Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರೀತಿಯ ಮಾತುಗಳಲ್ಲಿ ಅರ್ಥದ ಹುಡುಕಾಟ

ಪ್ರೀತಿಯ ಮಾತುಗಳಲ್ಲಿ ಅರ್ಥದ ಹುಡುಕಾಟ

ರಾಧಾಕೃಷ್ಣ ಕೆ. ಉಳಿಯತ್ತಡ್ಕರಾಧಾಕೃಷ್ಣ ಕೆ. ಉಳಿಯತ್ತಡ್ಕ2 Jun 2026 10:02 AM IST
share
ಪ್ರೀತಿಯ ಮಾತುಗಳಲ್ಲಿ ಅರ್ಥದ ಹುಡುಕಾಟ

‘ಕವಿ’ ಎನ್ನುವ ಶಬ್ದಕ್ಕೆ ವಿಶೇಷವಾದ ಗೌರವವಿದೆ. ಋಷಿಯಾಗದೆ ಯಾರೂ ಕವಿಯಾಗಲಾರರು. ಧ್ಯಾನದಿಂದ ಕಾವ್ಯವನ್ನು ಧೇನಿಸಬಹುದು. ಕವಿಗೆ ಸಿದ್ಧತೆ ಬೇಕು. ಬದ್ಧತೆಯಿರಬೇಕು. ಅಧ್ಯಯನ, ಅನುಭವ ಮಾಗಬೇಕು.

ಸಾಹಿತ್ಯದಲ್ಲಿ ಕಾವ್ಯಕ್ಕೆ ಶ್ರೇಷ್ಠ ಸ್ಥಾನಮಾನವಿದೆ. ಅದು ಶಬ್ದಪ್ರಧಾನ, ಅರ್ಥಪ್ರಧಾನ ಮತ್ತು ಧ್ವನಿ (ಭಾವ) ಪ್ರಧಾನವಾದುದು. ಅಕ್ಷರಗಳ ಅಸ್ತಿತ್ವ ಪಡೆದು ಶಬ್ದಪ್ರಧಾನವಾಗಿ ಅರ್ಥಗಳನ್ನು ವಿಸ್ತರಿಸುತ್ತಾ ಕಾವ್ಯ ಒಂದು ಶಿಲ್ಪವಾಗುತ್ತದೆ. ವಿಭಿನ್ನ ಅರ್ಥಸ್ತರಗಳನ್ನು, ಭಾವ ಪ್ರಪಂಚ ವನ್ನು ತೆರೆದು ತೋರಿಸುತ್ತದೆ. ತೆರೆದಂತೆ ತೆರೆಯುತ್ತ ಹೋಗುವುದೇ ನಿಜವಾದ ಕಾವ್ಯದ ರಹಸ್ಯ ಮತ್ತು ಸ್ವಾರಸ್ಯ. ಅರ್ಥವಾಗದ್ದೇ ಕಾವ್ಯ ಎಂದು ಬರೆಯುತ್ತಾ ಹೋದರೆ ಅದು ವ್ಯರ್ಥ.

ಎಂ. ಶಾಫಿ ಬಂಡಸಾಲ ಅವರು ಸವಿ ಹೃದಯದ ಕವಿ. ಗಡಿನಾಡು ಕಾಸರಗೋಡಿನ ಯುವ ಪ್ರತಿಭೆ. ದುಬೈಯಲ್ಲಿ ಯುವ ಉದ್ಯಮಿಯಾಗಿ ಹೆಸರು ಗಳಿಸಿದವರು. ಬಿಡುವಿಲ್ಲದ ಬದುಕಿನ ನಡುವೆ ಬಿಡುವು ಮಾಡಿಕೊಂಡು ಕಾವ್ಯಕೃಷಿಯಲ್ಲಿ ತೊಡಗಿಸಿದವರು. ‘ಮನದ ಮಾತು’ ಕವನ ಸಂಕಲನವನ್ನು ಹೊರತಂದಿರುವ ಅವರು ವೃತ್ತಿ ಜೀವನದ ಒತ್ತಡಗಳ ಮಧ್ಯೆ ತನ್ನ ಭಾವ-ಅನುಭವ-ಅನುಭಾವಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಅವರ ರಚನೆಗಳಲ್ಲಿ ಬಹಿರಂಗದ ಆಕಾರ, ಅಂತರಂಗದ ಸಂಸ್ಕಾರ ಎರಡನ್ನೂ ಗುರುತಿಸಬಹುದು. ಆದರೆ ಅದು ವಾಚ್ಯತೆಯನ್ನು ಮೀರಿ ಸೂಚ್ಯತೆಯೆಡೆಗೆ ಸಾಗಬೇಕಾಗಿದೆ. ಗದ್ಯಲಯದಿಂದ ಮುಕ್ತವಾಗಿ ಪದ್ಯಗಂಧಿ ನಡಿಗೆಯತ್ತ ಕ್ರಮಿಸಬೇಕಾಗಿದೆ.

‘ಮನದ ಮಾತು’ ಸಂಕಲನದಲ್ಲಿ ಐವತ್ತೈದು ಕವನಗಳನ್ನು ಕಲೆಹಾಕಲಾಗಿದೆ. ಉದಯೋನ್ಮುಖರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಹಿರಿಯ ಪ್ರಸಿದ್ಧ ಲೇಖಕರ ಕೃತಿಗಳನ್ನು ಪ್ರಕಟಿಸುತ್ತಾ ಬಂದಿರುವ ಸುಬ್ಬಯಕಟ್ಟೆಯವರ ಕೈರಳಿ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿ ಸಾಹಿತ್ಯಲೋಕಕ್ಕೆ ಅರ್ಪಿಸಿದೆ. ಪ್ರಕಾಶಕರಾದ ಎ.ಆರ್. ಸುಬ್ಬಯಕಟ್ಟೆಯವರು ಸಾಹಿತ್ಯದ ಮೇಲಿನ ವಿಶೇಷ ಪ್ರೀತಿಯಿಂದ ಮತ್ತು ಕಾಸರಗೋಡಿನಲ್ಲಿ ಕನ್ನಡವನ್ನು ಬಲಪಡಿಸುವ ಸದುದ್ದೇಶದಿಂದ ಕೈರಳಿ ಪ್ರಕಾಶನವನ್ನು ಹುಟ್ಟುಹಾಕಿ ಕಳೆದ ಹದಿನಾರು ವರ್ಷಗಳಿಂದ 28 ಕೃತಿಗಳನ್ನು ಹೊರತಂದಿರುವುದು ಶ್ಲಾಘನೀಯ.

ಸಂಕಲನದ ಕವಿತೆಗಳು ತುಸುವಾಚ್ಯ, ಗದ್ಯಾತ್ಮಕ ಎನಿಸಿದರೂ ಎಲ್ಲೋ ಒಂದು ಕಡೆ ಒಂದು ಹೊಳಹು, ಚಿಂತನೆ, ರೂಪಕ, ಚಿತ್ರ ಬಂದುಹೋಗುತ್ತದೆ. ಅತಿಭಾವುಕತೆ, ಅತಿ ಮಾತುಗಾರಿಕೆ ಅಲ್ಲಲ್ಲಿ ಗೋಚರಿಸಿದರೂ ಕೆಲವೊಮ್ಮೆ ಅದುವೇ ಕಾವ್ಯಶಕ್ತಿಯಾಗಿ ರೂಪಾಂತರಗೊಂಡಿದೆ. ಕವಿ ಯುದ್ಧದ ಕರಾಳ ದೃಶ್ಯವನ್ನು ನೇರವಾಗಿ ಕಂಡು ಅನುಭವಿಸಿದವರು, ಯಾವುದನ್ನೂ ಅರಿಯದ ಮುಗ್ಧ ಮಗುವಿನ ನಿರ್ಮಲ ನಗು ಉಳಿದಿರುವ ತನಕ ಈ ಭೂಮಿಯಲ್ಲಿ ಶಾಂತಿಯ ಕನಸು ಇನ್ನೂ ಜೀವಂತವಾಗಿದೆ ಎಂದು ನಂಬಿದವರು.

ಕವಿತೆ ಭಾವಪೂರ್ಣವಾಗಿ, ರಸ ರಸನೆಯಾಗಿ, ನಾದ ಲಹರಿಯಾಗಿ ಹೊಮ್ಮಿದಾಗ ಅದು ವಿಶೇಷವಾದ ಸ್ಪರ್ಶಾನುಭವ ನೀಡುತ್ತದೆ. ಕವಿ ಕೆಲವೊಮ್ಮೆ ಇರುವವರ ಜತೆ, ಇಲ್ಲದೇ ಇರುವವರ ಜತೆ ಸಂವಹನ ಸಾಧಿಸುತ್ತಾರೆ. ಅವರ ಕಾವ್ಯಧೋರಣೆ, ದೃಷ್ಟಿಕೋನ, ಜೀವನಾದರ್ಶಗಳನ್ನು ತಿಳಿಯಲು ಗಂಡು ಹೆಣ್ಣಿನ ಸಂಬಂಧದ ಕುರಿತು ಅವರಿಗಿರುವ ಅರಿವು ಅರ್ಥವಂತಿಕೆಯನ್ನು ಗಮನಿಸಬಹುದು.

ಮಹಿಳೆ ಅಥವಾ ಸ್ತ್ರೀ ರೂಪವನ್ನು ಕವಿ ಕಾಣುವ ಬಗೆ ವಿಸ್ಮಯ ಮೂಡಿಸುತ್ತದೆ. ಮಗುವಿನಲ್ಲಿ, ಮಗಳಲ್ಲಿ ಪ್ರೀತಿಯನ್ನು ಕಾಣುತ್ತಾರೆ. ಅಮ್ಮನಲ್ಲಿ ಗೌರವ ಭಾವ ತೋರುತ್ತಾರೆ. ಸಹಪಾಠಿಯಾಗಿ, ಗೆಳತಿಯಾಗಿ, ಪ್ರಿಯತಮೆಯಾಗಿ, ಆತ್ಮಸಖಿಯಾಗಿ ನೋಡುತ್ತಾರೆ. ಅಕ್ಷರ ಕಲಿಸಿದ ಶಿಕ್ಷಕಿಯಲ್ಲೂ ಕವಿತ್ವವನ್ನು, ಕಲಾವಿದೆಯನ್ನು, ಗಾಯಕಿಯನ್ನು ದರ್ಶಿಸುವ ಶಾಫಿಯವರ ಹೃದಯದಲ್ಲಿ ಶಿಕ್ಷಕಿಯ ಹೆಜ್ಜೆಗುರುತುಗಳು ಪ್ರೀತಿಯ ನಕ್ಷತ್ರಗಳಾಗಿ ಹೊಳೆಯುತ್ತವೆ. ಗುರುವಾಗಿ ಬೆಳಗಿಸಿದ ಜ್ಞಾನದೀಪ ಆರಿಹೋದಾಗ ಕವಿಯ ಅನಾಥಹೃದಯ ಆರ್ದ್ರವಾಗುತ್ತದೆ. ‘ಹೃದಯದಲ್ಲಿ ಉಳಿದ ಹಕ್ಕಿ’ ಎಂಬ ಶೀರ್ಷಿಕೆಯನ್ನು ‘ಹೃದಯದಲ್ಲಿ ಉಲಿದ ಹಕ್ಕಿ’ ಎಂದು ಬದಲಾಯಿಸಿದ್ದರೆ ಅರ್ಥ ವಿಸ್ತಾರವಾಗುತ್ತಿತ್ತು.

ತಾಯ್ನಾಡು ಭಾರತದ ಬಗ್ಗೆ ಹೆಮ್ಮೆಪಡುವ ಕವಿ ಮರಳಿನ ಮಡಿಲಲ್ಲಿ ಮೌನವಾಗಿ ಮಲಗಿದ್ದ ದುಬೈ ಮಾಯೆಯ ಸ್ಪರ್ಶದಿಂದ ಮಧುರ ಸ್ವರ್ಗವಾಗಿ ಅರಳಿ ಬದುಕಿಗೆ ನೆಲೆಯಾದದ್ದನ್ನು ನೆನಪಿಸುತ್ತಾರೆ. ತಾಯಂದಿರ ದಿನದಲ್ಲೂ ಬದುಕನ್ನು ಬೆಳಗಿಸಿದ ಅಪ್ಪನನ್ನು ಸ್ಮರಿಸುತ್ತಾರೆ. ಅಕ್ಷರದ ಬೆಳಕನ್ನು ನೀಡಿದ ಶಾಲೆಯನ್ನು ಮರೆಯುವುದಿಲ್ಲ. ಬಂಡಸಾಲ ವಿದೇಶದಲ್ಲಿ ದುಡಿಯುತ್ತಿರುವವರು. ತವರ ನೆನಪು ಅವರನ್ನು ಆಗಾಗ ಕಾಡುತ್ತದೆ. ಹೃದಯಕ್ಕೆ ಜೀವ ತುಂಬಿದ ತವರೂರಿನ ಜನ-ಜೀವನ ಇಲ್ಲಿ ಕವಿತೆಯಾಗಿದೆ.

ಪ್ರೀತಿ, ನಿರಾಶೆ, ನೋವು, ಯಾತನೆ, ವಿರಹ, ಸರಸ - ಹೀಗೆ ಎಲ್ಲ ವಸ್ತುಗಳ ಕವಿತೆಗಳು ಸಂಕಲನದಲ್ಲಿವೆ.

ಸಂಕಲನದ ಹೆಚ್ಚಿನ ಕವನಗಳೂ ಸ್ತ್ರೀ ಕೇಂದ್ರಿತವಾಗಿದ್ದು ಹೆಣ್ಣಿನ ಕುರಿತು ಮತ್ತೆ ಮತ್ತೆ ಹೇಳುವ, ಒಂದೇ ವಸ್ತುವನ್ನು ಬೇರೆ ಬೇರೆ ಆಯಾಮಗಳಲ್ಲಿ ದರ್ಶಿಸುವ ಕೆಲಸ ಇಲ್ಲಿ ನಡೆದಿದೆ. ಶಾಫಿ ಬಂಡಸಾಲ ಅವರದು ಅರ್ಥ ಹುಡುಕಲು ಹವಣಿಸುವ ಕವನಗಳು. ಅರ್ಥದ ಹಿಂದಿರುವ ಕಾವ್ಯಶಕ್ತಿಯ ಶೋಧನೆಯನ್ನು ಅವರು ಓದುಗರಿಗೆ ಬಿಟ್ಟಿದ್ದಾರೆ. ಅವರಿಗೆ ಕಾವ್ಯ ಕಟ್ಟುವ ಕಲೆ ಗೊತ್ತಿದೆ. ಸರಳ ಶಬ್ದಗಳಲ್ಲಿ ನೇರನುಡಿಯಲ್ಲಿ ವಿಚಾರಗಳನ್ನು ಅಭಿವ್ಯಕ್ತಿಸಲು ಹೊರಟಿದ್ದಾರೆ. ಕಾವ್ಯ ಎಂದೂ ಸಂಕೀರ್ಣವಾಗಬಾರದು. ಸರಳವಾಗಿರಬೇಕು. ಎಲ್ಲಾ ವರ್ಗದ ಓದುಗರಿಗೆ ಅರ್ಥವಾಗಬೇಕೆಂಬ ನಿಲುವು ಅವರದು. ಆದರೆ ವಸ್ತುವಿನ ಆಯ್ಕೆಯಲ್ಲಿ ಇನ್ನಷ್ಟು ಗಮನಹರಿಸಬೇಕಾಗಿದೆ. ವಿಷಯದಲ್ಲಿ ಏಕತಾನತೆ ಇದೆ. ಆಶಯಗಳು ಪುನರಾವರ್ತನೆಗೊಂಡಿದೆ. ಬರೆದದ್ದೆಲ್ಲವನ್ನು ಪ್ರಕಟಿಸುವ ಮೊದಲು ಮತ್ತೆ ಮತ್ತೆ ಮುರಿದು ಕಟ್ಟುತ್ತಾ ಗಟ್ಟಿಗೊಳಿಸುತ್ತಾ ಹೋದರೆ ಅವರಿಂದ ಇನ್ನಷ್ಟು ಉತ್ತಮ ರಚನೆಗಳನ್ನು ನಿರೀಕ್ಷಿಸಬಹುದಾಗಿದೆ.

Tags

meaningwords of love
share
ರಾಧಾಕೃಷ್ಣ ಕೆ. ಉಳಿಯತ್ತಡ್ಕ
ರಾಧಾಕೃಷ್ಣ ಕೆ. ಉಳಿಯತ್ತಡ್ಕ
Next Story
X