Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 500 ವರ್ಷಗಳ ಇತಿಹಾಸದ ಸೂರಾಲು ಮಣ್ಣಿನ...

500 ವರ್ಷಗಳ ಇತಿಹಾಸದ ಸೂರಾಲು ಮಣ್ಣಿನ ಅರಮನೆ!

► ಪಾರಂಪರಿಕ ಕಟ್ಟಡಕ್ಕೆ ಸಂರಕ್ಷಣೆಯ ಆತಂಕ ► ಸರಕಾರದ ನೆರವಿನ ನಿರೀಕ್ಷೆ

ನಝೀರ್ ಪೊಲ್ಯನಝೀರ್ ಪೊಲ್ಯ9 Nov 2026 2:20 PM IST
share
500 ವರ್ಷಗಳ ಇತಿಹಾಸದ ಸೂರಾಲು ಮಣ್ಣಿನ ಅರಮನೆ!

ಉಡುಪಿ: ತುಳುನಾಡಿನ ರಾಜವೈಭವ, ಸಾಮಂತ ಅರಸು ಮನೆತನಗಳ ಇತಿಹಾಸ, ಜೈನ ಧಾರ್ಮಿಕ ಪರಂಪರೆ ಹಾಗೂ ಪ್ರಾಚೀನ ವಾಸ್ತುಶಿಲ್ಪದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸೂರಾಲು ಮಣ್ಣಿನ ಅರಮನೆ ಇಂದು ಸಂರಕ್ಷಣೆಯ ನಿರೀಕ್ಷೆಯಲ್ಲಿದೆ. ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಈ ಅಪರೂಪದ ಅರಮನೆ ಕಾಲದ ಹೊಡೆತಕ್ಕೆ ಸಿಲುಕಿದ್ದು, ಸೂಕ್ತ ನಿರ್ವಹಣೆ ಮತ್ತು ವೈಜ್ಞಾನಿಕ ಸಂರಕ್ಷಣೆಯಿಲ್ಲದೆ ತನ್ನ ಮೂಲ ಸ್ವರೂಪ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ತುಳುನಾಡಿನಲ್ಲಿ ನೂರಾರು ವರ್ಷಗಳ ಹಿಂದೆ ಸುಮಾರು 12 ಮಣ್ಣಿನ ಅರಮನೆಗಳಿದ್ದವು ಎನ್ನಲಾಗಿದ್ದು, ಅವುಗಳ ಪೈಕಿ ಇಂದು ಉಳಿದುಕೊಂಡಿರುವ ಏಕೈಕ ಅರಮನೆ ಎಂಬ ಹೆಗ್ಗಳಿಕೆ ಸೂರಾಲು ಅರಮನೆಯದ್ದಾಗಿದೆ. ಇಂತಹ ಅಪರೂಪದ ಐತಿಹಾಸಿಕ ಸಂಪತ್ತನ್ನು ಉಳಿಸಿಕೊಳ್ಳಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಅಲುಪ ಅರಸರ ರಾಜಧಾನಿ: ಕೊಕ್ಕರ್ಣೆ ಸಮೀಪದಲ್ಲಿರುವ ಈ ಸೂರಾಲು ಅರಮನೆಯು 10ನೇ ಶತಮಾನಕ್ಕಿಂತಲೂ ಹಿಂದಿನಿಂದ ಜೈನ ಅರಸು ಮನೆತನದ ಇತಿಹಾಸವನ್ನು ಹೊಂದಿದೆ. ತುಳುನಾಡಿನ ಅಲುಪ ಅರಸರುಗಳ ಸಾಮಂತರಾದ ತೊಳಹರ(ತೊಲಹಾಸ್) ಅರಸರು ಈ ಅರಮನೆಯನ್ನು ಕ್ರಿ.ಶ.1511ರಲ್ಲಿ ನಿರ್ಮಿಸಿದರು ಎಂಬ ಮಾಹಿತಿ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ದಾಖಲೆಯಲ್ಲಿ ಉಲ್ಲೇಖವಾಗಿದೆ.

ಸೂರಾಲು ಅಂದು ತೊಳಹರ ರಾಜವಂಶದ ರಾಜಧಾನಿ ಹಾಗೂ ಪ್ರಮುಖ ಆಡಳಿತ ಕೇಂದ್ರವಾಗಿತ್ತು. 16ನೇ ಶತಮಾನದಲ್ಲಿ ತೊಳಹರ ಅರಸು ಮನೆತನ ಸಮೃದ್ಧಿಯ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಈ ಅರಮನೆಯನ್ನು ನಿರ್ಮಿಸಲಾಗಿತ್ತು. ಈ ಅರಸು ಮನೆತನದ ವಂಶಸ್ಥರು ಇಂದಿಗೂ ಅರಮನೆಯಲ್ಲಿ ವಾಸಿಸುತ್ತಿದ್ದು, ರಾಜಮನೆತನದ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಮೊಳೆ, ಅಡಿಪಾಯವಿಲ್ಲದ ಕಟ್ಟಡ! : ಸೂರಾಲು ಅರಮನೆಯ ಅತ್ಯಂತ ವಿಶೇಷತೆ ಅದರ ನಿರ್ಮಾಣ ತಂತ್ರಜ್ಞಾನ. ಸಂಪೂರ್ಣವಾಗಿ ಮಣ್ಣು ಮತ್ತು ಮರವನ್ನು ಬಳಸಿ ನಿರ್ಮಿಸಿರುವ ಈ ಅರಮನೆಯು ಪ್ರಾಚೀನ ಕಾಲದ ಕಟ್ಟಡ ನಿರ್ಮಾಣ ಕೌಶಲ್ಯಕ್ಕೆ ಅಪೂರ್ವ ಉದಾಹರಣೆಯಾಗಿದೆ.

ಮುಂಭಾಗದ ಭಾಗವನ್ನು ಹೊರತುಪಡಿಸಿ ಉಳಿದ ಕಟ್ಟಡದ ಬಹುತೇಕ ಭಾಗವನ್ನು ಸಾಂಪ್ರದಾಯಿಕ ತಂತ್ರಜ್ಞಾನ ಬಳಸಿ ಅಡಿಪಾಯವಿಲ್ಲದೆ ನಿರ್ಮಿಸಲಾಗಿದೆ ಎನ್ನುವುದು ವಿಶೇಷ. ಮರದ ಕಂಬಗಳು ಮೇಲ್ಛಾವಣಿಗೆ ಆಸರೆಯಾಗಿ ನಿಂತಿದ್ದು, ಮರದ ತುಂಡುಗಳನ್ನು ಒಂದಕ್ಕೊಂದು ಜೋಡಿಸುವ ಪ್ರಾಚೀನ ತಂತ್ರವನ್ನು ಬಳಸಲಾಗಿದೆ. ಕಟ್ಟಡ ನಿರ್ಮಾಣದಲ್ಲಿ ಒಂದೇ ಒಂದು ಕಬ್ಬಿಣದ ಮೊಳೆಯನ್ನು ಬಳಸದೆ ಮರದ ಜೋಡಣೆಗಳ ಮೂಲಕ ರಚನೆಯನ್ನು ಗಟ್ಟಿಗೊಳಿಸಿರುವುದು ಅಂದಿನ ಶಿಲ್ಪಿಗಳ ಅಪೂರ್ವ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ಅರಮನೆಯ ಮೇಲ್ಛಾವಣಿಯಲ್ಲಿ ಹೆಂಚುಗಳನ್ನು ಬಳಸಲಾಗಿದ್ದು, ಅಲಂಕೃತ ಶಿಲ್ಪಗಳು, ಮರದ ಕೆತ್ತನೆಗಳು ಹಾಗೂ ಗಾರೆ ಮತ್ತು ಗಚ್ಚಿನಿಂದ ರೂಪಿಸಲಾದ ವಿನ್ಯಾಸಗಳು ಕಟ್ಟಡಕ್ಕೆ ವಿಶಿಷ್ಟ ಸೌಂದರ್ಯ ನೀಡಿವೆ. ಅರಮನೆಯ ಪ್ರತಿಯೊಂದು ಭಾಗವೂ ಅಂದಿನ ನಿರ್ಮಾಣ ಶೈಲಿ, ಕಲಾ ಪ್ರಜ್ಞೆ ಮತ್ತು ತಾಂತ್ರಿಕ ಜ್ಞಾನವನ್ನು ಪ್ರತಿಬಿಂಬಿಸುತ್ತದೆ.

ಅಪರೂಪದ ಸಂಸ್ಕೃತಿ ಸಂಗಮ: ಸೂರಾಲು ಅರಮನೆಯ ಮತ್ತೊಂದು ವಿಶೇಷತೆ ಎಂದರೆ ಇಲ್ಲಿನ ಹಿಂದೂ ಮತ್ತು ಜೈನ ಸಂಸ್ಕೃತಿಯ ಸಮನ್ವಯ. ಅರಮನೆಯೊಳಗೆ ಜೈನ ಬಸದಿ ಇದ್ದು, ಈ ಅರಸು ಮನೆತನದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ.

ಅರಮನೆಯ ಮುಂಭಾಗದಲ್ಲಿ ರಾಜಬೀದಿ ಇದ್ದು, ಅರಸು ಮನೆತನದ ಆರಾಧ್ಯ ದೈವ ಗಣೇಶನ ಸಾನಿಧ್ಯವಿದೆ. ನಾಗರ ಶೈಲಿಯ ಶಿವಾಲಯ, ಸೂರಾಲು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಾನಿಧ್ಯವೂ ಈ ಪ್ರದೇಶದ ಧಾರ್ಮಿಕ ಮಹತ್ವವನ್ನು ಹೆಚ್ಚಿಸಿವೆ.

ತೊಳಹರ ಅರಸು ಮನೆತನದ ಪ್ರಭಾವವು ಸೂರಾಲು ಮಾತ್ರವಲ್ಲದೆ ಸುತ್ತಮುತ್ತಲಿನ ಅನೇಕ ಪ್ರದೇಶಗಳಿಗೂ ವಿಸ್ತರಿಸಿತ್ತು ಎನ್ನಲಾಗಿದೆ. 11ನೇ ಶತಮಾನದಿಂದ ಈ ಅರಸು ಮನೆತನದ ಪ್ರಭಾವ ಹೆಚ್ಚಾಗಿದ್ದು, ಉಡುಪಿ, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳ ಹಲವು ಪ್ರದೇಶಗಳಲ್ಲಿ ತನ್ನ ಆಡಳಿತಾತ್ಮಕ ಹಾಗೂ ಸಾಮಾಜಿಕ ಪ್ರಭಾವವನ್ನು ಹೊಂದಿತ್ತು ಎಂಬ ಐತಿಹಾಸಿಕ ಉಲ್ಲೇಖಗಳಿವೆ.

ಸೂರಾಲು, ಶಿರಿಯಾರ, ನಲ್ಲೂರು, ಕೆಳನಡು, ಶಂಕರನಾರಾಯಣ, ಬಸ್ರೂರು, ಹಳ್ಳಿಹೊಳೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ಮನೆತನದ ಪ್ರಭಾವವಿತ್ತು. ಒಟ್ಟು 18 ಮಾಗಣೆಗಳ ಮೂಲಕ ಈ ಅರಸು ಪರಂಪರೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು ಎನ್ನಲಾಗಿದೆ.

ಸಂರಕ್ಷಣೆಗೆ ಸರಕಾರಕ್ಕೆ ಮನವಿ: ಸುಮಾರು ಐದು ಶತಮಾನಗಳ ಇತಿಹಾಸ ಹೊಂದಿರುವ ಸೂರಾಲು ಅರಮನೆಯು ಪ್ರಸಕ್ತ ಸೂಕ್ತ ಸಂರಕ್ಷಣೆಯ ಅಗತ್ಯವನ್ನು ಎದುರಿಸುತ್ತಿದೆ. ಈ ಸೂರಾಲು ಅರಮನೆ ಮತ್ತು ಅರಮನೆ ಮಧ್ಯದಲ್ಲಿರುವ ಜೈನ ಬಸದಿ ಈಗ ನಾದುರಸ್ತಿಯಲ್ಲಿದೆ. ಆದುದರಿಂದ ಇಡೀ ಪಾರಂಪರಿಕ ಕಟ್ಟಡದ ಮೂಲ ಸ್ವರೂಪವನ್ನು ಉಳಿಸಿಕೊಳ್ಳಲು ತುರ್ತು ಕ್ರಮ ಕೈಗೊಳ್ಳಬೇಕಿದೆ.

ಅರಮನೆ ಮತ್ತು ಅದರೊಳಗಿರುವ ಜೈನ ಬಸದಿಯನ್ನು ಸಂಬಂಧಪಟ್ಟ ಇಲಾಖೆಯ ಮೂಲಕ ವೈಜ್ಞಾನಿಕವಾಗಿ ಪರಿಶೀಲಿಸಿ, ಅಗತ್ಯ ದುರಸ್ತಿ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು. ಕಟ್ಟಡದ ಮೂಲ ವಾಸ್ತುಶಿಲ್ಪಕ್ಕೆ ಯಾವುದೇ ಧಕ್ಕೆಯಾಗದಂತೆ ಅದರ ಐತಿಹಾಸಿಕ ವೈಭವವನ್ನು ಮರುಸ್ಥಾಪಿಸಬೇಕು ಎಂದು ಅರಮನೆಯ ಮುಖ್ಯಸ್ಥರಾದ ಎನ್.ತಿಲಕ್ ಪ್ರಸಾದ್ ಆಗ್ರಹಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಅರಮನೆಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಅವರಿಗೆ ಅರಮನೆ ಮುಖ್ಯಸ್ಥರಾದ ಎನ್.ತಿಲಕ್ ಪ್ರಸಾದ್ ಹಾಗೂ ಎಂ.ಅಭಿಜಿತ್ ಮನವಿ ಸಲ್ಲಿಸಿ, ಅರಮನೆಯನ್ನು ಅಲ್ಪಸಂಖ್ಯಾತರ ಇಲಾಖೆ ಅಥವಾ ಇನ್ನಿತರ ಯಾವುದೇ ಇಲಾಖೆಯ ಅನುದಾನದಲ್ಲಿ ದುರಸ್ತಿ ಮಾಡಿಸಿ, ಅರಮನೆಯ ವೈಭವವನ್ನು ಮರುಸ್ಥಾಪಿಸಬೇಕು ಮತ್ತು ಐತಿಹಾಸಿಕ ಈ ಅರಮನೆಯನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಾಚೀನ ಸೂರಾಲು ಅರಮನೆಗೆ ಭೇಟಿ ನೀಡಿ ವೀಕ್ಷಿಸಿದ್ದೇವೆ. ಈ ಅರಮನೆಯನ್ನು ನಾವು ಕಾಪಾಡಿ, ಮುಂದಿನ ತಲೆಮಾರಿಗೆ ಉಳಿಸಿ ಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆ ಮಾತುಕತೆ ನಡೆಸಲಾಗುವುದು. ಅದೇ ರೀತಿ ಐತಿಹಾಸಿಕ ಪಾರಂಪರಿಕ ಅರಮನೆಯ ಕಾಯಕಲ್ಪದಿಂದ ಪ್ರಾವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ಅದೇ ರೀತಿ ಇಲ್ಲಿನ ನೂರಾರು ಎಕರೆ ಭೂಮಿಯನ್ನು ಸರಿಯಾಗಿ ಬಳಸಿಕೊಳ್ಳಬಹುದು.

-ರಿಝ್ವಾನ್ ಅರ್ಷದ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು

ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ

ಸೂರಾಲು ಅರಮನೆಯು ಕೇವಲ ಒಂದು ಪುರಾತನ ಕಟ್ಟಡವಲ್ಲ. ಇದು ತುಳುನಾಡಿನ ಸಾಮಂತ ಅರಸು ಮನೆತನಗಳ ಇತಿಹಾಸ, ಪ್ರಾಚೀನ ನಿರ್ಮಾಣ ತಂತ್ರಜ್ಞಾನ, ಜೈನ ಧಾರ್ಮಿಕ ಪರಂಪರೆ ಹಾಗೂ ಸ್ಥಳೀಯ ಸಂಸ್ಕೃತಿಯ ಅಪೂರ್ವ ದಾಖಲೆಯಾಗಿದೆ.

ಇಂತಹ ಐತಿಹಾಸಿಕ ತಾಣವನ್ನು ಸರಕಾರ ಪಾರಂಪರಿಕ ಸ್ಮಾರಕವಾಗಿ ಗುರುತಿಸಿ ಸಂರಕ್ಷಿಸಿದರೆ, ಮುಂದಿನ ಪೀಳಿಗೆಗೆ ತುಳುನಾಡಿನ ರಾಜ ವೈಭವವನ್ನು ಪರಿಚಯಿಸಲು ಸಾಧ್ಯವಾಗಲಿದೆ. ಸೂಕ್ತ ಮೂಲಸೌಕರ್ಯ ಕಲ್ಪಿಸಿ ಐತಿಹಾಸಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಹೊಸ ಆಯಾಮ ದೊರೆಯಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಪೋರ್ಚುಗೀಸರು ಕರಾವಳಿ ವ್ಯಾಪಾರ ಕೇಂದ್ರವಾದ ಬಸ್ರೂರು ಬಂದರನ್ನು ವಶಪಡಿಸಿಕೊಳ್ಳಲು ಬಂದಾಗ ಸೂರಾಲು ತೊಳಹರರು ಅವರನ್ನು ಯುದ್ಧದಲ್ಲಿ ಸೋಲಿಸಿ ಹಿಮ್ಮೆಟ್ಟಿಸಿ ರುವುದು ಇತಿಹಾಸದ ಪ್ರಮುಖ ಘಟನೆಯಾಗಿದೆ. ಇಂತಹ ಇತಿಹಾಸವಿರುವ ಈ ಚಾರಿತ್ರಿಕ ಅರಮನೆಯನ್ನು ವೀಕ್ಷಿಸಲು ಇಂದಿಗೂ ನೂರಾರು ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X