Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆರೆಸ್ಸೆಸ್: ರಾಷ್ಟ್ರಭಕ್ತಿಯ ಮುಖವಾಡದ...

ಆರೆಸ್ಸೆಸ್: ರಾಷ್ಟ್ರಭಕ್ತಿಯ ಮುಖವಾಡದ ಹಿಂದೆ ಹೊಣೆಗಾರಿಕೆಯ ಪ್ರಶ್ನೆ

ರುದ್ರು ಪುನೀತ್ರುದ್ರು ಪುನೀತ್20 Jun 2026 10:58 AM IST
share
ಆರೆಸ್ಸೆಸ್: ರಾಷ್ಟ್ರಭಕ್ತಿಯ ಮುಖವಾಡದ ಹಿಂದೆ ಹೊಣೆಗಾರಿಕೆಯ ಪ್ರಶ್ನೆ

ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಕುರಿತು ಎತ್ತಿರುವ ಪ್ರಶ್ನೆಗಳು ಕೇವಲ ಒಂದು ಸಂಘಟನೆಯ ನೋಂದಣಿಯ ವಿಚಾರವಷ್ಟೇ ಅಲ್ಲ. ಅವು ಭಾರತದ ಪ್ರಜಾಪ್ರಭುತ್ವ, ಸಂವಿಧಾನ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಬಗ್ಗೆ ನಡೆಯುತ್ತಿರುವ ಒಂದು ದೊಡ್ಡ ಚರ್ಚೆಯ ಭಾಗವಾಗಿದೆ. ಯಾವುದೇ ಸಂಘಟನೆ ತನ್ನನ್ನು ಲಕ್ಷಾಂತರ ಸದಸ್ಯರನ್ನು ಹೊಂದಿರುವ ದೇಶದ ಅತಿದೊಡ್ಡ ಸ್ವಯಂಸೇವಕ ಸಂಘಟನೆ ಎಂದು ಹೇಳಿಕೊಳ್ಳುವಾಗ ಮತ್ತು ಭಾರೀ ಪ್ರಮಾಣದ ದೇಣಿಗೆಗಳನ್ನು ಸಂಗ್ರಹಿಸುವಾಗ, ಅದರ ಚಟುವಟಿಕೆಗಳು, ಹಣಕಾಸಿನ ಮೂಲಗಳು ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸುವುದು ಸಹಜ.

ಈ ಚರ್ಚೆಯಲ್ಲಿ ಮೊದಲಿಗೆ ಸ್ಪಷ್ಟಪಡಿಸಬೇಕಾದ ವಿಷಯವೆಂದರೆ, ಭಾರತದಲ್ಲಿ ಯಾವುದೇ ಸಾಮಾಜಿಕ ಅಥವಾ ಸಾಂಸ್ಕೃತಿಕ ಸಂಘಟನೆ ಕಡ್ಡಾಯವಾಗಿ ಒಂದೇ ಮಾದರಿಯ ಕಾನೂನಿನ ಅಡಿಯಲ್ಲಿ ನೋಂದಣಿ ಆಗಲೇಬೇಕು ಎಂಬ ನಿಯಮವಿಲ್ಲದಿರಬಹುದು. ಆದರೆ ಒಂದು ಸಂಘಟನೆ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತಿದ್ದರೆ, ಲಕ್ಷಾಂತರ ಸದಸ್ಯರನ್ನು ಹೊಂದಿದ್ದರೆ ಮತ್ತು ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೆ, ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಅದು ಸಾರ್ವಜನಿಕವಾಗಿ Accountable ಆಗಿರಬೇಕು ಎನ್ನುವುದು ಒಂದು ಜವಾಬ್ದಾರಿ ನಡೆಯಾಗುತ್ತದೆ.

ದೇಶದಲ್ಲಿ ಕಾರ್ಯನಿರ್ವಹಿಸುವ ಅನೇಕ ಸ್ವಯಂಸೇವಾ ಸಂಸ್ಥೆಗಳು, ಟ್ರಸ್ಟ್‌ಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸಮಾಜಮುಖಿ ಸಂಘಟನೆಗಳು ವಿವಿಧ ಕಾನೂನುಗಳ ಅಡಿಯಲ್ಲಿ ನೋಂದಣಿಯಾಗಿ ತಮ್ಮ ವಾರ್ಷಿಕ ಲೆಕ್ಕಪತ್ರಗಳು, ಆದಾಯದ ಮೂಲಗಳು ಮತ್ತು ವೆಚ್ಚಗಳ ವಿವರಗಳನ್ನು ಸಾರ್ವಜನಿಕವಾಗಿ ಸಲ್ಲಿಸುತ್ತವೆ. ಆದರೆ ದೇಶದ ಅತ್ಯಂತ ಪ್ರಭಾವಿ ಸಂಘಟನೆಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಆರೆಸ್ಸೆಸ್, ತನ್ನ ಹಣಕಾಸಿನ ಮೂಲಗಳು ಮತ್ತು ಆಂತರಿಕ ಆಡಳಿತ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ಪರಿಶೀಲನೆಗೆ ಯಾವ ಮಟ್ಟಿಗೆ ಅವಕಾಶ ನೀಡುತ್ತದೆ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಕೊಡುವಲ್ಲಿ ಆರೆಸ್ಸೆಸ್‌ನ ಪ್ರಮುಖರು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಆರೆಸ್ಸೆಸ್ ಕುರಿತು ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಪ್ರಶ್ನೆ ಕೇಳಿದಾಕ್ಷಣ, ಆರೆಸ್ಸೆಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ‘‘ಹಿಂದೂ ಧರ್ಮ ನೋಂದಣಿಯಾಗಿದೆಯೇ?’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವು ರಾಜಕಾರಣಿಗಳು ‘‘ಉಗ್ರವಾದಿಗಳ, ಭಯೋತ್ಪಾದಕರ ಸಂಘಟನೆಗಳ ನೋಂದಣಿ ಕೇಳಿದ್ದೀರಾ?’’ ಎನ್ನುವಂತಹ ಬಾಲಿಶ ಪ್ರತಿಪ್ರಶ್ನೆಗಳನ್ನು ಮುಂದಿಡುತ್ತಾರೆ. ಇಂತಹ ಹೋಲಿಕೆಗಳು ಮೂಲ ಪ್ರಶ್ನೆಯಿಂದ ನುಣುಚಿಕೊಳ್ಳುವ ಪ್ರಯತ್ನವಾಗುತ್ತವೆ. ಇಲ್ಲಿ ಚರ್ಚೆಯಾಗುತ್ತಿರುವುದು ಹಿಂದೂ ಧರ್ಮದ ಬಗ್ಗೆ ಅಲ್ಲ; ಆರೆಸ್ಸೆಸ್ ಎಂಬ ನಿರ್ದಿಷ್ಟ ಸಂಘಟನೆಯ ಬಗ್ಗೆ. ಧರ್ಮ ಮತ್ತು ಸಂಘಟನೆ ಎರಡೂ ಒಂದೇ ಅಲ್ಲ. ಹಿಂದೂ ಧರ್ಮವು ಸಾವಿರಾರು ವರ್ಷಗಳ ಇತಿಹಾಸ, ವೈವಿಧ್ಯಮಯ ಪರಂಪರೆಗಳು ಮತ್ತು ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ನಂಬಿಕೆಯ ವ್ಯವಸ್ಥೆ. ಆದರೆ ಆರೆಸ್ಸೆಸ್ ಒಂದು ನಿರ್ದಿಷ್ಟ ಸಿದ್ಧಾಂತ, ನಾಯಕತ್ವ, ಸಂಘಟನಾ ರಚನೆ ಮತ್ತು ಕಾರ್ಯಚಟುವಟಿಕೆಗಳನ್ನು ಹೊಂದಿರುವ ಸಂಘಟನೆ. ಆದ್ದರಿಂದ ಆರೆಸ್ಸೆಸ್‌ನ ಹೊಣೆಗಾರಿಕೆಯ ಕುರಿತು ಪ್ರಶ್ನೆ ಕೇಳುವುದು ಎಂದರೆ ಹಿಂದೂ ಧರ್ಮವನ್ನು ಪ್ರಶ್ನಿಸಿದಂತಲ್ಲ.

ಅದೇ ರೀತಿ, ಉಗ್ರಗಾಮಿ ಅಥವಾ ಭಯೋತ್ಪಾದಕ ಸಂಘಟನೆಗಳ ಉದಾಹರಣೆಗಳು ಅಪ್ರಸ್ತುತ ಎನ್ನಿಸುತ್ತವೆ. ಅವು ಹಲವು ದೇಶಗಳಲ್ಲಿ ಭಯೋತ್ಪಾದಕ ಅಥವಾ ಸಶಸ್ತ್ರ ಸಂಘಟನೆಗಳೆಂದು ಘೋಷಿಸಲ್ಪಟ್ಟಿರುವ ಮನುಷ್ಯವಿರೋಧಿ ಸಂಘಟನೆಗಳು. ಆದರೆ ಆರೆಸ್ಸೆಸ್ ತನ್ನನ್ನು ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಕಾರ್ಯನಿರ್ವಹಿಸುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಎಂದು ಪರಿಚಯಿಸಿಕೊಳ್ಳುತ್ತದೆ. ಹಾಗಿರುವಾಗ, ಭಯೋತ್ಪಾದಕ ಸಂಘಟನೆಗಳ ಜೊತೆ ಹೋಲಿಕೆ ಮಾಡುವ ಬದಲು, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡೋಣ ಎನ್ನುವಂತಹ ಪ್ರಚೋದನಕಾರಿ ಹೇಳಿಕೆಗಳು ನೀಡುವ ಬದಲು, ಒಂದು ಪ್ರಭಾವಿ ಸಾಮಾಜಿಕ ಸಂಘಟನೆಯಾಗಿ ಸಾರ್ವಜನಿಕ ಹೊಣೆಗಾರಿಕೆಯ ಮಾನದಂಡಗಳಿಗೆ ಅದು ಹೇಗೆ ಸ್ಪಂದಿಸುತ್ತದೆ ಎನ್ನುವುದೇ ಚರ್ಚೆಯ ವಿಷಯವಾಗಬೇಕು.

ಭಾರತದ ಸಂವಿಧಾನವು ತನ್ನ ಪೀಠಿಕೆಯಲ್ಲಿಯೇ ಭಾರತವನ್ನು ‘‘ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ’’ ಎಂದು ಘೋಷಿಸುತ್ತದೆ. ಸಂವಿಧಾನದ ಆರ್ಟಿಕಲ್-14 ಎಲ್ಲ ನಾಗರಿಕರಿಗೆ ಸಮಾನತೆಯನ್ನು, ಆರ್ಟಿಕಲ್-15 ಧರ್ಮ, ಜಾತಿ, ಲಿಂಗ ಮತ್ತು ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ನಿಷೇಧವನ್ನು, ಆರ್ಟಿಕಲ್-25 ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತವೆ. ಭಾರತ ರಾಷ್ಟ್ರದ ಪರಿಕಲ್ಪನೆ ಯಾವುದೇ ಒಂದು ಧರ್ಮದ ಮೇಲೆ ನಿರ್ಮಿತವಾಗಿಲ್ಲ; ಅದು ವಿವಿಧ ಸಂಸ್ಕೃತಿಗಳು, ಭಾಷೆಗಳು ಮತ್ತು ನಾಗರಿಕ ಪರಂಪರೆಗಳ ಸಮನ್ವಯದಿಂದ ರೂಪುಗೊಂಡ ನಾಗರಿಕ ರಾಷ್ಟ್ರವಾಗಿದೆ.

ಆದರೆ ಆರೆಸ್ಸೆಸ್ ಸಂಘಟನೆಯ ನಿರ್ಮಾತೃ ಎಂದು ಹೇಳಲಾಗುವ ಎಂ.ಎಸ್. ಗೋಳ್ವಾಲ್ಕರ್ ಅವರ ‘We, or Our Nationhood Defined’ ಮತ್ತು ‘Bunch of Thoughts’ ಕೃತಿಗಳಲ್ಲಿ ವ್ಯಕ್ತವಾಗಿರುವ ಹಿಂದೂ ರಾಷ್ಟ್ರ ಪರಿಕಲ್ಪನೆ ಬಗ್ಗೆ ದಶಕಗಳಿಂದಲೂ ವಿವಾದವಿದೆ. ಆದರೆ ಸಂವಿಧಾನವೇ ನಮ್ಮ ಧರ್ಮ ಎನ್ನುವವರ ಅಭಿಪ್ರಾಯದಲ್ಲಿ, ಈ ಪರಿಕಲ್ಪನೆ ಭಾರತದ ಸಂವಿಧಾನ ಬೋಧಿಸುವ ಜಾತ್ಯತೀತ ಮತ್ತು ಬಹುತ್ವವಾದಿ ಆಶಯಗಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತದೆ.

ಈ ಹಿನ್ನೆಲೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ನೆನಪಿಸಿಕೊಳ್ಳುವುದು ಅಗತ್ಯ. ‘Annihilation of Caste’ ಕೃತಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಎಲ್ಲಾ ವ್ಯವಸ್ಥೆಗಳ ವಿರುದ್ಧ ತೀಕ್ಷ್ಣವಾಗಿ ವಾದ ಮಂಡಿಸಿದ್ದಾರೆ. ‘Pakistan or Partition of India’ ಕೃತಿಯಲ್ಲಿ ಅವರು ಹಿಂದೂ ಮತ್ತು ಮುಸ್ಲಿಮ್ ಕೋಮುವಾದ ಎರಡನ್ನೂ ಟೀಕಿಸಿದ್ದಾರೆ. ಹಿಂದೂ ರಾಜ್ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅವರು ಸ್ಪಷ್ಟವಾಗಿ ಎಚ್ಚರಿಸಿದ್ದರು. ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳಲ್ಲ; ಅದು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳ ಮೇಲೆ ನಿಂತಿರುವ ಸಾಮಾಜಿಕ ವ್ಯವಸ್ಥೆಯಾಗಿದೆ.

ಇಂದು ದೇಶ ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಗಮನಿಸಿದರೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ರೈತರ ಆತ್ಮಹತ್ಯೆಗಳು, ನಿರುದ್ಯೋಗ, ಖಾಸಗೀಕರಣ, ಬೆಲೆ ಏರಿಕೆ, ಮಹಿಳೆಯರ ಮೇಲಿನ ದೌರ್ಜನ್ಯ, ದಲಿತರ ಮೇಲಿನ ಹಲ್ಲೆಗಳು, ಮರ್ಯಾದಾ ಹತ್ಯೆಗಳು, ಭ್ರಷ್ಟಾಚಾರ ಮತ್ತು ಸಾಮಾಜಿಕ ಅಸಮಾನತೆಗಳು ಈ ದೇಶದ ಜನರನ್ನು ನೇರವಾಗಿ ಬಾಧಿಸುವ ಸಮಸ್ಯೆಗಳಾಗಿವೆ. ಇಂತಹ ಸಮಸ್ಯೆಗಳ ವಿರುದ್ಧವಾಗಿ ಆರೆಸ್ಸೆಸ್ ಸಂಘಟನೆಯು ದೇಶವ್ಯಾಪಿ ಜನಾಂದೋಲನಗಳನ್ನು ಸಂಘಟಿಸುವಲ್ಲಿ ಯಾವತ್ತೂ ಪಾತ್ರವಹಿಸಿಲ್ಲ ಎನ್ನುವುದು ಐತಿಹಾಸಿಕ ಸತ್ಯ. ಆರೆಸ್ಸೆಸ್ ಇಂತಹ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಯಾವಾಗಲೂ ಹಿಂದುತ್ವ, ಹಿಂದೂ-ಮುಸ್ಲಿಮ್, ದೇಶ ಅಪಾಯದಲ್ಲಿದೆ, ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವುದರ ಸುತ್ತಲೇ ಗಿರಕಿ ಹೊಡೆಯುತ್ತಿದೆ.

ಸಾಮಾನ್ಯವಾಗಿ ಆರೆಸ್ಸೆಸ್ ಬೆಂಬಲಿಗರು, ಆರೆಸ್ಸೆಸ್ ನ ಸೇವಾ ಕಾರ್ಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಸೇವಾ ಯೋಜನೆಗಳನ್ನು ಉಲ್ಲೇಖಿಸುತ್ತಾರೆ. ಆದರೆ ಸಾರ್ವಜನಿಕ ಜೀವನದಲ್ಲಿ ಸಂಘಪರಿವಾರ ಪ್ರತಿಪಾದಿಸುವ ಮೂಲಭೂತವಾದದ ಪ್ರಭಾವವು ಹೆಚ್ಚಾಗಿ ಇಲ್ಲಿ ಧರ್ಮದ ಹೆಸರಿನ ರಾಜಕಾರಣ, ಸಾಂಸ್ಕೃತಿಕ ರಾಷ್ಟ್ರವಾದ ಮತ್ತು ಸಾಮಾಜಿಕ ಧ್ರುವೀಕರಣದ ವಿಚಾರಗಳೇ ಹೆಚ್ಚಾಗಿ ಕಾಣಿಸುತ್ತದೆ. ಧರ್ಮ ಮತ್ತು ರಾಷ್ಟ್ರಭಕ್ತಿಯನ್ನು ಒಂದೇ ಎಂದು ಬಿಂಬಿಸುವ ರಾಜಕೀಯ ಚರ್ಚೆಗಳು, ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವ ರಾಜಕೀಯಪ್ರೇರಿತ ಭಾಷಣಗಳು ಯುವಕರಲ್ಲಿ ಕೋಮುವಾದಿ ಮನೋಭಾವವನ್ನು ಬೆಳೆಸುವ ಅಪಾಯವನ್ನು ಹೊಂದಿವೆ ಎಂಬ ಆತಂಕವನ್ನು ಹಲವು ಸಮಾಜ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಇಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ. ಒಂದು ಸಂಘಟನೆ ದೇಶದಾದ್ಯಂತ ದೇಣಿಗೆ ಸಂಗ್ರಹಿಸಿ, ದೊಡ್ಡ ಪ್ರಮಾಣದ ಆಸ್ತಿ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವಾಗ, ಅದರ ವಹಿವಾಟಿನ ಕುರಿತು ಪಾರದರ್ಶಕವಾಗಿರುವುದು ಅದರ ಜವಾಬ್ದಾರಿಯಾಗಿರಬೇಕು. Income Tax Act, 1961, Indian Trusts Act, Societies Registration Act, Companies Act, 2013, ವಿದೇಶಿ ದೇಣಿಗೆಗಳಿಗೆ ಸಂಬಂಧಿಸಿದ Foreign Contribution Regulation Act (FCRA) ನಿಯಮಗಳು ಹಾಗೂ ಇತರ ಹಣಕಾಸು ನಿಯಂತ್ರಣ ವ್ಯವಸ್ಥೆಗಳು ಸಾಮಾನ್ಯವಾಗಿ ಇಂತಹ ಸಂಘ ಸಂಸ್ಥೆಗಳ ಮೇಲೆ ಅನ್ವಯಿಸುತ್ತವೆ. ದೇಶದಲ್ಲಿರುವ ಅನೇಕ ಎನ್‌ಜಿಒಗಳು, ಟ್ರಸ್ಟ್‌ಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಪ್ರತೀ ವರ್ಷವೂ ತಮ್ಮ ವಹಿವಾಟನ್ನು Auditಗೆ ಒಳಪಡಿಸುವಾಗ, ಅಪಾರ ಪ್ರಭಾವ ಮತ್ತು ಸಂಪನ್ಮೂಲಗಳನ್ನು ಹೊಂದಿರುವ ಸಂಘಟನೆಯೂ ಅದೇ ಮಟ್ಟದ ಸಾರ್ವಜನಿಕ ಪಾರದರ್ಶಕತೆಯನ್ನು ಪ್ರದರ್ಶಿಸುವುದಕ್ಕೆ ಯಾಕೆ ಹಿಂದೇಟು ಹಾಕುತ್ತಿದೆ? ಲಕ್ಷಾಂತರ ಸದಸ್ಯರನ್ನು ಹೊಂದಿರುವ ಸಂಘಟನೆ ತನ್ನ ಹಣಕಾಸಿನ ಮೂಲಗಳು, ದೇಣಿಗೆಗಳ ಪ್ರಮಾಣ ಮತ್ತು ವೆಚ್ಚಗಳ ವಿವರಗಳನ್ನು ಸಾರ್ವಜನಿಕ ವಲಯದಲ್ಲಿ ಸಂಪೂರ್ಣವಾಗಿ ಲಭ್ಯವಾಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸಹಕಾರಿಯಾಗುವುದಿಲ್ಲವೇ? ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ಯಾವುದೇ ಸಂಘಟನೆಯ ವಿಶ್ವಾಸಾರ್ಹತೆ ಕಡಿಮೆಯಾಗುವುದಿಲ್ಲ, ಬದಲಿಗೆ ಹೆಚ್ಚುತ್ತದೆ.

ಪ್ರಜಾಪ್ರಭುತ್ವದಲ್ಲಿ ಪ್ರಭಾವ ಹೆಚ್ಚಿದಷ್ಟೂ ಉತ್ತರದಾಯಿತ್ವವೂ ಹೆಚ್ಚಬೇಕು. ಇದು ಸರಕಾರಗಳಿಗೆ ಮಾತ್ರವಲ್ಲ, ಸಮಾಜದ ಮೇಲೆ ಪ್ರಭಾವ ಬೀರುವ ಎಲ್ಲ ಸಂಘಟನೆಗಳಿಗೂ ಅನ್ವಯಿಸುತ್ತದೆ. ನಾವು ದೇಶಭಕ್ತರು ಎಂದು ಹೇಳಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ಆ ದೇಶದ ಸಂವಿಧಾನ, ಅದರ ಮೌಲ್ಯಗಳು ಮತ್ತು ಅದರ ಪ್ರಜಾಪ್ರಭುತ್ವದ ಸಂಸ್ಥೆಗಳ ಮುಂದೆ ಹೊಣೆಗಾರಿಕೆಯನ್ನು ಪ್ರದರ್ಶಿಸುವುದು ಕೂಡ ಅತ್ಯಗತ್ಯವಾಗುತ್ತದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ನೀಡಿದ್ದ ಎಚ್ಚರಿಕೆ ಇಂದು ಹೆಚ್ಚು ಪ್ರಸ್ತುತವಾಗಿದೆ. ಅವರು ಸಂವಿಧಾನಕ್ಕಿಂತ ವ್ಯಕ್ತಿ, ನಾಯಕ ಅಥವಾ ಸಂಘಟನೆಯನ್ನು ದೊಡ್ಡದೆಂದು ಪೂಜಿಸುವ ಪ್ರವೃತ್ತಿಯ ಬಗ್ಗೆ ಎಚ್ಚರಿಸಿದ್ದರು. ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಯಾರೂ ಪ್ರಶ್ನಾತೀತರಲ್ಲ. ಯಾವುದೇ ಸಂಘಟನೆ ಎಷ್ಟೇ ದೊಡ್ಡದಾಗಿದ್ದರೂ ಅದು ಸಾರ್ವಜನಿಕ ಚರ್ಚೆ, ವಿಮರ್ಶೆ ಮತ್ತು ಪರಿಶೀಲನೆಗೆ ಒಳಪಡಬೇಕು.

ಯಾವುದೇ ಧರ್ಮ, ಜಾತಿ ಅಥವಾ ಸಮುದಾಯದ ಗುರುತನ್ನು ರಾಷ್ಟ್ರದ ಗುರುತಿನೊಂದಿಗೆ ಬೆರೆಸುವ ಪ್ರಯತ್ನಗಳು ಅಂತಿಮವಾಗಿ ಸಮಾಜದಲ್ಲಿ ವಿಭಜನೆಗೆ ಕಾರಣವಾಗುತ್ತವೆ. ಭಾರತದ ಶಕ್ತಿ ಅದರ ವಿವಿಧತೆಯಲ್ಲಿದೆ. ನಮ್ಮ ದೇಶದ ಅಸ್ತಿತ್ವ ಹಿಂದೂ ರಾಷ್ಟ್ರ ಅಥವಾ ಮುಸ್ಲಿಮ್ ರಾಷ್ಟ್ರ ಎಂಬ ಕಲ್ಪನೆಗಳಲ್ಲಿ ಅಲ್ಲ, ಅದು ಸಂವಿಧಾನಾಧಾರಿತ ನಾಗರಿಕ ರಾಷ್ಟ್ರದ ಪರಿಕಲ್ಪನೆಯಲ್ಲಿದೆ.

ಆದ್ದರಿಂದ ಪ್ರಿಯಾಂಕ್ ಖರ್ಗೆಯವರು ಎತ್ತಿರುವ ಪ್ರಶ್ನೆಯನ್ನು ಕೇವಲ ರಾಜಕೀಯ ಹೇಳಿಕೆಯಾಗಿ ನೋಡದೆ, ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಚರ್ಚೆಯಾಗಿ ಪರಿಗಣಿಸಬೇಕಾಗಿದೆ. ಇಲ್ಲಿ ಆರೆಸ್ಸೆಸ್ ಎನ್ನುವ ಸಂಘಟನೆ ಇರಬೇಕೇ ಅಥವಾ ಇರಬಾರದೇ ಎನ್ನುವುದು ಮುಖ್ಯ ಪ್ರಶ್ನೆಯಲ್ಲ. ಬದಲಾಗಿ, ಲಕ್ಷಾಂತರ ಸದಸ್ಯರನ್ನು ಹೊಂದಿರುವ, ಅಪಾರ ಸಾಮಾಜಿಕ-ರಾಜಕೀಯ ಪ್ರಭಾವ ಹೊಂದಿರುವ ಮತ್ತು ದೊಡ್ಡ ಪ್ರಮಾಣದ ದೇಣಿಗೆಗಳನ್ನು ಸಂಗ್ರಹಿಸುತ್ತದೆ ಎಂದು ಹೇಳಲಾಗುವ ಸಂಘಟನೆ ಸಾರ್ವಜನಿಕ ಪರಿಶೀಲನೆ, ಹಣಕಾಸಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ಹೊರಗೆ ಉಳಿಯಬೇಕೇ ಎನ್ನುವುದು ನಮ್ಮೆಲ್ಲರ ಮುಂದೆ ಬರಬೇಕಾದ ಪ್ರಶ್ನೆಯಾಗಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಸಂವಿಧಾನವು ಯಾವುದೇ ವ್ಯಕ್ತಿ, ಪಕ್ಷ ಅಥವಾ ಸಂಘಟನೆಗಿಂತ ದೊಡ್ಡದು. ಭಾರತದ ಭವಿಷ್ಯ ಧಾರ್ಮಿಕ ರಾಷ್ಟ್ರವಾದದಲ್ಲಿಲ್ಲ; ಅದು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನು ರಕ್ಷಿಸುವ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿದೆ. ಆದ್ದರಿಂದ ದೇಶದ ಯಾವುದೇ ಪ್ರಭಾವಿ ಸಂಘಟನೆಯಂತೆ ಆರೆಸ್ಸೆಸ್ ಕೂಡ ತನ್ನ ಚಟುವಟಿಕೆಗಳು, ಹಣಕಾಸು ಮತ್ತು ಸಂಘಟನಾ ರಚನೆಗಳ ಬಗ್ಗೆ ಹೆಚ್ಚಿನ ಪಾರದರ್ಶಕತೆ ಮತ್ತು ಸಾರ್ವಜನಿಕವಾಗಿ accountable ಆಗಿರಬೇಕು ಎಂಬ ಬೇಡಿಕೆ ಪ್ರಜಾಪ್ರಭುತ್ವ ವಿರೋಧಿ ಅಲ್ಲ, ಅದು ಪ್ರಜಾಪ್ರಭುತ್ವದ ಸಹಜ ಮತ್ತು ನ್ಯಾಯಸಮ್ಮತ ನಿರೀಕ್ಷೆಯಾಗಿದೆ.

ಸಂವಿಧಾನವು ನಾಗರಿಕರಿಗೆ ಕೇವಲ ಹಕ್ಕುಗಳನ್ನು ಮಾತ್ರ ನೀಡುವುದಿಲ್ಲ, ಅದು ಅಧಿಕಾರ ಮತ್ತು ಪ್ರಭಾವ ಹೊಂದಿರುವ ಎಲ್ಲ ಸಂಸ್ಥೆಗಳ ಮೇಲೂ ಜವಾಬ್ದಾರಿಯ ನಿರೀಕ್ಷೆಯನ್ನು ಇಡುತ್ತದೆ. ಆ ಮಾನದಂಡ ಸರಕಾರಗಳಿಗೂ ಅನ್ವಯಿಸಬೇಕು, ರಾಜಕೀಯ ಪಕ್ಷಗಳಿಗೂ ಅನ್ವಯಿಸಬೇಕು, ಧಾರ್ಮಿಕ ಸಂಸ್ಥೆಗಳಿಗೂ ಅನ್ವಯಿಸಬೇಕು ಮತ್ತು ಆರೆಸ್ಸೆಸ್ ನಂತಹ ಪ್ರಭಾವಿ ಸಂಘಟನೆಗಳಿಗೂ ಸಮಾನವಾಗಿ ಅನ್ವಯಿಸಬೇಕು. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ, ಯಾರೂ ಸಾರ್ವಜನಿಕ ಹೊಣೆಗಾರಿಕೆಯಿಂದ ಹೊರತಾಗಿರಲು ಸಾಧ್ಯವಿಲ್ಲ.

Tags

RSS
share
ರುದ್ರು ಪುನೀತ್
ರುದ್ರು ಪುನೀತ್
Next Story
X