Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆರೆಸ್ಸೆಸ್‌ ಮತ್ತು ನವ ವಸಾಹತೀಕರಣ

ಆರೆಸ್ಸೆಸ್‌ ಮತ್ತು ನವ ವಸಾಹತೀಕರಣ

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್30 Nov 2025 10:34 AM IST
share
ಆರೆಸ್ಸೆಸ್‌ ಮತ್ತು ನವ ವಸಾಹತೀಕರಣ
ಭಾಗ -2

ಮಾರ್ಚ್ 2023ರಲ್ಲಿ ಎನ್‌ಇಪಿ 2020 ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದ ಮಾರ್ಗಸೂಚಿಯನ್ನು ಪ್ರಕಟಿಸಿದ ಯುಜಿಸಿ ಪದವಿ ಶಿಕ್ಷಣ ಮತ್ತು ಸ್ನಾತಕೋತ್ತರ ವ್ಯಾಸಂಗದಲ್ಲಿ ‘ಭಾರತೀಯ ಜ್ಞಾನ ವ್ಯವಸ್ಥೆ’ ಪಠ್ಯಕ್ರಮವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಆದೇಶಿಸಿದೆ. ಭಾರತೀಯ ಆರೋಗ್ಯ ವಿಜ್ಞಾನ, ಭಾರತೀಯ ಖಗೋಳಶಾಸ್ತ್ರ, ಭಾರತೀಯ ಸಾಹಿತ್ಯ, ಸಾಂಪ್ರದಾಯಿಕ ವಿಜ್ಞಾನ ಒಳಗೊಂಡಂತೆ 18 ಕೋರ್ಸುಗಳಲ್ಲಿ ವೇದ ಅಧ್ಯಯನ, ರಾಮಾಯಣ, ಮಹಾಭಾರತ, ಪ್ರಾದೇಶಿಕ ಮಹಾಕಾವ್ಯ, ಪುರಾಣ, ಸಂಸ್ಕೃತ, ವೇದ ಗಣಿತ, ಪಂಚಾಂಗ ತರಹದ ಪ್ರಾಚೀನ ಖಗೋಳ ವ್ಯವಸ್ಥೆ ವಿಷಯಗಳನ್ನು ಒಳಗೊಂಡು ಪಠ್ಯಕ್ರಮ ಮಾದರಿಯನ್ನು ರಚಿಸಲು ಸೂಚಿಸಿದೆ

ಆರೆಸ್ಸೆಸ್‌ನ ‘ಭಾರತೀಯ ತತ್ವಶಾಸ್ತ್ರ’ ಸಿದ್ಧಾಂತವು ಮೇಲ್ನೋಟಕ್ಕೆ ವಸಾಹತುಶಾಹಿ ವಿರೋಧಿಯಾಗಿ ಕಂಡುಬರುತ್ತದೆ. ಆದರೆ ಅದರ ಆಳದಲ್ಲಿ ಚಾತುರ್ವರ್ಣ ವ್ಯವಸ್ಥೆ, ಮನುಸ್ಮತಿ ಶಾಸನಗಳನ್ನು ಮರಳಿ ಜಾರಿಗೊಳಿಸುವುದು ಉದ್ದೇಶವಾಗಿದೆ. ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿದ್ದರೂ ಸಹ ರಸಾಯನಶಾಸ್ತ್ರದಲ್ಲಿ ಪ್ರಾಚೀನ ಭಾರತದಲ್ಲಿ ಪರಮಾಣು ತಂತ್ರಜ್ಞಾನದ ಕುರಿತು ಪಠ್ಯ ರೂಪಿಸಲು ಸೂಚಿಸಲಾಗಿದೆ. ಗಣಿತದಲ್ಲಿ ‘ಸೂತ್ರ ಆಧರಿತ ವಿಧಾನ’ದ ಕುರಿತು ಒತ್ತು ಕೊಡಲಾಗಿದೆ. ಇಲ್ಲಿ ತರ್ಕ ಮತ್ತು ವೈಜ್ಞಾನಿಕ ಮಾದರಿಗಳನ್ನು ಕೈಬಿಟ್ಟು ಸೂತ್ರ ಆಧರಿಸಿ ಗಣಿತದ ಸಮಸ್ಯೆಗಳನ್ನು ಬಗೆಹರಿಸಲು ನಿರ್ಧರಿಸಲಾಗಿದೆ. ಆ ಮೂಲಕ ವಿಮರ್ಶಾತ್ಮಕ ಕಲಿಕೆಯನ್ನು ತಿರಸ್ಕರಿಸಲಾಗಿದೆ. ವಿದ್ಯಾರ್ಥಿಗಳು ಹೇಗೆ ಕಲಿಯಬೇಕು? ಹೇಗೆ ಚಿಂತಿಸಬೇಕು? ಎನ್ನುವ ವ್ಯಾಸಂಗಕ್ರಮವನ್ನು ರದ್ದುಪಡಿಸಿ ‘ಏನನ್ನು ಕಲಿಯಬೇಕು? ಯಾವುದನ್ನು ಕಲಿಯಬೇಕು’ ಎನ್ನುವ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಸಿಎಸ್‌ಆರ್(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಎನ್ನುವ ವಿಷಯದ ಕಲಿಕೆಗೆ ‘ರಾಮರಾಜ್ಯ’ ಕುರಿತು ಪಠ್ಯವನ್ನಾಗಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆಧುನಿಕ ಸಿಎಸ್‌ಆರ್ ಕಲಿಯಲು ಪ್ರಾಚೀನ ರಾಮರಾಜ್ಯ ಕಾವ್ಯವನ್ನು ಅಧ್ಯಯನ ಮಾಡಬೇಕು ಎನ್ನುವ ಆಲೋಚನಾ ಕ್ರಮವೇ ಪ್ರತಿಕ್ರಾಂತಿ ಎನ್ನಬಹುದು. ಹಿಂದೂಯಿಸಂನ್ನು ‘ವಿಜ್ಞಾನದ ಮತಧರ್ಮ’ ಎಂಬ ಚಿಂತನೆಯನ್ನು ಆರೆಸ್ಸೆಸ್ ಬೆಳೆಸುತ್ತಿದೆ. ಇದು ವಸಾಹತುಶಾಹಿ ಸಂದರ್ಭದಲ್ಲಿಯೇ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಆಗ ಸ್ವಯಂ ವಿಮರ್ಶೆಗೆ, ಸುಧಾರಣೆಗೆ ಆದ್ಯತೆ ಕೊಡುವ ವೈಚಾರಿಕತೆ ಮತ್ತು ಸ್ವಯಂ ವೈಭವೀಕರಿಸುವ, ಪುನರುತ್ಥಾನಕ್ಕೆ ಆದ್ಯತೆ ಕೊಡುವ ರಾಷ್ಟ್ರೀಯತೆ ನಡುವೆ ವಾಗ್ವಾದ ಹುಟ್ಟು ಹಾಕಲಾಗಿತ್ತು. ಇಂದಿಗೂ ಇದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ‘ವೈಜ್ಞಾನಿಕ ಮನೋಧರ್ಮ’ ಎನ್ನುವ ಆಶಯವನ್ನು 1976ರಲ್ಲಿ ಸಂವಿಧಾನದ ಪ್ರಭುತ್ವ ನಿರ್ದೇಶನ ತತ್ವದ ತಿದ್ದುಪಡಿಯ ಮೂಲಕ 51ಎ(ಎಚ್)ಸೇರಿಸಲಾಯಿತು. ಆದರೆ ಇದಕ್ಕೆ ಯಾವುದೇ ಮಾನ್ಯತೆ ಇಲ್ಲದಂತಾಗಿದೆ.

ಇದರ ಮುಂದುವರಿಕೆಯಾಗಿ ಜ್ಞಾನ ಕಲಿಕೆಯನ್ನು ಗೊಂದಲಗೊಳಿಸಲಾಗುತ್ತಿದೆ. ಪವನ್ ಕೋರ್ಡಾ ಅವರು ‘ಪಂಚಕೋಶ ಎನ್ನುವ ಕೋರ್ಸ್‌ನಲ್ಲಿ ಐ.ಕ್ಯೂ.ವನ್ನು ಬೆಳೆಸಿಕೊಳ್ಳಲು ಚಕ್ರ ಆಚರಣೆಯನ್ನು ಪ್ರಾಯೋಗಿಕವಾಗಿ ಪುನಶ್ಚೇತನಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಪುರಾಣ ಮತ್ತು ಆಚರಣೆಗಳನ್ನು ವೈಜ್ಞಾನಿಕ ಲೆಕ್ಕಾಚಾರಗಳು ಎಂದು ಉದ್ದೇಶಪೂರ್ವಕವಾಗಿ ಬಿಂಬಿಸುತ್ತಿದ್ದಾರೆ. ನಾರದ ಪುರಾಣದ ಮೂಲಕ ಗಣಿತವನ್ನು ಹೇಳಿಕೊಡಬೇಕು. ವೇದವನ್ನು ಬೋಧಿಸುವುದರ ಮೂಲಕ ವ್ಯಕ್ತಿತ್ವ ವಿಕಸನ ಕಲಿಸಬೇಕು. ಧರ್ಮಗ್ರಂಥಗಳ ಅಧ್ಯಯನದ ಮೂಲಕ ಸುಸ್ಥಿರ ಮಾರ್ಕೆಟಿಂಗ್ ಪಠ್ಯಕ್ರಮ ರಚಿಸಬೇಕೆಂದು ಸೂಚಿಸುತ್ತಿದ್ದಾರೆ’ ಎಂದು ಬರೆಯುತ್ತಾರೆ.

ಇವರ ಇತಿಹಾಸ ಪಠ್ಯಕ್ರಮದಲ್ಲಿ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರಾಗಿ ಸೇರಿಸಲಾಗಿದೆ. ಆಧುನಿಕ ಭಾರತ ರಾಜಕೀಯ ಆಲೋಚನೆಗಳು, ಯೂನಿಟ್ 3 ಪಠ್ಯದಲ್ಲಿ ಬಿ.ಜಿ.ತಿಲಕ್, ಗಾಂಧಿ, ದೀನ್‌ದಯಾಳ ಉಪಾಧ್ಯಾಯ ಅವರನ್ನು ಹೆಸರಿಸಲಾಗಿದೆ. ಸಾವರ್ಕರ್ ಹಿಂದೂ ದೇಶದ ಕುರಿತು ಮಾತನಾಡಿದರು ಎಂದು ಹೇಳುವುದರ ಮೂಲಕ ಸೆಕ್ಯುಲರ್ ಭಾರತದ ಪಠ್ಯವನ್ನು ಕೈ ಬಿಡಲಾಗಿದೆ. ಇವರ ಈ ‘ಭಾರತೀಯ ಜ್ಞಾನ ಪಠ್ಯಕ್ರಮ’ದ ಮೂಲಕ ನೆಹರೂ ಮತ್ತು ಅಂಬೇಡ್ಕರ್ ಅವರ ಆಧುನಿಕತೆ ಮತ್ತು ವೈಚಾರಿಕತೆಯ ಮೂಲಕ ದೇಶವನ್ನು ಕಟ್ಟುವ ಚಿಂತನೆಯು ಕ್ರಮೇಣ ನಿಷ್ಕ್ರಿಯತೆ ಹಾಗೂ ಜಡತ್ವದಲ್ಲಿ ಕೊನೆಗೊಳಿಸಲಾಗುತ್ತಿದೆ. ಆ ಮೂಲಕ ಆರೆಸ್ಸೆಸ್‌ನ ಮನುಧರ್ಮ ಪರವಾದ ಚಿಂತನೆಗಳಿಗೆ ಮುಕ್ತ ಅವಕಾಶ ದೊರಕಿಸಲಾಗಿದೆ. ಸಂಸ್ಕೃತೀಕರಣ ಮತ್ತು ಭಾರತೀಕರಣ ದೇಶದ ಮುಖ್ಯ ಕಾರ್ಯಸೂಚಿಗಳಾಗಿ ಮರು ನಿರೂಪಿಸಲಾಗುತ್ತಿದೆ.

ನವ ವಸಾಹತುಶಾಹಿಯ ರೂಪದಲ್ಲಿ ಚಾತುರ್ವರ್ಣದ ನೀತಿಗಳನ್ನು ಸಾರ್ವತ್ರೀಕರಣಗೊಳಿಸಿ ಶಿಕ್ಷಣದ ಭಾಗವಾಗಿ ಅಳವಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳು ಜಾರಿಯಲ್ಲಿವೆ. ಇದರ ಫಲವಾಗಿ ಶ್ರಮಣ ಸಂಸ್ಕೃತಿ, ಬಹು ಸಂಸ್ಕೃತಿ, ಬೌದ್ಧ ತತ್ವಗಳು ಹಂತ ಹಂತವಾಗಿ ಮೂಲೆಗುಂಪಾಗಲಿವೆ.

ಮರೆಯುವ ಮುನ್ನ

26 ನವೆಂಬರ್ 1949ರಂದು ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಲಾಯಿತು. ಅದಾಗಿ ನಾಲ್ಕು ದಿನಗಳ ನಂತರ ಆರೆಸ್ಸೆಸ್‌ನ ಮುಖವಾಣಿ ‘ಆರ್ಗನೈಸರ್’ನಲ್ಲಿ ‘ಪ್ರಾಚೀನ ಭಾರತದ ಕುರಿತು ನಮ್ಮ ಸಂವಿಧಾನದಲ್ಲಿ ಯಾವುದೇ ಬಗೆಯ ಪ್ರಸ್ತಾಪವಿಲ್ಲ. ಸ್ಪಾರ್ಟಾದ ಲೈಕರ್ಗುಸ್ ಅಥವಾ ಪರ್ಷಿಯಾದ ಸೋಲೋನ್‌ಗೆ ಮುಂಚೆಯೇ ಮನು ಕಾನೂನುಗಳನ್ನು ರಚಿಸಲಾಗಿದೆ. ಇಂದಿಗೂ ಮನುಸ್ಮತಿಯ ಕಾನೂನುಗಳು ಜಗತ್ತು ಮೆಚ್ಚುವ ರೀತಿಯಲ್ಲಿ ಅಚ್ಚರಿಗೊಳಿಸುತ್ತಲೇ ಇದೆ.. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಇದು ಲೆಕ್ಕಕ್ಕಿಲ್ಲ..’ ಎಂದು ದೂರಲಾಗಿದೆ

ಸಾವರ್ಕರ್ ‘ನಮ್ಮ ಹಿಂದೂ ದೇಶಕ್ಕೆ ವೇದಗಳ ನಂತರ ಮನುಸ್ಮತಿಯು ಪೂಜಿಸಬೇಕಾದ ಧರ್ಮಗ್ರಂಥವಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ಸಾಂಸ್ಕೃತಿಕ ಆಚರಣೆಗಳ ಮೂಲತತ್ವವಾಗಿದೆ. ಶತಮಾನಗಳಿಂದ ನಮ್ಮ ದೇಶದ ಅಧ್ಯಾತ್ಮ ಮತ್ತು ದೈವದ ಗ್ರಂಥವಾಗಿದೆ. ಇಂದಿಗೂ ಕೋಟ್ಯಂತರ ಹಿಂದೂಗಳು ಮನುಸ್ಮತಿಯ ಶಾಸನಗಳನ್ನು ನಂಬುತ್ತಾರೆ, ಪಾಲಿಸುತ್ತಾರೆ.. ಇಂದು ಮನುಸ್ಮತಿ ಹಿಂದೂ ಕಾನೂನು ಆಗಿದೆ.. ಇದು ತಳಹದಿಯಾಗಿದೆ..’ ಎಂದು ಹೇಳುತ್ತಾರೆ. (ಸಾವರ್ಕರ್ ಸಮಾಗಾರ್ ಪುಸ್ತಕದಿಂದ: ಪ್ರಭಾತ್..ಸಂಪುಟ 4, ಪುಟ 415) ಎಪ್ಪತ್ತಾರು ವರ್ಷಗಳ ನಂತರವೂ ಆರೆಸ್ಸೆಸ್ ಇದನ್ನು

ಅಲ್ಲಗೆಳೆದಿಲ್ಲ.

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X