Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಕಲೇಶಪುರ: ನಕಲಿ ದಾಖಲೆ ಸೃಷ್ಟಿಸಿ...

ಸಕಲೇಶಪುರ: ನಕಲಿ ದಾಖಲೆ ಸೃಷ್ಟಿಸಿ 13,102 ಎಕರೆ ರಕ್ಷಿತಾರಣ್ಯ ಕಬಳಿಕೆಗೆ ಯತ್ನ

►ಜಿಲ್ಲಾಧಿಕಾರಿ, ಡಿಸಿಎಫ್ ನಕಲಿ ಸಹಿ, ಸೀಲ್ ಬಳಕೆ ►ಮೂಡಿಗೆರೆ ಮೂಲದ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲು

ಮಲ್ನಾಡ್ ಮೆಹಬೂಬ್ಮಲ್ನಾಡ್ ಮೆಹಬೂಬ್19 Oct 2026 7:50 AM IST
share
ಸಕಲೇಶಪುರ: ನಕಲಿ ದಾಖಲೆ ಸೃಷ್ಟಿಸಿ 13,102 ಎಕರೆ ರಕ್ಷಿತಾರಣ್ಯ ಕಬಳಿಕೆಗೆ ಯತ್ನ

ಸಕಲೇಶಪುರ : ಪಶ್ಚಿಮ ಘಟ್ಟದ ಜೀವವೈವಿಧ್ಯ ತಾಣವಾದ ಸಕಲೇಶಪುರ ತಾಲೂಕಿನಲ್ಲಿ ಭಾರೀ ಭೂ ಹಗರಣವೊಂದು ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (ಡಿಸಿಎಫ್) ಹೆಸರು, ಸಹಿ ಮತ್ತು ಸೀಲ್‌ಗಳನ್ನು ನಕಲಿಯಾಗಿ ಸೃಷ್ಟಿಸಿ ಬರೋಬ್ಬರಿ 13,102 ಎಕರೆ ರಕ್ಷಿತಾರಣ್ಯ ಪ್ರದೇಶವನ್ನು ಏಕವ್ಯಕ್ತಿಯ ಹೆಸರಿಗೆ ಮಂಜೂರು ಮಾಡಿಸಿಕೊಂಡಿರುವ ಆಘಾತಕಾರಿ ಪ್ರಕರಣ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಅಂಚೆಯ ಜಿ. ಅಗ್ರಹಾರ ಗ್ರಾಮದ ನಿವಾಸಿ ಎಂ.ಬಿ. ನೇಮಣ್ಣಗೌಡ ಮನ್ಮಥ ಎಂಬಾತನ ಹೆಸರಿಗೆ ಈ ಅಪಾರ ಪ್ರಮಾಣದ ಅರಣ್ಯ ಭೂಮಿ ಮಂಜೂರಾಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.

ಹಗರಣ ಬಯಲಾಗಿದ್ದು ಹೇಗೆ?: ಅರಣ್ಯ ಪ್ರದೇಶದ ನಕಲಿ ಮಂಜೂರಾತಿ ದಾಖಲೆಗಳನ್ನು ಮುಂದಿಟ್ಟುಕೊಂಡು ಪಹಣಿ (ಆರ್‌ಟಿಸಿ) ನಮೂದು ಮಾಡಿಸಲು ಪ್ರಯತ್ನಿಸಿದ ವೇಳೆ ಈ ಬೃಹತ್ ವಂಚನೆ ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತ ಸಕಲೇಶಪುರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹೇಮಂತ್ ಅವರು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ನೇಮಣ್ಣಗೌಡ ವಿರುದ್ಧ ಐಪಿಸಿ ಕಲಂ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಬಳಿಕೆಗೆ ಸ್ಕೆಚ್ ಹಾಕಲಾದ ಅರಣ್ಯ ಪ್ರದೇಶದ ವಿವರ: ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಅಗ್ನಿ ಗ್ರಾಮದ 12 ಸರ್ವೇ ನಂಬರ್‌ಗಳ ವ್ಯಾಪ್ತಿಯ 1,297 ಎಕರೆ ಭೂಮಿ.

ಮೂರಕಣ್ಣುಗುಡ್ಡ ವಲಯ (1,646 ಎಕರೆ): ಮೂರಕಣ್ಣುಗುಡ್ಡ ರಕ್ಷಿತಾರಣ್ಯ ವ್ಯಾಪ್ತಿಗೆ ಬರುವ ಮದನಪುರ, ಜಂಭರಡಿ ಹಾಗೂ ಅಚ್ಚನಹಳ್ಳಿ ಗ್ರಾಮಗಳ 11 ಸರ್ವೇ ನಂಬರ್‌ಗಳು.

ಕೆಂಪುಹೊಳೆ ರಕ್ಷಿತಾರಣ್ಯ (6,260 ಎಕರೆ): ಹೆಗದ್ದೆ ಗ್ರಾಮದ 9 ಸರ್ವೇ ನಂಬರ್‌ಗಳಲ್ಲಿ ವ್ಯಾಪಿಸಿರುವ ಅರಣ್ಯ ಪ್ರದೇಶ.

ಕಬ್ಬಿನಾಲೆ ರಕ್ಷಿತಾರಣ್ಯ (3,899 ಎಕರೆ): ಹೆಗದ್ದೆ ಹಾಗೂ ಕುಮಾರಹಳ್ಳಿ ವ್ಯಾಪ್ತಿಯ 10 ಸರ್ವೇ ನಂಬರ್‌ಗಳ ಭೂಮಿ.

ಅರಣ್ಯ ಸಂರಕ್ಷಣೆಗೆ ಎದುರಾದ ಹೊಸ ಸವಾಲು: ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ 48,000 ಎಕರೆ ಹಾಗೂ ಯಸಳೂರು ವಲಯದಲ್ಲಿ 4,600 ಎಕರೆ ಸೇರಿದಂತೆ ವಿಶಾಲ ರಕ್ಷಿತಾರಣ್ಯವಿದೆ. ಕಬ್ಬಿನಾಲೆ (16,000 ಎಕರೆ), ಮೂರಕಣ್ಣುಗುಡ್ಡ (8,000 ಎಕರೆ), ಕೆಂಪುಹೊಳೆ (8,600 ಎಕರೆ), ಕೆಂಚನಕುಮಾರಿ (8,200 ಎಕರೆ) ಹಾಗೂ ಕಾಗಿನರೆ (8,100 ಎಕರೆ) ಅರಣ್ಯ ಪ್ರದೇಶಗಳು ವನ್ಯಜೀವಿಗಳ ಪ್ರಮುಖ ಆವಾಸಸ್ಥಾನಗಳಾಗಿವೆ. ಈಗಾಗಲೇ ಮರಗಳ ಕಳ್ಳಸಾಗಣೆ, ಪ್ರಾಣಿಗಳ ಬೇಟೆ ಹಾಗೂ ಗಾಂಜಾ ಕೃಷಿ ತಡೆಗಟ್ಟಲು ಹೆಣಗಾಡುತ್ತಿರುವ ಅರಣ್ಯ ಇಲಾಖೆಗೆ, ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಎಕರೆ ಅರಣ್ಯವನ್ನೇ ಕಬಳಿಸಲು ಹೊಂಚು ಹಾಕುತ್ತಿರುವ ಭೂಗಳ್ಳರ ಉಪಟಳ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇತ್ತೀಚೆಗಷ್ಟೇ ಕಿರುಹುಣಸೆ ಗ್ರಾಮದಲ್ಲಿ ಸಾಮಾಜಿಕ ಅರಣ್ಯದ 4 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ದುರಸ್ತಿ ಮಾಡಿಕೊಟ್ಟಿದ್ದ ಸರ್ವೇಯರ್ ಹಾಗೂ ಸೂಪರ್‌ವೈಸರ್ ಅಮಾನತಾಗಿದ್ದು, ಮೈಸೂರು ಜಂಟಿ ನಿರ್ದೇಶಕರ ನ್ಯಾಯಾಲಯ ಆ ದುರಸ್ತಿಯನ್ನು ರದ್ದುಗೊಳಿಸಿತ್ತು. ಇದೀಗ ಅದಕ್ಕಿಂತಲೂ ನೂರಾರು ಪಟ್ಟು ದೊಡ್ಡದಾದ ಹಗರಣ ಬೆಳಕಿಗೆ ಬಂದಿದೆ.

532 ಎಕರೆ ಭೂ ಕಬಳಿಕೆ ಯತ್ನ ಪ್ರಕರಣದಲ್ಲಿ ಸೆರೆಯಾಗಿದ್ದ ನೇಮಣ್ಣ ಗೌಡ

ಸರಕಾರಿ ಅಧಿಕಾರಿಗಳ ಹೆಸರು, ಸೀಲ್ ಹಾಗೂ ಸಹಿಗಳನ್ನು ನಕಲಿ ಮಾಡಿ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಸಮೀಪದ ಬಿ.ಎಂ. ಕಾವಲ್‌ನ 532 ಎಕರೆ ಅರಣ್ಯ ಭೂಮಿ ಸೇರಿದಂತೆ ರಾಜ್ಯಾದ್ಯಂತ ಬರೋಬ್ಬರಿ 21,000 ಎಕರೆಗೂ ಅಧಿಕ ಸರಕಾರಿ ಜಮೀನುಗಳನ್ನು ಕಬಳಿಸಲು ಸಂಚು ರೂಪಿಸಿದ್ದ ಕುಖ್ಯಾತ ಭೂಗಳ್ಳ ಎಂ.ಬಿ. ನೇಮಣ್ಣಗೌಡ ಅಲಿಯಾಸ್ ಮನ್ಮಥನನ್ನು ಮೂಡಿಗೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಹಿಂದೆ ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದರು.

ನಕಲಿ ದಾಖಲೆ ಸೃಷ್ಟಿಸಿ 13 ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಭೂಮಿ ಕಬಳಿಸಲು ಯತ್ನಿಸಿರುವುದು ಗಮನಕ್ಕೆ ಬಂದ ತಕ್ಷಣವೇ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದೇನೆ. ಆದರೆ ದೂರು ದಾಖಲಾಗಿ ಇಷ್ಟು ದಿನಗಳಾದರೂ ಪೊಲೀಸರು ಯಾವುದೇ ಪ್ರಮುಖ ಕ್ರಮ ಕೈಗೊಂಡಿಲ್ಲ.

-ಹೇಮಂತ್, ಆರ್‌ಎಫ್‌ಒ, ಸಕಲೇಶಪುರ ವಲಯ

share
ಮಲ್ನಾಡ್ ಮೆಹಬೂಬ್
ಮಲ್ನಾಡ್ ಮೆಹಬೂಬ್
Next Story
X