Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಹಿಳೆ ಮತ್ತು ಸಂವಿಧಾನದ ರಕ್ಷಣೆ

ಮಹಿಳೆ ಮತ್ತು ಸಂವಿಧಾನದ ರಕ್ಷಣೆ

ಮಮತಾ ಅರಸೀಕೆರೆಮಮತಾ ಅರಸೀಕೆರೆ24 Feb 2024 1:52 PM IST
share
ಮಹಿಳೆ ಮತ್ತು ಸಂವಿಧಾನದ ರಕ್ಷಣೆ

ಪರಂಪರೆ, ಇತಿಹಾಸದಲ್ಲಿ ಶೋಷಣೆ ಹಾಗೂ ದೌರ್ಜನ್ಯದ ರೂಪದಲ್ಲಿ ಚಿತ್ರಿಸಿಕೊಳ್ಳುತ್ತಲೇ ಬಂದ ಮಹಿಳೆಯರ ಸ್ಥಾನಮಾನಗಳು ಹಾಗೂ ಸ್ಥಿತಿಗತಿಗಳು ಬದಲಾವಣೆ ಕಂಡದ್ದು 20ನೇ ಶತಮಾನದಲ್ಲಿಯೇ ಇರಬೇಕು. ಮಹಿಳೆಯರ ಪಾಲಿಗೆ ಸಂವಿಧಾನವು ಸಶಕ್ತೀಕರಣ ರೂಪದಲ್ಲಿ ಜಾರಿಯಾಗಿ ತಂದ ಸುಧಾರಣೆಗಳು ಬಹಳಷ್ಟು. ಅದರಲ್ಲಿ ಜಾರಿಗೆ ಬಂದ ಕಾನೂನುಗಳು ಹಾಗೂ ಬದಲಾವಣೆಯ ಆಶಯಗಳೆಲ್ಲ ಸಾರ್ಥಕತೆ ಪಡೆದುಬಿಟ್ಟಿದ್ದರೆ ಈಗಾಗಲೇ ಸ್ತ್ರೀಯರ ಮೇಲಾಗುವ ಭೇದಭಾವಗಳು, ಅತ್ಯಾಚಾರ ಮತ್ತು ದೌರ್ಜನ್ಯಗಳು ಕೊನೆಯಾಗಿ ಪುರುಷ ಪ್ರಧಾನ ಮಾನಸಿಕತೆಯ ಅಂತ್ಯ ಆಗಬೇಕಿತ್ತು. ನೂರಾರು ನಿಯಮಗಳಲ್ಲಿ ಕೊಂಚವಾದರೂ ಚಾಲನೆಯಲ್ಲಿದೆ ಎಂಬುದು ಸಮಾಧಾನದ ವಿಷಯ.

ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ ಎಂಬುದು ನಿರ್ವಿವಾದ. ಭಾರತೀಯ ಸಂವಿಧಾನದ ಅನೇಕ ನಿಬಂಧನೆಗಳು ವಿಶೇಷವಾಗಿ ಮಹಿಳೆಯರಿಗಾಗಿಯೇ ರಚಿಸಲ್ಪಟ್ಟವು ಪ್ರಬಲವಾಗಿ ತಮ್ಮ ಪರಿಣಾಮವನ್ನು ಕಾಣಿಸುತ್ತಲೇ ಇವೆ. ಈ ಮಾಹಿತಿಯು ಮಹಿಳೆಯರಿಗೆ ಅವಶ್ಯವಾಗಿ ತಿಳಿದಿರಲೇಬೇಕಿದೆ.

ಸಂವಿಧಾನದ ಅನುಚ್ಛೇದ 14ರಲ್ಲಿ ಕಾನೂನಿನ ಸಮಾನತೆ, ಅನುಚ್ಛೇದ 15(3) ಜಾತಿ, ಧರ್ಮ, ಲಿಂಗ ಮತ್ತು ಜನ್ಮಸ್ಥಾನದ ಆಧಾರದಲ್ಲಿ ಭೇದಭಾವ ಮಾಡದಿರುವುದು, ಅನುಚ್ಛೇದ 19(1)ರಲ್ಲಿ ಸಮಾನ ರೂಪದ ಅಭಿವ್ಯಕ್ತಿ ಸ್ವಾತಂತ್ರ್ಯ, ಅನುಚ್ಛೇದ 21ರಂತೆ ಸ್ತ್ರೀ ಮತ್ತು ಪುರುಷ ಇಬ್ಬರಿಗೂ ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳದಿರುವುದು, ಅನುಚ್ಛೇದ 23-24ರಲ್ಲಿ ಶೋಷಣೆಯ ವಿರುದ್ಧ ಸಮಾನ ರೂಪದ ಅಧಿಕಾರ, ಅನುಚ್ಛೇದ 25-28ರಂತೆ ಇಬ್ಬರಿಗೂ ಸಮಾನ ರೂಪದ ಧಾರ್ಮಿಕ ಸ್ವಾತಂತ್ರ್ಯ, ಅನುಚ್ಛೇದ 29-30ರ ಶಿಕ್ಷಣ ಮತ್ತು ಸಂಸ್ಕೃತಿಯ ಅಧಿಕಾರ, ಅನುಚ್ಛೇದ 39ರಲ್ಲಿ ಸ್ತ್ರೀ ಮತ್ತು ಪುರುಷರಿಬ್ಬರಿಗೂ ಸಮಾನ ಕೆಲಸಕ್ಕಾಗಿ ಸಮಾನ ವೇತನ, ಅನುಚ್ಛೇದ 40ರಲ್ಲಿ ಪಂಚಾಯತ್ ರಾಜ್ಯ ಸಂಸ್ಥಾನಗಳಲ್ಲಿ 73ನೇ ಮತ್ತು 74ನೇ ಸಂವಿಧಾನ ಸಂಶೋಧನಾ ಮಾಧ್ಯಮದ ಮೂಲಕ ಮೀಸಲಾತಿ ವ್ಯವಸ್ಥೆ, ಅನುಚ್ಛೇದ 41ರಂತೆ ಅಸಹಾಯಕ ಸಂದರ್ಭಗಳಲ್ಲಿ, ವೃದ್ಧಾಪ್ಯದಲ್ಲಿ, ರೋಗಿಷ್ಟ ಪರಿಸ್ಥಿತಿಯಲ್ಲಿ, ನಿರುದ್ಯೋಗದ ಸಂದರ್ಭದಲ್ಲಿ ಸಹಾಯವನ್ನು ಪಡೆಯುವ ಅಧಿಕಾರ, ಅನುಚ್ಛೇದ 42ರ ಪ್ರಕಾರ ಪ್ರಸೂತಿ ರಜೆಯ ಪ್ರಾಪ್ತಿ, ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಮೊದಲಾದ ಹಲವಾರು ಸೌಲಭ್ಯಗಳು ಜಾರಿಯಲ್ಲಿರುವ ಬಗ್ಗೆ ಅರಿಯಬೇಕಾಗಿದೆ.

ಮಹಿಳೆಯ ಗರ್ಭಾವಸ್ಥೆಯಲ್ಲಿಯೆ ಭ್ರೂಣ ಪರೀಕ್ಷೆಯನ್ನು ತಡೆಯಲು 1994ರಲ್ಲಿ ತಾಂತ್ರಿಕ ಅಧಿನಿಯಮವನ್ನು ಜಾರಿಗೊಳಿಸಲಾಯಿತು. ಉಲ್ಲಂಘಿಸಿದವರಿಗೆ 10 ರಿಂದ 15 ಸಾವಿರ ರೂ. ಜುಲ್ಮಾನೆ ಹಾಗೂ 3 ರಿಂದ 5ವರ್ಷಗಳ ಸಜೆಯನ್ನೂ ವಿಧಿಸುವ ಕಾನೂನು ಸಹ ಇದೆ, ವರದಕ್ಷಿಣೆಯೆಂಬ ಸಾಮಾಜಿಕ ಅನಿಷ್ಟದಿಂದ ರಕ್ಷಿಸಲು 1961ರಲ್ಲಿ ವರದಕ್ಷಿಣೆ ನಿಷೇಧ ಅಧಿನಿಯಮವನ್ನು ತರಲಾಯಿತು.

1979ರ ಅಂತರ್‌ರಾಜ್ಯ ಪ್ರವಾಸಿ ಕರ್ಮಚಾರಿ ಅಧಿನಿಯಮದ ಪ್ರಕಾರ ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ ಹಾಗೂ ಪ್ರತ್ಯೇಕ ಸ್ನಾನಗೃಹದ ವ್ಯವಸ್ಥೆಯನ್ನು ಕೈಗೊಳ್ಳಲು ಕಡ್ಡಾಯವಾಗಿ ಸೂಚಿಸಿದೆ. ಗುತ್ತಿಗೆ ಕಾರ್ಮಿಕರಿಗಾಗಿ 1979ರಲ್ಲಿ ಜಾರಿಗೆ ಬಂದ ಅಧಿನಿಯಮದಂತೆ ಮಹಿಳೆಯರಿಗೆ ದಿನದಲ್ಲಿ 9 ಗಂಟೆ ಮಾತ್ರ ಕೆಲಸ ಮಾಡಬೇಕಾಗುವುದು.

ಭಾರತೀಯ ದಂಡ ಸಂಹಿತೆಯ ಕಾನೂನು ಮಹಿಳೆಯರಿಗೆ ಸುರಕ್ಷಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ, ಸಾಮಾಜಿಕವಾಗಿ ಘಟಿಸುವ ವೈವಿಧ್ಯ ಅಪರಾಧಗಳಿಂದ ಸಂರಕ್ಷಣೆ ನೀಡುತ್ತದೆ. ಹತ್ಯೆ, ಆತ್ಮಹತ್ಯೆಗೆ ಪ್ರಚೋದನೆ, ವರದಕ್ಷಿಣೆಯ ಸಾವುಗಳು, ಬಲತ್ಕಾರ, ಅಪಹರಣ ಮೊದಲಾದ ಅಪರಾಧಗಳನ್ನು ತಡೆಯಲು ಅವಕಾಶಗಳಿವೆ. ಈ ಕಾನೂನು ಉಲ್ಲಂಘನೆಯಾದರೆ ಅಪರಾಧಿಯನ್ನು ಬಂಧಿಸುವ ನ್ಯಾಯವ್ಯವಸ್ಥೆಯ ಮೂಲಕ ದಂಡಿಸುವ ಅವಕಾಶಗಳಿವೆ. ಕೆಲವು ಕಾನೂನುಗಳು ಹೀಗಿವೆ. ದಂಡ ಸಂಹಿತೆಯ ಸೆಕ್ಷನ್ 294ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನಿಂದಿಸುವುದು ಮತ್ತು ಅಶ್ಲೀಲ ಹಾಡುಗಳನ್ನು ಹಾಡುವುದು ಅಪರಾಧ.

ಭಾರತೀಯ ದಂಡಸಂಹಿತೆ 304ಬಿ ಪ್ರಕಾರ 7 ವರ್ಷಗಳ ಅವಧಿಯಲ್ಲಿ ಮಹಿಳೆ ಪತಿಯಿಂದ ಅಥವಾ ಪತಿಯ ಸಂಬಂಧಿಕರಿಂದ ವರದಕ್ಷಿಣೆಯೋ ಅಥವಾ ಬೇರಾವುದೋ ಕ್ರೌರ್ಯ ಅಥವಾ ಚಿತ್ರಹಿಂಸೆಯ ಪರಿಣಾಮವಾಗಿ ಮರಣ ಹೊಂದಿದರೆ, ಸೆಕ್ಷನ್ 306ರ ಅಡಿಯಲ್ಲಿ ಒಬ್ಬ ವ್ಯಕ್ತಿಯ ಕ್ರಿಯೆಯ (ಪ್ರಚೋದನೆ) ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಂಡರೆ, ಸೆಕ್ಷನ್ 313ರ ಪ್ರಕಾರ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಗರ್ಭಪಾತ ಮಾಡಲು ಪ್ರಯತ್ನಿಸಿದರೆ, ಸೆಕ್ಷನ್ 314ರ ಅಡಿಯಲ್ಲಿ ಗರ್ಭಪಾತವನ್ನು ಉಂಟುಮಾಡುವ ಉದ್ದೇಶದ ಕೃತ್ಯದಿಂದಾಗಿ ಮಹಿಳೆಯ ಸಾವು ಸಂಭವಿಸಿದರೆ, ಸೆಕ್ಷನ್ 315ರ ಪ್ರಕಾರ ಶಿಶುವಿನ ಜನನವನ್ನು ತಡೆಯುವುದು, ಸೆಕ್ಷನ್ 316ರ ಪ್ರಕಾರ ನವಜಾತ ಶಿಶುವನ್ನು ಕೊಲ್ಲುವುದು, ಮರಣಕ್ಕೆ ಕಾರಣವಾಗಬಹುದಾದ ಕೃತ್ಯವನ್ನೆಸಗುವುದು, ಸೆಕ್ಷನ್ 318ರ ಅಡಿಯ ಪ್ರಕಾರ ಮಗುವಿನ ಜನನವನ್ನು ಮರೆಮಾಚಲು ಮೃತ ದೇಹವನ್ನು ಹೂಳುವುದು, ಸೆಕ್ಷನ್ 354ರ ಅಡಿಯಲ್ಲಿ ಮಹಿಳೆಯ ಘನತೆಯನ್ನು ಭಂಗ ಮಾಡಲು ಬಲವನ್ನು ಬಳಸುವುದು, ಸೆಕ್ಷನ್ 363ರ ಅಡಿಯಲ್ಲಿ ಕಾನೂನುಬದ್ಧ ಬಂಧನದಿಂದ ಮಹಿಳೆಯನ್ನು ಅಪಹರಿಸುವುದು, ಸೆಕ್ಷನ್ 364ರ ಅಡಿಯಲ್ಲಿ ಕೊಲೆಯ ಉದ್ದೇಶಕ್ಕಾಗಿ ಮಹಿಳೆಯ ಅಪಹರಣ, ಸೆಕ್ಷನ್ 366ರ ಅಡಿಯಲ್ಲಿ ಮಹಿಳೆಯನ್ನು ಮದುವೆಯಾಗಲು ಒತ್ತಾಯಿಸುವುದು, ಸೆಕ್ಷನ್ 371ರ ಅಡಿಯಲ್ಲಿ ಮಹಿಳೆಯನ್ನು ಗುಲಾಮರಂತೆ ನಡೆಸಿಕೊಳ್ಳುವುದು, ಸೆಕ್ಷನ್ 372ರ ಪ್ರಕಾರ 18 ವರ್ಷದೊಳಗಿನ ಬಾಲಕಿಯನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡುವುದು ಅಥವಾ ಬಾಡಿಗೆಗೆ ಕೊಡುವುದು, ಸೆಕ್ಷನ್ 373ರ ಪ್ರಕಾರ ವೇಶ್ಯಾವೃತ್ತಿಗಾಗಿ 18 ವರ್ಷದ ಕಡಿಮೆ ವಯಸ್ಸಿನ ಬಾಲಕಿಯನ್ನು ಖರೀದಿಸುವುದು ಅಪರಾಧ. ಇದಕ್ಕಾಗಿ ಕಡಿಮೆಯೆಂದರೂ 10 ವರ್ಷಗಳ ಶಿಕ್ಷೆಯವರೆಗೂ ಅವಕಾಶವಿದೆ.

ಈ ರೀತಿಯ ಪ್ರಕರಣಗಳು ಕಂಡುಬಂದರೆ ಸೆಕ್ಷನ್ 372(2)ರ ಪ್ರಕಾರ ಮುಚ್ಚಿದ ಕೊಠಡಿಗಳಲ್ಲಿ ವಿಚಾರಣೆಯನ್ನು ನಡೆಸಲಾಗುತ್ತದೆ. ಉಲ್ಲೇಖನೀಯವಾದ ಅಂಶವೆಂದರೆ ಬಲಾತ್ಕಾರವಾಗುವಾಗ ತನ್ನನ್ನು ರಕ್ಷಿಸಿಕೊಳ್ಳಲು ಹಲ್ಲೆ ಮಾಡುವವರನ್ನು ಹತ್ಯೆ ಮಾಡುವ ಅವಕಾಶವೂ ಮಹಿಳೆಗಿದೆ. (ಭಾ.ದ.ವಿ. 100). ಅವರ ಅನುಮತಿಯಿಲ್ಲದೆ ಲೈಂಗಿಕ ಅಪೇಕ್ಷೆ ವ್ಯಕ್ತಪಡಿಸುವುದು, ಸಂಪರ್ಕ ಮಾಡುವುದು ಕೂಡ ದಂಡನೀಯ ಅಂಶ.

ಅನೇಕ ಸಾಮಾಜಿಕ ದೌರ್ಜನ್ಯ ಹಾಗೂ ಹಿಂಸೆಗಳಿಂದ ರಕ್ಷಿಸಿಕೊಳ್ಳಲು, ರಕ್ಷಣೆ ನೀಡಲು ಸಂವಿಧಾನದ ಅನೇಕ ಅಧಿನಿಯಮಗಳು ಸ್ತ್ರೀಗೆ ಪರಿಣಾಮಕಾರಿಯಾಗಿ ಒದಗಿ ಬಂದಿದ್ದು ಇಂತಹ ಸಂವಿಧಾನದ ಕುರಿತು ಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಸಚಿವರು ಸರಕಾರದ ವತಿಯಿಂದಲೇ ಅರಿವು ಮೂಡಿಸುತ್ತಿರುವುದು ಸ್ವಾಗತಾರ್ಹ ಮತ್ತು ಅಗತ್ಯವಾಗಿರುವ ಬೆಳವಣಿಗೆ ಆಗಿದೆ.

share
ಮಮತಾ ಅರಸೀಕೆರೆ
ಮಮತಾ ಅರಸೀಕೆರೆ
Next Story
X