Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೈತ್ಯಾಕಾರದ ಪತಂಗ ‘ಅಟ್ಲಾಸ್ ಮೊತ್’ನ...

ದೈತ್ಯಾಕಾರದ ಪತಂಗ ‘ಅಟ್ಲಾಸ್ ಮೊತ್’ನ ಕುತೂಹಲಕಾರಿ ಜೀವನ

ನಝೀರ್ ಪೊಲ್ಯನಝೀರ್ ಪೊಲ್ಯ29 Jun 2026 9:21 AM IST
share
ದೈತ್ಯಾಕಾರದ ಪತಂಗ ‘ಅಟ್ಲಾಸ್ ಮೊತ್’ನ ಕುತೂಹಲಕಾರಿ ಜೀವನ

ಉಡುಪಿ: ಜಗತ್ತಿನ ದೈತ್ಯಾಕಾರದ ಪತಂಗಗಳಲ್ಲಿ ಅಟ್ಲಾಸ್ ಮೊತ್ ಬಹಳಷ್ಟು ಪ್ರಮುಖವಾಗಿದೆ. ಗಂಡು ಹೆಣ್ಣು ಸೇರಿ ಕೇವಲ ಸಂತಾನೋತ್ಪತ್ತಿ ಮಾಡುವುದೇ ಇದರ ಕಾಯಕ. ಹಾಗಾಗಿ ಇದರ ಜೀವನಚಕ್ರ ಸಾಕಷ್ಟು ಕುತೂಹಲಕಾರಿಯಾಗಿದೆ.

ಭಾರತದಲ್ಲಿ ಕಂಡುಬರುವ ಮೂರು ಬಗೆಯ ಅಟ್ಲಾಸ್ ಮೊತ್‌ಗಳಲ್ಲಿ ಲೇಸರ್ ಅಟ್ಲಾಸ್ ಮೊತ್ ಮಾತ್ರ ನಮ್ಮ ಸುತ್ತಮುತ್ತ ಪರಿಸರದಲ್ಲಿ ಕಂಡುಬರುತ್ತದೆ. ಈ ಪತಂಗವು ಸ್ಥಳೀಯವಾಗಿ ಕಂಡುಬರುವ ಪೇರಳೆ, ಸಂಪಿಗೆ ಸೇರಿದಂತೆ ಕೆಲವೊಂದು ಸೀಮಿತ ಮರಗಳ ಎಲೆಗಳಲ್ಲಿ ಮೊಟ್ಟೆ ಇಡುತ್ತದೆ. ಕೆಲವು ದಿನಗಳ ಬಳಿಕ ಮೊಟ್ಟೆಯಿಂದ ಹೊರಬರುವ ಹುಳ ಆ ಮರದ ಎಲೆಗಳನ್ನು ತಿಂದು ಕೋಶವನ್ನು ರಚಿಸಿಕೊಳ್ಳುತ್ತದೆ. ಅದರೊಳಗೆ ಪತಂಗವಾಗಿ ರೂಪಾಂತರಗೊಂಡು ಕೆಲವು ದಿನಗಳ ಬಳಿಕ ಹೊರಬರುತ್ತದೆ.

ಹೀಗೆ ಹೊರ ಬರುವ ಗಂಡು ಪತಂಗವು ಸಂತಾನೋತ್ಪತ್ತಿಗಾಗಿ ಹೆಣ್ಣು ಪತಂಗದೊಂದಿಗೆ ಸೇರಿ ಬಳಿಕ ಸಾಯುತ್ತದೆ. ಮುಂದೆ ಹೆಣ್ಣು ಪತಂಗವು ಮೊಟ್ಟೆ ಇಟ್ಟು ನಂತರ ಸಾಯುತ್ತದೆ. ಹೀಗೆ ಇದರ ಜೀವನ ಚಕ್ರ ಸಾಗುತ್ತದೆ.

ವಿಶೇಷವೇನೆಂದರೆ ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಆದುದರಿಂದ ಅದು ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗ ಆದ ನಂತರ ಏನನ್ನೂ ತಿನ್ನುವುದಿಲ್ಲ. ಅದಕ್ಕೆ ಅವು ಮರಿಹುಳ ಹಂತದಲ್ಲೇ ಬಹಳಷ್ಟು ಎಲೆಗಳನ್ನು ತಿನ್ನುತ್ತವೆ ಮತ್ತು ಕೊಬ್ಬಿನ ರೂಪದಲ್ಲಿ ಶಕ್ತಿಯನ್ನು ದೇಹದಲ್ಲಿ ಸಂಗ್ರಹಿಸಿಕೊಳ್ಳುತ್ತದೆ. ಹೀಗಾಗಿ ಅಟ್ಲಾಸ್ ಮೊತ್ 5-10 ದಿನಗಳ ಕಾಲವಷ್ಟೇ ಬದುಕುತ್ತದೆ. ಇದು ವಯಸ್ಕ ಆಗಿರುವಾಗ ತನ್ನ ಶಕ್ತಿಯನ್ನು ಉಳಿಸಿಕೊಳ್ಳಲು ಹೆಚ್ಚು ಹಾರಾಟದಲ್ಲಿ ತೊಡಗಿಸಿಕೊಳ್ಳದೆ ವಿಶ್ರಾಂತಿಯಲ್ಲಿಯೇ ಇರುತ್ತದೆ.

ಮೂರು ಪ್ರಭೇದಗಳು :

ಭಾರತದಲ್ಲಿ ಮೂರು ರೀತಿಯ ಅಟ್ಲಾಸ್ ಪತಂಗಗಳು ಕಂಡುಬರುತ್ತವೆ. ಅವು ಎಡ್ವರ್ಡ್ ಅಟ್ಲಾಸ್ ಮೊತ್, ಗ್ರೇಟರ್ ಅಟ್ಲಾಸ್ ಮೊತ್ ಮತ್ತು ಲೆಸರ್ ಅಟ್ಲಾಸ್ ಮೊತ್‌ಗಳಾಗಿವೆ.

ಗ್ರೇಟರ್ ಅಟ್ಲಾಸ್ ಮೊತ್ ವಿಶ್ವದ ಎರಡನೇ ಅತಿದೊಡ್ಡ ಪತಂಗ ಹಾಗೂ ಭಾರತದ ಅತಿದೊಡ್ಡ ಪತಂಗವಾಗಿದೆ. ಇದು ಭಾರತದ ಉತ್ತರಾಖಂಡ ಹಾಗೂ ಈಶಾನ್ಯ ಭಾರತದಲ್ಲಿ ಕಂಡುಬರುತ್ತದೆ. ಗಂಡು ಸುಮಾರು 224 ಮಿ.ಮೀ. ಹಾಗೂ ಹೆಣ್ಣು ಸುಮಾರು 250 ಮಿ.ಮೀ. ಅಗಲದ ರೆಕ್ಕೆಯನ್ನು ಹೊಂದಿರುತ್ತದೆ. ಗಂಡಿಗಿಂತ ಹೆಣ್ಣು ದೊಡ್ಡ ಆಕಾರದಲ್ಲಿ ಇರುತ್ತದೆ.

ಎಡ್ವರ್ಡ್ ಅಟ್ಲಾಸ್ ಮೊತ್‌ನಲ್ಲಿ ಗಂಡು ಸುಮಾರು 197-207 ಮಿ.ಮೀ. ಹಾಗೂ ಹೆಣ್ಣು ಸುಮಾರು 250 ಮಿ.ಮೀ. ರೆಕ್ಕೆಯ ಅಳತೆಯನ್ನು ಹೊಂದಿರುತ್ತದೆ. ಈ ಪತಂಗವು ಭಾರತ(ಸಿಕ್ಕಿಂ, ಮೇಘಾಲಯ) ಹಾಗೂ ಮ್ಯಾನ್ಮಾರ್‌ಗಳಲ್ಲಿ ಕಂಡು ಬರುತ್ತದೆ.

ಲೆಸರ್ ಅಟ್ಲಾಸ್ ಪತಂಗ ಸಾಮಾನ್ಯ ಅಟ್ಲಾಸ್ ಪತಂಗಕ್ಕಿಂತ ಗಾಢ ಕೆಂಪು-ಕಂದು ಬಣ್ಣದಲ್ಲಿರುತ್ತದೆ. ಪಾರದರ್ಶಕ ಕಲೆಗಳು ಚಿಕ್ಕದಾಗಿರುತ್ತವೆ. ಮುಂಭಾಗದ ರೆಕ್ಕೆಗಳು ಸ್ವಲ್ಪ ಕಿರಿದಾಗಿರುತ್ತವೆ. ಇದು ಪಶ್ಚಿಮ ಹಾಗೂ ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಇದರ ರೆಕ್ಕೆಯ ಅಳತೆ ಸುಮಾರು 170-180 ಮಿ.ಮೀ. ಆಗಿದೆ.

Tags

Atlas
share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X