Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜೀವಪರ ಮೌಲ್ಯಗಳನ್ನು ಸಾರುವ ‘ರಮಝಾನ್’

ಜೀವಪರ ಮೌಲ್ಯಗಳನ್ನು ಸಾರುವ ‘ರಮಝಾನ್’

ರಮಝಾನ್ ವಿಶೇಷ ಲೇಖನ

ತುಫೈಲ್ ಮುಹಮ್ಮದ್ತುಫೈಲ್ ಮುಹಮ್ಮದ್2 March 2025 10:58 AM IST
share
ಜೀವಪರ ಮೌಲ್ಯಗಳನ್ನು ಸಾರುವ ‘ರಮಝಾನ್’
ಇಸ್ಲಾಮ್ ಧರ್ಮದ ಎಲ್ಲ ಆರಾಧನಾ ಕರ್ಮಗಳ ಹಿಂದೆ ಆತ್ಮಸಂಸ್ಕರಣೆಯ ಜತೆಗೆ ಸಾಮಾಜಿಕ ಅಭ್ಯುದಯದ ಆಶಯವೂ ಇದೆ. ಶ್ರದ್ಧೆ ಮತ್ತು ಭಕ್ತಿಯೊಂದಿಗೆ ಮಾಡುವ ನಮಾಝ್, ತೋರಿಕೆಯಿಲ್ಲದ ಹಜ್ ಮತ್ತು ಲೌಕಿಕ ಫಲಾಪೇಕ್ಷೆಯಿಲ್ಲದೆ ಕೊಡುವ ಝಕಾತ್ ಅಥವಾ ಕಡ್ಡಾಯ ದಾನವು ಮನುಷ್ಯನ ಆಧ್ಯಾತ್ಮಿಕ ವಿಕಾಸಕ್ಕೆ ಹಾದಿ ಮಾಡಿಕೊಡುತ್ತದೆ. ರಮಝಾನ್‌ನ ವ್ರತವು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ವಿಶೇಷತೆ ಹೊಂದಿದ್ದು, ಇಲ್ಲಿ ದೇವರು ಮತ್ತು ಭಕ್ತನ ಮಧ್ಯೆ ಯಾವುದೇ ತಡೆ ಇರುವುದಿಲ್ಲ. ಅದು ಮನುಷ್ಯ ತನ್ನ ಒಡೆಯನೊಂದಿಗೆ ನಡೆಸುವ ತೀರಾ ಖಾಸಗಿಯಾದ ಅನುಸಂಧಾನ.

ಮನುಷ್ಯನ ದುರಾಸೆ ಮತ್ತು ಅಧಿಕಾರ ವ್ಯಾಮೋಹದಿಂದ ಜಗತ್ತು ಜರ್ಜರಿತಗೊಂಡು ಎಲ್ಲೆಡೆ ನಿರಾಶೆಯ ಕಾರ್ಮೋಡ ದಟ್ಟೈಸಿರುವ ಹೊತ್ತಲ್ಲೇ ಸಮಾನತೆ ಮತ್ತು ಆತ್ಮನಿಯಂತ್ರಣದ ಮೌಲ್ಯಗಳನ್ನು ನೆನಪಿಸುವ ರಮಝಾನ್ ಮತ್ತೊಮ್ಮೆ ಬಂದಿದೆ. ಈ ತಿಂಗಳಲ್ಲಿ ಜಗತ್ತಿನಾದ್ಯಂತ ಮುಸ್ಲಿಮರು ಹಗಲಿನ ವೇಳೆಯಲ್ಲಿ ಹಸಿವು, ಬಾಯಾರಿಕೆ ಮತ್ತು ಕಾಮೇಚ್ಛೆಯನ್ನು ನಿಗ್ರಹಿಸಿ ದೇವ ಸಂಪ್ರೀತಿ ಅರಸುತ್ತಾರೆ. ಇಸ್ಲಾಮ್ ಧರ್ಮದ ಪ್ರಕಾರ ರಮಝಾನಿನ ಉಪವಾಸವು ದೇವರ ಮೇಲಿನ ನಂಬಿಕೆ, ನಮಾಝ್, ಝಕಾತ್ ಮತ್ತು ಹಜ್ ಯಾತ್ರೆಗಳಂತೆಯೇ ಕಡ್ಡಾಯ. ವಿಶ್ವಾಸ ಮತ್ತು ಆತ್ಮಾವಲೋಕನದೊಂದಿಗೆ ಉಪವಾಸ ಆಚರಿಸುವ ವ್ಯಕ್ತಿಯ ಎಲ್ಲ ಪಾಪಗಳನ್ನು ಅಲ್ಲಾಹನು ಮನ್ನಿಸುತ್ತಾನೆ ಎಂಬ ಪ್ರವಾದಿ ವಚನವು ಈ ತಿಂಗಳಿಗಿರುವ ಮಹತ್ವದ ಪ್ರತೀಕ.

ಇಸ್ಲಾಮ್ ಧರ್ಮದ ಎಲ್ಲ ಆರಾಧನಾ ಕರ್ಮಗಳ ಹಿಂದೆ ಆತ್ಮಸಂಸ್ಕರಣೆಯ ಜತೆಗೆ ಸಾಮಾಜಿಕ ಅಭ್ಯುದಯದ ಆಶಯವೂ ಇದೆ. ಶ್ರದ್ಧೆ ಮತ್ತು ಭಕ್ತಿಯೊಂದಿಗೆ ಮಾಡುವ ನಮಾಝ್, ತೋರಿಕೆಯಿಲ್ಲದ ಹಜ್ ಮತ್ತು ಲೌಕಿಕ ಫಲಾಪೇಕ್ಷೆಯಿಲ್ಲದೆ ಕೊಡುವ ಝಕಾತ್ ಅಥವಾ ಕಡ್ಡಾಯ ದಾನವು ಮನುಷ್ಯನ ಆಧ್ಯಾತ್ಮಿಕ ವಿಕಾಸಕ್ಕೆ ಹಾದಿ ಮಾಡಿಕೊಡುತ್ತದೆ. ರಮಝಾನ್‌ನ ವ್ರತವು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ವಿಶೇಷತೆ ಹೊಂದಿದ್ದು, ಇಲ್ಲಿ ದೇವರು ಮತ್ತು ಭಕ್ತನ ಮಧ್ಯೆ ಯಾವುದೇ ತಡೆ ಇರುವುದಿಲ್ಲ. ಅದು ಮನುಷ್ಯ ತನ್ನ ಒಡೆಯನೊಂದಿಗೆ ನಡೆಸುವ ತೀರಾ ಖಾಸಗಿಯಾದ ಅನುಸಂಧಾನ. ‘‘ಉಪವಾಸವು ನನಗಾಗಿದೆ ಮತ್ತು ನಾನೇ ಅದರ ಪ್ರತಿಫಲವನ್ನು ಕೊಡುವವನಾಗಿದ್ದೇನೆ’’ ಎಂದು ಅಲ್ಲಾಹನು ಹೇಳಿರುವುದಾಗಿ ಪ್ರವಾದಿ ಮುಹಮ್ಮದ್ (ಸ) ಒಮ್ಮೆ ತಮ್ಮ ಸಂಗಾತಿಗಳಿಗೆ ತಿಳಿಸಿದ್ದು ಇಲ್ಲಿ ಉಲ್ಲೇಖಾರ್ಹ.

ರಮಝಾನ್ ವ್ರತಾಚರಣೆಯನ್ನು ಮುಸ್ಲಿಮರಿಗೆ ಕಡ್ಡಾಯಗೊಳಿಸಿರುವುದರ ಹಿಂದಿರುವ ‘ಬಹಿರಂಗ ಶುದ್ಧಿ’ಯ ಆಯಾಮವೂ ಬಹಳ ಮುಖ್ಯವಾದುದು. ‘‘ಯಾರು ನಡೆನುಡಿಯಲ್ಲಿ ಸುಳ್ಳುಗಾರನಾಗಿದ್ದಾನೋ ಆತ ಹಸಿವು ಬಾಯಾರಿಕೆಯನ್ನು ನಿಗ್ರಹಿಸಿ ತನಗಾಗಿ ಉಪವಾಸ ಆಚರಿಸಬೇಕೆಂಬ ಯಾವ ಅಪೇಕ್ಷೆಯೂ ದೇವರಿಗೆ ಇಲ್ಲ’’ ಎಂಬ ಪ್ರವಾದಿ ವಚನ ಇದನ್ನೇ ಸಾರಿ ಹೇಳುತ್ತದೆ. ಮನುಷ್ಯನ ಖಾಸಗಿಯಾದ ಆರಾಧನಾ ಕರ್ಮವನ್ನು ಯಾವ ರೀತಿ ಇಸ್ಲಾಮ್ ಧರ್ಮವು ಒಟ್ಟು ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾದ ಮೌಲ್ಯವಾಗಿ ಪರಿವರ್ತಿಸಬಯಸುತ್ತದೆ ಎಂಬುದನ್ನು ಇದರಿಂದ ಅರ್ಥೈಸಬಹುದು. ವ್ರತಧಾರಿಯು ಎಲ್ಲ ಅರಿಷಡ್ವರ್ಗಗಳಿಂದ ದೂರವಿರಬೇಕಾದುದು ಮಾತ್ರವಲ್ಲ, ತನ್ನೊಂದಿಗೆ ಕಾಲುಕೆದರಿ ಜಗಳಕ್ಕೆ ಬಂದವರೊಡನೆಯೂ ಕಾದಾಟಕ್ಕೆ ಇಳಿಯಕೂಡದು. ಅಂತಹ ಪ್ರಸಂಗ ಬಂದರೆ ‘‘ನಾನು ಉಪವಾಸಿಗ’’ ಎಂದು ಹೇಳಿ ಅಲ್ಲಿಂದ ನಿರ್ಗಮಿಸಬೇಕೆಂಬುದು ಪ್ರವಾದಿಯವರ ನಿಲುವಾಗಿತ್ತು.

ರಮಝಾನ್ ಸಮಾನತೆ, ಸಹಬಾಳ್ವೆ, ಬಂಧುತ್ವ ಮತ್ತು ನ್ಯಾಯದ ಪ್ರತೀಕವೂ ಹೌದು. ಜಗತ್ತಿನ ಮೂರನೇ ಒಂದರಷ್ಟು ಜನರು ಇಂದು ಆರೋಗ್ಯಕರ ಆಹಾರವಿಲ್ಲದೆ ನರಳುತ್ತಿದ್ದಾರೆ. ಕನಿಷ್ಠ ಏಳುನೂರು ಮಿಲಿಯ ಜನರಿಗೆ ಇಂದು ರಾತ್ರಿಯೂಟದ ಭಾಗ್ಯವಿಲ್ಲ. ಮತ್ತೊಂದೆಡೆ ಉಳ್ಳವರ ಹಿತಕಾಯುವ ಆಡಳಿತ ನೀತಿಗಳ ಪರಿಣಾಮವಾಗಿ ವಿಶ್ವದ ಕೇವಲ ಶೇ. 1ರಷ್ಟು ಕುಬೇರರು ಜಾಗತಿಕ ಸಂಪತ್ತಿನ ಅರ್ಧದಷ್ಟನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಇಂತಹ ಅಸಮಾನ ಜಗತ್ತಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದ, ತಲೆಯ ಮೇಲೆ ಸೂರಿಲ್ಲದ ಕೋಟ್ಯಂತರ ಜನರ ಸಂಕಷ್ಟದ ತೀವ್ರತೆಯನ್ನು ಕಿಂಚಿತ್ತಾದರೂ ಅರಿಯಲು ರಮಝಾನಿನ ಉಪವಾಸ ಪ್ರೇರಣೆಯಾದರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಇನ್ನೊಂದಿಲ್ಲ.

ಸಾಮಾನ್ಯವಾಗಿ ಜಗತ್ತಿನಾದ್ಯಂತ ಮುಸ್ಲಿಮರು ಈ ತಿಂಗಳಲ್ಲೇ ತಮ್ಮ ಸಂಪತ್ತಿನ ಶೇ.2.5 ಪಾಲನ್ನು ಕಡ್ಡಾಯ ದಾನ (ಝಕಾತ್)ಕ್ಕೆ ತೆಗೆದಿರಿಸುತ್ತಾರೆ. ಅಂದಾಜು ಒಂದು ಟ್ರಿಲಿಯನ್ ಡಾಲರ್‌ವರೆಗಿನ ಹಣವನ್ನು ವಾರ್ಷಿಕವಾಗಿ ಝಕಾತ್ ರೂಪದಲ್ಲಿ ವಿತರಿಸಲಾಗುತ್ತದೆ ಎಂದು ಬರ್ಮಿಂಗ್ಹಾಮ್ ಯುನಿವರ್ಸಿಟಿ ವರದಿ ಹೇಳುತ್ತದೆ. ಇಷ್ಟು ದೊಡ್ಡ ಮೊತ್ತದ ಝಕಾತ್, ಜಾಗತಿಕ ಹಸಿವು ಮತ್ತು ಬಡತನ ನಿರ್ಮೂಲನದಲ್ಲಿ ಎಷ್ಟು ದೊಡ್ಡ ಪಾತ್ರ ವಹಿಸಬಹುದೆಂಬುದನ್ನು ಊಹಿಸುವುದು ಕಷ್ಟವಲ್ಲ. ಇದರ ಜತೆಗೆ ಸದಕಾ (ಐಚ್ಛಿಕ ದಾನ)ದ ಮೂಲಕವೂ ಮಿಲಿಯಗಟ್ಟಲೆ ಹಣ ಮುಸ್ಲಿಮರಲ್ಲಿರುವ ಸ್ಥಿತಿವಂತರಿಂದ ಜನಕಲ್ಯಾಣ ಯೋಜನೆಗಳಿಗೆ ಸಂಚಯವಾಗುತ್ತಿದೆ. ಪ್ರಾಯಶಃ ಇನ್ನೂ ಹೆಚ್ಚು ವ್ಯವಸ್ಥಿತವಾಗಿ ಝಕಾತ್ ಸಂಗ್ರಹ ಮತ್ತು ವಿತರಣೆ ನಡೆದದ್ದೇ ಆದಲ್ಲಿ ಜಗತ್ತಿನ ಬಡತನ, ಅಪೌಷ್ಟಿಕತೆ, ಅನಾರೋಗ್ಯ ಮತ್ತು ವಸತಿಯ ಸಮಸ್ಯೆಗಳ ನಿವಾರಣೆಯಲ್ಲಿ ಇಸ್ಲಾಮ್ ಧರ್ಮದ ಈ ಕಡ್ಡಾಯ ಆರಾಧನಾ ಕರ್ಮ ಅತ್ಯಂತ ಪರಿಣಾಮಕಾರಿ ಪಾತ್ರ ನಿರ್ವಹಿಸುವುದರಲ್ಲಿ ಸಂಶಯ ಇಲ್ಲ.

ರಮಝಾನ್ ಸೇರಿದಂತೆ ಇಸ್ಲಾಮಿನ ಆರಾಧನಾ ಕ್ರಿಯೆಗಳನ್ನು ಬರೀ ವೈಯಕ್ತಿಕ ಪುಣ್ಯಗಳಿಕೆಯ ಸೀಮಿತ ದೃಷ್ಟಿಕೋನದಿಂದ ನೋಡಲಾಗದು. ಹಾಗೆ ಮಾಡಿದರೆ ಅದು ಕಾಳನ್ನು ಬಿಟ್ಟು ಬರೀ ಜೊಳ್ಳಿಗೆ ಜೋತುಬಿದ್ದಂತೆ. ಆರಾಧನೆ, ಉಪಾಸನೆಗಳ ಹಿನ್ನೆಲೆಯಲ್ಲಿರುವ ವಿಶಾಲವಾದ ಮಾನವೀಯ, ಸಾಮಾಜಿಕ ಮತ್ತು ಸಾರ್ವಕಾಲಿಕ ಮೌಲ್ಯಗಳನ್ನು ಚರ್ಚೆಗೆ ಎತ್ತಿಕೊಳ್ಳದೆ ಹೋದರೆ, ಯಾವುದೇ ಧಾರ್ಮಿಕ ಆಚರಣೆ ಕ್ರಮೇಣ ರಿಚುವಲ್ ಆಗಿ ಬಿಡುತ್ತದೆ. ಇಸ್ಲಾಮ್ ಧರ್ಮದ ಪ್ರಕಾರ ರಮಝಾನ್‌ಗೆ ಮಹತ್ವ ಬಂದಿರುವುದೇ ಅದು ಕುರ್‌ಆನ್ ಅವತೀರ್ಣಗೊಂಡ ತಿಂಗಳು ಎಂಬುದಕ್ಕಾಗಿ. ಕುರ್‌ಆನ್ ಪ್ರತಿಪಾದಿಸುವ ಮೌಲ್ಯಗಳಾದ ಸಮಾನತೆ, ಮಾನವ ಹಕ್ಕು ಮತ್ತು ಘನತೆ ಹಾಗೂ ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತರಲು ಈ ತಿಂಗಳನ್ನು ಯಾವ ರೀತಿ ಬಳಸಬಹುದು ಎಂಬ ಬಗ್ಗೆ ಮುಸ್ಲಿಮ್ ಸಮಾಜ ಚಿಂತಿಸಬೇಕಾದುದು ಕೂಡಾ ಇಂದಿನ ತುರ್ತು.

ಭಾರತದಂತಹ ಬಹುಸಂಸ್ಕೃತಿ ಮತ್ತು ಬಹುಜನಾಂಗೀಯ ದೇಶದಲ್ಲಿ ರಮಝಾನ್ ಜನರನ್ನು ಬೆಸೆಯುವ, ವೈಮನಸ್ಸು ಮತ್ತು ಸಂಶಯವನ್ನು ಅಳಿಸುವ ಆಚರಣೆಯಾಗಿ ಬೆಳೆಯಬೇಕಾದುದು ಬಹಳ ಮುಖ್ಯ. ಆದರೆ, ಉಪವಾಸದ ತಿಂಗಳ ಆರಂಭದ ಹೊತ್ತಲ್ಲೇ ಜನರ ಮನಸ್ಸನ್ನು ಒಡೆಯುವ ಕೆಲಸ ಈ ಬಾರಿಯೂ ನಡೆದಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಉಪವಾಸದ ತಿಂಗಳಲ್ಲಿ ಮುಸ್ಲಿಮ್ ಸರಕಾರಿ ನೌಕರರು ಮತ್ತು ಶಿಕ್ಷಕರಿಗೆ ಒಂದು ಗಂಟೆಯ ವಿನಾಯಿತಿ ನೀಡುವ ನಿರ್ಧಾರದ ಸುತ್ತ ಎದ್ದಿರುವ ವಿವಾದ ನಿಜವಾಗಿಯೂ ದುರದೃಷ್ಟಕರ. ಈ ನಿರ್ಧಾರದ ಪರ ಅಥವಾ ವಿರುದ್ಧವಾಗಿ ಮಾತನಾಡುವ ರಾಜಕೀಯ ಪಕ್ಷ ಮತ್ತು ನಾಯಕರ ಬಳಿ ತಮ್ಮದೇ ಆದ ಸಮರ್ಥನೆಗಳಿರಬಹುದು. ಆದರೆ ಉಭಯ ಬಣಗಳ ಮತಕೇಂದ್ರಿತ ರಾಜಕೀಯ ಮೇಲಾಟಕ್ಕೆ ಮುಸ್ಲಿಮ್ ಸಮುದಾಯ ಬಲಿಪಶುವಾಗುತ್ತಿರುವುದಂತೂ ಸ್ಪಷ್ಟ. ಇದನ್ನು ಅರ್ಥಮಾಡಿಕೊಂಡು, ರಾಜಕೀಯ ಪ್ರೇರಿತವಾದ ‘ತುಷ್ಟೀಕರಣ’ವನ್ನು ಆಯಾ ರಾಜ್ಯದ ಮೌಲ್ವಿಗಳು ಮತ್ತು ವಿದ್ವಾಂಸರು ತಿರಸ್ಕರಿಸಿದ್ದರೆ ಅದು ನಿಜವಾಗಿಯೂ ಒಂದು ಜಾಣ ನಡೆಯಾಗುತ್ತಿತ್ತು. ಹಾಗೆ ನೋಡಿದರೆ, ಉಪವಾಸದ ಆಚರಣೆಗೆ ವಿನಾಯಿತಿ ಕೇಳುವುದೇ ಇಸ್ಲಾಮಿನ ಸ್ಫೂರ್ತಿಗೆ ತದ್ವಿರುದ್ಧವಾದ ನಡೆ. ಪ್ರವಾದಿ ಮುಹಮ್ಮದ್ (ಸ) ಮತ್ತವರ ಮುನ್ನೂರು ಮಂದಿ ಸಹಚರರು ಶಸ್ತ್ರಸಜ್ಜಿತವಾದ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಶತ್ರು ಸೇನೆಯನ್ನು ಬದ್ರ್‌ನ ಸತ್ಯ-ಮಿಥ್ಯಗಳ ನಿರ್ಣಾಯಕ ಯುದ್ಧದಲ್ಲಿ ಸೋಲಿಸಿದ್ದು ಉಪವಾಸದ ತಿಂಗಳಲ್ಲೇ ಎಂಬುದನ್ನು ಪ್ರಾಯಶಃ ನಮ್ಮ ಮೌಲ್ವಿಗಳು ಮರೆತೇ ಬಿಟ್ಟರೇನೋ!

ಕರ್ನಾಟಕದಲ್ಲೂ ರಮಝಾನ್‌ಗೆ ಕೆಲಸದ ಅವಧಿ ಕಡಿತಗೊಳಿಸುವ ಪ್ರಸ್ತಾವವನ್ನು ಅಣಕಿಸುತ್ತಾ ಬಿಜೆಪಿ ನಾಯಕರೊಬ್ಬರು ‘‘ಒಂದೆರಡು ಗಂಟೆ ಯಾಕೆ? ಇಡೀ ತಿಂಗಳು ಉಪವಾಸ ಆಚರಿಸಿಕೊಂಡು ಬಿರ್ಯಾನಿ ತಿಂದುಕೊಂಡು ಹಬ್ಬ ಆಚರಿಸಿಕೊಂಡಿರಲಿ’’ ಎಂದು ಅಬ್ಬರಿಸಿದ್ದರು. ಮುಸ್ಲಿಮ್ ದ್ವೇಷದ ಮೇಲೆಯೇ ತನ್ನ ರಾಜಕೀಯ ಭವಿಷ್ಯವನ್ನು ಕಟ್ಟುತ್ತಿರುವ ಪಕ್ಷದ ಮುಖಂಡನಿಂದ ಇಂತಹ ಹೇಳಿಕೆ ಬಂದಿರುವುದರಲ್ಲಿ ಅಂತಹ ಆಶ್ಚರ್ಯವೇನೂ ಇಲ್ಲ. ಆದರೆ, ಇಂತಹ ನರೇಟಿವ್‌ಗಳಿಗೆ ರಾಜ್ಯದ ಒಂದು ದೊಡ್ಡ ಸಂಖ್ಯೆಯ ಸೈಲೆಂಟ್ ಮೆಜಾರಿಟಿ ಬಲಿಯಾಗಿದ್ದಾರೆ ಎಂಬುದನ್ನು ನಿರಾಕರಿಸುವಂತಿಲ್ಲ. ಇಂತಹ ವಿಷಮ ಸಂದರ್ಭದಲ್ಲಿ ರಮಝಾನ್‌ನ ಉದಾತ್ತವಾದ ಜೀವಪರ, ಜನಪರ ಮೌಲ್ಯಗಳನ್ನು ಮುನ್ನೆಲೆಗೆ ತಂದು, ಇಸ್ಲಾಮ್ ಮತ್ತು ಅದರ ಆಚರಣೆಗಳ ಬಗ್ಗೆ ಇರುವ ಪೂರ್ವಗ್ರಹ, ಸಂಶಯ ಮತ್ತು ಸ್ಟಿರಿಯೋಟೈಪ್‌ಗಳನ್ನು ಅಳಿಸುವ ಪ್ರಯತ್ನ ಚುರುಕುಗೊಳ್ಳಬೇಕಾದ ಅಗತ್ಯವಿದೆ.

share
ತುಫೈಲ್ ಮುಹಮ್ಮದ್
ತುಫೈಲ್ ಮುಹಮ್ಮದ್
Next Story
X