Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೈಸೂರು ವಿವಿಯಿಂದ ನಿಘಂಟು ಪರಾಮರ್ಶನ...

ಮೈಸೂರು ವಿವಿಯಿಂದ ನಿಘಂಟು ಪರಾಮರ್ಶನ ಗ್ರಂಥಗಳ ರಕ್ಷಣೆ

ನೇರಳೆ ಸತೀಶ್ ಕುಮಾರ್ನೇರಳೆ ಸತೀಶ್ ಕುಮಾರ್4 Aug 2025 2:55 PM IST
share
ಮೈಸೂರು ವಿವಿಯಿಂದ ನಿಘಂಟು ಪರಾಮರ್ಶನ ಗ್ರಂಥಗಳ ರಕ್ಷಣೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಪ್ರತಿಷ್ಠಿತ ಯೋಜನೆ ಇಂಗ್ಲಿಷ್-ಕನ್ನಡ ನಿಘಂಟು. ಈ ಮಹತ್ವ ಪೂರ್ಣ ಕಾರ್ಯಕ್ಕೆ ದೇಶ ವಿದೇಶಗಳ ಡಿಕ್ಷನರಿಗಳನ್ನು ಪರಾಮರ್ಶನ ಗ್ರಂಥಗಳನ್ನಾಗಿ ಬಳಸಿ ವಿದ್ವತ್‌ಪೂರ್ಣ ನಿಘಂಟು ರೂಪಿಸಲಾಗಿದೆ.

ಗೋದಾಮಿನಲ್ಲಿ ಅಜ್ಞಾತವಾಗಿ ಉಳಿದಿದ್ದ ಸುಮಾರು 400ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಪ್ರಸಾರಾಂಗದ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು ಅವರು ಪತ್ತೆ ಮಾಡಿದ್ದಾರೆ. ಒಂದೊಂದು ಕೃತಿಯೂ ನಿಘಂಟು ರೂಪಿಸಲು ವಹಿಸಿರುವ ಶ್ರಮಕ್ಕೆ ಸಾಕ್ಷಿಯಾಗಿವೆ.

ಮೈಸೂರು ವಿವಿಯಲ್ಲಿ 1940ರ ಸುಮಾರಿಗೆ ನಿಘಂಟು ತರುವ ಕಾರ್ಯ ಆರಂಭಗೊಂಡಿತು. ಮೊದಲಿಗೆ 1,480 ಪುಟಗಳ ಒಂದು ನಿಘಂಟು ತರಲಾಯಿತು. ಕಾಲಾಂತರದಲ್ಲಿ ನಾಲ್ಕು ಸಂಪುಟಗಳನ್ನಾಗಿ ರೂಪಿಸಲಾಯಿತು. ಶ್ರೇಷ್ಠತೆ, ಉತ್ಕೃಷ್ಟತೆಯಲ್ಲಿ ಮೈಸೂರು ವಿವಿ ನಿಘಂಟು ಹೆಸರುವಾಸಿಯಾಗಿದೆ.

ಅವತ್ತಿನ ಘನತೆವೆತ್ತ ವಿದ್ವಾಂಸರು, ಭಾಷಾ ತಜ್ಞರು, ಪ್ರಸಿದ್ಧ ಲೇಖಕರು ವಿದ್ವತ್ ಪೂರ್ಣವಾದ ಡಿಕ್ಷನರಿಯನ್ನು ತರಬೇಕೆಂದು ಜಗತ್ತಿನ ಬೇರೆ ಬೇರೆ ಭಾಗಗಳ ವಿಶ್ವವಿದ್ಯಾನಿಲಯಗಳೊಂದಿಗೆ ಪತ್ರ ವ್ಯವಹಾರ ನಡೆಸಿ ಡಿಕ್ಷನರಿಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದಾರೆ.

ಪ್ರಸಾರಾಂಗದ ಗೋದಾಮಿನಲ್ಲಿ ಪರಿಶೀಲನೆ ಮಾಡುವಾಗ ಅಜ್ಞಾತವಾಗಿ ಉಳಿದಿದ್ದ ಡಿಕ್ಷನರಿಗಳು ಪತ್ತೆಯಾದವು. ಸುಮಾರು 2 ದಶಕಗಳಿಂದ ಗ್ರಂಥಗಳು ಸಿಬ್ಬಂದಿಯ ಗಮನಕ್ಕೂ ಬಂದಿರಲಿಲ್ಲ. ಅವುಗಳ ಪರಿಶೀಲನೆ ಮಾಡಿದಾಗ ಡಿಕ್ಷನರಿ ತಯಾರಿಸುವಾಗ ತರಿಸಲಾದ ಕೃತಿಗಳೆಂಬುದು ಗಮನಕ್ಕೆ ಬಂದಿತು ಎಂದು ಡಾ.ನಂಜಯ್ಯ ಹೊಂಗನೂರು ವಿವರಿಸಿದರು.

ಲಂಡನ್, ಇಂಗ್ಲೆಂಡ್, ನ್ಯೂಯಾರ್ಕ್, ಯುಎಸ್‌ಎ, ಆಕ್ಸ್‌ಫರ್ಡ್ ವಿವಿ, ಹಿಟನ್ ಬರ್ಗ್, ಕೇಂಬ್ರಿಡ್ಜ್, ಚಿಕಾಗೋ, ಹಾಂಗ್‌ಕಾಂಗ್, ಸಿಂಗಾಪೂರ್, ನೆದರ್‌ಲ್ಯಾಂಡ್, ದಿಲ್ಲಿ, ವಾರಾಣಸಿ, ಮದ್ರಾಸ್, ಅಸ್ಸಾಂ, ಪೂನಾ, ಪ್ರಯಾಗ್, ಬಾಂಬೆ, ಅಲಹಬಾದ್, ಕಲ್ಕತ್ತ ವಿವಿಗಳಿಂದ, ಮಂಗಳೂರು, ಗದಗ, ಮೈಸೂರು, ಧಾರವಾಡ, ಕರ್ನಾಟಕ ಸರಕಾರದ ಪ್ರಕಟನೆಗಳನ್ನು ತರಿಸಿಕೊಂಡು ವಿದ್ವಾಂಸರು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದಾರೆ.

ಆಕ್ಸ್‌ಫರ್ಡ್ ನಿಘಂಟು 1878ರಲ್ಲಿ ಆರಂಭವಾಗಿ 1933ರಲ್ಲಿ ಪೂರ್ಣಗೊಂಡಿತು. ಸುಮಾರು 55 ವರ್ಷಗಳ ಕಾಲ ಅಧ್ಯಯನ ನಡೆಸಿ ಆಕ್ಸ್‌ಫರ್ಡ್ ಡಿಕ್ಷನರಿ ರೂಪಿಸಲಾಗಿದೆ. ಮೂಲ ಕೃತಿ ಪ್ರಸಾರಾಂಗದಲ್ಲಿದೆ. ಆಕ್ಸ್‌ಫರ್ಡ್ ಡಿಕ್ಷನರಿಯಷ್ಟೇ ಮಹತ್ವಪೂರ್ಣವಾದ, ಪ್ರಮಾಣಬದ್ಧವಾದ ಡಿಕ್ಷನರಿ ಎಂದು ವಿದ್ವಾಂಸರು ಅಭಿಪ್ರಾಯಿಸಿರುವುದಾಗಿ ಡಾ.ನಂಜಯ್ಯ ಹೊಂಗನೂರು ಹೇಳಿದರು.

ನಿಘಂಟು ರಚನೆ ಮತ್ತು ಪರಿಷ್ಕರಣೆ ವೇಳೆ ತರಿಸಲಾದ 381 ಕೃತಿಗಳು ಸುಸ್ಥಿತಿಯಲ್ಲಿದ್ದವು. ಅವುಗಳನ್ನು ರಕ್ಷಣೆ ಮಾಡಿ ದಾಖಲಾತಿ ಮಾಡಿಕೊಂಡು ರೆಕಾರ್ಡ್ ಮಾಡಿದ್ದೇವೆ. ಮುಂದೆ ಯಾರೇ ಪ್ರಸಾರಾಂಗದ ನಿರ್ದೇಶಕರಾದರೂ ಆ ಕೃತಿಗಳನ್ನು ರಕ್ಷಿಸಬೇಕಾಗುತ್ತದೆ ಎಂದು ಡಾ.ನಂಜಯ್ಯ ಹೇಳಿದ್ದಾರೆ.

ಪ್ರಸಾರಾಂಗದ ಅಧೀಕ್ಷಕ ಚನ್ನಬಸಪ್ಪ, ಸಿಬ್ಬಂದಿ ವಿನೋದ, ಪ್ರದೀಪ್, ಅನುಷಾ ಸಹಿತ ಎಲ್ಲ ಸಿಬ್ಬಂದಿ ವರ್ಗ ಡಿಕ್ಷನರಿಗಳ ರಕ್ಷಣೆ ಕಾರ್ಯಕ್ಕೆ ಸಹಕರಿಸಿದ್ದಾರೆ.

ಕುವೆಂಪು ಕನಸಿನ ಸಂಸ್ಥೆ ಪ್ರಸಾರಾಂಗ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. ಪ್ರಸಾರಾಂಗ ರಾಷ್ಟ್ರಕವಿ ಕುವೆಂಪು ಅವರ ಕನಸಿನ ಸಂಸ್ಥೆ. 1933ರಲ್ಲಿ ಆರಂಭವಾದ ಪ್ರಸಾರಾಂಗವೂ ವಿದ್ವತ್ ವಲಯಕ್ಕೆ ಸೀಮಿತವಾದ ಜ್ಞಾನಧಾರೆಯನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಿದ ಹಿರಿಮೆಯನ್ನು ಹೊಂದಿದೆ. ಈ ಕಾರ್ಯವೂ ಜಾಗತಿಕ ಮಟ್ಟದಲ್ಲಿಯೂ ಶ್ಲಾಘನೆಗೆ ಪಾತ್ರವಾಗಿದೆ. ಮೌಲಿಕ ಪ್ರಕಟನೆಗಳಿಂದ ಶೈಕ್ಷಣಿಕ ವಲಯದಲ್ಲಿ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ.

ಡಿಕ್ಷನರಿಯ ಬೆಲೆ

ನಾಲ್ಕು ಸಂಪುಟಗಳ ಇಂಗ್ಲಿಷ್-ಕನ್ನಡ ಡಿಕ್ಷನರಿಗೆ 800 ರೂ., ನಾಲ್ಕು ಸಂಪುಟವನ್ನು ಒಳಗೊಂಡ ಸಮಗ್ರ ಆವೃತ್ತಿ ನಿಘಂಟಿಗೆ 500 ರೂ. ಬೆಲೆ ನಿಗದಿಪಡಿಸಲಾಗಿದೆ. 200 ರೂ.ಗೆ ಸಮಗ್ರ ಡಿಕ್ಷನರಿಯೂ ಲಭ್ಯವಿದೆ. ಮೈಸೂರು ವಿವಿ ಪ್ರಸಾರಾಂಗದ ಮಳಿಗೆಯಲ್ಲಿ ಡಿಕ್ಷನರಿ ಖರೀದಿಸಬಹುದು.

ಪ್ರೊ.ಪ್ರಭುಶಂಕರ ನೇತೃತ್ವದಲ್ಲಿ ಪರಿಷ್ಕರಣಾ ಕಾರ್ಯ

1964ರಲ್ಲಿ ಪ್ರಸಾರಾಂಗದ ನಿರ್ದೇಶಕರಾಗಿದ್ದ ಪ್ರೊ.ಪ್ರಭುಶಂಕರ ಅವರ ಮುಂದಾಳತ್ವದಲ್ಲಿ ನಿಘಂಟು ಪರಿಷ್ಕರಣೆ ಕಾರ್ಯ ಆರಂಭಗೊಂಡಿತು. ಆಗ ರಚಿಸಲಾದ ಸಲಹಾ ಮಂಡಳಿ ಸಮಿತಿಯಲ್ಲಿ ಡಾ.ಶಿವರಾಮ ಕಾರಂತ, ಕು.ಶಿ.ಹರಿದಾಸ ಭಟ್, ಆರ್.ಸಿ.ಹಿರೇಮಠ, ಎಸ್.ಎಸ್.ಭೂಸನೂರು ಮಠ, ಪ್ರೊ.ಎಸ್.ವಿ.ರಂಗಣ್ಣ, ಎನ್.ಬಸವರಾಧ್ಯ ಇತರರು ಇದ್ದರು.

ಮೊದಲ ಸಂಪುಟ ಎ-ಡಿ 1989ರಲ್ಲಿ, ಎರಡನೇ ಸಂಪುಟ ಇ-ಎಲ್ 1996ರಲ್ಲಿ, ಎಂ-ಆರ್ 3ನೇ ಸಂಪುಟ 1999ರಲ್ಲಿ, ಎಸ್-ಜೆಡ್ 4ನೇ ಸಂಪುಟ 2004ರಲ್ಲಿ ಪ್ರಕಟವಾಯಿತು. ಡಿಕ್ಷನರಿಗಳ ಪರಿಷ್ಕರಣೆ ಕಾರ್ಯ ಸುಮಾರು 38 ವರ್ಷಗಳ ಕಾಲ ನಡೆದಿದೆ ಎಂದು ವಿದ್ವಾಂಸರೂ ಆದ ಪ್ರಸಾರಾಂಗದ ಉಪ ನಿರ್ದೇಶಕರಾಗಿ ನಿವೃತ್ತರಾಗಿರುವ ಬಾ.ವೇ.ಶ್ರೀಧರ ಪರಿಷ್ಕೃತ ನಿಘಂಟುಗಳ ಕುರಿತು ಬರೆದ ಲೇಖನದಲ್ಲಿ ವಿವರಿಸಿದ್ದಾರೆ.

ತಂತ್ರಜ್ಞಾನದ ಬಳಕೆಯೇ ಇಲ್ಲದ ಕಾಲದಲ್ಲಿ ನಮ್ಮ ವಿದ್ವಾಂಸರು ಅತ್ಯಂತ ಶ್ರಮವಹಿಸಿ ಜಗತ್ತಿನ ಡಿಕ್ಷನರಿಗಳನ್ನು ಪರಾಮರ್ಶೆ ನಡೆಸಿ ಎಲ್ಲ ಜ್ಞಾನಶಾಸ್ತ್ರವನ್ನು ಬಳಸಿಕೊಂಡು ದೇಶದ ವಿಶ್ವವಿದ್ಯಾನಿಲಯಗಳು ತಿರುಗಿ ನೋಡುವಂತೆ ಮೈಸೂರು ವಿವಿ ಪ್ರಸಾರಾಂಗದ ಇಂಗ್ಲಿಷ್-ಕನ್ನಡ ನಿಘಂಟು ರೂಪಿಸಲಾಗಿದೆ. ಈ ಡಿಕ್ಷನರಿ ಭಾರತದ ದೇಶಿ ಭಾಷೆಗಳಲ್ಲೇ ಮೊದಲು. ನಿಘಂಟುಗಳು ಮಾನವರ ಸಂಸ್ಕೃತಿ, ಭಾಷೆ, ಸಾಹಿತ್ಯ, ಸಮಾಜ, ಚರಿತ್ರೆ, ಪರಂಪರೆಗಳ ಅಧ್ಯಯನಕ್ಕೆ ಮಹತ್ವದ ಆಕರಗಳಾಗಿವೆ.

-ಡಾ.ನಂಜಯ್ಯ ಹೊಂಗನೂರು, ಪ್ರಸಾರಂಗದ ನಿರ್ದೇಶಕ

share
ನೇರಳೆ ಸತೀಶ್ ಕುಮಾರ್
ನೇರಳೆ ಸತೀಶ್ ಕುಮಾರ್
Next Story
X