Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸೃಜನಶೀಲತೆಯನ್ನು ಉಳಿಸಿಕೊಳ್ಳುವ ಸವಾಲು...

ಸೃಜನಶೀಲತೆಯನ್ನು ಉಳಿಸಿಕೊಳ್ಳುವ ಸವಾಲು ಮತ್ತು ಸುದ್ದಿಯಲ್ಲಿರುವ ಸಾಧಕರು

ಬಿ. ಶ್ರೀನಿವಾಸ, ದಾವಣಗೆರೆಬಿ. ಶ್ರೀನಿವಾಸ, ದಾವಣಗೆರೆ17 Dec 2024 11:23 AM IST
share
ಸೃಜನಶೀಲತೆಯನ್ನು ಉಳಿಸಿಕೊಳ್ಳುವ ಸವಾಲು ಮತ್ತು ಸುದ್ದಿಯಲ್ಲಿರುವ ಸಾಧಕರು

ಪತ್ರಕರ್ತ ರಾಜಶೇಖರ ಹತಗುಂದಿಯವರ ‘ಸುದ್ದಿಯಲ್ಲಿರುವವರೇ ಸಾಧಕರು’-ಜವಾರಿ ಮಾತು ವಾಸ್ತವಾಂಶಗಳಿಂದ ಕೂಡಿದ ಬರಹವಾಗಿದೆ.

ಕನ್ನಡ ಸಾಹಿತ್ಯ, ಮನುಷ್ಯನನ್ನು ಸಾಮಾಜಿಕ ಕುರುಡುತನಕ್ಕೆ ದೂಡದಂತೆ ತಡೆದಿದೆ. ಭಾರತದ ಬಹುತೇಕ ಸಾಹಿತ್ಯ ರಾಜಕೀಯ, ಸಾಮಾಜಿಕ ಪ್ರಜ್ಞೆಯಲ್ಲಿ ಹುಟ್ಟಿಕೊಂಡಿರುವಂತಹದ್ದು. ಭಾರತೀಯ ಸಾಹಿತ್ಯದಂತೆಯೇ ಕರ್ನಾಟಕದಲ್ಲಿ ಹುಟ್ಟಿರುವ ಸಾಹಿತ್ಯ, ಸಂಸ್ಕೃತಿ, ಸಂಗೀತ ಯಾವುದೂ ಕೂಡ ಏಕಾಂತದಲ್ಲಿ ಹುಟ್ಟಿರುವುದಲ್ಲ. ಅದೊಂದು ಸಾಮುದಾಯಿಕ ಕ್ರಿಯೆಯಾಗಿ ಸಮೂಹ ಪ್ರಜ್ಞೆಯಲ್ಲಿ ಆನೇಕ ಪರಿವರ್ತನೆಗಳಲ್ಲಿ ಹುಟ್ಟಿಕೊಂಡಿದೆ. ಕವಿ, ಕಥೆಗಾರರ, ಕಾದಂಬರಿಕಾರರ ಸಾಹಿತ್ಯವನ್ನು ಓದುತ್ತಾ ಹೋದಂತೆ ಅದು ಕೇವಲ ಕಾವ್ಯ, ಕಥೆಯಾಗದೆ, ಇಲ್ಲಿನ ಬಡತನ, ಅನಕ್ಷರತೆ ಮತ್ತು ಮೌಢ್ಯತೆಗಳ ವಿರುದ್ಧದ ಹೋರಾಟದ ನದಿಯಂತೆಯೂ ಕೇಳಿಸುತ್ತದೆ. ಬರಹವು ಇಲ್ಲಿನ ಜನರ ನಂಬಿಕೆಗಳನ್ನು ಅನಾವರಣಗೊಳಿಸುವ ವಿಷಾದಮಯ ಗಳಿಗೆಗಳಿಗಷ್ಟೇ ಸೀಮಿತವಾಗಿರುತ್ತದೆ ಎಂದು ಭಾವಿಸಬೇಕಿಲ್ಲ.

ಹೀಗೆ ಭಾರತದ ಯಾವುದೋ ಮೂಲೆಯೊಂದರಲ್ಲಿ ಕುಳಿತು ಬರೆಯುವ ಲೇಖಕನ ಅಭಿವ್ಯಕ್ತಿಯ ಆಳ, ಕೇವಲ ಅಕ್ಷರಗಳಾಗಿರದೆ ಚಳವಳಿಗಳೇ ಆಗಿ ಹೊಮ್ಮುವುದು ಅಚ್ಚರಿ ಹುಟ್ಟಿಸುತ್ತದೆ. ರಾಜಕಾರಣ ತನ್ನ ಸಂವೇದನೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದು ತೊಂಭತ್ತರ ದಶಕದಿಂದೀಚೆಗೆ ಎಂದು ತೋರುತ್ತದೆ. ಅಲ್ಲಿಂದ ಈಚೆಗಿನ ಭಾರತದ ರಾಜಕೀಯವು ಸಾಂಸ್ಕೃತಿಕ, ಧಾರ್ಮಿಕ ರಾಜಕಾರಣವಾಗಿ ಪರಿವರ್ತನೆಗೊಂಡ ದುರಂತಕ್ಕೆ ಸಾಕ್ಷಿಯಾಗಿ ಇಲ್ಲಿನ ಅನೇಕ ಬರಹಗಾರರು ಬರೆದದ್ದು ಹೆಚ್ಚು.

ಜಾಗತೀಕರಣ, ಉದಾರೀಕರಣದ ಆರಂಭದಿಂದ ಹಿಡಿದು ಖಾಸಗೀಕರಣದ ವ್ಯೆಹದೊಳಗೆ ಸಿಕ್ಕು ಒದ್ದಾಡುವ ಜನರು, ರಾಷ್ಟ್ರದ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾದ ನಾಗರಿಕ ಜವಾಬ್ದಾರಿಗಳನ್ನು ಹೊತ್ತವರ ಹಾಗೆ, ತನ್ನ ಸಾಂಸ್ಕೃತಿಕ ಚೈತನ್ಯವನ್ನು ಉಳಿಸಿಕೊಳ್ಳುವ ಮತ್ತು ದಮನಿತ ಸಮುದಾಯಗಳು ತಮ್ಮ ತಮ್ಮ ಸಾಂಸ್ಕೃತಿಕ ಐಕಾನ್‌ಗಳನ್ನು ಗುರುತಿಸಿಕೊಳ್ಳುವ ಹಂಬಲ -ಇವೆಲ್ಲವುಗಳ ಮಧ್ಯೆ ಲೇಖಕ ತನ್ನ ಸೃಜನಶೀಲತೆಯನ್ನು ಉಳಿಸಿಕೊಳ್ಳುವ ಸವಾಲುಗಳಿರುತ್ತವೆ. ಇಂತಹ ಸವಾಲುಗಳಿಗೆ ಮುಖಾಮುಖಿಯಾದ ಅನೇಕ ಲೇಖಕರು, ರಾಜಶೇಖರ ಹತಗುಂದಿಯವರು ಹೇಳುವಂತೆ ಎಲೆಮರೆಯ ಕಾಯಿಯಂತೆ ಇದ್ದಾರೆ. ಬರೆದು ಅನಾಮಿಕರಾಗಿ ಉಳಿದವರು ಕೆಲವರಾದರೆ ಮತ್ತೂ ಕೆಲವರು ಅನಾಮಿಕರಾಗಿಯೇ ಬರೆದೂ ಬದುಕುತ್ತಿದ್ದಾರೆ.

ಭಾಷೆ ಮತ್ತು ಮಾತು ಎರಡಕ್ಕೂ ನಂಜೇರಿದ ಪ್ರಸಕ್ತ ಭಾರತದಲ್ಲಿ ಮಣ್ಣಿನ ಮಕ್ಕಳಿಗೆ ಮಣ್ಣೇ ಮೃತ್ಯುವಾಗಿರುವ ವಿಚಿತ್ರ ಸಂಕಟದಲ್ಲಿ ಇಡೀ ಕನ್ನಡ ಸಾಹಿತ್ಯ ಸ್ಪಂದಿಸಿದ ರೀತಿ ಬಹುಮುಖ್ಯವಾದುದು. ಇಂತಹ ಸೂಕ್ಷ್ಮತೆಯನ್ನು ಅರಿಯದ ಬಹುತೇಕರು, ಸಂಸ್ಕೃತಿ ಮತ್ತು ಕಲೆಗಳನ್ನು ಗ್ರಾಹಕ ವಸ್ತುಗಳ ಮಟ್ಟಕ್ಕೆ ಇಳಿಸಿರುವುದು ಮತ್ತು ಅಂತಹ ವರ್ಗಕ್ಕೆ ಸೇರಿದವರೇ ಇಂದು, ತಾಲೂಕಿನಿಂದ ಹಿಡಿದು ಜಿಲ್ಲಾ, ರಾಜ್ಯ ಸಾಹಿತ್ಯ ಪರಿಷತ್ತುಗಳಲ್ಲಿ ಪವಡಿಸಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಇಂತಹ ನಿರ್ಧಾರಗಳಿಗೆ ಕಾರಣವಾಗುತ್ತವೆ.

‘ಕಸಾಪ ಸದಸ್ಯರಲ್ಲಿ ಮೂವತ್ತು ಸಾವಿರ ಹೆಬ್ಬೆಟ್ಟುಗಳು!’ ಎಂದು ಈ ಹಿಂದೆ ಶಾಲೆಯ ಮೋಜಿನ ಮಾಸ್ತರನಂತೆ ಅಧ್ಯಕ್ಷ ಮಹೇಶ್ ಜೋಷಿಯವರು ನೀಡಿದ್ದ ಹೇಳಿಕೆಯಲ್ಲಿ ಬಹು ಸಂಖ್ಯಾತ ಶ್ರಮಿಕರನ್ನು ದೂರವಿಡುವುದೇ ಆಗಿತ್ತು. ಕನ್ನಡ ಭಾಷೆ, ಸಾಹಿತ್ಯ, ನೆಲ, ಜಲ ಮತ್ತು ಒಟ್ಟು ಬದುಕನ್ನು ಶುದ್ಧಾಂಗ ಸೌಂದರ್ಯಾತ್ಮಕ ನೆಲೆಯಿಂದ ನೋಡಲು ಸಾಧ್ಯವಿಲ್ಲ. ಕನ್ನಡ ನೆಲದ ಬೇರುಗಳ ಆಳಕ್ಕಿಳಿದು ಸಮಾಜನಿಷ್ಠ ನೆಲೆಯಿಂದಲೇ ನೋಡಬೇಕು.

‘ಲೋಕದ ಸಾಲಿಗೂ ಅಂತರಂಗದ ಸಾಲಿ’ಗೂ ಇರುವ ಅಂತರವನ್ನು, ಅಕ್ಷರ ಸಂಸ್ಕೃತಿಯ ವ್ಯಾಪಾರದ ಕುರಿತು ಎರಡು ಶತಮಾನಗಳ ಹಿಂದೆಯೇ ಅಧ್ಯಕ್ಷರ ಊರಲ್ಲಿಯೇ ಬದುಕಿದ್ದ ಶರೀಫರು ಹೇಳಿದ್ದರು. ಲೋಕದ ಶಾಲೆ ಮೋಜಿನ ಮಾಸ್ತರನಿಂದ ಕೂಡಿದ್ದರೆ, ಅಂತರಂಗದ ಶಾಲೆ ಶಿಶುನಾಳಧೀಶರಿಂದ ಅಕ್ಷರದಾಚೆಗಿನ ಬೆಳಕನ್ನು ನೀಡುತ್ತದೆ ಎಂಬುದನ್ನು ಕಸಾಪ ಅಧ್ಯಕ್ಷರು ಅರಿಯಲಿಲ್ಲ.

ವಾಗ್ವಾದ, ಸೃಜನಶೀಲ ಜಗಳ ಕನ್ನಡದ ಅಸ್ಮಿತೆ. ಆದರೆ ಜೋಷಿಯವರು ಚುನಾವಣಾ ರಾಜಕಾರಣಿಯಂತೆ ದ್ವೇಷಪೂರಿತವಾದ ವರ್ತನೆ ತೋರುತ್ತಿದ್ದಾರೆ. ಕಸಪಾವು ಕನ್ನಡ ಭಾಷೆಯನ್ನಾಡುವ, ಕನ್ನಡವನ್ನು ಆಲೋಚಿಸುವ, ಜ್ಞಾನವನ್ನು ಸೃಷ್ಟಿಸುವ ಇಡೀ ಲೋಕದ ತುಂಬೆಲ್ಲ ಇರುವ ಎಲ್ಲರದೂ ಹೌದು. ಜೋಷಿಯರಿಗೆ ಬಂದಿರುವ (ಸಂದಿರುವ...ಪದ ಗೌರವವಾದುದು) ನಾಡೋಜ ಅದೊಂದು ಗೌರವ. ಕಲಬುರ್ಗಿಯವರಿಗೆ ಆ ಗೌರವವು ಸಂದಿದ್ದರೂ ಕೂಡ ಅವರು ಅದನ್ನು ತಮ್ಮ ಹೆಸರಿನ ಮುಂದೆ ಎಂದೂ ಬಳಸಲಿಲ್ಲ. ಯಾರಾದರೂ ಸಮಾರಂಭಗಳಲ್ಲಿ ನಾಡೋಜ ಕಲಬುರ್ಗಿಯವರು...ಎಂದರೆ ಸಾಕು, ಅವರನ್ನು ಕರೆದು, ‘‘ನಾಡೋಜ ಎನ್ನೋದು ದೊಡ್ಡ ಪದ, ಪದವಿ ಅದು ಪಂಪನಿಗಷ್ಟೇ ಸರಿ’’ ಎಂದು ವಿನಯವಂತಿಕೆಯನ್ನೂ, ಲಜ್ಜೆಯನ್ನೂ ವ್ಯಕ್ತಪಡಿಸುತ್ತಿದ್ದರು. ಇದನ್ನು ಮಹೇಶ್ ಜೋಷಿಯವರು ಅರ್ಥಮಾಡಿಕೊಳ್ಳಬೇಕಿತ್ತು.

ವಿಶ್ವ ವ್ಯಾಪಕತೆಗೆ ಕನ್ನಡ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ, ಎರಡು ಸಾವಿರ ವರ್ಷಕ್ಕೂ ಹೆಚ್ಚು ಕಾಲ ಸುದೀರ್ಘ ಪರಂಪರೆಯನ್ನು ಹೊಂದಿರುವ ಕನ್ನಡದ ಪ್ರಾತಿನಿಧಿಕ ಸಂಸ್ಥೆಯ ಸಾರಥ್ಯ ವಹಿಸಿರುವ ಜೋಷಿಯವರು ಕನ್ನಡದ ಬಹುಮುಖ್ಯ ಪತ್ರಿಕೆಗಳು, ಪತ್ರಕರ್ತರು, ಸಾಹಿತಿಗಳೇ ಗೊತ್ತಿಲ್ಲವೆಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಗಾದಿಗೆ ‘ಸುದ್ದಿಯಲ್ಲಿರುವರಷ್ಟೇ ಸಾಧಕರು’ ಎಂಬ ಸಾಮಾನ್ಯ ಗ್ರಹಿಕೆಯಲ್ಲಿ ಬದಲಾವಣೆ ಬರಬೇಕು ಎಂಬ ರಾಜಶೇಖರ ಹತಗುಂದಿಯವರ ಲೇಖನಕ್ಕೆ ನನ್ನ ಸಹಮತವಿದೆ.

share
ಬಿ. ಶ್ರೀನಿವಾಸ, ದಾವಣಗೆರೆ
ಬಿ. ಶ್ರೀನಿವಾಸ, ದಾವಣಗೆರೆ
Next Story
X