Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಣಿ ವಿಕ್ಟೋರಿಯಾಳ ಗಾಡ್‌ಡಾಟರ್ ಆಗಿದ್ದ...

ರಾಣಿ ವಿಕ್ಟೋರಿಯಾಳ ಗಾಡ್‌ಡಾಟರ್ ಆಗಿದ್ದ ಕರ್ನಾಟಕದ ರಾಜಕುಮಾರಿ ವಿಕ್ಟೋರಿಯಾ ಗೌರಮ್ಮಳ ಮರೆತುಹೋದ ಕಥೆ

ನವೀನ ಸುನಗ, ಲಂಡನ್ನವೀನ ಸುನಗ, ಲಂಡನ್16 Oct 2026 11:39 AM IST
share
ರಾಣಿ ವಿಕ್ಟೋರಿಯಾಳ ಗಾಡ್‌ಡಾಟರ್ ಆಗಿದ್ದ ಕರ್ನಾಟಕದ ರಾಜಕುಮಾರಿ ವಿಕ್ಟೋರಿಯಾ ಗೌರಮ್ಮಳ ಮರೆತುಹೋದ ಕಥೆ

ಸಿನೆಮಾ, ಧಾರಾವಾಹಿ, ಸಾಕ್ಷ್ಯಚಿತ್ರಗಳ ನಿರ್ಮಾಣ, ನಿರ್ದೇಶನ, ನಟನೆ, ಬರವಣಿಗೆ ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಲಂಡನ್ ವಾಸಿ ನವೀನ ಸುನಗ ಅವರು ತಾನು ಕಂಡ ಲಂಡನ್ ಬಗ್ಗೆ ‘ಲಂಡನ್ ಡೈರಿ’ ಅಂಕಣದಲ್ಲಿ ಎರಡು ವಾರಕ್ಕೊಮ್ಮೆ ಬರೆಯಲಿದ್ದಾರೆ.

ಲಂಡನ್‌ನಲ್ಲಿ ಬದುಕುತ್ತಿರುವಾಗ ಈ ನಗರದ ಯಾವುದೋ ಒಂದು ಮೂಲೆಯಲ್ಲಿ ನಿಂತಾಗ ನಮ್ಮದೇ ಕರ್ನಾಟಕದ ಇತಿಹಾಸದ ಒಂದು ಪುಟ ಎದುರಿಗೆ ಬಂದು ನಿಲ್ಲುವುದು ಕೆಲವೊಮ್ಮೆ ಆಶ್ಚರ್ಯ ಮೂಡಿಸುತ್ತದೆ.

ಅಂತಹ ಒಂದು ಕಥೆ ವಿಕ್ಟೋರಿಯಾ ಗೌರಮ್ಮ ಅವರದ್ದು.

ಇಂದು ಬ್ರಿಟನ್‌ನ ರಾಜಮನೆತನದ ದಾಖಲೆಗಳಲ್ಲಿ ಉಳಿದಿರುವ ಈ ಹೆಸರು, ಸುಮಾರು ಎರಡು ಶತಮಾನಗಳ ಹಿಂದೆ ಕರ್ನಾಟಕದ ಕೊಡಗಿನಿಂದ ಲಂಡನ್‌ಗೆ ಬಂದ ಒಬ್ಬ ರಾಜಕುಮಾರಿಯದ್ದು.

ಆದರೆ ಗೌರಮ್ಮಳ ಕಥೆಯಲ್ಲಿ ಇನ್ನೊಂದು ಮಹತ್ವದ ಆಯಾಮವಿದೆ.

ಆಕೆ ಕೊಡಗಿನ ಕೊನೆಯ ರಾಜ ಚಿಕ್ಕ ವೀರರಾಜೇಂದ್ರ ಅವರ ಪುತ್ರಿ. ಹಾಲೇರಿ ರಾಜಮನೆತನದ ಈ ವಂಶವನ್ನು ಇತಿಹಾಸದಲ್ಲಿ ಲಿಂಗಾಯತ ರಾಜವಂಶವಾಗಿ ಗುರುತಿಸಲಾಗುತ್ತದೆ. ಹೀಗಾಗಿ ವಿಕ್ಟೋರಿಯಾ ಗೌರಮ್ಮಳ ಕಥೆ ಕೇವಲ ಬ್ರಿಟಿಷ್ ರಾಜಮನೆತನಕ್ಕೆ ಸಂಬಂಧಿಸಿದ ಕಥೆಯಲ್ಲ; ಅದು ಕರ್ನಾಟಕದ ಕೊಡಗಿನ ರಾಜಕೀಯ ಮತ್ತು ರಾಜಮನೆತನದ ಇತಿಹಾಸದ ಒಂದು ಅಧ್ಯಾಯವೂ ಹೌದು.

ಕೊಡಗಿನ ರಾಜಮನೆತನದಿಂದ ಲಂಡನ್‌ವರೆಗೆ

ಕೊಡಗು ಇಂದು ಕರ್ನಾಟಕದ ಅತ್ಯಂತ ವಿಶಿಷ್ಟ ಜಿಲ್ಲೆಗಳಲ್ಲಿ ಒಂದು. ಅದರ ಪ್ರಕೃತಿ, ಕಾಫಿ ತೋಟಗಳು, ಸಂಸ್ಕೃತಿ ಮತ್ತು ವೀರ ಪರಂಪರೆ ಕರ್ನಾಟಕದ ಹೆಮ್ಮೆಯ ಭಾಗ.

ಆದರೆ ಕೊಡಗಿಗೆ ತನ್ನದೇ ಆದ ರಾಜಮನೆತನದ ಇತಿಹಾಸವೂ ಇದೆ.

ಚಿಕ್ಕ ವೀರರಾಜೇಂದ್ರ ಕೊಡಗನ್ನು ಆಳಿದ ಹಾಲೇರಿ ವಂಶದ ರಾಜಮನೆತನದ ಕೊನೆಯ ದೊರೆ.

1834ರಲ್ಲಿ ಬ್ರಿಟಿಷರು ಕೊಡಗನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡ ನಂತರ ಚಿಕ್ಕ ವೀರರಾಜೇಂದ್ರ ಅಧಿಕಾರ ಕಳೆದುಕೊಂಡು ದೇಶಭ್ರಷ್ಟನಾದ. ನಂತರ ಸುಮಾರು 14 ವರ್ಷ ಸಮಯ ಬನಾರಸ್‌ನಲ್ಲಿ ನೆಲೆಸಿದ್ದ ಚಿಕ್ಕವೀರ ರಾಜೇಂದ್ರ ತನ್ನ ಮಗಳು ಮುದ್ದಮ್ಮಳನ್ನು ನೇಪಾಳದ ದೊರೆ ಜಂಗ್ ಬಹಾದ್ದೂರ್ ರಾಣಾನಿಗೆ ಮದುವೆ ಮಾಡಿಸಿ ಸುಮಾರು ಎರಡು ದಶಕಗಳ ನಂತರ, 1852ರಲ್ಲಿ ತನ್ನ ಚಿಕ್ಕ ಮಗಳು ಗೌರಮ್ಮಳನ್ನು ಕರೆದುಕೊಂಡು ಇಂಗ್ಲೆಂಡ್‌ಗೆ ಬಂದ. ತನ್ನ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳಿಗಾಗಿ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಹೋರಾಡುವುದು ಅತನ ಉದ್ದೇಶವಾಗಿತ್ತು ಎಂದು ರಾಯಲ್ ಕಲೆಕ್ಷನ್‌ನ ದಾಖಲೆಗಳು ತಿಳಿಸುತ್ತವೆ. ಗೌರಮ್ಮಳಿಗೆ ಆಗ ಇನ್ನೂ ಹನ್ನೊಂದು ವರ್ಷ ವಯಸ್ಸು. ಇಲ್ಲಿಂದಲೇ ಗೌರಮ್ಮಳ ಜೀವನದ ಇನ್ನೊಂದು ಅಧ್ಯಾಯ ಪ್ರಾರಂಭವಾದದ್ದು.

ರಾಣಿ ವಿಕ್ಟೋರಿಯಾಳ ಭೇಟಿ

1852ರ ಮೇ 17ರಂದು ಚಿಕ್ಕ ವೀರರಾಜೇಂದ್ರರು ತಮ್ಮ ಪುತ್ರಿ ಗೌರಮ್ಮಳನ್ನು ರಾಣಿ ವಿಕ್ಟೋರಿಯಾ ಅವರಿಗೆ ಪರಿಚಯಿಸುತ್ತಾನೆ. ಈ ಭೇಟಿ ಆಕೆಯ ಜೀವನದ ದಿಕ್ಕನ್ನೇ ಬದಲಿಸಿತು ಎನ್ನಬಹುದು.

ರಾಣಿ ವಿಕ್ಟೋರಿಯಾ ಆಕೆಯ ಬಗ್ಗೆ ವಿಶೇಷ ಆಸಕ್ತಿ ತೋರಿಸುತ್ತಾಳೆ. ರಾಣಿಯ ದಿನಚರಿಯಲ್ಲಿಯೂ ಗೌರಮ್ಮಳ ಬಗ್ಗೆ ದಾಖಲೆಗಳು ಕಂಡುಬರುತ್ತವೆ.

ಜೂನ್ 30, 1852ರಂದು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಗೌರಮ್ಮ ಅವರಿಗೆ ಬ್ಯಾಪ್ಟಿಸಂ ನೆರವೇರಿಸಲಾಯಿತು. ಆಕೆಗೆ ವಿಕ್ಟೋರಿಯಾ ಗೌರಮ್ಮ ಎಂಬ ಹೆಸರನ್ನು ನೀಡಲಾಗುತ್ತದೆ. ವಿಕ್ಟೋರಿಯಾ ಸ್ವತಃ ಆಕೆಯ Sponsor ಆಗಿರುತ್ತಾಳೆ.

ಹೀಗೆ ಕೊಡಗಿನ ಗೌರಮ್ಮ, ಬ್ರಿಟಿಷ್ ರಾಜಮನೆತನದ ದಾಖಲೆಗಳಲ್ಲಿ Princess Victoria Gouramma of Coorg ಆಗಿ ದಾಖಲಾಗುತ್ತಾಳೆ. ಹೀಗೆ ಕರ್ನಾಟಕದ ಕೊಡಗಿನ ಲಿಂಗಾಯತ ರಾಜಮನೆತನದ ಒಬ್ಬ ಹನ್ನೊಂದು ವರ್ಷದ ರಾಜಕುಮಾರಿ, ಸಾವಿರಾರು ಮೈಲುಗಳಷ್ಟು ದೂರದ ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಬ್ರಿಟನ್‌ನ ರಾಣಿಯ ಗಾಡ್‌ಡಾಟರ್ ಆಗಿ ಪರಿವರ್ತನೆಗೊಳ್ಳುತ್ತಾಳೆ.

ಎರಡು ವಿಭಿನ್ನ ಜಗತ್ತುಗಳ ನಡುವೆ

ಗೌರಮ್ಮಳ ಬದುಕಿನ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಆಕೆ ಎರಡು ಸಂಪೂರ್ಣ ವಿಭಿನ್ನ ಜಗತ್ತುಗಳ ನಡುವೆ ಬೆಳೆದದ್ದು. ಒಂದೆಡೆ ಕೊಡಗಿನ ರಾಜ ಪರಂಪರೆ. ಮತ್ತೊಂದು ಕಡೆ ವಿಕ್ಟೋರಿಯನ್ ಬ್ರಿಟನ್.

ರಾಣಿ ವಿಕ್ಟೋರಿಯಾ ಅವರ ಆಶ್ರಯದಲ್ಲಿ ಗೌರಮ್ಮ ಶಿಕ್ಷಣ ಮುಂದುವರಿಸುತ್ತಾಳೆ. ರಾಯಲ್ ಕಲೆಕ್ಷನ್‌ನ ದಾಖಲೆಗಳ ಹೇಳುವಂತೆ, ನಂತರ ಆಕೆಯನ್ನು ಒಡಿ Mrs Drummond ಅವರ ಆರೈಕೆಗೆ ವಹಿಸಲಾಯಿತು.

ಇಂದು ರಾಯಲ್ ಕಲೆಕ್ಷನ್‌ನಲ್ಲಿ ಗೌರಮ್ಮಳ ಹಲವಾರು ಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಕಾಣಬಹುದು.

1854ರಲ್ಲಿ ಪ್ರಸಿದ್ಧ ಛಾಯಾಗ್ರಾಹಕ ರೋಜರ್ ಫೆಂಟನ್ ಗೌರಮ್ಮಳ ಚಿತ್ರವನ್ನು ಸೆರೆ ಹಿಡಿದಿದ್ದ. ಈ ಚಿತ್ರ ಇನ್ನೂ ರಾಯಲ್ ಕಲೆಕ್ಷನ್‌ನ ಭಾಗವಾಗಿದೆ. ಇದೇ ರೀತಿ ಗೌರಮ್ಮಳ ಪ್ರತಿಮೆಯನ್ನೂ ರಾಣಿ ವಿಕ್ಟೋರಿಯಾ ಮತ್ತು ಪ್ರಿನ್ಸ್ ಆಲ್ಬರ್ಟ್ ಅವರ ಸಂಗ್ರಹಕ್ಕಾಗಿ ನಿರ್ಮಿಸಲಾಗಿತ್ತು.

ಒಬ್ಬ ಕರ್ನಾಟಕದ ರಾಜಕುಮಾರಿಯ ಚಿತ್ರಗಳು ವಿಕ್ಟೋರಿಯನ್ ಬ್ರಿಟನ್‌ನ ರಾಜಮನೆತನದ ಸಂಗ್ರಹದ ಭಾಗವಾಗಿ ಇಂದಿಗೂ ಉಳಿದಿರುವುದು ಇತಿಹಾಸದ ಅಪರೂಪದ ಸಂಗತಿ.

ರಾಜಕೀಯದ ನೆರಳಿನಲ್ಲಿದ್ದ ವೈಯಕ್ತಿಕ ಜೀವನ

ಗೌರಮ್ಮಳ ಜೀವನವನ್ನು ಕೇವಲ ಒಂದು ರೊಮ್ಯಾಂಟಿಕ್ ರಾಜಕುಮಾರಿಯ ಕಥೆಯಾಗಿ ನೋಡುವುದು ಆಕೆಯ ಕಾಲಘಟ್ಟದ ಸಂಕೀರ್ಣತೆ ಯನ್ನು ಮರೆಮಾಚುತ್ತದೆ. ಆಕೆಯ ತಂದೆ ರಾಜ ಚಿಕ್ಕವೀರ ರಾಜೇಂದ್ರ ತನ್ನ ಕಳೆದುಕೊಂಡ ಅಧಿಕಾರ ಮತ್ತು ಹಕ್ಕುಗಳಿಗಾಗಿ ಬ್ರಿಟನ್‌ಗೆ ಬಂದಿದ್ದ. ಆಕೆ ಕಾಲಿಟ್ಟಿದ್ದು ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿಗೆ. ಆಕೆಯ ಪಾಲನೆ ನಡೆದದ್ದು ಬ್ರಿಟಿಷ್ ರಾಜಮನೆತನದ ಪ್ರಭಾವದ ಅಡಿಯಲ್ಲಿ. ಅಂತೆಯೇ ಆಕೆಯ ಮುಂದಿನ ಜೀವನದ ಕುರಿತ ನಿರ್ಧಾರಗಳಲ್ಲಿಯೂ ರಾಜಮನೆತನದ ಆಸಕ್ತಿ ಇತ್ತು ಎಂಬ ಅಂಶ ಕಂಡು ಬರುತ್ತವೆ.

ರಾಣಿ ವಿಕ್ಟೋರಿಯಾ ಗೌರಮ್ಮ ಮತ್ತು ಪಂಜಾಬಿನ ಪದಚ್ಯುತ ಮಹಾರಾಜ ದಲೀಪ್ ಸಿಂಗ್ ಅವರ ವಿವಾಹದ ಸಾಧ್ಯತೆಯನ್ನು ಪರಿಗಣಿಸಿದ್ದರು. ಆದರೆ ಆ ವಿವಾಹ ನಡೆಯಲಿಲ್ಲ. ಕೊನೆಗೆ 1860ರಲ್ಲಿ ಗೌರಮ್ಮ ತನಗಿಂತ 30 ವರ್ಷ ಹಿರಿಯನಾದ ಲೆಫ್ಟಿನೆಂಟ್ ಕರ್ನಲ್ ಜಾನ್ ಕ್ಯಾಂಪ್ಬೆಲ್‌ನನ್ನು ವಿವಾಹವಾಗುತ್ತಾಳೆ.

23ನೇ ವಯಸ್ಸಿನಲ್ಲೇ ಅಂತ್ಯ

1861ರಲ್ಲಿ ಗೌರಮ್ಮ ಮತ್ತು ಜಾನ್‌ಗೆ ಎಡಿತ್ ಎಂಬ ಮಗಳು ಜನಿಸುತ್ತಾಳೆ. ಆದರೆ ವಿಧಿ ಈ ದಂಪತಿಗೆ ಹೆಚ್ಚು ಸಮಯ ನೀಡಲಿಲ್ಲ. 1864ರಲ್ಲಿ, ಕೇವಲ 23ನೇ ವಯಸ್ಸಿನಲ್ಲಿ, ವಿಕ್ಟೋರಿಯಾ ಗೌರಮ್ಮ ಕ್ಷಯರೋಗದಿಂದ ನಿಧನಳಾಗುತ್ತಾಳೆ. ಕಡೆಗೆ ಲಂಡನ್‌ನ ಬ್ರಾಂಪ್ಟನ್ ಸಿಮೆಟರಿಯಲ್ಲಿ ಆಕೆಯನ್ನು ಸಮಾಧಿ ಮಾಡಲಾಗುತ್ತದೆ.

ಇಂದು ಬ್ರಾಂಪ್ಟನ್ ಸಿಮೆಟರಿ ಲಂಡನ್‌ನ ಪ್ರಸಿದ್ಧ ಐತಿಹಾಸಿಕ ಸ್ಮಶಾನಗಳಲ್ಲಿ ಒಂದಾಗಿದೆ. ರಾಯಲ್ ಪಾರ್ಕ್ಸ್‌ನ ಅಧಿಕೃತ ದಾಖಲೆಗಳಲ್ಲಿ ವಿಕ್ಟೋರಿಯಾ ಗೌರಮ್ಮ ಅವರ ಸಮಾಧಿಯನ್ನೂ ವಿಶೇಷವಾಗಿ ದಾಖಲಿಸಲಾಗಿದೆ.

ಇದು ಒಂದು ವಿಚಿತ್ರ ಇತಿಹಾಸದ ವೃತ್ತ. ಕೊಡಗಿನ ರಾಜಮನೆತನದಲ್ಲಿ ಹುಟ್ಟಿದ ರಾಜಕುಮಾರಿ ಗೌರಮ್ಮ ಬ್ರಿಟನ್ ಗೆ ಆಗಮಿಸಿ ಬ್ರಿಟಿಷ್ ರಾಣಿಯ ವಿಕ್ಟೋರಿಯಾಳ ಗಾಡ್‌ಡಾಟರ್ ಆಗಿ, ಕೊನೆಗೆ ಲಂಡನ್‌ನ ಮಣ್ಣಿನಲ್ಲೇ ಸಮಾಧಿಯಾದಳು.

ಕರ್ನಾಟಕದೊಂದಿಗೆ ಈ ಕಥೆಯ ಸಂಬಂಧ

ಇಂದು ಕರ್ನಾಟಕದ ಜನರು ಜಗತ್ತಿನಾದ್ಯಂತ ನೆಲೆಸಿದ್ದಾರೆ.

ಬೆಂಗಳೂರು ಜಾಗತಿಕ ನಗರವಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರ್ಗಿ, ಕೊಡಗು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಜನರು ವಿಶ್ವದ ಅನೇಕ ನಗರಗಳಲ್ಲಿ ಬದುಕುತ್ತಿದ್ದಾರೆ.

ಲಂಡನ್‌ನಲ್ಲಿಯೂ ಕರ್ನಾಟಕದ ದೊಡ್ಡ ಸಮುದಾಯವಿದೆ. ಆದರೆ ಆಧುನಿಕ ವಲಸೆ ಸಮುದಾಯಗಳು ರೂಪುಗೊಳ್ಳುವ ಬಹಳ ಹಿಂದೆಯೇ, 1852ರಲ್ಲಿ ಕರ್ನಾಟಕದ ಕೊಡಗಿನಿಂದ ಒಬ್ಬ ರಾಜಕುಮಾರಿ ಲಂಡನ್‌ಗೆ ಬಂದಿದ್ದಳು ಮತ್ತು ಆಕೆ ಎಲ್ಲರಂತೆ ಸಾಮಾನ್ಯ ಪ್ರವಾಸಿಗೆಯಾಗಿರಲಿಲ್ಲ. ಆಕೆ ಕೊಡಗಿನ ಹಾಲೇರಿ ರಾಜಮನೆತನದ ಮಗಳು. ಆಕೆ ಲಿಂಗಾಯತ ರಾಜವಂಶದ ಪರಂಪರೆಯಿಂದ ಬಂದ ರಾಜಕುಮಾರಿ, ಆಕೆ ರಾಣಿ ವಿಕ್ಟೋರಿಯಾಳ ಗಾಡ್‌ಡಾಟರ್. ಈ ವಿವಿಧ ಅಂಶಗಳು ಒಂದೇ ವ್ಯಕ್ತಿಯ ಜೀವನದಲ್ಲಿ ಸೇರುವುದೇ ವಿಕ್ಟೋರಿಯಾ ಗೌರಮ್ಮಳ ಕಥೆಯನ್ನು ವಿಶೇಷವಾಗಿಸುತ್ತದೆ.

ಲಂಡನ್‌ನಲ್ಲಿರುವ ಕರ್ನಾಟಕದ ಒಂದು ಮರೆತುಹೋದ ಗುರುತು

ಲಂಡನ್ ಅನ್ನು ನಾವು ಸಾಮಾನ್ಯವಾಗಿ ಬಕಿಂಗ್‌ಹ್ಯಾಮ್‌ಅರಮನೆ, ಸಂಸತ್ತು, ಬಿಗ್ ಬೆನ್, ಥೇಮ್ಸ್ ಮತ್ತು ಆಧುನಿಕ ಮಹಾನಗರದ ಚಿತ್ರಣದೊಂದಿಗೆ ನೋಡುತ್ತೇವೆ. ಆದರೆ ಈ ನಗರದ ಬೀದಿಗಳಲ್ಲಿ ಭಾರತದ ಇತಿಹಾಸದ ಅನೇಕ ಹೆಜ್ಜೆಗುರುತುಗಳಿವೆ. ಅದರಲ್ಲೂ ಕರ್ನಾಟಕದ ಇತಿಹಾಸದ ಕೆಲವು ಪುಟಗಳು ಇನ್ನೂ ಹೆಚ್ಚು ಅನ್ವೇಷಣೆಗೆ ಕಾಯುತ್ತಿವೆ. ವಿಕ್ಟೋರಿಯಾ ಗೌರಮ್ಮಳ ಕಥೆ ಅಂತಹ ಒಂದು ಪುಟ. ಆಕೆಯ ಸಮಾಧಿ ಲಂಡನ್‌ನಲ್ಲಿದೆ. ಆದರೆ ಆಕೆಯ ಇತಿಹಾಸದ ಬೇರುಗಳು ಕರ್ನಾಟಕದ ಕೊಡಗಿನ ಮಣ್ಣಿನಲ್ಲಿವೆ.

ಈ ಕಥೆ ಈಗ ಸಾಕ್ಷ್ಯಚಿತ್ರವಾಗಲಿದೆ

ಈ ಮರೆತುಹೋದ ಕಥೆಯನ್ನು ಮತ್ತೆ ಜನರ ಮುಂದೆ ತರುವ ಪ್ರಯತ್ನವೂ ಆರಂಭವಾಗಿದೆ. ಲಂಡನ್‌ನಲ್ಲಿ ನೆಲೆಸಿರುವ ಕರ್ನಾಟಕದ ಮೂಲದ ನಿರ್ಮಾಪಕ, ನಿರ್ದೇಶಕರು ವಿಕ್ಟೋರಿಯಾ ಗೌರಮ್ಮ ಅವರ ಜೀವನ ಮತ್ತು ಕಾಲಘಟ್ಟದ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಾಕ್ಷ್ಯಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.

ಲಂಡನ್‌ನಲ್ಲಿರುವ ಐತಿಹಾಸಿಕ ದಾಖಲೆಗಳು, ರಾಜಮನೆತನದ ಸಂಗ್ರಹಗಳು ಮತ್ತು ಇತರ ಲಭ್ಯವಿರುವ ಮೂಲಗಳ ಆಧಾರದ ಮೇಲೆ, ಕರ್ನಾಟಕದ ಈ ಮರೆತುಹೋದ ರಾಜಕುಮಾರಿಯ ಕಥೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇದಾಗಿದೆ. ಇಂದು, ಹಲವು ದಶಕಗಳ ನಂತರ, ಆಕೆಯ ಕಥೆ ಮತ್ತೆ ಕರ್ನಾಟಕದತ್ತ ಮರಳುತ್ತಿದೆ. ಕೊಡಗಿನ ಮಣ್ಣಿನಿಂದ ಲಂಡನ್‌ನ ಅರಮನೆಗೆ ಲಂಡನ್‌ನ ಅರಮನೆಯಿಂದ ಒಂದು ಸಮಾಧಿಗೆ ಮತ್ತು ಅಲ್ಲಿಂದ ಮತ್ತೆ ಕರ್ನಾಟಕದ ನೆನಪಿಗೆ. ಇದು ಕೇವಲ ಒಬ್ಬ ರಾಜಕುಮಾರಿಯ ಕಥೆಯಲ್ಲ. ಇದು ಕರ್ನಾಟಕದ ಇತಿಹಾಸದ ಒಂದು ಮರೆತುಹೋದ ಅಧ್ಯಾಯ.

Tags

Princess Victoria GowrammaKarnataka
share
ನವೀನ ಸುನಗ, ಲಂಡನ್
ನವೀನ ಸುನಗ, ಲಂಡನ್
Next Story
X