Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೇಂದ್ರ-ರಾಜ್ಯ ಸಂಬಂಧ: ಮರು ಚಿಂತನೆ...

ಕೇಂದ್ರ-ರಾಜ್ಯ ಸಂಬಂಧ: ಮರು ಚಿಂತನೆ ಅಗತ್ಯ

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ30 Jan 2026 11:02 AM IST
share
ಕೇಂದ್ರ-ರಾಜ್ಯ ಸಂಬಂಧ: ಮರು ಚಿಂತನೆ ಅಗತ್ಯ

ರಾಜ್ಯಪಾಲರ ಹುದ್ದೆ ಹಾಗೂ ಅಧಿಕಾರ ಕುರಿತು ಸಂವಿಧಾನ ರಚನಾ ಸಮಿತಿ ಸಭೆಯಲ್ಲೇ ಸಾಕಷ್ಟು ಚರ್ಚೆ ಆಗಿತ್ತು. ರಾಜ್ಯಪಾಲರಿಗೆ ವಿವೇಚನಾಧಿಕಾರ ಕೊಡುವುದರ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಕೆಲವು ಸದಸ್ಯರು ವಾದಿಸಿದ್ದರು. ‘ರಾಜ್ಯಪಾಲರ ಹುದ್ದೆ ಆಲಂಕಾರಿಕ. ಸಚಿವ ಸಂಪುಟದ ಸಲಹೆಯ ಮೇಲೆ ಅವರು ಕರ್ತವ್ಯ ನಿರ್ವಹಿಸುತ್ತಾರೆ. ಅವರ ವಿವೇಚನಾಧಿಕಾರ ಸೀಮಿತವಾಗಿರುತ್ತದೆ’ ಎಂದು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮನವರಿಕೆ ಮಾಡಿದ್ದರು. ಆ ಸಮಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ ಈಗ ಇಷ್ಟೊಂದು ಕಷ್ಟಪಡುವ ಅಗತ್ಯವಿರಲಿಲ್ಲ.

ರಾಜ್ಯ ಸರಕಾರ- ರಾಜ್ಯಪಾಲರ ನಡುವಣ ಸಂಘರ್ಷ ಅತಿರೇಕಕ್ಕೆ ತಲುಪಿದೆ. ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿಕೊಂಡು ರಾಜ್ಯ ಸರಕಾರಗಳನ್ನು ವಜಾ ಮಾಡುತ್ತಿದ್ದ ಕೇಂದ್ರದ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ಬಳಿಕ ರಾಜ್ಯಗಳ ಮೇಲೆ ಸವಾರಿ ಮಾಡಲು ಹೊಸ ಮಾರ್ಗ ಹಿಡಿಯಲಾಗಿದೆ. ಇತ್ತೀಚೆಗೆ ಕರ್ನಾಟಕ, ಕೇರಳ, ತಮಿಳುನಾಡು ಶಾಸನ ಸಭೆಗಳಲ್ಲಿ ನಡೆದ ರಾಜ್ಯಪಾಲರ ‘ಹೈ ಡ್ರಾಮಾ’ ಇದಕ್ಕೊಂದು ಉದಾಹರಣೆ.

‘ರಾಜಭವನ ರಾಜಕೀಯ ಪುನರ್ವಸತಿ ಕೇಂದ್ರ’

ಸಾಮಾನ್ಯವಾಗಿ ಪ್ರಮುಖ ರಾಜಕೀಯ ಹುದ್ದೆಗಳು ಕೈತಪ್ಪುವ ಪಕ್ಷದ ನಾಯಕರಿಗೆ ರಾಜ್ಯಪಾಲರ ಹುದ್ದೆಗೆ ನೇಮಿಸ ಲಾಗುತ್ತದೆ. ಇದೊಂದು ಆಲಂಕಾರಿಕ ಹುದ್ದೆಯಾದರೂ, ರಾಜಕೀಯ ನೇಮಕವಾಗಿರುವುದರಿಂದ ‘ರಾಜಕೀಯ ಚದುರಂಗದಾಟ’ಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೇಂದ್ರ ರಾಜ್ಯಪಾಲರಿಗೆ ಬಗ್ಗಲು ಹೇಳಿದರೆ, ತೆವಳುತ್ತಾರೆ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಪಾಲರೂ ಮಾಡಿದ್ದು ಇದನ್ನೇ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಬದಲು ಎನ್‌ಡಿಎ ಸರಕಾರ ಜಾರಿಗೊಳಿಸಿರುವ ‘ವಿಬಿ- ಜಿ ರಾಮ್ ಜಿ’ಯನ್ನು ವಿರೋಧಿಸುತ್ತಿರುವ ರಾಜ್ಯ ಸರಕಾರಗಳಿಗೆ ಬೆಂಬಲವಾಗಿ ನಿಲ್ಲದೆ ಪಲಾಯನ ಮಾಡಿದ್ದಾರೆ.

ಕೇಂದ್ರ ಸರಕಾರವನ್ನು ಓಲೈಸಲು ಮೂವರು ರಾಜ್ಯಪಾಲರು ಮೂರು ದಾರಿ ಹಿಡಿದರು. ರಾಜ್ಯಗಳಿಗೆ ಸೆಡ್ಡು ಹೊಡೆದು, ಸಂವಿಧಾನಕ್ಕೆ ಅಪಚಾರ ಎಸಗಿದರು. ಕರ್ನಾಟಕದ ಕಾಂಗ್ರೆಸ್ ಸರಕಾರ ಸಿದ್ಧಪಡಿಸಿದ್ದ ಭಾಷಣದ ಒಂದೆರಡು ವಾಕ್ಯವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಓದಿದರು. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಆರ್ಲೇಕರ್ ಕೆಲ ಆಯ್ದ ಭಾಗಗಳನ್ನು ಓದಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಭಾಷಣ ಓದದೆ ಹಿಂದಿರುಗಿದರು.

ಹೊಸ ಶಿಕ್ಷಣ ನೀತಿ ಭಾಗವಾಗಿರುವ ‘ಪಿಎಂಶ್ರೀ’ ಯೋಜನೆಯನ್ನು ಕೇರಳ ಜಾರಿಗೊಳಿಸಿಲ್ಲ. ಈ ಕಾರಣಕ್ಕೆ ಕೇಂದ್ರ ಸರಕಾರ ವಿವಿಧ ಶೈಕ್ಷಣಿಕ ಯೋಜನೆಯಡಿ ಸುಮಾರು ಎರಡು ಸಾವಿರ ಕೋಟಿ ರೂ. ಅನುದಾನ ತಡೆಹಿಡಿದಿರುವುದನ್ನು ಎಲ್‌ಡಿಎಫ್ ಸರಕಾರ ಖಂಡಿಸಿದೆ. ಮನರೇಗಾ ಹೆಸರು ಮತ್ತು ಸ್ವರೂಪ ಬದಲಾಯಿಸಿ, ‘ವಿಬಿ- ಜಿ ರಾಮ್ ಜಿ’ ಜಾರಿಗೊಳಿಸಿದ್ದನ್ನು ಸಿದ್ದರಾಮಯ್ಯ ಸರಕಾರ ವಿರೋಧಿಸಿದೆ.

ತಮಿಳುನಾಡು ಸರಕಾರ ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟಕ್ಕೆ ಕೊನೆ ಇಲ್ಲವಾಗಿದೆ. ರಾಜ್ಯಪಾಲರು ಶಾಸನ ಸಭೆಯಲ್ಲಿ ಭಾಷಣ ಮಾಡದಿರುವುದು ಮೂರನೇ ಸಲ. ಡಿಎಂಕೆ ಸರಕಾರಕ್ಕೆ ಕಾಟ ಕೊಡುವುದಕ್ಕಾಗಿಯೇ ರವಿ ಅವರನ್ನು ತಮಿಳುನಾಡಿಗೆ ಕಳಿಸಿದಂತಿದೆ ಈ ಮೊದಲು ಶಾಸನಸಭೆ ಅಂಗೀಕರಿಸಿದ್ದ 10 ಮಸೂದೆಗಳಿಗೆ ರವಿ ಅಂಕಿತ ಹಾಕದೆ ತಡೆ ಹಿಡಿದಿದ್ದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಸುಪ್ರೀಂ ಕೋರ್ಟ್, ಮಸೂದೆ ತಡೆಹಿಡಿದ ರಾಜ್ಯಪಾಲರ ಕ್ರಮವನ್ನು ಆಕ್ಷೇಪಿಸಿತು. ‘ಇದು ಕಾನೂನುಬಾಹಿರ, ದೋಷ ಪೂರಿತ’. ನಿರ್ದಿಷ್ಟ ಅವಧಿಯೊಳಗೆ ರಾಜ್ಯಪಾಲರು ಕ್ರಮ ಕೈಗೊಳ್ಳದಿದ್ದರೆ, ‘ಪರಿಭಾವಿತ ಸಮ್ಮತಿ ದೊರೆತಿದೆ’ ಎಂದು ಪರಿಗಣಿಸಬಹುದು ಎಂಬ ತೀರ್ಪು ನೀಡಿತು. ಅಲ್ಲದೆ, ರಾಜ್ಯಪಾಲರ ಕ್ರಮಕ್ಕೆ ಕಾಲಮಿತಿ ನಿಗದಿಪಡಿಸಿತು. ಈ ತೀರ್ಪನ್ನು ಕೋರ್ಟ್ ಬಳಿಕ ಪರಾಮರ್ಶೆಗೆ ಒಳಪಡಿಸಿತ್ತು.

ಇನ್ನು ರಾಜ್ಯಪಾಲರ ಭಾಷಣದ ವಿಷಯಕ್ಕೆ ಮರಳಿದರೆ, ಸಂವಿಧಾನದ 163ನೇ ಕಲಂ ಅನ್ವಯ, ರಾಜ್ಯ ಸರಕಾರದ (ಸಚಿವ ಸಂಪುಟ) ಸಲಹೆ ಅಂತಿಮ. ರಾಜ್ಯಪಾಲರ ಒಲವು- ನಿಲುವುಗಳಿಗೆ ಅವಕಾಶವಿಲ್ಲ. 176ನೇ ಕಲಂನಲ್ಲಿ ಹೇಳಿರುವಂತೆ, ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯ ಸರಕಾರ ಅನುಮೋದಿಸಿದ ಭಾಷಣವನ್ನೇ ರಾಜ್ಯಪಾಲರು ಓದಬೇಕು. ಭಾಷಣದಲ್ಲಿರುವ ಎಲ್ಲ ಅಂಶಗಳನ್ನು ಪ್ರಸ್ತಾಪಿಸಬೇಕು. ಸಣ್ಣಪುಟ್ಟ ಬದಲಾವಣೆಗೂ ರಾಜ್ಯಪಾಲರಿಗೆ ಅಧಿಕಾರವಿಲ್ಲ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಪಾಲರು ಶಾಸನಸಭೆಯಲ್ಲಿ ನಡೆದುಕೊಂಡ ರೀತಿ ವಿಭಿನ್ನವಾದರೂ ಉದ್ದೇಶ ಮಾತ್ರ ಒಂದೇ. ಬಿಜೆಪಿಯೇತರ ಸರಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆ ವಿಮರ್ಶಾರ್ಹ. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರಿ ಮುಂದಿನ ಕ್ರಮ ಕುರಿತು ಚರ್ಚಿಸಬೇಕು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯಪಾಲರ ನಡೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ರಾಜ್ಯಪಾಲರ ಭಾಷಣ ರದ್ದುಪಡಿಸಲು ಸಂವಿಧಾನ ತಿದ್ದುಪಡಿ ತರುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರಲ್ಲಿ ನಡೆದ ಸಮಾಜವಾದಿಗಳ ಸಮಾವೇಶದಲ್ಲಿ, ಕೇಂದ್ರದ ಅನುದಾನ ಹಂಚಿಕೆ ಬಗ್ಗೆ ಚರ್ಚಿಸಲು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಜೆಪಿಯೇತರ ರಾಜ್ಯಗಳು ಒಟ್ಟಾಗಿ ಕಾನೂನು- ರಾಜಕೀಯ ಹೋರಾಟ ನಡೆಸಿದರೆ ಬೇಡಿಕೆಗೂ ಬಲ ಬರಲಿದೆ.

‘ರಾಜ್ಯಪಾಲರ ಜತೆ ರಾಜ್ಯ ಸರಕಾರ ಸಂಘರ್ಷಕ್ಕೆ ಇಳಿಯುವ ಅಗತ್ಯವಿತ್ತೇ?’ ಎಂಬ ಪ್ರಶ್ನೆ ಎದ್ದಿದೆ. ‘ಸರಕಾರದ ಜತೆ ಗೆಹ್ಲೋಟ್ ಹೊಂದಾಣಿಕೆಯಿಂದ ನಡೆಯುತ್ತಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಹೊರತುಪಡಿಸಿದರೆ, ಈವರೆಗೆ ಗಂಭೀರ ಸಮಸ್ಯೆಯೇನೂ ಇರಲಿಲ್ಲ. ಈಗ ವಿಬಿ-ಜಿ ರಾಮ್ ಜಿ ವಿಷಯದಲ್ಲಿ ಸಂಘರ್ಷ ನಡೆದಿದೆ. ರಾಜ್ಯ ಸರಕಾರ ಕೇಂದ್ರದ ಯೋಜನೆಯನ್ನು ಸೂಕ್ಷ್ಮವಾಗಿ ಟೀಕಿಸಬಹುದಿತ್ತು. ವಿವರವಾಗಿ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ’ ಎಂಬ ವಾದವೂ ಇದೆ. ಕಾಂಗ್ರೆಸ್ ಸರಕಾರಕ್ಕೆ ರಾಜ್ಯಪಾಲರ ಜತೆಗಿರುವುದು ವೈಯಕ್ತಿಕ ಜಗಳವಲ್ಲ. ತಾತ್ವಿಕ ಸಂಘರ್ಷ. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ವೈಯಕ್ತಿಕ ಜಗಳವಿದ್ದರೆ ಲಘುವಾಗಿ ನೋಡಬಹುದಿತ್ತು.

ವಿಬಿ-ಜಿ ರಾಮ್ ಜಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವುದರಿಂದ ರಾಜ್ಯ ಸರಕಾರ ಉಳಿದ ಬಿಜೆಪಿಯೇತರ ರಾಜ್ಯಗಳಿಗಿಂತ ಕಠಿಣ ನಿಲುವು ತಳೆಯಬೇಕು. ವಿಧಾನಮಂಡಲದಲ್ಲಿ ಕೇಂದ್ರದ ಯೋಜನೆ ವಿರೋಧಿಸುವ ನಿರ್ಣಯ ಕೈಗೊಳ್ಳಬಹುದು. ಮನರೇಗಾ ಮರು ಜಾರಿಗೆ ಒತ್ತಾಯಿಸಬಹುದು. ಆದರೆ, ರಾಜ್ಯಪಾಲರನ್ನು ವಾಪಸ್ ಕರೆಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಕೈಗೊಳ್ಳುವುದೇ? ರಾಜ್ಯಪಾಲರ ಹುದ್ದೆಯನ್ನೇ ತೆಗೆಯಬೇಕೆಂದು ಸಿಪಿಐ, ಸಿಪಿಎಂ ಮತ್ತಿತರ ಎಡ ಪಕ್ಷಗಳು ಒತ್ತಾಯಿಸುತ್ತಿವೆ. ಈ ಕೂಗಿಗೆ ಕಾಂಗ್ರೆಸ್ ದನಿಗೂಡಿಸುವುದೇ?

ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿ, ಅತೀ ಹೆಚ್ಚು ರಾಜ್ಯ ಸರಕಾರಗಳನ್ನು ವಜಾ ಮಾಡಿದ ದಾಖಲೆ ಕಾಂಗ್ರೆಸ್ ಹೆಸರಲ್ಲಿದೆ. ಕೇರಳದ ಇಎಂಎಸ್ ನಂಬೂದರಿಪಾಡ್ ನೇತೃತ್ವದ ಎಡರಂಗದ ಸರಕಾರ 1959ರಲ್ಲಿ ವಜಾ ಆಯಿತು. ಆಗ ಜವಾಹರಲಾಲ್ ನೆಹರೂ ಪ್ರಧಾನಿ. ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು 1952ರಲ್ಲಿ. 1957ರಲ್ಲಿ ಎರಡನೇ ಚುನಾವಣೆ. ಮೊತ್ತಮೊದಲ ಚುನಾಯಿತ ಸರಕಾರ ವಜಾಗೊಂಡಾಗ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆ ಬೆಳವಣಿಗೆ ಆಗುತ್ತಿತ್ತು. ಆಗಲೇ ಎಲ್‌ಡಿಎಫ್ ಸರಕಾರ ಅಧಿಕಾರ ಕಳೆದುಕೊಂಡಿದ್ದು. ನೆಹರೂ ಅವರೇ ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿದ್ದರೆಂದರೆ, ಬೇರೆಯವರು ಇನ್ನೆಷ್ಟು ದುರ್ಬಳಕೆ ಮಾಡಿರಬಹುದು? ಇಂದಿರಾಗಾಂಧಿ ರಾಜ್ಯ ಸರಕಾರಗಳನ್ನು ಯದ್ವಾತದ್ವಾ ವಜಾ ಮಾಡಿದ್ದರು.

1994ರಲ್ಲಿ ಎಸ್.ಆರ್. ಬೊಮ್ಮಾಯಿ ವರ್ಸಸ್ ಕೇಂದ್ರ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ರಾಜ್ಯ ಸರಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂವಿಧಾನದ 356ನೇ ಕಲಮಿನ ಪ್ರಾಮುಖ್ಯತೆ, ಇತಿಮಿತಿಗಳನ್ನು ಕುರಿತು ವ್ಯಾಖ್ಯಾನಿಸಿತು. ರಾಜ್ಯ ಸರಕಾರಗಳನ್ನು ವಜಾ ಮಾಡುವುದು ರಾಷ್ಟ್ರಪತಿಗಳ (ಕೇಂದ್ರ ಸರಕಾರ) ಪರಮಾಧಿಕಾರ ಅಲ್ಲ. ವಿರಳಾತಿವಿರಳವಾಗಿ ಕಲಂ 356 ಬಳಸಬೇಕು ಎಂದು ಹೇಳಿತು. 356ನೇ ಕಲಮಿನ ಅನ್ವಯಕ್ಕೆ ಮಾರ್ಗಸೂಚಿ ನೀಡಿತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಸಲ ಈ ಅಧಿಕಾರ ಬಳಸಲಾಗಿದೆ. ಈಗ ಬಿಜೆಪಿಯೇತರ ಸರಕಾರಗಳಿಗೆ ಕಿರುಕುಳ ಕೊಡಲು ಬೇರೆ ದಾರಿಗಳನ್ನು ಕಂಡುಕೊಳ್ಳಲಾಗುತ್ತಿದೆ. ಶಾಸನಸಭೆಯಲ್ಲಿ ರಾಜ್ಯಪಾಲರ ಭಾಷಣ ಇದರಲ್ಲಿ ಒಂದು. ಅನುದಾನ ಹಂಚಿಕೆ ಇನ್ನೊಂದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ರಾಜ್ಯಪಾಲರ ಹುದ್ದೆ ಹಾಗೂ ಅಧಿಕಾರ ಕುರಿತು ಸಂವಿಧಾನ ರಚನಾ ಸಮಿತಿ ಸಭೆಯಲ್ಲೇ ಸಾಕಷ್ಟು ಚರ್ಚೆ ಆಗಿತ್ತು. ರಾಜ್ಯಪಾಲರಿಗೆ ವಿವೇಚನಾಧಿಕಾರ ಕೊಡುವುದರ ಬಗ್ಗೆಯೂ ಆತಂಕ ವ್ಯಕ್ತವಾಗಿತ್ತು. ಈ ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಕೆಲವು ಸದಸ್ಯರು ವಾದಿಸಿದ್ದರು. ‘ರಾಜ್ಯಪಾಲರ ಹುದ್ದೆ ಆಲಂಕಾರಿಕ. ಸಚಿವ ಸಂಪುಟದ ಸಲಹೆಯ ಮೇಲೆ ಅವರು ಕರ್ತವ್ಯ ನಿರ್ವಹಿಸುತ್ತಾರೆ. ಅವರ ವಿವೇಚನಾಧಿಕಾರ ಸೀಮಿತವಾಗಿರುತ್ತದೆ’ ಎಂದು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮನವರಿಕೆ ಮಾಡಿದ್ದರು. ಆ ಸಮಯದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ ಈಗ ಇಷ್ಟೊಂದು ಕಷ್ಟಪಡುವ ಅಗತ್ಯವಿರಲಿಲ್ಲ.

ಕೇಂದ್ರ-ರಾಜ್ಯ ಸಂಬಂಧ ಕುರಿತು ಅಧ್ಯಯನ ನಡೆಸಿದ ನ್ಯಾ. ಸರ್ಕಾರಿಯಾ ಆಯೋಗ ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಕೇಂದ್ರ ಸರಕಾರಕ್ಕೆ ಕೊಟ್ಟಿದೆ. ಮುಖ್ಯಮಂತ್ರಿ ಜತೆ ಸಮಾಲೋಚಿಸಿ ರಾಜ್ಯಪಾಲರನ್ನು ನೇಮಿಸಬೇಕು. ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಅಂದರೆ, ಸರಕಾರ ಬಹುಮತ ಕಳೆದುಕೊಂಡಾಗ ಸಂವಿಧಾನದ 356ನೇ ವಿಧಿ ಪ್ರಯೋಗ ಮಾಡಬೇಕು. ರಾಜ್ಯಪಾಲರಿಗೆ ಐದು ವರ್ಷದ ಅವಧಿ ನಿಗದಿಪಡಿಸಬೇಕು. ದುರ್ನಡತೆ ಕಂಡುಬಂದಾಗ ಮಾತ್ರ ರಾಜ್ಯಪಾಲರನ್ನು ವಜಾ ಮಾಡಬೇಕು. ಸುಸ್ಥಿರ ಅಭಿವೃದ್ಧಿಗಾಗಿ ರಾಜ್ಯಗಳಿಗೆ ಆರ್ಥಿಕ ಸ್ವಾಯತ್ತತೆ ಕೊಡಬೇಕು ಎಂದು ಶಿಫಾರಸು ಮಾಡಿದೆ. ಬಹುಶಃ ವರದಿ ಗೆದ್ದಲಿಗೆ ಆಹಾರವಾಗಿರಬಹುದು.

ಕೇಂದ್ರದ ಎನ್‌ಡಿಎ ಸರಕಾರ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ಕೇಂದ್ರ-ರಾಜ್ಯ ಸಂಬಂಧವನ್ನು ಹಾಳು ಮಾಡುತ್ತದೆ. ಒಕ್ಕೂಟ ವ್ಯವಸ್ಥೆಗೂ ಅಪಾಯ ತಂದೊಡ್ಡಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಚರ್ಚೆ ಆಗಬೇಕಿದೆ. ಬಿಜೆಪಿಯೇತರ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕಿದೆ. ಎನ್‌ಡಿಎ ಭಾಗವಾಗಿರುವ ಜೆಡಿಯು, ಟಿಡಿಪಿಗಳನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳಬೇಕಿದೆ.

Tags

Centre-State
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X