Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಧೀಮಂತ ಕಮ್ಯುನಿಸ್ಟ್ ನಾಯಕ, ಸ್ವಾತಂತ್ರ್ಯ...

ಧೀಮಂತ ಕಮ್ಯುನಿಸ್ಟ್ ನಾಯಕ, ಸ್ವಾತಂತ್ರ್ಯ ನೇತಾರ ಕಾಮ್ರೇಡ್ ಎಸ್.ವಿ. ಘಾಟೆ

ವಿ. ಕುಕ್ಯಾನ್, ಮಂಗಳೂರುವಿ. ಕುಕ್ಯಾನ್, ಮಂಗಳೂರು1 May 2025 12:02 PM IST
share
ಧೀಮಂತ ಕಮ್ಯುನಿಸ್ಟ್ ನಾಯಕ, ಸ್ವಾತಂತ್ರ್ಯ ನೇತಾರ ಕಾಮ್ರೇಡ್ ಎಸ್.ವಿ. ಘಾಟೆ

ಸಚ್ಚಿದಾನಂದ ವಿಷ್ಣು ಘಾಟೆ 1896ರ ಡಿಸೆಂಬರ್ 14ರಂದು ಮಂಗಳೂರಿನ ಸಂಪ್ರದಾಯಸ್ಥ ಮಹಾರಾಷ್ಟ್ರ (ಕರಾಡ) ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಂಗಳೂರಿನ ಕೆಇಎಂ ಹೈಸ್ಕೂಲಿನಲ್ಲಿ 1914ರಲ್ಲಿ ಮೆಟ್ರಿಕ್ ಪಾಸಾದರು. ನಂತರ ಅವರು ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ (ಈಗಿನ ಪಿಯುಸಿ) ಮುಗಿಸಿದರು. ಆಗ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಚಳವಳಿ ಬಗ್ಗೆ ಅಷ್ಟೊಂದು ತಿಳುವಳಿಕೆ ಇರಲಿಲ್ಲ. ಆದರೂ ಘಾಟೆಯವರು ವಿದ್ಯಾರ್ಥಿಗಳ ಸಂಕಷ್ಟಗಳಿಗೆ ಸ್ಪಂದಿಸಿ, ಹೋರಾಟ, ಪ್ರತಿಭಟನೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. 1917ರಲ್ಲಿ ಅವರ ಅಣ್ಣನ ಅಪೇಕ್ಷೆಯಂತೆ ಬಿ.ಕಾಂ. ಓದಲು ಅವರು ಮುಂಬೈಯ ಸಿಡ್‌ನ್ಹಾಮ್ ಕಾಲೇಜಿಗೆ ಸೇರಿದರು. ಬಿ.ಕಾಂ. ಓದುವುದು ಘಾಟೆಯವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಅವರಿಗೆ ಅದೇ ಸಮಯದಲ್ಲಿ ಅನಾರೋಗ್ಯ ಕಾಡಿದುದರಿಂದ ಕಾಲೇಜು ಶಿಕ್ಷಣವನ್ನು ಮುಂದುವರಿಸಲಾಗಲಿಲ್ಲ.

1919ರಲ್ಲಿ ಅವರು ಮುಂಬೈಯ ವಿಮಾ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆಗ ಅವರಿಗೆ ಗಿರಿಗಾಂನ ಶ್ರೀಕೃಷ್ಣ ಲಾಡ್ಜಿನ ಮಾಲಕ ಮಂಗಳೂರಿನ ಗೋಪಾಲ ಭಟ್‌ರವರ ಪರಿಚಯವಾಗಿ ಅಲ್ಲೇ ಮೆನೇಜರ್ ಆಗಿ ಕೆಲಸಕ್ಕೆ ಸೇರಿದರು. 1923ರಲ್ಲಿ ಮುಂಬೈಯ ಸೈಂಟ್ ಕ್ಲೇವಿಯರ್ ಕಾಲೇಜು ಸೇರಿ ಬಿ.ಎ. (ಆನರ್ಸ್‌) ಪದವಿ ಪಡೆದರು. ಮುಂದೆ ಅವರ ಕ್ರಾಂತಿಕಾರಿ ಜೀವನಕ್ಕೆ ಶ್ರೀಕೃಷ್ಣ ಲಾಡ್ಜ್ ಉತ್ತಮ ಆಶ್ರಯವಾಯಿತು. ಅಧ್ಯಾಪಕರಾಗಿದ್ದ ಸಿ.ಜೆ. ಶಾರವರು ಸಮಾಜವಾದಿ ಹಾಗೂ ಪುರೋಗಾಮಿ ಚಿಂತಕ ರಾಗಿದ್ದರು. ಅವರ ಒಡನಾಟದಿಂದ ಘಾಟೆಯವರು ಸಮಾಜವಾದಿ, ಮಾರ್ಕ್ಸ್‌ವಾದದ ವಿಚಾರಗಳಿಂದ ಆಕರ್ಷಿತರಾದರು. ಮಾರ್ಕ್ಸ್‌ವಾದದ ಬಗ್ಗೆ ಅನೇಕ ಪುಸ್ತಕಗಳನ್ನು ಅಭ್ಯಾಸಮಾಡಿ, ಸಂಶಯ ಬಂದಾಗ ಶಾರೊಡನೆ ಚರ್ಚಿಸಿದರು. ಅವರಿಂದ ರಶ್ಯನ್ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿ ಘಾಟೆಯವರಿಗೆ ಸಿಕ್ಕಿತು. ಇದೆಲ್ಲದರ ಪರಿಣಾಮವಾಗಿ ಘಾಟೆಯವರು ಸಮಾಜವಾದ, ಮಾರ್ಕ್ಸ್‌ವಾದದ ಹಾಗೂ ಕ್ರಾಂತಿಯ ಬಗೆಗಿನ ಪೂರ್ಣಚಿತ್ರಣ ಹೊಂದಿ ಇದೊಂದೇ ಮಾನವ ಸ್ವಾತಂತ್ರ್ಯಕ್ಕೆ ದಾರಿ ಎಂದು ಕಂಡುಕೊಂಡರು.

ಈ ಮಧ್ಯೆ ಮುಂಬೈಯಲ್ಲಿ ಎಸ್.ಎ. ಡಾಂಗೆ, ಕೆ.ಎನ್. ಜೋಗಳೇಕರ್, ಎಸ್.ಎನ್. ಮೀರಜ್‌ಕರ್, ಮುಝಪ್ಫರ್ ಅಹ್ಮದ್, ಸಿಂಗಾರವೇಲು ಚೆಟ್ಟಿಯಾರ್ -ಮುಂತಾದ ತನ್ನಂತೆಯೇ ಸಮಾನ ಮನಸ್ಕರ ಸಂಪರ್ಕ ಬೆಳೆಸಿ ಕಮ್ಯುನಿಸ್ಟ್ ಗುಂಪೊಂದನ್ನು ಕಟ್ಟಿದರು. ಬಹಿರಂಗ ಹಾಗೂ ರಹಸ್ಯ ಚಟುವಟಿಕೆಗಳನ್ನು ನಡೆಸಲು ಘಾಟೆಯವರು ಉದ್ಯುಕ್ತರಾದರು. ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು.

ಈ ಮಧ್ಯೆ ಮುಂಬೈಯಲ್ಲಿ ಕಾರ್ಮಿಕ ಸಂಘಟನೆಗಳು ಸಾಕಷ್ಟು ಬೆಳವಣಿಗೆ ಕಂಡಿದ್ದವು. 1920ರ ಅಕ್ಟೋಬರ್ ತಿಂಗಳಲ್ಲಿ ಎಐಟಿಯುಸಿಯ ಮೊದಲನೇ ಅಧಿವೇಶನ ಜರುಗಿತು. 1923 ಹಾಗೂ 1924ರ ಮಧ್ಯೆ ಹತ್ತಿಗಿರಣಿ ಕಾರ್ಮಿಕರ ಕೆಲವು ಹೋರಾಟಗಳು ನಡೆದವು. ಇದರೊಡನೆ ಉಳಿದ ಕೈಗಾರಿಕೆಗಳ ಕಾರ್ಮಿಕರೂ ತಮ್ಮ ಬೇಡಿಕೆಗಳೊಂದಿಗೆ ಹೋರಾಟ ಮಾಡುತಿದ್ದರು. 1924ರಲ್ಲಿ ರೈಲ್ವೆ ಕಾರ್ಮಿಕರು ಬೃಹತ್ ಹೋರಾಟ ನಡೆಸಿದರು. ಇದನ್ನೆಲ್ಲಾ ಗಮನಿಸಿದ ಬ್ರಿಟಿಷ್ ಸರಕಾರ 1924ರಲ್ಲಿ ಕಾರ್ಮಿಕ ಸಂಘಟನೆಗಳ ಹಲವು ನಾಯಕರನ್ನು ಬಂಧಿಸಿತು. ಬ್ರಿಟಿಷ್ ಸಾರ್ವಭೌಮ ಸರಕಾರವನ್ನು ಉರುಳಿಸಲು ಸಂಚು ನಡೆಸಿದ್ದರು ಎಂದು ಅಪಾದಿಸಿ ಇತರ ನಾಯಕರ ಜೊತೆಗೆ ಘಾಟೆಯ ವರನ್ನು ಬಂಧಿಸಲಾಯಿತು ಹಾಗೂ ಅವರ ವಿರುದ್ಧ ಮೊಕದ್ದಮೆ ಹೂಡಲಾಯಿತು. ಈ ಮೊಕದ್ದಮೆ ಕಾನ್ಪುರ ಸಂಚು ಮೊಕದ್ದಮೆ ಎಂದು ಪ್ರಸಿದ್ಧವಾಯಿತು. ಆದರೂ ಕಮ್ಯುನಿಸ್ಟರ ಚಳವಳಿ ತಡೆಯಿಲ್ಲದೆ ಮುಂದುವರಿದಿತ್ತು. ಘಾಟೆ ಮುಂತಾದ ನಾಯಕರು ಜೈಲಿನಿಂದಲೇ ರಹಸ್ಯವಾಗಿ ಚಳವಳಿಗಳನ್ನು ಹುರಿದುಂಬಿಸುತ್ತಿದ್ದರು.

ದೇಶದ ಮುಖ್ಯ ನಗರಗಳಾದ ಮುಂಬೈ, ಮದ್ರಾಸ್, ಕೋಲ್ಕತಾ, ಕಾನ್ಪುರ, ಲಾಹೋರ್ ಮುಂತಾದ ಕಡೆಗಳಲ್ಲಿ ಚಟುವಟಿಕೆ ನಡೆಸುತ್ತಿದ್ದ ಕಮ್ಯುನಿಸ್ಟರ ಹಾಗೂ ಕಮ್ಯುನಿಸ್ಟ್ ವಿಚಾರಧಾರೆ ಬಗ್ಗೆ ಒಲವಿದ್ದವರ ಪ್ರಯತ್ನಗಳಿಂದಾಗಿ 1925ರ ಡಿಸೆಂಬರ್ 26ರಂದು ಕಾನ್ಪುರದಲ್ಲಿ ಕಮ್ಯುನಿಸ್ಟ್ ಪಕ್ಷದ ಮೊದಲನೇ ಸಮ್ಮೇಳನ ನಡೆಯಿತು. ಸಮ್ಮೇಳನದ ನಿರ್ಣಯಗಳನ್ನು ಸಿದ್ಧಗೊಳಿಸುವಲ್ಲಿ ಘಾಟೆಯವರು ಪ್ರಮುಖ ಪಾತ್ರ ವಹಿಸಿದರು. ಪಕ್ಷದ ಹೆಸರಿನ ಬಗ್ಗೆ ಚರ್ಚಿಸಿ ಸರ್ವಾನುಮತದಿಂದ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಎಂದು ಹೆಸರಿಡಲಾಯಿತು. ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕೇಂದ್ರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಮಿತಿ ಸಭೆಯಲ್ಲಿ ಕಾ. ಎಸ್.ವಿ. ಘಾಟೆಯವರನ್ನು ಪಕ್ಷದ ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ನೇಮಿಸಲಾಯಿತು. 1927ರಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಘಾಟೆಯವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಆ ದಿನಗಳಲ್ಲಿ ಟ್ರೇಡ್ ಯೂನಿಯನ್ ಚಟುವಟಿಕೆ ಗಳು ಸಕ್ರಿಯವಾಗಿತ್ತು. 1928ರಲ್ಲಿ ಸೈಮನ್ ಕಮಿಷನ್ ವಿರುದ್ಧ ಪ್ರದರ್ಶನ ನಡೆಯಿತು. ಹತ್ತಿಗಿರಣಿ ಕಾರ್ಮಿಕರ ಮುಷ್ಕರಗಳು ನಿರಂತರವಾಗಿ ಮುಂಬೈಯಲ್ಲಿ ನಡೆಯು ತ್ತಿದ್ದವು. ಇವೆಲ್ಲವೂ ಘಾಟೆ ಹಾಗೂ ಇತರ ನಾಯಕರ ನೇತೃತ್ವದಲ್ಲಿ ನಡೆಯುತ್ತಿದ್ದವು. ಆರು ತಿಂಗಳ ನಿರಂತರ ಹೋರಾಟಗಳ ಪರಿಣಾಮವಾಗಿ ಹತ್ತಿಗಿರಣಿ ಕಾರ್ಮಿಕರ ಬೇಡಿಕೆಗಳನ್ನು ಮಾಲಕರು ಒಪ್ಪಿದರು. ಆನಂತರ ಗಿರಣಿ ಕಾರ್ಮಿಕರ ಸಂಘದ ಉದಯವಾಯಿತು.

ಬ್ರಿಟಿಷ್ ಸರಕಾರವು ಕಮ್ಯುನಿಸ್ಟ್ ಚಳವಳಿಯ ಬೆಳವಣಿಗೆ ಹಾಗೂ ಟ್ರೇಡ್ ಯೂನಿಯನ್ ಚಟುವಟಿಕೆ ಗಳನ್ನು ದಮನ ಮಾಡಲು ದಬ್ಬಾಳಿಕೆ ಅಸ್ತ್ರವನ್ನು ಬಳಸಿತು. 31 ಮುಂದಾಳುಗಳನ್ನು ಬಂಧಿಸಿ ಅವರ ಮೇಲೆ ಮೀರತ್ ಒಳಸಂಚು ಮೊಕದ್ದಮೆಯನ್ನು ಹೂಡಿತು. ಮಹಾತ್ಮಾ ಗಾಂಧಿಯವರು ಮೀರತ್ ಜೈಲಿನಲ್ಲಿರುವ ಕೈದಿಗಳನ್ನು ಭೇಟಿಮಾಡಿ ಅವರೊಡನೆ ಚರ್ಚಿಸಿದರು. 1930ರಲ್ಲಿ ಅಸಹಕಾರ ಚಳವಳಿಯು ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಜೈಲಿನಲ್ಲಿದ್ದ ಘಾಟೆಯವರಿಗೆ ಹೃದಯಾಘಾತವಾದ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು. ಘಾಟೆಯವರು ಮುಂಬೈಗೆ ಬಂದು ಪಕ್ಷ ಹಾಗೂ ಕಾಮಗಾರಿ ಯೂನಿಯನ್‌ಗಳನ್ನು ಸಕ್ರಿಯಗೊಳಿಸಲು ಮುಂದಾದರು. ಅಸಹಕಾರ ಚಳವಳಿಯ ಆರೋಪದಡಿ 1933ರ ಜನವರಿ 16ರಂದು ಅವರಿಗೆ 12 ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಮುಂದೆ ಹೈಕೋರ್ಟಿಗೆ ಅಪೀಲು ಮಾಡಿದಾಗ ಶಿಕ್ಷೆಯನ್ನು ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸಲಾಯಿತು. ಮತ್ತೆ 1934ರಲ್ಲಿ ಹತ್ತಿಗಿರಣಿ ಕಾರ್ಮಿಕರು ಮುಷ್ಕರ ನಡೆಸಿದಾಗ ಬ್ರಿಟಿಷ್ ಸರಕಾರ ಘಾಟೆಯವರನ್ನು ಬಂಧಿಸಿತು. ಸರಕಾರ ಘಾಟೆಯವರನ್ನು ತುಂಬಾ ಅಪಾಯಕಾರಿ ವ್ಯಕ್ತಿಯಾಗಿ ಪರಿಗಣಿಸಿ ಅವರನ್ನು ಸತಾರ ಜಿಲ್ಲೆಯಲ್ಲಿ ನಿರ್ಬಂಧದಲ್ಲಿರಿಸಿದರು.

ಈ ಪರಿಸ್ಥಿತಿಯಲ್ಲಿ ಘಾಟೆಯವರ ಜೀವನ ತುಂಬಾ ಕಷ್ಟಕರವಾಗಿತ್ತು. ಆರು ತಿಂಗಳ ನಂತರ ಘಾಟೆಯವರು ಮಂಗಳೂರಿಗೆ ಬಂದಾಗ ಅವರನ್ನು ಮದ್ರಾಸಿಗೆ ಗಡಿಪಾರು ಮಾಡಲಾಯಿತು ಅಲ್ಲಿ ಮದ್ರಾಸು, ಕೇರಳ, ಆಂಧ್ರ ಮತ್ತು ಕರ್ನಾಟಕದ ಕಮ್ಯುನಿಸ್ಟ್‌ರ ಸಂಪರ್ಕ ಬೆಳೆಸಿದರು. ಆಗ ಮದ್ರಾಸ್‌ನಲ್ಲಿ ಎಚ್. ಡಿ. ರಾವ್‌ರವರು ‘ನ್ಯೂಏಜ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. (ಈಗಲೂ ‘ನ್ಯೂಏಜ್’ ಪಕ್ಷದ ಪ್ರಧಾನ ಇಂಗ್ಲಿಷ್ ವಾರಪತ್ರಿಕೆಯಾಗಿ ದಿಲ್ಲಿಯಿಂದ ಪ್ರಕಟವಾಗುತ್ತಿದೆ.) ಘಾಟೆಯವರು ಈ ಪತ್ರಿಕೆ ನಡೆಸುವಲ್ಲಿ ಸಹಾಯಕರಾದರು. ಆಂಧ್ರದ ಪಿ. ಸುಂದರಯ್ಯ, ಕೇರಳದ ಕೃಷ್ಣ ಪಿಳ್ಳೆ, ಇ.ಎಮ್.ಎಸ್. ನಂಬೂದಿರಿಪಾಡ್, ಎ.ಕೆ. ಗೋಪಾಲನ್ ಮುಂತಾದವರು ಘಾಟೆಯವರೊಡನೆ ನಿರಂತರ ಸಂಪರ್ಕದಲ್ಲಿದ್ದರು. 1937ರಲ್ಲಿ ಲಾಹೋರಿಗೆ ಹೋಗಿದ್ದ ಘಾಟೆಯವರನ್ನು ಪಂಜಾಬ್ ಸರಕಾರ ಬಂಧಿಸಿ ಮತ್ತೆ ಮದ್ರಾಸ್‌ಗೆ ಕಳುಹಿಸಿತು.

1939ರಲ್ಲಿ 2ನೇ ಮಹಾಯುದ್ಧದ ವಿರುದ್ಧ ವಿವಿಧ ಚಳವಳಿಗಳನ್ನು ನಡೆಸಲು ಪಕ್ಷ ಕರೆ ನೀಡಿತ್ತು. 1940ರಲ್ಲಿ ಬ್ರಿಟಿಷ್ ಸರಕಾರ ಘಾಟೆಯವರನ್ನು ಬಂಧಿಸಿ ವೆಲ್ಲೂರು ಜೈಲಲ್ಲಿರಿಸಿತು. 1942ರ ಕ್ವಿಟ್‌ಇಂಡಿಯಾ ಚಳವಳಿಯ ಮುನ್ನ ಅವರನ್ನು ವೆಲ್ಲೂರಿನಿಂದ ದಿಯೋಲಿ ಕ್ಯಾಂಪ್‌ಗೆ ಸ್ಥಳಾಂತರಿಸಿ ನಂತರ 1944ರಲ್ಲಿ ಬಿಡುಗಡೆಗೊಳಿಸಿತು.

1947ರಲ್ಲಿ ದೇಶ ಸ್ವತಂತ್ರವಾಯಿತು. ಸ್ವತಂತ್ರ ಭಾರತದಲ್ಲಿ ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯ ರ ಅನೇಕ ಹೋರಾಟಗಳಿಗೆ ಪಕ್ಷ ನೇತೃತ್ವ ವಹಿಸಿತು.

1948ರಲ್ಲಿ ಪಕ್ಷದ ಎರಡನೇ ಅಧಿವೇಶನ ಕೋಲ್ಕತಾದಲ್ಲಿ ನಡೆದಾಗ ಬಿ.ಟಿ ರಣದಿವೆಯವರು ಕಾರ್ಯದರ್ಶಿಯಾಗಿ ಚುನಾಯಿತರಾದರು. ಅಧಿವೇಶನ ಮುಗಿದು ಒಂದೆರಡು ತಿಂಗಳಲ್ಲೇ ಸರಕಾರ ಪಕ್ಷವನ್ನು ನಿಷೇಧಿಸಿತು. ದೇಶದಾದ್ಯಂತ ಕಮ್ಯುನಿಸ್ಟರನ್ನು ಬಂಧಿಸಲಾಯಿತು. ಪಾರ್ಟಿಯ ಅನೇಕ ಸದಸ್ಯರು ಭೂಗತರಾದರು. ಘಾಟೆಯವರು ಭೂಗತರಾದರೂ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಅವರನ್ನು ಯೆರವಾಡ ಜೈಲಿನಲ್ಲಿರಿಸಲಾಯಿತು. 1950ರಲ್ಲಿ ಅವರ ಬಿಡುಗಡೆಯಾಯಿತು. 1951ರಲ್ಲಿ ಪಕ್ಷದ ಮೇಲಿನ ನಿಷೇಧವನ್ನು ಸರಕಾರ ಹಿಂಪಡೆಯಿತು.

ಘಾಟೆಯವರು ಬೆಂಗಳೂರು ಮತ್ತು ಮಂಗಳೂರಿಗೆ ಆಗಾಗ ಭೇಟಿ ನೀಡುತ್ತಿದ್ದರು. ಪಕ್ಷ ಸಂಘಟಿಸುವ ವಿಚಾರದಲ್ಲಿ ಅವರು ರಾಜ್ಯದ ಮುಂದಾಳುಗಳಾದ ಬಿ.ವಿ. ಕಕ್ಕಿಲ್ಲಾಯ, ಎಂ.ಎಸ್. ಕೃಷ್ಣನ್, ಎನ್.ಎಲ್. ಉಪಾಧ್ಯಾಯ, ಎಂ.ಸಿ ನರಸಿಂಹನ್, ಸಿ.ಬಿ. ಮೋಣಯ್ಯ, ಸಿಂಪ್ಸನ್ ಸೋನ್ಸ್, ಎ. ಶಾಂತಾರಾಮ ಪೈ, ಲಿಂಗಪ್ಪ ಸುವರ್ಣ, ದಾಸ ಸೇರಿಗಾರ, ದಾಸಪ್ಪ ಮಾಸ್ಟರ್, ಶ್ರೀನಿವಾಸ ಭಟ್, ಎಸ್.ಆರ್. ಭಟ್, ಕೆ.ಎಂ. ಮೆಣ್ಸೆ, ಮೋನಪ್ಪ ಶೆಟ್ಟಿ, ಪಿ.ಎಂ. ನಾರಾಯಣ ಮೂರ್ತಿ, ಡಾ| ಎ. ಸುಬ್ಬರಾವ್, ಮಹಾಬಲೇಶ್ವರ ಭಟ್, ಶಿವಶಂಕರ ರಾವ್ ಮುಂತಾದವರೊಡನೆ ನಿಕಟ ಸಂಪರ್ಕ ಹೊಂದಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.

ಪಕ್ಷದ ಕೇಂದ್ರ ಕಚೇರಿಯಾದ ಅಜಯ್‌ಘೋಷ್ ಸ್ಮಾರಕ ಭವನ ನಿರ್ಮಿಸಲು ಘಾಟೆಯವರು ದೇಶಾದ್ಯಂತ ಸುತ್ತಾಡಿ ಹಣ ಸಂಗ್ರಹ ಮಾಡಿದರು. ಪಕ್ಷದ ಅತ್ಯುನ್ನತ ಹುದ್ದೆಯಾದ ಕೇಂದ್ರ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅವರು ಕೊನೆಯವರೆಗೆ ಪಕ್ಷದೊಳಗೆ ನ್ಯಾಯ ಒದಗಿಸುತ್ತಿದ್ದರು.

1970 ನವೆಂಬರ್ 28ರಂದು ಘಾಟೆಯವರು ದಿಲ್ಲಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇದರಿಂದ ಪಕ್ಷವು ಒಬ್ಬ ಅತ್ಯುನ್ನತ ನಾಯಕನನ್ನು ಕಳೆದುಕೊಂಡಿತು. 1971ರಲ್ಲಿ ಕೊಚ್ಚಿಯಲ್ಲಿ ನಡೆದ 9ನೇ ಅಧಿವೇಶನ ಸ್ಥಳಕ್ಕೆ ‘ಘಾಟೆ ನಗರ’ ಎಂದು ಹೆಸರಿಸಿ ಗೌರವಿಸಲಾಯಿತು. ಬೆಂಗಳೂರಿನಲ್ಲಿರುವ ಪಕ್ಷದ ಸ್ವಂತ ಕಟ್ಟಡಕ್ಕೆ ‘ಘಾಟೆ ಭವನ’ ಎಂದು ಹೆಸರಿಟ್ಟು ಗೌರವಿಸಲಾಯಿತು.

ತೆಳ್ಳಗಿನ ಶರೀರ, ಎದ್ದು ನಿಂತಿರುತ್ತಿದ್ದ ಬಿಳಿಯ ತಲೆ ಕೂದಲು, ಬಿಳಿ ಕಚ್ಚೆ ಪಂಚೆ ಮತ್ತು ಕಪ್ಪು ಕೋಟು ಧರಿಸುತ್ತಿದ್ದ ಘಾಟೆಯವರು ಅಪ್ಪಟ ಕ್ರಾಂತಿಕಾರಿಯಾಗಿದ್ದರು. ರಾಷ್ಟ್ರೀಯ ಸ್ವತಂತ್ರ ಚಳವಳಿಗೆ ಒಬ್ಬ ಧೀಮಂತ ಕಮ್ಯುನಿಸ್ಟ್ ಸುಪುತ್ರನನ್ನು ನೀಡಿದ್ದಕ್ಕೆ ತುಳುನಾಡು ಹಾಗೂ ಕನ್ನಡ ಜನ ಅಭಿಮಾನಪಡಬೇಕಿದೆ.

ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಭಾರತ ಕಮ್ಯುನಿಸ್ಟ್ ಪಕ್ಷದ ದ.ಕ.-ಉಡುಪಿ ಜಿಲ್ಲಾ ಸಮಿತಿ, ಪಕ್ಷದ ಶತಮಾನೋತ್ಸವ ಸಂದರ್ಭದಲ್ಲಿ ಮೇ 1ರಂದು ‘ಕಾ| ಎಸ್.ವಿ. ಘಾಟೆಯವರ ಸ್ಮರಣೆ’ ಎಂಬ ಕಾರ್ಯಕ್ರಮ ಆಯೋಜಿಸಿದೆ.

share
ವಿ. ಕುಕ್ಯಾನ್, ಮಂಗಳೂರು
ವಿ. ಕುಕ್ಯಾನ್, ಮಂಗಳೂರು
Next Story
X