Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಾದೇಶಿಕ ಅಸಮತೋಲನದಿಂದ ನಲುಗಿದ...

ಪ್ರಾದೇಶಿಕ ಅಸಮತೋಲನದಿಂದ ನಲುಗಿದ ರಾಯಚೂರು

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸುಧಾರಣೆಗಿಲ್ಲ ಸರಕಾರದ ಆದ್ಯತೆ

ಬಾವಸಲಿ ರಾಯಚೂರುಬಾವಸಲಿ ರಾಯಚೂರು17 Sept 2026 5:28 PM IST
share
ಪ್ರಾದೇಶಿಕ ಅಸಮತೋಲನದಿಂದ ನಲುಗಿದ ರಾಯಚೂರು

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಯಾದ ರಾಯಚೂರು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಜಿಲ್ಲೆಯ ಪಟ್ಟಿಯಲ್ಲಿದೆ. ಆದರೆ ಜಿಲ್ಲೆಗೆ ಸಚಿವ ಸ್ಥಾನ, ಸಮಗ್ರ ನೀರಾವರಿ ಸೌಲಭ್ಯ, ಶೈಕ್ಷಣಿಕ ಹಾಗೂ ಆರೋಗ್ಯ ಕೇಂದ್ರಗಳ ಸುಧಾರಣೆಯಾಗದೇ ಜಿಲ್ಲೆಯ ಜನರು ತೀವ್ರ ಅನ್ಯಾಯಕ್ಕೆ ಒಳಗಾಗಿದ್ದಾರೆ.

ಪ್ರಾದೇಶಿಕ ಅಸಮತೋಲನಾ ನಿವಾರಣೆಗೆ ಪ್ರೊ.ನಂಜುಡಪ್ಪ ವರದಿ ಜಾರಿ ಮಾಡಿ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ,ಆರೋಗ್ಯ, ಮೂಲಭೂತ ಸೌಕರ್ಯ, ಜನರ ತಲಾ ಆದಾಯ, ನೀರಾವರಿ ಸೌಕರ್ಯ,ಸಾರಿಗೆ ಸೌಲಭ್ಯ ಹಾಗೂ ಇತರೆ ಮೂಲಸೌಕರ್ಯ ಕಲ್ಪಸಿ ಇತರೆ ಭಾಗದಂತೆ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಗೊಳಿಸಬೇಕು ಎಂದು ತಿಳಿಸಲಾಗಿತ್ತು. ಆದರೆ ಯಾವುದೇ ಸರಕಾರ ಬಂದರೂ ಜಿಲ್ಲೆಗೆ ಸರಿಯಾದ ಪಾಲು ಸಿಗದೇ ನಿರಂತರವಾಗಿ ಅನ್ಯಾಯವಾಗುತ್ತಾ ಬಂದಿದೆ.

ಇತ್ತಿಚಿನ ಮಾಹಿತಿಯಂತೆ ರಾಯಚೂರು ಜಿಲ್ಲೆಯಲ್ಲಿ ನಿಯಮದಂತೆ 82 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರಬೇಕಿತ್ತು, ಆದರೆ ಕೇವಲ 50 ಆರೋಗ್ಯ ಕೇಂದ್ರಗಳಿವೆ, ನಗರ ಆರೋಗ್ಯ ಕೇಂದ್ರಗಳು 22 ಇರಬೇಕಿತ್ತು, ಕೇವಲ 6 ನಗರ ಆರೋಗ್ಯ ಕೇಂದ್ರಗಳಿವೆ. ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೆಸರಿಗೆ ಮಾತ್ರವಿದೆ, ಅಲ್ಲಿ ತಜ್ಞ ವೈದ್ಯರು, ಅಗತ್ಯ ಪ್ರಮಾಣದ ಔಷಧಿಗಳಿಲ್ಲ, ತುರ್ತು ಸಂದರ್ಭದಲ್ಲಿ ವೈದ್ಯರಿರುವುದಿಲ್ಲ. ಗ್ರಾಮೀಣ ಭಾಗದಲ್ಲಿ ವೈದ್ಯರು ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ ಇದರಿಂದಾಗಿ ಹಲವೆಡೆ ವೈದ್ಯರ ಕೊರತೆ ಇದೆ. ಹೀಗಾಗಿ ಗ್ರಾಮೀಣ ಭಾಗದವರು ಜಿಲ್ಲಾ ಕೇಂದ್ರದ ರಿಮ್ಸ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿಸಿದ್ದಾರೆ.

ಶೈಕ್ಷಣಿಕ ವ್ಯವಸ್ಥೆ ಅಧೋಗತಿ :

ಜಿಲ್ಲೆಯ ಶೈಕ್ಷಣಿಕ ಸ್ಥಿತಿ ಅಯೋಮಯವಾಗಿದೆ. ರಾಯಚೂರು ಜಿಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿದೆ. ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 4,343 ಹಾಗೂ ಪ್ರೌಢಶಾಲೆಗಳಲ್ಲಿ 1,040 ಸೇರಿ ಒಟ್ಟು 5,401 ಶಿಕ್ಷಕರ ಹುದ್ದೆ ಖಾಲಿ ಇದೆ. ಜಿಲ್ಲೆಯಲ್ಲಿ ಒಟ್ಟು 1,517 ಸರಕಾರಿ ಪ್ರಾಥಮಿಕ ಶಾಲೆಗಳು, 213 ಸರಕಾರಿ ಪ್ರೌಢಶಾಲೆಗಳಿವೆ. 7 ತಾಲೂಕುಗಳಲ್ಲಿ 10,519 ಪ್ರಾಥಮಿಕ ಶಾಲಾ ಕೊಠಡಿಗಳಿದ್ದು ಈ ಪೈಕಿ 930 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.

ಪ್ರೌಢಶಾಲೆಗಳ ಕೊಠಡಿಗಳ ಅವಸ್ಥೆ ಇದಕ್ಕಿಂತ ಭಿನ್ನವಾಗಿಲ್ಲ, ಜಿಲ್ಲೆಯಲ್ಲಿ ಒಟ್ಟು 3,549 ಪ್ರೌಢಶಾಲಾ ಕೊಠಡಿಗಳಿವೆ, ಇವುಗಳಲ್ಲಿ ಸುಮಾರು 217 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ರಾಯಚೂರು ಜಿಲ್ಲಾ ಕೇಂದ್ರದ ಅಸ್ಕಿಹಾಳ ಸೇರಿದಂತೆ ಹಲವೆಡೆ ಕೊಠಡಿಗಳ ಸಮಸ್ಯೆಯಿಂದ ಬಯಲಲ್ಲೇ ಮಕ್ಕಳಿಗೆ ಪಾಠ ಮಾಡುವುದು ಸಾಮಾನ್ಯವಾಗಿದೆ.

ಪ್ರೋ.ನಂಜುಂಡಪ್ಪ ವರದಿಯ ಅನ್ವಯ ಐಐಟಿ ರಾಯಚೂರಿಗೆ ಮಂಜೂರು ಆಗಬೇಕಿತ್ತು ಧಾರವಾಡ ಪಾಲಾಗಿದೆ. ಈಗ ಏಮ್ಸ್‌ಗಾಗಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ 1589ನೇ ದಿನಗಳಿಂದ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ಅನಿರ್ಧಿಷ್ಟ ಧರಣಿ ನಡೆಯುತ್ತಿದೆ. ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ, ರಾಯಚೂರು ತಾಲೂಕಿನಲ್ಲಿ ಹಲವು ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಸ್ಥಾಪಿಸಲ್ಪಟ್ಟಿವೆ. ಆದರೆ ಸ್ಥಳೀಯವಾಗಿ ಉದ್ಯೋಗ ನೀಡದ ಕಾರಣ ತಾಲೂಕಿನ ಜನರಿಗೆ ಹೆಚ್ಚು ಅನುಕೂಲವಾಗಿಲ್ಲ.

ನೀರಾವರಿ ಸೌಲಭ್ಯದಲ್ಲಿಯೂ ಅನ್ಯಾಯ :

ರಾಯಚೂರು ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 21 ಲಕ್ಷ ಎಕರೆ ಇದರಲ್ಲಿ ಬೀಳು ಭೂಮಿ ಹಾಗೂ ಕೃಷಿ ಮಾಡಲು ಸಾಧ್ಯ ವಿರುವ ಭೂಮಿ ಹೊರತುಪಡಿಸಿ 17 ಲಕ್ಷ 39 ಸಾವಿರ ಸಾಗುವಳಿ ಮಾಡಲಾಗುತ್ತಿದೆ. ಇದರಲ್ಲಿ 2 ಲಕ್ಷ ನೀರಾವರಿ, 11 ಲಕ್ಷ ಎಕರೆ ಒಣಭೂಮಿ ಇದೆ. ಜಿಲ್ಲೆಯಲ್ಲಿ ಹತ್ತಿ, ಭತ್ತ, ತೊಗರಿ, ಕಡಲೆ,ಜೋಳ ಹಾಗೂ ಮೆಣಸಿನಕಾಯಿ, ಈರುಳ್ಳಿ, ಇತರೆ ಹಣ್ಣುಗಳು ಹಾಗೂ ತೋಟಗಾರಿಕೆ ಬೆಳೆ ಮಾಡಲಾಗುತ್ತದೆ.

ನೀರಾವರಿ ಸೌಲಭ್ಯ ಗಮನಿಸುವುದಾದರೆ 4.50 ಲಕ್ಷ ಎಕರೆ ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ 2.50 ಲಕ್ಷ ಎಕರೆ ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ನೀರಾವರಿ ಯೋಜನೆಯ ಪ್ರಕಾರ ಜಿಲ್ಲೆಗೆ 300 ಟಿಎಂಸಿ ನೀರಿನ ಅವಶ್ಯಕತೆಯಿದ್ದು ಪ್ರಸ್ತುತ ಎಲ್ಲಾ ನೀರಿನ ಮೂಲಗಳಿಂದ 150 ಟಿಎಂಸಿ ಮಾತ್ರ ಸಂಗ್ರಹವಾಗುತ್ತಿದೆ.

ಕಲ್ಯಾಣ ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸುಮಾರು 10ಲಕ್ಷ ಎಕರೆ ಭೂಮಿಗೆ ನೀರಾವರಿ ಜೊತೆಗೆ ಕಾಲುವೆ ಭಾಗದ ಸಾವಿರಾರು ಹಳ್ಳಿಗಳು, ಪಟ್ಟಣಗಳಿಗೆ ಕುಡಿಯುವ ನೀರಿನ ಸೌಲಭ್ಯ ಈ ನೀರಾವರಿ ಯೋಜನೆಯಲ್ಲೇ ಒದಗಿಸಲಾಗಿದೆ.

ತುಂಗಭದ್ರಾ ಎಡದಂಡೆ ಕಾಲುವೆಯಿಂದ ಮೇಲ್ಬಾಗದ ಕೊಪ್ಪಳದಿಂದ ಜಿಲ್ಲೆಯ ಸಿಂಧನೂರು, ಮಾನ್ವಿ, ಸಿರವಾರ ಹಾಗೂ, ರಾಯಚೂರು ತಾಲೂಕಿಗೆ ನೀರು ಹರಿಸಬೇಕಾಗಿದೆ. ಕೊಪ್ಪಳದ ಗಂಗಾವತಿ, ಲಿಂಗದಳ್ಳಿ, ಚಿಕ್ಕ ಬೆಣಕಲ್ ಸೇರಿದಂತೆ ಮೇಲ್ಭಾಗದಲ್ಲಿ ಅನೇಕ ಪ್ರಭಾವಿ ರೈತರು, ರಾಜಕಾರಣಿಗಳು ಅಕ್ರಮ ನೀರಾವರಿ ಸೌಲಭ್ಯ ಮಾಡಿಕೊಂಡಿದ್ದರಿಂದ ಕೆಳಭಾಗದ ಸಿಂಧನೂರು, ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲೂಕಿಗೆ ಇದುವರೆಗೆ ನೀರು ಹರಿಯುತ್ತಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಕಾಲುವೆಗೆ ನೀರು ಹರಿಸಿದರೂ ಕೆಳ ಭಾಗಕ್ಕೆ ನೀರು ಬಂದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದು ಪ್ರತಿ ವರ್ಷ ನಡೆಯುವ ಸಮಸ್ಯೆ, ಈ ಬಾರಿ ತೀವ್ರ ಬರಗಾಲವಿದ್ದು ಕೆಳಭಾಗದ ರೈತರಿಗೆ ನೀರು ತಲುಪದ ಕಾರಣ ಭತ್ತದ ಬೆಳೆಗಳು ಒಣಗುತ್ತಿದೆ. ನೀರು ಕಳ್ಳತನಕ್ಕೆ ಕಠಿಣ ನಿಯಮಗಳಿದ್ದರೂ ಅನುಷ್ಠಾನ ಸರಿಯಾಗುತ್ತಿಲ್ಲ.

ಹಂಚಿಕೆ ಸಂಬಂಧ ನೀರಾವರಿ ಸಲಹಾ ಸಮಿತಿ ಮಾಡಿದರೂ ಅದರ ಅಧ್ಯಕ್ಷ ಕೊಪ್ಪಳ ಜಿಲ್ಲೆಯವರೇ ಆಗಿರುವುದರಿಂದ ಅನ್ಯಾಯ ಸರಿಪಡಿಸುವ ಕೆಲಸ ಆಗುತ್ತಿಲ್ಲ ಎಂದು ಕೆಳಭಾಗದ ರೈತರ ಆರೋಪ. ನೀರಿಗಾಗಿ ಸಿಂಧನೂರು, ಮಾನ್ವಿ,ಸಿ ರವಾರದಲ್ಲಿ ರೈತರು ಸತತವಾಗಿ ಹೋರಾಟ, ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ರಾಯಚೂರು ತಾಲೂಕಿನ ಕಾಲುವೆಗಳಲ್ಲಿ ನೀರಿಲ್ಲದೆ ಗಿಡಗಂಟಿಗಳು ಬೆಳೆದು ಚರಂಡಿಯಾಗಿ ಮಾರ್ಪಟ್ಟಿದೆ.

ಈ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಿಸಬೇಕು. ಗುಳೆ ಹೋಗುವುದನ್ನು ತಡೆಯಲು ಕೃಷಿಗೆ ಹೆಚ್ಚು ಉತ್ತೇಜನ ನೀಡಬೇಕು, ಮೇಲ್ಭಾಗದಲ್ಲಿನ ನೀರಾವರಿಯಿಂದ ನೀರು ಕಳ್ಳತನ ತಡೆಯಬೇಕು. ಯುವಕರಿಗೆ ಉದ್ಯೋಗ ನೀಡಿ ಆರ್ಥಿಕ ಅನುಕೂಲ ಕಲ್ಪಿಸಬೇಕು. ದೊಡ್ಡ ಸಂಸ್ಥೆಗಳು ಸ್ಥಾಪಿಸಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಸಮಾನವಾದ ಅವಕಾಶ ನೀಡಿ ಪ್ರಾಶಸ್ತ್ಯ ನೀಡಬೇಕು ಎಂದು ಸ್ಥಳೀಯ ಜನರು ಒತ್ತಾಯಿಸುತ್ತಿದ್ದಾರೆ.

ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಗೆ ಮಂತ್ರಿ ಸ್ಥಾನ ನೀಡಿಲ್ಲ, ಜಿಲ್ಲೆಯಲ್ಲಿ 4 ಕಾಂಗ್ರೆಸ್ ಶಾಸಕರು, 3 ವಿಧಾನಪರಿಷತ್ ಸದಸ್ಯರಿದ್ದರೂ ಸಚಿವ ಸ್ಥಾನ ನೀಡಿಲ್ಲ. ನಮ್ಮ ಭಾಗದ ಸಮಸ್ಯೆ ಪರಿಹಾರಕ್ಕೆ ಸಚಿವರಿಲ್ಲದೇ ಸರಕಾರಕ್ಕೆ ನಮ್ಮ ಧ್ವನಿ ಮುಟ್ಟುತ್ತಿಲ್ಲ. ಹೀಗಾಗಿ ಸತತವಾಗಿ ನಮಗೆ ಅನ್ಯಾಯವಾಗುತ್ತಿದೆ.

-ಎಸ್ ಮಾರೆಪ್ಪ, ಹೋರಾಟಗಾರ ರಾಯಚೂರು

371 ಜೆ ಕಾಯ್ದೆಯ ಕಾನೂನಿನ ಸೌಲಭ್ಯ ಪಡೆದುಕೊಂಡು ರಾಜ್ಯ ಸರಕಾರ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಏಕ ಕಾಲಕ್ಕೆ ಭರ್ತಿ ಮಾಡಬೇಕು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿ.ವಿ, ಬಳ್ಳಾರಿಯ ಕೃಷ್ಣದೇವರಾಯ ವಿವಿ,ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿನ ಭೋದಕ ಹುದ್ದೆಗಳನ್ನು ಭರ್ತಿ ಮಾಡಿ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕು. ಈ ಭಾಗದ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಡಾ.ರಝಾಕ್ ಉಸ್ತಾದ್, ಹೈ.ಕ. ಹೋರಾಟ ಸಮಿತಿ ಸಂಚಾಲಕ

Tags

Raichur
share
ಬಾವಸಲಿ ರಾಯಚೂರು
ಬಾವಸಲಿ ರಾಯಚೂರು
Next Story
X