Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 4 ವರ್ಷಗಳಲ್ಲಿ 5.2 ಕೋಟಿ ರೂ. ಅನುದಾನ...

4 ವರ್ಷಗಳಲ್ಲಿ 5.2 ಕೋಟಿ ರೂ. ಅನುದಾನ ಸ್ಥಗಿತ: ಸಂಕಷ್ಟದ ಹಾದಿಯಲ್ಲಿ ‘ಜಾನಪದ ಲೋಕ’

ಯೋಗೇಶ್ ಮಲ್ಲೂರುಯೋಗೇಶ್ ಮಲ್ಲೂರು22 Nov 2025 12:54 PM IST
share
4 ವರ್ಷಗಳಲ್ಲಿ 5.2 ಕೋಟಿ ರೂ. ಅನುದಾನ ಸ್ಥಗಿತ: ಸಂಕಷ್ಟದ ಹಾದಿಯಲ್ಲಿ ‘ಜಾನಪದ ಲೋಕ’

ಬೆಂಗಳೂರು : ರಾಜ್ಯದ ಏಕೈಕ ಜಾನಪದ ಕಲೆಗಳ ಸಾಂಸ್ಕೃತಿಕ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯವಿರುವ ರಾಮನಗರದ ‘ಜಾನಪದ ಲೋಕ’ಕ್ಕೆ ರಾಜ್ಯ ಸರಕಾರ ಪ್ರತ್ಯೇಕ ಅನುದಾನದ ಅಡಿಯಲ್ಲಿ ಪ್ರತಿವರ್ಷ ನೀಡುತ್ತಿದ್ದ 1.30 ಕೋಟಿ ರೂ. ಸಿಬ್ಬಂದಿ ವೇತನವನ್ನು 4 ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದು, ಬಿಜೆಪಿ ಸರಕಾರ ಅವಧಿಯಿಂದ ಈವರೆಗೆ ಒಟ್ಟು 5.2 ಕೋಟಿ ರೂ.ಸಿಬ್ಬಂದಿ ಸಂಬಳವನ್ನು ತಡೆ ಹಿಡಿದಿರುವ ಕಾರಣ ಹಣಕಾಸಿನ ಬಲವಿಲ್ಲದೆ ‘ಜಾನಪದ ಲೋಕ’ ಸಂಕಷ್ಟದ ಹಾದಿಯಲ್ಲಿದೆ.

ಕರ್ನಾಟಕ ಜಾನಪದ ಪರಿಷತ್‌ನ ಅಂಗಸಂಸ್ಥೆಯಾಗಿರುವ ಜಾನಪದ ಲೋಕವು ರಾಮನಗರದಲ್ಲಿ 15 ಎಕರೆ ವ್ಯಾಪ್ತಿಯಲ್ಲಿದ್ದು, ಪ್ರಸ್ತುತ ಇಲ್ಲಿ 31 ಸಿಬ್ಬಂದಿಯಿದ್ದಾರೆ. ಅವರಲ್ಲಿ ಕೇವಲ ಒಬ್ಬರು ಮಾತ್ರ ಸರಕಾರದ ಅನುದಾನದ ಅಡಿ ಬರುತ್ತಾರೆ. ಉಳಿದ 30 ಸಿಬ್ಬಂದಿಗೆ ಸರಕಾರದ ವಾರ್ಷಿಕ ಅನುದಾನ ಹಾಗೂ ಜಾನಪದ ಲೋಕದ ಆದಾಯ ಬಳಸಿಕೊಂಡು ವೇತನ ಪಾವತಿಸಲಾಗುತ್ತಿದೆ.

ಸರಕಾರದ ಪ್ರತ್ಯೇಕ ಅನುದಾನ ಸ್ಥಗಿತದಿಂದಾಗಿ ಸಿಬ್ಬಂದಿಗೆ ಸಂಬಳ ಹೆಚ್ಚಳ ಮಾಡಲಾಗದ ಸ್ಥಿತಿಯಲಿದ್ದು, ಕಡಿಮೆ ಸಂಬಳಕ್ಕೆ ಅವರು ದುಡಿಯುತ್ತಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಮುನ್ನಡೆಯುತ್ತಿರುವ ಜಾನಪದ ಲೋಕದಲ್ಲಿ ಇದು ಹೀಗೆಯೇ ಮುಂದುವರಿದರೆ 32 ವರ್ಷಗಳಿಂದ ದುಡಿಯುತ್ತಿರುವ ಸಿಬ್ಬಂದಿಯ ಬದುಕು ಬೀದಿ ಪಾಲಾಗಲಿದೆ.

ಜಾನಪದ ಲೋಕದ ಪ್ರವೇಶ ಶುಲ್ಕ ಮತ್ತು ಹೋಟೆಲ್ ಬಾಡಿಗೆ ಮೊತ್ತದಲ್ಲೇ ಲೋಕೋತ್ಸವ, ಸಂಕ್ರಾಂತಿ ಉತ್ಸವ, ಲೋಕಸಿರಿ, ಕಲಾವಿದರ ಸಂಭಾವನೆ ಸೇರಿದಂತೆ ಲೋಕದ ಚಟುವಟಿಕೆಗಳು ಹಾಗೂ ನಿರ್ವಹಣೆಯನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಕೋವಿಡ್ ನಂತರದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದ್ದು, ಪ್ರವೇಶ ಶುಲ್ಕ ಸಂಗ್ರಹವೂ ಕುಸಿದಿದೆ. ಜಾನಪದ ಲೋಕಕ್ಕೆ ಬರಬೇಕಾದ ಹೋಟೆಲ್ ಬಾಡಿಗೆ, ಮಳಿಗೆಗಳ ಬಾಡಿಗೆಯಲ್ಲೂ ಕುಸಿತವಾಗಿದೆ. ಇದೆಲ್ಲವನ್ನೂ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಜಾನಪದ ಲೋಕ ಮುಚ್ಚುವ ಹಂತಕ್ಕೆ ಬಂದರೂ ಆಶ್ಚರ್ಯವಿಲ್ಲ ಎಂಬುದು ಇಲ್ಲಿನ ಸಿಬ್ಬಂದಿಯ ಆತಂಕವಾಗಿದೆ.

32 ವರ್ಷಗಳಿಂದಲೂ ಜಾನಪದ ಕಲೆ ಹಾಗೂ ಕಲಾವಿದರನ್ನು ಪೋಷಿಸಿಕೊಂಡು ಬರುತ್ತಿರುವ ಜಾನಪದ ಲೋಕವು ಶಾಶ್ವತ ಅನುದಾನಿತ ಸಂಸ್ಥೆಯಾಗಿದ್ದು, ಸರಕಾರದಿಂದ ಪ್ರತಿ ವರ್ಷ 1 ಕೋಟಿ ರೂ. ವಾರ್ಷಿಕ ಅನುದಾನ ಮಾತ್ರ ಬಿಡುಗಡೆಯಾಗುತ್ತದೆ. ಬಹುತೇಕ ಆ ಮೊತ್ತವು ಜಾನಪದ ಲೋಕದ ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾವಿದರ ಪ್ರೋತ್ಸಾಹ, ಪ್ರಶಸ್ತಿ, ಗೌರವಗಳಿಗೆ ವ್ಯಯವಾಗುತ್ತದೆ. ಲೋಕದ ಅಭಿವೃದ್ಧಿಗೆ ಹಣ ಉಳಿಯುವುದಿಲ್ಲ ಎಂದು ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ‘ವಾರ್ತಾಭಾರತಿ’ಯೊಂದಿಗೆ ಅಳಲು ತೋಡಿಕೊಂಡರು.

‘ವಿಶೇಷ ಅನುದಾನದಲ್ಲೂ 42 ಲಕ್ಷ ರೂ. ತಡೆ’: 2023ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ತನ್ನ ಮೊದಲ ಬಜೆಟ್‌ನಲ್ಲಿ ಜಾನಪದ ಲೋಕಕ್ಕೆ 2 ಕೋಟಿ ರೂ. ವಿಶೇಷ ಅನುದಾನ ಘೋಷಿಸಿ ಅದರಲ್ಲಿ ಕೇವಲ 1 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತ್ತು. ಬಾಕಿ 1 ಕೋಟಿ ರೂ. ಇದುವರೆಗೂ ಜಾನಪದ ಲೋಕವನ್ನು ತಲುಪಿಲ್ಲ. ಈ ನಡುವೆ ಪರಿಷತ್‌ನ ನಿಯೋಗವು ಮುಖ್ಯಮಂತ್ರಿಯ ಕಚೇರಿ, ಇಲಾಖಾ ಸಚಿವರ ಕಚೇರಿಗಳಿಗೆ ಬಾಕಿ ಹಣ ಬಿಡುಗಡೆಗಾಗಿ ಪತ್ರ ಹಿಡಿದುಕೊಂಡು ಹತ್ತಾರು ಬಾರಿ ಅಲೆದಾಡಿದರೂ ಅದರಲ್ಲೀಗ 58 ಲಕ್ಷ ರೂ. ಮಾತ್ರ ಮಂಜೂರಾಗಿದೆ. ಉಳಿದ 42 ಲಕ್ಷವನ್ನು ಏಕೆ ತಡೆಹಿಡಿದ್ದಾರೋ ಗೊತ್ತಿಲ್ಲ. ಮಂಜೂರಾದ ಹಣವೂ ಕೈಗೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹಿ.ಚಿ.ಬೋರಲಿಂಗಯ್ಯ.

‘ಕಾಂಪೌಂಡ್ ಇಲ್ಲದ ಲೋಕಕ್ಕೆ ಕೇಳುವರ್ಯಾರಿಲ್ಲ’: ಇಷ್ಟು ದೊಡ್ಡ ಸಂಸ್ಥೆಗೆ ಇದುವರೆಗೂ ಒಂದು ಕಾಂಪೌಂಡ್ ಇಲ್ಲದಿರುವುದು ಬೇಸರದ ವಿಚಾರ. ಹಿಂದಿನ ಸೆಪ್ಟಂಬರ್‌ನಲ್ಲಿ ಜಾನಪದ ಲೋಕದೊಳಗೆ ಯಾರೋ ಕಳ್ಳರು ನುಗ್ಗಿ ಕೆಲ ಉಪಯುಕ್ತ ವಸ್ತುಗಳನ್ನು ದೋಚಿದ್ದಾರೆ. ಅಲ್ಲದೆ, ಇಲ್ಲಿರುವುದು ಕೇವಲ ಇಬ್ಬರು ಭದ್ರತಾ ಸಿಬ್ಬಂದಿ ಮಾತ್ರ. ಇದನ್ನು ಕೇಳುವರ್ಯಾರಿಲ್ಲ. ಇತ್ತೀಚೆಗೆ ಲೋಕಕ್ಕೆ ಬಂದಿದ್ದ ಇಲಾಖೆಯ ಸಚಿವ ಶಿವರಾಜ್ ತಂಗಡಗಿಯವರು ನೆರವಾಗುವ ಭರವಸೆ ಕೊಟ್ಟಿದ್ದರು. ಬಳಿಕ ಕೊಪ್ಪಳದಲ್ಲೂ ಇಂಥಹ ಜಾನಪದ ಲೋಕ ಸ್ಥಾಪಿಸುವ ಘೋಷಣೆ ಮಾಡಿದ್ದರು. ಆದರೆ, ಅತ್ತ ಅದೂ ಆಗಲಿಲ್ಲ. ಇತ್ತ ನಮಗೂ ನೆರವು ಸಿಗಲಿಲ್ಲ ಎನ್ನುತ್ತಾರೆ ಹಿ.ಚಿ.ಬೋರಲಿಂಗಯ್ಯ.

‘1,400 ಗಂಟೆ ಕೇಳುವಷ್ಟು, 200 ಗಂಟೆ ನೋಡುವಷ್ಟು ದಾಖಲೆಗಳಿವೆ’: ಜಾನಪದ ಲೋಕದ ಸ್ಥಾಪಕ ನಾಡೋಜ ಎಚ್.ಎಲ್.ನಾಗೇಗೌಡರು ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನಪದರ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ದಾಖಲಿಸುವ ಕೆಲಸ ಮಾಡಿದ್ದಾರೆ. ಸದ್ಯ ನಮ್ಮಲ್ಲಿ 1,400 ಗಂಟೆ ಕೇಳುವಷ್ಟು ಆಡಿಯೋ, 200 ಗಂಟೆ ನೋಡುವಷ್ಟು ವೀಡಿಯೊ ಇದೆ. ಇದನ್ನೆಲ್ಲ ಅವತ್ತಿನ ಕಾಲಘಟ್ಟದ ತಂತ್ರಜ್ಞಾನದಲ್ಲಿ ಸಂಗ್ರಹಿಸಲಾಗಿದ್ದು, ಈಗ ಅವುಗಳನ್ನೆಲ್ಲ ಇವತ್ತಿನ ತಂತ್ರಜ್ಞಾನಕ್ಕೆ ಒಳಗೊಂಡು ಡಿಜಿಟಲೀಕರಣಗೊಳಿಸಬೇಕಾದ ಸವಾಲು ನಮ್ಮ ಮೇಲಿದೆ. ಇಲ್ಲದಿದ್ದರೆ ಅದೆಲ್ಲ ನಾಶವಾಗುತ್ತದೆ. ಡಿಜಿಟಲೀಕರಣ ಮಾಡಿದ್ದರೆ ಅದನ್ನು ಬೇರೆಡೆಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲಾ ಕನಿಷ್ಠ 5 ಕೋಟಿ ರೂ. ಹಣ ಬೇಕಾಗಬಹುದು ಎಂದು ವಿವರಿಸುತ್ತಾರೆ ಹಿ.ಚಿ.ಬೋರಲಿಂಗಯ್ಯ.

ದೇಶದ ಯಾವ ರಾಜ್ಯದಲ್ಲೂ ಜನಪದ ಲೋಕದಂತಹ ಸಂಸ್ಥೆ ಮತ್ತೊಂದಿಲ್ಲ. ಜನಪದರ ಇತಿಹಾಸ, ಕಲೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಈ ಸಂಸ್ಥೆಗೆ ಸರಕಾರ 1 ಕೋಟಿ ರೂ. ವಾರ್ಷಿಕ ಅನುದಾನದ ಜೊತೆಗೆ ಇಲ್ಲಿನ ಕಾರ್ಯಚಟುವಟಿಕೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ 2026ರ ಮಾರ್ಚ್ ತಿಂಗಳ ಬಜೆಟ್‌ನಲ್ಲಿ 5 ಕೋಟಿ ರೂ.ಬಿಡುಗಡೆ ಮಾಡುವಂತೆ ಜಾನಪದ ಲೋಕದಿಂದ ನಿಯೋಗ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡುತ್ತೇವೆ.

-ಪ್ರೊ.ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ

ಹಣಕಾಸಿನ ಕೊರತೆಗೆ ಜಿಲ್ಲಾ ಘಟಕಗಳು ಸ್ಥಗಿತ

ರಾಜ್ಯ ಎಲ್ಲ ಜಿಲ್ಲೆಗಳಲ್ಲೂ ಕರ್ನಾಟಕ ಜಾನಪದ ಪರಿಷತ್‌ನ ಶಾಖಾ ಘಟಕಗಳಿವೆ. ಇವುಗಳಿಗೆ ವಾರ್ಷಿಕ 1 ಲಕ್ಷ ರೂ. ಹಣವನ್ನು ರಾಜ್ಯ ಘಟಕದಿಂದಲೇ ನೀಡಲಾಗುತ್ತಿತ್ತು. ಈ ಹಣದಲ್ಲಿ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಕೋವಿಡ್ ನಂತರ ಆರ್ಥಿಕವಾಗಿ ಸಮಸ್ಯೆಯಾದ್ದರಿಂದ ಘಟಕಗಳಿಗೆ ಹಣ ನೀಡಲು ಆಗಲಿಲ್ಲ. ಇದರಿಂದ ಕೆಲವು ಜಿಲ್ಲೆಗಳ ಘಟಕಗಳು ಸಂಪೂರ್ಣ ನಿಂತೇ ಹೋದವು. ಇನ್ನೂ ಕೆಲವು ಸಾರ್ವಜನಿಕರ, ಪ್ರಸಿದ್ಧ ಕಲಾವಿದರಿಂದ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದು ಹೇಳುತ್ತಾರೆ ಹಿ.ಚಿ.ಬೋರಲಿಂಗಯ್ಯ.

ಹುದ್ದೆಗಳ ಮರುಭರ್ತಿಗೆ ಮುಂದಾಗದ ಸರಕಾರ

ಈ ಹಿಂದೆ ಜಾನಪದ ಲೋಕಕ್ಕೆ ಸರಕಾರ 11 ಹುದ್ದೆಗಳನ್ನು ಮಂಜೂರು ಮಾಡಿತ್ತು. ಆ ಪೈಕಿ 10 ಮಂದಿ ಈಗಾಗಲೇ ನಿವೃತ್ತರಾಗಿದ್ದು, ಸದ್ಯ ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಆ ಹುದ್ದೆಗಳ ಮರು ಭರ್ತಿಗೂ ಸರಕಾರ ಮುಂದಾಗುತ್ತಿಲ್ಲ. ಇದರಿಂದ ಜಾನಪದ ಲೋಕದ ಚಟುವಟಿಕೆಗಳಿಗೆ ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ಅಲ್ಲಿನ ನೌಕರರೊಬ್ಬರು ಹೇಳುತ್ತಾರೆ.

share
ಯೋಗೇಶ್ ಮಲ್ಲೂರು
ಯೋಗೇಶ್ ಮಲ್ಲೂರು
Next Story
X