Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾವು ಕೃಷಿಯಲ್ಲಿ ಯಶಸ್ಸು: ತಾಯಿ...

ಮಾವು ಕೃಷಿಯಲ್ಲಿ ಯಶಸ್ಸು: ತಾಯಿ ಹೆಸರಲ್ಲಿ ಬ್ರಾಂಡ್ ಕಟ್ಟಿದ ಬೆಳಗಾವಿ ವೈದ್ಯ

ಶಿವಾನಂದ ಚಿಕ್ಕಮಠಶಿವಾನಂದ ಚಿಕ್ಕಮಠ15 Jun 2026 2:50 PM IST
share
ಮಾವು ಕೃಷಿಯಲ್ಲಿ ಯಶಸ್ಸು: ತಾಯಿ ಹೆಸರಲ್ಲಿ ಬ್ರಾಂಡ್ ಕಟ್ಟಿದ ಬೆಳಗಾವಿ ವೈದ್ಯ
►ನಾಲ್ಕು ಎಕರೆಯಲ್ಲಿ 2,800 ಮರಗಳು ►ಯುರೋಪ್ ಮತ್ತು ಗಲ್ಫ್ ರಾಷ್ಟ್ರಗಳಿಗೂ ಮಾವು ರಫ್ತು

ಬೆಳಗಾವಿ: ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸು ಸಾಧಿಸಿದ ಅನೇಕರು ತಮ್ಮ ಬದುಕನ್ನು ಆಸ್ಪತ್ರೆ ಮತ್ತು ರೋಗಿಗಳ ಸೇವೆಗೆ ಮಾತ್ರ ಸೀಮಿತಗೊಳಿಸುತ್ತಾರೆ. ಆದರೆ ಬೆಳಗಾವಿಯ ಆಯುರ್ವೇದ ತಜ್ಞ ವೈದ್ಯ ಡಾ.ಸಮೀರ್ ನಾಯ್ಕ್ ಅವರು ವೈದ್ಯಕೀಯ ಸೇವೆಯ ಜೊತೆಗೆ ಕೃಷಿಯಲ್ಲೂ ಹೊಸ ಅಧ್ಯಾಯ ಬರೆದು ಗಮನ ಸೆಳೆದಿದ್ದಾರೆ. ಇಸ್ರೇಲ್ ಮಾದರಿಯ ಸಾಂದ್ರ ಮಾವು ಕೃಷಿಯನ್ನು ಅಳವಡಿಸಿಕೊಂಡು, ತಾಯಿ ಹೆಸರಿನಲ್ಲಿ ಬ್ರಾಂಡ್ ನಿರ್ಮಿಸಿ, ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮೂಲಕ ರೈತರಿಗೆ ಹೊಸ ಮಾದರಿಯಾಗಿದ್ದಾರೆ.

ಮೂಲತಃ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ರೈತಾಪಿ ಕುಟುಂಬದವರಾದ ಡಾ.ಸಮೀರ್ ನಾಯ್ಕ್ ಅವರು 28 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದಾರೆ. ಕೃಷಿಯ ಬಗ್ಗೆ ಬಾಲ್ಯದಿಂದಲೂ ವಿಶೇಷ ಆಸಕ್ತಿ ಹೊಂದಿದ್ದ ಅವರು, ಸಾಂಪ್ರದಾಯಿಕ ಕೃಷಿಗಿಂತ ಭಿನ್ನವಾದ ಹಾಗೂ ಹೆಚ್ಚಿನ ಆದಾಯ ತರುವ ಬೆಳೆ ಹುಡುಕಾಟದಲ್ಲಿ ಇಸ್ರೇಲ್ ಮಾದರಿಯ ಕೃಷಿಯತ್ತ ಆಕರ್ಷಿತರಾದರು.

ಇಸ್ರೇಲ್‌ನ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಯೂಟ್ಯೂಬ್ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಅವರು, ಮಹಾರಾಷ್ಟ್ರದಲ್ಲಿ ಇದೇ ಮಾದರಿಯ ಕೃಷಿ ನಡೆಸುತ್ತಿದ್ದ ರೈತರ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು. ನಂತರ ಬೆಳಗಾವಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಐದೂವರೆ ಎಕರೆ ಜಮೀನು ಖರೀದಿಸಿ, 2019ರ ಜೂನ್ 26ರಂದು ನಾಲ್ಕು ಎಕರೆ ಪ್ರದೇಶದಲ್ಲಿ 2,800 ಕೇಸರ ಮಾವಿನ ಸಸಿಗಳನ್ನು ನೆಟ್ಟರು.

ಹಿಡಕಲ್ ಜಲಾಶಯದ ಸಮೀಪದ ತೋಟಗಾರಿಕಾ ಕೇಂದ್ರದಿಂದ ತರಿಸಲಾದ ಸಸಿಗಳನ್ನು ಸಸಿ ಮತ್ತು ಸಸಿಯ ನಡುವೆ ಏಳು ಅಡಿ ಹಾಗೂ ಸಾಲು ಮತ್ತು ಸಾಲಿನ ನಡುವೆ 12 ಅಡಿ ಅಂತರದಲ್ಲಿ ನೆಡಲಾಯಿತು. ಸಾಮಾನ್ಯವಾಗಿ ಎಕರೆಗೆ 35ರಿಂದ 40 ಮಾವಿನ ಗಿಡಗಳನ್ನು ಮಾತ್ರ ನೆಡುವ ಪದ್ಧತಿ ಇದ್ದರೆ, ಇಸ್ರೇಲ್ ಮಾದರಿಯಲ್ಲಿ ಎಕರೆಗೆ ಸುಮಾರು 700 ಸಸಿಗಳನ್ನು ನೆಡಲಾಗಿದೆ. ಇದರ ಪರಿಣಾಮವಾಗಿ ಕೇವಲ ಮೂರು ವರ್ಷಗಳಲ್ಲೇ ಗಿಡಗಳು ಫಲ ನೀಡಲು ಆರಂಭಿಸಿವೆ.

ಪ್ರಸ್ತುತ ಏಳು ವರ್ಷ ಪೂರೈಸಿರುವ ಈ ತೋಟದಲ್ಲಿ ನಾಲ್ಕನೇ ಫಸಲಿನ ಕೊಯ್ಲು ನಡೆಯುತ್ತಿದ್ದು, ಈ ವರ್ಷ ಸುಮಾರು 30 ಟನ್ ಮಾವಿನ ಹಣ್ಣಿನ ಇಳುವರಿ ನಿರೀಕ್ಷಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತಿದ್ದು, ಉತ್ತಮ ಗುಣಮಟ್ಟದ ಕೇಸರ ಮಾವಿನ ಹಣ್ಣುಗಳು ಗ್ರಾಹಕರ ಮೆಚ್ಚುಗೆ ಗಳಿಸಿವೆ.

ಉತ್ತಮ ಗುಣಮಟ್ಟದ ಬೆಳೆ ಬೆಳೆಯುವುದಷ್ಟೇ ಅಲ್ಲ, ಅದನ್ನು ಮಾರುಕಟ್ಟೆಯಲ್ಲಿ ಗುರುತಿಸುವ ರೀತಿಯಲ್ಲಿ ಮಾರಾಟ ಮಾಡುವುದು ಕೂಡ ಮುಖ್ಯ ಎಂಬುದನ್ನು ಅರಿತಿರುವ ಡಾ.ಸಮೀರ್ ನಾಯ್ಕ್ ಅವರು ತಮ್ಮ ತಾಯಿ ಹೆಸರಿನಲ್ಲಿ ‘ವೈಶಾಲಿ ಫಾರ್ಮ್ ಕೇಸರ ಮ್ಯಾಂಗೋ’ ಎಂಬ ಬ್ರ್ಯಾಂಡ್ ಸೃಷ್ಟಿಸಿದ್ದಾರೆ. ಈ ಬ್ರ್ಯಾಂಡ್ ಅಡಿಯಲ್ಲಿ ಪ್ಯಾಕಿಂಗ್ ಮಾಡಿ ನೇರವಾಗಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದು ಪೆಟ್ಟಿಗೆ ಮಾವಿನ ಹಣ್ಣಿಗೆ 350ರಿಂದ 700 ರೂ.ವರೆಗೆ ದರ ನಿಗದಿಪಡಿಸಲಾಗಿದೆ.

ಹಿಂದಿನ ವರ್ಷ ಯುರೋಪ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ಹಣ್ಣು ರಫ್ತು ಮಾಡಲಾಗಿತ್ತು. ಆದರೆ ಈ ಬಾರಿ ಜಾಗತಿಕ ಪರಿಸ್ಥಿತಿಗಳ ಕಾರಣ ವಿದೇಶಿ ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸ್ವಂತ ಮಾರ್ಕೆಟಿಂಗ್ ವ್ಯವಸ್ಥೆ ಮೂಲಕ ಮಾರಾಟಕ್ಕೆ ಒತ್ತು ನೀಡಲಾಗಿದೆ. ಉಳಿದ ಹಣ್ಣುಗಳಿಂದ ರಸ ತಯಾರಿಸಿ ನೈಸರ್ಗಿಕ ವಿಧಾನದಲ್ಲಿ ಸಂಸ್ಕರಿಸಿ ಒಂದು ಅಥವಾ ಎರಡು ವರ್ಷಗಳವರೆಗೆ ಸಂಗ್ರಹಿಸುವ ಯೋಜನೆಯನ್ನೂ ರೂಪಿಸಲಾಗಿದೆ.

ತೋಟದ ಮತ್ತೊಂದು ವಿಶೇಷತೆ ಎಂದರೆ ಮಾವಿನ ಕಾಯಿಗಳಿಗೆ ವಿಶೇಷ ಸುರಕ್ಷಾ ಕವಚದ ಬ್ಯಾಗ್‌ಗಳನ್ನು ಅಳವಡಿಸುವುದು. ಸುಮಾರು 90 ಗ್ರಾಂ ಗಾತ್ರ ತಲುಪಿದ ಕಾಯಿಗಳಿಗೆ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಹಾಕಲಾಗುತ್ತದೆ. ಇದರಿಂದ ಶಾಖ, ಮಳೆ, ಹಕ್ಕಿಗಳು, ಕೀಟಗಳು ಹಾಗೂ ವಿವಿಧ ರೋಗಗಳಿಂದ ರಕ್ಷಣೆ ದೊರೆಯುತ್ತದೆ. ಹಣ್ಣಿನ ಬಣ್ಣ, ರುಚಿ ಹಾಗೂ ಗುಣಮಟ್ಟ ಹೆಚ್ಚುವುದರ ಜೊತೆಗೆ ಕೀಟನಾಶಕ ಬಳಕೆಯ ಅಗತ್ಯವೂ ಕಡಿಮೆಯಾಗುತ್ತದೆ.

ತೋಟದಲ್ಲಿ ಹನಿ ನೀರಾವರಿ ವ್ಯವಸ್ಥೆ, ಕೃಷಿ ಹೊಂಡ ಹಾಗೂ ಸೌರಶಕ್ತಿ ಚಾಲಿತ ಪಂಪ್‌ಸೆಟ್ ಅಳವಡಿಸಲಾಗಿದೆ. ಅಗತ್ಯ ವಿದ್ಯುತ್ ಅನ್ನು ಸೌರಶಕ್ತಿಯಿಂದಲೇ ಉತ್ಪಾದಿಸಲಾಗುತ್ತಿದೆ. ಪೇರಳೆ, ಹಲಸು ಸೇರಿದಂತೆ ಇತರ ಹಣ್ಣುಗಳನ್ನೂ ಬೆಳೆಸಲಾಗಿದೆ.

ಬೆಳಗ್ಗೆ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾ.ಸಮೀರ್ ಅವರು ಮಧ್ಯಾಹ್ನದ ಬಳಿಕ ತೋಟದ ನಿರ್ವಹಣೆಯಲ್ಲಿ ತೊಡಗುತ್ತಾರೆ. ಮೂವರು ಶಾಶ್ವತ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುತ್ತಿದ್ದು, ಅಗತ್ಯವಿದ್ದಾಗ ಹೆಚ್ಚುವರಿ ಕೂಲಿಕಾರರನ್ನು ಬಳಸಿಕೊಳ್ಳಲಾಗುತ್ತದೆ.

ತೋಟಗಾರಿಕಾ ಇಲಾಖೆಯ ನೆರವಿನಿಂದ ಹನಿ ನೀರಾವರಿ, ಕೃಷಿ ಹೊಂಡ ನಿರ್ಮಾಣಕ್ಕೆ ಅನುದಾನ ದೊರೆತಿದ್ದು, ಇಲಾಖೆಯ ಅಧಿಕಾರಿಗಳು ನೀಡಿದ ಮಾರ್ಗದರ್ಶನವೂ ಯಶಸ್ಸಿಗೆ ಕಾರಣವಾಗಿದೆ ಎಂದು ಅವರು ಕೃತಜ್ಞತೆ ಸಲ್ಲಿಸುತ್ತಾರೆ.

‘ಕೃಷಿ ನನಗೆ ಕೇವಲ ಆದಾಯದ ಮೂಲವಲ್ಲ, ಅದು ನನ್ನ ಆಸಕ್ತಿ ಮತ್ತು ಸಂತೋಷ. ಗುಡ್ಡಗಾಡಾಗಿದ್ದ ಜಾಗವನ್ನು ಸುಂದರ ತೋಟವನ್ನಾಗಿ ರೂಪಿಸಿರುವ ತೃಪ್ತಿ ಹಣಕ್ಕಿಂತ ದೊಡ್ಡದು. ರೈತರು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ವಿಭಿನ್ನವಾಗಿ ಯೋಚಿಸಿದರೆ ಕೃಷಿಯಲ್ಲೂ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ನನ್ನ ತೋಟವೇ ಸಾಕ್ಷಿ’ ಎಂದು ಡಾ.ಸಮೀರ್ ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಸಾವಯವ ಕೃಷಿ ಪದ್ಧತಿ

ಡಾ.ಸಮೀರ್ ಅವರ ತೋಟದಲ್ಲಿ ಶೇ.95ರಷ್ಟು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಏಳು ಹಸುಗಳನ್ನು ಸಾಕಲಾಗಿದ್ದು, ಅವುಗಳ ಸೆಗಣಿ, ಗೋಮೂತ್ರ ಹಾಗೂ ಕೃಷಿ ತ್ಯಾಜ್ಯಗಳಿಂದ ತಯಾರಿಸಿದ ಸಾವಯವ ಗೊಬ್ಬರವನ್ನು ಬಳಸಲಾಗುತ್ತಿದೆ. ಕೇವಲ ಶೇ.5ರಷ್ಟು ಮಾತ್ರ ರಾಸಾಯನಿಕ ಔಷಧಿಗಳನ್ನು ಬಳಸಲಾಗುತ್ತಿದೆ. ಮಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ರೋಗದ ಸಮಸ್ಯೆ ಕಡಿಮೆಯಾಗಿ, ಹೂವು ಉದುರುವ ಪ್ರಮಾಣವೂ ತಗ್ಗಿದೆ.

ಮಾವು ಸಂಪೂರ್ಣವಾಗಿ ಮಾಗುವ ಮುನ್ನ ಕಟಾವು ಮಾಡುವುದಿಲ್ಲ. ಎಳೆಕಾಯಿಗೆ ರಾಸಾಯನಿಕ ಬಳಸಿ ಬೇಗ ಹಣ್ಣು ಮಾಡುವ ಪದ್ಧತಿಯನ್ನು ನಾವು ಅನುಸರಿಸುವುದಿಲ್ಲ. ಗಿಡದಲ್ಲೇ ಸಹಜವಾಗಿ ಹಣ್ಣು ಮಾಗಲು ಅವಕಾಶ ನೀಡುತ್ತೇವೆ. ಹಣ್ಣಿನ ಸೌಂದರ್ಯಕ್ಕಿಂತ ಅದರ ರುಚಿ ಮತ್ತು ಆರೋಗ್ಯಕರ ಗುಣ ಮುಖ್ಯ.

- ಡಾ.ಸಮೀರ್, ಮಾವು ಕೃಷಿಕ

share
ಶಿವಾನಂದ ಚಿಕ್ಕಮಠ
ಶಿವಾನಂದ ಚಿಕ್ಕಮಠ
Next Story
X