Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಸ್‌ಐಆರ್ | ಬಿಎಲ್‌ಒಗಳಿಗೆ ಮಾಹಿತಿ...

ಎಸ್‌ಐಆರ್ | ಬಿಎಲ್‌ಒಗಳಿಗೆ ಮಾಹಿತಿ ಕೊರತೆ; ಆರೋಪ

ಬಾವಸಲಿ ರಾಯಚೂರುಬಾವಸಲಿ ರಾಯಚೂರು15 July 2026 7:43 AM IST
share
ಎಸ್‌ಐಆರ್ | ಬಿಎಲ್‌ಒಗಳಿಗೆ ಮಾಹಿತಿ ಕೊರತೆ; ಆರೋಪ
ಉತ್ಸಾಹ ಕಳೆದುಕೊಳ್ಳುತ್ತಿರುವ ಬಿಎಲ್‌ಎಗಳು

ರಾಯಚೂರು: ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದ್ದರೂ ಡಿಜಿಟಲೈಜೇಶನ್ ಮಂದಗತಿಯಲ್ಲಿ ಸಾಗಿದ್ದು ಬಿಎಲ್‌ಒಗಳಿಗೆ ಅನೇಕ ತೊಡಕು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ, ಕಾರ್ಯಕ್ಷೇತ್ರದಲ್ಲಿ ಬಿಎಲ್‌ಒಗಳ ಜೊತಗೂಡಲು ರಾಜಕೀಯ ಪಕ್ಷಗಳು ನೇಮಿಸಿರುವ ಏಜೆಂಟರು (ಬಿಎಲ್‌ಎ)ಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜೂನ್ 30ರಿಂದ ಆರಂಭವಾದ ಗಣತಿ ನಮೂನೆ ವಿತರಣೆ (ಇನ್ಯುಮರೇಶನ್) ಹಾಗೂ ಡಿಜಿಟೈಸೇಶನ್ ಕಾರ್ಯ ನಡೆಯುತ್ತಿದೆ. ಅಲ್ಲದೆ 1,769 ಮತದಾರರು ಆನ್ಲೈನ್ ಮೂಲಕ ಸ್ವತಃ ನಮೂನೆ ಸಲ್ಲಿಸಿದ್ದಾರೆ ಜಿಲ್ಲೆಯಲ್ಲಿ 1,853 ಮತಗಟ್ಟೆಗಳಿದ್ದು, ಒಟ್ಟು ಮತದಾರರಲ್ಲಿ ಶೇ.92.03ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಮತದಾರರಿಗೆ ಗಣತಿ ನಮೂನೆ ವಿತರಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಒಟ್ಟು 17,14,559 ಮತದಾರರಿದ್ದು, ಅವರಲ್ಲಿ 17,13,117 (ಶೇ.99.92) ಮಂದಿಗೆ ಗಣತಿ ನಮೂನೆ ವಿತರಿಸಲಾಗಿದೆ.

ಇದುವರೆಗೆ 7,55,818 (ಶೇ.44.08) ನಮೂನೆಗಳನ್ನು ಡಿಜಿಟೈಸೇಶನ್ ಮಾಡಲಾಗಿದೆ. ಪರಿಷ್ಕರಣೆ ವೇಳೆ 6,411 ಮೃತ ಮತದಾರರು, 9,370 ಶಾಶ್ವತವಾಗಿ ಸ್ಥಳಾಂತರಗೊಂಡವರು, 2,643 ಈಗಾಗಲೇ ಬೇರೆಡೆ ನೋಂದಾಯಿತರಾಗಿರುವವರು, 235 ಗೈರುಹಾಜರಿದ್ದ ಮತದಾರರು ಹಾಗೂ 30 ಇತರೆ ಪ್ರಕರಣಗಳು ಸೇರಿದಂತೆ ಒಟ್ಟು 18,689 ಪರಿಶೀಲನೆಗೆ ಒಳಪಟ್ಟ ಪ್ರಕರಣಗಳು ದಾಖಲಾಗಿವೆ.

ಗಣತಿ ನಮೂನೆ ವಿತರಣೆ ಮಾಡುವುದು ವೇಗವಾದರೂ ಡಿಜಿಟೈಸೇಶನ್ ಮಂದಗತಿಯಲ್ಲಿ ನಡೆಯುತ್ತಿದ್ದು ಅನೇಕ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅಲ್ಲದೆ ಬಿಎಲ್ಒಗಳಿಗೆ ಪ್ರಾಯೋಗಿಕ ತರಬೇತಿ ನೀಡದೇ ನೇರವಾಗಿ ಫೀಲ್ಡ್‌ಗೆ ಕಳುಹಿಸಲಾಗಿದೆ ಎನ್ನಲಾಗಿದ್ದು, ಇದರ ಪರಿಣಾಮ ಬಿಎಲ್‌ಒಗಳು ಅನೇಕ ಸವಾಲುಗಳನ್ನು ಎದುರಿಸಿದ್ದು, ಗೊಂದಲದ ಗೂಡಾಗಿ ಒತ್ತಡಕ್ಕೆ ಗುರಿಯಾಗಿದ್ದಾರೆ ಎಂದು ಬಿಎಲ್‌ಎಗಳು ಆರೋಪಿಸಿದ್ದಾರೆ. ಬಿಎಲ್‌ಒಗಳಿಗೆ ಸಮರ್ಪಕ ತರಬೇತಿ ನೀಡದೆ ನೇರವಾಗಿ ಕ್ಷೇತ್ರಕಾರ್ಯಕ್ಕೆ ನಿಯೋಜಿಸಿರುವುದರಿಂದ ನಮೂನೆ ಭರ್ತಿ, ದಾಖಲೆ ಪರಿಶೀಲನೆ ಹಾಗೂ ಆನ್ಲೈನ್‌ನಲ್ಲಿ ಮಾಹಿತಿ ದಾಖಲಿಸುವ ಕುರಿತು ಗೊಂದಲ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೆಲವು ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ, ನಿಧಾನಗತಿಯ ಇಂಟರ್ನೆಟ್ ಹಾಗೂ ಪೋರ್ಟಲ್ನಲ್ಲಿ ಮಾಹಿತಿ ಅಪ್ಲೋಡ್ ಆಗದಿರುವುದು ಡಿಜಿಟೈಸೇಶನ್ ವಿಳಂಬಕ್ಕೆ ಕಾರಣವಾಗಿದೆ. ಇದರಿಂದ ಬಿಎಲ್‌ಒಗಳು ಕ್ಷೇತ್ರಕಾರ್ಯ ಮತ್ತು ಡಿಜಿಟಲ್ ದಾಖಲಾತಿ ಎರಡನ್ನೂ ಏಕಕಾಲದಲ್ಲಿ ನಿರ್ವಹಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಕುಂಠಿತಗೊಂಡ ಬಿಎಲ್‌ಎಗಳ ಆರಂಭಿಕ ಉತ್ಸಾಹ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದ್ದರೂ ರಾಜಕೀಯ ಪಕ್ಷಗಳು ನಿಯೋಜಿಸಿರುವ ಮತಗಟ್ಟೆ ಏಜೆಂಟರು (ಬಿಎಲ್‌ಎ) ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಗುರುತು ಬಹಿರಂಗಪಡಿಸಿಕೊಳ್ಳಲು ಇಚ್ಛಿಸದ ಬಿಎಲ್‌ಗಳು ಅಳಲು ತೋಡಿಕೊಂಡಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನಿಯೋಜಿಸಿದ್ದ ಮತಗಟ್ಟೆ ಏಜೆಂಟರು (ಬಿಎಲ್‌ಎ) ಬಿಎಲ್‌ಒಗಳೊಂದಿಗೆ ಮನೆಮನೆಗೆ ತೆರಳಿ ಗಣತಿ ನಮೂನೆ ವಿತರಿಸುವುದು ಮತ್ತು ಮತದಾರರಿಗೆ ನಮೂನೆ ಭರ್ತಿ ಮಾಡಲು ನೆರವಾಗುತ್ತಿದ್ದರು. ಕೆಲವೆಡೆ ಶಾಲಾ ಆವರಣ ಹಾಗೂ ಬಡಾವಣೆಯ ಕಟ್ಟೆಗಳಲ್ಲಿ ಕುಳಿತು ಮತದಾರರನ್ನು ಗುಂಪು ಗುಂಪಾಗಿ ಸೇರಿಸಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿತ್ತು. ಇದರಿಂದ ಬಿಎಲ್‌ಒಗಳ ಕೆಲಸದ ಒತ್ತಡವೂ ಕಡಿಮೆಯಾಗಿತ್ತು.

ಆದರೆ, ಈಗ ಆರಂಭದಲ್ಲಿ ತೋರಿದ ಉತ್ಸಾಹ ಈಗ ಕಡಿಮೆಯಾಗಿದೆ. ಬಿಎಲ್‌ಎಗಳು ಸ್ಥಳೀಯರಾಗಿದ್ದರಿಂದ ಮತಗಟ್ಟೆ ಅಧಿಕಾರಿಗಳಿಗೆ ಮನೆಗಳ ಹುಡುಕಾಟಕ್ಕೆ ಸಮಸ್ಯೆಯಾಗಿರಲಿಲ್ಲ, ಶಾಲೆಯ ಆವರಣ,ಕಟ್ಟೆಗಳಲ್ಲಿ ಕುಳಿತು ಗುಂಪು ಗುಂಪಾಗಿ ಗಣತಿ ನಮೂನೆ ತುಂಬಿ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಬಿಜೆಪಿ,ಜೆಡಿಎಸ್ ನಾಯಕರಿಂದ ಆಕ್ಷೇಪ, ಚುನಾವಣೆ ಆಯೋಗಕ್ಕೆ ದೂರು ನೀಡಿದ ಬಳಿಕ ಮನೆಮನೆಗಳಿಗೆ ತೆರಳಲು ಹಿಂಜರಿದ ಬಿಎಲ್‌ಎ ಗಳು ನಿರುತ್ಸಾಹ ತೋರಿ ಈಗ ಸಂಪೂರ್ಣ ಹಿಂದೆ ಸರಿದಿದ್ದಾರೆ. ಬಿಎಲ್ ಒಗಳೇ ಮತದಾರರ ಮನೆ ಮನೆಗೆ ತೆರಳಿ ಅರ್ಜಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಕೆಲವರ ವಿಳಾಸ ಪತ್ತೆಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಹೇಳಿಕೆ, ಟೀಕೆಗೆ ಸೀಮಿತವಾದ ಕಾಂಗ್ರೆಸ್ ನಾಯಕರು :

ಎಸ್‌ಐಆರ್‌ಅನ್ನು ಆರಂಭದಲ್ಲಿ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ, ಸುದ್ದಿಗೋಷ್ಠಿ, ವೇದಿಕೆ ಕಾರ್ಯಕ್ರಮ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿ ಎರಡು ವಾರಗಳಾದರೂ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಸಂಸದ ಜಿ.ಕುಮಾರ ನಾಯಕ, ಲಿಂಗಸುಗೂರು ಮಾಜಿ ಶಾಸಕ ಡಿಎಸ್ ಹುಲಿಗೇರಿ ಅವರು ಕೇವಲ ಕಾರ್ಯಕರ್ತರಿಗೆ ಕೆಲಸ ನೀಡಿ ತಾವು ಗ್ರೌಂಡ್ ಲೆವೆಲ್‌ನಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಇನ್ನೊಂದೆಡೆ, ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಬಿಎಲ್‌ಎ ಗಳನ್ನಾಗಿ ನಿಯೋಜಿಸಿ ಅವರ ವಿವರಗಳನ್ನು ಚುನಾವಣೆ ಆಯೋಗಕ್ಕೆ ಒಪ್ಪಿಸಿವೆ. ಆದರೆ, ಬಿಎಲ್‌ಎ ಆಗಿ ನೇಮಕಗೊಂಡಿರುವ ಕಾರ್ಯಕರ್ತರ ವಿವರ ಸ್ವತಃ ಸ್ಥಳೀಯ ಕಾರ್ಯಕರ್ತರಿಗೆ ತಿಳಿದಿಲ್ಲ.

ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 250 ಬಿಎಲ್‌ಒಗಳು ಹಾಗೂ 250 ಬಿಎಲ್‌ಒ ಸಹಾಯಕರನ್ನು ನೇಮಕ ಮಾಡಲಾಗಿದೆ. ಆದರೂ, ಬಹುತೇಕ ಮತಗಟ್ಟೆ ವ್ಯಾಪ್ತಿಗಳಲ್ಲಿ ಬಿಎಲ್‌ಎಗಳು ಕ್ಷೇತ್ರಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎಂಬ ದೂರುಗಳಿವೆ.

ಬಿಎಲ್‌ಒಗಳ ನೆರವಿಗೆ ಸಹಾಯಕರ ನಿಯೋಜನೆ, ಅನೇಕರು ಗೈರು :

ಭಾರತ ಚುನಾವಣಾ ಆಯೋಗದ ನಿರ್ದೇಶನಗಳ ಅನುಸಾರ 54-ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ, ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಪೂರ್ಣಗೊಳಿಸುವ ಉದ್ದೇಶದಿಂದ, ಮಹಾನಗರ ಪಾಲಿಕೆ ಸಿಬ್ಬಂದಿ ವರ್ಗದವರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರನ್ನು ಬಿಎಲ್‌ಒ ಸಹಾಯಕರಾಗಿ ನಿಯೋಜಿಸಲಾಗಿದೆ.

ನಿಯೋಜಿತ ಸಿಬ್ಬಂದಿಯು ಸಂಬಂಧಪಟ್ಟ ಬಿಎಲ್‌ಒಗಳೊಂದಿಗೆ ಸಮನ್ವಯ ಸಾಧಿಸಿ, ಮನೆ-ಮನೆ ಭೇಟಿ, ಮತದಾರರ ಮಾಹಿತಿ ಪರಿಶೀಲನೆ, ಎಣಿಕೆ ನಮೂನೆಗಳ ಭರ್ತಿ, ಅಗತ್ಯ ದಾಖಲೆಗಳ ಪರಿಶೀಲನೆ, ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿ ಮಾಹಿತಿಯನ್ನು ದಾಖಲಿಸುವುದು/ಅಪ್ಲೋಡ್ ಮಾಡುವುದು, ಮತದಾರರಿಗೆ ಅಗತ್ಯ ಮಾರ್ಗದರ್ಶನ ನೀಡುವುದು ಹಾಗೂ ಚುನಾವಣಾ ಆಯೋಗದಿಂದ ಕಾಲಕಾಲಕ್ಕೆ ನೀಡಲಾಗುವ ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಆದರೆ, ಆರಂಭದಲ್ಲಿ ಪಾಲ್ಗೊಳ್ಳದ ಸಹಾಯಕರು ಜಿಲ್ಲಾಧಿಕಾರಿ ಪೂವಿತಾ ಎಸ್ ಹಾಗೂ ಪಾಲಿಕೆಯ ಆಯುಕ್ತ ಜುಬೀನ್ ಮೊಹಪಾತ್ರ ಅವರು ಸಹಾಯಕರಾಗಿ ನೇಮಕಗೊಂಡವರು ಮಾತೃ ಇಲಾಖೆಯ ಕೆಲಸದಂತೆ ಬಿಎಲ್‌ಒಗಳ ಜೊತೆ ಕೆಲಸ ಮಾಡಬೇಕು ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಬಳಿಕವಷ್ಟೇ ಕೆಲಸಕ್ಕೆ ಹಾಜರಾಗಿದ್ದಾರೆ.

ನನ್ನ ಬೂತ್ ನಲ್ಲಿ 964 ಮತದಾರರು ಇದ್ದಾರೆ, ಸಂಕನೂರು ಹಾಗೂ ಏಗನೂರು ಗ್ರಾಮ ನನ್ನ ವ್ಯಾಪ್ತಿಗೆ ಬರುತ್ತದೆ ಬಹುತೇಕರಿಗೆ ಎನ್ಯುಮರೇಶನ್ ಫಾರ್ಮ್ ನೀಡಿದ್ದು 138 ಡಿಜಿಟೈಸೇಶನ್ ಮಾಡಿರುವೆ, 800 ಆನ್ ಲೈನ್ ಫಾರ್ಮ್ ಎಂಟ್ರಿ ಆಗಿದೆ. 70 ಮತದಾರರು ಮೃತಪಟ್ಟಿರಬಹುದು ಡಿಲೆಟ್ ಮಾಡುವ ಸಾಧ್ಯತೆ ಇದೆ

-ಪವನ್ ಕಲ್ಯಾಣ್, ಬಿಎಲ್‌ಒ, ಬೂತ್ ನಂ.1 ರಾಯಚೂರು ನಗರ


Tags

SIRBLO
share
ಬಾವಸಲಿ ರಾಯಚೂರು
ಬಾವಸಲಿ ರಾಯಚೂರು
Next Story
X