Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಳಿವಿನಂಚಿನಲ್ಲಿದೆ ಕರಾವಳಿಯ ರಾಮಪತ್ರೆ

ಅಳಿವಿನಂಚಿನಲ್ಲಿದೆ ಕರಾವಳಿಯ ರಾಮಪತ್ರೆ

ವಾರ್ತಾಭಾರತಿವಾರ್ತಾಭಾರತಿ12 Jan 2026 2:23 PM IST
share
ಅಳಿವಿನಂಚಿನಲ್ಲಿದೆ ಕರಾವಳಿಯ ರಾಮಪತ್ರೆ
100ಕ್ಕೂ ಅಧಿಕ ಗಿಡಗಳನ್ನು ನೆಟ್ಟು, ಪೋಷಣೆ ಮಾಡುತ್ತಿರುವ ಪುತ್ತೂರಿನ ಪದ್ಮನಾಭ ನಾಯ್ಕ

ಪುತ್ತೂರು: ರಾಮಪತ್ರೆ ಎಂಬುವುದು ಕರಾವಳಿ ಭಾಗದಲ್ಲಿ ಬಹು ವಿರಳವಾಗಿ ಕಂಡುಬರುವ ಚಿನ್ನದ ಬೆಲೆಯುಳ್ಳ ಒಂದು ಕಾಡುತ್ಪತ್ತಿಯಾಗಿದೆ. ಬಹಳ ಹಿಂದಿನ ಕಾಲದಲ್ಲಿ ಬುಡಕಟ್ಟು ಜನಾಂಗದವರು, ಕಾಡು ಮೇಡಿನಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಬದುಕಿಗಾಗಿ ಈ ಬೆಳೆಯ ಮೇಲೆ ಅವಲಂಬಿತರಾಗಿದ್ದರು. ಆದರೆ ಕಾಲ ಹೋದಂತೆ ಈ ಗಿಡಮರಗಳು ಕಾಣಸಿಗುವುದೇ ಬಲು ಅಪರೂಪವಾಗಿದೆ.

ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಪದ್ಮನಾಭ ನಾಯ್ಕ ಕೊಡಂಕೀರಿ ಅವರು ಸುಮಾರು 100ಕ್ಕೂ ಅಧಿಕ ರಾಮಪತ್ರೆಯ ಗಿಡಗಳನ್ನು ನೆಟ್ಟು, ಪೋಷಣೆ ಮಾಡುತ್ತಿದ್ದಾರೆ. ಇದಲ್ಲದೆ ಅಡಿಕೆ, ತೆಂಗು, ಹಟ್ಟಿ ಗೊಬ್ಬರಕ್ಕಾಗಿ ಹೈನುಗಾರಿಕೆ, ಕಾಳು ಮೆಣಸು, ಬಾಳೆ ಮುಂತಾದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅದಲ್ಲದೇ ಔಷಧೀಯ ಗಿಡ ಮರಗಳನ್ನು ಬೆಳೆಸಿ ಅದರ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರ ಜೊತೆಜೊತೆಗೆ ಮೀನು ಸಾಕಾಣಿಕೆ, ಕಂಪೋಸ್ಟ್ ತಯಾರಿಕೆ, ಎಲ್ಲಾ ಬಗೆಯ ತರಕಾರಿ ಹಿಂದಿನ ಪರಂಪರೆಯ ಪದ್ಧತಿಯ ಗೆಡ್ಡೆಗೆಣಸುಗಳನ್ನು ಬೆಳೆಸುತ್ತಾರೆ. ಹಿಂದೆ ನರ್ಸರಿ ಕೂಡ ಮಾಡಿರುವ ಅನುಭವವಿದೆ. ಸಣ್ಣ ಪ್ರಾಯದಲ್ಲಿಯೇ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡ ಒಬ್ಬ ಶ್ರಮಜೀವಿ. ಇವರಿಗೆ ಸಹಜ ಕೃಷಿಯ ಬಗ್ಗೆ ಅಪಾರ ಆಸಕ್ತಿ ಇದೆ.

ತುಳುವಿನಲ್ಲಿ ಇದಕ್ಕೆ ‘ಕಾಣಜೆ/ಕಾಣಕಜೆ’ ಎಂದು ಕನ್ನಡದಲ್ಲಿ ‘ದೊಡ್ಡ ಜಾಯಿಕಾಯಿ’ ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ 70ಅಡಿಯಿಂದ 75ಅಡಿ ಹೆಚ್ಚೆಂದರೆ 100ಅಡಿ ಎತ್ತರವಾಗಿ ಬೆಳೆಯುತ್ತದೆ. ಈ ಮರಗಳ ಆಯಸ್ಸು ಸರಿಸುಮಾರು 100ರಿಂದ 200 ವರ್ಷಗಳು ಎಂದು ಅಂದಾಜಿಸಬಹುದು. ಮರ ಬೆಳೆದಂತೆ ಆಲದ ಮರದ ರೀತಿಯಾಗಿ ವಿಸ್ತಾರವಾಗಿ ಹರಡುತ್ತದೆ. ಇದರ ಎಲೆ ನೋಡಲು ಜಾಯಿಕಾಯಿಯ ಎಲೆಯಂತೆಯೇ ಉದ್ದವಾಗಿದ್ದು, ಪರಿಮಳ ಇರುವುದಿಲ್ಲ ಎಂದು ಪದ್ಮನಾಭ ನಾಯ್ಕ ಹೇಳುತ್ತಾರೆ.

ಇದರ ತೊಗಟೆಯನ್ನು ಸೀಳಿದರೆ ರಕ್ತವರ್ಣದ ದ್ರವ ಹೊರಚಿಮ್ಮುತ್ತದೆ. ಮರ ಬೆಳೆಯುತ್ತಾ ಹೋದಂತೆ ಮೇಲೆ ಬೇರು ಬಂದು ಸವಕಳಿಯನ್ನು ತಡೆಗಟ್ಟುವ ಮತ್ತು ಮಳೆ ನೀರನ್ನು ಇಂಗಿಸುವ ಸಾಮರ್ಥ್ಯವಿದೆ. ಇಂತಹ ನೂರಾರು ಮರಗಳು ಒಟ್ಟಿಗೆ ಒಂದೇ ಪ್ರದೇಶದಲ್ಲಿ ಇದ್ದರೆ ಆ ಪ್ರದೇಶವು ಬಲು ತಂಪಾಗಿರುತ್ತದೆ ಎಂದು ಅವರು ಹೇಳುತ್ತಾರೆ.

ಇದರ ಕಾಯಿಯ ಬಗ್ಗೆ ಹೇಳುವುದಾದರೆ ಕಂದು ಮಿಶ್ರಿತ ಕೆಂಪು ಬಣ್ಣದ್ದಾಗಿರುತ್ತದೆ. ಕಾಯಿ ಬೆಳೆದಾಗ ಅದರ ಸಿಪ್ಪೆಸಿಡಿದು ಅದರ ಹೂವು ನಮಗೆ ಕಾಣುತ್ತದೆ. ಈ ಹೂವಿನ ಬಣ್ಣವು ಹಳದಿ ಅಥವಾ ಕೆಂಪಾಗಿರುತ್ತದೆ. ಈ ಹೂವು ಬೀಜಕ್ಕೆ ಕವಚವಾಗಿರುವುದಂತೆ ಸುತ್ತಿರುತ್ತದೆ. ಈ ಮರವು ನವೆಂಬರ್‌ನಿಂದ ಮಾರ್ಚ್ ತನಕ ಹೂ ಬಿಡುತ್ತದೆ. ಪ್ರಸಕ್ತ ಹವಾಮಾನ ಬದಲಾವಣೆಯಿಂದಾಗಿ ಜೂನ್ ತನಕ ಹೋಗುತ್ತದೆ. ನಂತರ ಈ ಹೂವು ಬಲಿತು ಕಾಯಿಯಾಗುತ್ತದೆ. ಎರಡು ವರ್ಷಕ್ಕೊಮ್ಮೆ ಹೆಚ್ಚು ಫಸಲು ನಿರೀಕ್ಷಿಸಬಹುದು. ಹೂವು ಬಿಡುವ ಸಮಯದಲ್ಲಿ ಮೊಜಂಟಿ ಜೇನುಗಳು ಹೆಚ್ಚಾಗಿ ಈ ಮರದ ಸುತ್ತಮುತ್ತ ಕಾಣಬಹುದು.

ಅಡಿಕೆ ಬೆಲೆಗೆ ಕೊಡುವ ಶೇ.25ರಷ್ಟು ಗಮನವನ್ನು ಈ ಬೆಲೆಗೆ ಕೊಟ್ಟರೆ ಐದರಿಂದ ಎಂಟು ವರ್ಷಗಳೊಳಗೆ ಆರಂಭದ ಫಸಲನ್ನು ನಿರೀಕ್ಷಿಸಬಹುದು. ವರ್ಷ ಜಾಸ್ತಿಯಾದಂತೆ ಮರ ಬೆಳೆದಂತೆ ಫಸಲು ಕೂಡ ಹೆಚ್ಚು ದೊರೆಯುತ್ತದೆ. ಒಂದು ವರ್ಷದಲ್ಲಿ ಒಂದು ಮರದಿಂದ 10 ಕೆಜಿಯಿಂದ 35 ಕೆಜಿಗೂ ಅಧಿಕ ರಾಮಪತ್ರೆ ಹೂವನ್ನು ನಿರೀಕ್ಷಿಸಬಹುದು. ಕೊಯ್ಲಿನ ಸಮಯದಲ್ಲಿ ಈ ಕಾಯಿಯನ್ನು ಕೊಯ್ದು, ಜಜ್ಜಿ ಸಿಪ್ಪೆ ತೆಗೆಯಬೇಕು. ಆಗ ನಮಗೆ ಬೀಜಕ್ಕೆ ಸುತ್ತಿಕೊಂಡಂತೆ ಹೂವನ್ನು ಕಾಣುತ್ತದೆ. ಈ ಹೂವನ್ನು ಬೀಜದಿಂದ ಬಿಡಿಸಿ, ಬಿಸಿಲಿನಲ್ಲಿ ಒಣಗಿಸಬೇಕು.

ಜೊತೆಗೆ ಇದರ ಬೀಜವನ್ನು ಕೂಡ ಪ್ರತ್ಯೇಕವಾಗಿ ಒಣಗಿಸಬೇಕು. ರಾಮಪತ್ರೆ ಹೂವಿನ ಸದ್ಯದ ಮಾರುಕಟ್ಟೆ ಬೆಲೆ ಸಾವಿರಕ್ಕೂ ಹೆಚ್ಚು. ರಾಮ ಪತ್ರೆಯ ಹೂಗಳನ್ನು ಪೈಂಟ್ ಹಾಗೂ ಡೈ ತಯಾರಿಕೆಯಲ್ಲಿ ಬಳಸುತ್ತಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಯಾವುದೇ ಸಂಶೋಧನೆಯನ್ನು ಕೈಗೊಳ್ಳದೇ ಇರುವುದು ವಿಪರ್ಯಾಸ ಎಂದು ಪದ್ಮನಾಭ ನಾಯ್ಕ ಬೇಸರ ವ್ಯಕ್ತಪಡಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X