Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಣ್ಮರೆಯಾಗುತ್ತಿರುವ ಕಾಡಿನ ಫಲ ʼಬೇಲದ...

ಕಣ್ಮರೆಯಾಗುತ್ತಿರುವ ಕಾಡಿನ ಫಲ ʼಬೇಲದ ಹಣ್ಣುʼ

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.21 April 2025 4:32 PM IST
share
ಕಣ್ಮರೆಯಾಗುತ್ತಿರುವ ಕಾಡಿನ ಫಲ ʼಬೇಲದ ಹಣ್ಣುʼ

ಹೊಸಕೋಟೆ : ವಯಸ್ಕರಿಂದ ಹಿಡಿದು ವಯೋವೃದ್ಧರ ತನಕ ಕಾಡುತ್ತಿರುವ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ, ಡಯಾಬಿಟೀಸ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಯಂತ್ರಿಸುವ ಗುಣ ಹೊಂದಿರುವ ಬೇಲದ ಹಣ್ಣಿನ ಮರಗಳು ಕಣ್ಮರೆಯಾಗುತ್ತಿವೆ.

ಹಳ್ಳಿಗಳಲ್ಲಿ ಈ ಗಿಡ-ಮರಗಳು ಹೊಲದ ಬದು, ಕೆರೆಗಳ ಸುತ್ತಮುತ್ತ, ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಸರಕಾರಿ ಅರಣ್ಯ ಪ್ರದೇಶ ಹಾಗೂ ನಿರುಪಯುಕ್ತ ಪ್ರದೇಶದಲ್ಲಿ ಕಾಣಸಿಗುತ್ತವೆ. ಪ್ರತೀ ಬೇಸಿಗೆ ಸಂದರ್ಭದಲ್ಲಿ ತೊಟ್ಟು ಕಳಚಿ ನೆಲಕ್ಕೆ ಬೀಳುವ ಈ ಹಣ್ಣು ಬಡ ಹಾಗೂ ಮಧ್ಯಮ ವರ್ಗಕ್ಕೆ ಸೇಬು ಹಣ್ಣಿನ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

ಇದೊಂದು ನಿಂಬೆ ಹಣ್ಣಿನ ಜಾತಿಗೆ ಸೇರಿದ ಮರವಾಗಿದ್ದು, ಎಲೆಗಳನ್ನು ಉಜ್ಜಿದರೆ ನಿಂಬೆ ಹಣ್ಣಿನ ವಾಸನೆ ಬರುತ್ತದೆ. ಈ ಹಣ್ಣು ಗಟ್ಟಿಯಾದ ಹೊರಕವಚ ಹೊಂದಿದ್ದು, ಅದರ ಒಳಗೆ ಕಂದು ಬಣ್ಣದ ತಿರುಳು, ಬಿಳಿ ಬಣ್ಣದ ಬೀಜ ಹೊಂದಿರುತ್ತದೆ. ತಿರುಳು ಹುಳಿಮಿಶ್ರಿತ ಸಿಹಿ ಹೊಂದಿರುತ್ತದೆ.

ಬೇಲದ (ಬೆಳವಲ) ಹಣ್ಣಿನ ಮರಗಳು ಇತ್ತೀಚೆಗೆ ಕಣ್ಮರೆಯಾಗುತ್ತಿವೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ಹಾಗೂ ಮಾನವನ ದೇಹಕ್ಕೆ ಬೇಕಾದ ಪೋಷಕಾಂಶ ಪೂರೈಸುವ ಈ ಹಣ್ಣು ಇತ್ತೀಚೆಗೆ ಮುಗಿದ ಮಹಾಶಿವರಾತ್ರಿ ಹಬ್ಬದಲ್ಲಿ ಶಿವನ ಪೂಜೆಯಲ್ಲಿ ಪ್ರಮುಖ ಸ್ಥಾನ ಪಡೆದಿತ್ತು.

ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಲಿ: ಅರಣ್ಯ ಇಲಾಖೆಯು ಪ್ರತೀ ವರ್ಷದ ಮಳೆಗಾಲದಲ್ಲಿ ಅರಣ್ಯ ಪದೇಶ, ರಸ್ತೆ ಬದಿ, ಶಾಲಾ ಕಾಲೇಜು ಸೇರಿದಂತೆ ಖಾಲಿ ಜಾಗದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳನ್ನು ನೆಡುತ್ತದೆ. ಅವುಗಳ ಜತೆ ಈ ರೀತಿಯ ಹಣ್ಣು ಬಿಡುವ ಗಿಡಗಳನ್ನು ನೆಟ್ಟರೆ ಮನುಷ್ಯರಿಗೆ, ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುತ್ತದೆ. ಮುಂದಿನ ಪೀಳಿಗೆಗೆ ಈ ಹಣ್ಣಿನ ಪರಿಚಯವಾಗುತ್ತದೆ.

ಹಲವು ಕಾಯಿಲೆಗಳಿಗೆ ಔಷಧ :

ಈ ಹಣ್ಣನ್ನು ಬೆಲ್ಲದ ಜತೆ ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಅಲ್ಸರ್‌ಗೆ ಇದು ಔಷಧ. ಇದರಲ್ಲಿರುವ ವಿಟಮಿನ್ ಸಿ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜತೆಗೆ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಉತ್ತೇಜನ ನೀಡುತ್ತದೆ. ಬೇಸಿಗೆಯಲ್ಲಿ ಈ ಹಣ್ಣಿನ ಪಾನಕ ದೇಹವನ್ನು ತಂಪಾಗಿಸುತ್ತದೆ. ಯುವ ಪೀಳಿಗೆಗೆ ನೈಸರ್ಗಿಕವಾಗಿ ಸಿಗುವ ಔಷಧೀಯ ಗುಣವುಳ್ಳ ಕಾಡು ಹಣ್ಣುಗಳ ಪರಿಚಯವಿಲ್ಲ. ಆದರೀಗ ಮಹತ್ವದ ಅರಿವಿನ ಕೊರತೆಯಿಂದ ಬೆಳವಲ ಮರಗಳು ಕಡಿಮೆಯಾಗುತ್ತಿವೆ. ಸಾಮಾನ್ಯವಾಗಿ ಈ ಹಣ್ಣು 100 ಗ್ರಾಂ ತೂಕ ಹೊಂದಿದ್ದರೆ 18 ಗ್ರಾಂ ಶರ್ಕರ ಪಿಷ್ಟ, 3.7 ಗ್ರಾಂ ಕೊಬ್ಬು 7.1 ಗ್ರಾಂ ಪ್ರೊಟೀನ್, 28 ಗ್ರಾಂ ವಿಟಮಿನ್ ಸಿ. ವಿಟಮಿನ್ ಬಿ ಹಾಗೂ 130 ಮಿಲಿಗ್ರಾಂ ಕ್ಯಾಲ್ಸಿಯಂ ಮತ್ತು ಖನಿಜ ಹೊಂದಿದೆ.

ಬೇಲದ ಹಣ್ಣು ಮನುಷ್ಯರಿಗೆ ಮಾತ್ರವಲ್ಲದೆ ಕೀಟ, ಪಕ್ಷಿ, ಪ್ರಾಣಿಗಳಿಗೆ ಆಹಾರ. ಆಶ್ರಯ ಒದಗಿಸುತ್ತಿದ್ದ ಇಂತಹ ಗಿಡ, ಮರಗಳು ದಿನೇದಿನೆ ಕಣ್ಮರೆಯಾಗುತ್ತಿದ್ದು, ಪ್ರತಿಯೊಬ್ಬರೂ ಸಂರಕ್ಷಿಸಬೇಕು. ಅರಣ್ಯ ಇಲಾಖೆ ಇಂತಹ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸ ಮಾಡಬೇಕು.

-ಕಿರಣ್ ಕುಮಾರ್, ಪರಿಸರ ಪ್ರೇಮಿ

ಔಷಧ ಗುಣ ಹೊಂದಿರುವ ಬೇಲದ ಹಣ್ಣು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಈ ಗಿಡಗಳನ್ನು ಅರಣ್ಯ ಇಲಾಖೆ ಖಾಲಿ ಜಾಗಗಳಲ್ಲಿ ನೆಡುವ ಕೆಲಸ ಮಾಡಬೇಕು. ಜತೆಗೆ ಕಡಿಮೆ ಬೆಳೆಯಲ್ಲಿ ರೈತರಿಗೆ ನೀಡಿ ಈ ಗಿಡ ಮರಗಳನ್ನು ಉಳಿಸುವ ಕೆಲಸ ಮಾಡಲಿ.

-ಎಂ.ಆರ್.ಉಮೇಶ್ ಸೂಲಿಬೆಲೆ, ಮಾನವ ಹಕ್ಕುಗಳ ಜಾಗೃತಿ ಸಮಿತಿಯ ತಾಲೂಕು ಅಧ್ಯಕ್ಷ

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X