ತಮಗೊಳಿಸಿದೆ. ಭಾರತೀಯ ಮುಸ್ಲಿಮ್ ಸಮುದಾಯದಲ್ಲಿ ಮಧ್ಯಮ ವರ್ಗದ ಬೆಳವಣಿಗೆಯು ಉತ್ತೇಜನಕಾರಿಯಾಗಿದೆ. ಮಧ್ಯಮ ವರ್ಗದವರು ಮಹತ್ವಾಕಾಂಕ್ಷೆಯವರು, ವಿದ್ಯಾವಂತರು, ಪ್ರಗತಿಪರರು ಭಾರತೀಯ ಹಿಂದೂ ಸಮುದಾಯದ ಮಧ್ಯಮ ವರ್ಗದಂತೆಯೇ ಸಾಮಾಜಿಕ-ಆರ್ಥಿಕ ಹಿಡಿತದ ಸಂಕೋಲೆಗಳಿಂದ ನಿರಂತರವಾಗಿ ಮುಕ್ತರಾಗುತ್ತಿದ್ದಾರೆ.

‘ಐಡಿ ಫ್ರೆಶ್ ಫುಡ್’ನ ಸಿಇಒ ಮುಸ್ತಫಾ ಅವರ ಯಶಸ್ಸಿನ ಕಥೆಯ ಬಗ್ಗೆ ಮಾತನಾಡುತ್ತಾ ಯುವ ಮುಸ್ಲಿಮ್ ವಿದ್ಯಾರ್ಥಿನಿಯೊಬ್ಬರು ನನಗೆ ‘‘ಅಕ್ಕ ನಾವು ಅತ್ಯುತ್ತಮವಾದ ಬಿರಿಯಾನಿಯನ್ನು ಬೇಯಿಸುವುದಲ್ಲದೆ, ಅತ್ಯುತ್ತಮವಾದ ಇಡ್ಲಿ ಮತ್ತು ದೋಸೆಗಾಗಿ ಸಿದ್ಧಪಡಿಸಿದ ಹಿಟ್ಟನ್ನು ತಯಾರಿಸುತ್ತೇವೆ’’ ಎಂದು ಹೆಮ್ಮೆಯಿಂದ ಹೇಳಿದರು.

ಭಾರತೀಯ ಮುಸ್ಲಿಮರು ಬಹಳ ಹಿಂದಿನಿಂದಲೂ ವಿಭಜನೆ, ಗಲಭೆಗಳು, ಬಾಬರಿ ಮಸೀದಿ ಧ್ವಂಸದ ಹೊರೆ ಮತ್ತು ಗುಜರಾತ್ ಸಾಮೂಹಿಕ ಹತ್ಯೆಗಳ ಭಯದಿಂದ ಹೊರಬಂದಿಲ್ಲ. ಅನೇಕರು ಉತ್ತಮ ಭವಿಷ್ಯಕ್ಕಾಗಿ ಹಿಂದಿನದನ್ನು ಬಿಟ್ಟುಮುಂದೆ ಸಾಗಿದ್ದಾರೆ. ಪ್ರಸಕ್ತ ಪೀಳಿಗೆಯ ಯುವ ಭಾರತೀಯ ಮುಸ್ಲಿಮರು ಕರಾಳ ಇತಿಹಾಸದೊಂದಿಗೆ ಸಂಬಂಧ ಹೊಂದಿಲ್ಲ ಮತ್ತು ಹಿಂದಿನದನ್ನು ನೆನಪಿಸಿಕೊಳ್ಳಲು ಹೆಚ್ಚು ಉತ್ಸುಕರಾಗಿಲ್ಲ. ಸಿಎಎ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದಿರುವ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡುವ ದೃಢವಾದ ಭಾರತೀಯ ಮುಸ್ಲಿಮರ ಹೊರಹೊಮ್ಮುವಿಕೆಯು ಹೊಸ ನಿರ್ದೇಶನ ಮತ್ತು ಉದ್ದೇಶವನ್ನು ನೀಡಿತು ಮತ್ತು ಈ ಉದ್ದೇಶ ಮತ್ತು ಮಾರ್ಗವು ಸಮುದಾಯದ ಭವಿಷ್ಯಕ್ಕೆ ಬಹಳ ಮುಖ್ಯವಾಯಿತು.

ನಾವು ಸಾಚಾರ್ ಸಮಿತಿಯ ವರದಿಗಳು ಮತ್ತು ಶಿಫಾರಸುಗಳ ಬಗ್ಗೆ ಮತ್ತು ಭಾರತೀಯ ಮುಸ್ಲಿಮ್ ಸಮುದಾಯದ ಉನ್ನತಿಗಾಗಿ ಇನ್ನೂ ಹೆಚ್ಚಿನದನ್ನು ಮಾಡುವ ಅಗತ್ಯದ ಬಗ್ಗೆ ಚರ್ಚೆಯನ್ನು ಮುಂದುವರಿಸುತ್ತಿದ್ದರೂ, ಯುವ ಭಾರತೀಯ ಮುಸ್ಲಿಮರು ತಮ್ಮ ಹಣೆಬರಹವನ್ನು ಬದಲಾಯಿಸುವ ನೀತಿಗಳಿಗಾಗಿ ಕಾಯದೆ ಮುಂದೆ ಸಾಗುತ್ತಿದ್ದಾರೆ. ಸರಕಾರದಲ್ಲಿ ಪ್ರಾತಿನಿಧ್ಯ ಆಡಳಿತವು ಸಮಾನ ಅವಕಾಶವನ್ನು ಸೃಷ್ಟಿಸಲು ಮತ್ತು ಅಂತಿಮವಾಗಿ ವಿಶ್ವದ ಮೂರನೇ ಅತಿದೊಡ್ಡ ಮುಸ್ಲಿಮ್ ಜನಸಂಖ್ಯೆಗೆ ನೆಲೆಯಾಗಿರುವ ರಾಷ್ಟ್ರದಲ್ಲಿ ಇಸ್ಲಾಮೋಫೋಬಿಯಾ ಮತ್ತು ಘೆಟ್ಟೋಯಿಝೇಷನ್ ಅನ್ನು ಕೊನೆಗೊಳಿಸುವ ಅವಶ್ಯಕತೆಯಾಗಿದೆ.

ಭಾರತೀಯ ಹಿಂದೂ ಸಮಾಜದಲ್ಲಿ ತುಳಿತಕ್ಕೊಳಗಾದ ಜಾತಿಗಳು ಇನ್ನೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಹೋರಾಟದಲ್ಲಿ ನಿರತವಾಗಿವೆ. ಇದೇ ಸಂದರ್ಭದಲ್ಲಿ ಮಹಿಳೆಯರು ಸಾಮಾಜಿಕ ಅಡೆತಡೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಮತೋಲನದ ಅವಕಾಶಗಳ ಕೊರತೆಯೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸವಾಲುಗಳು ಮತ್ತು ಪ್ರತಿಕೂಲ ರಾಜಕೀಯ ಪರಿಸ್ಥಿತಿಯ ನಡುವೆಯೂ, ಭಾರತೀಯ ಮುಸ್ಲಿಮರ ಪ್ರಗತಿಪರ ಚಿಂತನೆಗಳು ಒಂದು ನಿಖರವಾದ ಸಂದೇಶವನ್ನು ನೀಡುತ್ತಿವೆ.

ಪ್ರತೀ ಸಮಾಜದ ಪ್ರಗತಿಯು ಯುವಜನರ ಕೌಶಲ್ಯ, ಚಿಂತನೆಯ ದಿಟ್ಟತನ, ಪ್ರಬಲ ವಿಶ್ಲೇಷಣಾ ದಕ್ಷತೆ ಮತ್ತು ತಮ್ಮ ಬದುಕಿನ ಸಾಧನೆಗಳನ್ನು ಹೇಗೆ ರೂಪಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. 18ನೇ ವಯಸ್ಸಿನಲ್ಲಿ ಮತದಾನದ ಮೂಲಕ ಒಂದು ಸರಕಾರವನ್ನು ಬದಲಾಯಿಸಲು ಶಕ್ತಿ ಹೊಂದಿರುವ ಯುವಕರು, ದೇಶದ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಖಚಿತವಾಗಿ ಹೊಂದಿದ್ದಾರೆ. ಪ್ರತೀ ಸಮಾಜದ ಪ್ರಗತಿಯು ಯುವಜನರ ಕೌಶಲ್ಯ, ಚಿಂತನೆಯ ದಿಟ್ಟತನ, ಪ್ರಬಲ ವಿಶ್ಲೇಷಣಾ ದಕ್ಷತೆ ಮತ್ತು ತಮ್ಮ ಬದುಕಿನ ಸಾಧನೆಗಳನ್ನು ಹೇಗೆ ರೂಪಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. 18ನೇ ವಯಸ್ಸಿನಲ್ಲಿ ಮತದಾನದ ಮೂಲಕ ಒಂದು ಸರಕಾರವನ್ನು ಬದಲಾಯಿಸಲು ಶಕ್ತಿ ಹೊಂದಿರುವ ಯುವಕರು, ದೇಶದ ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಖಚಿತವಾಗಿ ಹೊಂದಿದ್ದಾರೆ.

share
ಕವಿತಾ ರೆಡ್ಡಿ
ಕವಿತಾ ರೆಡ್ಡಿ

ಸದಸ್ಯರು, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

Next Story
X