Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರೈತರ ಪಾಲಿಗೆ ಚಿನ್ನವಾಗುವ ‘ಬಂಗಾರದ...

ರೈತರ ಪಾಲಿಗೆ ಚಿನ್ನವಾಗುವ ‘ಬಂಗಾರದ ಹುಳ’..!

ವಂಡ್ಸೆಯ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸಾಕಣೆ

ಯೋಗೀಶ್ ಕುಂಭಾಸಿಯೋಗೀಶ್ ಕುಂಭಾಸಿ26 Oct 2026 10:45 AM IST
share
ರೈತರ ಪಾಲಿಗೆ ಚಿನ್ನವಾಗುವ ‘ಬಂಗಾರದ ಹುಳ’..!

ಕುಂದಾಪುರ: ಮನೆ, ಹೋಟೆಲ್ ಸೇರಿದಂತೆ ವಿವಿಧ ಘಟಕಗಳಿಂದ ಸಂಗ್ರಹವಾಗುವ ಹಸಿ ತ್ಯಾಜ್ಯ ಕೂಡ ಝಣಝಣ ಹಣ ಎಣಿಸುವ ‘ಬಂಗಾರ’ವಾಗಬಹುದು ಎಂಬುದಕ್ಕೆ ವಂಡ್ಸೆ ಗ್ರಾಮ ಪಂಚಾಯತ್ ಸಾಕ್ಷಿ ಒದಗಿಸುತ್ತಿದೆ. ಸುತ್ತಮುತ್ತಲಿನ ಏಳು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿ ಯಲ್ಲಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ ಎಸ್‌ಎಲ್‌ಆರ್‌ಎಂ ಘಟಕ ದಲ್ಲಿ ‘ಬಂಗಾರದ ಹುಳು’ ಬಳಸಿ ಗೊಬ್ಬರವಾಗಿಸುವ ಮೂಲಕ ಅದು ಕೈತುಂಬಾ ಆದಾಯ ಗಳಿಸುತ್ತಿದೆ.

ಏನಿದು ಬಂಗಾರದ ಹುಳ? :

ಬಂಗಾರದ ಹುಳು (ಬ್ಲ್ಯಾಕ್ ಸೋಲ್ಜರ್ ಫ್ಲೈ)ವಿನ ವೈಜ್ಞಾನಿಕ ಹೆಸರು ಹರೇಸಿಯಾ ಇಲ್ಲುಸೆನ್ಸ್ ಇದು ಸ್ಟ್ರಾಷಿಯೋಮಿಡೆ ಕುಟುಂಬಕ್ಕೆ ಸೇರಿದ ಒಂದು ಬಗೆಯ ನೊಣವಾಗಿದೆ. ಈ ನೊಣ ಉಷ್ಣವಲಯ ಪ್ರದೇಶವುಳ್ಳ ದೇಶಗಳಲ್ಲೆಲ್ಲಾ ಸಾಮಾನ್ಯವಾಗಿ ಕಂಡುಬರುತ್ತದೆ. ತಿಂದು ಎಸೆಯುವ ಅಳಿದುಳಿದ ಆಹಾರ ಹಾಗೂ ಇತರ ಸಾವಯವ ತ್ಯಾಜ್ಯ ಪದಾರ್ಥಗಳೇ ಬಂಗಾರಹುಳುವಿಗೆ ಆಹಾರ. ಹಸಿಕಸವನ್ನು ರಸ ಮಾಡಿಕೊಂಡು, ಹಸಿ-ಕಸದಗುಂಡಿಯಲ್ಲೇ ಬದುಕಿ-ಬಾಳಿ, ಕಸವನ್ನು ಶ್ರೇಷ್ಠ ಸಾವಯವ ಗೊಬ್ಬರವಾಗಿಸಿ ಪರಿಸರವನ್ನು ಶುದ್ಧಗೊಳಿಸುತ್ತವೆ.

ಈ ಹುಳುವಿಗೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ ಸುಮಾರು 10 ಸಾವಿರ ರೂ. ಬೆಲೆ ಇದೆ. ಬೆಳೆದ ಮರಿಗೆ ಕೆ.ಜಿ.ಗೆ 500 ರೂ., ಗೊಬ್ಬರಕ್ಕೂ ಬೇಡಿಕೆಯಿದೆ. ಈ ಹುಳುಗಳು ತಮ್ಮ ದೇಹದ ತೂಕಕ್ಕಿಂತ 10 ಪಟ್ಟು ಹೆಚ್ಚು ಕಸವನ್ನು (ಹಸಿತ್ಯಾಜ್ಯವನ್ನು) ತಿಂದು ವಿಲೇವಾರಿ ಮಾಡುತ್ತವೆ. ಈ ಪ್ರಕ್ರಿಯೆಯಿಂದ ದೊರೆಯುವ ಗೊಬ್ಬರವನ್ನು ಕೃಷಿಯಲ್ಲಿ ಬಳಸಲಾಗುತ್ತಿದೆ. ವಂಡ್ಸೆ ಘಟಕದಲ್ಲಿ ತಯಾರಾಗುವ ಗೊಬ್ಬರವನ್ನು ಪ್ರತಿ ಕೆ.ಜಿ.ಗೆ 30 ರೂ. ಹಾಗೂ 12 ರೂ.ನಂತೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ತ್ಯಾಜ್ಯ ನಿರ್ವಹಣೆಯ ಜೊತೆಗೆ ಆದಾಯ ಸೃಷ್ಟಿಯೂ ಆಗುತ್ತಿದೆ.

ಉಪಯೋಗಗಳು :

ಬಂಗಾರಹುಳುಗಳ ಸಾಕಣೆಯಿಂದ ಪರಿಸರ ಮಾಲಿನ್ಯ ಕಡಿಮೆ ಯಾಗುವುದರ ಜೊತೆಗೆ ಪ್ರಾಣಿಗಳ ಆಹಾರ ತಯಾರಿಕೆಗೂ ಇವು ಬಳಕೆಯಾಗುತ್ತಿವೆ. ಎರೆಹುಳುವಿಗಿಂತಲೂ ವೇಗವಾಗಿ ಮತ್ತು ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಇದರಿಂದ ತಯಾರಾಗುತ್ತದೆ. ಹಸಿತ್ಯಾಜ್ಯ ನಿರ್ವಹಣೆಗೆ ಇದೊಂದು ಪರಿಸರಸ್ನೇಹಿ ವಿಧಾನವಾಗಿದೆ. ಅಲ್ಲದೇ ಸಾವಯವ ಗೊಬ್ಬರ, ಜೈವಿಕ-ಜಲ ಹಾಗೂ ಜೈವಿಕ- ಇಂಧನ ಇಲ್ಲಿ ಉತ್ಪತ್ತಿಯಾಗುತ್ತದೆ.

ಬಂಗಾರಹುಳುವಿನಿಂದ ತಯಾರಾದ ಸಾವಯವ ಗೊಬ್ಬರದಲ್ಲಿ (ಹರ್ಮಿಕಾಂಪೋಸ್ಟ್) ಶೇ.2.9ರಷ್ಟು ಸಾರಜನಕ, ಶೇ.1.8ರಷ್ಟು ಫಾಸ್ಪರಸ್(ಗಂಧಕ) ಹಾಗೂ ಶೇ.1.3ರಷ್ಟು ರಂಜಕವಿದೆ. ತಿಪ್ಪೆಹುಳುವಿನ ಕೋಶಗಳಲ್ಲಿ ಶೇ.40-60 ಪ್ರೊಟೀನ್, ಶೇ.10-20 ಕೊಬ್ಬು ಹಾಗೂ ಪ್ರಾಣಿಗಳ ಬೆಳವಣಿಗೆಗೆ ಆವಶ್ಯವಿರುವ ಪೋಷಕಾಂಶಗಳಿರುವುದರಿಂದ ಕೋಳಿ- ಮೀನುಗಳ ಆಹಾರ ತಯಾರಿಸಲು ಮಾರುಕಟ್ಟೆ ಯಲ್ಲಿ ಹೆಚ್ಚು ಬೇಡಿಕೆ ಹಾಗೂ ಉತ್ತಮ ಬೆಲೆಯಿದೆ ಎಂದು ಕೃಷಿ ವಿಜ್ಞಾನಿ ಹಾಗೂ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಸಂಶೋಧಕ ರೇವಣ್ಣ ರೇವಣ್ಣನವರ್ ಮಾಹಿತಿ ನೀಡಿದ್ದಾರೆ.

ಬಂಗಾರಹುಳು ನಾಲ್ಕು ಹಂತಗಳಲ್ಲಿ (ಪ್ರೌಢ/ರೆಕ್ಕೆಹುಳು, ಮೊಟ್ಟೆ, ಮರಿ ಹಾಗೂ ಕೋಶ) ಬೆಳೆದು, ಒಟ್ಟು 28-41 ದಿನಗಳಲ್ಲಿ ಜೀವನವನ್ನು ಪೂರ್ಣಗೊಳಿಸುತ್ತದೆ. ರೆಕ್ಕೆಯುಳ್ಳ ಪ್ರೌಢ ಬಂಗಾರಹುಳುವಿನ ದೇಹವು ಕಪ್ಪು ಬಣ್ಣದ್ದಾಗಿದೆ. ಸಾಮಾನ್ಯವಾಗಿ 1.6 ಸೆ. ಮೀ. ಉದ್ದ ಹಾಗೂ 0.5 ಸೆ.ಮೀ. ಅಗಲವಿರುತ್ತದೆ. ಜೀವಿತಾವಧಿ 5-8 ದಿನಗಳು.

ಬಂಗಾರಹುಳುವಿನ ಮೊಟ್ಟೆ :

ಮೊಟ್ಟೆಗಳು ಗುಂಪಾಗಿರುತ್ತವೆ. ಒಂದು ಗುಂಪಿನಲ್ಲಿ ಸುಮಾರು 500ರಿಂದ 900 ಮೊಟ್ಟೆಗಳಿರುತ್ತವೆ. ಮೊಟ್ಟೆಗಳು ಸಣ್ಣಗಾತ್ರದ ಜೀರಿಗೆ ಅಕ್ಕಿ ತರಹ ಹಳದಿ ಮಿಶ್ರಿತ ಬಿಳಿ ಬಣ್ಣದ್ದಾಗಿದ್ದು, ಸುಮಾರು 0.5-1.0 ಮಿ. ಮೀ. ಉದ್ದವಾಗಿರುತ್ತವೆ. ಜೀವನಾವಧಿ 3-5 ದಿನಗಳು.

ಬಂಗಾರ ಹುಳುವಿನ ಮರಿ :

ಮೊಟ್ಟೆ ಒಡೆದು ಹೊರಬಂದ ಮರಿಹುಳು ಬಿಳಿ ಬಣ್ಣದಿಂದ ಕೂಡಿದ್ದು, ಪ್ರಾರಂಭದಲ್ಲಿ ಸುಮಾರು 1.0 ಮಿ. ಮೀ. ಉದ್ದವಾಗಿದ್ದು, ಕ್ರಮೇಣ ಸುಮಾರು 2.7 ಸೆ. ಮೀ.ನಷ್ಟು ಉದ್ದ ಬೆಳೆದು ಕಂದುಬಣ್ಣ ಹೊಂದುತ್ತದೆ. ಜೀವಿತಾವಧಿ 20ರಿಂದ 28 ದಿನಗಳು.

‘ಬಂಗಾರಹುಳು ಕಚ್ಚುವುದಿಲ್ಲ, ಬೆಳೆ ಹಾನಿ ಮಾಡುವುದಿಲ್ಲ, ಮನುಷ್ಯರಿರುವ ಮನೆಯೊಳಗೆ ಬರುವುದೂ ಇಲ್ಲ. ರೋಗ ಹರಡುವುದಿಲ್ಲ ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿ, ತಮ್ಮ ಸಂತತಿಯನ್ನು ಕೂಡ ಮುಂದುವರಿಸಿ, ಬೇಡವಾದ ಸಾವಯವ ತ್ಯಾಜ್ಯಗಳನ್ನು ಕೊಳೆಯುವುದಕ್ಕಿಂತ ಮೊದಲು ತಿಂದು, ಕಡಿಮೆ ಅವಧಿಯಲ್ಲಿ ಬೆಳೆದು, ಫಲವತ್ತಾದ ಸಾವಯವ ಗೊಬ್ಬರ ತಯಾರಿಸುತ್ತವೆ. ವರ್ಷಾವಧಿಯೂ ಇದನ್ನು ಸಾಕಲು ಅನುಕೂಲವಿದೆ. ಕೃಷಿಗೆ ಉಪಯೋಗ ಮಾತ್ರವಲ್ಲದೆ, ಆರ್ಥಿಕವಾಗಿ ಸದೃಢರಾಗಲು ಉದ್ಯಮವೂ ಹೌದು.

-ಡಾ. ರೇವಣ್ಣ ರೇವಣ್ಣನವರ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ.

‘ಬಂಗಾರದ ಹುಳು ಸಾಕಣೆ ವಿಚಾರದಲ್ಲಿ ತರಬೇತಿ ಪಡೆದು ನಮ್ಮ ಘಟಕದಲ್ಲಿ ಅನುಷ್ಠಾನ ಮಾಡಲಾಗಿದೆ. ಮಾರ್ಗದರ್ಶನ, ಅಧ್ಯಯನ, ಕಾಳಜಿ ವಹಿಸಿದರೆ ಉತ್ತಮವಾಗಿ ನಿರ್ವಹಣೆ ಮಾಡಬಹುದು. ಮೊದಲಿಗೆ ಗೊಂದಲವಿತ್ತು. ಬೇಸಿಗೆ ತಾಪಮಾನ ಜಾಸ್ತಿಯಿದ್ದಾಗ ಹುಳು, ನೊಣಗಳು ಸಾಯುತ್ತಿತ್ತು. ಫ್ಯಾಶನ್ ಫ್ರೂಟ್ಸ್ ಬಳ್ಳಿಗಳನ್ನು ಹಬ್ಬಿಸುವಂತೆ ರೇವಣ್ಣನವರ್ ತಿಳಿಸಿದಂತೆ ಕ್ರಮ ವಹಿಸಿದ ಬಳಿಕ ಆ ಸಮಸ್ಯೆ ಪರಿಹಾರವಾಯಿತು. ಬಂಗಾರದ ಹುಳು ಬಗ್ಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳು, ರೈತರು, ಕೃಷಿಕರು, ಸಾರ್ವಜನಿಕರಿಗೆ ಮುಕ್ತವಾಗಿ ವಿವರಣೆ ಹಾಗೂ ತರಬೇತಿ ನೀಡುತ್ತಿದ್ದೇವೆ.

-ಶ್ವೇತಾ, ವಂಡ್ಸೆ ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ.

ವಂಡ್ಸೆಯಲ್ಲಿರುವ ಬಂಗಾರದಹುಳ ಉತ್ಪಾದನೆ ಘಟಕ :

ವಂಡ್ಸೆಯಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಕಾರ್ಯಾ ಚರಿಸುತ್ತಿರುವ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಬಂಗಾರದ ಹುಳು ಉತ್ಪಾದನಾ ಘಟಕವೂ ಇದೆ. ನರ್ಸರಿ, ಲವ್ ಕೇಜ್, ಮೊಟ್ಟೆಗಳು, ಟ್ರೇ ಪದ್ಧತಿ, ಟ್ಯಾಂಕ್ ಪದ್ಧತಿ, ಬೆಳೆದ ಮರಿಗಳು, ಆಹಾರ ಕೇಂದ್ರ, ಗೊಬ್ಬರ ತಯಾರಿ ಹಾಗೂ ಪ್ರಾತ್ಯಕ್ಷಿಕೆ ನೀಡಲು ಕೇಂದ್ರವಿದೆ. ನಾಟಿ ಕೋಳಿಗಳಿಗೆ ಈ ಹುಳು ಪ್ರಿಯ ಆಹಾರವಾದ್ದರಿಂದ ನಾಟಿ ಕೋಳಿ ಸಾಕಣೆಯೂ ಇಲ್ಲಿ ನಡೆಯುತ್ತಿದೆ. ಮೂರು ಮತ್ತು ಐದು ಕೆ.ಜಿ. ಬ್ಯಾಗ್‌ಗಳಲ್ಲಿ ಗೊಬ್ಬರ ಲಭಿಸುತ್ತದೆ.

ಎಸ್‌ಎಲ್‌ಆರ್‌ಎಂ ಘಟಕದ ಮೇಲ್ವಿಚಾರಕಿ ಶ್ವೇತಾ, ನಿರ್ವಾಹಕಿ ಅಶ್ವಿನಿ ಎಲ್ಲವನ್ನೂ ನಿಭಾಯಿಸುತ್ತಾರೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ಡಾ.ರೇವಣ್ಣ ರೇವಣ್ಣನವರ್ ಮಾರ್ಗದರ್ಶನವಿದೆ. ವಂಡ್ಸೆ ಗ್ರಾಪಂ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಫಲಾಪೇಕ್ಷೆ ಇಲ್ಲದೆ ಸಹಕಾರ ನೀಡುತ್ತಿದ್ದಾರೆ.

ಕಳೆದ 9 ವರ್ಷಗಳಿಂದ 24 ಕೆಲಸಗಾರರ ಮೂಲಕ ವಂಡ್ಸೆ ಗ್ರಾಪಂನ ಎಸ್‌ಎಲ್‌ಆರ್‌ಎಂ ಘಟಕ ಕಾರ್ಯನಿರ್ವ ಹಿಸುತ್ತಿದೆ. ನಿರ್ವಹಣೆಗಾಗಿ ಯಾವುದೇ ಹಣ ಸ್ವೀಕರಿಸದೆ ಏಳು ಗ್ರಾಪಂಗಳ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಲಾಭದಾಯಕ ಉದ್ಯಮ ಎಂಬುದನ್ನು ಕಂಡುಕೊಳ್ಳಲಾಗಿದೆ. ಪ್ರತೀ ತಿಂಗಳು ಒಂದು ಟನ್ ಅಂದಾಜು ಹಸಿಕಸ ಬರುತ್ತಿದ್ದು, ಅದನ್ನು ವಿಲೇವಾರಿ ಮಾಡಲು ಬೇರೆಬೇರೆ ಕ್ರಮ ಕೈಗೊಂಡು ಇತ್ತೀಚಿನ 2.5 ವರ್ಷದಿಂದ ಬಂಗಾರದ ಹುಳು ಸಾಕಣೆ ಮೂಲಕ ತ್ಯಾಜ್ಯ ವಿಲೇವಾರಿಗೆ ಸರಳ ಮಾರ್ಗೋಪಾಯ ಕಂಡುಕೊಂಡಿದ್ದು ಡಾ.ರೇವಣ್ಣ ರೇವಣ್ಣನವರ್ ಮಾರ್ಗದರ್ಶನವಿದೆ. ಇಲ್ಲಿನ ಘಟಕದಲ್ಲಿ ಮೊಟ್ಟೆ, ಮರಿ ಸಾಕಣೆ ಸಹಿತ ವಿವಿಧ ಮಜಲು ಗಳನ್ನು ಕೈಗೊಂಡು ಅಂತಿಮವಾಗಿ ಗೊಬ್ಬರವನ್ನೂ ಉತ್ಪಾದಿ ಸಲಾಗುತ್ತಿದೆ. ಆರ್ಥಿಕ ಲಾಭವಿದೆ. ಬಂಗಾರದ ಹುಳು ಇಲ್ಲಿನ ಘಟಕದ ಲಾಭದಾಯಕ ವಿಚಾರವಾಗಿದೆ.

-ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ವಂಡ್ಸೆ ಗ್ರಾಪಂನ ಮಾಜಿ ಅಧ್ಯಕ್ಷ

Tags

farmersGoldGolden Worm
share
ಯೋಗೀಶ್ ಕುಂಭಾಸಿ
ಯೋಗೀಶ್ ಕುಂಭಾಸಿ
Next Story
X