Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೀಸಲಾತಿ, ನ್ಯಾಯಾಲಯ ಮತ್ತು ಸರಕಾರದ ಹೊಣೆ

ಮೀಸಲಾತಿ, ನ್ಯಾಯಾಲಯ ಮತ್ತು ಸರಕಾರದ ಹೊಣೆ

ಜಿ. ನಾಗರಾಜು ಗಾಣದಹುಣಸೆಜಿ. ನಾಗರಾಜು ಗಾಣದಹುಣಸೆ28 July 2026 11:51 AM IST
share
ಮೀಸಲಾತಿ, ನ್ಯಾಯಾಲಯ ಮತ್ತು ಸರಕಾರದ ಹೊಣೆ
ನ್ಯಾಯಾಲಯದ ತಡೆ, ನೇಮಕಾತಿ ಪ್ರಕ್ರಿಯೆ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯ ನಡುವೆ ಸರಕಾರದ ಪರೀಕ್ಷೆ

ಭಾರತದ ಸಂವಿಧಾನವು ದೇಶಕ್ಕೆ ಕೇವಲ ರಾಜಕೀಯ ಪ್ರಜಾಪ್ರಭುತ್ವವನ್ನಷ್ಟೇ ನೀಡಿಲ್ಲ; ಸಾಮಾಜಿಕ ನ್ಯಾಯವನ್ನು ರಾಷ್ಟ್ರದ ಮೂಲ ಮೌಲ್ಯವಾಗಿ ಪ್ರತಿಷ್ಠಾಪಿಸಿದೆ. ಸಮಾನತೆಯ ತತ್ವವನ್ನು ಕೇವಲ ಘೋಷಣೆಯಾಗಿ ಉಳಿಸದೆ, ಅದನ್ನು ಅನುಷ್ಠಾನಗೊಳಿಸುವ ಸಾಧನವಾಗಿ ಮೀಸಲಾತಿ ವ್ಯವಸ್ಥೆಯನ್ನು ರೂಪಿಸಿದೆ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಯಾವುದೇ ಸರಕಾರದ ಅನುಗ್ರಹವಲ್ಲ; ಅದು ಸಂವಿಧಾನ ವಿಧಿಸಿರುವ ಕರ್ತವ್ಯ.

ಕರ್ನಾಟಕದಲ್ಲಿ ಪ.ಜಾ. ಮತ್ತು ಪ.ಪಂ. ಸಮುದಾಯಗಳ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕೆಂಬ ಬೇಡಿಕೆ ಹಲವು ದಶಕಗಳ ಹೋರಾಟದ ಫಲವಾಗಿತ್ತು. ಆ ಹೋರಾಟಕ್ಕೆ ಸ್ಪಂದಿಸಿದ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು 2022ರಲ್ಲಿ ಪ.ಜಾ. ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಮತ್ತು ಪ.ಪಂ. ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿತು. ಈ ಕ್ರಮವನ್ನು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಐತಿಹಾಸಿಕ ಹೆಜ್ಜೆ ಎಂದು ಪರಿಗಣಿಸಲಾಯಿತು.

ಆದರೆ ಈ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ಮೀಸಲಾತಿ ಹೆಚ್ಚಳದ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿದೆ. ಸರಕಾರವೂ ಆ ತಡೆಯಾಜ್ಞೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದು, ಅಂತಿಮ ತೀರ್ಪಿನ ನಿರೀಕ್ಷೆಯಲ್ಲಿದೆ. ಹೀಗಾಗಿ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದರೂ, ಈ ಮಧ್ಯೆ ಸರಕಾರದ ಪ್ರತಿಯೊಂದು ಆಡಳಿತಾತ್ಮಕ ಕ್ರಮವೂ ಸಂವಿಧಾನದ ಆಶಯ ಮತ್ತು ನ್ಯಾಯಾಂಗದ ನಿರ್ದೇಶನಗಳಿಗೆ ಅನುಗುಣವಾಗಿರಬೇಕು.

ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 72 ಸಾವಿರಕ್ಕೂ ಅಧಿಕ ಸರಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಉದ್ಯೋಗಕ್ಕಾಗಿ ವರ್ಷಗಳ ಕಾಲ ಸಿದ್ಧತೆ ನಡೆಸಿದ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಆಶಾಕಿರಣವಾಗಬೇಕಿತ್ತು. ಆದರೆ ಈಗ ಅದೇ ನೇಮಕಾತಿ ಪ್ರಕ್ರಿಯೆ ಸಾಮಾಜಿಕ ನ್ಯಾಯದ ಅನುಷ್ಠಾನದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿರುವುದು ಆತಂಕಕಾರಿ.

ಲಭ್ಯ ಮಾಹಿತಿಯ ಪ್ರಕಾರ, ಹೈಕೋರ್ಟ್‌ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಹೆಚ್ಚುವರಿ ಶೇ. 2 ಪ.ಜಾ. ಮತ್ತು ಶೇ. 4 ಪ.ಪಂ.ಗಳ ಒಟ್ಟು ಶೇ. 6 ಹುದ್ದೆಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಿ, ಉಳಿದ ಶೇ. 94 ಹುದ್ದೆಗಳ ನೇಮಕಾತಿಯನ್ನು ಮಾತ್ರ ಮುಂದುವರಿಸಬಹುದೆಂಬ ವ್ಯಾಖ್ಯಾನವಿದೆ. ಆದರೆ ಕೆಲವು ಇಲಾಖೆಗಳು ಈ ಶೇ. 6 ಹುದ್ದೆಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸದೆ ಅಧಿಸೂಚನೆಗಳನ್ನು ಹೊರಡಿಸಿರುವುದಾಗಿ ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳು ನಿಜವೇ? ಅಥವಾ ನ್ಯಾಯಾಲಯದ ಆದೇಶದ ವ್ಯಾಖ್ಯಾನದಲ್ಲಿಯೇ ಭಿನ್ನಾಭಿಪ್ರಾಯವಿದೆಯೇ? ಈ ಗೊಂದಲಕ್ಕೆ ತೆರೆ ಎಳೆಯಬೇಕಿರುವುದು ಸರಕಾರವೇ ಆಗಿದೆ.

ನ್ಯಾಯಾಲಯದ ಆದೇಶಗಳನ್ನು ಪಾಲಿಸುವುದು ಸರಕಾರದ ಇಚ್ಛೆಯ ವಿಷಯವಲ್ಲ; ಅದು ಸಂವಿಧಾನಾತ್ಮಕ ಹೊಣೆಗಾರಿಕೆ. ನ್ಯಾಯಾಂಗದ ನಿರ್ದೇಶನಗಳ ಅನುಷ್ಠಾನದ ಬಗ್ಗೆ ಗೊಂದಲ ಉಂಟಾಗುವ ರೀತಿಯಲ್ಲಿ ಆಡಳಿತಾತ್ಮಕ ಕ್ರಮಗಳು ನಡೆದರೆ, ಅದರ ಪರಿಣಾಮ ಕೇವಲ ಒಂದು ನೇಮಕಾತಿ ಪ್ರಕ್ರಿಯೆಗೆ ಸೀಮಿತವಾಗುವುದಿಲ್ಲ. ಅದು ಸರಕಾರದ ವಿಶ್ವಾಸಾರ್ಹತೆ ಹಾಗೂ ಆಡಳಿತದ ಪಾರದರ್ಶಕತೆಯ ಮೇಲೆಯೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಈ ವಿವಾದದ ಮತ್ತೊಂದು ಮಹತ್ವದ ಅಂಶ ರಾಜಕೀಯ ಮೌನ. ಈ ವಿಷಯವನ್ನು ಉಗ್ರಪ್ಪ ಅವರು ಹಲವು ಜಿಲ್ಲೆಗಳಲ್ಲಿ ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಅನೇಕ ಪ.ಜಾ. ಹಾಗೂ ಪ.ಪಂ.ಗಳ ಜನಪ್ರತಿನಿಧಿಗಳು ಈ ವಿಷಯದಲ್ಲಿ ಬಹಿರಂಗವಾಗಿ ಧ್ವನಿಯೆತ್ತದಿರುವುದು ಗಮನಾರ್ಹ. ಹಕ್ಕುಗಳ ಪ್ರಶ್ನೆಯಲ್ಲಿ ಜನಪ್ರತಿನಿಧಿಗಳ ಮೌನ ಸಮಾಜದಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತದೆ.

ಮೌನವೂ ರಾಜಕೀಯದ ಒಂದು ರೂಪವೇ. ಕೆಲವೊಮ್ಮೆ ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಹೆಚ್ಚು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಅಧಿಕಾರದ ಅನುಕೂಲಕ್ಕಾಗಿ ಮೌನವಾಗಿರುವುದಕ್ಕೂ, ಸಂವಿಧಾನದ ಮೌಲ್ಯಗಳ ಪರವಾಗಿ ನಿಲ್ಲುವುದಕ್ಕೂ ನಡುವೆ ಆಯ್ಕೆ ಮಾಡಬೇಕಾದಾಗ, ಜನಪ್ರತಿನಿಧಿಗಳು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿಯೆತ್ತುವುದು ಅವರ ನೈತಿಕ ಜವಾಬ್ದಾರಿಯಾಗಿದೆ.

ಮೀಸಲಾತಿ ಎಂದರೆ ಕೇವಲ ಉದ್ಯೋಗದಲ್ಲಿ ಶೇಕಡಾವಾರು ಪಾಲು ಅಲ್ಲ. ಅದು ಐತಿಹಾಸಿಕವಾಗಿ ವಂಚಿತ ಸಮುದಾಯಗಳಿಗೆ ಸಂವಿಧಾನ ನೀಡಿರುವ ನ್ಯಾಯದ ಭರವಸೆ. ಅದು ಲಕ್ಷಾಂತರ ಕುಟುಂಬಗಳ ಆತ್ಮಗೌರವ, ಅವಕಾಶ ಮತ್ತು ಭವಿಷ್ಯದೊಂದಿಗೆ ಸಂಬಂಧ ಹೊಂದಿರುವ ಪ್ರಶ್ನೆ. ಆದ್ದರಿಂದ ಮೀಸಲಾತಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವೂ ಸಂಪೂರ್ಣ ಪಾರದರ್ಶಕವಾಗಿರಬೇಕು.

ಒಂದೆಡೆ ಮೀಸಲಾತಿ ಹೆಚ್ಚಳವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಸರಕಾರ, ಮತ್ತೊಂದೆಡೆ ನೇಮಕಾತಿ ಪ್ರಕ್ರಿಯೆಯಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದರೆ ಅನುಮಾನಗಳಿಗೆ ಅವಕಾಶ ಸಿಗುವುದು ಸಹಜ. ಆ ಅನುಮಾನಗಳನ್ನು ನಿವಾರಿಸುವ ಜವಾಬ್ದಾರಿಯೂ ಸರಕಾರದ್ದೇ.

ಇಂದು ಎದ್ದಿರುವ ಪ್ರಶ್ನೆ ಕೇವಲ ಶೇ. 6 ಹುದ್ದೆಗಳ ಕುರಿತಲ್ಲ. ಅದು ಸಂವಿಧಾನದ ಮೇಲಿನ ನಂಬಿಕೆಯ ಪ್ರಶ್ನೆ. ನ್ಯಾಯಾಂಗದ ಆದೇಶಗಳ ಗೌರವದ ಪ್ರಶ್ನೆ. ಸಾಮಾಜಿಕ ನ್ಯಾಯದ ವಿಶ್ವಾಸಾರ್ಹತೆಯ ಪ್ರಶ್ನೆ.

ಸಾಮಾಜಿಕ ನ್ಯಾಯಕ್ಕೆ ಆಗುವ ಪ್ರತಿಯೊಂದು ವಿಳಂಬವೂ ಲಕ್ಷಾಂತರ ಯುವಕರ ಭವಿಷ್ಯವನ್ನು ಹಿಂದೆ ತಳ್ಳುತ್ತದೆ. ನ್ಯಾಯಾಂಗದ ಆದೇಶಗಳ ಅನುಷ್ಠಾನದ ಬಗ್ಗೆ ಮೂಡುವ ಪ್ರತಿಯೊಂದು ಅನುಮಾನವೂ ಪ್ರಜಾಪ್ರಭುತ್ವದ ಮೇಲಿನ ಜನರ ವಿಶ್ವಾಸವನ್ನು ಕುಂದಿಸುತ್ತದೆ. ಆದ್ದರಿಂದ ಸರಕಾರವು ಸಂಪೂರ್ಣ ಪಾರದರ್ಶಕತೆಯಿಂದ ತನ್ನ ನಿಲುವನ್ನು ಸ್ಪಷ್ಟಪಡಿಸಿ, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು.

ಅಧಿಕಾರಗಳು ಶಾಶ್ವತವಲ್ಲ. ಸರಕಾರಗಳು ಬದಲಾಗುತ್ತವೆ. ಆದರೆ ಸಂವಿಧಾನದ ಮೌಲ್ಯಗಳು ಶಾಶ್ವತವಾಗಿರಬೇಕು. ಸಾಮಾಜಿಕ ನ್ಯಾಯದ ಬದ್ಧತೆ ಯಾವುದೇ ರಾಜಕೀಯ ಬದಲಾವಣೆಯೊಂದಿಗೆ ಬದಲಾಗಬಾರದು. ಏಕೆಂದರೆ ಪ್ರಜಾಪ್ರಭುತ್ವದ ನಿಜವಾದ ಗೆಲುವು ಚುನಾವಣಾ ಫಲಿತಾಂಶಗಳಲ್ಲಿ ಅಲ್ಲ; ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ, ಅವಕಾಶ ಮತ್ತು ಗೌರವ ದೊರೆಯುವ ವ್ಯವಸ್ಥೆಯನ್ನು ನಿರ್ಮಿಸುವಲ್ಲಿದೆ.

Tags

ReservationCourtresponsibilityGovernment
share
ಜಿ. ನಾಗರಾಜು ಗಾಣದಹುಣಸೆ
ಜಿ. ನಾಗರಾಜು ಗಾಣದಹುಣಸೆ
Next Story
X