Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಎಸ್‌ಐಆರ್: ಯಾರ ಹಕ್ಕನ್ನು ಕಸಿಯುವ...

ಎಸ್‌ಐಆರ್: ಯಾರ ಹಕ್ಕನ್ನು ಕಸಿಯುವ ಕಸರತ್ತು?

ಎನ್. ಕೇಶವ್ಎನ್. ಕೇಶವ್23 Jan 2026 10:51 AM IST
share
ಎಸ್‌ಐಆರ್: ಯಾರ ಹಕ್ಕನ್ನು ಕಸಿಯುವ ಕಸರತ್ತು?

ಎಸ್‌ಐಆರ್ ಎಂಬುದು ಕೋಟ್ಯಂತರ ಭಾರತೀಯರ ಮತವನ್ನು ಅಪಾಯಕ್ಕೆ ತಳ್ಳಿರುವ ಹಾಗಿದೆ.

ಸೈದ್ಧಾಂತಿಕವಾಗಿ, ಈ ಎಸ್‌ಐಆರ್ ಮತದಾನದ ಹಕ್ಕನ್ನು ಮತ್ತಷ್ಟು ಖಚಿತಪಡಿಸಬೇಕು. ಇದರಲ್ಲಿ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಸರಿಪಡಿಸಲಾಗುತ್ತದೆ. ಆದರೆ ಚುನಾವಣಾ ಆಯೋಗ ತನ್ನ ಆತುರ ಮತ್ತು ಒತ್ತಡದಲ್ಲಿ ಈ ಹಕ್ಕನ್ನೇ ಅನೇಕರಿಂದ ಕಸಿಯುತ್ತಿರುವ ಹಾಗಿದೆ.

ಇದು ದಶಕಗಳಲ್ಲಿ ಕೈಗೊಳ್ಳಲಾಗುತ್ತಿರುವ ಮತದಾರರ ಪಟ್ಟಿಗಳ ಅತಿದೊಡ್ಡ ಪ್ರಮಾಣದ ಪರಿಷ್ಕರಣೆಯಾಗಿದೆ.

ಮತದಾರರ ಪಟ್ಟಿಯನ್ನು ಶುದ್ಧೀಕರಿಸಲಾಗುತ್ತಿದೆ ಎಂದು ಅಧಿಕೃತವಾಗಿ ಹೇಳಲಾಗುತ್ತಿದೆ. ಆಯೋಗದ ಪ್ರಕಾರ, ತಪ್ಪು ಹೆಸರುಗಳನ್ನು ಅಳಿಸಲಾಗುತ್ತಿದೆ. ಮತದಾರರ ನಕಲು ತಡೆಯಲಾಗುತ್ತಿದೆ. ಹೊಸ ಹೆಸರುಗಳನ್ನು ಸೇರಿಸಲಾಗುತ್ತಿದೆ. ಆದರೆ ನಿಜವಾಗಿಯೂ ಅಷ್ಟು ಮಾತ್ರವೇ ನಡೆಯುತ್ತಿದೆಯೇ?

ವಿರೋಧ ಪಕ್ಷಗಳು ಮತ್ತು ತಜ್ಞರು ಇದು ಕೇವಲ ಮತದಾರರ ಪಟ್ಟಿ ಪರಿಷ್ಕರಣೆಯಲ್ಲ ಎಂದು ಹೇಳುತ್ತಿದ್ದಾರೆ. ಇದು ಅಲ್ಪಸಂಖ್ಯಾತರ ಮತದಾನದ ಹಕ್ಕುಗಳನ್ನು ಕಸಿಯುವ, ಅವರನ್ನು ಹೊರಗಿಡುವ ಕಸರತ್ತು ಎನ್ನಲಾಗುತ್ತಿದೆ.

ಚುನಾವಣೆಗಳು ನಡೆಯಲಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗ ಈ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ.

ಇತ್ತೀಚಿನ ಕರಡು ಪಟ್ಟಿಯ ನಂತರ, ಈ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 6.5 ಕೋಟಿ ಮತದಾರರ ಹೆಸರುಗಳನ್ನು, ಅಂದರೆ ಒಟ್ಟು ನೋಂದಾಯಿತ ಮತದಾರರಲ್ಲಿ ಸುಮಾರು ಶೇ. 13ರಷ್ಟು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಂದರೆ, ಪ್ರತೀ 8 ಮತದಾರರಲ್ಲಿ ಒಬ್ಬರನ್ನು ಅಳಿಸಲಾಗಿದೆ.

ಎಂಥ ಸ್ಥಿತಿ ಬಂದಿದೆಯೆಂದರೆ, ಪ್ರಸಿದ್ಧ ನಟರು, ನೊಬೆಲ್ ಪ್ರಶಸ್ತಿ ವಿಜೇತರು, ಕ್ರೀಡಾಪಟುಗಳು, ಸೈನಿಕರು, ಕವಿಗಳೆಲ್ಲ ತಮ್ಮ ಗುರುತು ಮತ್ತು ಪೌರತ್ವವನ್ನು ಮತ್ತೆ ಸಾಬೀತುಪಡಿಸಬೇಕಾಗಿದೆ.

ಮುಸ್ಲಿಮ್ ಸಮುದಾಯವನ್ನು ಬಹಿರಂಗವಾಗಿ ಗುರಿಯಾಗಿಸಲಾಗುತ್ತಿದೆ ಎಂಬ ಸ್ಪಷ್ಟ ಚಿತ್ರಗಳೂ ಇವೆ.

ಈ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುತ್ತಿರುವ ಚುನಾವಣಾ ಕಾರ್ಯಕರ್ತರು, ಬೂತ್ ಮಟ್ಟದ ಅಧಿಕಾರಿಗಳು ತುಂಬಾ ಒತ್ತಡದಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಹಲವರು ಈ ಕೆಲಸದ ಒತ್ತಡದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೆ ಕೆಲವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ.

ದೊಡ್ಡ ಪ್ರಮಾಣದ ದುರುಪಯೋಗ ಮತ್ತು ನಿಯಮಗಳ ಉಲ್ಲಂಘನೆಯ ವರದಿಗಳೂ ಇವೆ. ಇದರಲ್ಲಿ ಚುನಾವಣಾ ಆಯೋಗದ ಎಐ ಸಾಫ್ಟ್‌ವೇರ್ ಕೋಟ್ಯಂತರ ಜನರನ್ನು ಅನುಮಾನದ ಕಣ್ಣಿಂದ ನೋಡಿದೆ. ಅವರು ಮತ್ತೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿದೆ.

ಕೋಟ್ಯಂತರ ಭಾರತೀಯರ ಮತದಾನದ ಹಕ್ಕುಗಳು ಸುರಕ್ಷಿತವಾಗಿಲ್ಲದಿದ್ದರೆ ಪ್ರಜಾಪ್ರಭುತ್ವ ಹೆಸರಿಗೆ ಮಾತ್ರವೇ ಎಂಬ ಪ್ರಶ್ನೆಯೂ ಎದ್ದಿದೆ.

ನ್ಯಾಯಾಲಯ ಇದನ್ನೆಲ್ಲಾ ನೋಡುತ್ತಿದ್ದರೂ ಮತ್ತು ಬಹಳಷ್ಟು ದುಷ್ಕೃತ್ಯಗಳು ನಡೆಯುತ್ತಿವೆ ಎಂದು ತಿಳಿದಿದ್ದರೂ, ಎಸ್‌ಐಆರ್ ಅನ್ನು ಏಕೆ ನಿಲ್ಲಿಸಲಿಲ್ಲ?

ಜನವರಿಯಲ್ಲಿ ಪ್ರಕಟವಾದ ಕರಡು ಪಟ್ಟಿ ಪ್ರಕಾರ, 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 6.5 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.

ಉತ್ತರ ಪ್ರದೇಶದಲ್ಲಿ ಸುಮಾರು 3 ಕೋಟಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಈ ಹಿಂದೆ ಅಲ್ಲಿ ಸುಮಾರು 15 ಕೋಟಿ ಮತದಾರರಿದ್ದರು. ಗುಜರಾತ್‌ನಲ್ಲಿ 70 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿದೆ.ಬಂಗಾಳದಲ್ಲಿ 58 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಳಿಸಲಾಗಿರುವುದು ಅಕ್ರಮ ಬಾಂಗ್ಲಾದೇಶಿ ಮತದಾರರ ಹೆಸರುಗಳು ಎಂದು ಬಿಜೆಪಿ ಕಥೆ ಹೇಳುತ್ತಿದೆ. ಇವುಗಳಲ್ಲಿ ಹೆಚ್ಚಿನವು ಮುಸ್ಲಿಮರ ಹೆಸರುಗಳು ಎಂದು ಸ್ಪಷ್ಟವಾಗಿ ಹೇಳಲಾಗುತ್ತದೆ.

ಎಸ್‌ಐಆರ್ ಕೆಲಸ ಪೌರತ್ವ ಗುರುತಿಸುವುದು ಮತ್ತು ಜನರನ್ನು ಹೊರಹಾಕುವುದಲ್ಲ ಎಂಬುದು ಬೇರೆ ವಿಷಯ. ಆದರೂ, ಈ ಡೇಟಾ ಬೇರೆ ಏನನ್ನೋ ತೋರಿಸುತ್ತದೆ ಮತ್ತು ಹೇಳುತ್ತದೆ.

ಉತ್ತರ ಪ್ರದೇಶ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಎಸ್‌ಐಆರ್ ಸಮಯದಲ್ಲಿ ಬೃಹತ್ ದುರುಪಯೋಗ, ತಪ್ಪುಗಳು ಮತ್ತು ಕುಶಲತೆಯ ಆಟ ನಡೆದಿರುವುದಾಗಿ ಹೇಳಲಾಗುತ್ತಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂದೂ ಮತದಾರರನ್ನು ಮುಸ್ಲಿಮ್ ಕುಟುಂಬಗಳ ವಿಳಾಸಗಳಿಗೆ ಲಿಂಕ್ ಮಾಡಲಾಗಿದೆ ಎಂಬುದು ಬಹಿರಂಗವಾದಾಗ ತನಿಖೆಗೆ ಆದೇಶಿಸಲಾಗಿದೆ. ರಾಜಸ್ಥಾನದ ಬಿಎಲ್‌ಒ ಒಬ್ಬರ ವೀಡಿಯೊ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಮುಸ್ಲಿಮ್ ಮತಗಳನ್ನು ಅಳಿಸಲು ಹೇಗೆ ಒತ್ತಡ ಹೇರಲಾಗುತ್ತಿದೆ ಎಂಬುದರ ಕುರಿತು ಹೇಳಿದ್ದಾರೆ.

ಜೈಪುರದ ಹವಾ ಮಹಲ್ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ ಕೀರ್ತಿ ಕುಮಾರ್, ಕರಡು ಮತದಾರರ ಪಟ್ಟಿಯಿಂದ 470 ಮತದಾರರ ಹೆಸರುಗಳನ್ನು ತೆಗೆದುಹಾಕಲು ಬಿಜೆಪಿ ತನ್ನ ಮೇಲೆ ಒತ್ತಡ ಹೇರುತ್ತಿದೆ ಎಂದಿದ್ದಾರೆ. ಇದು ಅವರ ಬೂತ್‌ನ ಮತದಾರರ ಸಂಖ್ಯೆಯ ಸುಮಾರು ಶೇ. 40ರಷ್ಟಾಗಿದೆ. ನಿರ್ದಿಷ್ಟವಾಗಿ ಮುಸ್ಲಿಮ್ ಮತದಾರರನ್ನು ಟಾರ್ಗೆಟ್ ಮಾಡಲಾಗಿದೆ ಎಂಬುದು ಕುಮಾರ್ ಅವರ ಆರೋಪ.

ರಾಜಸ್ಥಾನದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಕಡಿಮೆ ಅಂತರದಿಂದ ಗೆದ್ದ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿರುವ ಬಗ್ಗೆ ಅದು ಆರೋಪಿಸುತ್ತಿದೆ. ಕಾಂಗ್ರೆಸ್ ಮತ ಬ್ಯಾಂಕ್ ತುಂಬಾ ಪ್ರಬಲವಾಗಿರುವ ಅಥವಾ ದಲಿತ, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಮತದಾರರ ಸಂಖ್ಯೆ ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಸುಮಾರು 1 ಕೋಟಿ ಮತದಾರರನ್ನು ಗುರುತಿಸಲಾಗಿದೆ ಅಥವಾ ವಿಚಾರಣೆಗೆ ಒಳಪಡಿಸಲಾಗಿದೆ. ಇದರಿಂದಾಗಿ ಜನರಲ್ಲಿ ಭಯ ಮತ್ತು ಕೋಪವಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಸ್‌ಐಆರ್ ದುರುಪಯೋಗದ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಆಯೋಗಕ್ಕೆ ಪತ್ರಗಳನ್ನು ಬರೆದಿದ್ದಾರೆ.

ಜನವರಿ 12ರಂದು ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಐದನೇ ಪತ್ರ ಕಳುಹಿಸಿದ್ದಾರೆ. ಎಸ್‌ಐಆರ್ ಮೂಲತಃ ದೋಷಪೂರಿತವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಎಐ ಸಾಫ್ಟ್‌ವೇರ್ ಮೂಲಕ ಮತದಾರರ ಪಟ್ಟಿ ಡಿಜಿಟಲೀಕರಣದ ನಂತರ ಬಹಳ ತಪ್ಪುಗಳಾಗಿರುವ ಬಗ್ಗೆ ಅವರು ಹೇಳುತ್ತಿದ್ದಾರೆ.

ಯಾರನ್ನೂ ಕೇಳದೆ ಮತ್ತು ಸರಿಯಾದ ಪರೀಕ್ಷೆಯಿಲ್ಲದೆ ಬಂಗಾಳದಲ್ಲಿ ಎಸ್‌ಐಆರ್‌ಗಾಗಿ ಆಯೋಗ ಎಐ ಅನ್ನು ಬಳಸಿತು. ಕಾರಣವಿಲ್ಲದೆ ಜನರಿಗೆ ಸಮನ್ಸ್ ಕಳುಹಿಸುವುದು ನಡೆಯಿತು. ಇದು ಜನರನ್ನು ತುಂಬಾ ಆತಂಕಕ್ಕೀಡು ಮಾಡಿತು. ಕಿರುಕುಳ ಅನುಭವಿಸುವಂತಾಯಿತು. ಮಮತಾ ಬ್ಯಾನರ್ಜಿ ಅವರು ಭಾರತದ ಚುನಾವಣಾ ಆಯೋಗಕ್ಕೆ ದೋಷಗಳನ್ನು ತಕ್ಷಣವೇ ಸರಿಪಡಿಸಿ, ಇಲ್ಲವೆ ಎಸ್‌ಐಆರ್ ಅನ್ನೇ ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.

ಪ್ರಸಿದ್ಧ ವ್ಯಕ್ತಿಗಳ ಹೆಸರುಗಳು ಸಹ ಮತದಾರರ ಪಟ್ಟಿಯಿಂದ ಕಣ್ಮರೆಯಾಗುತ್ತಿವೆ. ಪ್ರಸಿದ್ಧ ಬಂಗಾಳಿ ನಟ ಮತ್ತು ಟಿಎಂಸಿ ಸಂಸದ ದೇವ್, ಕ್ರಿಕೆಟಿಗ ಮುಹಮ್ಮದ್ ಶಮಿ, ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಿಗೂ ವಿಚಾರಣೆಗಾಗಿ ನೋಟಿಸ್ ನೀಡಲಾಯಿತು.

ಕಳೆದ ಹಲವು ವರ್ಷಗಳಿಂದ ಎಲ್ಲದಕ್ಕೂ ಆಧಾರ್ ಲಿಂಕ್ ಮಾಡಲಾಗಿದೆ. ಆದರೆ ಇದರ ನಂತರವೂ ಪುರಾವೆಗಳನ್ನು ಒದಗಿಸಬೇಕಾಗಿದೆ.

ಇಂಥ ಸ್ಥಿತಿಯಲ್ಲಿ, ಯಾವುದೇ ದಾಖಲೆಗಳನ್ನು ಹೊಂದಿರದ ಸಾಮಾನ್ಯ ನಾಗರಿಕರ ಕಥೆ ಏನು?

ರಿಪೋರ್ಟರ್ಸ್ ಕಲೆಕ್ಟಿವ್ ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ವಾಟ್ಸ್‌ಆ್ಯಪ್ ಮೂಲಕ ರಾಜ್ಯದ ಅಧಿಕಾರಿಗಳಿಗೆ ಸಂದೇಶ ಕಳಿಸಿದ್ದರು ಮತ್ತು ಆ ಸೂಚನೆಗಳು ಚುನಾವಣಾ ಆಯೋಗದ ಲಿಖಿತ ಆದೇಶ ಮತ್ತು ಲಿಖಿತ ಸಂಹಿತೆಗಳಿಗೆ ವಿರುದ್ಧವಾಗಿದ್ದವು ಎಂಬುದು ಖಚಿತವಾಗಿದೆ.

ಮೊದಲು ಇದರ ಬಗ್ಗೆ ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದವರು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್. ನಂತರ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತು.

ಇನ್ನೊಂದೆಡೆ, ಚುನಾವಣಾ ಆಯೋಗದ ಸಾಫ್ಟ್‌ವೇರ್ ಎಸ್‌ಐಆರ್ ಸಮಯದಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆ. ಇದರಿಂದಾಗಿ, ಆರಂಭದಲ್ಲಿಯೇ ಕೇವಲ ಎರಡೇ ರಾಜ್ಯಗಳಲ್ಲಿ 3.66 ಕೋಟಿಗೂ ಹೆಚ್ಚು ಮತದಾರರನ್ನು ಅನುಮಾನಾಸ್ಪದ ಎಂದು ಟ್ಯಾಗ್ ಮಾಡಲಾಯಿತು. ಅವರು ಎಲ್ಲಾ ದಾಖಲೆಗಳನ್ನು ಮತ್ತೆ ಪಡೆಯುವ ಮೂಲಕ ತಮ್ಮ ಪೌರತ್ವ ಮತ್ತು ಮತದಾನದ ಹಕ್ಕುಗಳನ್ನು ಸಾಬೀತುಪಡಿಸಬೇಕಾಗುತ್ತದೆ.

ಸಾಫ್ಟ್‌ವೇರ್ ಅನ್ನು ಸಕ್ರಿಯಗೊಳಿಸುವ 2 ವಾರಗಳ ಮೊದಲು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅದು ದೋಷಪೂರಿತವಾಗಿದೆ ಎಂದು ಹೇಳಿತ್ತು.

ಅಷ್ಟಾಗಿಯೂ ಅದನ್ನು ಬಳಸಲಾಯಿತು. ಯಾವುದೇ ಸ್ಥಿರ ಪ್ರೋಟೋಕಾಲ್ ಇಲ್ಲವಾಗಿದೆ. ಇಷ್ಟು ಕಡಿಮೆ ಸಮಯದಲ್ಲಿ ಕೋಟ್ಯಂತರ ನಾಗರಿಕರನ್ನು ತನಿಖೆ ಮಾಡುವ ಕೆಲಸಕ್ಕೆ ಇಳಿಯಲಾಗಿದೆ.

ಬಿಜೆಪಿ ಎಸ್‌ಐಆರ್ ಅನ್ನು ಪೌರತ್ವ ಸಮೀಕ್ಷೆಯಾಗಿ ಬಳಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಾರೆ. ಡಿಸೆಂಬರ್‌ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಸ್‌ಐಆರ್ ಮತಗಳನ್ನು ಕದಿಯುವ ಗುರಿ ಹೊಂದಿರುವ ಬಿಜೆಪಿಯ ದೊಡ್ಡ ಯೋಜನೆಯ ಭಾಗ ಎಂದು ಸಂಸತ್ತಿನಲ್ಲಿ ಆರೋಪಿಸಿದರು.

ಎಸ್‌ಐಆರ್ ಬಿಹಾರದಲ್ಲಿ ಹಲವಾರು ಕಾನೂನು ಸವಾಲುಗಳನ್ನು ಎದುರಿಸಿತು.

13 ಕೋಟಿ ಜನಸಂಖ್ಯೆ ಹೊಂದಿರುವ ಈ ರಾಜ್ಯದಲ್ಲಿ, ಎಸ್‌ಐಆರ್ ನಂತರ 65 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಚುನಾವಣಾ ಆಯೋಗ ಈ ಜನರು ನಿಧನರಾದರು ಅಥವಾ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿತು. ಆದರೆ ನಂತರ ಅನೇಕ ಜನರು ಜೀವಂತವಾಗಿರುವುದು ಕಂಡುಬಂದಿದೆ. ಅನೇಕ ದೂರುಗಳು ದಾಖಲಾಗಿವೆ.

ಎಸ್‌ಐಆರ್ ರಾಜಕೀಯ ಪ್ರೇರಿತ ಎಂದು ಟಿಎಂಸಿ ಆರೋಪಿಸುತ್ತದೆ. ಇದು ಪಶ್ಚಿಮ ಬಂಗಾಳವನ್ನು ಜಾಣತನದಿಂದ ವಶಪಡಿಸಿಕೊಳ್ಳುವ ಪ್ರಯತ್ನ ಎಂದು ಅದು ಆರೋಪಿಸಿದೆ.

ತಮಿಳುನಾಡು ಮತ್ತು ಕೇರಳದಂತಹ ದಕ್ಷಿಣ ರಾಜ್ಯಗಳಲ್ಲಿಯೂ ಎಸ್‌ಐಆರ್ ವಿರುದ್ಧ ಸಾಕಷ್ಟು ಕೋಪ ಮತ್ತು ಅಸಮಾಧಾನವಿದೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಈ ಪ್ರಕ್ರಿಯೆಯನ್ನು ವಿರೋಧಿಸಿದೆ. ಕೇರಳ ಸರಕಾರ ಎಸ್‌ಐಆರ್ ವಿರುದ್ಧ ನಿರ್ಣಯ ಅಂಗೀಕರಿಸಿದೆ ಮತ್ತು ಇದು ಹಿಂಬಾಗಿಲ ಮೂಲಕ ನಡೆಸಿದ ಪೌರತ್ವ ಸಮೀಕ್ಷೆ ಎಂದಿದೆ.

ಇನ್ನೊಂದು ವಿಶೇಷವೇನೆಂದರೆ, ಅಸ್ಸಾಮಿಲ್ಲಿ, ಮನೆ ಮನೆಗೆ ಹೋಗಿ ಭೌತಿಕ ಪರಿಶೀಲನೆ ಮಾಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸರಳ ರೀತಿಯಲ್ಲಿ ಮಾಡಲಾಯಿತು.

ಯಾವುದೇ ಎಣಿಕೆ ನಮೂನೆ ಇರಲಿಲ್ಲ ಅಥವಾ ಯಾರನ್ನೂ ಪೌರತ್ವ ಪುರಾವೆಗಾಗಿ ಕೇಳಲಾಗಿಲ್ಲ. ಇದು ವಿಚಿತ್ರವಾಗಿದೆ.

ಈ ಅವಧಿಯಲ್ಲಿ ಸುಮಾರು 10.5 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಮತ್ತು ಸುಮಾರು ಅಷ್ಟೇ ಹೆಸರುಗಳನ್ನು ಸೇರಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ 2.52 ಕೋಟಿಯೇ ಉಳಿದಿದೆ.

ಈಗ ಅಸ್ಸಾಂ ಯಾರನ್ನೂ ಹೊರಗಿಡದ ಏಕೈಕ ರಾಜ್ಯವಾಗಿದೆ.

ಎಸ್‌ಐಆರ್ ನಿಜವಾಗಿಯೂ ಮತದಾರರ ಪಟ್ಟಿಯನ್ನು ಸುಧಾರಿಸುತ್ತಿದೆಯೇ ಅಥವಾ ಇದು ರಾಜಕೀಯ ಪ್ರಯೋಗವೇ?

ಇದರ ಫಲಿತಾಂಶ ಚುನಾವಣೆಯ ನಂತರವೇ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಇದರಿಂದ ಕೇವಲ ಒಂದು ನಿರ್ದಿಷ್ಟ ಪಕ್ಷ ಮಾತ್ರ ಲಾಭ ಪಡೆಯಲಿದೆಯೇ?

ಸತ್ಯ ನಿಧಾನವಾಗಿ ಹೊರಬರುತ್ತಿದೆ.

Tags

SIR
share
ಎನ್. ಕೇಶವ್
ಎನ್. ಕೇಶವ್
Next Story
X